#Sreeleela Archives - Samyukta Karnataka

ವೇದಿಕೆ ಮೇಲೆಯೇ ನಟಿ ಶ್ರೀಲೀಲಾಗೆ ಅಸಭ್ಯವಾಗಿ ಸನ್ನೆ ಮಾಡಿದ ಅಮೃತಾ ಫಡ್ನವೀಸ್: ವಿಡಿಯೋ ವೈರಲ್
ಮುಂಬೈ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಸ್ಯಾಂಡ್‌ಲ್‌ವುಡ್‌ನ ಖ್ಯಾತ ನಟಿ ಶ್ರೀಲೀಲಾಗೆ ಮಹಾರಾಷ್ಟ್ರ ಮುಖ್ಯಮಂತ್ರಿಯವರ ಪತ್ನಿ ಅಮೃತಾ ಫಡ್ನವೀಸ್ ಅವಮಾನ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ, ಪ್ರಸ್ತುತ ಟಾಲಿವುಡ್‌ನ ಬಹುಬೇಡಿಕೆಯ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡಿರುವ ಶ್ರೀಲೀಲಾಗೆ ವೇದಿಕೆಯ ಮೇಲೆಯೇ ಈ ಕಹಿ ಅನುಭವ ಉಂಟಾಗಿದೆ.

ಜೂನ್ 21ರಂದು ಮುಂಬೈನಲ್ಲಿ ನಡೆದ ಯೋಗ ದಿನದ ವಿಶೇಷ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ, ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಫಡ್ನವೀಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಶ್ರೀಲೀಲಾ, ಯೋಗಾಸನಗಳನ್ನು ಪ್ರದರ್ಶಿಸಿದ್ದಲ್ಲದೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕುರಿತು ಉಪಯುಕ್ತ ಸಂದೇಶಗಳನ್ನು ಹಂಚಿಕೊಂಡಿದ್ದರು. ಆದ್ರೆ ಕಾರ್ಯಕ್ರಮದ ಕೊನೆಯಲ್ಲಿ ನಡೆದ ಘಟನೆಯು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಯೋಗ ಪ್ರದರ್ಶನದ ನಂತರ ಅಮೃತಾ ಫಡ್ನವೀಸ್, ಮತ್ತು ಮಗಳು ಹಾಗೂ ನಟಿ ಶ್ರೀಲೀಲಾ ಮೂವರೂ ಮಾಧ್ಯಮಗಳಿಗೆ ಜಂಟಿಯಾಗಿ ಫೋಟೋ ನೀಡುತ್ತಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಸಿಎಂ ಪತ್ನಿ ಮತ್ತು ಅವರ ಮಗಳ ಫೋಟೋವನ್ನು ಮಾತ್ರ ಪ್ರತ್ಯೇಕವಾಗಿ ಸೆರೆಹಿಡಿಯಲು ಬಯಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅಮೃತಾ ಫಡ್ನವೀಸ್, ಪಕ್ಕದಲ್ಲೇ ಇದ್ದ ಶ್ರೀಲೀಲಾಗೆ ಕನಿಷ್ಠ ಸೌಜನ್ಯವನ್ನೂ ತೋರದೆ, ಕೇವಲ ಕೈಬೆರಳಿನ ಸನ್ಮೆಯ ಮೂಲಕ ಪಕ್ಕಕ್ಕೆ ಸರಿಯುವಂತೆ ಅಸಭ್ಯವಾಗಿ ಸೂಚಿಸಿದರು.

ಒಟ್ಟಾರೆಯಾಗಿ.. ಈ ವರ್ತನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಶ್ರೀಲೀಲಾ ಅಭಿಮಾನಿಗಳು ಹಾಗೂ ನೆಟ್ಟಿಗರು ಅಮೃತಾ ಫಡ್ನವೀಸ್ ಅಹಂಕಾರದ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗೆ ಇಂತಹ ದುರಹಂಕಾರ ಶೋಭಿಸುವುದಿಲ್ಲ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

The post ವೇದಿಕೆ ಮೇಲೆಯೇ ನಟಿ ಶ್ರೀಲೀಲಾಗೆ ಅಸಭ್ಯವಾಗಿ ಸನ್ನೆ ಮಾಡಿದ ಅಮೃತಾ ಫಡ್ನವೀಸ್: ವಿಡಿಯೋ ವೈರಲ್ appeared first on Samyukta Karnataka.