ಬಿಡದಿ ಟೌನ್‌ಶಿಪ್‌ ವಿವಾದ: ‘ವಿಧಾನಸೌಧಕ್ಕೆ ಬನ್ನಿ’ ಎಂದ ಡಿಕೆಶಿ, ‘ಭೈರಮಂಗಲಕ್ಕೆ ಬನ್ನಿ’ ಎಂದ ಕುಮಾರಸ್ವಾಮಿ

ಬೆಂಗಳೂರು: ಬಿಡದಿ ಟೌನ್‌ಶಿಪ್‌ ಯೋಜನೆ ಕುರಿತ ಪರ-ವಿರೋಧದ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ವಿಚಾರ ಇದೀಗ ರಾಜಕೀಯ ಜಿದ್ದಾಜಿದ್ದಿಯ ಅಖಾಡವಾಗುತ್ತಿದೆ. ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಕೇಂದ್ರ ಸಚಿವ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಸೋಮವಾರ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಡಿ.ಕೆ. ಶಿವಕುಮಾರ್, “ತಾವು ಹಿಂದೆ ಪ್ರಾರಂಭಿಸಿದ್ದ ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದಂತೆ ತಮ್ಮೊಂದಿಗೆ ಸಮಗ್ರ ಚರ್ಚೆ … Continue reading ಬಿಡದಿ ಟೌನ್‌ಶಿಪ್‌ ವಿವಾದ: ‘ವಿಧಾನಸೌಧಕ್ಕೆ ಬನ್ನಿ’ ಎಂದ ಡಿಕೆಶಿ, ‘ಭೈರಮಂಗಲಕ್ಕೆ ಬನ್ನಿ’ ಎಂದ ಕುಮಾರಸ್ವಾಮಿ