#sandalwood Archives - Samyukta Karnataka

LPG ಅಭಾವ: ಆಟೊ ಚಾಲಕರ ಸಂಕಷ್ಟಕ್ಕೆ ಧ್ರುವ ಸರ್ಜಾ ₹25 ಲಕ್ಷ ನೆರವು
ಬೆಂಗಳೂರು: ರಾಜ್ಯದಲ್ಲಿ ಎಲ್‌ಪಿಜಿ (LPG) ಅನಿಲದ ಅಭಾವ ತೀವ್ರವಾಗುತ್ತಿರುವ ಹಿನ್ನೆಲೆ ಆಟೊ ಚಾಲಕರ ಜೀವನೋಪಾಯವೇ ಸಂಕಷ್ಟಕ್ಕೀಡಾಗಿದೆ. ಈ ನಡುವೆ ಚಂದನವನದ ಖ್ಯಾತ ನಟ ಧ್ರುವ ಸರ್ಜಾ ಅವರು ಮಾನವೀಯ ಹೆಜ್ಜೆಯಾಗಿ ಆಟೊ ಚಾಲಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ₹25 ಲಕ್ಷ ಧನ ಸಹಾಯ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡ ಧ್ರುವ ಸರ್ಜಾ, “ಆಟೊ ಚಾಲಕರು ನಮ್ಮ ದೇಶದ ಬೆನ್ನೆಲುಬು. ಪ್ರತಿದಿನ ದುಡಿದು ತಮ್ಮ ಕುಟುಂಬಗಳನ್ನು ನಡೆಸುವುದರ ಜೊತೆಗೆ ಸಾರ್ವಜನಿಕ ಸೇವೆಯನ್ನೂ ಸಲ್ಲಿಸುತ್ತಿದ್ದಾರೆ. ಆದರೆ ಪ್ರಸ್ತುತ ಎಲ್‌ಪಿಜಿ ಕೊರತೆಯಿಂದ ಅವರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಹೇಳಿದ್ದಾರೆ.

ಪ್ರಸ್ತುತ ಹಲವೆಡೆ ಎಲ್‌ಪಿಜಿ ಲಭ್ಯವಿಲ್ಲದ ಕಾರಣ ಆಟೊ ಸಂಚಾರವೇ ಸ್ಥಗಿತಗೊಂಡಿದೆ. ಕೆಲ ಕಡೆಗಳಲ್ಲಿ ಗ್ಯಾಸ್ ಸಿಕ್ಕರೂ ದ್ವಿಗುಣ ದರಕ್ಕೆ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ. “ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ. ಆದರೆ ಈ ಸಮಸ್ಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಗಮನಿಸಿ ಪರಿಹಾರ ಕಂಡುಕೊಳ್ಳಬೇಕು” ಎಂದು ಅವರು ಮನವಿ ಮಾಡಿದ್ದಾರೆ.

ಆಟೊ ಚಾಲಕರ ಸಂಘದವರು ಈ ನೆರವಿಗೆ ಧನ್ಯವಾದಗಳನ್ನು ಸಲ್ಲಿಸಿದ್ದು, ಸರ್ಕಾರ ತ್ವರಿತ ಕ್ರಮ ಕೈಗೊಂಡು ಎಲ್‌ಪಿಜಿ ಪೂರೈಕೆಯನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಇದೀಗ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಹಲವರು ಧ್ರುವ ಸರ್ಜಾ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

The post LPG ಅಭಾವ: ಆಟೊ ಚಾಲಕರ ಸಂಕಷ್ಟಕ್ಕೆ ಧ್ರುವ ಸರ್ಜಾ ₹25 ಲಕ್ಷ ನೆರವು appeared first on Samyukta Karnataka.

“ನೂರು ಜನ್ಮಕೂ…” ನೆನಪುಗಳಿಗೆ ಮರುಜೀವ; ಸದ್ಯದಲ್ಲೇ ಅಮೆರಿಕ ಅಮೆರಿಕ ಪಾರ್ಟ್-2! ನಿರ್ದೇಶಕರಿಂದ ಅಧಿಕೃತ ಘೋಷಣೆ
ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಕೆಲವು ಸಿನಿಮಾಗಳು ಕೇವಲ ಮನರಂಜನೆಯಾಗಿ ಉಳಿಯದೆ ಒಂದು ಭಾವನೆಯಾಗಿ ಬದಲಾಗಿವೆ. ಅಂತಹ ಅಪರೂಪದ ಚಿತ್ರಗಳಲ್ಲಿ ‘ಅಮೆರಿಕ-ಅಮೆರಿಕ’ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಇಂದಿಗೆ ಈ ಸಿನಿಮಾ ಬೆಳ್ಳಿಪರದೆಗೆ ಬಂದು ಭರ್ತಿ ಮೂವತ್ತು ವರ್ಷಗಳು ಸಂದಿವೆ. 1997ರ ಏಪ್ರಿಲ್ 11ರಂದು ಬಿಡುಗಡೆಯಾಗಿದ್ದ ಈ ಚಿತ್ರ, ಅಂದು ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಗೆಳೆತನದ ಗಾಢತೆ, ಪ್ರೀತಿಯ ತೊಳಲಾಟ, ದೇಶಪ್ರೇಮದ ಸೆಳೆತ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ನಡುವೆ ನಮ್ಮ ಮಣ್ಣಿನ ಸೊಗಡನ್ನು ಎತ್ತಿ ಹಿಡಿದ ಈ ಸಿನಿಮಾ, ಇಂದಿಗೂ ಕನ್ನಡಿಗರ ಮೆಚ್ಚಿನ ‘ಕಲ್ಟ್ ಕ್ಲಾಸಿಕ್’ ಚಿತ್ರಗಳಲ್ಲಿ ಒಂದಾಗಿ ಉಳಿದಿದೆ.

ರಮೇಶ್ ಅರವಿಂದ್ ಅವರ ಅಮಾಯಕ ನಟನೆ, ಹೇಮಾ ಪಂಚಮುಖಿ ಅವರ ಸ್ನಿಗ್ಧ ಸೌಂದರ್ಯ ಮತ್ತು ಅಕ್ಷಯ್ ಆನಂದ್ ಅವರ ತೀವ್ರತೆಯುಳ್ಳ ಪಾತ್ರಗಳು ಜನಮಾನಸದಲ್ಲಿ ಅಚ್ಚೊತ್ತಿವೆ. ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದ್ದ ಈ ಸಿನಿಮಾ, ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನ ಪ್ರತಿಭೆಗೆ ಹಿಡಿದ ಕನ್ನಡಿಯಾಗಿತ್ತು. ಈ ಸುದೀರ್ಘ ಪಯಣದ ಸಂಭ್ರಮವನ್ನು ಹಂಚಿಕೊಂಡಿರುವ ನಾಗತಿಹಳ್ಳಿ ಅವರು ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಭಾವುಕರಾಗಿ ಬರೆದುಕೊಂಡಿದ್ದಾರೆ. “ಇದು ನಾನು ರೂಪಿಸಿದ ಸಿನಿಮಾವಲ್ಲ, ಬದಲಾಗಿ ನನ್ನನ್ನೇ ರೂಪಿಸಿದ ಸಿನಿಮಾ; ಕೋಟಿ ಕೋಟಿ ಕಂಗಳಿಗೆ ಕನಸು ಮತ್ತು ಮನಗಳಿಗೆ ಮಮಕಾರ ನೀಡಿದ ಚಿತ್ರ” ಎಂದು ಹೇಳುವ ಮೂಲಕ ಕನ್ನಡಿಗರಿಗೆ ತಮ್ಮ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

ಇದೇ ಸುಸಂದರ್ಭದಲ್ಲಿ ನಿರ್ದೇಶಕರು ಚಿತ್ರಪ್ರೇಮಿಗಳಿಗೆ ಒಂದು ದೊಡ್ಡ ಸಿಹಿಸುದ್ದಿಯನ್ನು ನೀಡಿದ್ದಾರೆ. ಹೌದು, ಕನ್ನಡಿಗರು ಹಲವು ವರ್ಷಗಳಿಂದ ಕಾಯುತ್ತಿದ್ದ ‘ಅಮೆರಿಕ-ಅಮೆರಿಕ 2’ ಚಿತ್ರವನ್ನು ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಘೋಷಣೆ ಹೊರಬೀಳುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮದ ಅಲೆ ಎದ್ದಿದೆ. ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ಚಿತ್ರದ ಮುಂದುವರಿದ ಭಾಗ ಹೇಗಿರಬಹುದು ಎಂಬ ಕಲ್ಪನೆಯಲ್ಲಿ ಮುಳುಗಿದ್ದಾರೆ. ಹಲವರು ನಾಗತಿಹಳ್ಳಿ ಅವರ ಪೋಸ್ಟ್‌ಗೆ ಕಮೆಂಟ್ ಮಾಡಿ, ಚಿತ್ರವನ್ನು ಮರು-ಬಿಡುಗಡೆ ಮಾಡುವಂತೆ ಮನವಿ ಮಾಡುವುದರ ಜೊತೆಗೆ, ಸೀಕ್ವೆಲ್‌ನಲ್ಲಿಯೂ ಹಳೆಯ ಕಲಾವಿದರೇ ಇರಲಿ ಎಂಬ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶನದಿಂದ ತುಸು ದೂರ ಉಳಿದಿದ್ದರು. 2015ರ ‘ಇಷ್ಟಕಾಮ್ಯ’ ಮತ್ತು 2020ರ ‘ಇಂಡಿಯಾ vs ಇಂಗ್ಲೆಂಡ್’ ನಂತರ ಅವರ ಅಭಿಮಾನಿಗಳು ಒಂದು ಸದಭಿರುಚಿಯ ಚಿತ್ರಕ್ಕಾಗಿ ಕಾಯುತ್ತಿದ್ದರು. ಈಗ ಸರಿ ಸುಮಾರು ಮೂರು ದಶಕಗಳ ಬಳಿಕ ತಮ್ಮದೇ ಸಿನಿಮಾದ ಸೀಕ್ವೆಲ್ ಮೂಲಕ ಮರಳುತ್ತಿರುವುದು ಸಹಜವಾಗಿಯೇ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿದೆ. ನಾಗತಿಹಳ್ಳಿ ಅವರ ಸಂವೇದನಾಶೀಲ ಕಥೆ ಮತ್ತು ಈಗಿನ ತಲೆಮಾರಿನ ಬದಲಾದ ಅಮೆರಿಕದ ಚಿತ್ರಣ ಎರಡನೇ ಭಾಗದಲ್ಲಿ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಸದ್ಯಕ್ಕೆ ಎಲ್ಲರಲ್ಲಿದೆ.

The post “ನೂರು ಜನ್ಮಕೂ…” ನೆನಪುಗಳಿಗೆ ಮರುಜೀವ; ಸದ್ಯದಲ್ಲೇ ಅಮೆರಿಕ ಅಮೆರಿಕ ಪಾರ್ಟ್-2! ನಿರ್ದೇಶಕರಿಂದ ಅಧಿಕೃತ ಘೋಷಣೆ appeared first on Samyukta Karnataka.

ಪ್ರಕೃತಿಯ ಮಡಿಲಲ್ಲಿ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಅರಮನೆ: ಕೊಡಗಿನ ಐಷಾರಾಮಿ ಬಂಗಲೆ ಇಲ್ಲಿದೆ ಡಿಟೇಲ್ಸ್..!‌
ಮಡಿಕೇರಿ: ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಸಂಚಲನ ಮೂಡಿಸಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ತಮ್ಮ ನಟನೆಯ ಜೊತೆಗೆ ಜೀವನಶೈಲಿಯಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ರಶ್ಮಿಕಾ ಮದುವೆ ನಂತರ ಪತಿಯ ಜೊತೆ ಮೊದಲ ಬಾರಿಗೆ ತನ್ನ ಹುಟ್ಟುರಿನಲ್ಲಿ ಅದ್ದೂರಿ ಆರಕ್ಷತೆಯ ಜೊತೆಗೆ, ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಕೊಂಡರು. ಹಾಗೇ ವಿವಾಹವಾಗಿ ವಿಜಯ್‌ ಜೊತೆಗೆ ರಶ್ಮಿಕಾ ತನ್ನ ಸ್ವಂತ ಮನೆಗೆ ಕಾಲಿಟಿದ್ದರು.

ನಟಿ ರಶ್ಮಿಕಾ ಮಂದಣ್ಣ ಮದುವೆಯಾಗಿ ತವರು ಮನೆಗೆ ಕಾಲಿಟ್ಟಾಗಿನಿಂದ, ಆ ಬಂಗಲೆಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೊಡಗಿನ ವಿರಾಜಪೇಟೆ ಸಮೀಪದ ಕದನೂರು ಗ್ರಾಮದಲ್ಲಿರುವ ಐಷಾರಾಮಿ ಬಂಗಲೆ ಎಲ್ಲರ ಗಮನ ಸೆಳೆಯುತ್ತಿದೆ. ಇದು ಕುದ್ದ್‌ ಅರಮನೆಯಂತೆ ಜನರಿಗೆ ಕಂಗೂಳಿಸುತ್ತಿದೆ. ಈ ಕುರಿತು ತಿಳಿಯಲು ಇಲ್ಲಿದೆ ಡಿಟೇಲ್ಸ್.

ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಲನ: ಮಡಿಕೇರಿಯ ಹಸಿರು ಪರಿಸರದ ನಡುವೆ ಇರುವ ನಟಿಯ ಈ ಏಕ ಅಂತಸ್ತಿನ ಬಂಗಲೆಯು ಅತ್ಯಂತ ಶ್ರೀಮಂತ ಹಾಗೂ ರಾಯಲ್ ಲುಕ್ ಹೊಂದಿದೆ. ಮನೆಯ ಒಳಾಂಗಣಕ್ಕೆ ಸಾಂಪ್ರದಾಯಿಕ ಸ್ಪರ್ಶ ನೀಡಲು ಮರದ ಕೆತ್ತನೆಯ ಕೆಲಸಗಳನ್ನು ಮಾಡಿಸಲಾಗಿದೆ. ಹಳೆಯ ಕಾಲದ ಶೈಲಿ ಮತ್ತು ಇಂದಿನ ಆಧುನಿಕ ಜೀವನಶೈಲಿಯ ಸಂಯೋಜನೆಯಂತೆ ಕಾಣುವ ಈ ಮನೆಯಲ್ಲಿ ಆಧುನಿಕ ಎಸಿ ಮತ್ತು ಸ್ಮಾರ್ಟ್ ಲೈಟಿಂಗ್ ವ್ಯವಸ್ಥೆಗಳೂ ಮಾಡಿಸಲಾದೆ.

ಪ್ರಕೃತಿಯ ನಡುವೆ ಪ್ರಶಾಂತ ತಾಣ: ಮನೆಯ ಸುತ್ತಮುತ್ತ ದಟ್ಟವಾದ ಸಸ್ಯವರ್ಗ ಮತ್ತು ಎತ್ತರದ ಮರಗಳಿದ್ದು, ಇದು ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ ಬೇಸಿಗೆಯಲ್ಲಿ ತಂಪಾದ ವಾತಾವರಣ ನೀಡುತ್ತದೆ. ಫ್ರೆಂಚ್ ಶೈಲಿಯ ಬಾಗಿಲುಗಳು ಮನೆಯೊಳಗೆ ನೈಸರ್ಗಿಕ ಬೆಳಕು ಹರಿಯುವಂತೆ ಮಾಡುತ್ತವೆ. ಇಲ್ಲಿನ ಲಿವಿಂಗ್ ರೂಮ್ ಬೀಜ್ ಸ್ಯೂಡ್ ಸೋಫಾಗಳು, ಕ್ರಿಸ್ಟಲ್ ಚ್ಯಾಂಡಲಿಯರ್ ಲೈಟ್‌ಗಳು ಮತ್ತು ಅದ್ಭುತ ಕಲಾಕೃತಿಗಳಿಂದ ಅಲಂಕೃತಗೊಂಡಿದ್ದು, ಬರುವ ಅತಿಥಿಗಳಿಗೆ ರಾಜಾತಿಥ್ಯದ ಅನುಭವ ನೀಡುತ್ತವೆ.

ಮನಮೋಹಕ ಬಾಲ್ಕನಿ: ಈ ಬಂಗಲೆಯ ಪ್ರಮುಖ ಆಕರ್ಷಣೆ ಎಂದರೆ ಅಲ್ಲಿನ ಬಾಲ್ಕನಿ. ಇಲ್ಲಿಂದ ಕೊಡಗಿನ ಸುಂದರ ಗುಡ್ಡಗಾಡುಗಳ ವಿಹಂಗಮ ನೋಟ ಕಾಣಸಿಗುತ್ತದೆ. ಪುಟ್ಟ ಉದ್ಯಾನದಂತೆ ಕಂಗೊಳಿಸುವ ಈ ಬಾಲ್ಕನಿಯು ರಶ್ಮಿಕಾಳ ನೆಚ್ಚಿನ ತಾಣವಾಗಿದ್ದು, ಪ್ರಕೃತಿಯ ನಾದವನ್ನು ಆಸ್ವಾದಿಸಲು ಇದು ಹೇಳಿಮಾಡಿಸಿದಂತಿದೆ. ಒಟ್ಟಾರೆಯಾಗಿ, ಸಾಮಾನ್ಯ ಹಿನ್ನೆಲೆಯಿಂದ ಬಂದು ಇಂದು ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ರಶ್ಮಿಕಾ ಯಶಸ್ಸಿಗೆ ಈ ಸುಂದರ ಬಂಗಲೆಯು ಸಾಕ್ಷಿಯಂತಿದೆ.

The post ಪ್ರಕೃತಿಯ ಮಡಿಲಲ್ಲಿ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಅರಮನೆ: ಕೊಡಗಿನ ಐಷಾರಾಮಿ ಬಂಗಲೆ ಇಲ್ಲಿದೆ ಡಿಟೇಲ್ಸ್..!‌ appeared first on Samyukta Karnataka.

ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಹುಟ್ಟಿದ ಡಾಲಿ ಹೊಸ ಸಿನಿಮಾ ‘ಮದರ್ ಪ್ರಾಮಿಸ್’!
ನಟ ರಾಕ್ಷಸ ಡಾಲಿ ಧನಂಜಯ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಅವರ ಮುಂಬರುವ ಹೊಸ ಸಿನಿಮಾದ ಟೈಟಲ್ ‘ಮದರ್ ಪ್ರಾಮಿಸ್’ ಎಂದು ಘೋಷಣೆಯಾಗಿದ್ದು, ಇದರ ಹಿಂದಿರುವ ಇಂಟರೆಸ್ಟಿಂಗ್ ಕಥೆಯನ್ನು ಸ್ವತಃ ಡಾಲಿ ಬಿಚ್ಚಿಟ್ಟಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಈ ಚಿತ್ರದ ಕಥೆಗೂ ನಮ್ಮ ಹೆಮ್ಮೆಯ ಆರ್‌ಸಿಬಿ (RCB) ತಂಡಕ್ಕೂ ಬಿಡಿಸಲಾಗದ ನಂಟಿದೆ!

ಹೌದು, 2025ರಲ್ಲಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿದ ಆ ಸಂಭ್ರಮದ ರಾತ್ರಿಯೇ ಈ ಸಿನಿಮಾದ ಎಳೆಯೊಂದು ಹುಟ್ಟಿತಂತೆ. ಆ ಕ್ಷಣದ ಅತೀವ ಖುಷಿ, ಕಣ್ಣೀರು ಹಾಗೂ ಹೈವೋಲ್ಟೇಜ್ ಎಮೋಷನ್‌ಗಳು ಧನಂಜಯ್ ಅವರ ಈ ಹೊಸ ಚಿತ್ರಕ್ಕೆ ಸ್ಫೂರ್ತಿಯಾಗಿವೆ. ಈ ವಿಶೇಷವಾದ ಭಾವನೆಗಳೇ ‘ಮದರ್ ಪ್ರಾಮಿಸ್’ ಎಂಬ ಕ್ಯಾಚಿ ಹಾಗೂ ಆಪ್ತವಾದ ಶೀರ್ಷಿಕೆ ಹುಟ್ಟಲು ಕಾರಣ ಎಂದು ಅವರು ಹೇಳಿದ್ದಾರೆ. “ಮದರ್ ಪ್ರಾಮಿಸ್” ಎಂಬುದು ಪ್ರತಿಯೊಬ್ಬ ಯುವಕನೂ ದಿನನಿತ್ಯ ಬಳಸುವ ಒಂದು ಸಾಮಾನ್ಯ ಪದವಾಗಿರುವುದರಿಂದ (Slang), ಇದು ಯುವಜನತೆಗೆ ಬೇಗನೆ ಕನೆಕ್ಟ್ ಆಗಲಿದೆ.

ಅಷ್ಟೇ ಅಲ್ಲದೆ, ಈ ಟೈಟಲ್ ಡಾಲಿ ಅವರ ಕಾಲೇಜು ದಿನಗಳತ್ತ ಮರಳಿ ಕರೆದೊಯ್ದಿದೆ. ಅಂದು ತಮ್ಮ ಆಪ್ತ ಸ್ನೇಹಿತರಾದ ನಾಗ, ಸುನಿಲ್ ಮತ್ತು ಮಹದೇವ ಜೊತೆಗೂಡಿ ಇದೇ ಹೆಸರಿನಲ್ಲಿ ತಮಾಷೆಯ ಶಾರ್ಟ್ ಫಿಲ್ಮ್ ಒಂದನ್ನು ಮಾಡಿದ್ದರಂತೆ. ಅಂದಿನ ಆ ತುಂಟಾಟದ ನೆನಪುಗಳು ಇಂದಿನ ಈ ದೊಡ್ಡ ಸಿನಿಮಾಗೆ ಭಾವನಾತ್ಮಕ ಬೆಸುಗೆಯಾಗಿದೆ. ಅಂದು ಶಾರ್ಟ್ ಫಿಲ್ಮ್‌ಗಳಿಂದ ಶುರುವಾದ ಡಾಲಿಯ ಬಣ್ಣದ ಪಯಣ, ಇಂದು ಕನ್ನಡಿಗರ ನೆಚ್ಚಿನ ನಟನಾಗಿ ಬೆಳೆದಿರುವುದು ಅವರ ಕಠಿಣ ಶ್ರಮಕ್ಕೆ ಹಿಡಿದ ಕನ್ನಡಿಯಾಗಿದೆ.

ಇನ್ನು ಚಿತ್ರದ ಮೊದಲ ಹಾಡಿಗೆ ನವನೀತ್ ಶ್ಯಾಮ್ ಅದ್ಭುತವಾಗಿ ಸಂಗೀತ ಸಂಯೋಜಿಸಿದ್ದು, ಶಶಾಂಕ್ ಸೋಗಲ್ ಅವರ ಸಾಹಿತ್ಯವಿದೆ. ಈ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಪಕ್ಕಾ ಮಾಸ್ ಹಾಗೂ ಯೂತ್‌ಫುಲ್ ಆಗಿರಲಿದೆ ಎಂಬ ನಿರೀಕ್ಷೆಯಿದೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಸೀಸನ್‌ನಲ್ಲೂ ಆರ್‌ಸಿಬಿ ಅಬ್ಬರಿಸುತ್ತಿದ್ದು, “ಈ ಸಲನೂ ಕಪ್ ನಮ್ದೇ” ಎಂದು ಡಾಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಗೆಲುವಿನಂತೆ, ಡಾಲಿ ಅವರ ಈ ಚಿತ್ರವೂ ಪ್ರೇಕ್ಷಕರ ಹೃದಯ ಗೆಲ್ಲುವುದು ಖಚಿತ ಎನ್ನಲಾಗುತ್ತಿದೆ.

The post ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಹುಟ್ಟಿದ ಡಾಲಿ ಹೊಸ ಸಿನಿಮಾ ‘ಮದರ್ ಪ್ರಾಮಿಸ್’! appeared first on Samyukta Karnataka.

‘ಕಾಕ್ಟೇಲ್-2’ ಅಪ್ಡೇಟ್: ಬೋಲ್ಡ್ ಲುಕ್‌ನಲ್ಲಿ ರಶ್ಮಿಕಾ ಮಂದಣ್ಣ, ಫಸ್ಟ್ ಸಾಂಗ್ ನಾಳೆ ರಿಲೀಸ್
ನ್ಯಾಷನಲ್‌ ಕ್ರಶ್‌ ನಟಿ ರಶ್ಮಿಕಾ ಮಂದಣ್ಣ, ಕನ್ನಡ ಮತ್ತು ಬಾಲಿವುಡ್‌ ಸೇರಿದಂತೆ ಹಲವು ಕಡೆ ತಮ್ಮ ನಟನೆಯ ಮುಲಕವೇ ಹೆಸರು ಮಾಡಿದ್ದಾರೆ. ಅಲ್ಲದೇ ಕಳೆತ ತಿಂಗಳಲ್ಲಿ ನಟ ವಿಜಯ್‌ ದೇವರಕೊಂಡ ಜೊತೆ ಸಪ್ತಪದಿ ತುಳಿದು, ವೈವಾಹಿಕ ಜೀವನ ಸಂಭ್ರಮಿಸುತ್ತಿದ್ದಾರೆ. ಹಾಗೇ ನಿನ್ನೆಯಷ್ಟೇ ಅದ್ದೂರಿಯಾಗಿ ಪತಿಯೂಟ್ಟಿಗೆ ಬರ್ತ್‌ ಡೇ ಆಚರಿಸಿಕೊಂಡರು.

ಇದಾದ ನಂತರ ನಟಿ ರಶ್ಮಿಕಾ ʻದಿ ಗರ್ಲ್‌ ಫ್ರೇಂಡ್‌ʼ ಚಿತ್ರದ ಯಶಸಿನ ನಂತರ ಇನ್ನೂಂದು ಬಹು ನಿರೀಕ್ಷಿತ ‘ಕಾಕ್ಟೇಲ್-2’ ಚಿತ್ರದ ಕುರಿತು ಹೊಸ ಅಪ್ಡೇಟ್ ಹೊರಬಿದ್ದಿದೆ. ನಟಿ ರಶ್ಮಿಕಾ ಮಂದಣ್ಣ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಏಪ್ರಿಲ್ 8 ರಂದು ಚಿತ್ರದ ಮೊದಲ ಹಾಡು ‘ಜಬ್ ತಲಕ್’ ಬಿಡುಗಡೆಯಾಗಲಿದ್ದು, ಅದರ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಈ ಪೋಸ್ಟರ್‌ಗಳಲ್ಲಿ ಶಾಹಿದ್ ಕಪೂರ್, ಕೃತಿ ಸೆನೋನ್ ಹಾಗೂ ರಶ್ಮಿಕಾ ಮಂದಣ್ಣ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ರಶ್ಮಿಕಾ ಸ್ಟೈಲಿಷ್ ಹಾಗೂ ಬೋಲ್ಡ್ ಲುಕ್ ಹೆಚ್ಚು ಗಮನ ಸೆಳೆದಿದ್ದು, ಚಿತ್ರದಲ್ಲಿನ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಆಧುನಿಕ ಕಾಸ್ಟ್ಯೂಮ್ ಮತ್ತು ವಿಭಿನ್ನ ಪ್ರೆಸೆಂಟೇಶನ್ ಮೂಲಕ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.

‘ಕಾಕ್ಟೇಲ್-2’ ಚಿತ್ರವು ಇಂದಿನ ಯುವಜನರ ಸಂಬಂಧಗಳು, ಪ್ರೀತಿ, ಭಾವನಾತ್ಮಕ ಸಂಘರ್ಷ ಮತ್ತು ಲೈಫ್‌ಸ್ಟೈಲ್ ಕುರಿತ ಕಥೆಯನ್ನು ಒಳಗೊಂಡಿದೆ. ನಿರ್ದೇಶಕ ಹೋಮಿ ಅದಜಾನಿಯಾ ಈ ಚಿತ್ರವನ್ನು ನಿರ್ದೇಶಿಸಿದ್ದು, ಮೊದಲ ಭಾಗ ‘ಕಾಕ್ಟೇಲ್’ ಮೂಲಕ ಯಶಸ್ಸು ಕಂಡಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ಈ ಚಿತ್ರ ತೆರೆಗೆ ಬರುತ್ತಿದೆ.

ಸಾಯಿ ಅಭಯಂಕರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ‘ಜಬ್ ತಲಕ್’ ಹಾಡಿನ ಮೇಲೂ ಈಗಾಗಲೇ ನಿರೀಕ್ಷೆ ಹೆಚ್ಚಾಗಿದೆ. ಚಿತ್ರವು ಜೂನ್ 19, 2026 ರಂದು ಬಿಡುಗಡೆಯಾಗಲಿದೆ.

ಇತ್ತೀಚೆಗೆ ರಶ್ಮಿಕಾ ತಮ್ಮ ತವರಿನಲ್ಲಿ ಸಮಯ ಕಳೆಯುತ್ತಿದ್ದರೂ, ತಮ್ಮ ಸಿನಿಮಾಗಳ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ‘ಕಾಕ್ಟೇಲ್-2’ ಮೂಲಕ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ.

ಒಟ್ಟಾರೆ.. ನಟಿ ರಶ್ಮಿಕಾ ತಮ್ಮ ಫ್ಯಾನ್ಸ್‌ಗಳಿ ಸಂತಸದ ಸುದ್ದಿಯ ಮೇಲೂಂದು ಸಿಹಿ ಕೊಡುತ್ತಲೇ ಇದ್ದಾರೆ. ಹಾಗೇ ಈ ಸಿನಿಮಾದ ಹಾಡು
ಭರ್ಜರಿಯಾಗಿ ರೀಲಿಸ್ ಆಗಲಿದ್ದು, ಈಗಾಗಲೇ ಹಾಡಿನ ಪೋಸ್ಟರ್‌ಗಳು ವೈರಲ್ ಆಗಿವೆ. ಅಭಿಮಾನಿಗಳು ಸಹ ಮದುವೆ ನಂತರ ಮತ್ತೆ ಬಿಗ್‌ ಸ್ಕ್ರೀನ್‌ ಮೇಲೆ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.

The post ‘ಕಾಕ್ಟೇಲ್-2’ ಅಪ್ಡೇಟ್: ಬೋಲ್ಡ್ ಲುಕ್‌ನಲ್ಲಿ ರಶ್ಮಿಕಾ ಮಂದಣ್ಣ, ಫಸ್ಟ್ ಸಾಂಗ್ ನಾಳೆ ರಿಲೀಸ್ appeared first on Samyukta Karnataka.

‘ಜೆರಾಕ್ಸ್’ ವೆಬ್ ಸರಣಿ ಪ್ರೋಮೋ ರಿಲೀಸ್!
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರ ನಿರ್ಮಾಣ ಸಂಸ್ಥೆ Dolly Pictures ಅಡಿಯಲ್ಲಿ, ZEE5 ಮೂಲಕ ಬಿಡುಗಡೆಯಾಗಲಿರುವ ಹೊಸ ಕನ್ನಡ ವೆಬ್ ಸರಣಿಯ ಪ್ರೋಮೋ ಬಿಡುಗಡೆಯಾಗಿ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

“ಜೆರಾಕ್ಸ್ (Xerox)” ಎಂಬ ಹೆಸರಿನ ಈ ವೆಬ್ ಸರಣಿ, ಪ್ರತಿ ಎಪಿಸೋಡ್‌ನಲ್ಲೂ ಹೊಸ ಟ್ವಿಸ್ಟ್ ನೀಡುವ ಥ್ರಿಲ್ಲರ್ ಶೈಲಿಯಲ್ಲಿರಲಿದೆ ಎಂದು ಪ್ರೋಮೋ ಸೂಚಿಸಿದೆ. “ಪ್ರತಿ ಪೇಜ್‌ನಲ್ಲೂ ಒಂದು ಟ್ವಿಸ್ಟ್” ಎಂಬ ಟ್ಯಾಗ್‌ಲೈನ್ ಗಮನ ಸೆಳೆಯುತ್ತಿದೆ.

ಯುವ ನಿರ್ದೇಶಕರ ಹೊಸ ಪ್ರಯೋಗ: ಈ ಸರಣಿಯ ಕಥೆ ಮತ್ತು ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿರುವವರು ಶ್ರೀನಿಧಿ ಬೆಂಗಳೂರು. ಅವರು ಈಗಾಗಲೇ ಬ್ಲಿಂಕ್ ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ಅದರ ಬಳಿಕ ಅವರು ದೀಕ್ಷಿತ್ ಶೆಟ್ಟಿ ಜೊತೆಗೂಡಿ “ವೀಡಿಯೋ” ಎಂಬ ಫೌಂಡ್ ಫೂಟೇಜ್ ಥ್ರಿಲ್ಲರ್ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಈ ಹಿನ್ನೆಲೆ “ಜೆರಾಕ್ಸ್” ಸರಣಿಯ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಡಾಲಿ ಧನಂಜಯ್ ಜೀವನದ ಪ್ರೇರಣೆ ಇದೆಯೇ? : ನಟ ಡಾಲಿ ಧನಂಜಯ್ ಅವರ ಕಾಲೇಜು ದಿನಗಳಲ್ಲಿ ಮೈಸೂರಿನಲ್ಲಿ ಜೆರಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡಿದ್ದದ್ದು ಸಾಕಷ್ಟು ಜನರಿಗೆ ಪರಿಚಿತ. ಹೀಗಾಗಿ, ಈ ಸರಣಿ ಅವರ ಜೀವನ ಕಥೆಯನ್ನು ಆಧರಿಸಿದ್ದೇ ಅಥವಾ ಸಂಪೂರ್ಣ ಕಲ್ಪಿತ ಕಥಾಹಂದರವೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಆದರೆ ಈ ಕುರಿತು ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

ಜೀ ಕನ್ನಡದ ಜೊತೆಗಿನ ಸಂಪರ್ಕ: ಶ್ರೀನಿಧಿ ಬೆಂಗಳೂರು ಅವರು ಮಹಾನಟಿ ಸೀಸನ್ 2 ವಿಜೇತರಿಗಾಗಿ ಕಿರುಚಿತ್ರವನ್ನು ನಿರ್ದೇಶಿಸಿದ್ದು, “35mm” ಎಂಬ ಪಾಡ್‌ಕಾಸ್ಟ್ ಮೂಲಕವೂ ಕನ್ನಡ ಸಿನಿಮಾಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ.

The post ‘ಜೆರಾಕ್ಸ್’ ವೆಬ್ ಸರಣಿ ಪ್ರೋಮೋ ರಿಲೀಸ್! appeared first on Samyukta Karnataka.

ಅನುಶ್ರೀ-ರೋಷನ್ ಲವ್ ಸ್ಟೋರಿ: ಕಾಫಿ ಡೇಟ್ ಹಿಂದೆ ಇಂಟ್ರೆಸ್ಟಿಂಗ್ ಕಥೆ ಬಹಿರಂಗ
ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ಪತಿ ರೋಷನ್ ಮೊದಲ ಪರಿಚಯ ಮತ್ತು ಕಾಫಿ ಡೇಟ್ ಕುರಿತ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗೇ ಅನುಶ್ರೀ ಪ್ರೀತಿಯಲ್ಲಿ ಬಿಳಲು ಕಾರಣವೇನು? ಮತ್ತು ಹೇಗೆ ಯಾವತ್ತು ರೋಷನ್‌ನ್ನು ನೋಡಿದ್ದು? ಇದೇಲ್ಲದರ ಬಗ್ಗೆ ಮುಕ್ತವಾಗಿ, ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಅನುಶ್ರೀ ಹೇಳುದ ಪ್ರಕಾರ, ಸಂಗಾತಿ ರೋಷನ್‌ನ್ನು ಮೊದಲು ಭೇಟಿ ಮಾಡಿದ್ದು ಹೊಸಪೇಟೆಯಲ್ಲಿ, ಹಾಗೇ ಅವತ್ತು ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಮೂಲಕ ಇವರಿಬ್ಬರಿಗೂ ಪರಿಚಯವಾಗಿತ್ತು. ಆರಂಭದಲ್ಲಿ ಕೇವಲ ಹಾಯ್-ಬೈ ಮಟ್ಟದಲ್ಲಿದ್ದ ಈ ಪರಿಚಯ, ಒಂದು ಫೋಟೋ ಶೇರ್ ಮಾಡುವ ಸಂದರ್ಭದಲ್ಲೇ ಮುಂದುವರಿದಿತ್ತು. ರೋಷನ್ ನಂಬರ್ ಕೇಳಿದಾಗ ಅನುಶ್ರೀ ನೀಡದೇ, ಏರ್‌ಡ್ರಾಪ್ ಮೂಲಕ ಕಳುಹಿಸಲು ಹೇಳಿ ನಂಬರ್‌ ಕೊಡದೇ ಸತಾಯಿಸಿದ್ರಂತೆ. ನಂತರ ಈ ಘಟನೆಯನ್ನು ಕೂಡ ಅವರು ನೆನಪಿಸಿಕೊಂಡು ಲವ್‌ ಜರ್ನಿ ಮತ್ತು ನನ್ನ ದಾರಿಯಲ್ಲಿ ಹೊಸ ಬೆಳಕಿನ ಮಿಟ್‌ ಅಂದೆ ಆಗಿತ್ತು ಎಂದರು.

ನಂತರ ರೋಷನ್ ಕಾಫಿಗೆ ಆಹ್ವಾನಿಸಿದಾಗ, ಅನುಶ್ರೀಗೆ ಸ್ವಲ್ಪ ಭಯವೂ ಉಂಟಾಗಿತ್ತಂತೆ. ಇದೇ ವಿಚಾರವನ್ನು ನಟ ರಾಜ್ ಬಿ ಶೆಟ್ಟಿ ಹತ್ತಿರವು ಹೇಳಿಕೊಂಡಿದರಂತೆ. ಆಗ ರಾಜ್ ಬಿ ಶೆಟ್ಟಿ ಮತ್ತು ಚೈತ್ರಾ ಜೆ ಆಚಾರ್ ಇಬ್ಬರು ಪ್ರೋತ್ಸಾಹದಿಂದ ಅನುಶ್ರೀ ಆ ಆಹ್ವಾನವನ್ನು ಸ್ವೀಕರಿಸಿದರು.

ಬಳಿಕ ಬೆಂಗಳೂರಿನ ಒರಾಯನ್ ಮಾಲ್‌ನ ಕಫೆಯಲ್ಲಿ ಇವರ ಮೊದಲ ಕಾಫಿ ಮೀಟ್ ನಡೆದಿದೆ. ಮೊದಲ ಭೇಟಿಯಲ್ಲೇ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಮಾತನಾಡಿಕೊಂಡಿದ್ದು, ಈ ವೇಳೆ ರೋಷನ್‌ನ ಸರಳ ಸ್ವಭಾವ ಅನುಶ್ರೀಗೆ ಇಷ್ಟವಾಗಿದೆ.

ಈ ಸ್ನೇಹ ಬಳಿಕ ಪ್ರೀತಿಯಾಗಿ ಬೆಳೆಯುತ್ತ, ಇಬ್ಬರೂ ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್ ನಡೆಸಿ, ಅಂತಿಮವಾಗಿ ಮದುವೆಯಾಗಿದ್ದಾರೆ. ಸರಳ ಪರಿಚಯದಿಂದ ಆರಂಭವಾದ ಈ ಸಂಬಂಧ, ಇಂದು ಯಶಸ್ವಿ ದಾಂಪತ್ಯವಾಗಿ ಪರಿಣಮಿಸಿದೆ.

ಒಟ್ಟಾರೆ.. ಕಿರುತೆರೆಯಲ್ಲಿ ಆ್ಯಂಕರ್‌ ಅನುಶ್ರೀ ಎಂದೇ ಖ್ಯಾತಿ ಗಳಿಸಿ, ಎಲ್ಲರ ಮನವನ್ನ ಮಾತುಗಳಿಂದಲೇ ತಣಿಸಿ ಎಲ್ಲರನ್ನು ತನ್ನವರೆಂದು ಸ್ವಾಗತಿಸುತ್ತಿದ್ರು. ಈಗ ಮದುವೆಯಾಗಿ ಹೊಸಜೀವನದ ಆರಂಭದ ಖುಷಿಯಾಗಿದ್ದಾರೆ.

The post ಅನುಶ್ರೀ-ರೋಷನ್ ಲವ್ ಸ್ಟೋರಿ: ಕಾಫಿ ಡೇಟ್ ಹಿಂದೆ ಇಂಟ್ರೆಸ್ಟಿಂಗ್ ಕಥೆ ಬಹಿರಂಗ appeared first on Samyukta Karnataka.

ಕಲರ್ಸ್‌ ಕನ್ನಡದಲ್ಲಿ ಮದುವೆ ಹಂಗಾಮಾ: ಭಾಗ್ಯ-ಪವಿತ್ರ ಬದುಕಿನಲ್ಲಿ ಎದುರಾಯ್ತು ಮಹಾಬಿರುಗಾಳಿ!
ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ‘ಕಲರ್ಸ್‌ ಕನ್ನಡ’ದ ಎರಡು ಪ್ರಮುಖ ಧಾರಾವಾಹಿಗಳಾದ ‘ಭಾಗ್ಯಲಕ್ಷ್ಮೀ’ ಮತ್ತು ‘ಪವಿತ್ರ ಬಂಧನ’ ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿವೆ. ಈ ವಾರ ಬಿಡುಗಡೆಯಾಗಿರುವ ಹೊಸ ಪ್ರೋಮೋಗಳು ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಇಬ್ಬರು ನಾಯಕಿಯರ ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳು ಎದುರಾಗಿವೆ.

ಕಲರ್ಸ್‌ ಕನ್ನಡದ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಕಥೆ ಈಗ ಸುನಾಮಿಯಂತೆ ಬದಲಾಗಿದೆ. ವಿಲನ್‌ ಪಾತ್ರದಾರಿ ಮನೋಜ್, ಪವಿತ್ರಾ ಕುಟುಂಬವನ್ನೇ ಒತ್ತೆ ಇಟ್ಟುಕೊಂಡು ಅವಳನ್ನು ಬಲವಂತವಾಗಿ ಮದುವೆಯಾಗಲು ಸಂಚು ಮಾಡಿದ್ದಾನೆ. ಆದ್ರೆ ಸರಿಯಾದ ಸಮಯಕ್ಕೆ ಎಂಟ್ರಿ ಕೊಟ್ಟ ನಾಯಕ ದೇವ್, ಮನೋಜ್‌ನ ಕೆಟ್ಟ ಆಟಕ್ಕೆ ತಕ್ಕ ಪಾಠ ಕಲಿಸಿದ್ದಾನೆ.

ತನ್ನ ತಮ್ಮ ತಿಲಕ್‌ಗೆ ಕೊಟ್ಟ ಮಾತಿನಂತೆ ಪವಿತ್ರಾಳ ಬದುಕನ್ನು ರಕ್ಷಿಸಲು ದೇವ್ ಆಕೇಯ ಕೊರಳಿಗೆ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ್ದಾನೆ. ತಮ್ಮನನ್ನು ಕಳೆದುಕೊಂಡ ನೋವು ಮತ್ತು ಪವಿತ್ರಾ ಮೇಲಿರುವ ದ್ವೇಷದ ನಡುವೆಯೂ ದೇವ್ ಈ ನಿರ್ಧಾರ ತಗೆದುಕೊಂಡಿದ್ದಾನೆ. ದಿಗ್ಭ್ರಾಂತಳಾಗಿರುವ ಪವಿತ್ರಾ ಈ ಮದುವೆನ್ನು ಒಪ್ಪುತ್ತಾಳೆಯೇ? ದೇವ್‌ನ ತಾಯಿ ಈ ಹಠಾತ್ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಸದ್ಯದ ಕುತೂಹಲ.

ಹಾಗೇ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಒಂದು ದೂಡ್ಡ ತಿರುವು ನೀಡಲಿದೆ. ಅಲ್ಲದೇ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಘಟನೆಯೊಂದು ಸಂಭವಿಸಲಿದೆ ಎನ್ನುವುದು ಸದ್ಯದ ಪ್ರೋಮೋದಲ್ಲಿದೆ. ಭಾಗ್ಯ ತನ್ನ ಮಾವನಿಗೆ ಕೊಟ್ಟ ಮಾತಿಗೆ ಕಟ್ಟುಬಿದ್ದು, ಮತ್ತೆ ತಾಂಡವ್ ಜೊತೆ ಮರುಮಾಂಗಲ್ಯ ಧಾರಣೆಗೆ ಸಜ್ಜಾಗಿದ್ದಾಳೆ.

ಇತ್ತ ಆದಿಶ್ವರ್ ಕೂಡ ಈ ಮದುವೆಗೆ ಸಮ್ಮತಿ ಸೂಚಿಸಿರುವುದು ವೀಕ್ಷಕರಲ್ಲಿ ಆಕ್ರೋಶ ಮೂಡಿಸಿದೆ. ತಾಂಡವ್ ಎಂದಿನಂತೆ ತನ್ನ ಸ್ವಾರ್ಥದ ಮುಖವಾಡ ಹಾಕಿಕೊಂಡು ಅಟ್ಟಹಾಸ ಮೆರೆಯುತ್ತಿದ್ದರೂ, ಭಾಗ್ಯ ಮಾತ್ರ ಮೌನಕ್ಕೆ ಶರಣಾಗಿದ್ದಾಳೆ. ಆದ್ರೆ ಈ ಮೌನದ ಹಿಂದೆ ದೊಡ್ಡ ಬಿರುಗಾಳಿಯೇ ಅಡಗಿರುವ ಸೂಚನೆ ಸಿಗುತ್ತಿದೆ. ಭಾಗ್ಯ ನಿಜವಾಗಿಯೂ ತಾಂಡವ್‌ನ ಮದುವೆಯಾಗುತ್ತಾಳಾ ಅಥವಾ ಮಂಟಪದಲ್ಲಿ ಏನಾದರೂ ಅಚ್ಚರಿಯ ತಿರುವು ಕಾದಿದೆಯೇ ಎಂಬ ಪ್ರಶ್ನೆ ಮೂಡಿದೆ.

ಇಂದಿನಿಂದ ಪ್ರಾರಂಭವಾಗಲಿರುವ ಈ ‘ಮದುವೆ ವಿಶೇಷ’ ಸಂಚಿಕೆಗಳು ಸ್ಯಾಂಡಲ್‌ವುಡ್ ಕಿರುತೆರೆ ಲೋಕದಲ್ಲಿ ಹೊಸ ಸಂಚಲನ ಮೂಡಿಸಲಿವೆ. ಪವಿತ್ರಾ ಮತ್ತು ಭಾಗ್ಯ ಈ ಇಬ್ಬರೂ ಹೆಣ್ಣುಮಕ್ಕಳು ತಮ್ಮ ಸಂಕಷ್ಟಗಳಿಂದ ಹೇಗೆ ಹೊರಬರುತ್ತಾರೆ? ವಿಧಿ ಆಟ ಇವರನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದು ಈ ವಾರದ ಪ್ರಮುಖ ಕುತೂಹಲಕಾರಿ ಸಂಚಿಕೆಯಾಗಿವೆ.

The post ಕಲರ್ಸ್‌ ಕನ್ನಡದಲ್ಲಿ ಮದುವೆ ಹಂಗಾಮಾ: ಭಾಗ್ಯ-ಪವಿತ್ರ ಬದುಕಿನಲ್ಲಿ ಎದುರಾಯ್ತು ಮಹಾಬಿರುಗಾಳಿ! appeared first on Samyukta Karnataka.

ರಶ್ಮಿಕಾ ಮಂದಣ್ಣ ಫೋಸ್ಟ್‌ ವೈರಲ್: “ನಾವೀಗ ಮೂವರು”, ತಾಯಿಯಾಗುತ್ತಿರುವ ಸಂಭ್ರಮನಾ..?
ಬೆಂಗಳೂರು: ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ನ ಕಣ್ಮಣಿ, ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಸದಾ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಕಳೆದ ಫೆಬ್ರವರಿ 26 ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದರು. ಆದ್ರೆ ಇದೀಗ ಮದುವೆಯಾದ ಕೇವಲ ಒಂದು ತಿಂಗಳ ಸಂಭ್ರಮದಲ್ಲಿ ರಶ್ಮಿಕಾ ಹಂಚಿಕೊಂಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಹೌದು.. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅನಿಮೇಟೆಡ್ ವಿಡಿಯೋವೊಂದನ್ನು ಹಂಚಿಕೊಂಡಿರುವ ರಶ್ಮಿಕಾ, ಅದಕ್ಕೆ “ನಾವೀಗ ಮೂವರು” (We are three now) ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಕ್ಯಾಪ್ಷನ್ ನೋಡಿದ ತಕ್ಷಣ ಅಭಿಮಾನಿಗಳಲ್ಲಿ ಅಚ್ಚರಿ ಹಾಗೂ ಕುತೂಹಲಕ್ಕೆ ಮನೆಮಾಡಿದೆ. ಕೆಲವು ಅಭಿಮಾನಿಗಳು ರಶ್ಮಿಕಾ ಗುಡ್ ನ್ಯೂಸ್ ನೀಡುತ್ತಿದ್ದಾರೆ, ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಎಂದು ಭಾವಿಸಿ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಆದ್ರೆ ಈ ಸುದ್ದಿಯ ಹಿಂದಿರುವ ಅಸಲಿ ವಿಷಯವೇ ಬೇರೆ ಇದೆ.

ರಶ್ಮಿಕಾ ಮಂದಣ್ಣ ಸೃಷ್ಟಿಸಿದ ಒಂದು ವಿಶಿಷ್ಟ ಅನಿಮೇಟೆಡ್ ಪಾತ್ರದ ಹೆಸರು ‘ರೂ’ (Roo). ಈ ಪಾತ್ರವು ರಶ್ಮಿಕಾ ಸ್ವಂತ ವ್ಯಕ್ತಿತ್ವದ ಪ್ರತಿಬಿಂಬದಂತಿದೆ. ಈ ಸೂರ್ಯಕಾಂತಿ ಹೂವಿನ ರೂಪದ ಪಾತ್ರವನ್ನು ತಮ್ಮ ಪ್ರೀತಿಯ ಗೆಳತಿ ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಜೀವನದ ಅನಿಮೇಷನ್ ಲೋಕಕ್ಕೆ ಪತಿ ವಿಜಯ್ ದೇವರಕೊಂಡರನ್ನ ಆಹ್ವಾನಿಸುವ ಉದ್ದೇಶದಿಂದ ರಶ್ಮಿಕಾ ಈ ವಿಡಿಯೋ ಮಾಡಿದ್ದಾರೆ. ವಿಜಯ್, ರಶ್ಮಿಕಾ ಹಾಗೂ ಈ ‘ರೂ’ ಪಾತ್ರ ಸೇರಿ ‘ಮೂವರು’ ಎಂಬರ್ಥದಲ್ಲಿ ಆ ಸಾಲನ್ನು ಬರೆದುಕೊಂಡಿದ್ದಾರೆ.

ಇದು ರಶ್ಮಿಕಾ ವೈಯಕ್ತಿಕ ಜೀವನದ ಸಿಹಿ ಸುದ್ದಿಯಲ್ಲದಿದ್ದರೂ, ಅಭಿಮಾನಿಗಳು ಮಾತ್ರ ಈ ಕ್ರಿಯೇಟಿವ್ ಐಡಿಯಾಗೆ ಫಿದಾ ಆಗಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಅನಿಮೇಟೆಡ್ ಜೋಡಿಯನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮದುವೆಯ ನಂತರದ ಸುಂದರ ಕ್ಷಣಗಳನ್ನು ರಶ್ಮಿಕಾ ಈ ರೀತಿ ಕಲಾತ್ಮಕವಾಗಿ ಹಂಚಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಒಟ್ಟಿನಲ್ಲಿ.. ಗಾಸಿಪ್‌ಗಳಿಗೆ ಆಹಾರವಾಗಿದ್ದ ‘ಮೂವರು’ ಎಂಬ ಪದದ ಹಿಂದಿನ ರಹಸ್ಯ ಈಗ ಬಹಿರಂಗವಾಗಿದ್ದು, ರಶ್ಮಿಕಾ ಈ ವಿಭಿನ್ನ ಪ್ರಯತ್ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

The post ರಶ್ಮಿಕಾ ಮಂದಣ್ಣ ಫೋಸ್ಟ್‌ ವೈರಲ್: “ನಾವೀಗ ಮೂವರು”, ತಾಯಿಯಾಗುತ್ತಿರುವ ಸಂಭ್ರಮನಾ..? appeared first on Samyukta Karnataka.

ಕನ್ನಡ ರ್‍ಯಾಪ್ ಲೋಕದಲ್ಲಿ ‘ಕೋಲ್ಡ್ ವಾರ್’: ಆಲ್ ಓಕೆ Vs ಡಿಟ್ಟೋ ಜಗಳಕ್ಕೆ ಚಂದನ್ ಶೆಟ್ಟಿ ಕೊಟ್ಟ ‘ಖಡಕ್’ ಸಲಹೆ ಏನು?
ಕನ್ನಡ ಸಂಗೀತ ಲೋಕದಲ್ಲಿ ಕಳೆದ ಕೆಲವು ದಿನಗಳಿಂದ ರ್ಯಾಪರ್‌ಗಳ ನಡುವಿನ ಜಟಾಪಟಿ ಜೋರಾಗಿದೆ. ಕನ್ನಡ ರ್‍ಯಾಪ್ ಪರಂಪರೆಯ ಹರಿಕಾರರಂತಿರುವ ಆಲ್ ಓಕೆ (ಅಲೋಕ್ ಬಾಬು) ಮತ್ತು ರಾಹುಲ್ ಡಿಟ್ಟೋ ನಡುವಿನ ಮನಸ್ತಾಪ ಈಗ ಬೀದಿಗೆ ಬಂದಿದ್ದು, ಪರಸ್ಪರ ಹಾಡುಗಳ ಮೂಲಕವೇ ಏಟು-ಎದಿರೇಟು ನೀಡುತ್ತಿದ್ದಾರೆ.

ಈ ಇಬ್ಬರು ಪ್ರತಿಭಾವಂತ ಕಲಾವಿದರ ನಡುವಿನ ‘ಡಿಸ್ ಟ್ರ್ಯಾಕ್’ ಸಮರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿರುವ ಬೆನ್ನಲ್ಲೇ, ಕನ್ನಡದ ಮತ್ತೊಬ್ಬ ಖ್ಯಾತ ಗಾಯಕ ಹಾಗೂ ರ್‍ಯಾಪರ್ ಚಂದನ್ ಶೆಟ್ಟಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಏನಿದು ಡಿಸ್ ಟ್ರ್ಯಾಕ್ ಸಂಸ್ಕೃತಿ?: ಸಾಮಾನ್ಯವಾಗಿ ರ್‍ಯಾಪ್ ಸಂಗೀತದಲ್ಲಿ ಒಬ್ಬರನ್ನು ಮತ್ತೊಬ್ಬರು ಹೀಯಾಳಿಸಿ ಅಥವಾ ಟೀಕಿಸಿ ಹಾಡು ಮಾಡುವುದನ್ನು ‘ಡಿಸ್ ಟ್ರ್ಯಾಕ್’ ಎನ್ನಲಾಗುತ್ತದೆ. ವಿದೇಶಿ ಸಂಗೀತ ಲೋಕದಲ್ಲಿ ಇದು ಸಾಮಾನ್ಯವಾದರೂ, ಕನ್ನಡದಲ್ಲಿ ಇತ್ತೀಚೆಗೆ ಇದು ಟ್ರೆಂಡ್ ಆಗುತ್ತಿದೆ. ಅಲೋಕ್ ಮತ್ತು ಡಿಟ್ಟೋ ನಡುವೆ ನಡೆಯುತ್ತಿರುವ ಈ ಶಬ್ದಗಳ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ ಚಂದನ್ ಶೆಟ್ಟಿ, “ಪ್ರತಿಯೊಬ್ಬರಿಗೂ ತಮ್ಮದೇ ಆದ ಶೈಲಿ ಇರುತ್ತದೆ. ಸಂವಿಧಾನದಲ್ಲಿ ಒಬ್ಬ ವ್ಯಕ್ತಿಗೆ ತನಗಿಷ್ಟ ಬಂದದ್ದನ್ನು ಮಾಡುವ ಹಕ್ಕಿದೆ. ಆದ್ರೆ ನನ್ನ ಪ್ರಕಾರ ಎಲ್ಲರೂ ಒಟ್ಟಾಗಿ ಇರುವುದು ಒಳ್ಳೆಯದು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಗ್ಗಟ್ಟಿನಲ್ಲಿ ಬಲವಿದೆ ಎಂದ ಚಂದನ್: ಸಂಗೀತ ಕ್ಷೇತ್ರದಲ್ಲಿ ದ್ವೇಷಕ್ಕಿಂತ ಪ್ರೀತಿ ಹೆಚ್ಚಿರಬೇಕು ಎಂದು ಪ್ರತಿಪಾದಿಸಿದ ಚಂದನ್, “ನಾವೇ ಒಬ್ಬರನ್ನೊಬ್ಬರು ತೇಜೋವಧೆ ಮಾಡಿಕೊಂಡರೆ ಇಂಡಸ್ಟ್ರಿಗೆ ಒಳ್ಳೆಯ ಮೆಸೇಜ್ ಹೋಗುವುದಿಲ್ಲ. ಇದರಿಂದ ಜನರಿಗೆ ಕೇವಲ ದ್ವೇಷ ಮಾತ್ರ ತಲುಪುತ್ತದೆ. ಅವರಿಬ್ಬರ ವೈಯಕ್ತಿಕ ತೊಂದರೆಗಳು ಏನಿವೆಯೋ ನನಗೆ ಗೊತ್ತಿಲ್ಲ. ಆದ್ರೆ ಎಲ್ಲವನ್ನೂ ಮರೆತು ಒಟ್ಟಾಗಿ ಕೆಲಸ ಮಾಡಿದರೆ ಕನ್ನಡದ ಮ್ಯೂಸಿಕ್ ಇಂಡಸ್ಟ್ರಿ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ” ಎಂದು ಕಿವಿಮಾತು ಹೇಳಿದ್ದಾರೆ.

ಚಂದನ್ ಶೆಟ್ಟಿ ಕಂಬ್ಯಾಕ್: ಸದ್ಯ ಚಿತ್ರರಂಗದ ಕೆಲಸಗಳಿಂದ ಸಣ್ಣ ಬ್ರೇಕ್ ಪಡೆದಿರುವ ಚಂದನ್ ಶೆಟ್ಟಿ, ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನೂ ನೀಡಿದ್ದಾರೆ. “ನಾನು ಈಗ ಯಾವುದೋ ಜಗಳಕ್ಕೆ ಹೋಗದೆ ನನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. ನನ್ನ ಹಾಡುಗಳು ಜನರಿಗೆ ಖುಷಿ ಕೊಡಬೇಕು ಎಂಬುದಷ್ಟೇ ನನ್ನ ಆಸೆ. ಶೀಘ್ರದಲ್ಲೇ ಒಂದು ದೊಡ್ಡ ಪ್ರಾಜೆಕ್ಟ್ ಮೂಲಕ ಮತ್ತೆ ಅಖಾಡಕ್ಕೆ ಇಳಿಯಲಿದ್ದೇನೆ” ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಕನ್ನಡ ರ್‍ಯಾಪ್ ಲೋಕದ ಈ ಸಮರ ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಆದ್ರೆ ಚಂದನ್ ಶೆಟ್ಟಿಯವರ ಈ ಶಾಂತಿಯ ಮಂತ್ರ ಕಲಾವಿದರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂದು ಕಾದು ನೋಡಬೇಕಿದೆ.

The post ಕನ್ನಡ ರ್‍ಯಾಪ್ ಲೋಕದಲ್ಲಿ ‘ಕೋಲ್ಡ್ ವಾರ್’: ಆಲ್ ಓಕೆ Vs ಡಿಟ್ಟೋ ಜಗಳಕ್ಕೆ ಚಂದನ್ ಶೆಟ್ಟಿ ಕೊಟ್ಟ ‘ಖಡಕ್’ ಸಲಹೆ ಏನು? appeared first on Samyukta Karnataka.