ಸಿದ್ದರಾಮಯ್ಯನವರನ್ನು ಕುಗ್ಗಿಸುವ ಪಿತೂರಿ ನಡೆಯುತ್ತಿದೆ: ಬಿಎಸ್‌ವೈ ಆರೋಪ

ದಾವಣಗೆರೆ: ಹೆಚ್ಚಿನ ಬಹುಮತದೊಂದಿಗೆ ಸುಸೂತ್ರವಾಗಿ ಆಡಳಿತ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವ್ಯವಸ್ಥಿತ ಪಿತೂರಿ ನಡೆಸಿ ಕೆಳಗಿಳಿಸುವ ಕೆಲಸ ಮಾಡಲಾಯಿತು. ಇದೀಗ ಅವರ ವಿರುದ್ಧವೇ ಸ್ಟಿಂಗ್ ಆಪರೇಷನ್ ನಡೆಸಿರುವುದರ ಹಿಂದಿನ ಉದ್ದೇಶವೇನು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ವಿರುದ್ಧ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದರು. ಆದರೆ, ಅವರನ್ನು ವ್ಯವಸ್ಥಿತವಾಗಿ ಅಧಿಕಾರದಿಂದ … Continue reading ಸಿದ್ದರಾಮಯ್ಯನವರನ್ನು ಕುಗ್ಗಿಸುವ ಪಿತೂರಿ ನಡೆಯುತ್ತಿದೆ: ಬಿಎಸ್‌ವೈ ಆರೋಪ