sports Archives - Samyukta Karnataka

ಕಾಮನ್‌ವೆಲ್ತ್ ಕ್ರೀಡಾಕೂಟ: ಜಾವೆಲಿನ್ ಫೈನಲ್‌ಗೆ ನೀರಜ್ ಪ್ರವೇಶ
ಗ್ಲಾಸ್ಕೊ: ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

ಅರ್ಹತಾ ಸುತ್ತಿನಲ್ಲಿ ನೀರಜ್ 79.61 ಮೀಟರ್ ದೂರ ಜಾವೆಲಿನ್ ಎಸೆದು ಅಂತಿಮ ಸುತ್ತಿಗೆ ಪ್ರವೇಶಿಸಿದರು. ಭಾರತದ ಮತ್ತಿತರ ಸ್ಪರ್ಧಿಗಳಾದ ರೋಹಿತ್ ಯಾದವ್ ಹಾಗೂ ಯಶ್ ವೀರ್ ಸಿಂಗ್ ಕೂಡ ಫೈನಲ್‌ಗೆ ಸ್ಥಾನ ಕಾಯ್ದುಕೊಂಡಿದ್ದಾರೆ.

ಅರ್ಹತಾ ಸುತ್ತಿನಲ್ಲಿ ಒಟ್ಟು 20 ಅಥ್ಲೀಟ್‌ಗಳು ಕಣಕ್ಕಿಳಿದಿದ್ದು, ಅಗ್ರ 12 ಮಂದಿ ಫೈನಲ್‌ಗೆ ಆಯ್ಕೆಯಾಗಿದ್ದಾರೆ. ನೇರ ಅರ್ಹತೆಗಾಗಿ 83 ಮೀಟರ್ ಗುರಿ ನಿಗದಿಪಡಿಸಲಾಗಿತ್ತು. ಆ ಗುರಿ ತಲುಪದಿದ್ದರೂ, ಒಟ್ಟಾರೆ ಪ್ರದರ್ಶನದ ಆಧಾರದ ಮೇಲೆ ನೀರಜ್ ಐದನೇ ಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸಿದರು.

2018ರ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 86.47 ಮೀಟರ್ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದ ನೀರಜ್, ಗಾಯದ ಕಾರಣದಿಂದ 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿರಲಿಲ್ಲ. ಇದೀಗ ಮತ್ತೊಮ್ಮೆ ಪದಕದ ನಿರೀಕ್ಷೆಯೊಂದಿಗೆ ಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಜಿಂಕ್ಯ ರಹಾನೆ ವಿದಾಯ

The post ಕಾಮನ್‌ವೆಲ್ತ್ ಕ್ರೀಡಾಕೂಟ: ಜಾವೆಲಿನ್ ಫೈನಲ್‌ಗೆ ನೀರಜ್ ಪ್ರವೇಶ appeared first on Samyukta Karnataka.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಜಿಂಕ್ಯ ರಹಾನೆ ವಿದಾಯ
ಮುಂಬೈ: ಭಾರತದ ನಂಬಿಕಸ್ಥ ಬ್ಯಾಟರ್‌ಗಳಲ್ಲಿ ಒಬ್ಬರಾದ ಮಾಜಿ ನಾಯಕ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ.

“ಕ್ಯಾಪ್ 278 ಸೈನಿಂಗ್ ಆಫ್” ಎಂಬ ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ವಿಡಿಯೊ ಸಂದೇಶ ಹಂಚಿಕೊಂಡಿರುವ ಅವರು, ಭಾರತೀಯ ಕ್ರಿಕೆಟಿಗನಾಗಿ ತಮ್ಮ 15 ವರ್ಷಗಳ ಸುದೀರ್ಘ ಪಯಣಕ್ಕೆ ತೆರೆ ಎಳೆದಿದ್ದಾರೆ.

ಭಾರತ ತಂಡದ 278ನೇ ಆಟಗಾರನಾಗಿ ಕ್ಯಾಪ್ ಧರಿಸಿದ್ದ ರಹಾನೆ, “ಜೀವನದ ಪ್ರತಿಯೊಂದಕ್ಕೂ ಆರಂಭ ಮತ್ತು ಅಂತ್ಯ ಇರುತ್ತದೆ. ಸಮಯ ಬಂದಾಗ ಅದನ್ನು ಗೌರವಿಸಿ ಮುನ್ನಡೆಯಬೇಕು. ನನ್ನ ಬ್ಯಾಟಿಂಗ್‌ನಲ್ಲಿ ನಾನು ಯಾವಾಗಲೂ ಸಮಯಕ್ಕೆ ಮಹತ್ವ ನೀಡಿದ್ದೆ. ಈಗ ನನ್ನ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಹೇಳಲು ಇದೇ ಸರಿಯಾದ ಸಮಯ ಎಂದು ಭಾವಿಸಿದ್ದೇನೆ. ಚಿಕ್ಕ ವಯಸ್ಸಿನಿಂದಲೇ ಭಾರತದ ಕ್ಯಾಪ್ ಧರಿಸುವುದೇ ನನ್ನ ಏಕೈಕ ಕನಸಾಗಿತ್ತು,” ಎಂದು ಹೇಳಿದ್ದಾರೆ.

ಇದೇ ವೇಳೆ ಮತ್ತೊಂದು ಭಾವನಾತ್ಮಕ ಸಂದೇಶದಲ್ಲಿ, “ಸಾಮಾನ್ಯ ಹಿನ್ನೆಲೆಯಿಂದ ಬಂದು ವಿಶ್ವದ ಅತಿದೊಡ್ಡ ಕ್ರಿಕೆಟ್ ವೇದಿಕೆಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಅತ್ಯಂತ ದೊಡ್ಡ ಸೌಭಾಗ್ಯ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಎಲ್ಲಾ ತರಬೇತುದಾರರು, ಮಾರ್ಗದರ್ಶಕರು, ಸಹ ಆಟಗಾರರು ಹಾಗೂ ಪೋಷಕ ಸಿಬ್ಬಂದಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ,” ಎಂದು ಹೇಳಿದ್ದಾರೆ.

ದೇಶ ಮತ್ತು ತಂಡಕ್ಕೆ ಯಾವಾಗಲೂ ಮೊದಲ ಆದ್ಯತೆ ನೀಡಿ ಸಂಪೂರ್ಣ ಪ್ರಾಮಾಣಿಕತೆಯಿಂದ ಆಡಿದ್ದೇನೆ ಎಂದು ಹೇಳಿರುವ ರಹಾನೆ, “ರಣಜಿ ಕ್ರಿಕೆಟ್‌ನಿಂದ ಆರಂಭವಾದ ನನ್ನ ಪಯಣ ಕಳೆದ ಎರಡು ದಶಕಗಳಲ್ಲಿ ಭಾರತೀಯ ಕ್ರಿಕೆಟ್ ಬೆಳೆದ ರೀತಿಯನ್ನು ಕಂಡು ಹೆಮ್ಮೆ ತಂದಿದೆ. ಭಾರತೀಯ ಕ್ರಿಕೆಟಿಗನಾಗಿ ನನ್ನ ಅಧ್ಯಾಯ ಮುಗಿದಿರಬಹುದು. ಆದರೆ ಕ್ರಿಕೆಟ್ ಜೊತೆಯ ನನ್ನ ಸಂಬಂಧ ಇಲ್ಲಿಗೆ ಅಂತ್ಯವಾಗುವುದಿಲ್ಲ. ಮುಂದಿನ ಪೀಳಿಗೆಯ ಆಟಗಾರರಿಗೆ ಮಾರ್ಗದರ್ಶನ ನೀಡಲು ಬಯಸುತ್ತೇನೆ,” ಎಂದು ತಿಳಿಸಿದ್ದಾರೆ.

ಮರೆಯಲಾಗದ ಸಾಧನೆಗಳು: ಅಜಿಂಕ್ಯ ರಹಾನೆ ಅವರ ಹೆಸರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಂದೆಂದಿಗೂ ವಿಶೇಷವಾಗಿ ಉಳಿಯಲಿದೆ. 2020-21ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅಡಿಲೇಡ್ ಟೆಸ್ಟ್‌ನ ಹೀನಾಯ ಸೋಲಿನ ಬಳಿಕ ನಾಯಕತ್ವ ವಹಿಸಿದ ಅವರು, ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಅಮೋಘ ಶತಕ ಸಿಡಿಸಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು. ಬಳಿಕ ಗಾಯಾಳುಗಳಿಂದ ಬಳಲುತ್ತಿದ್ದ ಯುವ ತಂಡವನ್ನು ಮುನ್ನಡೆಸಿ ಆಸ್ಟ್ರೇಲಿಯಾ ನೆಲದಲ್ಲೇ ಸರಣಿ ಗೆಲ್ಲುವ ಮೂಲಕ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಿದ್ದರು.

ರಹಾನೆ ನಾಯಕತ್ವ ವಹಿಸಿದ ಯಾವುದೇ ಟೆಸ್ಟ್ ಪಂದ್ಯದಲ್ಲೂ ಭಾರತ ಸೋಲನ್ನು ಕಂಡಿರಲಿಲ್ಲ ಎಂಬುದು ಅವರ ನಾಯಕತ್ವದ ಮತ್ತೊಂದು ವಿಶೇಷತೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದಂತಹ ಕಠಿಣ ವಿದೇಶಿ ಪಿಚ್‌ಗಳಲ್ಲಿ ಅವರು ಆಡಿದ ಅನೇಕ ಹೋರಾಟದ ಇನ್ನಿಂಗ್ಸ್‌ಗಳು ಭಾರತಕ್ಕೆ ಹಲವು ಐತಿಹಾಸಿಕ ಗೆಲುವುಗಳನ್ನು ತಂದುಕೊಟ್ಟಿವೆ.

2023ರ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಬಾರಿ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದ ರಹಾನೆ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್‌ನ ಅತ್ಯಂತ ವಿಶ್ವಾಸಾರ್ಹ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಲ್ಲಿ ಒಬ್ಬರ ಅಂತಾರಾಷ್ಟ್ರೀಯ ಪಯಣ ಅಂತ್ಯಗೊಂಡಿದೆ.

ಅಜಿಂಕ್ಯ ರಹಾನೆ ಅವರ ನಿವೃತ್ತಿ ಭಾರತೀಯ ಕ್ರಿಕೆಟ್‌ಗೆ ಒಂದು ಯುಗದ ಅಂತ್ಯವಾಗಿದ್ದು, ಶಾಂತ ಸ್ವಭಾವ, ಜವಾಬ್ದಾರಿಯುತ ನಾಯಕತ್ವ ಮತ್ತು ಸಂಕಷ್ಟದ ಸಂದರ್ಭಗಳಲ್ಲಿ ತಂಡಕ್ಕೆ ಆಸರೆಯಾಗಿದ್ದ ಅವರ ಕೊಡುಗೆಗಳು ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಉಳಿಯಲಿವೆ.

The post ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಜಿಂಕ್ಯ ರಹಾನೆ ವಿದಾಯ appeared first on Samyukta Karnataka.

ಗುಲ್ವೀರ್ –ಹರ್ಜಿಂದರ್ ಮಿಂಚು: ಭಾರತಕ್ಕೆ ಒಂದೇ ದಿನ ಎರಡು ಬೆಳ್ಳಿ
ಗ್ಲಾಸ್ಗೊ: ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ಎದುರಾಗಿದೆ. ಭಾರತದ ಉದಯೋನ್ಮುಖ ದೂರ ಓಟಗಾರ ಗುಲ್ವೀರ್ ಸಿಂಗ್ ಪುರುಷರ 10,000 ಮೀಟರ್ ಓಟದಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದು ದೇಶದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

ಮಳೆ ಮತ್ತು ನೀರು ತುಂಬಿದ ಟ್ರ್ಯಾಕ್‌ನಂತಹ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಗುಲ್ವೀರ್ ಸಿಂಗ್ ಅಸಾಧಾರಣ ಧೈರ್ಯ ಹಾಗೂ ಸ್ಥಿರತೆಯಿಂದ ಓಡಿ 27 ನಿಮಿಷ 49.78 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಪುರುಷರ 10,000 ಮೀಟರ್ ಓಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ವಿಶೇಷ ಸಾಧನೆ ಮಾಡಿದ್ದಾರೆ.

ಕೊನೆಯವರೆಗೂ ಕೈಬಿಡದ ಹೋರಾಟ : ಗ್ಲಾಸ್ಗೊದಲ್ಲಿ ಮಂಗಳವಾರ ನಡೆದ ಈ ಸ್ಪರ್ಧೆಗೆ ಭಾರೀ ಮಳೆ ಸವಾಲಾಗಿ ಪರಿಣಮಿಸಿತ್ತು. ಟ್ರ್ಯಾಕ್‌ನಲ್ಲಿ ನೀರು ನಿಂತಿದ್ದರಿಂದ ಓಟಗಾರರಿಗೆ ವೇಗ ಕಾಯ್ದುಕೊಳ್ಳುವುದು ಸುಲಭವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಗುಲ್ವೀರ್ ಆರಂಭದಿಂದಲೇ ಮುಂಚೂಣಿ ಗುಂಪಿನಲ್ಲಿ ಕಾಣಿಸಿಕೊಂಡರು.

ಓಟ ಮುಂದುವರಿದಂತೆ ಸ್ಪರ್ಧೆ ತೀವ್ರಗೊಂಡರೂ ಭಾರತೀಯ ಓಟಗಾರ ತಮ್ಮ ಲಯವನ್ನು ಕಾಪಾಡಿಕೊಂಡರು. ಅಂತಿಮ ಸುತ್ತುಗಳಲ್ಲೂ ಅವರು ಪೈಪೋಟಿ ಬಿಡದೆ ಮುನ್ನಡೆ ಸಾಧಿಸಲು ಪ್ರಯತ್ನಿಸಿದರು. ಕೊನೆಯ ಹಂತದಲ್ಲಿ ಚಿನ್ನದ ಪದಕಕ್ಕಾಗಿ ಆಸ್ಟ್ರೇಲಿಯಾದ ಕೈ ರಾಬಿನ್ಸನ್ ಅವರೊಂದಿಗೆ ತೀವ್ರ ಪೈಪೋಟಿ ನಡೆಸಿದ ಗುಲ್ವೀರ್ ಅಂತಿಮವಾಗಿ ಬೆಳ್ಳಿಗೆ ತೃಪ್ತಿಪಟ್ಟರು.

ಆಸ್ಟ್ರೇಲಿಯಾದ ಕೈ ರಾಬಿನ್ಸನ್ 27 ನಿಮಿಷ 48.93 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರೆ, ಗುಲ್ವೀರ್ ಕೇವಲ 0.85 ಸೆಕೆಂಡುಗಳ ಅಂತರದಲ್ಲಿ ಬೆಳ್ಳಿ ಪಡೆದರು. ಐಲ್ ಆಫ್ ಮ್ಯಾನ್‌ನ ಡೇವಿಡ್ ಮುಲ್ಲಾರ್ಕಿ 27 ನಿಮಿಷ 50.28 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿ ಕಂಚಿನ ಪದಕಕ್ಕೆ ಪಾತ್ರರಾದರು.

ಭಾರತೀಯ ಅಥ್ಲೆಟಿಕ್ಸ್‌ಗೆ ಹೊಸ ಮೈಲಿಗಲ್ಲು : ಗುಲ್ವೀರ್ ಅವರ ಈ ಸಾಧನೆಯ ವಿಶೇಷತೆ ಎಂದರೆ, ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 10,000 ಮೀಟರ್ ಓಟದಲ್ಲಿ ಭಾರತ ಇದುವರೆಗೆ ಪದಕ ಗೆದ್ದಿರಲಿಲ್ಲ. ಇದೀಗ ಗುಲ್ವೀರ್ ಬೆಳ್ಳಿ ಗೆಲ್ಲುವ ಮೂಲಕ ಈ ಕೊರತೆಯನ್ನು ನೀಗಿಸಿದ್ದಾರೆ. ಅವರ ಸಾಧನೆ ಭಾರತೀಯ ದೂರ ಓಟಕ್ಕೆ ದೊಡ್ಡ ಉತ್ತೇಜನ ನೀಡುವ ನಿರೀಕ್ಷೆಯಿದೆ.

ಗುಲ್ವೀರ್ ಸಿಂಗ್ ಈಗಾಗಲೇ ಭಾರತದ ಪ್ರಮುಖ ದೂರ ಓಟಗಾರರ ಸಾಲಿನಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಅವರು 10,000 ಮೀಟರ್‌ನಲ್ಲಿ 27:00.22 ರಾಷ್ಟ್ರೀಯ ದಾಖಲೆಯನ್ನೂ ಹೊಂದಿದ್ದಾರೆ. 2025ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 5,000 ಮೀಟರ್ ಮತ್ತು 10,000 ಮೀಟರ್ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದಿದ್ದರು.

ಹರ್ಜಿಂದರ್ ಕೌರ್‌ಗೂ ಬೆಳ್ಳಿ ಸಂಭ್ರಮ : ಗುಲ್ವೀರ್ ಸಿಂಗ್ ಅವರ ಐತಿಹಾಸಿಕ ಬೆಳ್ಳಿ ಸಾಧನೆಯ ಬೆನ್ನಲ್ಲೇ ಭಾರತದ ವೇಟ್‌ಲಿಫ್ಟರ್ ಹರ್ಜಿಂದರ್ ಕೌರ್ ಕೂಡ ಮಹಿಳೆಯರ 69 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಹರ್ಜಿಂದರ್ ಒಟ್ಟು 227 ಕೆಜಿ ಭಾರ ಎತ್ತಿದರು. ಇದರಲ್ಲಿ ಸ್ನ್ಯಾಚ್‌ನಲ್ಲಿ 101 ಕೆಜಿ ಹಾಗೂ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 126 ಕೆಜಿ ಎತ್ತಿದರು. ಈ ಪ್ರದರ್ಶನದೊಂದಿಗೆ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಹರ್ಜಿಂದರ್ ಅವರಿಗೂ ಇದು ಮಹತ್ವದ ಸಾಧನೆಯಾಗಿದೆ. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅವರು, ಇದೀಗ ಗ್ಲಾಸ್ಗೊದಲ್ಲಿ ಬೆಳ್ಳಿಗೆ ಏರುವ ಮೂಲಕ ತಮ್ಮ ಪದಕದ ಬಣ್ಣವನ್ನು ಉತ್ತಮಪಡಿಸಿಕೊಂಡಿದ್ದಾರೆ.

ಒಂದೇ ದಿನ ಎರಡು ಬೆಳ್ಳಿ : ಗುಲ್ವೀರ್ ಸಿಂಗ್ ಮತ್ತು ಹರ್ಜಿಂದರ್ ಕೌರ್ ಅವರ ಬೆಳ್ಳಿ ಪದಕಗಳು ಗ್ಲಾಸ್ಗೊ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಅಭಿಯಾನಕ್ಕೆ ಮತ್ತಷ್ಟು ಬಲ ತುಂಬಿವೆ. ವಿಶೇಷವಾಗಿ ಗುಲ್ವೀರ್ ಅವರ ಪದಕವು ಭಾರತೀಯ ಅಥ್ಲೆಟಿಕ್ಸ್‌ಗೆ ಐತಿಹಾಸಿಕ ಮೈಲಿಗಲ್ಲಾಗಿದ್ದು, ಹರ್ಜಿಂದರ್ ಅವರ ಬೆಳ್ಳಿ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಬಲವನ್ನು ಮತ್ತೊಮ್ಮೆ ಪ್ರದರ್ಶಿಸಿದೆ.

ಗುಲ್ವೀರ್ ಅವರ ಸಾಧನೆಯನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಗುಲ್ವೀರ್ ಸಿಂಗ್ ಮತ್ತು ಹರ್ಜಿಂದರ್ ಕೌರ್ ಅವರನ್ನು ಅಭಿನಂದಿಸಿ, ಅವರ ಸಾಧನೆ ದೇಶದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದೆ ಎಂದು ಹೇಳಿದ್ದಾರೆ.

ಬರ ಪೀಡಿತ ಎಂದು ಘೋಷಿಸದಿದ್ದರೆ ಅಧಿವೇಶನ ನಡೆಸಲು ಬಿಡಲ್ಲ

ಅವಲಕ್ಕಿ ಸೇವಿಸಿ ವಸತಿ ಶಾಲೆಯ 57 ವಿದ್ಯಾರ್ಥಿಗಳು ಅಸ್ವಸ್ಥ

ಜೀರೋ ಟ್ರಾಫಿಕ್‌ನಲ್ಲಿ ಮೂರು ತಿಂಗಳ ಕಂದಮ್ಮನ ಜೀವದ ಓಟ!

ಕಾಮನ್‌ವೆಲ್ತ್ ಕ್ರೀಡಾಕೂಟ: ಜಾವೆಲಿನ್ ಫೈನಲ್‌ಗೆ ನೀರಜ್ ಪ್ರವೇಶ

ಬಡ್ತಿಗೆ ಪರದಾಟ; ಕ್ರೀಡಾ ಇಲಾಖೆಯಲ್ಲಿ ಮೇಲಧಿಕಾರಿಗಳದ್ದೇ ಆಟ

The post ಗುಲ್ವೀರ್ –ಹರ್ಜಿಂದರ್ ಮಿಂಚು: ಭಾರತಕ್ಕೆ ಒಂದೇ ದಿನ ಎರಡು ಬೆಳ್ಳಿ appeared first on Samyukta Karnataka.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೈಸೂರಿನ ಶಿಲ್ಪಾಗೆ ಕಂಚಿನ ಪದಕ
ಮೈಸೂರು: ಕಾಮನ್‌ವೆಲ್ತ್ ಗೇಮ್ಸ್‌ 2026ರಲ್ಲಿ ಭಾರತದ ಪ್ಯಾರಾ ಅಥ್ಲೆಟಿಕ್ಸ್ ತಂಡಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ದೊರೆತಿದ್ದು, ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ನಿವಾಸಿ ಕೆ.ಎಸ್. ಶಿಲ್ಪಾ ಮಹಿಳೆಯರ F57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ದೇಶದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ. ಬಾಲ್ಯದಲ್ಲೇ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡರೂ ಛಲ ಬಿಡದ ಶಿಲ್ಪಾ, ತಮ್ಮ ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಬಳಿಕ ಮಾತನಾಡಿದ ಶಿಲ್ಪಾ, “ಈ ಸಾಧನೆ ನನ್ನೊಬ್ಬಳದ್ದಲ್ಲ. ನನ್ನ ಕುಟುಂಬದ ಬೆಂಬಲ, ತರಬೇತುದಾರರ ಮಾರ್ಗದರ್ಶನ ಹಾಗೂ ನಿರಂತರ ಅಭ್ಯಾಸವೇ ಈ ಯಶಸ್ಸಿನ ಹಿಂದಿದೆ. ಅಪಘಾತದ ನಂತರ ಜೀವನ ಮುಗಿದಂತಾಗಿತ್ತು. ಆದರೆ ಇಂದು ದೇಶಕ್ಕಾಗಿ ಪದಕ ಗೆದ್ದಿರುವುದು ನನ್ನ ಬದುಕಿನ ಅತ್ಯಂತ ಸಂತಸದ ಕ್ಷಣ” ಎಂದು ಭಾವುಕರಾಗಿ ಹೇಳಿದರು.

ಮೈಸೂರು ಜಿಲ್ಲೆಯ ಕೆ.ಆರ್.ನಗರದ ರೈತ ಕುಟುಂಬದಲ್ಲಿ ಜನಿಸಿದ ಶಿಲ್ಪಾ, ಬಾಲ್ಯದಲ್ಲೇ ನಡೆದ ಅಪಘಾತದಲ್ಲಿ ಎಡ ಕಾಲನ್ನು ಕಳೆದುಕೊಂಡರು. ನಂತರ ಉನ್ನತ ಶಿಕ್ಷಣ ಪೂರ್ಣಗೊಳಿಸಿ ಶಿಕ್ಷಕಿಯಾಗಿ ಕೆಲಸ ಆರಂಭಿಸಿದರು. ಆರಂಭದಲ್ಲಿ ಸಿಟ್ಟಿಂಗ್ ವಾಲಿಬಾಲ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಅವರು, ಬಳಿಕ ತರಬೇತುದಾರರ ಸಲಹೆಯಂತೆ ಶಾಟ್‌ಪುಟ್ ಹಾಗೂ ಡಿಸ್ಕಸ್ ಎಸೆತ ಸ್ಪರ್ಧೆಗಳತ್ತ ಗಮನ ಹರಿಸಿದರು. ಉತ್ತಮ ತರಬೇತಿಗಾಗಿ ಬೆಂಗಳೂರಿಗೆ ತೆರಳಿ ಕಠಿಣ ಅಭ್ಯಾಸ ನಡೆಸಿದರು.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿರುವ ಶಿಲ್ಪಾ, ಗೋವಾ ರಾಷ್ಟ್ರೀಯ ಕ್ರೀಡಾಕೂಟ ಸೇರಿದಂತೆ ಅನೇಕ ಸ್ಪರ್ಧೆಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಗಳ ಆಧಾರದ ಮೇಲೆ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದ ಅವರು, ಇದೀಗ ಕಂಚಿನ ಪದಕ ಗೆಲ್ಲುವ ಮೂಲಕ ಕರ್ನಾಟಕ ಹಾಗೂ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಶಿಲ್ಪಾ ಅವರ ಸಾಧನೆಗೆ ರಾಜಕೀಯ ನಾಯಕರು, ಕ್ರೀಡಾ ಕ್ಷೇತ್ರದ ಗಣ್ಯರು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಕಠಿಣ ಪರಿಸ್ಥಿತಿಗಳನ್ನು ಮೀರಿ ವಿಶ್ವ ವೇದಿಕೆಯಲ್ಲಿ ಪದಕ ಗೆದ್ದಿರುವ ಶಿಲ್ಪಾ ಅವರ ಜೀವನ ಪಯಣ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕ ಮಾದರಿಯಾಗಿದೆ.

ಬರ ಪೀಡಿತ ಎಂದು ಘೋಷಿಸದಿದ್ದರೆ ಅಧಿವೇಶನ ನಡೆಸಲು ಬಿಡಲ್ಲ

ಅವಲಕ್ಕಿ ಸೇವಿಸಿ ವಸತಿ ಶಾಲೆಯ 57 ವಿದ್ಯಾರ್ಥಿಗಳು ಅಸ್ವಸ್ಥ

ಜೀರೋ ಟ್ರಾಫಿಕ್‌ನಲ್ಲಿ ಮೂರು ತಿಂಗಳ ಕಂದಮ್ಮನ ಜೀವದ ಓಟ!

ಕಾಮನ್‌ವೆಲ್ತ್ ಕ್ರೀಡಾಕೂಟ: ಜಾವೆಲಿನ್ ಫೈನಲ್‌ಗೆ ನೀರಜ್ ಪ್ರವೇಶ

ಬಡ್ತಿಗೆ ಪರದಾಟ; ಕ್ರೀಡಾ ಇಲಾಖೆಯಲ್ಲಿ ಮೇಲಧಿಕಾರಿಗಳದ್ದೇ ಆಟ

The post ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೈಸೂರಿನ ಶಿಲ್ಪಾಗೆ ಕಂಚಿನ ಪದಕ appeared first on Samyukta Karnataka.

ಕಾಮನ್ವೆಲ್ತ್ ಚಿನ್ನ ಗೆದ್ದ ಶರ್ಮಿಳಾ ಧಂಖರ್ ಜೀವನಗಾಥೆ
ಶರ್ಮಿಳಾ ಧಂಖರ್ ಯಾರು? ಕೌಟುಂಬಿಕ ಹಿಂಸೆಯಿಂದ ಕಾಮನ್ವೆಲ್ತ್ ಚಿನ್ನದವರೆಗೆ; ಹೋರಾಟದ ಬದುಕಿನ ಸ್ಫೂರ್ತಿದಾಯಕ ಕಥೆ

ನವದೆಹಲಿ: 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪ್ಯಾರಾ ಅಥ್ಲೆಟಿಕ್ಸ್‌ನ ಮಹಿಳೆಯರ F57 ಶಾಟ್‌ಪುಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಐತಿಹಾಸಿಕ ಸಾಧನೆ ಮಾಡಿದ ಶರ್ಮಿಳಾ ಧಂಖರ್ ಇಂದು ದೇಶದಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 9.81 ಮೀಟರ್ ದೂರ ಶಾಟ್‌ಪುಟ್ ಎಸೆದು ಅವರು ಭಾರತದ ಕೀರ್ತಿಯನ್ನು ವಿಶ್ವ ವೇದಿಕೆಯಲ್ಲಿ ಎತ್ತರಕ್ಕೆ ಕೊಂಡೊಯ್ದಿದ್ದಾರೆ.

ಆದರೆ ಈ ಸಾಧನೆಯ ಹಿಂದೆ ಅಸಾಧಾರಣ ಹೋರಾಟದ ಬದುಕಿದೆ. ಹರಿಯಾಣದ ರೇವಾರಿ ಜಿಲ್ಲೆಯ ಶರ್ಮಿಳಾ ಧಂಖರ್ ಅವರು 1986ರ ಆಗಸ್ಟ್‌ 15ರಂದು ಜನಿಸಿದರು. ಎರಡು ವರ್ಷದ ವಯಸ್ಸಿನಲ್ಲಿ ತೀವ್ರ ಜ್ವರದ ಬಳಿಕ ಪೋಲಿಯೊಗೆ ತುತ್ತಾಗಿ ಎಡಗಾಲಿನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರು. ಬಡ ರೈತ ಕುಟುಂಬದಲ್ಲಿ ಬೆಳೆದ ಅವರು ಬಾಲ್ಯದಿಂದಲೇ ಹಲವು ಸಂಕಷ್ಟಗಳನ್ನು ಎದುರಿಸಿದರು.

18ನೇ ವಯಸ್ಸಿನಲ್ಲಿ ವಿವಾಹವಾದ ಶರ್ಮಿಳಾ ಅವರ ಮೊದಲ ವೈವಾಹಿಕ ಜೀವನ ಸುಖಕರವಾಗಿರಲಿಲ್ಲ. ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸೆ ಮತ್ತು ಮಾನಸಿಕ ಹಿಂಸೆಯನ್ನು ಹಲವು ವರ್ಷಗಳ ಕಾಲ ಅನುಭವಿಸಿದರು. ಇಬ್ಬರು ಹೆಣ್ಣು ಮಕ್ಕಳಿದ್ದರೂ ಪತಿ ಅವರನ್ನು ಮನೆಯಿಂದ ಹೊರಹಾಕಿದ ನಂತರ, ಮಕ್ಕಳೊಂದಿಗೆ ತಂದೆಯ ಮನೆಗೆ ಮರಳಬೇಕಾಯಿತು.

ಕುಟುಂಬಕ್ಕೆ ಹೊರೆಯಾಗದಂತೆ ಬದುಕು ಕಟ್ಟಿಕೊಳ್ಳಲು ಅವರು ದಾದಿಯಾಗಿ ಕೆಲಸ ಮಾಡಿದರು. ಬಳಿಕ 28ನೇ ವಯಸ್ಸಿನಲ್ಲಿ ಅಜಿತ್ ಸಿಂಗ್ ಅವರನ್ನು ಮರುಮದುವೆಯಾದರು. ಅವರ ಪತಿಯ ಪ್ರೋತ್ಸಾಹವೇ ಶರ್ಮಿಳಾ ಅವರ ಬದುಕಿಗೆ ಹೊಸ ತಿರುವು ನೀಡಿತು. ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲು ಪ್ರೇರಣೆ ನೀಡಿದ ಅಜಿತ್ ಸಿಂಗ್ ಹಾಗೂ ತರಬೇತುದಾರ ತೇಕ್‌ಚಂದ್ ಅವರ ಮಾರ್ಗದರ್ಶನದಲ್ಲಿ ಶರ್ಮಿಳಾ ಕಠಿಣ ತರಬೇತಿ ಆರಂಭಿಸಿದರು.

ಮೊದಲ ಬಾರಿ ಶಾಟ್‌ಪುಟ್‌ನಲ್ಲಿ ಕೇವಲ 5 ಮೀಟರ್ ಮಾತ್ರ ಎಸೆದಿದ್ದ ಶರ್ಮಿಳಾ, ಒಂದು ವರ್ಷದೊಳಗೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದು ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. 2022ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದ ಅವರು, ನಂತರ ನಿರಂತರ ಪರಿಶ್ರಮದಿಂದ ತಮ್ಮ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು.

2025ರ ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಶರ್ಮಿಳಾ, 2026ರ ಫಝಾ ಅಂತರರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಹಾಗೂ ಕಂಚಿನ ಪದಕಗಳನ್ನು ಗೆದ್ದಿದ್ದರು. ಇದೀಗ 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಭಾರತೀಯ ಪ್ಯಾರಾ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

ಶರ್ಮಿಳಾ ಧಂಖರ್ ಅವರ ಜೀವನ ಕಥೆ ಕೇವಲ ಕ್ರೀಡಾ ಸಾಧನೆಯಲ್ಲ; ಎಷ್ಟೇ ಸಂಕಷ್ಟಗಳು ಎದುರಾದರೂ ಆತ್ಮವಿಶ್ವಾಸ, ಪರಿಶ್ರಮ ಮತ್ತು ಕುಟುಂಬದ ಬೆಂಬಲ ಇದ್ದರೆ ಯಶಸ್ಸು ಸಾಧ್ಯ ಎಂಬುದಕ್ಕೆ ಅವರು ಜೀವಂತ ಉದಾಹರಣೆಯಾಗಿದ್ದಾರೆ.

ಬರ ಪೀಡಿತ ಎಂದು ಘೋಷಿಸದಿದ್ದರೆ ಅಧಿವೇಶನ ನಡೆಸಲು ಬಿಡಲ್ಲ

ಅವಲಕ್ಕಿ ಸೇವಿಸಿ ವಸತಿ ಶಾಲೆಯ 57 ವಿದ್ಯಾರ್ಥಿಗಳು ಅಸ್ವಸ್ಥ

ಜೀರೋ ಟ್ರಾಫಿಕ್‌ನಲ್ಲಿ ಮೂರು ತಿಂಗಳ ಕಂದಮ್ಮನ ಜೀವದ ಓಟ!

ಕಾಮನ್‌ವೆಲ್ತ್ ಕ್ರೀಡಾಕೂಟ: ಜಾವೆಲಿನ್ ಫೈನಲ್‌ಗೆ ನೀರಜ್ ಪ್ರವೇಶ

ಬಡ್ತಿಗೆ ಪರದಾಟ; ಕ್ರೀಡಾ ಇಲಾಖೆಯಲ್ಲಿ ಮೇಲಧಿಕಾರಿಗಳದ್ದೇ ಆಟ

The post ಕಾಮನ್ವೆಲ್ತ್ ಚಿನ್ನ ಗೆದ್ದ ಶರ್ಮಿಳಾ ಧಂಖರ್ ಜೀವನಗಾಥೆ appeared first on Samyukta Karnataka.

ಕಾಮನ್‌ವೆಲ್ತ್ ಗೇಮ್ಸ್‌: ಜ್ಞಾನೇಶ್ವರಿ ಯಾದವ್‌ಗೆ ಬೆಳ್ಳಿ, ಭಾರತಕ್ಕೆ 5ನೇ ಪದಕ
ಗ್ಲಾಸ್ಗೊ: ಕಾಮನ್‌ವೆಲ್ತ್ ಗೇಮ್ಸ್‌–2026ರಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಸೋಮವಾರ ನಡೆದ ಮಹಿಳೆಯರ 53 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಜ್ಞಾನೇಶ್ವರಿ ಯಾದವ್ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ ಈ ಬಾರಿಯ ಕ್ರೀಡಾಕೂಟದಲ್ಲಿ ತನ್ನ 5ನೇ ಪದಕವನ್ನು ಖಾತೆಗೆ ಸೇರಿಸಿಕೊಂಡಿದೆ.

ಫೈನಲ್‌ನಲ್ಲಿ ಆರಂಭದಿಂದಲೇ ಸ್ಥಿರ ಪ್ರದರ್ಶನ ನೀಡಿದ ಜ್ಞಾನೇಶ್ವರಿ, ಸ್ಟ್ರಾಚ್ ವಿಭಾಗದಲ್ಲಿ ಕ್ರಮವಾಗಿ 82 ಕೆಜಿ, 85 ಕೆಜಿ ಹಾಗೂ 88 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದರು. ಮೂರು ಪ್ರಯತ್ನಗಳಲ್ಲೂ ಯಶಸ್ಸು ಕಂಡ ಅವರು 88 ಕೆಜಿ ಸಾಧನೆಯೊಂದಿಗೆ ಎರಡನೇ ಸ್ಥಾನದಲ್ಲೇ ಉಳಿದರು. ನೈಜೀರಿಯಾದ ಒನೊಮೆ ಡಿಡಿಕ್ ಮೊದಲ ಸ್ಥಾನದಲ್ಲಿದ್ದರೆ, ಕೆನಡಾದ ರೆಬೆಕಾ ಗೌಲ್ಡ್ ಮೂರನೇ ಸ್ಥಾನದಲ್ಲಿದ್ದರು.

ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ ಜ್ಞಾನೇಶ್ವರಿ ಮೊದಲ ಪ್ರಯತ್ನದಲ್ಲೇ 103 ಕೆಜಿ ಭಾರ ಎತ್ತಿದರು. ಅದಕ್ಕೆ ಪ್ರತಿಯಾಗಿ ಒನೊಮೆ ಡಿಡಿಕ್ 105 ಕೆಜಿ ಎತ್ತಿ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡರು. ಎರಡನೇ ಪ್ರಯತ್ನದಲ್ಲಿ ಜ್ಞಾನೇಶ್ವರಿ 107 ಕೆಜಿ ಭಾರ ಎತ್ತಿ ಚಿನ್ನದ ಪದಕದ ಪೈಪೋಟಿಯನ್ನು ಮತ್ತಷ್ಟು ರೋಚಕಗೊಳಿಸಿದರು. ಆದರೆ ಡಿಡಿಕ್ 110 ಕೆಜಿ ಭಾರ ಎತ್ತುವ ಮೂಲಕ ತಮ್ಮ ಮೇಲುಗೈ ಮುಂದುವರಿಸಿದರು.

ಕೊನೆಯ ಹಾಗೂ ನಿರ್ಣಾಯಕ ಮೂರನೇ ಪ್ರಯತ್ನದಲ್ಲಿ ಜ್ಞಾನೇಶ್ವರಿ 111 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿ ಭಾರತಕ್ಕೆ ಬೆಳ್ಳಿ ಪದಕವನ್ನು ಖಚಿತಪಡಿಸಿದರು. ಅವರ ಆತ್ಮವಿಶ್ವಾಸಭರಿತ ಪ್ರದರ್ಶನ ಭಾರತೀಯ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಇದಕ್ಕೂ ಮುನ್ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದು ಭಾರತದ ಪದಕ ಖಾತೆ ತೆರೆದಿದ್ದರು. ಇದೀಗ ಜ್ಞಾನೇಶ್ವರಿ ಯಾದವ್ ಅವರ ಬೆಳ್ಳಿ ಪದಕದೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಸಾಧನೆ ಮತ್ತಷ್ಟು ಮೆರೆದಿದೆ.

ಅಂತಾರಾಷ್ಟ್ರೀಯ ರೇಸಿಂಗ್‌ ವೃತ್ತಿಬದುಕಿನ ಮೊದಲ ವರ್ಷದಲ್ಲೇ ಚೊಚ್ಚಲ ಗೆಲುವು ಸಾಧಿಸಿದ ಆದಿತ್ಯ

The post ಕಾಮನ್‌ವೆಲ್ತ್ ಗೇಮ್ಸ್‌: ಜ್ಞಾನೇಶ್ವರಿ ಯಾದವ್‌ಗೆ ಬೆಳ್ಳಿ, ಭಾರತಕ್ಕೆ 5ನೇ ಪದಕ appeared first on Samyukta Karnataka.

ಅಂತಾರಾಷ್ಟ್ರೀಯ ರೇಸಿಂಗ್‌ ವೃತ್ತಿಬದುಕಿನ ಮೊದಲ ವರ್ಷದಲ್ಲೇ ಚೊಚ್ಚಲ ಗೆಲುವು ಸಾಧಿಸಿದ ಆದಿತ್ಯ
ಸೆಪಾಂಗ್(ಮಲೇಷ್ಯಾ): ಭಾರತದ ಯುವ ಕಾರು ರೇಸರ್ ಆದಿತ್ಯ ಪಟ್ನಾಯಕ್ ಸೆಪಾಂಗ್ ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆದ ಗೋಲ್ಡ್ ವಿಯೊಸ್ ಚಾಂಪಿಯನ್‌ಶಿಪ್ ಮಲೇಷ್ಯಾದ ಮೂರನೇ ಸುತ್ತಿನ ಸ್ಪೋರ್ಟಿಂಗ್ ಕ್ಲಾಸ್ ವಿಭಾಗದಲ್ಲಿ ಚಾಂಪಿಯನ್ ಆಗುವ ಮೂಲಕ ತಮ್ಮ ಮೊದಲ ಅಂತಾರಾಷ್ಟ್ರೀಯ ಕಾರು ರೇಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಸಾಧನೆಗಾಗಿ ಅವರಿಗೆ 15,000 ಮಲೇಷ್ಯನ್ ರಿಂಗೆಟ್ (ಅಂದಾಜು 3.5 ಲಕ್ಷ ರುಪಾಯಿ) ಬಹುಮಾನ ಲಭಿಸಿದೆ.

ಮುಂಬೈನ ಆದಿತ್ಯ ಮೊದಲ ರೇಸ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಬಳಿಕ ನಡೆದ ಎರಡನೇ ರೇಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸುವ ಮೂಲಕ ಒಟ್ಟಾರೆ ಮೂರನೇ ಸುತ್ತಿನ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಪೋಲೊ ಕಪ್ ಇಂಡಿಯಾದಲ್ಲಿ ಸತತ ಎರಡು ವರ್ಷ ರಾಷ್ಟ್ರೀಯ ರನ್ನರ್-ಅಪ್ ಆಗಿದ್ದ ಆದಿತ್ಯ, ಅಂತಾರಾಷ್ಟ್ರೀಯ ಕಾರು ರೇಸಿಂಗ್‌ಗೆ ಕಾಲಿಟ್ಟ ಮೊದಲ ವರ್ಷದಲ್ಲೇ ಈ ಸಾಧನೆ ಮಾಡಿದ್ದಾರೆ.

ರಾಯೊ ರೇಸಿಂಗ್ ಪರ ಮಾಜಿ ಫಾರ್ಮುಲಾ-1 ಚಾಲಕ ಅಲೆಕ್ಸ್ ಯಂಗ್ ಅವರ ಆ್ಯಕ್ಸಲ್ ಸ್ಫೋರ್ಟ್ಸ್ ತಂಡಕ್ಕಾಗಿ ಸ್ಪರ್ಧಿಸಿದ ಆದಿತ್ಯ, ಮಳೆ ಹಾಗೂ ಬದಲಾಗುತ್ತಿದ್ದ ಹವಾಮಾನದ ಕಾರಣ ಕಠಿಣವಾಗಿದ್ದ ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. 21 ಚಾಲಕರ ಸ್ಪರ್ಧೆಯಲ್ಲಿ ಮೊದಲ ರೇಸ್ ಆರಂಭದಲ್ಲೇ ಕೆಲ ಸ್ಥಾನಗಳನ್ನು ಕಳೆದುಕೊಂಡರೂ, ಮಲೇಷ್ಯಾದ ತಾಜ್ ಐಮಾನ್ ವಿರುದ್ಧ ರೋಚಕ ಪೈಪೋಟಿ ನಡೆಸಿ ಮೂರನೇ ಸ್ಥಾನ ಗಳಿಸಿದರು. ಲ್ಯೂ ಝುವಾನ್ ಯಾನ್ ಮೊದಲ ಹಾಗೂ ತಾಜ್ ಐಮಾನ್ ಎರಡನೇ ಸ್ಥಾನ ಪಡೆದರು.

ಮೊದಲ ರೇಸ್‌ನ ಅಗ್ರ ಎಂಟು ಚಾಲಕರ ಆರಂಭಿಕ ಕ್ರಮವನ್ನು ಎರಡನೇ ರೇಸ್‌ಗೆ ತಲೆಕೆಳಗಾಗಿಸಿದ್ದರಿಂದ ಆದಿತ್ಯ ಆರನೇ ಸ್ಥಾನದಿಂದ ಆರಂಭಿಸಿದರು. ಉತ್ತಮ ಆರಂಭದೊಂದಿಗೆ ಮೂರನೇ ಲ್ಯಾಪ್‌ನಲ್ಲೇ ಮೂರನೇ ಸ್ಥಾನಕ್ಕೇರಿದ ಅವರು, ಸೇಫ್ಟಿ ಕಾರ್ ಅವಧಿಯ ನಂತರ ಎರಡನೇ ಸ್ಥಾನಕ್ಕೇರಿದರು. ಬಳಿಕ ಆ್ಯಡಂ ಮಿಕೈಲ್ ಅವರನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ ಆದಿತ್ಯ, ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡು ಚೊಚ್ಚಲ ಅಂತಾರಾಷ್ಟ್ರೀಯ ಗೆಲುವು ದಾಖಲಿಸಿದರು. ಆ್ಯಡಂ ಮಿಕೈಲ್ ಹಾಗೂ ಅರಿಫ್ ಅಜ್ಮಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.

‘ಮೊದಲ ರೇಸ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಎರಡನೇ ರೇಸ್‌ನಲ್ಲಿ ಹೋರಾಟ ಬಿಡದೆ ಮುನ್ನಡೆ ಸಾಧಿಸಿ ಗೆದ್ದಿದ್ದು ನನ್ನ ಪಾಲಿಗೆ ಈ ವರ್ಷದ ಅತ್ಯುತ್ತಮ ಅನುಭವ’ ಎಂದು ಆದಿತ್ಯ ಹೇಳಿದ್ದಾರೆ.

‘ಕಾರ್ಟಿಂಗ್‌ನಿಂದ ಫಾರ್ಮುಲಾ ಕಾರುಗಳವರೆಗೆ ಸ್ಪರ್ಧಿಸಿರುವ ಪ್ರತಿಯೊಂದು ವಿಭಾಗದಲ್ಲೂ ಆದಿತ್ಯ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಅಂತಾರಾಷ್ಟ್ರೀಯ ರೇಸಿಂಗ್‌ನ ಮೊದಲ ಋತುವಿನಲ್ಲೇ ಈ ಗೆಲುವು ಅವರ ಪ್ರತಿಭೆಗೆ ಸಾಕ್ಷಿ,’ ಎಂದು ರಾಯೊ ರೇಸಿಂಗ್ ಸಿಇಒ ಹಾಗೂ ಕೋಚ್ ಸೌರವ್ ಬಂಡೋಪಾಧ್ಯಾಯ ಹೇಳಿದರು.

ಮಾಜಿ ಮಲೇಷ್ಯನ್ ಫಾರ್ಮುಲಾ-1 ಚಾಲಕ ಅಲೆಕ್ಸ್ ಯಂಗ್, ‘ಮಲೇಷ್ಯಾದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದರೂ ಆದಿತ್ಯ ಪರಿಸ್ಥಿತಿಗೆ ಅತ್ಯಂತ ವೇಗವಾಗಿ ಹೊಂದಿಕೊಂಡರು. ಅವರ ಪರಿಶ್ರಮಕ್ಕೆ ಈ ಗೆಲುವು ತಕ್ಕ ಪ್ರತಿಫಲ’ ಎಂದು ಶ್ಲಾಘಿಸಿದರು.

ಭೀಕರ ಅಪಾಘತದಿಂದ ಚೇತರಿಕೆ: 2023ರ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್ ಆಗಿರುವ ಆದಿತ್ಯ ಕಳೆದ ವರ್ಷ ಸಿಂಗಲ್ ಸೀಟರ್ ರೇಸ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕೈ ಮುರಿದುಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎರಡು ತಿಂಗಳು ರೇಸಿಂಗ್‌ನಿಂದ ದೂರ ಉಳಿದಿದ್ದ ಅವರು, ಇದೀಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭರ್ಜರಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಚಾಂಪಿಯನ್‌ಶಿಪ್‌ನಲ್ಲಿ ಇನ್ನೂ ಒಂದು ಸುತ್ತು ಬಾಕಿ ಇದ್ದು, 88 ಅಂಕಗಳೊಂದಿಗೆ ಆದಿತ್ಯ ಸದ್ಯ ಮೂರನೇ ಸ್ಥಾನದಲ್ಲಿದ್ದಾರೆ.

ಆದಿತ್ಯಗಿದೆ ಬೆಂಗಳೂರಿನ ನಂಟು: 2023ರಲ್ಲಿ ಬೆಂಗಳೂರಿನ ಮೆಕೊ ಕಾರ್ಟೋಪಿಯಾ ಸರ್ಕ್ಯೂಟ್‌ನಲ್ಲಿ ನಡೆದ FMSCI ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆದಿತ್ಯ ಚಾಂಪಿಯನ್ ಆಗಿದ್ದರು. ಇದೇ ಸಾಧನೆಯ ಮೂಲಕ ಅವರು ಭಾರತವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಅವಕಾಶ ಪಡೆದಿದ್ದರು.

ISSF ವಿಶ್ವಕಪ್: ಚಿನ್ನ ಗೆದ್ದ ಇಶಾ, ಕಂಚು ಜಯಿಸಿದ ಮನು ಭಾಕರ್

The post ಅಂತಾರಾಷ್ಟ್ರೀಯ ರೇಸಿಂಗ್‌ ವೃತ್ತಿಬದುಕಿನ ಮೊದಲ ವರ್ಷದಲ್ಲೇ ಚೊಚ್ಚಲ ಗೆಲುವು ಸಾಧಿಸಿದ ಆದಿತ್ಯ appeared first on Samyukta Karnataka.

ISSF ವಿಶ್ವಕಪ್: ಚಿನ್ನ ಗೆದ್ದ ಇಶಾ, ಕಂಚು ಜಯಿಸಿದ ಮನು ಭಾಕರ್
ಹ್ಯಾಂಗ್ಝೌ (ಚೀನಾ): ಐಎಸ್‌ಎಸ್‌ಎಫ್ (ISSF) ವಿಶ್ವಕಪ್ ಶೂಟಿಂಗ್ ಟೂರ್ನಿಯಲ್ಲಿ ಭಾರತ ಮಹಿಳಾ ಪಿಸ್ತೂಲ್ ವಿಭಾಗದಲ್ಲಿ ಅದ್ಭುತ ಸಾಧನೆ ಮಾಡಿದ್ದು, 25 ಮೀಟರ್ ಮಹಿಳಾ ಪಿಸ್ತೂಲ್ ಸ್ಪರ್ಧೆಯಲ್ಲಿ ಇಶಾ ಸಿಂಗ್ ಚಿನ್ನದ ಪದಕ ಗೆದ್ದರೆ, ಡಬಲ್ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಮಹತ್ವದ ಮುನ್ನಡೆ ಸಾಧಿಸಿದೆ.

ಹೈದರಾಬಾದ್ ಮೂಲದ ಇಶಾ ಸಿಂಗ್ ಫೈನಲ್‌ನಲ್ಲಿ ಆರಂಭದಿಂದಲೇ ಅತ್ಯುತ್ತಮ ಪ್ರದರ್ಶನ ನೀಡಿ ಸಂಪೂರ್ಣ ಪ್ರಾಬಲ್ಯ ಮೆರೆದರು. 50 ಗುರಿಗಳ ಪೈಕಿ 40 ನಿಖರ ಹಿಟ್‌ಗಳನ್ನು ದಾಖಲಿಸಿದ ಅವರು ಚೀನಾದ ಯುಯುಯು ಜಾಂಗ್ ಅವರನ್ನು ಮೂರು ಅಂಕಗಳ ಅಂತರದಿಂದ ಹಿಂದಿಕ್ಕಿ ಚಿನ್ನದ ಪದಕ ಗೆದ್ದರು. ಈ ವರ್ಷದ ಆರಂಭದಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದ ಇಶಾ, ಮತ್ತೊಮ್ಮೆ ವಿಶ್ವದ ಅಗ್ರ ಪಿಸ್ತೂಲ್ ಶೂಟರ್‌ಗಳಲ್ಲಿ ತಾನೊಬ್ಬರು ಎಂಬುದನ್ನು ಸಾಬೀತುಪಡಿಸಿದರು.

ಇನ್ನೊಂದೆಡೆ, ಮನು ಭಾಕರ್ ಕಂಚಿನ ಪದಕಕ್ಕಾಗಿ ಉತ್ತರ ಕೊರಿಯಾದ ಹ್ಯೋನ್ ಗ್ಯೋಂಗ್ ಪಾಕ್ ವಿರುದ್ಧ ತೀವ್ರ ಪೈಪೋಟಿ ನಡೆಸಿದರು. ಎರಡೂ ಶೂಟರ್‌ಗಳ ನಡುವೆ ಸಮಬಲದ ಹೋರಾಟ ನಡೆದ ಕಾರಣ ಎರಡು ಹಂತದ ಶೂಟ್-ಆಫ್ ನಡೆಸಬೇಕಾಯಿತು. ಕೊನೆಗೆ ಮನು ಭಾಕರ್ ಮೇಲುಗೈ ಸಾಧಿಸಿ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟರು.

ಈ ಎರಡು ಪದಕಗಳೊಂದಿಗೆ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ ಮೂರುಕ್ಕೆ ಏರಿದೆ. ಇದಕ್ಕೂ ಮೊದಲು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೈನ್ಯಮ್ ಬೆಳ್ಳಿ ಪದಕ ಗೆದ್ದು ಭಾರತದ ಪದಕ ಖಾತೆ ತೆರೆದಿದ್ದರು. ಇತ್ತೀಚಿನ ಸಾಧನೆಯೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಆತಿಥೇಯ ಚೀನಾ ಆರು ಚಿನ್ನ ಸೇರಿದಂತೆ ಒಟ್ಟು 14 ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ಆದರೆ ಪುರುಷರ 50 ಮೀಟರ್ ರೈಫಲ್ 3-ಪೊಸಿಷನ್ ವಿಭಾಗದಲ್ಲಿ ಭಾರತಕ್ಕೆ ನಿರಾಸೆಯಾಯಿತು. ಫೈನಲ್ ಪ್ರವೇಶಿಸಿದ್ದ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ 314.3 ಅಂಕಗಳೊಂದಿಗೆ ಆರನೇ ಸ್ಥಾನ ಹಾಗೂ ನೀರಜ್ ಕುಮಾರ್ 303.4 ಅಂಕಗಳೊಂದಿಗೆ ಏಳನೇ ಸ್ಥಾನ ಪಡೆದರು. ಚೀನಾದ ಒಲಿಂಪಿಕ್ ಚಾಂಪಿಯನ್ ಜಾಂಗ್ ಚಾಂಗ್‌ಹಾಂಗ್ ವಿಶ್ವ ದಾಖಲೆ ಮಟ್ಟದ 363 ಅಂಕಗಳೊಂದಿಗೆ ಚಿನ್ನದ ಪದಕ ಜಯಿಸಿದರು.

ಮಹಿಳಾ ಪಿಸ್ತೂಲ್ ವಿಭಾಗದಲ್ಲಿ ಇಶಾ ಸಿಂಗ್ ಮತ್ತು ಮನು ಭಾಕರ್ ತೋರಿದ ಪ್ರದರ್ಶನ ಭಾರತದ ಶೂಟಿಂಗ್ ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದ್ದು, ಮುಂದಿನ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೂ ಹೊಸ ಭರವಸೆ ಮೂಡಿಸಿದೆ.

ಬರ ಪೀಡಿತ ಎಂದು ಘೋಷಿಸದಿದ್ದರೆ ಅಧಿವೇಶನ ನಡೆಸಲು ಬಿಡಲ್ಲ

ಅವಲಕ್ಕಿ ಸೇವಿಸಿ ವಸತಿ ಶಾಲೆಯ 57 ವಿದ್ಯಾರ್ಥಿಗಳು ಅಸ್ವಸ್ಥ

ಜೀರೋ ಟ್ರಾಫಿಕ್‌ನಲ್ಲಿ ಮೂರು ತಿಂಗಳ ಕಂದಮ್ಮನ ಜೀವದ ಓಟ!

ಕಾಮನ್‌ವೆಲ್ತ್ ಕ್ರೀಡಾಕೂಟ: ಜಾವೆಲಿನ್ ಫೈನಲ್‌ಗೆ ನೀರಜ್ ಪ್ರವೇಶ

ಬಡ್ತಿಗೆ ಪರದಾಟ; ಕ್ರೀಡಾ ಇಲಾಖೆಯಲ್ಲಿ ಮೇಲಧಿಕಾರಿಗಳದ್ದೇ ಆಟ

The post ISSF ವಿಶ್ವಕಪ್: ಚಿನ್ನ ಗೆದ್ದ ಇಶಾ, ಕಂಚು ಜಯಿಸಿದ ಮನು ಭಾಕರ್ appeared first on Samyukta Karnataka.

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿ: ರಾಜಾ ಮುತ್ತುಪಾಂಡಿ ಸಾಧನೆ!
ಚೆನ್ನೈ/ಗ್ಲಾಸ್ಗೋ: ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ 23ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟರ್ ಶ್ರೀ ರಾಜಾ ಮುತ್ತುಪಾಂಡಿ ಪುರುಷರ 65 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಮತ್ತೊಂದು ಹೆಮ್ಮೆಯ ಕ್ಷಣವನ್ನು ತಂದಿದ್ದಾರೆ. ಅವರ ಸಾಧನೆಯನ್ನು ಅಭಿನಂದಿಸಿರುವ ತಮಿಳುನಾಡು ಮುಖ್ಯಮಂತ್ರಿ, ಕ್ರೀಡಾಪಟುವಿಗೆ ₹30 ಲಕ್ಷ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದ್ದಾರೆ.

ತಮಿಳುನಾಡಿನ ತೂತುಕುಡಿ ಜಿಲ್ಲೆಯವರಾದ ರಾಜಾ ಮುತ್ತುಪಾಂಡಿ, ಕಠಿಣ ಸ್ಪರ್ಧೆಯ ನಡುವೆ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅವರ ಸಾಧನೆಯು ಭಾರತಕ್ಕೆ ಪದಕ ತಂದುಕೊಡುವುದರ ಜೊತೆಗೆ, ತಮಿಳುನಾಡಿನ ಕ್ರೀಡಾ ಪರಂಪರೆಗೆ ಮತ್ತೊಂದು ಹೆಮ್ಮೆಯ ಅಧ್ಯಾಯವನ್ನು ಸೇರಿಸಿದೆ.

ಮುಖ್ಯಮಂತ್ರಿ ತಮ್ಮ ಅಭಿನಂದನಾ ಸಂದೇಶದಲ್ಲಿ, “ರಾಜಾ ಮುತ್ತುಪಾಂಡಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಮೆಚ್ಚುಗೆಗಳು. ಅವರ ಸಾಧನೆಯನ್ನು ಗೌರವಿಸಿ ತಮಿಳುನಾಡು ಸರ್ಕಾರದಿಂದ ₹30 ಲಕ್ಷಗಳ ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುವುದು” ಎಂದು ತಿಳಿಸಿದ್ದಾರೆ.

ಇದೇ ವೇಳೆ, ರಾಜಾ ಮುತ್ತುಪಾಂಡಿ ಅವರ ಯಶಸ್ಸು ರಾಜ್ಯದ ಹಾಗೂ ದೇಶದ ಯುವ ಕ್ರೀಡಾಪಟುಗಳಿಗೆ ಹೊಸ ಪ್ರೇರಣೆ ಮತ್ತು ಆತ್ಮವಿಶ್ವಾಸ ನೀಡಲಿ ಎಂದು ಅವರು ಆಶಿಸಿದ್ದಾರೆ. ಕಠಿಣ ಪರಿಶ್ರಮ, ಶಿಸ್ತು ಮತ್ತು ನಿರಂತರ ಅಭ್ಯಾಸದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಸಾಧಿಸಬಹುದೆಂಬುದಕ್ಕೆ ಅವರ ಸಾಧನೆಯೇ ಸಾಕ್ಷಿ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ.

ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಭಾರತ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಸಾಧನೆಗಳನ್ನು ದಾಖಲಿಸುತ್ತಿದ್ದು, ರಾಜಾ ಮುತ್ತುಪಾಂಡಿ ಅವರ ಬೆಳ್ಳಿ ಪದಕ ಆ ಸಾಧನೆಗಳ ಸರಣಿಗೆ ಮತ್ತೊಂದು ಅಮೂಲ್ಯ ಸೇರ್ಪಡೆಯಾಗಿದೆ. ಅವರ ಪ್ರದರ್ಶನವು ಮುಂದಿನ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲೂ ಭಾರತದ ಪದಕದ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

ರಾಜಾ ಮುತ್ತುಪಾಂಡಿ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಮತ್ತು ತಮಿಳುನಾಡಿಗೆ ಕೀರ್ತಿ ತಂದುಕೊಡಲಿ ಎಂದು ಮುಖ್ಯಮಂತ್ರಿ ಸೇರಿದಂತೆ ವಿವಿಧ ಕ್ರೀಡಾ ವಲಯದ ಗಣ್ಯರು ಶುಭ ಹಾರೈಸಿದ್ದಾರೆ.

ಬರ ಪೀಡಿತ ಎಂದು ಘೋಷಿಸದಿದ್ದರೆ ಅಧಿವೇಶನ ನಡೆಸಲು ಬಿಡಲ್ಲ

ಅವಲಕ್ಕಿ ಸೇವಿಸಿ ವಸತಿ ಶಾಲೆಯ 57 ವಿದ್ಯಾರ್ಥಿಗಳು ಅಸ್ವಸ್ಥ

ಜೀರೋ ಟ್ರಾಫಿಕ್‌ನಲ್ಲಿ ಮೂರು ತಿಂಗಳ ಕಂದಮ್ಮನ ಜೀವದ ಓಟ!

ಕಾಮನ್‌ವೆಲ್ತ್ ಕ್ರೀಡಾಕೂಟ: ಜಾವೆಲಿನ್ ಫೈನಲ್‌ಗೆ ನೀರಜ್ ಪ್ರವೇಶ

ಬಡ್ತಿಗೆ ಪರದಾಟ; ಕ್ರೀಡಾ ಇಲಾಖೆಯಲ್ಲಿ ಮೇಲಧಿಕಾರಿಗಳದ್ದೇ ಆಟ

The post ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿ: ರಾಜಾ ಮುತ್ತುಪಾಂಡಿ ಸಾಧನೆ! appeared first on Samyukta Karnataka.

ಕಾಮನ್‌ವೆಲ್ತ್ ಗೇಮ್ಸ್‌: ಭಾರತದ ಚಿನ್ನದ ಖಾತೆ ತೆರೆದ ಮೀರಾಬಾಯಿ
ಗ್ಲ್ಯಾಸ್ಗೋ: 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಚಿನ್ನದ ಪದಕದ ಖಾತೆ ತೆರೆದಿದ್ದು, ಮಹಿಳೆಯರ 48 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನ ರಜತ ಪದಕ ವಿಜೇತೆ ಚಾನು ಒಟ್ಟು 190 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆಲ್ಲುವುದರ ಜೊತೆಗೆ ಹೊಸ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನೂ ನಿರ್ಮಿಸಿದರು.

ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಮೂರನೇ ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ ಮೊದಲ ಭಾರತೀಯ ವೇಟ್‌ಲಿಫ್ಟರ್‌ಗಳಲ್ಲಿ ಒಬ್ಬರಾಗಿದ್ದಾರೆ. 2018ರ ಗೋಲ್ಡ್ ಕೋಸ್ಟ್ ಹಾಗೂ 2022ರ ಬರ್ಮಿಂಗ್‌ಹ್ಯಾಮ್ ಕ್ರೀಡಾಕೂಟಗಳ ಬಳಿಕ ಇದೀಗ ಗ್ಲ್ಯಾಸ್ಗೋದಲ್ಲೂ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಸ್ಪರ್ಧೆಯ ಸ್ನ್ಯಾಚ್ ವಿಭಾಗದ ಮೊದಲ ಪ್ರಯತ್ನದಲ್ಲಿ ವಿಫಲರಾದ ಚಾನು, ಬಳಿಕ ಅದ್ಭುತ ಕಮ್‌ಬ್ಯಾಕ್ ಮಾಡಿ ಎರಡನೇ ಪ್ರಯತ್ನದಲ್ಲಿ 82 ಕೆಜಿ ಹಾಗೂ ಮೂರನೇ ಪ್ರಯತ್ನದಲ್ಲಿ 85 ಕೆಜಿ ಭಾರ ಎತ್ತಿದರು. 85 ಕೆಜಿ ಎತ್ತುವ ಮೂಲಕ ಹೊಸ ಕಾಮನ್‌ವೆಲ್ತ್ ಹಾಗೂ ಗೇಮ್ಸ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು.

ಕ್ಲೀನ್ ಅಂಡ್ ಜರ್ಕ್ ವಿಭಾಗದ ಮೊದಲ ಪ್ರಯತ್ನದಲ್ಲಿ ವಿಫಲರಾದರೂ, ಮೊಣಕೈ ನೋವಿನ ನಡುವೆಯೇ ಎರಡನೇ ಪ್ರಯತ್ನದಲ್ಲಿ 105 ಕೆಜಿ ಭಾರ ಎತ್ತಿ ಚಿನ್ನದ ಪದಕವನ್ನು ಖಚಿತಪಡಿಸಿಕೊಂಡರು. ಈ ವಿಭಾಗದಲ್ಲೂ ಹೊಸ ಗೇಮ್ಸ್ ದಾಖಲೆ ನಿರ್ಮಿಸಿದರು. ಒಟ್ಟಾರೆ 190 ಕೆಜಿ ಭಾರ ಎತ್ತಿದ ಚಾನು, ಈ ವಿಭಾಗದಲ್ಲಿ ಹೊಸ ಗೇಮ್ಸ್ ದಾಖಲೆಯೊಂದಿಗೆ ಅಗ್ರಸ್ಥಾನ ಪಡೆದರು.

ಮೀರಾಬಾಯಿ ಚಾನು ಅವರ ಪ್ರದರ್ಶನ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಬೆಳ್ಳಿ ಪದಕ ಗೆದ್ದ ನೈಜೀರಿಯಾದ ರೂತ್ ಅಸುಕ್ವೊ ನ್ಯಾಂಗ್ ಒಟ್ಟು 168 ಕೆಜಿ ಭಾರ ಎತ್ತಿದರೆ, ಚಾನು ಅವರಿಗಿಂತ 22 ಕೆಜಿ ಹೆಚ್ಚು ಭಾರ ಎತ್ತಿ ಸುಲಭವಾಗಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

2018ರ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 110 ಕೆಜಿ ಭಾರ ಎತ್ತಿ ದಾಖಲೆಯನ್ನೂ ನಿರ್ಮಿಸಿದ್ದ ಚಾನು, ಈ ಬಾರಿ ತಮ್ಮದೇ ದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದರೂ ಅದು ಸಾಧ್ಯವಾಗಲಿಲ್ಲ. ಆದಾಗ್ಯೂ, ಗಾಯದ ನಡುವೆಯೂ ತೋರಿದ ಹೋರಾಟ ಮತ್ತು ದಾಖಲೆಯ ಪ್ರದರ್ಶನದಿಂದ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.

ಜಿಂಬಾಬ್ವೆ ವಿರುದ್ಧ ಸರಣಿ ಕ್ಲೀನ್‌ಸ್ವೀಪ್‌ ಸಾಧಿಸಿದ ಭಾರತ

The post ಕಾಮನ್‌ವೆಲ್ತ್ ಗೇಮ್ಸ್‌: ಭಾರತದ ಚಿನ್ನದ ಖಾತೆ ತೆರೆದ ಮೀರಾಬಾಯಿ appeared first on Samyukta Karnataka.