ಟ್ಯುಬೆಕ್ಟಮಿ ವಿಫಲ? ಗರ್ಭಪಾತದ ಬಳಿಕ ಮಹಿಳೆ ಸಾವು; ತನಿಖೆಗೆ ತಜ್ಞರ ಸಮಿತಿ

ದಾವಣಗೆರೆ: ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೂ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು, ಗರ್ಭಪಾತ ಹಾಗೂ ಮತ್ತೊಂದು ಶಸ್ತ್ರಚಿಕಿತ್ಸೆ ಬಳಿಕ ಉಸಿರಾಟದ ತೊಂದರೆಯಿಂದ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ತಾಲೂಕಿನ ಕೈದಾಳೆ ಗ್ರಾಮದ ತಿರುಮಲಾ (34) ಮೃತಪಟ್ಟ ಮಹಿಳೆ. ರಾಯಚೂರು ಜಿಲ್ಲೆ ಮೂಲದ ತಿರುಮಲಾ ಅವರಿಗೆ ಕೈದಾಳೆ ಗ್ರಾಮದ ದೀಕ್ಷಿತ್ ಅವರೊಂದಿಗೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕಳೆದ ಮೇ 22ರಂದು ತಿರುಮಲಾ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಲ್ಯಾಪರೋಸ್ಕೋಪಿಕ್ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೂ ಅವರು ಮತ್ತೆ ಗರ್ಭಿಣಿಯಾಗಿದ್ದರು. ಬಳಿಕ ಪತಿ … Continue reading ಟ್ಯುಬೆಕ್ಟಮಿ ವಿಫಲ? ಗರ್ಭಪಾತದ ಬಳಿಕ ಮಹಿಳೆ ಸಾವು; ತನಿಖೆಗೆ ತಜ್ಞರ ಸಮಿತಿ