ಕಲಬುರಗಿ-ಧಾರವಾಡ ಬಸ್‌ನಲ್ಲಿ ದಿಢೀರ್ ಹೃದಯಾಘಾತ: ಶಿಕ್ಷಕ ನಿಧನ

ಹುಬ್ಬಳ್ಳಿ: ಕಲಬುರಗಿಯಿಂದ ಧಾರವಾಡದತ್ತ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಕರೊಬ್ಬರು ದಿಢೀರ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಧಾರವಾಡ ಮೂಲದ ಸತೀಶ್ ಮರಬ್ಬ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಶಿಕ್ಷಕ ಸತೀಶ್ ಅವರು ಕಲಬುರಗಿಯಿಂದ ಧಾರವಾಡಕ್ಕೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಅವರು ಕುಸಿದು ಬಿದ್ದಿದ್ದು, ಇದನ್ನು ಗಮನಿಸಿದ ಸಹಪ್ರಯಾಣಿಕರು ತಕ್ಷಣ ಬಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. … Continue reading ಕಲಬುರಗಿ-ಧಾರವಾಡ ಬಸ್‌ನಲ್ಲಿ ದಿಢೀರ್ ಹೃದಯಾಘಾತ: ಶಿಕ್ಷಕ ನಿಧನ