ಗುಡ್ಡದ ಮಲ್ಲಪ್ಪನ ಗುಡಿಗೆ ದಾರಿ ಬಿಡಿ…!

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣದ ಭರಾಟೆಯಲ್ಲಿ ಹಿರೇಬಾಗೇವಾಡಿ ಸಮೀಪದ ಮಲ್ಲಪ್ಪನ ಗುಡ್ಡದಲ್ಲಿರುವ ಬೆಟ್ಟದ ಮಲ್ಲಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳುವ ಪಾರಂಪರಿಕ ದಾರಿಯೇ ಬಂದ್ ಆಗಿದೆ. ಇದರಂದ ರೈತರು, ಭಕ್ತರು ಮತ್ತು ಸಾರ್ವಜನಿಕರು ಪರದಾಡುವಂತಾಗಿದ್ದು, ತಕ್ಷಣವೇ ಮೂಲ ರಸ್ತೆಯನ್ನು ಅಭಿವೃದ್ಧಿಪಡಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ರಾಣಿ ಚನ್ನಮ್ಮ ಅಭಿವೃದ್ಧಿಪರ ಹೋರಾಟ ಸಮಿತಿ ಆಗ್ರಹಿಸಿದೆ. ಬೆಟ್ಟದ ಮಲ್ಲಪ್ಪಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೂ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಹಕಾರ ನೀಡಬೇಕು ಎಂದು ಒತ್ತಾಯಿಸಿ ಸಮಿತಿಯ ನಿಯೋಗವು ಕುಲಪತಿ … Continue reading ಗುಡ್ಡದ ಮಲ್ಲಪ್ಪನ ಗುಡಿಗೆ ದಾರಿ ಬಿಡಿ…!