ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ರಬ್ಬರ್ ಬಾಲ್ ನುಂಗಿ 4 ವರ್ಷದ ಮಗು ಸಾವು

ದಾವಣಗೆರೆ: ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ರಬ್ಬರ್ ಬಾಲ್ ನುಂಗಿ ನಾಲ್ಕು ವರ್ಷದ ಬಾಲಕಿ ಮೃತಪಟ್ಟ ಘಟನೆ ಪಟ್ಟಣದ ಕೌಸರ್ ಮಸೀದಿ ಬಳಿ ಗುರುವಾರ ಸಂಜೆ ನಡೆದಿದೆ. ಚನ್ನಗಿರಿ ಪಟ್ಟಣದ ಕೌಸರ್ ಮಸೀದಿ ಸಮೀಪದ ಮಹಮ್ಮದ್ ಜಮೀರ್ ಅವರ ಪುತ್ರಿ ಅಲೀಜಾ ಶೇಖ್ (4) ಮೃತಪಟ್ಟ ಬಾಲಕಿ. ಬಾಲಕಿ ಬೇಬಿ ಸಿಟ್ಟಿಂಗ್‌ಗೆ ಹೋಗುತ್ತಿದ್ದಳು. ಗುರುವಾರ ಸಂಜೆ ಮಕ್ಕಳಿಗೆ ಮಾರಾಟ ಮಾಡುವ ₹5 ಬೆಲೆಯ ಕುರ್‌ಕುರೆ ಪ್ಯಾಕೆಟ್ ತಿಂದ ಬಳಿಕ ಅದರೊಳಗಿದ್ದ ರಬ್ಬರ್ ಬಾಲ್ ಅನ್ನು ಬಾಯಿಗೆ ಹಾಕಿಕೊಂಡು ನುಂಗಿದ್ದಾಳೆ ಎನ್ನಲಾಗಿದೆ. … Continue reading ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ರಬ್ಬರ್ ಬಾಲ್ ನುಂಗಿ 4 ವರ್ಷದ ಮಗು ಸಾವು