ಮಾದಕ ದ್ರವ್ಯಗಳಿಗೆ ‘ನೋ’ ಹೇಳಿ: ಯುವಜನತೆಗೆ ಉಪರಾಷ್ಟ್ರಪತಿ ಕರೆ

ದಾವಣಗೆರೆ: ‘ನೀವು ಮಾತ್ರವಲ್ಲ, ನಿಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ಇಡೀ ಸಮಾಜವೇ ಮಾದಕ ದ್ರವ್ಯಗಳಿಗೆ ‘ಇಲ್ಲ’ ಎಂದು ಒಕ್ಕೊರಲಿನಿಂದ ಹೇಳಬೇಕು ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಯುವಜನತೆಗೆ ಕರೆ ನೀಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ವ್ಯಾಪ್ತಿಯಲ್ಲಿರುವ ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿಗೆ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾದಕ ದ್ರವ್ಯಗಳ (ಡ್ರಗ್) ಪಿಡುಗಿನಿಂದ ದೂರವಿರುವಂತೆ ಕರೆ ನೀಡಿದ ಅವರು, ‘ನಿಮ್ಮ ಮೆದುಳು ನಿಮ್ಮ ಸ್ವಂತ … Continue reading ಮಾದಕ ದ್ರವ್ಯಗಳಿಗೆ ‘ನೋ’ ಹೇಳಿ: ಯುವಜನತೆಗೆ ಉಪರಾಷ್ಟ್ರಪತಿ ಕರೆ