surasura Archives - Samyukta Karnataka

ಬುಡಕಟ್ಟು ಸೊಗಡಿನ ‘ಸುರ ಸುರ’ ವೈಭವ: ಪೌರಾಣಿಕ ಹಿನ್ನೆಲೆಯ ‘ನಾಗಬಂಧಂ’ ಚಿತ್ರದ ಎರಡನೇ ಹಾಡು ಔಟ್
ಅಭಿಷೇಕ್ ನಾಮ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ನಾಗಬಂಧಂ: ದಿ ಸೀಕ್ರೆಟ್ ಟ್ರೆಷರ್’ ತನ್ನ ಎರಡನೇ ಹಾಡಿನ ಮೂಲಕ ಸಿನಿರಸಿಕರಲ್ಲಿ ಭಾರಿ ಸಂಚಲನ ಮೂಡಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಸುರ ಸುರ’ ಎಂಬ ಈ ಸೆಲೆಬ್ರೇಷನ್ ಸಾಂಗ್‌ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನಟ ವಿರಾಟ್ ಕರ್ಣ ಮಾಸ್ ಸ್ಟೆಪ್ಸ್‌ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

ಹಾಗೇ ಈ ಹಾಡು ಸಾಂಪ್ರದಾಯಿಕ ಮತ್ತು ಬುಡಕಟ್ಟು ಶೈಲಿಯ ವಿವಾಹದ ಸಂಭ್ರಮವನ್ನು ಸಾರುವ ಪಕ್ಕಾ ಹಬ್ಬದ ಹಾಡಾಗಿದೆ. ಜುನೈದ್ ಕುಮಾರ್ ಮತ್ತು ಅಭೆ ಸಂಯೋಜಿಸಿರುವ ಈ ಹಾಡಿನಲ್ಲಿ ಜಾನಪದ ಧ್ವನಿಗಳ ಅದ್ಭುತ ಸಮ್ಮಿಲನವಿದೆ. ಅನುರಾಗ್ ಕುಲಕರ್ಣಿ, ಕಾಲ ಭೈರವ, ಮಂಗಳಿ ಹಾಗೂ ಕನಕವ್ವರಂತಹ ಘಟಾನುಘಟಿಗಳ ದೈತ್ಯ ಪ್ರತಿಭೆಗಳ ಗಾಯನವು ಹಾಡಿನ ಗತ್ತನ್ನು ಇನ್ನಷ್ಟು ಹೆಚ್ಚಿಸಿದೆ. ಚಿತ್ರದ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯನ್ನು ಈ ದೃಶ್ಯಾವಳಿಗಳು ರಾರಾಜಿಸಿವೆ.

ಅಷ್ಟೇ ಅಲ್ಲ.. ಬಾಲಿವುಡ್‌ನ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಬೃಹತ್ ಸೆಟ್‌ಗಳು ಮತ್ತು ನೂರಾರು ಕಲಾವಿದರ ನಡುವೆ ವಿರಾಟ್ ಕರ್ಣ ತಮ್ಮ ಚುರುಕಿನ ನೃತ್ಯದ ಮೂಲಕ ಮಿಂಚಿದ್ದಾರೆ. ಚಿತ್ರದ ನಾಯಕಿಯರಾದ ನಭಾ ನಟೇಶ್ ಮತ್ತು ಐಶ್ವರ್ಯ ಮೆನನ್ ಗ್ಲಾಮರ್ ಮತ್ತು ಸಾಂಪ್ರದಾಯಿಕ ಉಡುಗೆಯ ಮೂಲಕ ಹಾಡಿಗೆ ಹೊಸ ಮೆರುಗು ನೀಡಿದ್ದಾರೆ.

ಈಗಾಗಲೇ ಬಿಡುಗಡೆಯಾಗಿದ್ದ ‘ನಮೋ ರೇ’ ಹಾಡು ಭಕ್ತಿ ಭಾವ ಮೂಡಿಸಿದ್ದರೆ, ಈಗಿನ ‘ಸುರ ಸುರ’ ಹಾಡು ಮಾಸ್ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಒಟ್ಟಾರೆಯಾಗಿ, ‘ನಾಗಬಂಧಂ’ ಕೇವಲ ಸಿನಿಮಾ ಮಾತ್ರವಲ್ಲದೆ, ಒಂದು ದೃಶ್ಯ ವೈಭವದ ಹಬ್ಬವಾಗಲಿದೆ ಎಂಬ ಭರವಸೆಯನ್ನು ನೀಡಿದೆ. ಸದ್ಯಕ್ಕೆ ‘ಸುರ ಸುರ’ ಲಿರಿಕಲ್ ವಿಡಿಯೋ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಸಿನಿಮಾದ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.

The post ಬುಡಕಟ್ಟು ಸೊಗಡಿನ ‘ಸುರ ಸುರ’ ವೈಭವ: ಪೌರಾಣಿಕ ಹಿನ್ನೆಲೆಯ ‘ನಾಗಬಂಧಂ’ ಚಿತ್ರದ ಎರಡನೇ ಹಾಡು ಔಟ್ appeared first on Samyukta Karnataka.