shivarajkumar Archives - Samyukta Karnataka

ಕೋಟಿ ಬೆಲೆಯ Defender ಜೊತೆ ಡಿಂಪಲ್ ಕ್ವೀನ್ ಸವಾರಿ; ರಚ್ಚು ಕನಸು ರಿಯಲ್ ಆಗಲು ಶಿವಣ್ಣ ಮಾಡಿದ್ದೇನು?
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಬಹು ದಿನಗಳ ಕನಸು ಕೊನೆಗೂ ನನಸಾಗಿದೆ. ಐಷಾರಾಮಿ ಕಾರುಗಳ ಪ್ರೇಮಿಯಾಗಿರುವ ರಚಿತಾ, ಇದೀಗ ಕೋಟಿ ಬೆಲೆಯ ‘ಲ್ಯಾಂಡ್ ರೋವರ್ ಡಿಫೆಂಡರ್’ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇತ್ತೀಚೆಗೆ ‘ಲಕ ಲಕ ಲ್ಯಾಂಬೋರ್ಘಿನಿ’ ಹಾಡಿನಲ್ಲಿ ಮಿಂಚಿದ್ದ ಅವರು, ಲ್ಯಾಂಬೋರ್ಘಿನಿ ಅಲ್ಲದೆ ಡಿಫೆಂಡರ್ ಕಾರನ್ನೇ ಆಯ್ಕೆ ಮಾಡಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ. ಸದ್ಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ರಚಿತಾ, ಈ ನಡುವೆ ಹೊಸ ಕಾರು ಖರೀದಿ ಮಾಡಿ ಸುದ್ದಿಯಾಗಿದ್ದಾರೆ.

ಇದರಲ್ಲಿ ವಿಶೇಷ ಏನೆಂದರೆ, ತಮ್ಮ ಹೊಸ ಕಾರನ್ನು ಮೊದಲು ತಮ್ಮ ನೆಚ್ಚಿನ ನಟ ಡಾ. ಶಿವರಾಜ್‌ಕುಮಾರ್ ಅವರೇ ಚಾಲನೆ ಮಾಡಬೇಕು ಎಂಬ ಆಸೆಯನ್ನು ರಚಿತಾ ವ್ಯಕ್ತಪಡಿಸಿದ್ದರು.ಅದರಂತೆ, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಸೆಟ್‌ಗೆ ತಮ್ಮ ಡಿಫೆಂಡರ್ ಕಾರನ್ನು ತಂದ ರಚಿತಾ, ಶಿವಣ್ಣ ಹಾಗೂ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ತೋರಿಸಿದರು. ಕಾರನ್ನು ನೋಡಿ ಮೆಚ್ಚಿದ ಶಿವಣ್ಣ, ಸ್ವತಃ ಡ್ರೈವ್ ಮಾಡಿ ರಚಿತಾ ಅವರ ಆಸೆಯನ್ನು ಈಡೇರಿಸಿದರು.

ತಮ್ಮ ಶ್ರಮ ಮತ್ತು ದುಡಿಮೆಯಿಂದ ಈ ಕಾರನ್ನು ಖರೀದಿಸಿದ ರಚಿತಾ ರಾಮ್ ಅವರಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ‘ಡಿಕೆಡಿ’ ಸೆಟ್‌ನಲ್ಲಿ ನಡೆದ ಈ ಸಂಭ್ರಮದ ಕ್ಷಣಗಳ ವೀಡಿಯೋಗಳು ಈಗ ವೈರಲ್ ಆಗಿವೆ.

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, ‘ಲ್ಯಾಂಡ್ ಲಾರ್ಡ್’ ಮತ್ತು ‘ಕಲ್ಟ್’ ಸಕ್ಸಸ್ ಬಳಿಕ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಶಬರಿ ಸರ್ಚಿಂಗ್ ಫಾರ್ ರಾವಣ’ ಹಾಗೂ ‘ಲವ್ ಮೀ ಆರ್ ಹೇಟ್ ಮೀ’ ಚಿತ್ರಗಳ ಶೂಟಿಂಗ್ ಮುಗಿದಿದ್ದು, ಸದ್ಯ ‘ಅಯೋಗ್ಯ-2’ ಮತ್ತು ‘ಕ್ರಿಮಿನಲ್’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

The post ಕೋಟಿ ಬೆಲೆಯ Defender ಜೊತೆ ಡಿಂಪಲ್ ಕ್ವೀನ್ ಸವಾರಿ; ರಚ್ಚು ಕನಸು ರಿಯಲ್ ಆಗಲು ಶಿವಣ್ಣ ಮಾಡಿದ್ದೇನು? appeared first on Samyukta Karnataka.

ಮೇಘನಾ ರಾಜ್: ಮತ್ತೇ ಬಣ್ಣದ ಲೋಕಕ್ಕೆ, ‘ಜೈಲರ್ 2’ ಸೀಕ್ವೆಲ್‌ಗೆ ಸಜ್ಜು!
ಮೇಘನಾ ರಾಜ್: ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಮೇಘನಾ ರಾಜ್ ಸರ್ಜಾ ಜೀವನದ ಕಠಿಣ ಪರೀಕ್ಷೆಗಳನ್ನು ಎದುರಿಸಿ, ಈಗ ಮತ್ತೆ ಬೆಳ್ಳಿತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಪತಿ ಚಿರಂಜೀವಿ ಸರ್ಜಾ ಅಕಾಲಿಕ ನಿಧನದ ನಂತರ ಕಂಗೆಡದೆ, ಮಗ ರಾಯನ್ ರಾಜ್ ಸರ್ಜಾನನ್ನು ಜೀವನದ ಶಕ್ತಿಯನ್ನಾಗಿಸಿಕೊಂಡು ಸಿನಿಮಾಗಳತ್ತ ಮುಖ ಮಾಡಿರುವ ಮೇಘನಾ, ಈಗ ಭಾರತೀಯ ಚಿತ್ರರಂಗವೇ ಎದುರುನೋಡುತ್ತಿರುವ ‘ಜೈಲರ್ 2’ ಚಿತ್ರದ ಮೂಲಕ ದೊಡ್ಡ ಮಟ್ಟದ ಸುದ್ದಿಯಲ್ಲಿದ್ದಾರೆ.

ತಮಿಳು ಚಿತ್ರರಂಗಕ್ಕೆ 13 ವರ್ಷಗಳ ನಂತರ ಪುನರಾಗಮನ: ಸುಮಾರು 13 ವರ್ಷಗಳ ಸುದೀರ್ಘ ಬಿಡುವಿನ ನಂತರ ಮೇಘನಾ ರಾಜ್ ತಮಿಳು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಅದು ಕೂಡ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಬ್ಲಾಕ್‌ಬಸ್ಟರ್ ಸೀಕ್ವೆಲ್ ಮೂಲಕ ಎಂಬುದು ವಿಶೇಷ. 2023ರಲ್ಲಿ ಬಿಡುಗಡೆಯಾದ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿತ್ತು. ಈಗ ಅದರ ಮುಂದುವರಿದ ಭಾಗದಲ್ಲಿ ಮೇಘನಾ ಯಾರೂ ಊಹಿಸದಂತಹ ವಿಭಿನ್ನ ಹಾಗೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಪ್ರೇಕ್ಷಕರಿಗೆ ಕುತುಹಲ ಮೂಡಿಸಿದೆ.

ತಲೆಮಾರುಗಳ ಅಪರೂಪದ ನಂಟು: ಮೇಘನಾ ರಾಜ್ ಕುಟುಂಬಕ್ಕೆ ರಜನಿಕಾಂತ್ ಅವರೊಂದಿಗಿನ ಸಂಬಂಧ ದಶಕಗಳಷ್ಟು ಹಳೆಯದು. 1978ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್‌ರ ‘ತಪ್ಪಿದ ತಾಳ’ ಚಿತ್ರದಲ್ಲಿ ಮೇಘನಾ ತಂದೆ ಸುಂದರ್ ರಾಜ್ ಮತ್ತು ತಾಯಿ ಪ್ರಮೀಳಾ ರಜನಿಕಾಂತ್ ಅವರೊಂದಿಗೆ ನಟಿಸಿದ್ದರು. ಈಗ ಸುಮಾರು 48 ವರ್ಷಗಳ ನಂತರ, ಅದೇ ಸೂಪರ್‌ಸ್ಟಾರ್ ಜೊತೆ ಮಗಳು ಮೇಘನಾ ಬಣ್ಣ ಹಚ್ಚುತ್ತಿರುವುದು ಇವರ ವೃತ್ತಿಜೀವನದ ಮೈಲಿಗಲ್ಲಾಗಿದೆ.

ಚಿತ್ರದಲ್ಲಿನ ಆಕರ್ಷಣೆ: ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರದಲ್ಲಿ ರಮ್ಯಾ ಕೃಷ್ಣನ್, ಯೋಗಿ ಬಾಬು ಮತ್ತು ಮಿರ್ನಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೊದಲ ಭಾಗದಲ್ಲಿ ‘ನರಸಿಂಹ’ನಾಗಿ ಅಬ್ಬರಿಸಿದ್ದ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಈ ಸೀಕ್ವೆಲ್‌ನಲ್ಲೂ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಇದರೊಂದಿಗೆ ಮೇಘನಾ ರಾಜ್ ಕನ್ನಡದಲ್ಲಿ ‘ಸಂಗೀತಾ ಬಾರ್ ಅಂಡ್ ರೆಸ್ಟೋರೆಂಟ್’ ಎನ್ನುವ ಚಿತ್ರದ ಮೂಲಕವೂ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.

ಜೀವನದಲ್ಲಿ ಎದುರಾದ ನೋವುಗಳನ್ನು ಧೈರ್ಯದಿಂದ ಮೆಟ್ಟಿ ನಿಂತು, ತಮ್ಮ ಪ್ರತಿಭೆಯ ಮೂಲಕ ಮತ್ತೆ ಚಲನಚಿತ್ರ ರಂಗದಲ್ಲಿ ನೆಲೆ ಕಂಡುಕೊಳ್ಳುತ್ತಿರುವ ಮೇಘನಾ ರಾಜ್ ಈ ಪಯಣ ಅನೇಕರಿಗೆ ಸ್ಫೂರ್ತಿಯಾಗಿದೆ. ‘ಜೈಲರ್ 2’ ಚಿತ್ರದಲ್ಲಿ ಪಾತ್ರವು ಕೆರಿಯರ್‌ಗೆ ಹೊಸ ಆಯಾಮ ನೀಡಲಿದೆ ಎಂಬ ಭರವಸೆ ಅಭಿಮಾನಿಗಳಲ್ಲಿದೆ.

The post ಮೇಘನಾ ರಾಜ್: ಮತ್ತೇ ಬಣ್ಣದ ಲೋಕಕ್ಕೆ, ‘ಜೈಲರ್ 2’ ಸೀಕ್ವೆಲ್‌ಗೆ ಸಜ್ಜು! appeared first on Samyukta Karnataka.