Vijay Archives - Samyukta Karnataka

ಚಿತ್ರರಂಗಕ್ಕೆ ದಳಪತಿ ವಿಜಯ್ ಬಂಪರ್ ಕೊಡುಗೆ: ಹೊಸ ಸಿನಿಮಾ ರಿಲೀಸ್ ಆದ ಮೊದಲ ವಾರ 5 ಶೋಗಳಿಗೆ ಗ್ರೀನ್ ಸಿಗ್ನಲ್!
ಚೆನ್ನೈ: ತಮಿಳುನಾಡಿನಲ್ಲಿ ಇನ್ಮುಂದೆ ಹೊಸದಾಗಿ ಬಿಡುಗಡೆಯಾಗುವ ಸಿನಿಮಾಗಳು ಮೊದಲ 7 ದಿನಗಳ ಕಾಲ ದಿನಕ್ಕೆ ಐದು ಪ್ರದರ್ಶನಗಳನ್ನು ಕಾಣಲಿವೆ. ಚಿತ್ರರಂಗದ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (ದಳಪತಿ ವಿಜಯ್) ಪ್ರತಿದಿನ 5 ಪ್ರದರ್ಶನಗಳಿಗೆ ಅಧಿಕೃತವಾಗಿ ಅನುಮತಿ ನೀಡಿದ್ದಾರೆ.

ಚಿತ್ರರಂಗದ ಪ್ರತಿನಿಧಿಗಳ ಮನವಿ: ಚಲನಚಿತ್ರ ಮಂಡಳಿಯ ಪದಾಧಿಕಾರಿಗಳು ಹಾಗೂ ಚಿತ್ರೋದ್ಯಮದ ಪ್ರಮುಖ ಪ್ರತಿನಿಧಿಗಳು ಮೇ 16 ರಂದು ಮುಖ್ಯಮಂತ್ರಿ ವಿಜಯ್ ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರ ಸಲ್ಲಿಸಿದ್ದರು. ಚಿತ್ರಮಂದಿರಗಳ ಆರ್ಥಿಕ ಚೇತರಿಕೆ ಮತ್ತು ಪ್ರೇಕ್ಷಕರ ಅನುಕೂಲಕ್ಕಾಗಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಅವಕಾಶ ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. ಈ ಕೋರಿಕೆಯನ್ನು ಪುರಸ್ಕರಿಸಿರುವ ಸಿಎಂ, ಚಿತ್ರೋದ್ಯಮದ ಹಿತದೃಷ್ಟಿಯಿಂದ ಹಸಿರು ನಿಶಾನೆ ತೋರಿದ್ದಾರೆ. ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಕಚೇರಿ (CMO) ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಹಳೇ ನಿಯಮ ಬದಲಾವಣೆ: ಚಿತ್ರಮಂದಿರಗಳ ನಿಯಮ 14-ಎ ಪ್ರಕಾರ, ತಮಿಳುನಾಡಿನಲ್ಲಿ ಈವರೆಗೆ ದಿನಕ್ಕೆ ಕೇವಲ ನಾಲ್ಕು ಪ್ರದರ್ಶನಗಳಿಗೆ ಮಾತ್ರ ಅವಕಾಶವಿತ್ತು. ಹಬ್ಬ ಹರಿದಿನಗಳು ಅಥವಾ ಸಾರ್ವಜನಿಕ ರಜಾದಿನಗಳಲ್ಲಿ ಮಾತ್ರ ವಿಶೇಷವಾಗಿ ಒಂದು ಹೆಚ್ಚುವರಿ ಪ್ರದರ್ಶನಕ್ಕೆ (ಒಟ್ಟು 5 ಪ್ರದರ್ಶನ) ಸರ್ಕಾರ ಅನುಮತಿ ನೀಡುತ್ತಿತ್ತು. ಆದ್ರೆ ಈಗಿನ ಹೊಸ ಆದೇಶದ ಪ್ರಕಾರ, ಯಾವುದೇ ಹೊಸ ಸಿನಿಮಾ ಬಿಡುಗಡೆಯಾದ ಮೊದಲ ಒಂದು ವಾರದವರೆಗೆ (7 ದಿನಗಳು) ಪ್ರತಿದಿನ 5 ಪ್ರದರ್ಶನಗಳನ್ನು ಪ್ರದರ್ಶಿಸಬಹುದಾಗಿದೆ.

ಮುಖ್ಯಮಂತ್ರಿಗಳ ಈ ಹೊಸ ನಿರ್ಧಾರದಿಂದಾಗಿ ತಮಿಳು ಚಿತ್ರರಂಗದ ನಿರ್ಮಾಪಕರು, ವಿತರಕರು ಹಾಗೂ ಚಿತ್ರಮಂದಿರಗಳ ಮಾಲೀಕರು ಹರ್ಷ ವ್ಯಕ್ತಪಡಿಸಿದ್ದು, ಇದು ತಮಿಳು ಚಿತ್ರೋದ್ಯಮದ ವ್ಯವಹಾರಕ್ಕೆ ದೊಡ್ಡ ಮಟ್ಟದ ಬೂಸ್ಟರ್ ಡೋಸ್ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

The post ಚಿತ್ರರಂಗಕ್ಕೆ ದಳಪತಿ ವಿಜಯ್ ಬಂಪರ್ ಕೊಡುಗೆ: ಹೊಸ ಸಿನಿಮಾ ರಿಲೀಸ್ ಆದ ಮೊದಲ ವಾರ 5 ಶೋಗಳಿಗೆ ಗ್ರೀನ್ ಸಿಗ್ನಲ್! appeared first on Samyukta Karnataka.

ಉಚಿತ ವಿದ್ಯುತ್ ಯೋಜನೆಗೆ ಸಿಎಂ ವಿಜಯ್ ಮೊದಲ ಸಹಿ
ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್, ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಅಂಶಗಳನ್ನು ಈಡೇರುಸುವ ಭರವಸೆ ನೀಡಿದ್ದಾರೆ.

ಮೊದಲ ಭಾಷಣದಲ್ಲಿಯೇ ʼತಮಿಳುನಾಡಿನಲ್ಲಿ ಹೊಸ ಯುಗದ ಆರಂಭ ಇದಾಗಿದೆ. ನಿಜವಾದ, ಜಾತ್ಯತೀತ ಹಾಗೂ ಸಾಮಾಜಿಕ ನ್ಯಾಯದ ಹೊಸ ಯುಗಾರಂಭವಾಗಿದೆ’ ಎಂದಿದ್ದಾರೆ. ಅಲ್ಲದೇ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಅವರು, 200 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಗೆ ಸಹಿ ಹಾಕಿದ್ದಾರೆ.

ನಾನು ಯಾವುದೇ ರಾಜ ಮನೆತನದಿಂದ ಬಂದವನಲ್ಲ, ಜನರೇ ನನ್ನನ್ನು ಆರಿಸಿ ಕಳಿಸಿದ್ದಾರೆ. ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಲು ಪ್ರಯತ್ನಿಸುತ್ತೇನೆ. ಸುಳ್ಳು ಭರವಸೆ ನೀಡಿ ಮೋಸ ಮಾಡುವುದಿಲ್ಲ ಎಂದರು.

ಇದು ನನ್ನೊಬ್ಬನ ಗೆಲುವು ಅಲ್ಲ, ನಿಮ್ಮೆಲ್ಲರ ಗೆಲುವು. ಇಡೀ ತಮಿಳುನಾಡಿನ ಜನರ ಗೆಲುವು. ನಿಮ್ಮೆಲ್ಲರಿಂದಲೇ ನಾನು ಇಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಸಮಸ್ತ ನಾಡಿನ ಜನತೆಗೆ ಕೋಟಿ ಕೋಟಿ ನಮನಗಳು ಎಂದರು.

ಆರ್ಥಿಕ ದುಸ್ಥಿತಿ: ಹಿಂದಿನ ಎಂ.ಕೆ.ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರ ಖಜಾನೆಯನ್ನು ಖಾಲಿ ಮಾಡಿದೆ. 10 ಲಕ್ಷ ಕೋಟಿ ಸಾಲದ ಹೊರೆಯನ್ನು ಹೊರೆಸಿದ್ದಾರೆ ಎಂದ ಅವರು, ರಾಜ್ಯ ಆರ್ಥಿಕವಾಗಿ ದುಸ್ಥಿತಿಯಲ್ಲಿದೆ. ರಾಜ್ಯದ ಹಣಕಾಸಿನ ಕುರಿತಾಗಿ ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ತಮಿಳುನಾಡಿನ ನೂತನ ಸಿಎಂ ಆಗಿ ‘ದಳಪತಿ’ ವಿಜಯ್ ಪಟ್ಟಾಭಿಷೇಕ! ಪ್ರಮಾಣವಚನಕ್ಕೆ ಲಕ್ಕಿ ಚಾರ್ಮ್ ತ್ರಿಶಾ ಎಂಟ್ರಿ

The post ಉಚಿತ ವಿದ್ಯುತ್ ಯೋಜನೆಗೆ ಸಿಎಂ ವಿಜಯ್ ಮೊದಲ ಸಹಿ appeared first on Samyukta Karnataka.

ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ: ವಿಜಯ್ ಪಟ್ಟಾಭಿಷೇಕಕ್ಕೆ ಕೌಂಟ್ ಡೌನ್!
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಯುಗ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ಮತ್ತು ನಟ ವಿಜಯ್ ಅವರು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ನಾಯಕ ವಿಜಯ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಚುನಾವಣಾ ಫಲಿತಾಂಶಗಳ ಅನ್ವಯ, ತಮಿಳುನಾಡಿನ 234 ಕ್ಷೇತ್ರಗಳ ಪೈಕಿ ವಿಜಯ್ ನೇತೃತ್ವದ ಟಿವಿಕೆ 107 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದಶಕಗಳ ಕಾಲ ಆಡಳಿತ ನಡೆಸಿದ್ದ ಡಿಎಂಕೆ 59 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ, ಎಐಎಡಿಎಂಕೆ 47 ಸ್ಥಾನಗಳನ್ನು ಪಡೆದಿದೆ. ಉಳಿದಂತೆ ಕಾಂಗ್ರೆಸ್ 5, ಪಿಎಂಕೆ 4 ಹಾಗೂ ಇತರ ಸಣ್ಣ ಪಕ್ಷಗಳು ಕನಿಷ್ಠ ಸ್ಥಾನಗಳನ್ನು ಹಂಚಿಕೊಂಡಿವೆ.

ಪ್ರಮಾಣವಚನಕ್ಕೆ ಸಿದ್ಧತೆ: ರಾಜ್ಯಪಾಲರು ವಿಜಯ್‌ಯವರು ಸರ್ಕಾರ ರಚಿಸಲು ಆಹ್ವಾನ ನೀಡಿದ್ದು, ನಾಳೆ (ಗುರುವಾರ) ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆಯಿದೆ. ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಈಗಾಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಸದ್ಯ ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಅಸ್ತಿತ್ವದಲ್ಲಿದೆ ಮತ್ತು ಮುಂದಿನ ಚುನಾವಣೆ 2026ಕ್ಕೆ ನಿಗದಿಯಾಗಿದೆ.

The post ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ: ವಿಜಯ್ ಪಟ್ಟಾಭಿಷೇಕಕ್ಕೆ ಕೌಂಟ್ ಡೌನ್! appeared first on Samyukta Karnataka.

ದಳಪತಿ ದಿಗ್ವಿಜಯಕ್ಕೆ ‘ಕಾಂತಾರ’ ಧಣಿ ಫಿದಾ: ವಿಜಯ್ ಗೆಲುವನ್ನು ಕೊಂಡಾಡಿದ ರಿಷಬ್ ಶೆಟ್ಟಿ!
ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ಜೋಸೆಫ್ ವಿಜಯ್ ಚಂದ್ರಶೇಖರ್ (ದಳಪತಿ ವಿಜಯ್), ತಮ್ಮ ಚೊಚ್ಚಲ ಚುನಾವಣಾ ಕಣದಲ್ಲೇ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಈ ಐತಿಹಾಸಿಕ ಜಯಕ್ಕೆ ಭಾರತೀಯ ಚಿತ್ರರಂಗದ ಗಣ್ಯರಿಂದ ಪ್ರಶಂಸೆಗಳ ಸುರಿಮಳೆಯೇ ಹರಿದು ಬರುತ್ತಿವೆ. ಕನ್ನಡದ ಸ್ಟಾರ್ ನಟ, ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ, ವಿಜಯ್ ಸಾಧನೆಯನ್ನು ಕೊಂಡಾಡಿದ್ದಾರೆ.

ರಿಷಬ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ದಳಪತಿ ವಿಜಯ್‌ಯವರಿಗೆ ವಿಶೇಷವಾಗಿ ಶುಭಕೋರಿದ್ದಾರೆ. “ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಕ್ಕಾಗಿ ವಿಜಯ್ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ರಾಜ್ಯವು ಹೆಚ್ಚಿನ ಪ್ರಗತಿ ಸಾಧಿಸಲಿ ಮತ್ತು ಬಲವಾದ ಸಾರ್ವಜನಿಕ ಸೇವೆಯನ್ನು ಜನತೆ ಪಡೆಯುವಂತಾಗಲಿ. ನಿಮ್ಮ ಈ ಸಾಧನೆಯು ರಾಜಕೀಯಕ್ಕೆ ಬರಬಯಸುವ ಅನೇಕ ಯುವಜನರಿಗೆ ಖಂಡಿತವಾಗಿಯೂ ದೊಡ್ಡ ಪ್ರೇರಣೆ ನೀಡಲಿದೆ,” ಎಂದು ರಿಷಬ್ ಪವರ್‌ಫುಲ್ ಮಾತುಗಳ ಮೂಲಕ ಈ ಯಶಸ್ಸನ್ನು ಬಣ್ಣಿಸಿದ್ದಾರೆ.

ಟಿವಿಕೆ ಪಕ್ಷದ ಐತಿಹಾಸಿಕ ಮುನ್ನಡೆ: ನಟ ವಿಜಯ್ ಫೆಬ್ರವರಿ 2, 2024 ರಂದು ‘ತಮಿಳಗ ವೆಟ್ರಿ ಕಳಗಮ್‌’ (TVK) ಎಂಬ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ತಮಿಳಿನಲ್ಲಿ ‘ವೆಟ್ರಿ’ ಎಂದರೆ ‘ಗೆಲುವು’ ಎಂದರ್ಥ. ತಮ್ಮ ಪಕ್ಷದ ಚಿಹ್ನೆಯಾದ ‘ಶಿಳ್ಳೆ’ (Whistle) ಮೂಲಕವೇ ಜನರ ಗಮನ ಸೆಳೆದಿದ್ದ ವಿಜಯ್, ಚುನಾವಣೆಯಲ್ಲಿ ಬರೋಬ್ಬರಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ತಮಿಳು ರಾಜಕೀಯದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ್ದಾರೆ.

ಸಿನಿಮಾ ರಂಗದಲ್ಲಿ ಶಿಳ್ಳೆ-ಚಪ್ಪಾಳೆಗಳ ಮೂಲಕ ರಂಜಿಸುತ್ತಿದ್ದ ವಿಜಯ್, ಈಗ ಅದೇ ‘ಶಿಳ್ಳೆ’ ಚಿಹ್ನೆಯೊಂದಿಗೆ ಶಾಸನಸಭೆ ಪ್ರವೇಶಿಸಿರುವುದು ವಿಶೇಷ. ದಕ್ಷಿಣ ಭಾರತದಾದ್ಯಂತ ವಿಜಯ್ ಈ ಗೆಲುವನ್ನು ಸಂಭ್ರಮಿಸಲಾಗುತ್ತಿದ್ದು, ನಟ ರಿಷಬ್ ಶೆಟ್ಟಿ ಈ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಜಯ್ ಗಟ್ಟಿ ನಾಯಕತ್ವವು ತಮಿಳುನಾಡಿನಲ್ಲಿ ಹೊಸ ಬದಲಾವಣೆಯ ಗಾಳಿ ಬೀಸಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಸದ್ಯ ಮನೆಮಾಡಿರು ಸಂತಸದ ಸಂಗತಿ.

The post ದಳಪತಿ ದಿಗ್ವಿಜಯಕ್ಕೆ ‘ಕಾಂತಾರ’ ಧಣಿ ಫಿದಾ: ವಿಜಯ್ ಗೆಲುವನ್ನು ಕೊಂಡಾಡಿದ ರಿಷಬ್ ಶೆಟ್ಟಿ! appeared first on Samyukta Karnataka.

ಒಂದೇ ಬ್ಯಾಂಕ್ ಖಾತೆಯಲ್ಲಿ 213 ಕೋಟಿ ರೂ. ಮೊತ್ತ: ಅಚ್ಚರಿ ಮೂಡಿಸಿದ ನಟ ವಿಜಯ್ ಸಂಪತ್ತು; ದಳಪತಿ ಹೂಡಿಕೆಯ ‘ಸೇಫ್’ ಗೇಮ್!
ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ವಿಜಯ್ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಒಟ್ಟು 624 ಕೋಟಿ ರೂಪಾಯಿಗಳ ನಿವ್ವಳ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ವಿಶೇಷವೆಂದರೆ, ವಿಜಯ್ ಹೂಡಿಕೆಯು ಶೇರು ಮಾರುಕಟ್ಟೆಗಿಂತ ಹೆಚ್ಚಾಗಿ ಬ್ಯಾಂಕ್ ಠೇವಣಿ ಮತ್ತು ರಿಯಲ್ ಎಸ್ಟೇಟ್‌ನಂತಹ ಸಾಂಪ್ರದಾಯಿಕ ಹಾಗೂ ಸುರಕ್ಷಿತ ಮಾರ್ಗಗಳತ್ತ ವಾಲಿರುವುದು ಕಂಡುಬಂದಿದೆ.

ನಗದು ಹಾಗೂ ಬ್ಯಾಂಕ್ ಠೇವಣಿ ವಿವರ: ವಿಜಯ್ ಒಟ್ಟು ಚರಾಸ್ತಿ ಸುಮಾರು 404 ಕೋಟಿ ರೂಪಾಯಿಗಳಷ್ಟಿದೆ. ಇದರಲ್ಲಿ ಅತ್ಯಂತ ವಿಶೇಷವೆಂದರೆ, ಸಾಲಿಗ್ರಾಮದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಒಂದೇ ಉಳಿತಾಯ ಖಾತೆಯಲ್ಲಿ 213 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತವನ್ನು ಹೊಂದಿದ್ದಾರೆ. ಇದರ ಜೊತೆಗೆ ವಿವಿಧ ನಾಲ್ಕು ಪ್ರಮುಖ ಬ್ಯಾಂಕುಗಳಲ್ಲಿ ಒಟ್ಟು 100 ಕೋಟಿ ರೂಪಾಯಿಗಳನ್ನು ಸ್ಥಿರ ಠೇವಣಿ (FD) ಇರಿಸಿದ್ದಾರೆ. 2024-25ನೇ ಹಣಕಾಸು ವರ್ಷದಲ್ಲಿ 184.53 ಕೋಟಿ ರೂಪಾಯಿಗಳ ಆದಾಯವನ್ನು ವರದಿ ಮಾಡಿದ್ದಾರೆ.

ರಿಯಲ್ ಎಸ್ಟೇಟ್ ಮತ್ತು ಸ್ಥಿರ ಆಸ್ತಿ: ಸುಮಾರು 220 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಹೊಂದಿರುವ ವಿಜಯ್, ಚೆನ್ನೈನ ಪ್ರಮುಖ ಪ್ರದೇಶಗಳಾದ ನೀಲಂಕರೈ, ಸಾಲಿಗ್ರಾಮ ಹಾಗೂ ಮೈಲಾಪುರದಲ್ಲಿ ಹತ್ತು ವಸತಿ ಕಟ್ಟಡಗಳನ್ನು ಹೊಂದಿದ್ದಾರೆ. ಇವುಗಳ ಮೌಲ್ಯ 115 ಕೋಟಿ ರೂಪಾಯಿಗಳಾಗಿವೆ. ಇನ್ನು ತ್ಯಾಗರಾಯ ನಗರ ಮತ್ತು ಶೋಲಿಂಗನಲ್ಲೂರು ಸೇರಿದಂತೆ ವಿವಿಧೆಡೆ ಇರುವ ವಾಣಿಜ್ಯ ಆಸ್ತಿಗಳ ಮೌಲ್ಯ 82.8 ಕೋಟಿ ರೂಪಾಯಿಯಷ್ಟಿದೆ. ಕೃಷಿ ಮತ್ತು ಕೃಷಿಯೇತರ ಭೂಮಿಯ ಮೇಲೆಯೂ ಸಹ ಗಣನೀಯ ಹೂಡಿಕೆ ಮಾಡಿದ್ದಾರೆ.

ಷೇರು ಮಾರುಕಟ್ಟೆಯಿಂದ ದೂರ: ವಿಜಯ್ ಹೂಡಿಕೆಯ ತಂತ್ರವು ಅತ್ಯಂತ ಸಂಪ್ರದಾಯಬದ್ಧವಾಗಿದೆ. ಒಟ್ಟು ಆಸ್ತಿಯಲ್ಲಿ ಷೇರು ಮಾರುಕಟ್ಟೆಯ ಪಾಲು ಕೇವಲ ಶೇ. 0.04 ಕ್ಕಿಂತ ಕಡಿಮೆ (ಸುಮಾರು 20 ಲಕ್ಷ ರೂ.) ಇದೆ. ಇದು ಮಾರುಕಟ್ಟೆಯ ಅಪಾಯಗಳನ್ನು ತೆಗೆದುಕೊಳ್ಳುವ ಬದಲು, ಸ್ಥಿರ ಆದಾಯ ನೀಡುವ ಆಸ್ತಿಗಳ ಮೇಲೆ ವಿಜಯ್‌ಗೆ ಇರುವ ನಂಬಿಕೆಯನ್ನು ತೋರಿಸುತ್ತದೆ.

ಐಷಾರಾಮಿ ಕಾರುಗಳು ಮತ್ತು ಸಾಲಮುಕ್ತ ಜೀವನ: ವಿಜಯ್ ಬಳಿ ಟೊಯೋಟಾ ಲೆಕ್ಸಸ್, ಬಿಎಂಡಬ್ಲ್ಯೂ ಐ7 ಮತ್ತು ಟೊಯೋಟಾ ವೆಲ್‌ಫೈರ್ ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ವಾಹನಗಳಿವೆ. ಸುಮಾರು 1.2 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿರುವ ದಳಪತಿ, ತಮಗೆ ಯಾವುದೇ ರೀತಿಯ ಬ್ಯಾಂಕ್ ಸಾಲಗಳಿಲ್ಲ ಎಂದು ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಇನ್ನು ವಿಜಯ್‌ ಪತ್ನಿ ಸಂಗೀತಾ 15.76 ಕೋಟಿ ರೂಪಾಯಿ ಮೌಲ್ಯದ ಪ್ರತ್ಯೇಕ ಆಸ್ತಿಯನ್ನು ಘೋಷಿಸಿದ್ದಾರೆ.

The post ಒಂದೇ ಬ್ಯಾಂಕ್ ಖಾತೆಯಲ್ಲಿ 213 ಕೋಟಿ ರೂ. ಮೊತ್ತ: ಅಚ್ಚರಿ ಮೂಡಿಸಿದ ನಟ ವಿಜಯ್ ಸಂಪತ್ತು; ದಳಪತಿ ಹೂಡಿಕೆಯ ‘ಸೇಫ್’ ಗೇಮ್! appeared first on Samyukta Karnataka.

ಸಿನಿಮಾ ಟು ಸಿಎಂ ಚೇರ್: 4 ದಶಕಗಳ ಬಳಿಕ ಸಂಭವಿಸಿದ ರಾಜಕೀಯ ಪವಾಡ; ಎನ್‌ಟಿಆರ್ ನಂತರ ಅತಿ ವೇಗವಾಗಿ ಗದ್ದುಗೆ ಹಿಡಿದ ನಟ ವಿಜಯ್
ದಕ್ಷಿಣ ಭಾರತದ ರಾಜಕೀಯ ಇತಿಹಾಸದಲ್ಲಿ ಚಿತ್ರರಂಗದಿಂದ ಬಂದು ಅತಿ ಕಡಿಮೆ ಅವಧಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದ ಸಾಧನೆಗೆ ಈಗ ಹೊಸ ಸೇರ್ಪಡೆಯಾಗಿದೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ನಟ ವಿಜಯ್, 43 ವರ್ಷಗಳ ಹಿಂದೆ ತೆಲುಗು ಸೂಪರ್‌ಸ್ಟಾರ್ ಎನ್.ಟಿ. ರಾಮರಾವ್ (ಎನ್‌ಟಿಆರ್) ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮೊದಲಿಗರು ಎನ್‌ಟಿಆರ್: 9 ತಿಂಗಳಲ್ಲಿ ಅಧಿಕಾರ 1982ರ ಮಾರ್ಚ್‌ನಲ್ಲಿ ಕಾಂಗ್ರೆಸ್ ಆಡಳಿತದ ವಿರುದ್ಧ ಸಿಡಿದೆದ್ದ ಎನ್‌ಟಿಆರ್, ಹೈದರಾಬಾದ್‌ನಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಸ್ಥಾಪಿಸಿದರು. ಅಚ್ಚರಿಯೆಂದರೆ ಪಕ್ಷ ಸ್ಥಾಪಿಸಿದ ಕೇವಲ 9 ತಿಂಗಳಲ್ಲಿ, ಅಂದರೆ 1983ರ ಜನವರಿಯ ಚುನಾವಣೆಯಲ್ಲಿ 294 ಸ್ಥಾನಗಳ ಪೈಕಿ 202 ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿಯಾದರು. ಇದು ಭಾರತೀಯ ರಾಜಕೀಯದಲ್ಲಿ ಅಂದು ಸೃಷ್ಟಿಯಾದ ಮಹಾನ್ ಸಂಚಲನ.

ಇತಿಹಾಸ ಮರುಕಳಿಸಿದ ವಿಜಯ್ ಅಭಿಯಾನ: ಈಗ 43 ವರ್ಷಗಳ ನಂತರ, ನಟ ವಿಜಯ್ ಅದೇ ವೇಗದಲ್ಲಿ ರಾಜಕೀಯ ಭೂಪಟದಲ್ಲಿ ಮಿಂಚಿದ್ದಾರೆ. ಫೆಬ್ರವರಿ 2024 ರಲ್ಲಿ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷವನ್ನು ಘೋಷಿಸಿ, ಸೆಪ್ಟೆಂಬರ್‌ನಲ್ಲಿ ಅಧಿಕೃತ ನೋಂದಣಿ ಪಡೆದ ವಿಜಯ್, ಕೇವಲ ಎರಡೇ ವರ್ಷಗಳಲ್ಲಿ ಅಧಿಕಾರಕ್ಕೆ ಹತ್ತಿರವಾಗಿದ್ದಾರೆ. ಎನ್‌ಟಿಆರ್‌ರಂತೆಯೇ ವಿಜಯ್ ಕೂಡ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದಲ್ಲಿ ರಾಜ್ಯಾದ್ಯಂತ ಸಂಚರಿಸಿ, ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನಮತ ರೂಪಿಸುವಲ್ಲಿ ಯಶಸ್ವಿಯಾದರು.

ವಿಶೇಷ ಕ್ಲಬ್‌ ಸೇರಿದ ನಟ-ರಾಜಕಾರಣಿ: ದಕ್ಷಿಣ ಭಾರತದಲ್ಲಿ ಎಂ.ಜಿ. ರಾಮಚಂದ್ರನ್, ಚಿರಂಜೀವಿ, ಕಮಲ್ ಹಾಸನ್, ವಿಜಯಕಾಂತ್ ಮತ್ತು ಪವನ್ ಕಲ್ಯಾಣ್ ಅವರಂತಹ ಘಟಾನುಘಟಿಗಳು ರಾಜಕೀಯಕ್ಕೆ ಬಂದರೂ, ಎನ್‌ಟಿಆರ್ ಮಾದರಿಯ ಇಂತಹ ತ್ವರಿತ ಮತ್ತು ದೊಡ್ಡ ಮಟ್ಟದ ಗೆಲುವು ಯಾರಿಗೂ ಸಾಧ್ಯವಾಗಿರಲಿಲ್ಲ. ಇದೀಗ 51 ವರ್ಷದ ವಿಜಯ್, ಪ್ರಾದೇಶಿಕ ಪಕ್ಷಗಳ ದಶಕಗಳ ಪ್ರಾಬಲ್ಯವನ್ನು ಮುರಿದು, ಎನ್‌ಟಿಆರ್ ನಂತರದ ಅತಿ ವೇಗದ ಯಶಸ್ವಿ ನಟ-ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸದ್ಯ ನಟ, ರಾಜಕಾರಣಿ ವಿಜಯ್, ಈ ಭರ್ಜರಿ ಗೆಲುವು ಕೇವಲ ವ್ಯಕ್ತಿಯ ಗೆಲುವಲ್ಲ, ಅದು ತಮಿಳುನಾಡಿನ ರಾಜಕೀಯ ಸಂಸ್ಕೃತಿಯಲ್ಲಿ ಸಂಭವಿಸಿದ ದೊಡ್ಡ ಸ್ಥಿತ್ಯಂತರದ ಸಂಕೇತವಾಗಿದೆ ಎನ್ನಲಾಗುತ್ತಿದೆ.

The post ಸಿನಿಮಾ ಟು ಸಿಎಂ ಚೇರ್: 4 ದಶಕಗಳ ಬಳಿಕ ಸಂಭವಿಸಿದ ರಾಜಕೀಯ ಪವಾಡ; ಎನ್‌ಟಿಆರ್ ನಂತರ ಅತಿ ವೇಗವಾಗಿ ಗದ್ದುಗೆ ಹಿಡಿದ ನಟ ವಿಜಯ್ appeared first on Samyukta Karnataka.

ಚುನಾವಣಾ ಅಫಿಡವಿಟ್ ಪ್ರಕರಣ: TVK ವಿಜಯ್‌ಗೆ ದೊಡ್ಡ ರಿಲೀಫ್
ಚೆನ್ನೈ: ಮದ್ರಾಸ್ ಹೈಕೋರ್ಟ್ ನಟ ಹಾಗೂ ಟಿವಿಕೆ (TVK) ಮುಖ್ಯಸ್ಥ ವಿಜಯ್ ಅವರ ವಿರುದ್ಧ ಸಲ್ಲಿಸಲಾಗಿದ್ದ ಮಹತ್ವದ ಅರ್ಜಿಯನ್ನು ವಜಾಗೊಳಿಸಿದೆ. ಚುನಾವಣಾ ಅಫಿಡವಿಟ್‌ನಲ್ಲಿ ಪತ್ನಿಗೆ ₹12.60 ಕೋಟಿ ಸಾಲ ನೀಡಿದ ಬಗ್ಗೆ ಉಲ್ಲೇಖಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಈ ಅರ್ಜಿ ನ್ಯಾಯಾಲಯದಲ್ಲಿ ತಳ್ಳಿಹಾಕಲಾಗಿದೆ.

ಪ್ರಕರಣದ ಹಿನ್ನೆಲೆ : ಪೆರಂಬೂರು ಕ್ಷೇತ್ರದ ಮತದಾರ ವೆಂಕಟೇಶ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ವಿಜಯ್ ಅವರು ತಮ್ಮ ಪತ್ನಿ ಸಂಗೀತಾ ವಿಜಯ್ ಅವರಿಗೆ ₹12.60 ಕೋಟಿ ಸಾಲ ನೀಡಿರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿರುವುದು ಅನುಮಾನಾಸ್ಪದ ಎಂದು ವಾದಿಸಿದ್ದರು. ಇಬ್ಬರ ನಡುವೆ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿಯ ಹಣಕಾಸು ವ್ಯವಹಾರ ಪ್ರಶ್ನಾರ್ಹವಾಗಿದೆ ಎಂದು ಅವರು ದೂರಿದ್ದರು.

ಇದೇ ವೇಳೆ, ಖಾಸಗಿ ಶೈಕ್ಷಣಿಕ ಟ್ರಸ್ಟ್‌ಗೆ ₹20 ಕೋಟಿ ನೀಡಿರುವುದಕ್ಕೂ ಸರಿಯಾದ ವಿವರಗಳನ್ನು ನೀಡಿಲ್ಲ ಎಂಬ ಆರೋಪವನ್ನು ಅರ್ಜಿದಾರರು ಮಾಡಿದ್ದರು.

ನ್ಯಾಯಾಲಯದ ತೀರ್ಪು : ಈ ಪ್ರಕರಣವನ್ನು ವಿಚಾರಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಧರ್ಮಾಧಿಕಾರಿ ಹಾಗೂ ನ್ಯಾಯಮೂರ್ತಿ ಜಿ. ಅರುಲ್ಮುರುಗನ್ ಅವರ ಪೀಠ, ಇದೇ ರೀತಿಯ ಬೇಡಿಕೆಯೊಂದಿಗೆ ಸಲ್ಲಿಸಲಾದ ಇನ್ನೊಂದು ಅರ್ಜಿಯನ್ನು ಈಗಾಗಲೇ ವಜಾಗೊಳಿಸಲಾಗಿದೆ ಎಂದು ತಿಳಿಸಿದೆ. ಆದ್ದರಿಂದ, ಈ ಅರ್ಜಿಯನ್ನು ಮರುಪರಿಶೀಲನೆಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿ ಪ್ರಕರಣವನ್ನು ವಜಾಗೊಳಿಸಿದೆ.

ಅರ್ಜಿದಾರರ ವಾದ : ಅರ್ಜಿದಾರರು, ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ವಿವರಗಳನ್ನು ಬಹಿರಂಗಪಡಿಸುವುದು ಕೇವಲ ಔಪಚಾರಿಕತೆಯಲ್ಲ, ನಿಜವಾದ ಮಾಹಿತಿಯನ್ನು ನೀಡದೇ ಇದ್ದರೆ ಅದು ಚುನಾವಣಾ ಪ್ರಕ್ರಿಯೆಯನ್ನು ವಂಚಿಸುವಂತಾಗುತ್ತದೆ ಎಂದು ವಾದಿಸಿದ್ದರು. ಆದರೆ ನ್ಯಾಯಾಲಯ ಈ ವಾದವನ್ನು ಪರಿಗಣಿಸಲಿಲ್ಲ.

ಪೀಠದಲ್ಲಿ ಲೆಕ್ಕ ವಿವಾದ ತೀವ್ರ: ಸಭೆಗೂ ಮುನ್ನವೇ ಭಕ್ತರ ನಿರ್ಗಮನ

The post ಚುನಾವಣಾ ಅಫಿಡವಿಟ್ ಪ್ರಕರಣ: TVK ವಿಜಯ್‌ಗೆ ದೊಡ್ಡ ರಿಲೀಫ್ appeared first on Samyukta Karnataka.

ತಮಿಳುನಾಡು ಚುನಾವಣಾ ಕಣದಲ್ಲಿ ಎನ್‌ಡಿಎ ಒಗ್ಗಟ್ಟು Vs ವಿಜಯ್; ಸೀಟು ಹಂಚಿಕೆಯಲ್ಲೇ ದೋಸ್ತಿಗಳ ರಣತಂತ್ರ ಹೇಗಿದೆ?
ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಜೋರಾಗಿದೆ. ಎನ್‌ಡಿಎ ಮೈತ್ರಿಕೂಟವು ಮಹತ್ವದ ಹೆಜ್ಜೆ ಇಟ್ಟು, ಸೀಟು ಹಂಚಿಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಒಟ್ಟು 234 ಕ್ಷೇತ್ರಗಳ ಪೈಕಿ, ಎಐಎಡಿಎಂಕೆ 178 ಸ್ಥಾನಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದರೆ, ಬಿಜೆಪಿ 27 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ. ಜೊತೆಗೆ ಪಿಎಂಕೆ 18 ಮತ್ತು ಎಎಂಎಂಕೆ 11 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಚೆನ್ನೈನ ರಾಯಪೆಟ್ಟಾದಲ್ಲಿರುವ ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ಸೀಟು ಹಂಚಿಕೆ ಒಪ್ಪಂದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಸಮ್ಮುಖದಲ್ಲಿ ಈ ಒಪ್ಪಂದ ಅಂತಿಮಗೊಂಡಿತು.

ಈ ಬಗ್ಗೆ ಮಾತನಾಡಿದ ಪಳನಿಸ್ವಾಮಿ, “ನಮ್ಮ ಮೈತ್ರಿಕೂಟ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದೆ. ರಾಜ್ಯದಲ್ಲಿ ಬಹುಮತ ಪಡೆದು ಸರ್ಕಾರ ರಚಿಸುವ ವಿಶ್ವಾಸ ನಮ್ಮದು” ಎಂದು ತಿಳಿಸಿದ್ದಾರೆ.

2021ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿಯ ಸ್ಥಾನಗಳಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ಬಾರಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ, ಇದೀಗ 27 ಸ್ಥಾನಗಳಲ್ಲಿ ತನ್ನ ಶಕ್ತಿ ಪರೀಕ್ಷೆಗೆ ಇಳಿದಿದೆ. ಇದರಿಂದ ಈ ಬಾರಿ ಎನ್‌ಡಿಎ ಮೈತ್ರಿಕೂಟ ಹೆಚ್ಚು ಬಲಿಷ್ಠವಾಗಿ ಕಣಕ್ಕಿಳಿದಿದೆ ಎಂಬ ವಿಶ್ಲೇಷಣೆ ಕೇಳಿ ಬರುತ್ತಿದೆ.

ಇನ್ನೊಂದೆಡೆ, ಪುದುಚೇರಿಯ ರಾಜಕೀಯದಲ್ಲೂ ಹೊಸ ಚಲನವಲನ ಕಂಡುಬರುತ್ತಿದೆ. ಜನಪ್ರಿಯ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ, ಯಾವುದೇ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಪುದುಚೇರಿಯ ಒಟ್ಟು 30 ಕ್ಷೇತ್ರಗಳಿಗೆ ಟಿವಿಕೆ ಪಕ್ಷ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಜನರ ಶಕ್ತಿಯ ಮೇಲೆ ನಂಬಿಕೆ ಇಟ್ಟು ಚುನಾವಣೆ ಎದುರಿಸುವುದಾಗಿ ಘೋಷಿಸಿದೆ. ಮೈತ್ರಿ ರಾಜಕೀಯ ಒಂದು ಕಡೆ ಸಾಗುತ್ತಿದ್ದರೆ, ಇನ್ನೊಂದೆಡೆ ಸ್ವತಂತ್ರ ಹೋರಾಟದ ಘೋಷಣೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಒಟ್ಟಿನಲ್ಲಿ, ತಮಿಳುನಾಡು ಮತ್ತು ಪುದುಚೇರಿ ರಾಜಕೀಯ ರಂಗ ದಿನದಿಂದ ದಿನಕ್ಕೆ ರಂಗೇರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಪೈಪೋಟಿ ಕಾಣುವ ಸಾಧ್ಯತೆ ಇದೆ. ಈಗ ಎಲ್ಲರ ಗಮನ ಮೇ 04ರ ಚುನಾವಣಾ ಫಲಿತಾಂಶದತ್ತ ನೆಟ್ಟಿದೆ.

The post ತಮಿಳುನಾಡು ಚುನಾವಣಾ ಕಣದಲ್ಲಿ ಎನ್‌ಡಿಎ ಒಗ್ಗಟ್ಟು Vs ವಿಜಯ್; ಸೀಟು ಹಂಚಿಕೆಯಲ್ಲೇ ದೋಸ್ತಿಗಳ ರಣತಂತ್ರ ಹೇಗಿದೆ? appeared first on Samyukta Karnataka.