viralnews Archives - Samyukta Karnataka

ಅಫ್ಘಾನ್ ಸರಣಿಯಿಂದ ‘ಕಿಂಗ್’ ಕೊಹ್ಲಿ ಔಟ್; ಮಂಡಿರಜ್ಜು ಗಾಯದಿಂದ ಹೊರಕ್ಕೆ, ಯಾರಿಗೆ ವಿರಾಟ್ ಸ್ಥಾನ?
ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾಕ್ಕೆ ಭಾರಿ ಹಿನ್ನಡೆಯಾಗಿದೆ. ಮಂಡಿರಜ್ಜು (Hamstring) ಗಾಯದ ಸಮಸ್ಯೆಯಿಂದಾಗಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈ ಸರಣಿಯಿಂದ ಹೊರಗುಳಿದಿದ್ದಾರೆ. ಕೊಹ್ಲಿ ಅವರ ಅಲಭ್ಯತೆಯಿಂದ ತೆರವಾದ ಸ್ಥಾನಕ್ಕೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.

ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಚಾಂಪಿಯನ್ ಆಗುವಲ್ಲಿ ವಿರಾಟ್ ಕೊಹ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧದ ಆ ಪಂದ್ಯದಲ್ಲಿ ಅಜೇಯ 75 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದ ಕೊಹ್ಲಿ, ಬ್ಯಾಟಿಂಗ್ ಮಾಡುವಾಗಲೇ ತೀವ್ರ ಸ್ನಾಯು ಸೆಳೆತ ಮತ್ತು ಮಂಡಿರಜ್ಜು ನೋವಿನಿಂದ ಬಳಲುತ್ತಿದ್ದರು. ಅಂದಿನ ನೋವಿನ ನಡುವೆಯೂ ತಂಡಕ್ಕೆ ಕಪ್ ತಂದುಕೊಟ್ಟಿದ್ದ ಕೊಹ್ಲಿ, ಈಗ ಗಾಯದಿಂದ ಚೇತರಿಸಿಕೊಳ್ಳಲು ವಿಶ್ರಾಂತಿಯ ಮೊರೆ ಹೋಗಿದ್ದಾರೆ.

ಕೊಹ್ಲಿ ಅವರ ಚೇತರಿಕೆಗೆ ಹೆಚ್ಚಿನ ಸಮಯಾವಕಾಶ ನೀಡುವ ಉದ್ದೇಶದಿಂದ ಆಯ್ಕೆ ಸಮಿತಿಯು ಈ ನಿರ್ಧಾರ ಕೈಗೊಂಡಿದೆ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದು, “ವಿರಾಟ್ ಈಗಷ್ಟೇ ಗಾಯಕ್ಕೆ ತುತ್ತಾಗಿದ್ದಾರೆ. ಅವರು ಸಂಪೂರ್ಣವಾಗಿ ಫಿಟ್ ಆಗಲು ಸ್ವಲ್ಪ ಸಮಯ ಬೇಕಾಗಬಹುದು. ಜುಲೈನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆಗೆ ಅವರು ಮರಳಿ ತಂಡ ಸೇರುವ ಭರವಸೆ ಇದೆ,” ಎಂದು ತಿಳಿಸಿದ್ದಾರೆ.

ಇತ್ತ ವಿರಾಟ್ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್‌ಗೆ ಮತ್ತೊಮ್ಮೆ ಏಕದಿನ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸುವರ್ಣಾವಕಾಶ ಸಿಕ್ಕಿದೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿಯು ಜೂನ್ 13ರಿಂದ ಆರಂಭವಾಗಲಿದ್ದು, ಕೊಹ್ಲಿ ಅಲಭ್ಯತೆ ಅಭಿಮಾನಿಗಳಲ್ಲಿ ಅಲ್ಪ ನಿರಾಸೆ ಮೂಡಿಸಿದೆ. ಇತ್ತೀಚಿನ ಫಾರ್ಮ್ ಗಮನಿಸಿದರೆ ಜೈಸ್ವಾಲ್ ಕೂಡ ತಂಡಕ್ಕೆ ಬಲ ತುಂಬುವ ನಿರೀಕ್ಷೆಯಿದೆ.

The post ಅಫ್ಘಾನ್ ಸರಣಿಯಿಂದ ‘ಕಿಂಗ್’ ಕೊಹ್ಲಿ ಔಟ್; ಮಂಡಿರಜ್ಜು ಗಾಯದಿಂದ ಹೊರಕ್ಕೆ, ಯಾರಿಗೆ ವಿರಾಟ್ ಸ್ಥಾನ? appeared first on Samyukta Karnataka.

ಜೀವನಕ್ಕೆ ದಿವ್ಯೌಷಧ ಕರುಂಗಾಲಿ, ತುಳಸಿ, ರುದ್ರಾಕ್ಷಿ: ಇವುಗಳನ್ನು ಧರಿಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?
ಸಾಮಾನ್ಯವಾಗಿ ಜನರು ದೈವಿಕ ಶಕ್ತಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಕರುಂಗಾಲಿ, ತುಳಸಿ ಹಾಗೂ ರುದ್ರಾಕ್ಷಿ ಮಾಲೆ ಧರಿಸುತ್ತಾರೆ. ಹಾಗೇ ಇದು ಸನಾತನ ಧರ್ಮದಲ್ಲಿ ವಿವಿಧ ರೀತಿಯ ನೈಸರ್ಗಿಕ ಮಾಲೆಗಳನ್ನು ಧರಿಸುವುದಕ್ಕೆ ವಿಶೇಷ ಮಹತ್ವವಿದೆ. ಆದ್ರೆ ಕೆಲವರು ಇವುಗಳನ್ನು ಫ್ಯಾಶನ್‌ಗಾಗಿಯು ಧರಿಸುತ್ತಾರೆ. ಯಾರು ಯಾವ ತರಹದ ಮಾಲೆ ಧರಿಸಬೇಕು ಎಂದು ತಿಳಿದು ಹಾಕುವ ಸಮಯಪ್ರಜ್ಞ ಕಡಿಮೆ ಅಗಿದೆ.

ಇತ್ತೀಚಿನ ದಿನಗಳಲ್ಲಿ ಆಧ್ಯಾತ್ಮಿಕ ಚಿಂತನೆ ಹಾಗೂ ಮಾನಸಿಕ ಶಾಂತಿಗಾಗಿ ಕರುಂಗಾಲಿ (ಕರಿಗಾಲಿ), ತುಳಸಿ ಮತ್ತು ರುದ್ರಾಕ್ಷಿ ಮಾಲೆಗಳನ್ನು ಧರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇವು ಕೇವಲ ಧಾರ್ಮಿಕ ನಂಬಿಕೆಯಲ್ಲ, ಬದಲಿಗೆ ವೈಜ್ಞಾನಿಕವಾಗಿ ಮತ್ತು ದೈಹಿಕವಾಗಿ ಮನುಷ್ಯನ ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ನಂಬಲಾಗಿದೆ.

ಕರುಂಗಾಲಿ ಮಾಲೆಯ ಪವಾಡ: ಕರುಂಗಾಲಿ ಅಥವಾ ಬ್ಲ್ಯಾಕ್ ಎಬೊನಿ ಮರದಿಂದ ತಯಾರಾಗುವ ಈ ಮಾಲೆಗೆ ನಕಾರಾತ್ಮಕ ಶಕ್ತಿಯನ್ನು ದೂರವಿಡುವ ಅದ್ಭುತ ಸಾಮರ್ಥ್ಯವಿದೆ. ಇದನ್ನು ಧರಿಸುವುದರಿಂದ ಜಾತಕದಲ್ಲಿನ ಕುಜ (ಮಂಗಳ) ದೋಷ ನಿವಾರಣೆಯಾಗುತ್ತದೆ ಮತ್ತು ಧನಾತ್ಮಕ ಶಕ್ತಿ ಹೆಚ್ಚುತ್ತದೆ. ವ್ಯಾಪಾರದಲ್ಲಿ ಯಶಸ್ಸು, ಮಾನಸಿಕ ಧೈರ್ಯ ಹಾಗೂ ಕೋಪ ನಿಯಂತ್ರಣಕ್ಕೆ ಕರುಂಗಾಲಿ ಮಾಲೆ ಅತ್ಯುತ್ತಮ ಪರಿಣಾಮ ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ತುಳಸಿ ಮಾಲೆಯ ಶಕ್ತಿ: ಮಹಾವಿಷ್ಣು ಹಾಗೂ ಕೃಷ್ಣನಿಗೆ ಪ್ರಿಯವಾದ ತುಳಸಿ ಮಾಲೆಯನ್ನು ಧರಿಸುವುದರಿಂದ ಮನಸ್ಸು ಅತ್ಯಂತ ಪ್ರಶಾಂತವಾಗುತ್ತದೆ. ಆಯುರ್ವೇದದ ಪ್ರಕಾರ, ತುಳಸಿ ಮಣಿಗಳು ಚರ್ಮಕ್ಕೆ ಸ್ಪರ್ಶಿಸುವುದರಿಂದ ರಕ್ತದೊತ್ತಡ (BP) ನಿಯಂತ್ರಣದಲ್ಲಿರುತ್ತದೆ ಮತ್ತು ಧರಿಸಿದವರಲ್ಲಿ ಸತ್ವ ಗುಣ ಹೆಚ್ಚುತ್ತದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಏಕಾಗ್ರತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ರುದ್ರಾಕ್ಷಿ ಮಾಲೆಯ ಮಹಿಮೆ: ಶಿವನ ಕಣ್ಣೀರಿನಿಂದ ಉದ್ಭವಿಸಿದ ರುದ್ರಾಕ್ಷಿ ಮಾಲೆಯು ದೈವಿಕ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಇದು ದೇಹದ ವಿದ್ಯುತ್ಕಾಂತೀಯ ವಲಯವನ್ನು (Electromagnetic field) ಸಮತೋಲನದಲ್ಲಿಡುತ್ತದೆ. ಹೃದಯದ ಆರೋಗ್ಯ ಸುಧಾರಿಸಲು, ನರಮಂಡಲವನ್ನು ಶಾಂತಗೊಳಿಸಲು ಮತ್ತು ಅಕಾಲಿಕ ಮರಣದ ಭಯವನ್ನು ಹೋಗಲಾಡಿಸಲು ರುದ್ರಾಕ್ಷಿ ಸಹಕಾರಿಯಾಗಿದೆ. ನಿರ್ಭಯತೆ ಮತ್ತು ಆಧ್ಯಾತ್ಮಿಕ ಉನ್ನತಿಗೆ ಇದು ರಹದಾರಿಯಾಗಿದೆ.

ಒಟ್ಟಾರೆಯಾಗಿ, ಈ ಮಾಲೆಗಳು ಕೇವಲ ಅಲಂಕಾರಿಕ ವಸ್ತುವಲ್ಲ. ನಿಯಮಬದ್ಧವಾಗಿ, ಶುದ್ಧತೆಯಿಂದ ಇವುಗಳನ್ನು ಧರಿಸುವುದರಿಂದ ಜೀವನದಲ್ಲಿ ಯಶಸ್ಸು, ನೆಮ್ಮದಿ ಹಾಗೂ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ.

The post ಜೀವನಕ್ಕೆ ದಿವ್ಯೌಷಧ ಕರುಂಗಾಲಿ, ತುಳಸಿ, ರುದ್ರಾಕ್ಷಿ: ಇವುಗಳನ್ನು ಧರಿಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ? appeared first on Samyukta Karnataka.

ಮೈದಾನದಲ್ಲಿ ಕೊಹ್ಲಿ-ಹೆಡ್ ವಾಗ್ವಾದ: ಸೋಶಿಯಲ್ ಮೀಡಿಯಾದಲ್ಲಿ ಪತ್ನಿ ಜೆಸ್ಸಿಕಾಗೆ ನೆಟ್ಟಿಗರ ಕಿರುಕುಳ
ಬೆಂಗಳೂರು: IPL2026ರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯದ ವೇಳೆ ಉಂಟಾದ ವಿವಾದ ಇದೀಗ ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್ ಕುಟುಂಬದ ಬಾಗಿಲು ತಟ್ಟಿದೆ. ಪಂದ್ಯದ ಮುಕ್ತಾಯದ ನಂತರ ವಿರಾಟ್ ಕೊಹ್ಲಿ ಟ್ರಾವಿಸ್ ಹೆಡ್‌ಗೆ ಹಸ್ತಲಾಘವ (Handshake) ನಿರಾಕರಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ, ಕೊಹ್ಲಿ ಅಂಧ ಅಭಿಮಾನಿಗಳು ಹೆಡ್ ಪತ್ನಿ ಜೆಸ್ಸಿಕಾರನ್ನು ಗುರಿಯಾಗಿಸಿ ಆನ್‌ಲೈನ್‌ನಲ್ಲಿ ತೀವ್ರ ನಿಂದನೆ ಹಾಗೂ ಬೆದರಿಕೆಗಳನ್ನು ಹಾಕುತ್ತಿದ್ದಾರೆ.

ಈ ಕುರಿತು ಆಸ್ಟ್ರೇಲಿಯಾದ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಜೆಸ್ಸಿಕಾ, “2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ನಡೆದಿದ್ದ ನಿಂದನೆಯೇ ಈಗ ಮತ್ತೆ ಮರುಕಳಿಸಿದೆ. ಕ್ರೀಡೆಯಲ್ಲಿ ಆವೇಶ ಸಹಜ, ಆದ್ರೆ ಆಟದ ಹಿಂದೆ ನಿಜವಾದ ಮನುಷ್ಯರು ಮತ್ತು ಕುಟುಂಬ ಇರುತ್ತದೆ ಎಂಬುದನ್ನು ಮರೆಯಬಾರದು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಮಗಾಗುತ್ತಿರುವ ಮಾನಸಿಕ ಕಿರುಕುಳದ ಬಗ್ಗೆ ಕ್ರೀಡಾಲೋಕದಲ್ಲಿ ಗಂಭೀರ ಚರ್ಚೆಯಾಗಬೇಕಿದೆ ಎಂದು ಜೆಸ್ಸಿಕಾ ಒತ್ತಾಯಿಸಿದ್ದಾರೆ.

ವಿವಾದದ ಹಿನ್ನೆಲೆ: ಪಂದ್ಯದ ವೇಳೆ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಿದ್ದ ಹೆಡ್‌ಗೆ ಬೌಲಿಂಗ್ ಮಾಡುವಂತೆ ಕೊಹ್ಲಿ ಸವಾಲು ಹಾಕಿದ್ದರು ಎನ್ನಲಾಗಿದೆ. ಮೈದಾನದ ಈ ಆಕ್ರಮಣಶೀಲತೆ ಪಂದ್ಯ ಮುಗಿದ ನಂತರವೂ ಮುಂದುವರಿದು, ಕೊಹ್ಲಿ ಹಸ್ತಲಾಘವ ನಿರಾಕರಿಸುವ ಹಂತಕ್ಕೆ ತಲುಪಿತ್ತು. ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, “ಮೈದಾನದ ವಾಗ್ವಾದಗಳು ಸಹಜ, ಆದ್ರೆ ಪಂದ್ಯದ ಬಳಿಕ ಹಸ್ತಲಾಘವ ನಿರಾಕರಿಸಿದ್ದನ್ನು ತಪ್ಪಿಸಬಹುದಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಎರಡೂ ತಂಡಗಳು ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿವೆ. ಮೇ 26ರ ಕ್ವಾಲಿಫೈಯರ್‌ನಲ್ಲಿ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ಎದುರಿಸಲಿದ್ದರೆ, ಮೇ 27ರ ಎಲಿಮಿನೇಟರ್‌ನಲ್ಲಿ ಹೈದರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲಿದೆ. ಇವೆರಡೂ ತಂಡಗಳು ಟೂರ್ನಿಯಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ದಟ್ಟವಾಗಿದೆ.

The post ಮೈದಾನದಲ್ಲಿ ಕೊಹ್ಲಿ-ಹೆಡ್ ವಾಗ್ವಾದ: ಸೋಶಿಯಲ್ ಮೀಡಿಯಾದಲ್ಲಿ ಪತ್ನಿ ಜೆಸ್ಸಿಕಾಗೆ ನೆಟ್ಟಿಗರ ಕಿರುಕುಳ appeared first on Samyukta Karnataka.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ‘ಟ್ರಂಪ್’ ಎಮ್ಮೆ: ಖರೀದಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಢಾಕಾ: ಅಮೆರಿಕ ಅಧ್ಯಕ್ಷರ ಹೆಸರುಗಳು ಜಾಗತಿಕ ರಾಜಕೀಯದಲ್ಲಿ ಸದಾ ಮುಂಚೂಣಿಯಲ್ಲಿರುತ್ತವೆ. ಆದ್ರೆ ಬಾಂಗ್ಲಾದೇಶದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿನ ಅಪರೂಪದ ಎಮ್ಮೆಯೊಂದು ಇಡೀ ದೇಶದ ಗಮನ ಸೆಳೆದಿದೆ. ತನ್ನ ವಿಶಿಷ್ಟ ನೋಟ ಹಾಗೂ ಭಾರೀ ಮೊತ್ತದ ವ್ಯಾಪಾರದಿಂದಾಗಿ ಈ ಎಮ್ಮೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ವೈರಲ್ ಆಗುತ್ತಿದ್ದು, ಸುದ್ದಿ ಮಾಧ್ಯಮಗಳಲ್ಲೂ ಸದ್ದು ಮಾಡುತ್ತಿದೆ.

ಬಾಂಗ್ಲಾದೇಶದ ನಾರಾಯಣಗಂಜ್ ಜಿಲ್ಲೆಯ ಖಾಸಗಿ ಫಾರಂ ಒಂದರಲ್ಲಿ ಬೆಳೆಸಲಾಗಿರುವ ಈ ಎಮ್ಮೆ ನೋಡುಗರ ಕಣ್ಣು ಕೋರೈಸುವಂತಿದೆ. ಇದು ಅತ್ಯಂತ ಅಪರೂಪದ ‘ಅಲ್ಟಿನೋ’ ತಳಿಗೆ ಸೇರಿದ್ದಾಗಿದ್ದು, ಇದರ ಮೈಮೇಲಿರುವ ಹೊಂಬಣ್ಣದ ಕೂದಲುಗಳು ಪ್ರಮುಖ ಆಕರ್ಷಣೆಯಾಗಿದೆ. ಈ ವಿಶಿಷ್ಟ ಹೊಂಬಣ್ಣ ಹಾಗೂ ರಾಜ ಗಾಂಭೀರ್ಯದ ನೋಟದಿಂದಾಗಿಯೇ ಫಾರಂ ಮಾಲೀಕರು ಇದಕ್ಕೆ ಯುಎಸ್ ಅಧ್ಯಕ್ಷ ‘ಟ್ರಂಪ್’ ಎಂದು ನಾಮಕರಣ ಮಾಡಿದ್ದರು. ಅಂದಿನಿಂದಲೂ ಈ ಎಮ್ಮೆ ಸ್ಥಳೀಯವಾಗಿ ಭಾರೀ ಕುತೂಹಲ ಮೂಡಿಸಿತ್ತು.

ಅಲ್ಲದೇ.. ಮುಸ್ಲಿಮರ ಪವಿತ್ರ ಹಬ್ಬವಾದ ‘ಈದ್-ಉಲ್-ಅದಾ’ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ, ಹಬ್ಬದ ಕುರ್ಬಾನಿ ಆಚರಣೆಗಾಗಿ ಈ ಎಮ್ಮೆಯನ್ನು ಮಾರುಕಟ್ಟೆಗೆ ತರಲಾಗಿತ್ತು. ಇದರ ಅಪರೂಪದ ಸೌಂದರ್ಯಕ್ಕೆ ಮಾರುಹೋದ ಢಾಕಾ ಮೂಲದ ಪ್ರಮುಖ ಉದ್ಯಮಿಯೊಬ್ಬರು ತಡಮಾಡದೆ, ಬರೋಬ್ಬರಿ ಐವತ್ತು ಲಕ್ಷ ಟಾಕಾ (ಬಾಂಗ್ಲಾದೇಶದ ಕರೆನ್ಸಿ) ಕೊಟ್ಟು ಈ ಎಮ್ಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ.. ಸ್ಥಳೀಯ ಮಾರುಕಟ್ಟೆಯ ಇತಿಹಾಸದಲ್ಲೇ ಎಮ್ಮೆಯೊಂದು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಸದ್ಯ ಹಬ್ಬದ ಸೀಸನ್‌ನಲ್ಲಿ ‘ಟ್ರಂಪ್’ ಎಮ್ಮೆಯ ಖರೀದಿ ಪ್ರಕ್ರಿಯೆ ಮತ್ತು ಅದರ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಹಾಗೇ ಸಾಮಾಜಿಕ ಜಾಲತಾಣದಲ್ಲಿ ಈ ʻಟ್ರಂಪ್‌ʼ ಎಮ್ಮಯದ್ದೇ ಟ್ರೆಂಡ್ ಜೋರಾಗಿದೆ.

The post ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ‘ಟ್ರಂಪ್’ ಎಮ್ಮೆ: ಖರೀದಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! appeared first on Samyukta Karnataka.

ನಟಿ ರುಕ್ಮಿಣಿ ವಸಂತ್ ‘ಬಿಕಿನಿ ಫೋಟೋ’ ವೈರಲ್: ಅಸಲಿ ಸತ್ಯ ಬಿಚ್ಚಿಟ್ಟ ‘ಸಪ್ತ ಸಾಗರದಾಚೆ ಎಲ್ಲೋ’ ಸುಂದರಿ!
ಕಾಂತಾರ ನಟಿ, ಸ್ಯಾಂಡಲ್‌ವುಡ್ ಸ್ಟಾರ್ ರುಕ್ಮಿಣಿ ವಸಂತ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗುರಿಯಾಗಿದ್ದರು. ಇತ್ತೀಚಿಗಷ್ಟೇ ಬಿಕಿನಿ ತೊಟ್ಟು ಪೋಸ್ ಕೊಟ್ಟಿದ್ದಾರೆ ಎನ್ನಲಾದ ಕೆಲವು ಫೋಟೋಗಳು ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಆದ್ರೆ ಈ ಫೋಟೋಗಳ ಹಿಂದಿನ ಅಸಲಿ ಸತ್ಯವೇ ಬೇರೆ ಇದೆ. ಸ್ವತಃ ನಟಿ ರುಕ್ಮಿಣಿ ವಸಂತ್ ಈ ಕುರಿತು ಅಧಿಕೃತವಾಗಿ ಸ್ಪಷ್ಟನೆ ನೀಡುವ ಮೂಲಕ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

ವೈರಲ್ ಆಗುತ್ತಿರುವ ಫೋಟೋಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ನಟಿ, ಇವೆಲ್ಲವೂ ಸಂಪೂರ್ಣವಾಗಿ ನಕಲಿ ಫೋಟೋಗಳು ಎಂದು ತಮ್ಮ ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿದ್ದಾರೆ. ಆಧುನಿಕ ತಂತ್ರಜ್ಞಾನವಾದ AI (ಕೃತಕ ಬುದ್ಧಿಮತ್ತೆ) ಬಳಸಿ ಯಾರೋ ಕಿಡಿಗೇಡಿಗಳು ತಮ್ಮ ಮುಖವನ್ನು ಬೇರೆ ದೇಹಕ್ಕೆ ಜೋಡಿಸಿ ಈ ರೀತಿಯ ಕೃತ್ಯ ಎಸಗಿದ್ದಾರೆ. ಇದನ್ನು ತಮ್ಮ ಮೊದಲ ಬಿಕಿನಿ ಫೋಟೋಶೂಟ್ ಎಂದು ಬಿಂಬಿಸಿ ಹರಿಬಿಟ್ಟಿರುವುದು ಅತ್ಯಂತ ಖಂಡನೀಯ ಎಂದು ನಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ಕ್ರಮಕ್ಕೆ ಮುಂದಾದ ನಟಿ: ತಮ್ಮ ಹೆಸರಿಗೆ ಮಸಿ ಬಳಿಯಲು ಯತ್ನಿಸಿರುವ ಈ ಘಟನೆಯನ್ನು ರುಕ್ಮಿಣಿ ವಸಂತ್ ಗಂಭೀರವಾಗಿ ಪರಿಗಣಿಸಿದ್ದಾರೆ. ಕೇವಲ ಸ್ಪಷ್ಟನೆ ನೀಡುವುದಕ್ಕೆ ಸೀಮಿತವಾಗದೆ, ಈ ನಕಲಿ ಫೋಟೋಗಳನ್ನು ಸೃಷ್ಟಿಸಿದವರು ಮತ್ತು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಈಗಾಗಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗುತ್ತಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ.. ತಂತ್ರಜ್ಞಾನದ ದುರ್ಬಳಕೆಯಿಂದ ಸೆಲೆಬ್ರಿಟಿಗಳು ಎದುರಿಸುತ್ತಿರುವ ಡಿಜಿಟಲ್ ಅಪಾಯಕ್ಕೆ ಇದೊಂದು ಮತ್ತೊಂದು ಉದಾಹರಣೆಯಾಗಿದೆ. ನಕಲಿ ಫೋಟೋಗಳನ್ನು ನಂಬಿ ಯಾರೂ ಕೂಡ ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಈ ಮೂಲಕ ವಿನಂತಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ನಟಿಯರ ಮಾರ್ಫ್ ಮಾಡಿದ ಫೋಟೋಗಳು ವೈರಲ್ ಆಗುತ್ತಿರುವುದು ಸೈಬರ್ ಜಗತ್ತಿನಲ್ಲಿ ದೊಡ್ಡ ಆತಂಕ ಮೂಡಿಸಿದೆ.

The post ನಟಿ ರುಕ್ಮಿಣಿ ವಸಂತ್ ‘ಬಿಕಿನಿ ಫೋಟೋ’ ವೈರಲ್: ಅಸಲಿ ಸತ್ಯ ಬಿಚ್ಚಿಟ್ಟ ‘ಸಪ್ತ ಸಾಗರದಾಚೆ ಎಲ್ಲೋ’ ಸುಂದರಿ! appeared first on Samyukta Karnataka.

ಇನ್‌ಸ್ಟಾಗ್ರಾಮ್‌ನಲ್ಲಿ ಧೂಳೆಬ್ಬಿಸಿದ್ದ ‘CJP’ಗೆ ಬಿಗ್ ಶಾಕ್: ʻBJPʼ ರೆಕಾರ್ಡ್ ಬ್ರೇಕ್;‌ ಮಹುವಾ ಮೊಯಿತ್ರಾ ಬೆಂಬಲ!
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ವಿಡಂಬನಾತ್ಮಕ ರಾಜಕೀಯ ಚಳುವಳಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಯ ಅಧಿಕೃತ ‘X’ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ ಸಂಖ್ಯೆಯಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷವಾದ ಬಿಜೆಪಿಯನ್ನು ಹಿಂದಿಕ್ಕಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿರುವುದು ಸದ್ಯ ರಾಜಕೀಯ ಹಾಗೂ ಡಿಜಿಟಲ್ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಕಳೆದ ಕೆಲವು ದಿನಗಳಿಂದ ಮೀಮ್ಸ್, ವ್ಯಂಗ್ಯ ಹಾಗೂ ಚುರುಕಿನ ರಾಜಕೀಯ ಸಂದೇಶಗಳ ಮೂಲಕ ಯುವಜನರಲ್ಲಿ ಸಿಜೆಪಿ ಭಾರೀ ಜನಪ್ರಿಯತೆ ಗಳಿಸಿತ್ತು. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಪರೀಕ್ಷಾ ಪತ್ರಿಕೆ ಸೋರಿಕೆ ಹಾಗೂ ವ್ಯವಸ್ಥೆಯ ಹೊಣೆಗಾರಿಕೆಯ ಕುರಿತು ಯುವಜನರಿಗಿರುವ ಅಸಮಾಧಾನವನ್ನು ಈ ಚಳುವಳಿ ವ್ಯಂಗ್ಯಾತ್ಮಕವಾಗಿ ಅಭಿವ್ಯಕ್ತಿಸುತ್ತಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಯ ಅಧಿಕೃತ ಖಾತೆಯು 8.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ಈ ಸಿಜೆಪಿ ಖಾತೆಯು ಕೇವಲ ಎರಡೇ ದಿನಗಳಲ್ಲಿ ಬರೋಬ್ಬರಿ 14.5 ಮಿಲಿಯನ್ ಗಡಿ ದಾಟಿ ಇತಿಹಾಸ ಸೃಷ್ಟಿಸಿತ್ತು.

ಖಾತೆ ಮುಚ್ಚಲ್ಪಟ್ಟಿರುವ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ, “ಇದು ದೇಶದ ನಿಷ್ಕ್ರಿಯ ರಾಜಕೀಯ ಪಕ್ಷಗಳ ವಿರುದ್ಧ ಯುವಜನರು ನಡೆಸುತ್ತಿರುವ ಡಿಜಿಟಲ್ ದಂಗೆಯ ಸಂಕೇತವಾಗಿದೆ. ಭ್ರಷ್ಟ ರಾಜಕೀಯ ವ್ಯವಸ್ಥೆಯ ವಿರುದ್ಧ ಯುವ ಪೀಳಿಗೆ ಎಚ್ಚೆತ್ತುಕೊಂಡಿದ್ದು, ದೇಶದಲ್ಲಿ ದೊಡ್ಡ ಬದಲಾವಣೆ ಬಯಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ” ಎಂದು ಹೇಳಿದ್ದಾರೆ. ಸದ್ಯ ಯುವಕರು ತಮ್ಮ ವೈಯಕ್ತಿಕ ಖಾತೆಗಳ ಮೂಲಕ ವಿಡಿಯೋಗಳನ್ನು ಮಾಡಿ ಈ ಅಭಿಯಾನವನ್ನು ಮತ್ತಷ್ಟು ವೈರಲ್ ಮಾಡುತ್ತಿದ್ದಾರೆ.

ವಿಶೇಷವೆಂದರೆ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹಾಗೂ ಕೀರ್ತಿ ಆಜಾದ್ ಅವರಂತಹ ಪ್ರಮುಖ ರಾಜಕಾರಣಿಗಳು ಸಹ ಈ ವಿಭಿನ್ನ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಮಹುವಾ ಮೊಯಿತ್ರಾ ಅವರು ‘X’ ನಲ್ಲಿ ವ್ಯಂಗ್ಯವಾಗಿ ಟ್ವೀಟ್ ಮಾಡಿ, “ನಾನು ಈಗಾಗಲೇ ರಾಷ್ಟ್ರವಿರೋಧಿ ಪಕ್ಷದ ಕಾರ್ಡ್ ಹೊಂದಿರುವ ಸದಸ್ಯೆಯಾಗಿದ್ದೇನೆ, ಹಾಗಾಗಿ ನನಗೂ ಸಿಜೆಪಿ ಪಕ್ಷ ಸೇರಲು ಇಷ್ಟವಿದೆ” ಎಂದು ಬರೆದುಕೊಂಡಿದ್ದಾರೆ.

“ಯುವಕರಿಂದ, ಯುವಜನರಿಗಾಗಿ, ಯುವಜನರ ರಾಜಕೀಯ ರಂಗ” ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಸಿಜೆಪಿ, “ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ ಮತ್ತು ಸೋಮಾರಿ” ಎಂಬ ವಿಭಿನ್ನ ಘೋಷಣೆಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಸದ್ಯ ಯುವಜನರು ತೋರುತ್ತಿರುವ ಈ ಉತ್ಸಾಹವನ್ನು ನೋಡಿದರೆ, ಇದು ಕೇವಲ ತಾತ್ಕಾಲಿಕ ಸದ್ದಾಗಿ ಉಳಿಯದೆ ಮುಂದಿನ ದಿನಗಳಲ್ಲಿ ದೇಶದ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಯುವಕರಲ್ಲಿ ಹೊಸ ಜಾಗೃತಿ ಮೂಡಿಸುವುದಂತೂ ಖಂಡಿತ ಎಂಬ ಮಾತುಗಳು ಕೇಳಿಬರುತ್ತಿವೆ.

The post ಇನ್‌ಸ್ಟಾಗ್ರಾಮ್‌ನಲ್ಲಿ ಧೂಳೆಬ್ಬಿಸಿದ್ದ ‘CJP’ಗೆ ಬಿಗ್ ಶಾಕ್: ʻBJPʼ ರೆಕಾರ್ಡ್ ಬ್ರೇಕ್;‌ ಮಹುವಾ ಮೊಯಿತ್ರಾ ಬೆಂಬಲ! appeared first on Samyukta Karnataka.

ಮೋದಿ-ಮೆಲೋನಿ ಜಾದೂ: ಶೇರು ಕೊಂಡ ಹೂಡಿಕೆದಾರರು; ಜಾಲತಾಣದ ಟ್ರೆಂಡ್‌ಗೆ ಉಲ್ಟಾ-ಪಲ್ಟಾ!
ಸಾಮಾಜಿಕ ಮಾಧ್ಯಮಗಳಲ್ಲಿ ಸೃಷ್ಟಿಯಾದ ಸಣ್ಣದೊಂದು ಗೊಂದಲ, ಶೇರು ಮಾರುಕಟ್ಟೆಯಲ್ಲಿ ಸಂಬಂಧವೇ ಇಲ್ಲದ ಕಂಪನಿಯೊಂದರ ಶೇರು ಮೌಲ್ಯ ದಿಢೀರ್ ಏರಿಕೆಯಾಗಲು ಕಾರಣವಾದ ವಿಚಿತ್ರ ಘಟನೆಯೊಂದು ನಡೆದಿದೆ. ಇಟಲಿ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಭಾರತದ ಪ್ರಸಿದ್ಧ ‘ಮೆಲೋಡಿ’ ಚಾಕೊಲೇಟ್ ಪ್ಯಾಕೆಟ್‌ನ್ನ ಉಡುಗೊರೆಯಾಗಿ ನೀಡಿದ್ದರು. ಮೆಲೋನಿ ಈ ವಿಡಿಯೊವನ್ನು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಬೆನ್ನಲ್ಲೇ, ನೆಟ್ಟಿಗರು ಮೋದಿ ಮತ್ತು ಮೆಲೋನಿ ಹೆಸರನ್ನು ಜೋಡಿಸಿ ‘#Melodi’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದರು. ಕೋಟಿಗೂ ಅಧಿಕ ವೀಕ್ಷಣೆ ಪಡೆದ ಈ ವಿಡಿಯೋ ಶೇರು ಮಾರುಕಟ್ಟೆಯ ಹೂಡಿಕೆದಾರರ ಮೇಲೂ ಪ್ರಭಾವ ಬೀರಿದೆ.

ಜಾಲತಾಣಗಳ ಟ್ರೆಂಡ್ ಗಮನಿಸಿದ ವಹಿವಾಟುದಾರರು, ಮೆಲೋಡಿ ಚಾಕೊಲೇಟ್ ತಯಾರಿಸುವ ‘ಪಾರ್ಲೆ ಪ್ರಾಡಕ್ಟ್ಸ್’ ಕಂಪನಿಯೇ ಶೇರು ಮಾರುಕಟ್ಟೆಯಲ್ಲಿದೆ ಎಂದು ತಪ್ಪಾಗಿ ಭಾವಿಸಿದ್ದಾರೆ. ಶೇರು ಪೇಟೆಯಲ್ಲಿ ಲಿಸ್ಟ್ ಆಗಿರುವ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ವಲಯದ ‘ಪಾರ್ಲೆ ಇಂಡಸ್ಟ್ರೀಸ್’ (Parle Industries) ಕಂಪನಿಯ ಶೇರುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಇದರ ಪರಿಣಾಮವಾಗಿ, ಪಾರ್ಲೆ ಇಂಡಸ್ಟ್ರೀಸ್ ಶೇರು ಮೌಲ್ಯವು ಒಂದೇ ದಿನದಲ್ಲಿ ಶೇ 5 ರಷ್ಟು ಜಿಗಿದು ₹5.25 ತಲುಪಿತು. ವಾರದಲ್ಲೇ ಇದು ಶೇ 7 ರಷ್ಟು ಪ್ರಗತಿ ಸಾಧಿಸಿದೆ.

ಆದ್ರೆ ಅಸಲಿ ವಿಷಯವೆಂದರೆ, ನಾವೆಲ್ಲರೂ ಸವಿಯುವ ಪಾರ್ಲೆ-ಜಿ, ಮೊನಾಕೊ ಹಾಗೂ ಮೆಲೋಡಿ ಚಾಕೊಲೇಟ್ ತಯಾರಿಸುವ ಮಾತೃ ಸಂಸ್ಥೆ ‘ಪಾರ್ಲೆ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್’ ಶೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗೇ ಇಲ್ಲ, ಕೇವಲ ಹೆಸರಿನ ಸಾಮ್ಯತೆಯಿಂದಾಗಿ ಹೂಡಿಕೆದಾರರು ಗೊಂದಲಕ್ಕೀಡಾಗಿ, ಬಿಸ್ಕತ್ ಕಂಪನಿ ಎಂದುಕೊಂಡು ರಿಯಲ್ ಎಸ್ಟೇಟ್ ಕಂಪನಿಯ ಶೇರು ಖರೀದಿಸಿದ ಕಾರಣ ಸಂಬಂಧವೇ ಇಲ್ಲದ ಕಂಪನಿಯು ಲಾಭ ಮಾಡಿಕೊಂಡಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.

The post ಮೋದಿ-ಮೆಲೋನಿ ಜಾದೂ: ಶೇರು ಕೊಂಡ ಹೂಡಿಕೆದಾರರು; ಜಾಲತಾಣದ ಟ್ರೆಂಡ್‌ಗೆ ಉಲ್ಟಾ-ಪಲ್ಟಾ! appeared first on Samyukta Karnataka.

“ದೇವರಿದ್ದಾನೆ ಹುಷಾರಾಗಿರಿ”: ನಟ ದಿಲೀಪ್ ರಾಜ್ ಪತ್ನಿಯ ಒಡಲ ಬೇಗುದಿಗೆ ನೆಟ್ಟಿಗರು ಭಾವುಕ!
ಬೆಂಗಳೂರು: ಚಂದನವನದ ಖ್ಯಾತ ನಟ ದಿಲೀಪ್ ರಾಜ್‌ ಹಠಾತ್ ನಿಧನ ಇಡೀ ಚಿತ್ರರಂಗ ಹಾಗೂ ಅಭಿಮಾನಿ ಬಳಗಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಮೇ 13ರಂದು ಹೃದಯಾಘಾತದಿಂದ ನಿಧನರಾದ 47 ವರ್ಷದ ನಟ, ಜಿಮ್ ಮತ್ತು ವರ್ಕೌಟ್ ಸೇರಿದಂತೆ ಅತ್ಯಂತ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದರು. ಆದರೂ ವಿಧಿಯ ಆಟಕ್ಕೆ ಅವರು ಬಲಿಯಾಗಿದ್ದು, ಸಾವಿನ ನೋವಿನಿಂದ ಹೊರಬರಲಾಗದೆ ಪತ್ನಿ ಶ್ರೀವಿದ್ಯಾ ಸಾಮಾಜಿಕ ಜಾಲತಾಣದಲ್ಲಿ ದೇವರ ವಿರುದ್ಧ ತೀವ್ರ ಬೇಸರ ಮತ್ತು ಆಕ್ರೋಶ ಹೊರಹಾಕಿದ್ದಾರೆ.

ಪತಿಯನ್ನು ಕಳೆದುಕೊಂಡು ಕಣ್ಣೀರ ಕಡಲಿನಲ್ಲಿ ಮುಳುಗಿರುವ ಶ್ರೀವಿದ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದಾರೆ. ಪ್ರೀತಿಯಿಂದ ಬಾಳುತ್ತಿದ್ದ ತಮ್ಮ ಸಂಸಾರವನ್ನು ದೇವರು ಅರ್ಧಕ್ಕೆ ನುಜ್ಜುಗುಜ್ಜು ಮಾಡಿದ ನೋವಿನಲ್ಲಿ ಭಾವುಕರಾಗಿ ಪೋಸ್ಟ್ ಬರೆದುಕೊಂಡಿದ್ದಾರೆ.

“ನನಗೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಏನನ್ನಿಸುತ್ತಿದೆಯೆಂದರೆ, ಒಂದು ಸಂಸಾರ ಅಂದಮೇಲೆ ಒಬ್ಬ ಗಂಡ ಹೆಂಡತಿಯನ್ನು ಯಾವಾಗಲೂ ಹೊಡೆಯುತ್ತಿರಬೇಕು, ಕುಡಿದು ಬಂದು ಗಲಾಟೆ ಮಾಡುತ್ತಿರಬೇಕು. ಹೆಂಡತಿಯೂ ಯಾವಾಗಲೂ ಗಂಡನನ್ನೇ ದೂಷಿಸುತ್ತಿರಬೇಕು. ಮಕ್ಕಳು ತಂದೆ-ತಾಯಿಯನ್ನು ಗೌರವಿಸಬಾರದು, ಹೆತ್ತವರೂ ಮಕ್ಕಳನ್ನು ಬೈಯುತ್ತಿರಬೇಕು. ಒಟ್ಟಿನಲ್ಲಿ ಮನೆಯಲ್ಲಿ ಶಾಂತಿ, ನೆಮ್ಮದಿ ಅನ್ನೋದೇ ಇರಬಾರದು. ಒಬ್ಬರಿಗೊಬ್ಬರು ಕಿತ್ತಾಡಿಕೊಂಡೇ ಇರಬೇಕು” ಎಂದು ತೀವ್ರ ನೋವಿನಿಂದ ಬರೆದುಕೊಂಡಿದ್ದಾರೆ.

ಮುಂದುವರಿದು ದೇವರ ಅಸ್ತಿತ್ವದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶ್ರೀವಿದ್ಯಾ, “ದೇವರಿದ್ದಾನೆ, ಹುಷಾರಾಗಿರಿ”, ಯಾರ ಮನೆ ಚೆನ್ನಾಗಿದೆಯೋ, ಯಾರ ಮನೆಯಲ್ಲಿ ಯಾವಾಗಲೂ ನಗು ತುಂಬಿರುತ್ತದೆಯೋ, ಯಾರು ತುಂಬಾ ಖುಷಿಯಿಂದ ಬದುಕುತ್ತಿರುತ್ತಾರೋ, ಅಂಥವರ ಮನೆಯ ಮೇಲೆ ಅವನಿಗೆ (ದೇವರಿಗೆ) ಯಾವಾಗಲೂ ಕಣ್ಣಿರುತ್ತದೆ. ಅವನು ನಿಮ್ಮ ನಗುವಿನ ಸಂಸಾರವನ್ನು ಖಂಡಿತವಾಗಿಯೂ ಬಿಡುವುದಿಲ್ಲ, ನಾಶ ಮಾಡದೆ ಬಿಡುವುದಿಲ್ಲ. ದೇವರಿದ್ದಾನೆ ಹುಷಾರಾಗಿರಿ” ಎಂದು ತಮ್ಮ ಒಡಲ ಸಂಕಟವನ್ನು ಹೊರಹಾಕಿದ್ದಾರೆ.

ನೆಮ್ಮದಿಯ ಸಂಸಾರಕ್ಕೆ ಕಣ್ಣಿಟ್ಟ ದೇವರಿಗೆ ಶ್ರೀವಿದ್ಯಾ ಹಾಕಿರುವ ಈ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರ ಕಣ್ಣು ಒದ್ದೆಯಾಗುವಂತೆ ಮಾಡಿದೆ. ಪತಿಯನ್ನು ಕಳೆದುಕೊಂಡು ದುಃಖದ ತುತ್ತತುದಿಯಲ್ಲಿರುವ ಶ್ರೀವಿದ್ಯಾ ಸ್ಥಿತಿಗೆ ಕರಗಿರುವ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು, “ಅಮ್ಮಾ ಸಮಾಧಾನ ಮಾಡಿಕೊಳ್ಳಿ, ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನಿಮಗೆ ನೀಡಲಿ” ಎಂದು ಕಮೆಂಟ್‌ಗಳ ಮೂಲಕ ಸಾಂತ್ವನ ಹೇಳುತ್ತಿದ್ದಾರೆ.

The post “ದೇವರಿದ್ದಾನೆ ಹುಷಾರಾಗಿರಿ”: ನಟ ದಿಲೀಪ್ ರಾಜ್ ಪತ್ನಿಯ ಒಡಲ ಬೇಗುದಿಗೆ ನೆಟ್ಟಿಗರು ಭಾವುಕ! appeared first on Samyukta Karnataka.

ದರ್ಶನ್‌ಗೆ ಸಿಗದ ಜಾಮೀನು, ನಾಳೆಯೇ ವೆಡ್ಡಿಂಗ್ ಅನಿವರ್ಸರಿ: ವಿಜಯಲಕ್ಷ್ಮಿ ‘ಒಡೆದ ಹೃದಯ’ದ ಪೋಸ್ಟ್‌ಗೆ ಇಲ್ಲಿದೆ ಅಸಲಿಕಾರಣ?
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಕೋರ್ಟ್ ಮತ್ತೆ ಜಾಮೀನು ನಿರಾಕರಿಸಿದೆ. ಇದರ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ‘ಒಡೆದ ಹೃದಯ’ದ (Broken Heart) ಎಮೋಜಿ ಸ್ಟೇಟಸ್ ಭಾರಿ ವೈರಲ್ ಆಗುತ್ತಿದ್ದು, ಇದರ ಹಿಂದೆ ಎರಡು ಮುಖ್ಯ ಕಾರಣಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಜಯಲಕ್ಷ್ಮಿ ಈ ಭಾವುಕ ನಡೆಗೆ ಮೊದಲನೇ ಕಾರಣ: ಜಾಮೀನು ನಿರಾಕರಣೆ ಮತ್ತು ಮುಂದುವರಿದ ಜೈಲು ವಾಸ. ಪತಿ ದರ್ಶನ್ ಈ ಬಾರಿ ಹೇಗಾದರೂ ಮಾಡಿ ಹೊರಬರಬಹುದು ಎಂಬ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಇದಕ್ಕಾಗಿ ಕಾನೂನು ಹೋರಾಟವನ್ನೂ ನಡೆಸಲಾಗಿತ್ತು. ಆದ್ರೆ ಕೋರ್ಟ್ ಜಾಮೀನು ಅರ್ಜಿಯನ್ನು ತಳ್ಳಿಹಾಕಿದ್ದರಿಂದ, ದರ್ಶನ್ ಜೈಲು ವಾಸ ಇನ್ನು ಕೆಲವು ದಿನಗಳ ಕಾಲ ಮುಂದುವರಿಯುವುದು ಖಚಿತವಾಗಿದೆ. ಈ ಆಘಾತವೇ ಬೇಸರಕ್ಕೆ ಮೊದಲ ಕಾರಣ ಎನ್ನಲಾಗಿದೆ.

ಹುಸಿಯಾದ ಸಂಭ್ರಮದ ಆಸೆ: ಇನ್ನು ಎರಡನೇ ಮತ್ತು ಅತ್ಯಂತ ಪ್ರಮುಖವಾಗಿ, ನಾಳೆಯೇ (ಮೇ 19) ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿಯ ವಿವಾಹ ವಾರ್ಷಿಕೋತ್ಸವ (Wedding Anniversary). ಮದುವೆ ದಿನದ ಸಂಭ್ರಮದ ವೇಳೆಯಲ್ಲಾದರೂ ಗಂಡ ಜೈಲಿನಿಂದ ಹೊರಬರುತ್ತಾರೆ, ಈ ವಿಶೇಷ ದಿನವನ್ನು ಪತಿಯ ಜೊತೆಯಲ್ಲೇ ಆಚರಿಸಬಹುದು ಎಂಬ ದೊಡ್ಡ ಆಸೆ ಪತ್ನಿ ವಿಜಯಲಕ್ಷ್ಮಿ ಅವರದ್ದಾಗಿತ್ತು. ಆದ್ರೆ ವಾರ್ಷಿಕೋತ್ಸವದ ಹಿಂದಿನ ದಿನವೇ ಜಾಮೀನು ನಿರಾಕರಿಸಲ್ಪಟ್ಟಿರುವುದು ಆಸೆಗೆ ತಣ್ಣೀರೆರಚಿದಂತಾಗಿದೆ.

ಅಭಿಮಾನಿಗಳಿಂದ ಧೈರ್ಯ: ನೆಚ್ಚಿನ ನಟನ ಬಿಡುಗಡೆ ತಡವಾಗುತ್ತಿರುವುದು ಮತ್ತು ವಿವಾಹ ವಾರ್ಷಿಕೋತ್ಸವದ ದಿನವೇ ಈ ಕಹಿ ಸುದ್ದಿ ಎದುರಾಗಿರುವುದಕ್ಕೆ ವಿಜಯಲಕ್ಷ್ಮಿ ತೀವ್ರ ನೊಂದಿದ್ದಾರೆ. ಈ ‘ಬ್ರೋಕನ್ ಹಾರ್ಟ್’ ಸ್ಟೇಟಸ್ ಕಂಡ ದರ್ಶನ್ ಅಭಿಮಾನಿಗಳು, “ಅಮ್ಮ ಧೈರ್ಯವಾಗಿರಿ, ಕಷ್ಟದ ದಿನಗಳು ಕರಗಲಿವೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ.

ಒಟ್ಟಾರೆಯಾಗಿ, ಒಂದು ಕಡೆ ಕಾನೂನು ಹಿನ್ನಡೆ, ಮತ್ತೊಂದೆಡೆ ಮದುವೆ ದಿನದ ಸಂಭ್ರಮದ ಕನಸು ಭಗ್ನಗೊಂಡಿರುವುದು ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಜಗಜ್ಜಾಹೀರಾಗಿದೆ. ಈ ಭಾವುಕ ಪೋಸ್ಟ್ ಸದ್ಯ ಸಾಮಾಜಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

The post ದರ್ಶನ್‌ಗೆ ಸಿಗದ ಜಾಮೀನು, ನಾಳೆಯೇ ವೆಡ್ಡಿಂಗ್ ಅನಿವರ್ಸರಿ: ವಿಜಯಲಕ್ಷ್ಮಿ ‘ಒಡೆದ ಹೃದಯ’ದ ಪೋಸ್ಟ್‌ಗೆ ಇಲ್ಲಿದೆ ಅಸಲಿಕಾರಣ? appeared first on Samyukta Karnataka.

ಒಲಿಂಪಿಯನ್ ಜ್ವಾಲಾ ಗುಟ್ಟಾ ಮಾನವೀಯತೆ: ಸರ್ಕಾರಿ ಆಸ್ಪತ್ರೆಗೆ 60 ಲೀಟರ್ ಎದೆಹಾಲು ದಾನ!
ಭಾರತದ ಖ್ಯಾತ ಬ್ಯಾಡ್ಮಿಂಟನ್ ಚಾಂಪಿಯನ್ ಮತ್ತು ಒಲಿಂಪಿಯನ್ ಜ್ವಾಲಾ ಗುಟ್ಟಾ ತಾಯ್ತನದ ಮೊದಲ ವರ್ಷದಲ್ಲಿ ಹೈದರಾಬಾದ್ ಮತ್ತು ಚೆನ್ನೈನ ಸರ್ಕಾರಿ ಆಸ್ಪತ್ರೆಗಳಿಗೆ ಸುಮಾರು 60 ಲೀಟರ್ ಎದೆಹಾಲನ್ನು ದಾನ ಮಾಡುವ ಮೂಲಕ ನವಜಾತ ಶಿಶುಗಳ ಆರೈಕೆಯಲ್ಲಿ ಮಾನವೀಯತೆ ಮೆರೆದಿದ್ದಾರೆ. ತಾಯಂದಿರಲ್ಲಿ ಎದೆಹಾಲು ದಾನದ ಜಾಗೃತಿ ಮೂಡಿಸಲು ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ (X) ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಅಕಾಲಿಕ ಶಿಶುಗಳಿಗೆ ದಾನಿ ಹಾಲು ಏಕೆ ಮುಖ್ಯ?: ವೈದ್ಯಕೀಯ ತೊಡಕುಗಳು, ತಾಯಂದಿರ ಒತ್ತಡ ಅಥವಾ ಅವಧಿಗೆ ಮುನ್ನವೇ (ಅಕಾಲಿಕ) ಜನಿಸುವುದರಿಂದ ನವಜಾತ ತೀವ್ರ ನಿಗಾ ಘಟಕದಲ್ಲಿರುವ (NICU) ಅನೇಕ ಶಿಶುಗಳಿಗೆ ತಾಯಿಯ ಹಾಲು ತಕ್ಷಣ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ದಾನಿಗಳ ಹಾಲು ಅಮೂಲ್ಯ ಸೇತುವೆಯಾಗಿ ಕೆಲಸ ಮಾಡುತ್ತದೆ. ಕೇವಲ 100 ಮಿಲಿ ಎದೆಹಾಲು, 1 ಕೆಜಿ ತೂಕದ ಸಣ್ಣ ಮಗುವಿಗೆ ಹಲವಾರು ದಿನಗಳವರೆಗೆ ಪೋಷಣೆ ನೀಡಬಲ್ಲದು. ಇದು ಅಕಾಲಿಕ ಶಿಶುಗಳಲ್ಲಿ ಜೀವಕ್ಕೆ ಅಪಾಯಕಾರಿಯಾದ ‘ನೆಕ್ರೋಟೈಸಿಂಗ್ ಎಂಟರೊಕೊಲೈಟಿಸ್’ (ಕರುಳಿನ ಕಾಯಿಲೆ) ಬರದಂತೆ ತಡೆಯುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿ: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಲ್ಲಿ ಪ್ರತಿವರ್ಷ 2 ಕೋಟಿಗೂ ಹೆಚ್ಚು ಶಿಶುಗಳು 2.5 ಕೆಜಿಗಿಂತ ಕಡಿಮೆ ತೂಕದೊಂದಿಗೆ ಜನಿಸುತ್ತವೆ. ಇಂತಹ ಕಡಿಮೆ ತೂಕದ ಶಿಶುಗಳಿಗೆ ಸ್ವಂತ ತಾಯಿಯ ಹಾಲು ಲಭ್ಯವಿಲ್ಲದಿದ್ದಾಗ, ಸುರಕ್ಷಿತ ಹಾಲು ಬ್ಯಾಂಕ್‌ಗಳ ಮೂಲಕ ದಾನಿ ಮಾನವ ಹಾಲನ್ನು ಒದಗಿಸಬೇಕು ಎಂದು WHO ಶಿಫಾರಸು ಮಾಡುತ್ತದೆ. ಕೃತಕ ಫಾರ್ಮುಲಾ ಹಾಲಿಗೆ ಹೋಲಿಸಿದರೆ ದಾನಿ ಎದೆಹಾಲು ನವಜಾತ ಶಿಶುಗಳಲ್ಲಿ ತೀವ್ರ ಸೋಂಕುಗಳನ್ನು ತಡೆಗಟ್ಟಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಕ್ಲಿನಿಕಲ್ ಸಂಶೋಧನೆಗಳು ಸಾಬೀತುಪಡಿಸಿವೆ.

The post ಒಲಿಂಪಿಯನ್ ಜ್ವಾಲಾ ಗುಟ್ಟಾ ಮಾನವೀಯತೆ: ಸರ್ಕಾರಿ ಆಸ್ಪತ್ರೆಗೆ 60 ಲೀಟರ್ ಎದೆಹಾಲು ದಾನ! appeared first on Samyukta Karnataka.