NEET Exam: ಉಡುದಾರ, ಶಿವದಾರ, ಜನಿವಾರ ತೆಗೆಸಿ ಪರೀಕ್ಷೆಗೆ ಎಂಟ್ರಿ

ದಾವಣಗೆರೆ: ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಭಾನುವಾರ ನಡೆಸಿದ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಮೈಮೇಲಿದ್ದ ದಾರಗಳಿಗೆ ಸಿಬ್ಬಂದಿ ಕತ್ತರಿ ಹಾಕಿದರು. ಉಡುದಾರ, ಶಿವದಾರ ಹಾಗೂ ಜನಿವಾರಗಳನ್ನು ತೆಗೆಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರು. ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿನ ಬಾಲಕರ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಹಾಜರಾದ ಪರೀಕ್ಷಾರ್ಥಿಗಳನ್ನು ಸಿಬ್ಬಂದಿ ಮೂರು ಹಂತಗಳಲ್ಲಿ ತಪಾಸಣೆಗೆ ಒಳಪಡಿಸಿದರು. ಉಡುದಾರವನ್ನು ತೆಗೆದು ಬುಟ್ಟಿಯೊಂದಕ್ಕೆ ಹಾಕಿದರು. ರುದ್ರಾಕ್ಷಿ, ಬೆಲ್ಟ್, ಉಂಗುರ, ಸರಗಳನ್ನು ತೆಗೆಸಲಾಯಿತು. ತುಂಬು ತೋಳಿನ ಅಂಗಿ … Continue reading NEET Exam: ಉಡುದಾರ, ಶಿವದಾರ, ಜನಿವಾರ ತೆಗೆಸಿ ಪರೀಕ್ಷೆಗೆ ಎಂಟ್ರಿ