ಜೀರೋ ಟ್ರಾಫಿಕ್‌ನಲ್ಲಿ ಮೂರು ತಿಂಗಳ ಕಂದಮ್ಮನ ಜೀವದ ಓಟ!

ದಾವಣಗೆರೆ: ಕೇವಲ ಮೂರು ತಿಂಗಳ ಹೆಣ್ಣು ಮಗು ಅನ್ವಿಕಾಳ ಜೀವ ಉಳಿಸಲು ಗುರುವಾರ ಸಂಜೆ ದಾವಣಗೆರೆ ನಗರದಲ್ಲಿ ಮಾನವೀಯತೆಯ ಅಪರೂಪದ ದೃಶ್ಯ ಕಂಡು ಬಂತು. ಶ್ವಾಸಕೋಶದ ಗಂಭೀರ ಸೋಂಕಿನಿಂದ ಬಳಲುತ್ತಿದ್ದ ಅನ್ವಿಕಾಳಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ, ದಾವಣಗೆರೆಯ ಬಾಪೂಜಿ ಮಕ್ಕಳ ಆಸ್ಪತ್ರೆಯಿಂದ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ಜಿರೋ ಟ್ರಾಫಿಕ್ ವ್ಯವಸ್ಥೆಯಡಿ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಯಿತು. ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಂಡಿ ಗ್ರಾಮದ ಹನುಮೇಶ್ ಹಾಗೂ ಪವಿತ್ರಾ ದಂಪತಿಯ ಪುತ್ರಿಯಾಗಿರುವ ಅನ್ವಿಕಾ, ಹೆರಿಗೆಗಾಗಿ ತಾಯಿ … Continue reading ಜೀರೋ ಟ್ರಾಫಿಕ್‌ನಲ್ಲಿ ಮೂರು ತಿಂಗಳ ಕಂದಮ್ಮನ ಜೀವದ ಓಟ!