shockingvideo Archives - Samyukta Karnataka

ಗಂಡನ ಕೂದಲು ಹಿಡಿದು ಎಳೆದಾಡಿದ ಹೆಂಡತಿ ಚಿತ್ರಹಿಂಸೆ; ಬೆಚ್ಚಿಬೀಳಿಸುವ ದೃಶ್ಯ ವೈರಲ್; 2 ವರ್ಷದಿಂದ ಅಡಗಿತ್ತು ರಹಸ್ಯ?
ಮದುವೆಯ ಬಂಧವು ಪ್ರೀತಿ ಮತ್ತು ವಿಶ್ವಾಸದ ಮೇಲೆ ನಿಂತಿರುತ್ತದೆ ಎಂಬ ನಂಬಿಕೆಗೆ ವ್ಯತಿರೇಕವಾಗಿರುವ ಘಟನೆಯೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇಲ್ಲಿ ಪತ್ನಿಯೊಬ್ಬಳು ತನ್ನ ಪತಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಎಕ್ಸ್ (X) ಜಾಲತಾಣದಲ್ಲಿ ವೈರಲ್ ಆಗಿದ್ದು, ಪುರುಷರ ಮೇಲಿನ ಕೌಟುಂಬಿಕ ಹಿಂಸಾಚಾರದ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ವಿಶಾಲ್ ಮಾಲ್ವಿಯಾ ಎಂಬ ಬಳಕೆದಾರರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಮಹಿಳೆಯೊಬ್ಬಳು ತನ್ನ ಪತಿಗೆ ಕಪಾಳಮೋಕ್ಷ ಮಾಡುವುದು, ಪದೇ ಪದೇ ಹೊಡೆಯುವುದು ಮತ್ತು ಜಗಳದ ವೇಳೆ ಆತನ ಕೂದಲನ್ನು ಎಳೆಯುವ ಗೊಂದಲದ ದೃಶ್ಯಗಳಿವೆ. ಮಾಹಿತಿ ಪ್ರಕಾರ, ಈ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಪತ್ನಿಯ ದೌರ್ಜನ್ಯವನ್ನು ಮೌನವಾಗಿ ಸಹಿಸಿಕೊಂಡಿದ್ದನು. ಆದ್ರೆ ಪತ್ನಿಯ ಈ ಹುಚ್ಚಾಟದ ದೌರ್ಜನ್ಯ, ಮತ್ತು ತನ್ನ ಮೇಲಾಗುತ್ತಿರುವ ಅನ್ಯಾಯವನ್ನು ಜಗತ್ತಿಗೆ ತೋರಿಸಲು ತನ್ನ ಲ್ಯಾಪ್‌ಟಾಪ್ ಕ್ಯಾಮೆರಾವನ್ನು ರಹಸ್ಯವಾಗಿ ಬಳಸಿ ಈ ಕೃತ್ಯಗಳನ್ನು ದಾಖಲಿಸಿದ್ದಾನೆ.

ನಂತರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. “ಮದುವೆ ಎಂಬುದು ಇಂದು ಭಯಾನಕವಾಗಿ ಕಾಣಿಸುತ್ತಿದೆ” ಎಂದು ಕೆಲವರು ಆತಂಕ ವ್ಯಕ್ತಪಡಿಸಿದರೆ, ಇನ್ನು ಕೆಲವರು “ಮದುವೆಯಾಗುವ ಮೊದಲು ಹತ್ತು ಬಾರಿ ಯೋಚಿಸಿ” ಎಂದು ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯು ಸ್ತ್ರೀವಾದದ ತಪ್ಪು ಬಳಕೆ ಮತ್ತು ಪುರುಷರಿಗೆ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳಲ್ಲಿ ಇರುವ ಕಾನೂನು ರಕ್ಷಣೆಯ ಕೊರತೆಯ ಬಗ್ಗೆ ಪ್ರಶ್ನೆಗಳನ್ನು ಎಳುತ್ತಿದೆ.

ಒಟ್ಟಾರೆ.. ಈ ವೀಡಿಯೊದ ಕಾಮೆಂಟ್ ವಿಭಾಗದಲ್ಲಿ ಜನರ ಆಕ್ರೋಶ ಮುಗಿಲು ಮುಟ್ಟುತ್ತಿದೆ. ಕೆಲವರು ನಿರ್ದಿಷ್ಟ ಸಮುದಾಯದ ಮಹಿಳೆಯರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇದನ್ನು “ಮಂಗಳಸೂತ್ರ ಬಳಸಿದ ದೇಶೀಯ ಭಯೋತ್ಪಾದನೆ” ಎಂದು ಕರೆದಿದ್ದಾರೆ. ಸದ್ಯ ಈ ಘಟನೆಯು ಕೌಟುಂಬಿಕ ಹಿಂಸೆ ಕೇವಲ ಮಹಿಳೆಯರಿಗೆ ಸೀಮಿತವಲ್ಲ, ಪುರುಷರು ಕೂಡ ಇಂತಹ ಘಟನೆಗಳಿಗೆ ಬಲಿಪಶುಗಳಾಗುತ್ತಿದ್ದಾರೆ ಎಂಬ ಕಠೋರ ವಾಸ್ತವವನ್ನು ತಿಳಿಸುತ್ತಿದೆ.

The post ಗಂಡನ ಕೂದಲು ಹಿಡಿದು ಎಳೆದಾಡಿದ ಹೆಂಡತಿ ಚಿತ್ರಹಿಂಸೆ; ಬೆಚ್ಚಿಬೀಳಿಸುವ ದೃಶ್ಯ ವೈರಲ್; 2 ವರ್ಷದಿಂದ ಅಡಗಿತ್ತು ರಹಸ್ಯ? appeared first on Samyukta Karnataka.