ಆಧಾರ್‌ಗಾಗಿ ಬೆಳಗಿನ ಜಾವ 6ರಿಂದ ಸರತಿ: ಬೆಡ್‌ಶೀಟ್‌, ಚಪ್ಪಲಿಯೇ ಟೋಕನ್!

ಸಂ.ಕ.ಸಮಾಚಾರ ತೆಕ್ಕಲಕೋಟೆ (ಬಳ್ಳಾರಿ): ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಮಾಡಿಸಿಕೊಳ್ಳಲು ಸಾರ್ವಜನಿಕರು ತಾಸುಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ತೆಕ್ಕಲಕೋಟೆ ತಾಲ್ಲೂಕಿನ ಕರೂರು ಗ್ರಾಮದಲ್ಲಿ ನಿರ್ಮಾಣವಾಗಿದೆ. ಸರದಿಯಲ್ಲಿ ತಮ್ಮ ಸ್ಥಾನ ತಪ್ಪದಂತೆ ಸಾರ್ವಜನಿಕರು ಬೆಡ್‌ಶೀಟ್‌, ಚಪ್ಪಲಿ, ಚೀಲ, ಕಲ್ಲು ಹಾಗೂ ಕೆಲವರು ಆಧಾರ್ ಕಾರ್ಡ್‌ಗಳನ್ನೇ ಸ್ಥಳ ಕಾಯ್ದಿರಿಸುವ ‘ಟೋಕನ್’ ಆಗಿ ಇಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಸಮೀಪದ ಕರೂರು ಗ್ರಾಮದ ನಾಡಕಚೇರಿಯಲ್ಲಿರುವ ಆಧಾರ್ ಕೇಂದ್ರಕ್ಕೆ 18 ಗ್ರಾಮಗಳ ಜನರು ಆಧಾರ್ ನೋಂದಣಿ ಮತ್ತು ವಿವಿಧ ತಿದ್ದುಪಡಿ ಸೇವೆಗಳಿಗಾಗಿ ಆಗಮಿಸುತ್ತಿದ್ದಾರೆ. ಪ್ರತಿ … Continue reading ಆಧಾರ್‌ಗಾಗಿ ಬೆಳಗಿನ ಜಾವ 6ರಿಂದ ಸರತಿ: ಬೆಡ್‌ಶೀಟ್‌, ಚಪ್ಪಲಿಯೇ ಟೋಕನ್!