ರಿಕ್ಷಾ ಡಿಕ್ಕಿ: ಆಟೋ ಮೇಲೆತ್ತಿ ತಾಯಿ ರಕ್ಷಿಸಿದ ಪುತ್ರಿ

ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಗೆ ರಿಕ್ಷಾ ಡಿಕ್ಕಿ ಹೊಡೆದ ಘಟನೆ ನಡೆದಿದೆ, ರಿಕ್ಷಾದಡಿ ಬಿದ್ದ ತಾಯಿಯನ್ನು ಪುತ್ರಿ ಹಾಗೂ ಸ್ಥಳಿಯರು ರಕ್ಷಿಸಿದ್ದಾರೆ.ಮಂಗಳೂರಿನ ಕಿನ್ನಿಗೋಳಿಯ ರಾಮನಗರದಲ್ಲಿ ಈ ಘಟನೆ ಸಂಭವಿಸಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ, ಪಿಗ್ಮಿ ಕಲೆಕ್ಷನ್​ ಮಾಡುತ್ತಿದ್ದ ರಾಜರತ್ನಪುರದ ನಿವಾಸಿ ಚೇತನಾ (35) ಗಾಯಗೊಂಡಿದ್ದಾರೆ. ಇವರ ಪುತ್ರಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವೈಭವಿ, ಸಮೀಪದ ಟ್ಯೂಷನ್​ ಸೆಂಟರ್‌ಗೆ ಹೋಗಿದ್ದರು. ಅಲ್ಲಿಂದ ಆಕೆಯನ್ನು ಕರೆತರಲು ಬರುತ್ತಿದ್ದ ಮಹಿಳೆ ರಸ್ತೆ ದಾಟುತ್ತಿದ್ದರು. … Continue reading ರಿಕ್ಷಾ ಡಿಕ್ಕಿ: ಆಟೋ ಮೇಲೆತ್ತಿ ತಾಯಿ ರಕ್ಷಿಸಿದ ಪುತ್ರಿ