#RohitSharma Archives - Samyukta Karnataka

ಅಫ್ಘಾನ್ ಸರಣಿಗೆ ಟೀಮ್ ಇಂಡಿಯಾ ಘೋಷಣೆ: ರೋಹಿತ್, ವಿರಾಟ್ ಕಥೆ ಏನು? ಯಾರಿಗೆ ಕೊಕ್, ರಾಹುಲ್ ಉಪನಾಯಕ!
ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಏಕೈಕ ಟೆಸ್ಟ್ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಈ ತಂಡ ಆಯ್ಕೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳಾಗಿದ್ದು, ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರಿಗೆ ಭಾರಿ ಹಿನ್ನಡೆಯಾಗಿದೆ.

ಪಂತ್‌ಗೆ ಸ್ಥಾನವಿಲ್ಲ, ರಾಹುಲ್‌ಗೆ ಬಡ್ತಿ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ರಿಷಭ್ ಪಂತ್ ಅವರನ್ನು ಉಪನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅವರ ಬದಲಿಗೆ ಕೆ.ಎಲ್ ರಾಹುಲ್ ಅವರನ್ನು ನೂತನ ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ. ಅಚ್ಚರಿಯ ವಿಷಯವೆಂದರೆ, ಪಂತ್ ಅವರನ್ನು ಏಕದಿನ ಸರಣಿಯಿಂದಲೂ ಕೈಬಿಡಲಾಗಿದ್ದು, ಅವರ ಸ್ಥಾನಕ್ಕೆ ಇಶಾನ್ ಕಿಶನ್ ಅವರನ್ನು ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.

ಹಿರಿಯ ಆಟಗಾರರಿಗೆ ವಿಶ್ರಾಂತಿ: ಆಟಗಾರರ ಕೆಲಸದ ಹೊರೆ ಗಮನದಲ್ಲಿಟ್ಟುಕೊಂಡು ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಸಂಪೂರ್ಣ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾ ಅವರಿಗೂ ಏಕೈಕ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ.

ಸರಣಿ ವೇಳಾಪಟ್ಟಿ: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯವು ಜೂನ್ 6 ರಂದು ಮುಲ್ಲನ್‌ಪುರದಲ್ಲಿ ನಡೆಯಲಿದೆ. ತದನಂತರ ಜೂನ್ 14 ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ಪಂದ್ಯಗಳು ಧರ್ಮಶಾಲಾ, ಲಕ್ನೋ ಮತ್ತು ಚೆನ್ನೈನಲ್ಲಿ ಜರುಗಲಿವೆ.

ಭಾರತ ಏಕದಿನ ತಂಡ ಇಂತಿದೆ: ಶುಭ್ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ್ ದುಬೆ.

The post ಅಫ್ಘಾನ್ ಸರಣಿಗೆ ಟೀಮ್ ಇಂಡಿಯಾ ಘೋಷಣೆ: ರೋಹಿತ್, ವಿರಾಟ್ ಕಥೆ ಏನು? ಯಾರಿಗೆ  ಕೊಕ್, ರಾಹುಲ್ ಉಪನಾಯಕ! appeared first on Samyukta Karnataka.

RCB vs MI; ಬ್ಯಾಕ್-ಟು-ಬ್ಯಾಕ್ ಪಂದ್ಯ: ಸುಸ್ತಾಗಿರುವ ಬೆಂಗಳೂರು ಪಡೆಗೆ ಹಾರ್ದಿಕ್ ಪಾಂಡ್ಯ ಸವಾಲ್!
ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಸೀಸನ್ ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಕ್ರಿಕೆಟ್ ಲೋಕದ ಇಬ್ಬರು ದೈತ್ಯರು, ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಭಾನುವಾರ ನಡೆಯಲಿರುವ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ವಿಶೇಷವೆಂದರೆ, ಈ ಎರಡೂ ತಂಡಗಳು ತಮ್ಮ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ಸೋಲಿನ ಕಹಿಯುಂಡಿವೆ. ಹೀಗಾಗಿ, ಈ ಪಂದ್ಯ ಕೇವಲ ಆಟವಲ್ಲ, ಗೆಲುವಿನ ಲಯಕ್ಕೆ ಮರಳಲು ನಡೆಯುತ್ತಿರುವ ಬದುಕು-ಸಾವಿನ ಹೋರಾಟ ಎನ್ನಬಹುದು.

ಆರ್​ಸಿಬಿ ಈ ಸೀಸನ್‌ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಜಯ ದಾಖಲಿಸಿ ಉತ್ತಮ ಆರಂಭವನ್ನೇ ಪಡೆದಿತ್ತು. ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ್ದ ಬೆಂಗಳೂರು, ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿ ಬೀಗಿತ್ತು. ಆದರೆ, ಗುವಾಹಟಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ತಂಡಕ್ಕೆ ದೊಡ್ಡ ಆಘಾತ ನೀಡಿತು. ಆ ಪಂದ್ಯದಲ್ಲಿ 201 ರನ್ ಗಳಿಸಿದರೂ ಸಹ, ರಾಜಸ್ಥಾನ್ ಬ್ಯಾಟರ್‌ಗಳ ಅಬ್ಬರಕ್ಕೆ ಆರ್​ಸಿಬಿ ಬೌಲರ್‌ಗಳು ತತ್ತರಿಸಿದರು. ಕೇವಲ 18 ಓವರ್‌ಗಳಲ್ಲಿ ಆ ಗುರಿ ತಲುಪಿದ ರಾಜಸ್ಥಾನ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಈಗ ಆರ್​ಸಿಬಿ ತಂಡಕ್ಕೆ ದೊಡ್ಡ ಸವಾಲೆಂದರೆ ಸಮಯದ ಅಭಾವ. ರಾಜಸ್ಥಾನ್ ವಿರುದ್ಧದ ಪಂದ್ಯ ಮುಗಿಸಿ ಮುಂಬೈಗೆ ಪ್ರಯಾಣಿಸಿರುವ ಆರ್ಸಿಬಿಗೆ ಅಭ್ಯಾಸ ನಡೆಸಲು ಸಿಕ್ಕಿದ್ದು ಕೇವಲ ಒಂದು ದಿನ ಮಾತ್ರ. ಬ್ಯಾಕ್-ಟು-ಬ್ಯಾಕ್ ಪಂದ್ಯಗಳ ಒತ್ತಡದ ನಡುವೆ ರಜತ್ ಪಾಟಿದಾರ್ ನೇತೃತ್ವದ ತಂಡ ಯಾವ ರೀತಿ ಚೇತರಿಸಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಕೂಡ ರಾಜಸ್ಥಾನ್ ವಿರುದ್ಧ 27 ರನ್‌ಗಳಿಂದ ಸೋತ ನೋವಿನಲ್ಲಿದೆ. ಹಾರ್ದಿಕ್ ಪಾಂಡ್ಯ ಸಾರಥ್ಯದ ಮುಂಬೈ ಪಡೆಗೆ ಇದು ತವರು ಮೈದಾನವಾಗಿರುವುದರಿಂದ ಅವರಿಗೆ ಇಲ್ಲಿನ ಪಿಚ್‌ನ ಸಂಪೂರ್ಣ ಅರಿವಿದೆ.

ಎರಡೂ ತಂಡಗಳ ಬಲಾಬಲವನ್ನು ನೋಡುವುದಾದರೆ, ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಮತ್ತು ಬುಮ್ರಾ ಅವರಂತಹ ಅನುಭವಿಗಳ ದಂಡೇ ಇದೆ. ಇತ್ತ ಆರ್​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮತ್ತು ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಅವರ ಬಲವಿದೆ. ಒಟ್ಟಾರೆಯಾಗಿ ಹೇಳುವುದಾದರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿರುವ ಈ ಎರಡು ಬಲಿಷ್ಠ ತಂಡಗಳಲ್ಲಿ ಯಾರು ಮೊದಲು ಚೇತರಿಸಿಕೊಂಡು ಅಂಕಪಟ್ಟಿಯಲ್ಲಿ ಮೇಲೆರುತ್ತಾರೆ ಎಂಬುದು ನಾಳೆಯ ಪಂದ್ಯದ ನಂತರವೇ ನಿರ್ಧಾರವಾಗಲಿದೆ. ವಾಂಖೆಡೆಯಲ್ಲಿ ರನ್ ಮಳೆ ಸುರಿಯುವುದಂತೂ ಖಚಿತ!

The post RCB vs MI; ಬ್ಯಾಕ್-ಟು-ಬ್ಯಾಕ್ ಪಂದ್ಯ: ಸುಸ್ತಾಗಿರುವ ಬೆಂಗಳೂರು ಪಡೆಗೆ ಹಾರ್ದಿಕ್ ಪಾಂಡ್ಯ ಸವಾಲ್! appeared first on Samyukta Karnataka.

ನೀಲಿ ಜರ್ಸಿಯಲ್ಲಿ ಹಿಟ್‌ಮ್ಯಾನ್ ದಶಕಕ್ಕೂ ಅಧಿಕ ಅಬ್ಬರ: 15 ವರ್ಷ ದಾಖಲೆ ಬರೆದ ಶರ್ಮಾ!
ಬೆಂಗಳೂರು: ಭಾರತೀಯ ಕ್ರಿಕೆಟ್‌ನ ದೈತ್ಯ ಪ್ರತಿಭೆ ‘ಹಿಟ್‌ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಅಭೂತಪೂರ್ವ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪರ 15 ವರ್ಷಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ, ಒಂದೇ ತಂಡದ ಪರ 15 ಋತುಗಳಲ್ಲಿ ಆಡಿದ ಮೊದಲ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಆರಂಭದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 2011ರಲ್ಲಿ ಸೇರಿದ ರೋಹಿತ್ ಶರ್ಮಾ, ಕೇವಲ ಆಟಗಾರನಾಗಿ ಮಾತ್ರವಲ್ಲದೆ ನಾಯಕನಾಗಿಯೂ ಅಸಾಧಾರಣ ಸಾಧನೆ ಮಾಡಿದ್ದಾರೆ. ಹಾಗೇ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಬರೋಬ್ಬರಿ ಐದು ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿದೆ. ಅಷ್ಟೇ ಅಲ್ಲದೆ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲೂ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿಯೂ ಸಲ್ಲುತ್ತದೆ.

ನಂತರ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ನಾಯಕ (87 ಪಂದ್ಯಗಳು) ಎಂಬ ದಾಖಲೆ ರೋಹಿತ್ ಹೆಸರಿನಲ್ಲಿದೆ. ಇದರೊಂದಿಗೆ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು ಅತಿ ಹೆಚ್ಚು ಬಾರಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದ ದಾಖಲೆ ಕೂಡ ಹಿಟ್‌ಮ್ಯಾನ್ ಪಾಲಾಗಿದೆ.

ಈ ವಿಶೇಷ ಸಂದರ್ಭವನ್ನು ಸಂಭ್ರಮಿಸಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಹದಿನೈದು ವರ್ಷಗಳ ಸುಂದರ ಪಯಣದ ವಿಡಿಯೋವೊಂದನ್ನು ಹಂಚಿಕೊಂಡಿದೆ. ಪ್ರಸ್ತುತ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸುತ್ತಿದ್ದರೂ, ರೋಹಿತ್ ಶರ್ಮಾ ಆರಂಭಿಕ ಆಟಗಾರನಾಗಿ ತಂಡದ ಶಕ್ತಿಯಾಗಿ ಮುಂದುವರಿಯುತ್ತಿದ್ದಾರೆ. ರೋಹಿತ್ ಈ ಸುದೀರ್ಘ ಪಯಣವು ಯುವ ಕ್ರಿಕೆಟಿಗರಿಗೆ ದೊಡ್ಡ ಪ್ರೇರಣೆಯಾಗಿದೆ.

The post ನೀಲಿ ಜರ್ಸಿಯಲ್ಲಿ ಹಿಟ್‌ಮ್ಯಾನ್ ದಶಕಕ್ಕೂ ಅಧಿಕ ಅಬ್ಬರ: 15 ವರ್ಷ ದಾಖಲೆ ಬರೆದ ಶರ್ಮಾ! appeared first on Samyukta Karnataka.