#TrendingNews Archives - Samyukta Karnataka

‘ಸೃಜನಾತ್ಮಕ ಸ್ವಾತಂತ್ರ್ಯವಿಲ್ಲ’: ಚಿತ್ರ ನಿರ್ದೇಶನದಿಂದ ದೂರ ಸರಿದ ಬಾಲಿವುಡ್ ದಿಕ್ಸೂಚಿ ಮಹೇಶ್ ಭಟ್
ಬಾಲಿವುಡ್‌ನ ಖ್ಯಾತ ಹಿರಿಯ ನಿರ್ದೇಶಕ ಹಾಗೂ ನಟಿ ಆಲಿಯಾ ಭಟ್ ತಂದೆ ಮಹೇಶ್ ಭಟ್ ಚಿತ್ರ ನಿರ್ದೇಶನಕ್ಕೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ ಐದು ದಶಕಗಳ ಸುದೀರ್ಘ ಹಾಗೂ ಯಶಸ್ವಿ ಚಲನಚಿತ್ರ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದು, ಇನ್ನು ಮುಂದೆ ಎಂದಿಗೂ ಮೆಗಾಫೋನ್ ಹಿಡಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ಸಿನಿಮಾ ರಂಗದಲ್ಲಿನ ಬದಲಾವಣೆಗಳೇ ಈ ನಿರ್ಧಾರಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಇಂದಿನ ದಿನಗಳಲ್ಲಿ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಚಿತ್ರೀಕರಣಕ್ಕೂ ಮುನ್ನವೇ ಕಥೆ ಮತ್ತು ಕಂಟೆಂಟ್ ಹೀಗೆಯೇ ಇರಬೇಕು ಎಂದು ನಿರ್ಧರಿಸಲಾಗುತ್ತದೆ. ಇದರಿಂದಾಗಿ ನಿರ್ದೇಶಕರಿಗೆ ತಮ್ಮ ಸ್ವಂತ ಕಲ್ಪನೆ ಹಾಗೂ ಸೃಜನಾತ್ಮಕ ಸ್ವಾತಂತ್ರ್ಯ ಬಳಸಲು ಅವಕಾಶ ಸಿಗುತ್ತಿಲ್ಲ ಎಂದು ಮಹೇಶ್ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಾಗೇ ತಮ್ಮ ಐದು ದಶಕಗಳ ವೃತ್ತಿಜೀವನದಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದು, ‘ಅರ್ಥ್’, ‘ಸಾರಂಶ್’, ‘ನಾಮ್’, ‘ದಿಲ್ ಹೈ ಕಿ ಮಾಂತಾ ನಹೀ’ ಹಾಗೂ ‘ಸಡಕ್’ ನಂತಹ ಸೂಪರ್ ಹಿಟ್ ಮತ್ತು ಭಾವನಾತ್ಮಕ ಚಿತ್ರಗಳನ್ನು ನೀಡಿದ್ದಾರೆ. 1999ರ ‘ಕಾರ್ತೂಸ್’ ಚಿತ್ರದ ಬಳಿಕ ನಿರ್ದೇಶನದಿಂದ ದೂರವಿದ್ದ ಮಹೇಶ್‌ ಭಟ್, ಎರಡು ದಶಕಗಳ ನಂತರ 2020ರಲ್ಲಿ ಆಲಿಯಾ ಭಟ್ ನಟನೆಯ ‘ಸಡಕ್ 2’ ಚಿತ್ರವನ್ನು ನಿರ್ದೇಶಿಸಿದ್ದರು. ಇದೇ ಈಗ ನಿರ್ದೇಶನ ಹಾಗೂ ವೃತ್ತಿಜೀವನದ ಕೊನೆಯ ಸಿನಿಮಾವಾಗಿದೆ.

ನಿವೃತ್ತಿಯ ನಂತರದ ದಿನಗಳಲ್ಲಿ ತಮಗಾಗಿ ಸಿನಿಮಾ ಮಾಡುವುದಕ್ಕಿಂತ, ಚಿತ್ರರಂಗಕ್ಕೆ ಬರುವ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ (ಮೆಂಟರ್) ನೀಡುವುದರಲ್ಲಿ ತಮಗೆ ಹೆಚ್ಚಿನ ಸಂತೋಷ ಸಿಗುತ್ತಿದೆ ಎಂದು ಮಹೇಶ್ ಭಟ್ ತಿಳಿಸಿದ್ದಾರೆ. ಹೊಸಬರ ಯಶಸ್ಸಿಗೆ ಕಾರಣವಾಗುವುದು ಮತ್ತು ಅವರ ಕನಸುಗಳಿಗೆ ಹೆಗಲಾಗುವುದೇ ತಮ್ಮ ಮುಂದಿನ ಗುರಿ ಎಂದು ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.

The post ‘ಸೃಜನಾತ್ಮಕ ಸ್ವಾತಂತ್ರ್ಯವಿಲ್ಲ’: ಚಿತ್ರ ನಿರ್ದೇಶನದಿಂದ ದೂರ ಸರಿದ ಬಾಲಿವುಡ್ ದಿಕ್ಸೂಚಿ ಮಹೇಶ್ ಭಟ್ appeared first on Samyukta Karnataka.

ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್‌ಡೇ ಧಮಾಕಾ: ಅಕ್ಟೋಬರ್‌ನಲ್ಲಿ ಅಭಿಮಾನಿಗಳಿಗೆ ಡಬಲ್ ಹಬ್ಬ!
ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ಮತ್ತು ಖ್ಯಾತ ನಟ ‘ಗೋಲ್ಡನ್ ಸ್ಟಾರ್’ ಗಣೇಶ್ ಜುಲೈ 2 ಇಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅಭಿಮಾನಿಗಳಿಗೆ ಚಿತ್ರತಂಡಗಳು ಭರ್ಜರಿ ಉಡುಗೊರೆ ನೀಡಿದ್ದು, 2026ರ ಅಕ್ಟೋಬರ್ ತಿಂಗಳೊಂದರಲ್ಲೇ ಗಣೇಶ್ ನಟನೆಯ ಎರಡು ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಕೇವಲ 14 ದಿನಗಳ ಅಂತರದಲ್ಲಿ ನೆಚ್ಚಿನ ನಟನ ಎರಡು ಚಿತ್ರಗಳು ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ಮೂಡಿಸಿದೆ.

‘ಗೋಲ್ಡನ್ ಸ್ಟಾರ್’ ನಟನೆಯ ಸಿನಿಮಾ ಮೊದಲನೇಯದ್ದಾಗಿ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ಹಾಗೂ ಟಿ.ಜಿ. ಕೃತಿ ಪ್ರಸಾದ್ ನಿರ್ಮಿಸುತ್ತಿರುವ ‘ಪಿನಾಕ’ ಸಿನಿಮಾ ಅಕ್ಟೋಬರ್ 2ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಕೊರಿಯೋಗ್ರಫರ್ ಧನಂಜಯ್ ನಿರ್ದೇಶನದ ಈ ಥ್ರಿಲ್ಲರ್ ಕಥಾಹಂದರದ ಚಿತ್ರದಲ್ಲಿ ಗಣೇಶ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಜನ್ಮದಿನದ ಅಂಗವಾಗಿ ಬಿಡುಗಡೆಯಾದ ಪೋಸ್ಟರ್ ಸಖತ್ ವೈರಲ್ ಆಗಿದೆ.

ಈ ಸಿನಮಾದ ಬಿಡುಗಡೆಯ ಬೆನ್ನಲ್ಲೇ, ಅಕ್ಟೋಬರ್ 16ರಂದು ಗಣೇಶ್ ನಟನೆಯ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಬೃಂದವಿಹಾರಿ’ ಬಿಡುಗಡೆಯಾಗಲಿದೆ. ಶ್ರೀನಿವಾಸ್ ರಾಜು ನಿರ್ದೇಶನದ ಹಾಗೂ ಸಮೃದ್ಧಿ ವಿ. ಮಂಜುನಾಥ್ ನಿರ್ಮಾಣದ ಈ ಚಿತ್ರವನ್ನು ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದೆ.

ಸಿನಿಪ್ರೇಮಿಗಳ ಆತಂಕ: ಬಾಕ್ಸ್ ಆಫೀಸ್ ಸವಾಲು ಒಂದೇ ತಿಂಗಳಲ್ಲಿ ಬ್ಯಾಕ್-ಟು-ಬ್ಯಾಕ್ ಸಿನಿಮಾಗಳು ಬರುತ್ತಿರುವುದು ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದ್ದರೂ, ಚಿತ್ರರಂಗದ ವಿಶ್ಲೇಷಕರು ಹಾಗೂ ಸಿನಿಪ್ರೇಮಿಗಳು ಕೊಂಚ ಆತಂಕ ವ್ಯಕ್ತಪಡಿಸಿದ್ದಾರೆ. ಎರಡು ಚಿತ್ರಗಳ ನಡುವೆ ಕನಿಷ್ಠ ಒಂದು ತಿಂಗಳ ಅಂತರವಿದ್ದಿದ್ದರೆ ಪ್ರಚಾರ, ಥಿಯೇಟರ್ ಹಂಚಿಕೆ ಹಾಗೂ ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಹೀಗಾಗಿ ಅಕ್ಟೋಬರ್ ಹಬ್ಬದ ಸೀಸನ್‌ನಲ್ಲಿ ಗೋಲ್ಡನ್ ಸ್ಟಾರ್ ಈ ಡಬಲ್ ಧಮಾಕಾ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

The post ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್‌ಡೇ ಧಮಾಕಾ: ಅಕ್ಟೋಬರ್‌ನಲ್ಲಿ ಅಭಿಮಾನಿಗಳಿಗೆ ಡಬಲ್ ಹಬ್ಬ! appeared first on Samyukta Karnataka.

ರೇಣುಕಾಸ್ವಾಮಿ ಕೊಲೆ ಕೇಸ್: ಸಾಕ್ಷಿದಾರನಿಗೆ ಬೆದರಿಕೆ ಹಾಕಿದ್ದ ದರ್ಶನ್ ಫ್ಯಾನ್ಸ್ ಬಂಧನ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪ್ರಮುಖ ಆರೋಪಿಯಾಗಿದ್ದಾರೆ. ಈಗ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಪ್ರಮುಖ ಸಾಕ್ಷಿದಾರ ಸಂದೀಪ್‌ಗೆ ಬೆದರಿಕೆ ಹಾಕಿದ ಆರೋಪದ ಮೇಲೆ ದರ್ಶನ್ ಮೂವರು ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪುನೀತ್, ವೇಣು ಮತ್ತು ಸುಹಾಸ್ ಎಂದು ಗುರುತಿಸಲಾಗಿದೆ.

ನ್ಯಾಯಾಲಯದ ಸಾಕ್ಷಿಗೆ ಅಡ್ಡಿಪಡಿಸಲು ಯತ್ನ: ತನಿಖಾ ಹಂತದಲ್ಲಿರುವ ಈ ಸೂಕ್ಷ್ಮ ಪ್ರಕರಣದಲ್ಲಿ ಸಾಕ್ಷಿ ನುಡಿಯದಂತೆ ತಮಗೆ ನಿರಂತರವಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ಸಾಕ್ಷಿದಾರ ಸಂದೀಪ್ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ತನಿಖೆಗೆ ಅಡ್ಡಿಪಡಿಸುತ್ತಿದ್ದ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

‘ಡಿ ಕಂಪನಿ’ ಪೇಜ್ ಅಡ್ಮಿನ್ ಬಂಧನ: ಬಂಧಿತರ ಪೈಕಿ ಪುನೀತ್ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ದರ್ಶನ್ ಅಭಿಮಾನಿ ಬಳಗದ ‘ಡಿ ಕಂಪನಿ’ (D Company) ಫ್ಯಾನ್ ಪೇಜ್‌ನ ಅಡ್ಮಿನ್ ಆಗಿದ್ದ ಎನ್ನಲಾಗಿದೆ. ಈತ ತನ್ನ ಇತರೆ ಇಬ್ಬರು ಸಹಚರರಾದ ವೇಣು ಮತ್ತು ಸುಹಾಸ್ ಜೊತೆಗೂಡಿ ಸಾಕ್ಷಿದಾರನ ಮೇಲೆ ಒತ್ತಡ ಹೇರಲು ಮತ್ತು ತನಿಖೆಯ ಹಾದಿ ತಪ್ಪಿಸಲು ಸಂಚು ರೂಪಿಸಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಒಟ್ಟಾರೆಯಾಗಿ.. ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಯುತ ತನಿಖೆಗೆ ಅಡ್ಡಿಪಡಿಸುವ ಮತ್ತು ಸಾಕ್ಷ್ಯ ನಾಶಪಡಿಸುವ ಇಂತಹ ಪ್ರಯತ್ನಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಮೂವರ ಬಂಧನದಿಂದಾಗಿ ಪ್ರಕರಣದ ತನಿಖೆಗೆ ಈಗ ಹೊಸ ಆಯಾಮ ಸಿಕ್ಕಂತಾಗಿದ್ದು, ಪೊಲೀಸರು ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

The post ರೇಣುಕಾಸ್ವಾಮಿ ಕೊಲೆ ಕೇಸ್: ಸಾಕ್ಷಿದಾರನಿಗೆ ಬೆದರಿಕೆ ಹಾಕಿದ್ದ ದರ್ಶನ್ ಫ್ಯಾನ್ಸ್ ಬಂಧನ appeared first on Samyukta Karnataka.

RCBಗೆ ಹೊಸ ಬಾಸ್: ಐಪಿಎಲ್ ಇತಿಹಾಸದಲ್ಲೇ ಮಹಾ ತಿರುವು; ₹16,660 ಕೋಟಿಗೆ ಬಿಗ್ ಡೀಲ್! ಇಲ್ಲಿದೇ ಡಿಟೇಲ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಐತಿಹಾಸಿಕ ಒಪ್ಪಂದವೊಂದಕ್ಕೆ ಭಾರತೀಯ ಸ್ಪರ್ಧಾ ಆಯೋಗ (CCI) ಅಧಿಕೃತ ಗ್ರೀನ್ ಸಿಗ್ನಲ್ ನೀಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಮಾಲೀಕತ್ವ ಹಸ್ತಾಂತರ ಪ್ರಕ್ರಿಯೆಗೆ ಜೂನ್ 30ರ ಮಂಗಳವಾರದಂದು ಸಿಸಿಐ ಅನುಮೋದನೆ ನೀಡಿದ್ದು, ಆರ್‌ಸಿಬಿ ತಂಡವು ಅಧಿಕೃತವಾಗಿ ಹೊಸ ಮಾಲೀಕರ ಕೈವಶಕ್ಕೆ ಸೇರಿದೆ.

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ಒಡೆತನದಲ್ಲಿದ್ದ RCB ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಪ್ರಭಾವಿ ಉದ್ಯಮಿಗಳ ಒಕ್ಕೂಟವು ಭಾರಿ ಮೊತ್ತಕ್ಕೆ ಖರೀದಿಸಿದೆ. ₹16,660 ಕೋಟಿ ರೂಪಾಯಿಗಳ ಈ ಸಂಪೂರ್ಣ ನಗದು ಒಪ್ಪಂದದ (All-Cash Deal) ಪ್ರಕ್ರಿಯೆಯು ಐಪಿಎಲ್‌ನ 19 ವರ್ಷಗಳ ಇತಿಹಾಸದಲ್ಲೇ ಅತ್ಯಂತ ದುಬಾರಿ ವ್ಯವಹಾರ ಎಂದು ದಾಖಲಾಗಿದೆ. ಇತ್ತೀಚೆಗಷ್ಟೇ ಐಪಿಎಲ್ ಮತ್ತು ಡಬ್ಲ್ಯೂಪಿಎಲ್ ಎರಡರಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದ್ದ RCB ತಂಡದ ಮೌಲ್ಯ ಈ ಒಪ್ಪಂದದಿಂದ ಗಗನಕ್ಕೇರಿದೆ.

ಹಾಗೇ ಈ ಬೃಹತ್ ಒಪ್ಪಂದದ ಅಡಿಯಲ್ಲಿ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್‌ನ ಶೇಕಡಾ 100ರಷ್ಟು ಷೇರುಗಳನ್ನು ವಿವಿಧ ಪ್ರಮುಖ ಸಂಸ್ಥೆಗಳನ್ನೊಳಗೊಂಡ ಒಕ್ಕೂಟ ಸ್ವಾಧೀನಪಡಿಸಿಕೊಂಡಿದೆ. ಇದರಲ್ಲಿ ಪ್ರಮುಖವಾಗಿ ಆದಿತ್ಯ ಬಿರ್ಲಾ ಗ್ರೂಪ್, ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ (ಟೈಮ್ಸ್ ಇಂಟರ್ನೆಟ್ / ಟೈಮ್ಸ್ ಕ್ರಿಕೆಟ್), ಬೋಲ್ಟ್ ವೆಂಚರ್ಸ್, ಜಾಗತಿಕ ಹೂಡಿಕೆ ಸಂಸ್ಥೆಯಾದ ಬ್ಲ್ಯಾಕ್‌ಸ್ಟೋನ್ ಸೇರಿದಂತೆ ಬಿಗ್ ಬನ್ಯನ್ ಹೋಲ್ಡಿಂಗ್ಸ್, ಐಸಿಕ್ಯೂ ಆಪರ್ಚುನಿಟೀಸ್ ಮತ್ತು ಏಷ್ಯಾ ಇನ್ವೆಸ್ಟ್‌ಮೆಂಟ್ ಟಾಪ್‌ಕೋ II ಕಂಪನಿಗಳು ಸಹ ಸೇರಿವೆ.

ಆರ್‌ಸಿಬಿಗೆ ಹೊಸ ನಾಯಕತ್ವ: ಮಾಲೀಕತ್ವ ಬದಲಾವಣೆಯ ಬೆನ್ನಲ್ಲೇ ಆರ್‌ಸಿಬಿ ತಂಡದ ಆಡಳಿತ ಮಂಡಳಿಯಲ್ಲೂ ಹೊಸ ಬದಲಾವಣೆಗಳಾಗಲಿವೆ. ಮಾಜಿ ವೃತ್ತಿಪರ ಕ್ರಿಕೆಟಿಗ ಹಾಗೂ ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕರೂ ಆಗಿರುವ ಆರ್ಯಮನ್ ವಿಕ್ರಮ್ ಬಿರ್ಲಾ RCB ಫ್ರಾಂಚೈಸಿಯ ನೂತನ ಚೇರ್ಮನ್ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹಾಗೆಯೇ ಟೈಮ್ಸ್ ಇಂಟರ್ನೆಟ್‌ನ ಸತ್ಯನ್ ಗಜ್ವಾನಿ, ವೈಸ್ ಚೇರ್ಮನ್ (Vice Chairman) ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹೊಸ ನಾಯಕತ್ವವು ಕ್ರಿಕೆಟ್ ಪ್ರೇಮಿಗಳು ಹಾಗೂ ಆರ್‌ಸಿಬಿ (RCB) ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

The post RCBಗೆ ಹೊಸ ಬಾಸ್: ಐಪಿಎಲ್ ಇತಿಹಾಸದಲ್ಲೇ ಮಹಾ ತಿರುವು; ₹16,660 ಕೋಟಿಗೆ ಬಿಗ್ ಡೀಲ್! ಇಲ್ಲಿದೇ ಡಿಟೇಲ್ಸ್ appeared first on Samyukta Karnataka.

ಡಿಸೇಬಲ್ಡ್ ಗಾಲ್ಫ್ ಮಾಸ್ಟರ್ಸ್: ಭಾರತದ ಗಾಲ್ಫ್ ಆಟಗಾರರಿಗೆ 2 ಪದಕ
ಜೆಕ್ ಗಣರಾಜ್ಯ: ಪ್ರೇಗ್‌ನಲ್ಲಿ ನಡೆದ ಪ್ರತಿಷ್ಠಿತ ‘ಜೆಕ್ ಡಿಸೇಬಲ್ಡ್ ಗಾಲ್ಫ್ ಮಾಸ್ಟರ್ಸ್ 2026’ ಟೂರ್ನಿಯಲ್ಲಿ ಭಾರತದ ಇಬ್ಬರು ವಿಶೇಷಚೇತನ ಗಾಲ್ಫ್ ಆಟಗಾರರು ಐತಿಹಾಸಿಕ ಸಾಧನೆ ಮಾಡಿದ್ದು, ಪೋಡಿಯಂ ಫಿನಿಶ್ ಸಾಧಿಸಿದ್ದು, ನೆಟ್ ಸ್ಟ್ರೋಕ್ ಪ್ಲೇ ವಿಭಾಗದಲ್ಲಿ ಈ ಯಶಸ್ಸು ಲಭಿಸಿದೆ. ನೋಯ್ಡಾದ ವಿಷ್ಣುವರ್ಧನ್ ಭಾಟಿ ಅವರು ಒಟ್ಟಾರೆ 2 ಅಂಡರ್ ಪಾರ್ ಸ್ಕೋರ್‌ನೊಂದಿಗೆ ದ್ವಿತೀಯ ಸ್ಥಾನ ಪಡೆದು ರನ್ನರ್-ಅಪ್ ಆದರು. ಮೊದಲ ಸುತ್ತಿನಲ್ಲಿ 6 ಅಂಡರ್ ಪಾರ್ ಸಾಧಿಸಿ ಅಗ್ರಸ್ಥಾನದಲ್ಲಿದ್ದ ಭಾಟಿ, ಅಂತಿಮ ಸುತ್ತಿನಲ್ಲಿ ತೀವ್ರ ಸೆಖೆಯ ನಡುವೆಯೂ ದ್ವಿತೀಯ ಸ್ಥಾನ ಕಾಯ್ದುಕೊಂಡರು. ಇನ್ನು ಬೆಂಗಳೂರಿನ ಅಂಕುಶ್ ಸಹಾ ಅವರು ಲೆವೆಲ್ ಪಾರ್ ಟೋಟಲ್‌ನೊಂದಿಗೆ ತೃತೀಯ ಸ್ಥಾನ ಮುಡಿಗೇರಿಸಿಕೊಂಡರು. ಮೊದಲ ಸುತ್ತಿನಲ್ಲಿ 10ನೇ ಸ್ಥಾನದಲ್ಲಿದ್ದ ಸಹಾ, ಎರಡನೇ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿ ಮೂರನೇ ಸ್ಥಾನಕ್ಕೆ ಜಿಗಿದರು. ಜೆಕ್ ಗಣರಾಜ್ಯದ ತೆರೇಸಾ ಟೂರ್ನಿಯಲ್ಲಿ ವಿಜೇತರಾದರು.

ಭಾರತದಲ್ಲಿ ಅಡಾಪ್ಟಿವ್ ಗಾಲ್ಫ್ ಅಲೈಯನ್ಸ್ ಫೌಂಡೇಶನ್ ಇತ್ತೀಚೆಗೆ ಈ ಕ್ರೀಡೆಗೆ ನೀಡುತ್ತಿರುವ ಬೆಂಬಲದಿoದಾಗಿ ಆಟಗಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಜೆನೆಸಿಸ್ ಐಟಿ ಇನ್ನೋವೇಷನ್ಸ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಭಾಟಿ ಮತ್ತು ಸಹಾ ಈ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಭಾರತೀಯ ಆಟಗಾರರ ಈ ಜಯ ಮುಂಬರುವ ದಿನಗಳಲ್ಲಿ ದೇಶದಲ್ಲಿ ಅಡಾಪ್ಟಿವ್ ಗಾಲ್ಫ್ ಬೆಳವಣಿಗೆಗೆ ದೊಡ್ಡ ಪ್ರೇರಣೆಯಾಗಿದೆ.

ಈ ಬಗ್ಗೆ ಮಾತಾಡಿರುವ ಅಡಾಪ್ಟಿವ್ ಗಾಲ್ಫ್ ಅಲಯನ್ಸ್ ಫೌಂಡೇಶನ್ ನಿರ್ದೇಶಕ ಹಾಗೂ ಟಿಎಆರ್‌ಎಸ್ ಲೆವೆಲ್ 3 ನಿಯಮಗಳ ಅಧಿಕಾರಿ ಚಂದ್ರಶೇಖರ್ ಕಿನಿ “ಗಾಲ್ಫ್ ಕೇವಲ ಒಂದು ಕ್ರೀಡೆಯಲ್ಲ, ಅದು ಅತ್ಯಂತ ಒಳಗೊಳ್ಳುವಿಕೆ ಹೊಂದಿರುವ ಅದ್ಭುತ ಆಟವಾಗಿದೆ. ವಿಶೇಷ ಚೇತನರು ಮಾತ್ರವಲ್ಲದೆ, ಈ ಕ್ರೀಡೆಯನ್ನು ಅಳವಡಿಸಿಕೊಳ್ಳುವ ಪ್ರತಿಯೊಬ್ಬರ ಜೀವನದ ಮೇಲೂ ಇದು ಸಕಾರಾತ್ಮಕ ಪ್ರಭಾವ ಬೀರಬಲ್ಲದು.” ಎಂದು ತಿಳಿಸಿದ್ದಾರೆ.

The post ಡಿಸೇಬಲ್ಡ್ ಗಾಲ್ಫ್ ಮಾಸ್ಟರ್ಸ್: ಭಾರತದ ಗಾಲ್ಫ್ ಆಟಗಾರರಿಗೆ 2 ಪದಕ appeared first on Samyukta Karnataka.

IMDbಯಲ್ಲಿ ಯಶ್ ದರ್ಬಾರ್: ಮೊದಲ ಮೂರು ಸ್ಥಾನಗಳಲ್ಲಿ ‘ರಾಕಿಂಗ್ ಸ್ಟಾರ್’ ಎರಡು ಸಿನಿಮಾಗಳು!
ಬೆಂಗಳೂರು: ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಕ್ರೇಜ್ ದಿನದಿಂದ ದಿನಕ್ಕೆ ದೇಶಾದ್ಯಂತ ಹೊಸ ದಾಖಲೆ ಬರೆಯುತ್ತಿದೆ. ‘ಕೆಜಿಎಫ್’ ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಇಡೀ ಭಾರತೀಯ ಚಿತ್ರರಂಗವೇ ಯಶ್ ಮುಂದಿನ ಸಿನಿಮಾಗಳಿಗಾಗಿ ಕಾತರದಿಂದ ಕಾಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಪ್ರಮುಖ ಸಿನಿ ವೆಬ್‌ಸೈಟ್ ಐಎಮ್‌ಡಿಬಿ (IMDb) ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಭಾರತದ ಅತಿ ಹೆಚ್ಚು ನಿರೀಕ್ಷಿತ ಚಲನಚಿತ್ರಗಳ’ ಪಟ್ಟಿಯಲ್ಲಿ ಯಶ್ ನಟನೆಯ ಸಿನಿಮಾಗಳು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಮುಂಬರುವ ಚಿತ್ರವನ್ನೇ ಹಿಂದಿಕ್ಕಿ ಅಗ್ರಸ್ಥಾನ ಪಡೆದುಕೊಂಡಿವೆ.

ಈ ವರ್ಷ ಬಿಡುಗಡೆಯಾಗಲಿರುವ ಸಿನಿಮಾಗಳ ಈ ಪಟ್ಟಿಯಲ್ಲಿ, ಯಶ್ ಅಭಿನಯದ ಎರಡು ಬಹುದೊಡ್ಡ ಚಿತ್ರಗಳು ಮೊದಲ ಮೂರು ಸ್ಥಾನಗಳಲ್ಲಿ ಗುರುತಿಸಿಕೊಂಡಿವೆ. ರಣಬೀರ್‌ ಕಪೂರ್ ಮತ್ತು ಯಶ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ ಮೊದಲ ಸ್ಥಾನವನ್ನು ಅಲಂಕರಿಸಿದೆ. ಈ ಚಿತ್ರದಲ್ಲಿ ಯಶ್ ಲಂಕೇಶ್ವರ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆಲಿಯಾ ಭಟ್ ಹಾಗೂ ಶರ್ವರಿ ವಾಘ್ ನಟನೆಯ ಸ್ಪೈ ಆಕ್ಷನ್ ಥ್ರಿಲ್ಲರ್ ‘ಆಲ್ಫಾ’ ದ್ವಿತೀಯ ಸ್ಥಾನದಲ್ಲಿದೆ.

ವಿಶೇಷವೆಂದರೆ, ಯಶ್ ನಾಯಕನಾಗಿ ನಟಿಸುತ್ತಿರುವ, ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಆ ಮೂಲಕ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಸುಹಾನಾ ಖಾನ್ ನಟನೆಯ ‘ಕಿಂಗ್’ ಚಿತ್ರವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿ ಯಶ್ ಸಿನಿಮಾಗಳು ಮುನ್ನಡೆ ಸಾಧಿಸಿವೆ.

ಪಟ್ಟಿಯ ಉಳಿದ ಸ್ಥಾನಗಳಲ್ಲಿ ಅಜಯ್ ದೇವಗನ್ ‘ಧಮಾಲ್ 4’ (ಐದನೇ ಸ್ಥಾನ) ಹಾಗೂ ‘ದೃಶ್ಯಂ 3’ (ಆರನೇ ಸ್ಥಾನ) ಇವೆ. ಉಳಿದಂತೆ ಸೂರ್ಯ ನಟನೆಯ ‘ವಿಶ್ವನಾಥ್ ಆಂಡ್ ಸನ್ಸ್’, ವಿಜಯ್ ದೇವರಕೊಂಡ ‘ರಣಬಲಿ’ ಹಾಗೂ ತಮಿಳು ನಟ ವಿಜಯ್ ಪುತ್ರ ನಿರ್ದೇಶಿಸಿರುವ ‘ಸಿಗ್ಮಾ’ ಚಿತ್ರಗಳು ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಒಟ್ಟಾರೆಯಾಗಿ, ಈ ವರ್ಷ ಬಿಡುಗಡೆಯಾಗಲಿರುವ ಭಾರತೀಯ ಸಿನಿಮಾಗಳ ರೇಸ್‌ನಲ್ಲಿ ಸದ್ಯಕ್ಕೆ ‘ರಾಕಿ ಭಾಯ್’ ಯಶ್‌ದ್ದೇ ಮೇಲುಗೈಯಾಗಿದೆ.

The post IMDbಯಲ್ಲಿ ಯಶ್ ದರ್ಬಾರ್: ಮೊದಲ ಮೂರು ಸ್ಥಾನಗಳಲ್ಲಿ ‘ರಾಕಿಂಗ್ ಸ್ಟಾರ್’ ಎರಡು ಸಿನಿಮಾಗಳು! appeared first on Samyukta Karnataka.

ಮಾಜಿ ಸಿಎಂ ಸಿದ್ದು ಎದರು ಶಾಸಕ ಪ್ರದೀಪ್‌ ಈಶ್ವರ್‌ ಕಣ್ಣಿರು: ಚಪ್ಪಲಿ ಎಸೆತ ಪ್ರಕರಣ; ತನಿಖೆಗೆ ಆದೇಶ
ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ, ಮಾಜಿ ಸಿಎಂ ಎದುರು ಕಣ್ಣೀರು ಹಾಕಿದ ಘಟನೆ ನಡೆದಿದೆ. ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ನಿಂದಿಸಿ, ಚಪ್ಪಲಿ ಎಸೆದಿರುವ ಕುರಿತು ಪ್ರದೀಪ್ ಈಶ್ವರ್ ಭಾವುಕರಾಗಿ ವಿವರಿಸಿದ್ದಾರೆ. ಈ ವೇಳೆ ಶಾಸಕರಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ, “ರಾಜಕಾರಣದಲ್ಲಿ ಇಂತಹ ಘಟನೆಗಳು ಸಾಮಾನ್ಯ, ಧೃತಿಗೆಡದೆ ಎದುರಿಸಬೇಕು, ನಾವು ನಿಮ್ಮೊಂದಿಗಿದ್ದೇವೆ” ಎಂದು ಸಾಂತ್ವನ ಹೇಳಿದ್ದಾರೆ.

ನಂತರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದರಾಮಯ್ಯ, ಗೃಹ ಸಚಿವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಆಡಳಿತ ಪಕ್ಷದ ಶಾಸಕರ ಮೇಲೆ ಇಂತಹ ದಾಳಿ ನಡೆದಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಪ್ರಿಯಾಂಕ್ ಖರ್ಗೆಗೆ ಸೂಚಿಸಿದ್ದಾರೆ. ಹಾಗೇ ಕರ್ತವ್ಯ ಲೋಪ ಎಸಗಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಮತ್ತೊಂದೆಡೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಎಕ್ಸ್’ (ಟ್ವಿಟರ್) ಮೂಲಕ ವಿರೋಧ ಪಕ್ಷಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಸಾರ್ವಜನಿಕವಾಗಿ ಸೋತಾಗ ಸಭ್ಯತೆಯೂ ಸತ್ತುಹೋಗುತ್ತದೆ. ಯುವ ನಾಯಕನ ಜನಪ್ರಿಯತೆ ಜೀರ್ಣಿಸಿಕೊಳ್ಳಲಾಗದೆ ನಡೆಸಿರುವ ಈ ನೀಚ ಕೃತ್ಯವು ವಿಪಕ್ಷಗಳ ಹತಾಶೆ ಹಾಗೂ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಇಂತಹ ಹಿಂಸಾತ್ಮಕ ದಾಳಿಗಳಿಂದ ನಮ್ಮ ನಾಯಕರು ಧೃತಿಗೆಡುವುದಿಲ್ಲ, ಬದಲಾಗಿ ಹೋರಾಟದ ಹಾದಿ ಮತ್ತಷ್ಟು ಗಟ್ಟಿಯಾಗುತ್ತದೆ” ಎಂದು ಕಿಡಿಕಾರಿದ್ದಾರೆ.

“ಇದು ಬಸವಣ್ಣ, ಕುವೆಂಪು ಅಂತಹ ಶಾಂತಿಪ್ರಿಯ ಕರ್ನಾಟಕ. ಇಲ್ಲಿ ಇಂತಹ ವಿಕೃತ, ಹಿಂಸಾತ್ಮಕ ಪುಂಡಾಟಿಕೆಗಳಿಗೆ ಜಾಗವಿಲ್ಲ. ಸಾರ್ವಜನಿಕ ಸಭ್ಯತೆಯ ಗಡಿ ದಾಟಿದ ಪ್ರತಿಯೊಬ್ಬರ ವಿರುದ್ಧವೂ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ,” ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ.

The post ಮಾಜಿ ಸಿಎಂ ಸಿದ್ದು ಎದರು ಶಾಸಕ ಪ್ರದೀಪ್‌ ಈಶ್ವರ್‌ ಕಣ್ಣಿರು: ಚಪ್ಪಲಿ ಎಸೆತ ಪ್ರಕರಣ; ತನಿಖೆಗೆ ಆದೇಶ appeared first on Samyukta Karnataka.

ರಾಷ್ಟ್ರಪತಿ ಅಂಗರಕ್ಷಕನ ಅಂದಕ್ಕೆ ಯುವತಿಯರು ಫಿದಾ: ನೆಟ್ಟಿಗರ ಮನಗೆದ್ದ ಯುವ ಅಧಿಕಾರಿ!
ನವದೆಹಲಿ: ಸಾಮಾನ್ಯವಾಗಿ ದೇಶದ ಪ್ರಮುಖ ಗಣ್ಯರು ಅಥವಾ ಸಿನಿಮಾ ತಾರೆಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ರಕ್ಷಣೆಗೆ ನಿಯೋಜನೆಗೊಂಡಿರುವ ಬಾಡಿಗಾರ್ಡ್‌ಗಳು (ಅಂಗರಕ್ಷಕರು) ಜನರ ಗಮನ ಸೆಳೆಯುವುದು ಸಹಜ. ಆದ್ರೆ ಸದ್ಯ ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಗರಕ್ಷಕರೊಬ್ಬರು ತಮ್ಮ ಆಕರ್ಷಕ ವ್ಯಕ್ತಿತ್ವ ಹಾಗೂ ಅಪ್ರತಿಮ ಅಂದದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದಾರೆ.

ರಾಷ್ಟ್ರಪತಿಗಳ ಅಂಗರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್ ಈಗ ಇಂಟರ್ನೆಟ್‌ನಲ್ಲಿ ತಲ್ಲಣ ಮೂಡಿಸಿರುವ ಯುವ ಅಧಿಕಾರಿ. ರಾಷ್ಟ್ರಪತಿಗಳು ಪಾಲ್ಗೊಳ್ಳುವ ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಇವರ ಗಂಭೀರ ನೋಟ ಮತ್ತು ಹ್ಯಾಂಡ್ಸಮ್ ಲುಕ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಯುವತಿಯರು ಫಿದಾ ಆಗಿದ್ದಾರೆ.

ಹಾಗೇ ವಿವಿಧ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಗಳು ಆಗಮಿಸಿದಾಗ, ಅಲ್ಲಿ ನೆರೆದಿರುವ ಯುವತಿಯರು ರಾಷ್ಟ್ರಪತಿಗಳಿಗಿಂತ ಹೆಚ್ಚಾಗಿ ಈ ಯುವ ಅಧಿಕಾರಿಯನ್ನು ನೋಡಲು ಮುಗಿಬೀಳುತ್ತಿದ್ದಾರೆ ಎನ್ನಲಾಗಿದೆ. ಈಗ ಪರಿಸ್ಥಿತಿ ಎಲ್ಲಿಗೆ ಬಂದು ತಲುಪಿದೆ ಎಂದರೆ, ಮೇಜರ್ ರಿಷಬ್ ಸಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ಸೆಲ್ಫಿ ತೆಗೆದುಕೊಳ್ಳಲು ಮತ್ತು ಹತ್ತಿರದಿಂದ ನೋಡಲು ಯುವತಿಯರ ದಂಡೇ ಮುತ್ತಿಗೆ ಹಾಕುತ್ತಿದೆ. ಯುವತಿಯರ ಈ ಅತಿಯಾದ ಕ್ರೇಜ್‌ನಿಂದಾಗಿ ಸ್ವತಃ ಅಂಗರಕ್ಷಕರೇ ಮುಜುಗರಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಯೊಬ್ಬರ ಅಂದಕ್ಕೆ ಸಾರ್ವಜನಿಕರು ಈ ಪರಿ ಮನಸೋತಿರುವುದನ್ನು ಕಂಡು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. “ರಾಷ್ಟ್ರಪತಿಗಳಿಗೆ ಭದ್ರತೆ ನೀಡುವ ಈ ಬಾಡಿಗಾರ್ಡ್‌ಗೆ ಯುವತಿಯರಿಂದ ರಕ್ಷಣೆ ಪಡೆಯಲು ಈಗ ಮತ್ತೊಬ್ಬ ಬಾಡಿಗಾರ್ಡ್ ಬೇಕಾಗಿದೆ” ಎಂದು ನೆಟ್ಟಿಗರು ತಮಾಷೆಯಾಗಿ ಚರ್ಚಿಸುತ್ತಿದ್ದಾರೆ.

ಒಟ್ಟಾರೆ.. ಮೇಜರ್ ರಿಷಬ್ ಸಿಂಗ್ ಈ ಸೆಲೆಬ್ರಿಟಿ ಮಾದರಿಯ ಜನಪ್ರಿಯತೆ ಸದ್ಯ ದೇಶಾದ್ಯಂತ ಭಾರಿ ಸುದ್ದಿಯಾಗುತ್ತಿದೆ.

The post ರಾಷ್ಟ್ರಪತಿ ಅಂಗರಕ್ಷಕನ ಅಂದಕ್ಕೆ ಯುವತಿಯರು ಫಿದಾ: ನೆಟ್ಟಿಗರ ಮನಗೆದ್ದ ಯುವ ಅಧಿಕಾರಿ! appeared first on Samyukta Karnataka.

ಅಂಕಿ-ಅಂಶಗಳಿಲ್ಲದೆ ಬಂದ ಆಫೀಸರ್ಸ್: ಜಿಬಿಎ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ತರಾಟೆ
ಬೆಂಗಳೂರು: ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂತಾನಹರಣ ಹಾಗೂ ಗಿಡ ನೆಡುವ ಯೋಜನೆಗಳಿಗೆ ಸಂಬಂಧಿಸಿದಂತೆ ಸೂಕ್ತ ಅಂಕಿ-ಅಂಶಗಳಿಲ್ಲದೆ ಜಿಬಿಎ (GBA) ಸಭೆಗೆ ಬಂದಿದ್ದ ಅಧಿಕಾರಿಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ಪಶುಸಂಗೋಪನೆ ಇಲಾಖೆಯಲ್ಲಿ 19 ಜನ ಅಧಿಕಾರಿಗಳಿದ್ದರೂ ಸಭೆಗೆ ಕನಿಷ್ಠ ಡಾಟಾವೂ ಇಲ್ಲದೆ ಬಂದಿದ್ದೀರಾ? ನಾನೇನು ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ?” ಎಂದು ಕಿಡಿ ಕಾರಿದ್ದಾರೆ.

ಹಾಗೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನಗರದಲ್ಲಿ ಕಳೆದ 50 ವರ್ಷಗಳಿಂದ ಬೀದಿ ನಾಯಿಗಳ ಸಮಸ್ಯೆ ಇದೆ. ಬಿಬಿಎಂಪಿ ರಚನೆಯಾದ ಬಳಿಕ 8.80 ಲಕ್ಷ ಹಾಗೂ 2016 ರಿಂದ 2023ರ ಅವಧಿಯಲ್ಲಿ 3.33 ಲಕ್ಷ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ 2019ರ ಸರ್ವೆ ಪ್ರಕಾರ 3.10 ಲಕ್ಷ ಹಾಗೂ 2023ರ ಸರ್ವೆ ಪ್ರಕಾರ ನಗರದಲ್ಲಿ ಕೇವಲ 2.79 ಲಕ್ಷ ಬೀದಿ ನಾಯಿಗಳಿವೆ. ಅಧಿಕಾರಿಗಳ ಲೆಕ್ಕಾಚಾರ ನೋಡಿದರೆ ಇರುವ ನಾಯಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ನಡೆದಂತಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಇದಕ್ಕಾಗಿ 42 ಕೋಟಿ ರೂ. ಜನರ ತೆರಿಗೆ ಹಣ ಖರ್ಚಾಗಿದ್ದರೂ, ನಾಯಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸಂತಾನಹರಣ ಚಿಕಿತ್ಸೆಯ ಸಂಖ್ಯೆಯನ್ನು ದ್ವಿಗುಣಗೊಳಿಸಲು ಮತ್ತು ಅಗತ್ಯವಿದ್ದರೆ ಹೊರಗುತ್ತಿಗೆ ಸಿಬ್ಬಂದಿ ಬಳಸಿಕೊಳ್ಳಲು ಸೂಚಿಸಿದ್ದಾರೆ.

ನಂತರ ಇದೇ ವೇಳೆ ಗಿಡ ನೆಡುವ ಯೋಜನೆಯಲ್ಲೂ ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. 2008ರಿಂದ 20 ಲಕ್ಷ ಗಿಡ ನೆಟ್ಟಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ, ಆದ್ರೆ ಮರಗಣತಿ ಪ್ರಕಾರ ನಗರದಲ್ಲಿ ಇರುವುದು ಕೇವಲ 9 ಲಕ್ಷ ಮರಗಳು ಮಾತ್ರ. ಹಾಗಾದರೆ ಉಳಿದ ಗಿಡಗಳು ಎಲ್ಲಿ ಹೋದವು ಎಂದು ಸಚಿವರು ಪ್ರಶ್ನಿಸಿದರು. ಒಂದು ಗಿಡ ನೆಟ್ಟು 3 ವರ್ಷ ನಿರ್ವಹಣೆ ಮಾಡಲು 2,300 ರೂ. ನಿಂದ 3,300 ರೂ. ವೆಚ್ಚ ಮಾಡಲಾಗುತ್ತದೆ. ನಿಯಮದ ಪ್ರಕಾರ ಗುಂಡಿ ತೋಡಿ ಗಿಡ ನೆಡಬೇಕು, ಆದರೆ ನನ್ನ ಸ್ವಂತ ಕ್ಷೇತ್ರದಲ್ಲೇ ಇಂತಹ ಕಾಮಗಾರಿ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳುವ ಮೂಲಕ ವ್ಯವಸ್ಥೆಯನ್ನು ಸಂಪೂರ್ಣ ಸರಿಪಡಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

The post ಅಂಕಿ-ಅಂಶಗಳಿಲ್ಲದೆ ಬಂದ ಆಫೀಸರ್ಸ್: ಜಿಬಿಎ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ತರಾಟೆ appeared first on Samyukta Karnataka.

ವೇದಿಕೆ ಮೇಲೆಯೇ ನಟಿ ಶ್ರೀಲೀಲಾಗೆ ಅಸಭ್ಯವಾಗಿ ಸನ್ನೆ ಮಾಡಿದ ಅಮೃತಾ ಫಡ್ನವೀಸ್: ವಿಡಿಯೋ ವೈರಲ್
ಮುಂಬೈ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಸ್ಯಾಂಡ್‌ಲ್‌ವುಡ್‌ನ ಖ್ಯಾತ ನಟಿ ಶ್ರೀಲೀಲಾಗೆ ಮಹಾರಾಷ್ಟ್ರ ಮುಖ್ಯಮಂತ್ರಿಯವರ ಪತ್ನಿ ಅಮೃತಾ ಫಡ್ನವೀಸ್ ಅವಮಾನ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ, ಪ್ರಸ್ತುತ ಟಾಲಿವುಡ್‌ನ ಬಹುಬೇಡಿಕೆಯ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡಿರುವ ಶ್ರೀಲೀಲಾಗೆ ವೇದಿಕೆಯ ಮೇಲೆಯೇ ಈ ಕಹಿ ಅನುಭವ ಉಂಟಾಗಿದೆ.

ಜೂನ್ 21ರಂದು ಮುಂಬೈನಲ್ಲಿ ನಡೆದ ಯೋಗ ದಿನದ ವಿಶೇಷ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ, ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಫಡ್ನವೀಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಶ್ರೀಲೀಲಾ, ಯೋಗಾಸನಗಳನ್ನು ಪ್ರದರ್ಶಿಸಿದ್ದಲ್ಲದೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕುರಿತು ಉಪಯುಕ್ತ ಸಂದೇಶಗಳನ್ನು ಹಂಚಿಕೊಂಡಿದ್ದರು. ಆದ್ರೆ ಕಾರ್ಯಕ್ರಮದ ಕೊನೆಯಲ್ಲಿ ನಡೆದ ಘಟನೆಯು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಯೋಗ ಪ್ರದರ್ಶನದ ನಂತರ ಅಮೃತಾ ಫಡ್ನವೀಸ್, ಮತ್ತು ಮಗಳು ಹಾಗೂ ನಟಿ ಶ್ರೀಲೀಲಾ ಮೂವರೂ ಮಾಧ್ಯಮಗಳಿಗೆ ಜಂಟಿಯಾಗಿ ಫೋಟೋ ನೀಡುತ್ತಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಸಿಎಂ ಪತ್ನಿ ಮತ್ತು ಅವರ ಮಗಳ ಫೋಟೋವನ್ನು ಮಾತ್ರ ಪ್ರತ್ಯೇಕವಾಗಿ ಸೆರೆಹಿಡಿಯಲು ಬಯಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅಮೃತಾ ಫಡ್ನವೀಸ್, ಪಕ್ಕದಲ್ಲೇ ಇದ್ದ ಶ್ರೀಲೀಲಾಗೆ ಕನಿಷ್ಠ ಸೌಜನ್ಯವನ್ನೂ ತೋರದೆ, ಕೇವಲ ಕೈಬೆರಳಿನ ಸನ್ಮೆಯ ಮೂಲಕ ಪಕ್ಕಕ್ಕೆ ಸರಿಯುವಂತೆ ಅಸಭ್ಯವಾಗಿ ಸೂಚಿಸಿದರು.

ಒಟ್ಟಾರೆಯಾಗಿ.. ಈ ವರ್ತನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಶ್ರೀಲೀಲಾ ಅಭಿಮಾನಿಗಳು ಹಾಗೂ ನೆಟ್ಟಿಗರು ಅಮೃತಾ ಫಡ್ನವೀಸ್ ಅಹಂಕಾರದ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗೆ ಇಂತಹ ದುರಹಂಕಾರ ಶೋಭಿಸುವುದಿಲ್ಲ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

The post ವೇದಿಕೆ ಮೇಲೆಯೇ ನಟಿ ಶ್ರೀಲೀಲಾಗೆ ಅಸಭ್ಯವಾಗಿ ಸನ್ನೆ ಮಾಡಿದ ಅಮೃತಾ ಫಡ್ನವೀಸ್: ವಿಡಿಯೋ ವೈರಲ್ appeared first on Samyukta Karnataka.