#vijayanagara Archives - Samyukta Karnataka

ಆಸ್ತಿ ಆಸೆಗಾಗಿ ಅಣ್ಣನನ್ನೆ ಕೊಂದ ತಮ್ಮ
ಹೊಸಪೇಟೆ: ಆಸ್ತಿಗಾಗಿ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಹರಪನಹಳ್ಳಿ ತಾಲೂಕಿನ ಹಗರಿಶಿರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮರುಳಸಿದ್ದೇಶ್ (26) ಕೊಲೆಯಾದ ದುರ್ದೈವಿ. ಕೊಲೆಯ ಆರೋಪಿ ತಮ್ಮ ಪತ್ರಿಗೌಡ (24) ಹಾಗೂ ಸಂಬಂಧಿ ನಾರಪ್ಪ (29) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ರಿಗೌಡ ಮದ್ಯವ್ಯಸನಿ. ಆಸ್ತಿಯಲ್ಲಿ ಪಾಲು ಬೇಕು ಎಂದು ತಾಯಿ ಜೊತೆ ದಿನಾಲು ಜಗಳ ಮಾಡುತ್ತಿದ್ದನು. ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ತಕರಾರು ಮಾಡಿದ್ದನು. ಬಳಿಕ ಅಣ್ಣನನ್ನೇ ಕೊಲೆ ಮಾಡಿದರೆ ಇಡೀ ಆಸ್ತಿ ನನಗೆ ಸೇರುತ್ತದೆ ಎಂದು ಸಂಬಂಧಿ ಜೊತೆಗೆ ಸಂಚು ಮಾಡಿದ್ದಾನೆ. ಅಣ್ಣನನ್ನು ಟವೆಲ್‌ನಿಂದ ಉಸಿರುಗಟ್ಟಿಸಿ, ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ನಂತರ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಹೊರಟಿದ್ದನು.

ಮಗನ ಕೊಲೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಮೃತನ ತಾಯಿ ಕೊಲೆ ಕೇಸ್ ದಾಖಲಿಸಿದ್ದಳು. ತನಿಖೆ ಕೈಗೊಂಡು ಘಟನೆ ನಡೆದ 24 ಗಂಟೆಯಲ್ಲೇ ಅರಸೀಕೆರೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

The post ಆಸ್ತಿ ಆಸೆಗಾಗಿ ಅಣ್ಣನನ್ನೆ ಕೊಂದ ತಮ್ಮ appeared first on Samyukta Karnataka.

ಹಂಪಿ ಕನ್ನಡ ವಿಶ್ವವಿದ್ಯಾಲಯ: 3 ಜನ ಸಾದಕರಿಗೆ ನಾಡೋಜ ಪ್ರಕಟ
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿ: ಫೆ.24ರಂದು ರಾಜ್ಯಪಾಲರಿಂದ ಪ್ರದಾನ

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯವು ಈ ಸಾಲಿನ ಪ್ರತಿಷ್ಠಿತ ‘ನಾಡೋಜ’ ಗೌರವ ಪದವಿಗೆ ಮೂವರು ಗಣ್ಯರನ್ನು ಆಯ್ಕೆ ಮಾಡಿದೆ. ಬೆಂಗಳೂರಿನ ಡಾ. ಜಿ. ರಾಮಕೃಷ್ಣ, ಡಾ. ಸಿ. ಮಹಾದೇವಪ್ಪ ಹಾಗೂ ಡಾ. ಹೆಚ್.ಸಿ. ಸತ್ಯಂ ಅವರು ಈ ಬಾರಿ ನಾಡೋಜ ಗೌರವಕ್ಕೆ ಭಾಜನರಾಗಿದ್ದಾರೆ.

ವಿಶ್ವವಿದ್ಯಾಲಯದಿಂದ ಬಿಡುಗಡೆಗೊಂಡಿರುವ ಹೊಸ ಅಪ್‌ಡೇಟ್ ಪ್ರಕಾರ, ಫೆಬ್ರವರಿ 24ರಂದು ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಾಧಿಪತಿಯಾದ ಥಾವರ್ ಚಂದ್ ಗೆಹ್ಲೋಟ್ ಅವರು ಈ ಸಾಧಕರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಲಿದ್ದಾರೆ. ಸಮಾರಂಭಕ್ಕೆ ಗಣ್ಯರು, ವಿದ್ಯಾವಂತರು, ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಎಲ್ ಮೆಂಚೊ’ ಎನ್‌ಕೌಂಟರ್: ಮೆಕ್ಸಿಕೋದಲ್ಲಿ ಭುಗಿಲೆದ್ದ ಹಿಂಸಾಚಾರ – ಭಾರತೀಯರಿಗೆ ರಾಯಭಾರ ಕಚೇರಿ ಎಚ್ಚರಿಕೆ!

ನಾಡೋಜ ಗೌರವ ಪದವಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಸಾಮಾಜಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ವಿಶ್ವವಿದ್ಯಾಲಯದ ಅತ್ಯುನ್ನತ ಗೌರವವಾಗಿದೆ. ಈ ಬಾರಿ ಆಯ್ಕೆಯಾದ ಮೂವರು ಸಾಧಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ದೀರ್ಘಕಾಲದ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳಿಂದ ಹೆಸರುವಾಸಿಯಾಗಿದ್ದಾರೆ ಎಂದು ವಿಶ್ವವಿದ್ಯಾಲಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ‘ಗುಲಾಮಗಿರಿಯ ಸಂಕೇತಗಳಿಂದ ಮುಕ್ತಿ’: ರಾಜಾಜಿ ಪ್ರತಿಮೆ ಇಂದು ರಾಷ್ಟ್ರಪತಿ ಭವನದಲ್ಲಿ ಅನಾವರಣ

ಸಮಾರಂಭದ ಅಂಗವಾಗಿ ಸಾಧಕರ ಜೀವನ ಸಾಧನೆ, ಕನ್ನಡಾಭಿವೃದ್ಧಿಗೆ ನೀಡಿದ ಕೊಡುಗೆ ಹಾಗೂ ಅವರ ವೈಚಾರಿಕ ಪಯಣವನ್ನು ಒಳಗೊಂಡ ಪರಿಚಯ ವಾಚನ ನಡೆಯಲಿದೆ. ವಿಶ್ವವಿದ್ಯಾಲಯ ಆವರಣದಲ್ಲಿ ಭದ್ರತಾ ಹಾಗೂ ಕಾರ್ಯಕ್ರಮದ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ.

ಹಂಪಿ ಕನ್ನಡ ವಿಶ್ವವಿದ್ಯಾಲಯವು ಸ್ಥಾಪನೆಯಾದ ದಿನದಿಂದಲೂ ಕನ್ನಡ ಅಧ್ಯಯನ, ಸಂಶೋಧನೆ ಮತ್ತು ಪರಂಪರೆಯ ಸಂರಕ್ಷಣೆಗೆ ಮಹತ್ವ ನೀಡುತ್ತಾ ಬಂದಿದ್ದು, ನಾಡೋಜ ಗೌರವ ಪದವಿ ಅದರ ಪ್ರಮುಖ ಪರಂಪರೆಯಾಗಿದೆ. ಈ ವರ್ಷದ ಗೌರವ ಸಮಾರಂಭವೂ ಕನ್ನಡಾಭಿಮಾನಿಗಳಿಗೆ ವಿಶೇಷ ಆಕರ್ಷಣೆಯಾಗಲಿದೆ.

ಕೇಂದ್ರದ ಮಾಜಿ ಸಚಿವ, ರಾಜಕೀಯ ಚಾಣಕ್ಯ ಮುಕುಲ್ ರಾಯ್ ನಿಧನ

The post ಹಂಪಿ ಕನ್ನಡ ವಿಶ್ವವಿದ್ಯಾಲಯ: 3 ಜನ ಸಾದಕರಿಗೆ ನಾಡೋಜ ಪ್ರಕಟ appeared first on Samyukta Karnataka.

ಮನೆ ಪರವಾನಿಗೆ ನಿರಾಕರಣೆ: ಗ್ರಾಪಂ ಕಚೇರಿಯಲ್ಲಿ ರೈತ ಆತ್ಮಹತ್ಯೆ ಯತ್ನ
ಆರು ತಿಂಗಳ ಹೋರಾಟಕ್ಕೂ ಫಲ ಇಲ್ಲ: ಬೇಸತ್ತ ರೈತ ಗ್ರಾಪಂ ಕಚೇರಿಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನ, ವಿಡಿಯೋ ವೈರಲ್

ವಿಜಯನಗರ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ವ್ಯಾಪ್ತಿಯ ಕಡಬಗೆರೆ ಗ್ರಾಮ ಪಂಚಾಯಿತಿಯಲ್ಲಿ ಜಮೀನಿನಲ್ಲಿ ಮನೆ ಕಟ್ಟಲು ಪರವಾನಿಗೆ ನೀಡದ ಹಿನ್ನೆಲೆ ಬೇಸತ್ತ ರೈತೊಬ್ಬರು ಪಂಚಾಯಿತಿ ಕಚೇರಿಯಲ್ಲಿಯೇ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಕೋಲಾರ: ದೇಶದ ಮೊದಲ ಟಾಟಾ–ಎರ್‌ಬಸ್ ಹೆಲಿಕಾಪ್ಟರ್ ಘಟಕಕ್ಕೆ ಇಂದು ಐತಿಹಾಸಿಕ ಚಾಲನೆ

ಆತ್ಮಹತ್ಯೆಗೆ ಯತ್ನಿಸಿದ ರೈತ ಬಸವರಾಜ್: ಪವನಪುರ ಗ್ರಾಮದ ನಿವಾಸಿ ಕೆ. ಬಸವರಾಜ ಎಂಬ ರೈತನೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾರೆ. ಇವರು ತಮ್ಮ ಜಮೀನಿನಲ್ಲಿ ಮನೆ ಕಟ್ಟಲು ‘ಇ-ಸೊತ್ತು’ ದಾಖಲಾತಿ ಹಾಗೂ ಪಂಚಾಯಿತಿ ಪರವಾನಿಗೆ ನೀಡುವಂತೆ ಕಳೆದ ಆರು ತಿಂಗಳಿಂದ ಗ್ರಾಪಂ ಕಚೇರಿಗೆ ಸುತ್ತಾಡುತ್ತಿದ್ದರು ಎನ್ನಲಾಗಿದೆ. ಆದರೆ ಪದೇಪದೇ ಅರ್ಜಿ ಸಲ್ಲಿಸಿದರೂ ಪರವಾನಿಗೆ ಸಿಗದ ಕಾರಣ ಮಾನಸಿಕವಾಗಿ ನೊಂದಿದ್ದ ಬಸವರಾಜ್ ಅವರು ಈ ತೀವ್ರ ಕ್ರಮಕ್ಕೆ ಮುಂದಾಗಿದ್ದಾರೆ.

ಗ್ರಾಪಂ ಕಚೇರಿಯಲ್ಲೇ ಪೆಟ್ರೋಲ್ ಸುರಿದುಕೊಂಡ ರೈತ: ಘಟನೆ ನಡೆದ ದಿನ ಕಡಬಗೆರೆ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿದ ಬಸವರಾಜ್, ತಮ್ಮ ಬೇಡಿಕೆಗೆ ಸ್ಪಂದನೆ ಸಿಗದ ಕಾರಣ ಅಲ್ಲಿ ಅರ್ಧ ಲೀಟರ್ ಪೆಟ್ರೋಲ್ ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ದೃಶ್ಯ ಕಂಡು ಬೆಚ್ಚಿಬಿದ್ದ ಪಂಚಾಯಿತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ತಕ್ಷಣ ಮಧ್ಯಪ್ರವೇಶ ಮಾಡಿ ಅವರನ್ನು ತಡೆದಿದ್ದಾರೆ.

ಇದನ್ನೂ ಓದಿ: ಕೋಲಾರ: ಖಾಸಗಿ ಬಸ್ ಪಲ್ಟಿ- ಇಬ್ಬರ ಸ್ಥಿತಿ ಗಂಭೀರ, 40ಕ್ಕೂ ಹೆಚ್ಚು ಮಂದಿಗೆ ಗಾಯ

ಪಿಡಿಓ ಕೃಷ್ಣಪ್ಪರಿಂದ ರಕ್ಷಣೆ: ಸ್ಥಳದಲ್ಲಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಕೃಷ್ಣಪ್ಪ ಅವರು ತಕ್ಷಣ ರೈತನನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಅವರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಆದರೆ ಮನೆ ಕಟ್ಟಲು ಅಗತ್ಯವಿರುವ ಪರವಾನಿಗೆ ನೀಡದ ಕಾರಣ ಪಿಡಿಓ ವಿರುದ್ಧ ರೈತ ಆಕ್ರೋಶ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ.

ಪರವಾನಿಗೆ ಇಲ್ಲದೇ ಬ್ಯಾಂಕ್ ಸಾಲ ಸಾಧ್ಯವಿಲ್ಲ: ಮನೆ ನಿರ್ಮಾಣಕ್ಕಾಗಿ ಬ್ಯಾಂಕ್ ಸಾಲ ಪಡೆಯಲು ಪಂಚಾಯಿತಿಯಿಂದ ಅಧಿಕೃತ ಪರವಾನಿಗೆ ಅಗತ್ಯವಾಗಿದ್ದು, ಅದು ಸಿಗದ ಕಾರಣ ಬಸವರಾಜ್ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
“ಪರವಾನಿಗೆ ಇಲ್ಲದೇ ಬ್ಯಾಂಕ್ ಸಾಲ ಸಿಗುವುದಿಲ್ಲ. ಹೀಗಾಗಿ ಕಳೆದ ಹಲವು ತಿಂಗಳಿಂದ ಕಚೇರಿಗೆ ಸುತ್ತಾಡುತ್ತಿದ್ದರೂ ಪ್ರಯೋಜನವಾಗಿಲ್ಲ” ಎಂದು ಸಂಬಂಧಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಳಿ ನದಿ ನೀರಾವರಿ ಯೋಜನೆ ಅಂತಿಮ ಹಂತ: ಹಳಿಯಾಳ ರೈತರಿಗೆ ಶೀಘ್ರ ನೀರು

ಪೊಲೀಸ್ ತನಿಖೆ ಆರಂಭ: ಈ ಘಟನೆ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತನ ಆತ್ಮಹತ್ಯೆ ಯತ್ನಕ್ಕೆ ಕಾರಣವಾದ ಹಿನ್ನೆಲೆ, ಪಂಚಾಯಿತಿ ಕಾರ್ಯವೈಖರಿ ಹಾಗೂ ದಾಖಲೆ ಪ್ರಕ್ರಿಯೆಗಳ ಬಗ್ಗೆ ತನಿಖೆ ಆರಂಭಿಸಲಾಗಿದೆ.

ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.

ಪುಟ್ಟ ಬಾಲಕನ ಕನಸಿಗೆ ಜೀವ ತುಂಬಿದ ದಾವಣಗೆರೆ SP: ಎಲ್ಲರ ಮನಸ್ಸು ಗೆದ್ದ ಕ್ಷಣ

The post ಮನೆ ಪರವಾನಿಗೆ ನಿರಾಕರಣೆ: ಗ್ರಾಪಂ ಕಚೇರಿಯಲ್ಲಿ ರೈತ ಆತ್ಮಹತ್ಯೆ ಯತ್ನ appeared first on Samyukta Karnataka.

ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ
ವಿಜಯನಗರ: ಖ್ಯಾತ ಚಿತ್ರನಟಿ ರಚಿತಾ ರಾಮ್ ಅವರ ಕಾರು ಚಾಲಕ ಹಂಪಿ ಉತ್ಸವದ ಸಮಾರೋಪ ಸಮಾರಂಭದ ದಿನ ಭಾನುವಾರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಅವರ ಮೇಲೆ ವಿನಾಕಾರಣ ಹಲ್ಲೆ ಮಾಡಿದ ಘಟನೆ ನಡೆದಿದೆ.

ರವಿಕುಮಾರ್ ಅವರ ಕಣ್ಣಿಗೆ ಮುಷ್ಠಿ ಮಾಡಿ ಗುದ್ದಿದ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಭದ್ರತೆಯ ನೆಪದಲ್ಲಿ ಸಾರ್ವಜನಿಕರ ಮೇಲೂ ಅಸಭ್ಯ ಹಾಗೂ ಆಕ್ರಮಣಕಾರಿ ವರ್ತನೆ ತೋರಲಾಗಿದೆ ಎಂದು ಸ್ಥಳದಲ್ಲಿದ್ದವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ಬಳಿ ಚಿರತೆ ಪ್ರತ್ಯಕ್ಷ

ಘಟನೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿ ಗಲಾಟೆ ಜೋರಾಗಿದ್ದು ಜನ ಗುಂಪು ಸೇರಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಚಾಲಕ ದರ್ಪದಿಂದ ಕಾರಿನಿಂದ ಇಳಿದು ಅಧಿಕಾರಿಯತ್ತ ಮುನ್ನುಗ್ಗುತ್ತಿದ್ದ ದೃಶ್ಯಗಳೂ ಸೆರೆಯಾಗಿವೆ.

ವಿಜಯನಗರ ಜಿಲ್ಲಾ ಪೊಲೀಸರು ಪ್ರಕರಣದ ಕುರಿತು ಪರಿಶೀಲನೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯ ಹಾಗೂ ಸಾಕ್ಷಿಗಳ ಹೇಳಿಕೆಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

The post ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ appeared first on Samyukta Karnataka.

ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ಬಳಿ ಚಿರತೆ ಪ್ರತ್ಯಕ್ಷ
ವಿಜಯನಗರ: ಜಿಲ್ಲೆಯ ಐತಿಹಾಸಿಕ ಹಂಪಿ ಉತ್ಸವದ ಎರಡನೇ ದಿನದ ಸಂಭ್ರಮದ ನಡುವೆ ಹಂಪಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡ ಘಟನೆ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶನಿವಾರ ರಾತ್ರಿ ಸುಮಾರು 12.30ರ ಸುಮಾರಿಗೆ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಸಮೀಪ ಚಿರತೆ ಕಾಣಿಸಿಕೊಂಡಿದ್ದು ಬೀದಿ ನಾಯಿಯನ್ನು ಬೇಟೆಯಾಡಿದ ಘಟನೆ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ ಹಂಪಿ ಉತ್ಸವದ ಹಿನ್ನೆಲೆ ಸಾವಿರಾರು ಜನರು ಸಂಚರಿಸುತ್ತಿರುವ ಸಂದರ್ಭದಲ್ಲೇ ಶ್ರೀ ವಿರೂಪಾಕ್ಷ ದೇವಸ್ಥಾನದ ಪಕ್ಕದಲ್ಲೇ ಇರುವ ಮನೆಯ ಹತ್ತಿರ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ಭಯದ ವಾತಾವರಣ ಉಂಟುಮಾಡಿದೆ.

ಇದನ್ನೂ ಓದಿ: ಶಬರಿಮಲೆ ಮಹಿಳೆಯರ ಪ್ರವೇಶ: ಏ. 7ರಿಂದ ಅಂತಿಮ ವಿಚಾರಣೆ

ಸ್ಥಳೀಯರ ಪ್ರಕಾರ ಚಿರತೆ ಕಳೆದ ಕೆಲವು ದಿನಗಳಿಂದ ಹಂಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಅನುಮಾನ ವ್ಯಕ್ತವಾಗಿದ್ದು ತಕ್ಷಣವೇ ಅರಣ್ಯ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಚಿರತೆಯನ್ನು ಶೀಘ್ರದಲ್ಲೇ ಸೆರೆ ಹಿಡಿಯುವಂತೆ ಆಗ್ರಹಿಸಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಹಿಡಿಯದಿದ್ದರೆ ಅರಣ್ಯ ಇಲಾಖೆ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

The post ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ಬಳಿ ಚಿರತೆ ಪ್ರತ್ಯಕ್ಷ appeared first on Samyukta Karnataka.

ಹಂಪಿ ಉತ್ಸವದಲ್ಲಿ ಗಿಲ್ಲಿ-ಕಾವ್ಯ ಜೋಡಿ ಮೋಡಿ
ಹಂಪಿ(ಹೊಸಪೇಟೆ): ಬಿಗ್‌ಬಾಸ್‌ ಮೂಲಕ ಮನೆ ಮಾತಾಗಿರುವ ಗಿಲ್ಲಿ – ಕಾವ್ಯ ಜೋಡಿ ಹಂಪಿ ಉತ್ಸವದಲ್ಲಿ ನೆರೆದ ಲಕ್ಷಾಂತರ ಪ್ರೇಕ್ಷಕರನ್ನು ಮೋಡಿ ಮಾಡಿತು.

ಗಿಲ್ಲಿ-ಕಾವ್ಯ ನೋಡಲೆಂದೆ ಸಾವಿರಾರು ಸಂಖ್ಯೆಯಲ್ಲಿ ಜನ ಕಾಯುತ್ತ ಕುಳಿತಿದ್ದರು. ಆದರೆ ರಾತ್ರಿ 10 ಗಂಟೆಗೆ ಗಿಲ್ಲಿ-ಕಾವ್ಯ ವೇದಿಕೆಯಲ್ಲಿ ಕಾಣಿಸಿಕೊಂಡರು. ಇವರ ಜತಗೆ ಸ್ಯಾಂಡಲ್‌ವುಡ್ ನಟಿ ಸಪ್ತಮಿ ಗೌಡ ಕಾಣಿಸಿಕೊಂಡು ಉತ್ಸವಕ್ಕೆ ತಾರಾ ಮೆರಗು ನೀಡಿದರು.

ಆರಂಭದಲ್ಲಿ ಉದಯೋನ್ಮಕ ನಟಿ ನಿಕಿತಾ ಸ್ವಾಮಿ ‘ತರತರ ಹಿಡಿಸಿದೆ ಮನಸಿಗೆ ನೀನು’ ಹಾಗೂ ‘ಬಂಗಾರಿ ಯಾರೇ ನೀನು ಬುಲ್ ಬುಲ್’ ಎನ್ನುವ ಹಾಡಿಗೆ ನೃತ್ಯ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಂಗು ತುಂಬಿದರು. ನಂತರ ಅಭಿಮಾನಿಗಳಿಗೆ ವ್ಯಾಲೆಂಟೈಸ್ ಡೇ ಶುಭಾಶಯ ಕೋರಿ, ಹಂಪಿ ಉತ್ಸವದಲ್ಲಿ ಅವಕಾಶ ನೀಡಿದ್ದಕ್ಕೆ ಧನ್ಯವಾದವನ್ನು ತಿಳಿಸಿದರು.

ಇದನ್ನೂ ಓದಿ: ಶಿವರಾತ್ರಿ ಪೂಜೆಗೆ ನಿರಾಕರಣೆ: ಕಲಬುರಗಿ ಕೋಟೆ ಸುತ್ತ ಉದ್ವಿಗ್ನ ಸ್ಥಿತಿ

ನಂತರ ಕಾಂತಾರ ಬೆಡಗಿ ಸಪ್ತಮಿ ಗೌಡ, ‘ಏನು ಹೇಳಲಿ ನಾನು ಹೊಸತರ’ ಹಾಗೂ ‘ಸಿಂಗಾರ ಸಿರಿಯೇ’ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಿದರು. ನಂತರ ಮಾತನಾಡಿ, ಹೊಸಪೇಟೆ ಆಗಮಿಸಿದಾಗಲೆಲ್ಲಾ ಪ್ರವಾಸಿ ಮಾರ್ಗದರ್ಶಿಗಳನ್ನು ಪಡೆದು ಹಂಪಿ ಹಾಗೂ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತೇನೆ ಎಂದರು. ಕೊನೆಯಲ್ಲಿ ವ್ಯಾಲೆಂಟೈಸ್ ಡೇ ಶುಭಾಶಯ ಕೋರಿ ಪಾಪ್ ಕಾರ್ನ್ ಮಂಕಿ ಚಿತ್ರದ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಿದರು. ಕಾರ್ಯಕ್ರಮದ ನಂತರ ಮನೆಗಳಿಗೆ ಕ್ಷೇಮವಾಗಿ ತಲುಪುವಂತೆ ಹೇಳಿದರು. ಕನ್ನಡದ ಪ್ರಸಿದ್ಧ ರ‍್ಯಾಪರ್ ಅಲೋಕ್ ಆರ್ ಬಾಬು ತಮ್ಮದೇ ರಚನೆ ಹಾಗೂ ಸ್ವರ ಸಂಯೋಜನೆಯ ಪಾಶ್ಚಿಮಾತ್ಯ ಶೈಲಿಯ ಗೀತೆಗಳನ್ನು ಹಾಡಿ ಜನರ ಚಪ್ಪಾಳೆ ಗಿಟ್ಟಿಸಿಕೊಂಡರು.

ಗಿಲ್ಲಿ ಹಾಗೂ ಕಾವ್ಯಾ ಜೋಡಿ ಮೋಡಿ: ಪ್ರಸಕ್ತ ಬಿಗ್ ಬಾಸ್ ಸೀಜನ್ ವಿಜೇತ ಹ್ಯಾಸ್ಯ ಕಲಾವಿದ ಗಿಲ್ಲಿ ಹಾಗೂ ಕಿರುತರೆ ನಟಿ ಕಾವ್ಯಾ ಜೋಡಿ ಹಂಪಿ ಉತ್ಸವದಲ್ಲಿ ಮೋಡಿ ಮಾಡಿತು. ನಾಡಿನ ಜನತೆ ಸಾಕಷ್ಟು ಪ್ರೀತಿಯನ್ನು ನೀಡಿದ್ದಾರೆ. ನನ್ನ ಹಾಗೂ ಕಾವ್ಯಾ ನಡುವಿನ ಸಂಬಂಧ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ನಾವಿಬ್ಬರೂ ಉತ್ತಮ ಸ್ನೇಹಿತರು. ಇದರ ಹೊರತಾಗಿ ಇರುವ ವಿಷಯಗಳ ಊಹೆಗಳು ಅಷ್ಟೇ ಎಂದು ಗಿಲ್ಲಿ ನಟರಾಜ್ ಸ್ಪಷ್ಟ ಪಡಿಸಿದರು. ನಂತರ ಚಲನಚಿತ್ರ ಗೀತೆಗಳ ಗಾಯಕ ನವೀನ್ ಸಜ್ಜು ಕನ್ನಡ ಗೀತೆಗಳನ್ನು ಹಾಡುಗಳನ್ನು ಪ್ರಸ್ತುತಪಡಿಸಿ ಜನರ ಸಿಳ್ಳೇ ಹಾಗೂ ಚಪ್ಪಾಳೆ ಗಿಟ್ಟಿಸಿದರು.

The post ಹಂಪಿ ಉತ್ಸವದಲ್ಲಿ ಗಿಲ್ಲಿ-ಕಾವ್ಯ ಜೋಡಿ ಮೋಡಿ appeared first on Samyukta Karnataka.

ಬಳ್ಳಾರಿ–ಹೊಸಪೇಟೆ ಮಲ್ಟಿಟ್ರ್ಯಾಕ್: ಕೇಂದ್ರ ಸಚಿವ ಸಂಪುಟ ಅನುಮೋದನೆ
₹18,509 ಕೋಟಿ ರೈಲು ಯೋಜನೆಗಳಿಗೆ ಕ್ಯಾಬಿನೆಟ್ ಗ್ರೀನ್ ಸಿಗ್ನಲ್: ಕರ್ನಾಟಕಕ್ಕೆ ಭಾರಿ ಲಾಭ

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಕೇಂದ್ರ ಸಚಿವ ಸಂಪುಟ ಸಮಿತಿ ಸಭೆಯಲ್ಲಿ, ದೆಹಲಿ, ಹರಿಯಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದ 12 ಜಿಲ್ಲೆಗಳನ್ನು ಒಳಗೊಂಡ ಮೂರು ಪ್ರಮುಖ ಮಲ್ಟಿಟ್ರ್ಯಾಕ್ ರೈಲು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಈ ಯೋಜನೆಗಳಿಗೆ ಒಟ್ಟು ₹18,509 ಕೋಟಿ ಅಂದಾಜು ವೆಚ್ಚ ನಿಗದಿಪಡಿಸಲಾಗಿದ್ದು, ಕೇಂದ್ರ ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯಗತಗೊಳ್ಳಲಿವೆ.

ಇದನ್ನೂ ಓದಿ: ದೆಹಲಿ ಭೇಟಿಯ ಫಲಿತಾಂಶದ ಸುಳಿವು ನೀಡಿದ ಡಿಸಿಎಂ ಡಿಕೆ ಶಿವಕುಮಾರ್

ಅನುಮೋದನೆ ಪಡೆದ ಪ್ರಮುಖ ಯೋಜನೆಗಳು:

ಬಳ್ಳಾರಿ – ಹೊಸಪೇಟೆ 3ನೇ ಮತ್ತು 4ನೇ ಮಾರ್ಗ

ಕಸಾರಾ – ಮನ್ಮಾಡ್ 3ನೇ ಮತ್ತು 4ನೇ ಮಾರ್ಗ

ದೆಹಲಿ – ಅಂಬಾಲಾ 3ನೇ ಮತ್ತು 4ನೇ ಮಾರ್ಗ

ಇವುಗಳಲ್ಲಿ ಬಳ್ಳಾರಿ–ಹೊಸಪೇಟೆ ನಾಲ್ಕನೇ ಮಾರ್ಗ ಯೋಜನೆಗೆ ಮಾತ್ರವೇ ಸುಮಾರು ₹2,372 ಕೋಟಿ ವೆಚ್ಚವಾಗಲಿದೆ.

ಇದನ್ನೂ ಓದಿ: ಸಾವಿರ ದಿನಗಳ ಸಾಧನೆ: GDP, GST ಸಂಗ್ರಹದಲ್ಲಿ ಕರ್ನಾಟಕ ದಾಖಲೆ

ಕರ್ನಾಟಕಕ್ಕೆ ವಿಶೇಷ ಲಾಭ: ಬಳ್ಳಾರಿ–ಹೊಸಪೇಟೆ ಮೂರನೇ ಮತ್ತು ನಾಲ್ಕನೇ ಮಾರ್ಗ ಯೋಜನೆಯು ಬಳ್ಳಾರಿ ಹಾಗೂ ಹೊಸಪೇಟೆ ಪ್ರದೇಶಗಳ ಉಕ್ಕು ಮತ್ತು ಗಣಿಗಾರಿಕಾ ಚಟುವಟಿಕೆಗಳಿಗೆ ದೊಡ್ಡ ಬೆಂಬಲ ನೀಡಲಿದೆ. ಇದರಿಂದ ಈ ಭಾಗದ ರೈಲು ದಟ್ಟಣೆ ಕಡಿಮೆಯಾಗುವ ಜೊತೆಗೆ ಸರಕು ಸಾಗಣೆ ವೇಗವಾಗಿ ನಡೆಯಲಿದೆ.

ಈ ಮಾರ್ಗವು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದ್ದು, ಹಂಪಿ, ಬಳ್ಳಾರಿ ಕೋಟೆ, ದರೋಜಿ ಕರಡಿ ಅಭಯಾರಣ್ಯ, ತುಂಗಭದ್ರಾ ಅಣೆಕಟ್ಟು, ಕೆಂಚನಗುಡ್ಡ ಹಾಗೂ ವಿಜಯ ವಿಠ್ಠಲ ದೇವಾಲಯಕ್ಕೆ ಉತ್ತಮ ರೈಲು ಸಂಪರ್ಕ ಒದಗಿಸಲಿದೆ.

ಇದನ್ನೂ ಓದಿ: ಭರವಸೆ ಪಾಲನೆ ಮುಂದುವರಿಯಲಿದೆ: ಹಾವೇರಿಯಲ್ಲಿ ಸಿಎಂ ಭರವಸೆ

ಸರಕು ಸಾಗಣೆ ಮತ್ತು ಆರ್ಥಿಕ ಪ್ರಗತಿ: ಈ ಯೋಜನೆಗಳಿಂದ ಸುಮಾರು 3,902 ಹಳ್ಳಿಗಳು (97 ಲಕ್ಷ ಜನ) ಹೆಚ್ಚುವರಿ ಸಂಪರ್ಕ ಪಡೆಯಲಿವೆ. ವರ್ಷಕ್ಕೆ 96 ಮಿಲಿಯನ್ ಟನ್ ಹೆಚ್ಚುವರಿ ಸರಕು ಸಾಗಣೆ ಸಾಧ್ಯ, ಕಲ್ಲಿದ್ದಲು, ಉಕ್ಕು, ಕಬ್ಬಿಣದ ಅದಿರು, ಸಿಮೆಂಟ್, ಧಾನ್ಯ, ಸಕ್ಕರೆ, ರಸಗೊಬ್ಬರ ಸಾಗಣೆಗೆ ಹೆಚ್ಚಿನ ಸಾಮರ್ಥ್ಯ, ಲಾಜಿಸ್ಟಿಕ್ಸ್ ವೆಚ್ಚದಲ್ಲಿ ಗಣನೀಯ ಇಳಿಕೆ, ಇದರಿಂದ ಕೈಗಾರಿಕೆ, ವ್ಯಾಪಾರ ಮತ್ತು ಕೃಷಿ ಕ್ಷೇತ್ರಗಳಿಗೆ ಬಲ ಸಿಗಲಿದೆ.

ಪರಿಸರ ಸ್ನೇಹಿ ಯೋಜನೆ: ಈ ರೈಲು ಯೋಜನೆಗಳು ಪರಿಸರದ ದೃಷ್ಟಿಯಿಂದಲೂ ಮಹತ್ವದ್ದಾಗಿವೆ. ಇದರಿಂದ ವರ್ಷಕ್ಕೆ ಸುಮಾರು 22 ಕೋಟಿ ಲೀಟರ್ ತೈಲ ಆಮದು ಕಡಿತ, 111 ಕೋಟಿ ಕೆ.ಜಿ. CO₂ ಹೊರಸೂಸುವಿಕೆಯು ಸುಮಾರು 4 ಕೋಟಿ ಮರಗಳನ್ನು ನೆಟ್ಟಷ್ಟರ ಪರಿಣಾಮ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಮುಂಬೈನಲ್ಲಿ ಮೆಟ್ರೋ ಕಾಮಗಾರಿ ದುರಂತ: ಸ್ಲ್ಯಾಬ್ ಕಂಬ ಕುಸಿದು ಒಬ್ಬ ಸಾವು, 3 ಜನರಿಗೆ ಗಾಯ

ಗತಿ ಶಕ್ತಿ ಯೋಜನೆಯಡಿ ಅಭಿವೃದ್ಧಿ: ಈ ಎಲ್ಲಾ ಯೋಜನೆಗಳನ್ನು PM-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ ಅಡಿಯಲ್ಲಿ ರೂಪಿಸಲಾಗಿದ್ದು, ಬಹುಮಾದ್ಯಮ ಸಂಪರ್ಕ ಮತ್ತು ಲಾಜಿಸ್ಟಿಕ್ಸ್ ದಕ್ಷತೆ ಹೆಚ್ಚಿಸುವ ಗುರಿ ಹೊಂದಿವೆ. ಈ ಯೋಜನೆಗಳು 2030–31ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ದಾಂಡೇಲಿ: ದಟ್ಟಾರಣ್ಯದ ಮಧ್ಯೆ ಕವಳಾ ಗುಹೆಯಲ್ಲಿ ಶಿವರಾತ್ರಿ ಸಂಭ್ರಮ

The post ಬಳ್ಳಾರಿ–ಹೊಸಪೇಟೆ ಮಲ್ಟಿಟ್ರ್ಯಾಕ್: ಕೇಂದ್ರ ಸಚಿವ ಸಂಪುಟ ಅನುಮೋದನೆ appeared first on Samyukta Karnataka.

ಹಂಪಿ ವಿವಿ ಹೆಲಿಪ್ಯಾಡ್‌ನಿಂದ ಹಾವೇರಿಗೆ ಸಿಎಂ ಸಿದ್ದರಾಮಯ್ಯ ಪ್ರಯಾಣ
ಹಂಪಿಯಿಂದ ಹಾವೇರಿಗೆ ಹಾರಿದ ಸಿಎಂ

ವಿಜಯನಗರ / ಹಂಪಿ: ಹಂಪಿ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹಂಪಿ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಹಾವೇರಿಗೆ ತೆರಳಿದರು. ಹಾವೇರಿಯಲ್ಲಿ ನಡೆಯಲಿರುವ ಸರ್ಕಾರದ ಸಮಾವೇಶದಲ್ಲಿ ಭಾಗವಹಿಸುವ ಉದ್ದೇಶದಿಂದ ಸಿಎಂ ಅವರು ಈ ಪ್ರಯಾಣ ಕೈಗೊಂಡರು.

ನಾಯಕರ ಸಾಥ್: ಈ ವೇಳೆ ಸಿಎಂ ಅವರೊಂದಿಗೆ ಶಾಸಕರಾದ ನಾಗೇಂದ್ರ, ಭರತ್ ರೆಡ್ಡಿ, ಸಚಿವರಾದ ಎಚ್ ಕೆ ಪಾಟೀಲ್, ಸಂಸದ ಈ ತುಕಾರಾಂ, ಸಚಿವ ಬೈರತಿ ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹೆಲಿಕಾಪ್ಟರ್‌ಗೆ ಏರುವ ಮುನ್ನ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಸಿಎಂ, ಜನರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಿದರು.

ಇದನ್ನೂ ಓದಿ: ಬೆಳ್ತಂಗಡಿ : ಹೀಲಿಯಂ ಗ್ಯಾಸ್ ಸೋರಿಕೆಯಿಂದ ಅಗ್ನಿ ಅವಘಡ

ಸಾವಿರ ದಿನಗಳ ಸಾಧನೆ ಕುರಿತು ಸಿಎಂ ಮಾತು: ಹಂಪಿ ಹೆಲಿಪ್ಯಾಡ್‌ನಲದಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಇಂದು ನಮ್ಮ ಸರ್ಕಾರಕ್ಕೆ ಸಾವಿರ ಒಂದನೇ ದಿನ. ನಾವು ನುಡಿದಂತೆ ನಡೆದುಕೊಂಡಿದ್ದೇವೆ. ಬಜೆಟ್ ಬಗ್ಗೆ ಇಲ್ಲೇ ಮಾತಾಡುವುದಿಲ್ಲ. ಹಾವೇರಿಯಲ್ಲಿ ಭಾಷಣ ಮಾಡುತ್ತೇನೆ,” ಎಂದು ತಿಳಿಸಿ ಹಾವೇರಿಗೆ ತೆರಳಿದರು.

ಗ್ಯಾರಂಟಿ ಯೋಜನೆಗಳ ಸಾಧನೆ: ಸರ್ಕಾರದ ಸಾವಿರ ದಿನಗಳ ಸಾಧನೆ ಕುರಿತು ಸಿಎಂ ಅವರು ವಿವರಿಸಿ, ಗ್ಯಾರಂಟಿ ಯೋಜನೆಗಳ ಮೂಲಕ ರೂ.1.13 ಲಕ್ಷ ಕೋಟಿ ಹಣವನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ರೂ.1 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತವನ್ನು ಮೀಸಲಿಡಲಾಗಿದೆ. ರಾಜ್ಯದ 1.37 ಕೋಟಿ ಕುಟುಂಬಗಳು ನೇರವಾಗಿ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ತಾಲೂಕು ಕಚೇರಿ ಹಳೆಯ ಕಟ್ಟಡದಲ್ಲಿ ಆಕಸ್ಮಿಕ ಬೆಂಕಿ

ಕಲ್ಯಾಣ ಕಾರ್ಯಕ್ರಮಗಳಿಂದ ರಾಜ್ಯದ ತಲಾ ಆದಾಯ ದೇಶದಲ್ಲೇ ಉನ್ನತ ಮಟ್ಟಕ್ಕೇರಿದೆ. ರಾಜ್ಯದಲ್ಲಿ ಶಾಂತಿ-ನೆಮ್ಮದಿ ವಾತಾವರಣ ನಿರ್ಮಾಣವಾಗಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗಿದೆ. ಎಂದು ಹೇಳಿದರು.

ಶಾಂತಿ ಮತ್ತು ಅಭಿವೃದ್ಧಿಯ ದಿಕ್ಕಿನಲ್ಲಿ ಕರ್ನಾಟಕ: “ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ನಾವು ಆಡಳಿತ ನಡೆಸುತ್ತಿದ್ದೇವೆ. ಈ ಸಾಧನೆಗೆ ಕಾರಣರಾದ ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೆ ಧನ್ಯವಾದಗಳು,” ಎಂದು ಸಿಎಂ ಹೇಳಿದರು. ಸಾವಿರ ದಿನಗಳ ಪಯಣವನ್ನು ಯಶಸ್ವಿಯಾಗಿ ಪೂರೈಸಿದ ಸರ್ಕಾರಕ್ಕೆ ಮುಂದೆಯೂ ಜನರ ಆಶೀರ್ವಾದ ಮತ್ತು ಸಹಕಾರ ಇರಲಿ ಎಂದು ಅವರು ಮನವಿ ಮಾಡಿದರು.

ಬಿಸಿಲಿನ ಅಬ್ಬರ ಹೆಚ್ಚಳ: ಆರೋಗ್ಯದ ಬಗ್ಗೆ ಎಚ್ಚರಿಕೆ

The post ಹಂಪಿ ವಿವಿ ಹೆಲಿಪ್ಯಾಡ್‌ನಿಂದ ಹಾವೇರಿಗೆ ಸಿಎಂ ಸಿದ್ದರಾಮಯ್ಯ ಪ್ರಯಾಣ appeared first on Samyukta Karnataka.

ಇನ್ನು ನವೆಂಬರ್‌ನಲ್ಲೇ ಹಂಪಿ ಉತ್ಸವ: ಸಿಎಂ ಸಿದ್ದರಾಮಯ್ಯ ಭರವಸೆ
ಹಂಪಿ: ನೆವೆಂಬರ್‌ನಲ್ಲಿಯೇ ಹಂಪಿ ಉತ್ಸವ ನಡೆಸಬೇಕು ಎನ್ನುವ ನಿಮ್ಮ ಆಶಯದಂತೆ ಪ್ರಸಕ್ತ ವರ್ಷ ನವೆಂಬರ್ 2, 3, 4ರಂದು ಮತ್ತೆ ಹಂಪಿ ಉತ್ಸವ ಆಯೋಜನೆ ಮಾಡುವ ಮೂಲಕ ಹಿಂದಿನ ಸಂಪ್ರಾದಯಕ್ಕೆ ನಾಂದಿ ಹಾಡಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಹಂಪಿಯಲ್ಲಿ ಗಾಯಿತ್ರಿಪೀಠದ ಎಂಪಿ ಪ್ರಕಾಶ ಮುಖ್ಯ ವೇದಿಕೆಯಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವ ಹಂಪಿ ಉತ್ಸವ- 2026ಕ್ಕೆ ಸಿಎಂ ಸಿದ್ದರಾಮಯ್ಯ ಡೊಳ್ಳು – ನಗಾರಿ ಬಾರಿಸುವ ಮೂಲಕ ಶುಕ್ರವಾರ ವಿದ್ಯುಕ್ತವಾಗಿ ಚಾಲನೆ ನೀಡಿದ ಬಳಿಕ ವಾಗ್ದಾನ ಮಾಡಿದರು.

ಎಂ.ಪಿ.ಪ್ರಕಾಶ ಅವರು ನವೆಂಬರ್‌ನಲ್ಲಿ ಹಂಪಿ ಉತ್ಸವ ಮಾಡಿಕೊಂಡು ಬಂದಿದ್ದರು. ನವೆಂಬರ್ 2, 3 ಮತ್ತು 4 ರಂದು ಹಂಪಿ ಉತ್ಸವ ಮಾಡಬೇಕು ಎಂಬುದು ವಿಜಯನಗರ ಜಿಲ್ಲೆಯ ಜನರು ಮತ್ತು ಜನಪ್ರತಿನಿಧಿಗಳ ಒತ್ತಾಸೆ ಆಗಿದೆ. ಫೆಬ್ರವರಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುತ್ತವೆ. ಇದರಿಂದ ನವೆಂಬರ್ ಉತ್ತಮ ಎಂಬುದು ನನಗೂ ಮನವರಿಕೆ ಆಗಿದೆ. ಮುಂದಿನ ಬಾರಿ ನವೆಂಬರ್‌ನಲ್ಲೇ ಹಂಪಿ ಉತ್ಸವ ಆಚರಿಸುತ್ತೇವೆ ಎಂದು ನಾನು ಘೋಷಣೆ ಮಾಡುತ್ತೇನೆ. ಇದೇ ವರ್ಷದಿಂದಲೇ ಅದನ್ನು ಅನುಷ್ಠಾನ ಮಾಡಲಿದ್ದೇವೆ ಎಂದರು.

ಇದನ್ನೂ ಓದಿ: ಪ್ರೇಮಿಗಳ ದಿನಾಚರಣೆಗೂ ಮುನ್ನ 40 ವೀರಯೋಧರ ಪ್ರಾಣತ್ಯಾಗ ಮರೆಯದಿರಿ; ಜೈ ಜವಾನ್!

ರಾಜ್ಯ ಸರ್ಕಾರ ಹಂಪಿ ಉತ್ಸವ 2026 ವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಮಾಜಿ ಸಚಿವ ದಿವಂಗತ ಎಂ.ಪಿ. ಪ್ರಕಾಶ್ ಅವರು ಹಿಂದೆ ಕನ್ನಡ ಮತ್ತು ಸಂಸ್ಕೃತಿಯ ಸಚಿವರಾಗಿದ್ದ ಸಂದರ್ಭದಲ್ಲಿ, ಮೈಸೂರು ದಸರಾ ಉತ್ಸವದ ವಿಜೃಂಭಣೆಯನ್ನು ಮನಗಂಡು, ಇದೇ ರೀತಿಯ ಉತ್ಸವವನ್ನು ಹಂಪಿಯಲ್ಲಿಯೂ ನೆರವೇರಿಸಬೇಕೆಂದು ಆಶಿಸಿದ್ದರು. ಎಂ.ಪಿ. ಪ್ರಕಾಶ್ ಅವರು, ಕನ್ನಡ ನಾಡು ನುಡಿ, ಸಾಹಿತ್ಯಗಳಲ್ಲಿ ಅಪಾರ ಆಸಕ್ತಿ ವಹಿಸಿದ್ದರು. ಈ ರೀತಿಯ ಅದ್ದೂರಿ ಹಂಪಿ ಉತ್ಸವದ ಆಚರಣೆಗೆ ಮೂಲಕಾರಣ ಎಂ.ಪಿ. ಪ್ರಕಾಶ್ ಅವರು. ಅವರೊಬ್ಬ ಅಪರೂಪದ ವ್ಯಕ್ತಿ ಎಂದರು.

ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಸಂಪತ್ಭರಿತವಾಗಿತ್ತು. ನಮ್ಮ ಸರ್ಕಾರ ಕೂಡ ಸಾಹಿತ್ಯ ಸಂಸ್ಕೃತಿ ಕಲೆಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ. ವಿಜಯನಗರ ಕಾಲದಲ್ಲಿ ಸಂಪ್ಭರಿತವಾದ ಹಂಪಿಯ ಹಿರಿಮೆಯನ್ನು ಹಂಪಿ ಉತ್ಸವದಿಂದ ತಿಳಿಯಬಹುದಾಗಿದೆ. ವಿದೇಶಿ ಪ್ರವಾಸಿಗ ಅಬ್ದುಲ್ ರಜಾಕ್, ವಿಜಯನಗರ ಶ್ರೀಮಂತವಾದ ಸ್ಥಳವಾಗಿತ್ತು ಎಂದು ಉಲ್ಲೇಖಿಸಿದ್ದನ್ನು ಸಿಎಂ ಸ್ಮರಿಸಿದರು.

ಸಮಸಮಾಜ ನಿರ್ಮಾಣ: ಸಮಾಜದಲ್ಲಿ ಬಡವ ಶ್ರೀಮಂತ, ಉತ್ತಮ ಮತ್ತು ಕೆಳ ಜಾತಿಗಳೆಂಬ ಬೇಧವಿದೆ. ಸಂವಿಧಾನ ಇರದೇ ಹೋಗಿದ್ದರೆ, ಸಮಾನ ಅವಕಾಶಗಳು ದೊರೆಯಲು ಸಾಧ್ಯವಾಗುತ್ತಿರಲಿಲ್ಲ. ಸಮಾಜದ ಅಸಮಾನತೆಯನ್ನು ತೊಡೆದುಹಾಕಿದರೆ ಸಮಸಮಾಜ ನಿರ್ಮಾಣ ಸಾಧ್ಯ. 2013 ರಲ್ಲಿ ಮತ್ತು 2023 ರಲ್ಲಿ ಮುಖ್ಯಮಂತ್ರಿಯಾಗಿ ನಾನು ತಂದಿರುವ ಕಾರ್ಯಕ್ರಮಗಳು ಅಸಮಾನತೆಯ ನಿವಾರಣೆಗೆ ತಂದವುಗಳಾಗಿವೆ. ಸಮಸಮಾಜ ನಿರ್ಮಿಸಿದಾಗ ಮಾತ್ರ ದುರ್ಬಲವರ್ಗದವರೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.

ಇದನ್ನೂ ಓದಿ: ಹಂಪಿ ಉತ್ಸವ ಮುಖ್ಯವೇದಿಕೆಯ ಎದುರು ಅಗ್ನಿ ಅವಘಡ

ನಮ್ಮ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ದು, 2023 ರಿಂದಲೂ ಗ್ಯಾರಂಟಿ ಯೋಜನೆಗಳನ್ನು ನೀಡಿ, ಅಸಮಾನತೆಯನ್ನು ನಿವಾರಿಸುವ ಉದ್ದೇಶ ಹೊಂದಿದೆ. ಜನರಿಗೆ ಆರ್ಥಿಕ , ಸಾಮಾಜಿಕ ಶಕ್ತಿಯನ್ನು ಸಾಧ್ಯವಾಗಿಸದೇ ಇದ್ದರೆ, ಜಾತಿ ವ್ಯವಸ್ಥೇ ಹೋಗಲಾಡಿಸಬಹುದು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ಸುಮಾರು 60 ಸಾವಿರ ರೂ.ಗಳ ಆರ್ಥಿಕ ಬಲವನ್ನು ತುಂಬುತ್ತಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತಿದೆ. ಜಾತಿವ್ಯವಸ್ಥೆ ಇಲ್ಲವಾಗಲು ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸ್ವಾತಂತ್ರ‍್ಯ ಬರಬೇಕು ಎಂದರು.

ಬದ್ದತೆಯ ಸರಕಾರ: ಸರ್ಕಾರ ಆಚರಿಸುವ ಚಾಲುಕ್ಯ ಉತ್ಸವ, ಹಂಪಿ ಉತ್ಸವ, ಕಿತ್ತೂರು ಉತ್ಸವ, ಆನೆಗುಂದಿ ಉತ್ಸವ, ಬನವಾಸಿ, ಮೈಸೂರು ದಸರಾ, ಕರಾವಳಿ ಉತ್ಸವ ಗಳ ಮೂಲಕ ನಾಡಿನ ಸಾಹಿತ್ಯ, ಕಲೆ, ಸಂಗೀತ ಪರಂಪರೆಗಳನ್ನು ಸಂರಕ್ಷಿಸುವ ದಿಸೆಯಲ್ಲಿ ಮುಖ್ಯವಾಗಿದೆ. ಮುಂದಿನ ಪೀಳಿಗೆಗೆ ಕನ್ನಡದ ಶ್ರೀಮಂತ ಪರಂಪರೆ ಕೊಂಡೊಯ್ಯವ ದಿಸೆಯಲ್ಲಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದೆ. ನಮ್ಮದು ಬದ್ಧತೆಯ ಸರಕಾರ ಎಂದರು.

The post ಇನ್ನು ನವೆಂಬರ್‌ನಲ್ಲೇ ಹಂಪಿ ಉತ್ಸವ: ಸಿಎಂ ಸಿದ್ದರಾಮಯ್ಯ ಭರವಸೆ appeared first on Samyukta Karnataka.

ಹಂಪಿ ಉತ್ಸವ ಮುಖ್ಯವೇದಿಕೆಯ ಎದುರು ಅಗ್ನಿ ಅವಘಡ
ಹೊಸಪೇಟೆ: ಹಂಪಿ ಉತ್ಸವ ಉದ್ಘಾಟನಾ ಸಮಾರಂಭಕ್ಕೂ ಮುನ್ನವೇ ವೇದಿಕೆ ಬಳಿ ಬೆಂಕಿ ಅವಘಡ ಸಂಭವಿಸಿದೆ. ಪಟಾಕಿಯ ಕಿಡಿಯಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ಹಂಪಿ ಉತ್ಸವದ ಎಂ.ಪಿ. ಪ್ರಕಾಶ ಮುಖ್ಯವೇದಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏರುತ್ತಿದ್ದಂತೆಯೇ ಪಟಾಕಿ ಸಿಡಿಸಿದ್ದಾರೆ. ಈ ವೇಳೆ ವೇದಿಕೆಯ ಎದುರಿಗೆ ಪಟಾಕಿಯ ಕಿಡಿಯೊಂದು ಹೊತ್ತಿಕೊಂಡು ಬೆಂಕಿ ಅವಘಡ ಸಂಭವಿಸಿದೆ. ಸ್ಪಲ್ಪಹೊತ್ತು ಬೆಂಕಿ ಧಗ ಧಗನೇ ಉರಿದಿದ್ದು, ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಬಳಿಕ ಕಾರ್ಯಕ್ರಮ ಯಥಾರೀತಿಯಾಗಿ ನಡೆಯಿತು.

ಇದನ್ನೂ ಓದಿ: ಪ್ರೇಮಿಗಳ ದಿನಾಚರಣೆಗೂ ಮುನ್ನ 40 ವೀರಯೋಧರ ಪ್ರಾಣತ್ಯಾಗ ಮರೆಯದಿರಿ; ಜೈ ಜವಾನ್!

The post ಹಂಪಿ ಉತ್ಸವ ಮುಖ್ಯವೇದಿಕೆಯ ಎದುರು ಅಗ್ನಿ ಅವಘಡ appeared first on Samyukta Karnataka.