Samyukta Karnataka Digital Archives - Samyukta Karnataka

‘ಸಿಟಿ ಲೈಟ್ಸ್’ ಚಿತ್ರದಿಂದ ಬಂತು ಪ್ರೀತಿಯ ಹಾಡು: ‘ನಾನು ಸ್ಟಾರ್ ಅಂದುಕೊಂಡಿಲ್ಲ, ನಾನೊಬ್ಬ ಕೆಲಸಗಾರ’; ನಿರ್ದೇಶಕ ವಿಜಯ್ ಕುಮಾರ್
ಸಲಗ, ಭೀಮ ಚಿತ್ರದ ಬಳಿಕ ಸಾಂಡಲ್ ವುಡ್ ಸಲಗ ವಿಜಯ್ ಕುಮಾರ್ ನಿರ್ದೇಶನದ ಮೂರನೇ ಚಿತ್ರ “ಸಿಟಿ ಲೈಟ್ಸ್” ಸೆಪ್ಟೆಂಬರ್ 18 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ 4ನೇ ಹಾಡು ಬಿಡುಗಡೆಯಾಗಿದ್ದು ಪ್ರೀತಿಯ ಕುರಿತ ಹಾಡು ಗಮನ ಸೆಳೆದಿದೆ. ಈ ಹಾಡಿನಲ್ಲಿ ದೂರದ ಊರುಗಳಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡ ಜೋಡಿಗಳ ಮೇಲೆ ಚಿತ್ರವಾಗಿದೆ.

‘ಅವರಿವರ ಮಾತು ಕೇಳಿ ಪ್ರೀತಿ ಕಳೆದುಕೊಳ್ಳಬೇಡಿ.. ಪ್ರೀತಿ ಅಪರೂಪ ಅದನ್ನು ಕಳೆದುಕೊಳ್ಳಬೇಡಿ….ಇವನ ಕಂಡ್ರೆ ಅವಳು ಪಿಧಾ.. ಇವಳಾ ಕಂಡ್ರೆ ಅವನು ಫಿದಾ..’ ಎನ್ನುವ ಹಾಡು ಇದಾಗಿದ್ದು ಈ ಹಾಡನ್ನು ಯುವ ಕಲಾವಿದರಾದ ಸಿದ್ದು ಮೂಲಿಮನಿ, ಪಾಯಲ್ ಚಂಗಪ್ಪ, ಸುಧಾಕರ್ ಗೌಡ ಬಿಡುಗಡೆ ಮಾಡಿ ಶುಭ ಹಾರೈಸಿದರು.

ವಿಜಯ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ “ಸಿಟಿ ಲೈಟ್ಸ್ ” ಚಿತ್ರದ ಗೀತೆಗೆ ಚರಣ್ ರಾಜ್ ಸಂಗೀತ ಸಂಯೋಜನೆಯ ಮಾಡಿದ್ದು ನಾಗಾರ್ಜುನ್ ಶರ್ಮಾ ಸಾಹಿತ್ಯವಿದೆ, ಈ ಹಾಡನ್ನು ಅಂಥೋಣಿ ದಾಸ್ ಹಾಡಿದ್ದಾರೆ. ಯುವ ನಟ ಸಿದ್ದು ಮೂಲಿಮನಿ ಮಾತನಾಡಿ ಹಾಡು ಮುದ್ದಾಗಿ ಮೂಡಿ ಬಂದಿದೆ. ಹಾಡು ನೋಡುವಾಗ ಪತ್ನಿ ನೆನಪಾದ್ರು.. ‌ಕಂದಮ್ಮ ಹಾಡು ಹೀಗಾಗಲೇ ಗಮನ ಸೆಳೆದಿದೆ. ನಮ್ಮ ಕಾರ್ಯಕ್ರಮದಲ್ಲಿ ನಮ್ಮನ್ನು ಗುರುತಿಸುವುದಿಲ್ಲ. ಅದರಲ್ಲಿ ದೊಡ್ಡ ವೇದಿಕೆಯಲ್ಲಿ ಅವಕಾಶಕ್ಕೆ ನೀಡಿದಕ್ಕೆ ಧನ್ಯವಾದ ಎಂದರು.

ಪಾಯಲ್ ಚೆಂಗಪ್ಪ ಮಾತನಾಡಿ ಕಂದಮ್ಮ ಹಾಡಿನ ರೀತಿಯಲ್ಲಿ ಈ ಹಾಡನ್ನು ಜನರು ಮೆಚ್ಚುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುಧಾಕರ್ ಗೌಡ ಮಾತನಾಡಿ ಪ್ರತಿಭೆ ಇದ್ದರೆ ಬಣ್ಣ ಮುಖ್ಯವಾಗಲ್ಲ. ಮನೆಯಲ್ಲಿ ಅನುಮತಿ ಪಡೆಯಬೇಕಾದರೆ ವಿಜಯ್ ಸರ್ ಅವರ ಹೆಸರು ಹೇಳಬೇಕು. ಯುವ ಜನರಿಗೆ ದೊಡ್ಡ ಸ್ಪೂರ್ತಿ . ನಾಯಕಿಯರನ್ನು ಹುಡುಕುವುದೇ ಕಷ್ಟ, ಕಥೆಯನ್ನೇ ಕೇಳವುದಿಲ್ಲ ಎಂದರು.

ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ ‘ಯುವ ಕಲಾವಿದರು ಚಿತ್ರರಂಗವನ್ನು ಮುನ್ನೆಡೆಸುವರು. ನಿಮ್ಮ ಜೊತೆ ನಾವು ಬರ್ತಾ ಇದ್ದೇವೆ. ನಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗಿ… ಹಾಡಿನಲ್ಲಿ ಬದುಕು ಕಟ್ಟಿಕೊಂಡ ಜೋಡಿಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಅವರು ನಮಗೆ ಸ್ಪೂರ್ತಿ . ತಾಯಿ- ತಂದೆ ಕಣ್ಣಿಗೆ ಕಾಣುವ ದೇವರು. ಹೀಗಾಗಿಯೇ ಅಪ್ಪ- ಅಮ್ಮನ ಪೋಟೋ ಕೂಡ ಹಾಕಿದ್ದೇನೆ’ ಎಂದರು.

ಸಿನಿಮಾ ಮತ್ತು ಸಂಗೀತ ಎಂದೂ ಮೋಸ ಮಾಡಲ್ಲ. ಹೀಗಾಗಿ ಕಷ್ಟಪಟ್ಟು ಸಿನಿಮಾ ಮಾಡ್ತಾ ಇದ್ದೇ‌ನೆ. ಹಾಡಿನಲ್ಲಿ ಬಳಸಿಕೊಂಡ ಜೋಡಿಗಳು ಬದುಕು ಕಟ್ಟಿಕೊಂಡು ಬೆಂಗಳೂರಿಗೆ ಬಂದ ಜೋಡಿಗಳನ್ನು ಬಳಸಿಕೊಳ್ಳಲಾಗಿದೆ. ಅವರ ಜೀವನದ ಜೋಡಿಗಳನ್ನು ಹುಡುಕಿ ಹುಡುಕಿ ಪೋಟೋ ತೆಗೆಸಿಕೊಳ್ಳಲಾಗಿದೆ .‌ಈ ಹಾಡು ಸಿನಿಮಾದಲ್ಲಿ ಇರುವುದಿಲ್ಲ. ಯೂ ಟೂಬ್ ನಲ್ಲಿ ಲಭ್ಯವಿರಲಿದೆ ಎಂದರು. ‘ಸಲಗ ,ಭೀಮ ಚಿತ್ರದ ಮಾದರಿಯಲ್ಲಿ ಇಡೀ ತಂಡ ಕಷ್ಟಪಟ್ಟಿದ್ದೇವೆ. ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ಗೌರವ ತರುವ ಸಿನಿಮಾ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ನಾನು ಸ್ಟಾರ್ ಅಂದುಕೊಂಡಿಲ್ಲ.. ಕೆಲಗಾರ. ಒಂದು ದಿನ ಪ್ರಶಸ್ತಿ ಬರುತ್ತೆ ಅದನ್ನು ತೆಗೆದುಕೊಂಡು ಮತ್ತೆ ಕೆಲಸ ಮಾಡಬೇಕು.. ಅದನ್ನು ಪಾಲಿಸಿಕೊಂಡು ಬಂದಿದ್ದೇನೆ. ಸತ್ಯವನ್ನು ಸತ್ಯವಾಗಿ ತೋರಿಸುವುದು ಸವಾಲಿನ ಕೆಲಸ ಇನ್ನು ಒಂದು ಹಾಡು ಬಾಕಿ ಇದೆ. ಚಿತ್ರಕ್ಕೆ ಎಲ್ಲರ ಸಹಕಾರ ಅಗತ್ಯ ವಿನಯ್ ರಾಜ್ ಕುಮಾರ್ ಉತ್ತಮ‌ ನಟ. ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಎಂದರು

ನಟ ವಿನಯ್ ರಾಜ್ ಕುಮಾರ್ ಮಾತನಾಡಿ, ಹಾಡನ್ನು ಅಮ್ಮನಿಗೆ ಕೇಳಿಸಿದೆ. ಅವರು ಖುಷಿ ಪಟ್ಟರು. ಸಿಟಿ ಲೈಟ್ಸ್ ಚಿತ್ರದ ಹಾಡು ಪ್ರೀತಿ ಬಗ್ಗೆ ಮೂಡಿ ಬಂದಿದೆ. ಪ್ರತಿಯೊಂದು ಜೋಡಿಯೂ ಅವರದೇ ಪ್ರಚಂಚ ಸೃಷ್ಟಿ ಮಾಡಿಕೊಂಡಿದ್ದಾರೆ. ವಿಜಯ್ ಕುಮಾರ್ ಜೊತೆ ಕೆಲಸ ‌ಮಾಡುವುದು ಅದ್ಬುತ ಅನುಭವ. ಪ್ರೀತಿಗೆ ಒಂದೇ ರೀತಿಯ ವಾಖ್ಯಾನ ಮಾಡಲು ಸಾದ್ಯವಿಲ್ಲ. ಪ್ರೀತಿ ಅಂದರೆ ಸಮಯ ಕೊಡಬೇಕು.. ಚಿತ್ರೀಕರಣ ಮಾಡುವುವಾಗ ಸಿನಿಮಾ ಬಗ್ಗೆ ಕುತೂಹಲ ಹೆಚ್ಚು ಮಾಡಿದೆ ಎಂದು ಹೇಳಿದರು

ನಟಿ ಮೋನಿಷಾ ಮಾತನಾಡಿ ಪ್ರೀತಿಯ ಬಗ್ಗೆ ಹೇಳುವಷ್ಟು ತಿಳುವಳಿಕೆ ಇಲ್ಲ. ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಲ್ಲರ ಸಹಕಾರವಿರಲಿ‌ ಎಂದರು. ಗೀತ ರಚನೆಕಾರ ನಾಗಾರ್ಜುನ ಶರ್ಮಾ ಮಾತನಾಡಿ ಸಿಡಿ ಲೈಟ್ಸ್ ಚಿತ್ರದ ಸೋಲ್. ಪ್ರೀತಿ ಸಿಗೋದು ಅಪರೂಪ. ಅದನ್ನು ಕಾಪಾಡಿಕೊಳ್ಳೋಣ ಎಂದರು. ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ, ‘ನಿರ್ದೇಶಕ ವಿಜಯ್ ಸರ್ ಅವರ ಮಾರ್ಗದರ್ಶನ ದಿಂದ ಹಾಡು ಚೆನ್ನಾಗಿ ಮೂಡಿ ಬಂದಿದೆ’ ಎಂದು ಹೇಳಿದರು.

The post ‘ಸಿಟಿ ಲೈಟ್ಸ್’ ಚಿತ್ರದಿಂದ ಬಂತು ಪ್ರೀತಿಯ ಹಾಡು: ‘ನಾನು ಸ್ಟಾರ್ ಅಂದುಕೊಂಡಿಲ್ಲ, ನಾನೊಬ್ಬ ಕೆಲಸಗಾರ’; ನಿರ್ದೇಶಕ ವಿಜಯ್ ಕುಮಾರ್ appeared first on Samyukta Karnataka.

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್: ಯಾವಾಗ ಗೊತ್ತಾ? ಇಲ್ಲಿದೆ ಡಿಟೇಲ್ಸ್
ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಉಪಾಧ್ಯಕ್ಷ’ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ, ಇದೀಗ ಅವರು ನಾಯಕನಾಗಿ ನಟಿಸಿರುವ ಎರಡನೇ ಚಿತ್ರ ‘ಲಕ್ಷ್ಮೀಪುತ್ರ’ ಬಿಡುಗಡೆಗೆ ಸಜ್ಜಾಗಿದೆ. ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ ಇಡೀ ಚಿತ್ರತಂಡ ಒಂದೆಡೆ ಸೇರಿ ಹಬ್ಬವನ್ನು ಆಚರಿಸುವುದರ ಜೊತೆಗೆ, ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

ನವೆಂಬರ್ 27ರಂದು ‘ಲಕ್ಷ್ಮೀಪುತ್ರ’ ಸಿನಿಮಾ ತೆರೆಗೆ
ಚಿತ್ರದ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಂಡ ನಟ ಚಿಕ್ಕಣ್ಣ, “ಕನ್ನಡ ರಾಜ್ಯೋತ್ಸವದ ಸಂಭ್ರಮದ ತಿಂಗಳಾದ ನವೆಂಬರ್ 27ರಂದು ಸಿನಿಮಾ ರಾಜ್ಯಾದ್ಯಂತ ತೆರೆಕಾಣಲಿದೆ. ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಗಣೇಶೋತ್ಸವ ಮತ್ತು ರಾಜ್ಯೋತ್ಸವದ ವೇದಿಕೆಗಳೇ ನನ್ನ ಬದುಕಿಗೆ ಆಸರೆಯಾಗಿದ್ದವು. ಅದೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದ್ದು, ಪ್ರೇಕ್ಷಕರು ಎಂದಿನಂತೆ ಪ್ರೀತಿ ಮತ್ತು ಪ್ರೋತ್ಸಾಹ ನೀಡಿ ಚಿತ್ರವನ್ನು ಹರಸಬೇಕು” ಎಂದು ಮನವಿ ಮಾಡಿದರು.

ಮಂಡ್ಯದ ಸೊಗಡಿನ ಸಿನಿಮಾ
ಚಿತ್ರದ ಕಥಾಹಂದರದ ಬಗ್ಗೆ ವಿವರಿಸಿದ ನಿರ್ಮಾಪಕ ಎ.ಪಿ. ಅರ್ಜುನ್, “ಲಕ್ಷ್ಮಿ ಎಂದ ತಕ್ಷಣ ಮೊದಲು ನೆನಪಾಗುವುದು ತಾಯಿ, ಆ ನಂತರ ಅಕ್ಕ-ತಂಗಿ ಹಾಗೂ ಬಾಳಸಂಗಾತಿ. ಮಂಡ್ಯದ ಸೊಗಡಿನಲ್ಲಿ ಸಾಗುವ ಈ ಸಿನಿಮಾ, ತಾಯಿ-ಮಗನ ನಡುವಿನ ಭಾವನಾತ್ಮಕ ಬಾಂಧವ್ಯದ ಜೊತೆಗೆ ಆರಂಭದಿಂದ ಕೊನೆಯವರೆಗೂ ಭರ್ಜರಿ ಹಾಸ್ಯ ಮತ್ತು ಆಪ್ತವಾದ ಪ್ರೇಮಕಥೆಯನ್ನು ಒಳಗೊಂಡಿದೆ” ಎಂದು ತಿಳಿಸಿದರು. ನಾಯಕಿ ವಂದಿತಾ ಗೌಡ ಮಾತನಾಡಿ, ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಪ್ರೋತ್ಸಾಹವೇ ಕಲಾವಿದರ ಬೆಳವಣಿಗೆಗೆ ಶ್ರೀರಕ್ಷೆ ಎಂದರು.

ಈ ಚಿತ್ರಕ್ಕೆ ವಿಜಯ್ ಎಸ್. ಸ್ವಾಮಿ ನಿರ್ದೇಶನ ಮಾಡಿದ್ದು, ಎ.ಪಿ. ಅರ್ಜುನ್ ಅವರ ಕಥೆ, ಚಿತ್ರಕಥೆ ಹಾಗೂ ಸಾಹಿತ್ಯವಿದೆ. ಅನ್ನಪೂರ್ಣ ಎ.ಪಿ. ಅರ್ಜುನ್ ನಿರ್ಮಾಣದ ಈ ಚಿತ್ರದಲ್ಲಿ ತಾರಾ ಅನುರಾಧ, ಕುರಿ ಪ್ರತಾಪ್, ಧರ್ಮಣ್ಣ ಕಡೂರು ಮತ್ತು ಮಿತ್ರ ಸೇರಿದಂತೆ ದೊಡ್ಡ ತಾರಾಗಣವಿದೆ. ಕೌಟುಂಬಿಕ ಹಾಗೂ ಹಾಸ್ಯಮಯ ಕಥಾಹಂದರ ಹೊಂದಿರುವ ‘ಲಕ್ಷ್ಮೀಪುತ್ರ’ ನವೆಂಬರ್ 27ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.

The post ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್: ಯಾವಾಗ ಗೊತ್ತಾ? ಇಲ್ಲಿದೆ ಡಿಟೇಲ್ಸ್ appeared first on Samyukta Karnataka.