#politics Archives - Samyukta Karnataka

ಅಂಕಣ ಬರಹ: ಹಿರಿಯರ ಕ್ಯಾತೆ ಸಾಕು, ಹೊಸಬರಿಗೆ ದಾರಿಬಿಡಿ
ವಿಚಿತ್ರ ಎಂದರೆ, ಹಿರಿಯರನೇಕರಿಗೆ ಮಂತ್ರಿಯಾಗುವುದು ತಮ್ಮ ಜನ್ಮಸಿದ್ದ ಹಕ್ಕು ಎಂದು ಪ್ರತಿಪಾದಿಸುತ್ತಿದ್ದಾರೆ. ಈಗ ಸಂಪುಟದಿಂದ ಹೊರಗುಳಿದವರ ವಾದ ಕೂಡಾ ಅದೇ. `ನಮ್ಮನ್ನು ಮಂತ್ರಿ ಮಾಡದೆ ಕಡೆಗಣಿಸಿದರೆ ಹೇಗೆ? ಇದು ಎಚ್ಚರಿಕೆ ಗಂಟೆ.. ಎಂಬುದು ಅವರ ವಾದ. ಕೆಲವರ ಹಿಂದೆ ಒಂದಿಷ್ಟು ಶಾಸಕರಿರಬಹುದು.

1983… ಆಗ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದ ಸಮಯ. ಜನತಾ ಪಕ್ಷ ಮತ್ತು ಕರ್ನಾಟಕ ಕ್ರಾಂತಿರಂಗ ಸಂಯುಕ್ತವಾಗಿ ಭಾಜಪ ಬಾಹ್ಯ ಬೆಂಬಲದೊಂದಿಗೆ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ರಚನೆಗೊಂಡಿತ್ತಾಗ!

ವೈಚಾರಿಕ ಮತ್ತು ಜನಪರ ಕಾಳಜಿಯ ಅಬ್ದುಲ್ ನಜೀರ್‌ಸಾಬ್‌ರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ನಿರ್ಧರಿಸಿ ಅವರ ಅಭಿಪ್ರಾಯವನ್ನು ಕೇಳಿದಾಗ, `ನೀವು ನನ್ನನ್ನು ಮಂತ್ರಿ ಮಾಡುತ್ತೀರಿ ಎಂದಾದರೆ ನನಗೆ ಬೇಕಾದ ಖಾತೆಯನ್ನೇ ನೀಡಿದರೆ ಒಪ್ಪುತ್ತೇನೆ; ನನಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಕೊಡಿ’ ಎಂದು ಮನವಿ ಮಾಡಿಕೊಂಡಿದ್ದರು.

ಗ್ರಾಮೀಣಾಭಿವೃದ್ಧಿ ಆಗ ಯಾರಿಗೂ ಬೇಡದ ಖಾತೆ. ಇದಕ್ಕೆ ಹಣವೂ ಇಲ್ಲ. ಕೆಲಸ ಮಾಡುವುದು, ಮಾಡಿಸುವುದು ಕಷ್ಟ. ಅದನ್ನು ನಜೀರ್‌ಸಾಬ್ ಅಪೇಕ್ಷಿಸಿದ್ದೇಕೆ? ಎಂದು ನಾಯಕರು ಆಶ್ಚರ್ಯಪಟ್ಟರು. ಅದೇ ಖಾತೆಯಲ್ಲಿ ನಜೀರ್‌ಸಾಬ್ ಹೇಗೆ ಅದ್ಭುತ ಕೆಲಸ ಮಾಡಿದರೆಂದರೆ, ನೀರಸಾಬ್ ಎಂದು ಖ್ಯಾತಿ ಗಳಿಸಿದರು. ಗ್ರಾಮೀಣ ಜನರ ಬದುಕಿಗೆ ಹೊಸ ಭಾಷ್ಯ ಬರೆದರು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ದೇಶಕ್ಕೆ ಮಾದರಿಯಾಗಿ ರೂಪಿಸಿದರು.

ಅಧಿಕಾರ ವಿಕೇಂದ್ರೀಕರಣವನ್ನು ಅಕ್ಷರಶಃ ಜಾರಿಗೊಳಿಸುವಲ್ಲಿ ಅವರ ಪಾತ್ರ ಪ್ರಧಾನವಾಗಿತ್ತು. ಉತ್ತಮರಿಗೆ ಆಯುಷ್ಯ ಕಡಿಮೆ ಎನ್ನುತ್ತಾರಲ್ಲ ಹಾಗೆ ನಜೀರ್‌ಸಾಬ್ ತುಂಬ ಅಸ್ವಸ್ಥರಾಗಿ ಕೊನೇ ಹಂತದಲ್ಲಿದ್ದಾಗ ಅವರನ್ನು ಮಾತನಾಡಿಸಲು ಅಂದಿನ ಸಿಎಂ ಎಸ್.ಆರ್.ಬೊಮ್ಮಾಯಿ ಹೋದರೆ, ತಮ್ಮ ವೈಯಕ್ತಿಕ ಕೌಟುಂಬಿಕ ಮತ್ತು ಆರ್ಥಿಕ ತೊಂದರೆಗಳನ್ನು ಬದಿಗಿರಿಸಿ, ಪ್ರತಿ ತಾಲ್ಲೂಕಿಗೆ ಒಂದು ಸಾವಿರ ಮನೆ ನಿರ್ಮಿಸಿಕೊಡುವ ಕಡತ ಸಿದ್ಧಪಡಿಸಿರುವೆ.

ಇದಕ್ಕೆ ಒಂದಿಷ್ಟು ಹಣ ಬಿಡುಗಡೆ ಮಾಡಿ ಕೆಲಸ ಆರಂಭಿಸಿ ಎಂದರೇ ವಿನಾ ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸಲೇ ಇಲ್ಲ!! ಹಾಗಿದ್ದರು ನಜೀರ್‌ಸಾಬ್… ರಾಜ್ಯ ಮರೆಯದ ಮಂತ್ರಿ. ಇದೇ ಅಂದಿನ ಹೆಗಡೆ ಜನತಾ ಸರ್ಕಾರದಲ್ಲಿ ರಮೇಶ ಜಿಗಜಿಣಗಿ ಅವರಿಗೆ ಗೃಹ ಖಾತೆ ಸಚಿವರನ್ನಾಗಿಸಲಾಗಿತ್ತು. ಅಂತಹ ಪ್ರಬಲ ಖಾತೆ, ಈಗ ತಾನೇ ಆರಿಸಿ ಬಂದ (ಪಿ.ಎಸ್‌ಐ ಪರೀಕ್ಷೆಯಲ್ಲಿ ಫೇಲ್ ಆಗಿದ್ದವರು) ಜಿಗಜಿಣಗಿ ಅವರಿಗೆ ಏಕೆ ಎಂಬ ಅಸಮಾಧಾನ ಹಲವು ಹಿರಿಯರಲ್ಲಿತ್ತು. ತಪ್ಪೇನು?’ ಎಂದು ಸಮರ್ಥಿಸಿಕೊಂಡಿದ್ದರು ಹೆಗಡೆ.

ಒಬ್ಬ ದಲಿತ ಜನಪ್ರತಿನಿಧಿಗೂ ಕೂಡ ಅಂಜಿಕೆ, ಕೀಳರಿಮೆ ಇರುತ್ತವೆ. ಹಿರಿಯ ಪೊಲೀಸ್ ಅಧಿಕಾರಿಗಳು ಜಿಗಜಿಣಗಿಯವರಿಗೆ ಸೆಲ್ಯೂಟ್ ಮಾಡಿದಾಗ, ಅವರ ಸಹಿಗೆ ಮಹತ್ವ ಬಂದಾಗ ಧೈರ್ಯ, ಸ್ಥೈರ್ಯ ಜೊತೆಗೆ ಇಡೀ ಸಮುದಾಯಕ್ಕೆ ಆತ್ಮ ವಿಶ್ವಾಸ ಬರುತ್ತದೆ’ ಎಂದು ಟೀಕಾಕಾರರನ್ನು ಪ್ರತಿಯಾಗಿ ಪ್ರಶ್ನಿಸಿದ್ದರು.

ಆ ನಂತರ ಜಿಗಜಿಣಗಿ ಮೂರು ಸಾರೆ ಶಾಸಕರಾಗಿ ರಾಜ್ಯದಲ್ಲಿ ಹಲವು ಖಾತೆಗಳನ್ನು ನಿಭಾಯಿಸಿದರು. ನಿರಂತರ ಏಳು ಬಾರಿ. ಸಂಸದರಾದರು, ಒಮ್ಮೆ ಕೇಂದ್ರ ಸಚಿವರೂ ಆದರು. ದಲಿತ ನಾಯಕರಾಗಿ, ಮುಕ್ತ ಹೃದಯದಿಂದ ಎಲ್ಲವನ್ನೂ ಹೇಳಿಕೊಳ್ಳುವ ಒಳ್ಳೆಯ ಮನಸ್ಸುಳ್ಳ ಸಂಸದ ಅವರು.

ಕರ್ನಾಟಕದ ಗಾಂಧಿ ಎಂದೇ ಜನರಿಂದ ಕರೆಸಿಕೊಂಡ ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡರು ನನಗೆ ರಾಜಕಾರಣ ಸಾಕು ಎಂದು ನಿವೃತ್ತಿ ಘೋಷಿಸಿದಾಗ ರಾಜ್ಯದ ಸಭ್ಯ ಜನ ಮರುಗಿದರು! ಈ ಘಟನೆಗಳನ್ನು ಏಕೆ ನೆನಪು ಮಾಡಿಕೊಳ್ಳಬೇಕಾಯಿತೆಂದರೆ, ಈಗ ಹೊಸ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ಎರಡನೇ ಅವಧಿ ಆರಂಭವಾದ ಮರುದಿನವೇ ಖಾತೆಗಳ ಕ್ಯಾತೆ ಆರಂಭವಾಗಿದ್ದು! ಅದೂ ಹಿರಿಯರಿಂದಲೇ!!

ಡಿಕೆ ಸಂಪುಟಕ್ಕೆ ಆಯ್ಕೆಯಾಗಿರುವ ಎಲ್ಲರೂ, (ಸಿದ್ಧರಾಮಯ್ಯನವರ ಪುತ್ರ ಡಾ.ಯತೀಂದ್ರ ಹೊರತುಪಡಿಸಿ) ಹಿರಿಯರೇ. ಕಾಂಗ್ರೆಸ್ ಸರ್ಕಾರ ಇದ್ದಾಗಲೆಲ್ಲ ಮಂತ್ರಿಯಾದವರೇ. ಈ ಮೊದಲು ಮಂತ್ರಿಯಾಗಲು ಇದ್ದ ಪೈಪೋಟಿ ಈಗ ಇಂತಹುದ್ದೇ ಖಾತೆ ಬೇಕು ಎಂಬ ಮಟ್ಟಿಗೆ ಬಂದು ನಿಂತಿದೆ!

ರಾಜ್ಯ ಅಥವಾ ಕೇಂದ್ರ ಸರ್ಕಾರದಲ್ಲಿ ಕೆಲ ಖಾತೆಗಳನ್ನು `ಹಸಿರು ಹುಲ್ಲುಗಾವಲು’ ಎಂದು ಪರಿಗಣಿಸಲಾಗುತ್ತಿದೆ. ರಾಜ್ಯದಲ್ಲಿ ಗೃಹ, ಲೋಕೋಪಯೋಗಿ, ಕಂದಾಯ, ಸಮಾಜ ಕಲ್ಯಾಣ, ವಸತಿ, ಇಂಧನ (ಪವರ್) ಇಂತಹ ಖಾತೆಗಳಿಗೆ ಈಗ ಹಿರಿಯರಿಂದ ಡಿಮ್ಯಾಂಡ್. ಕೇಂದ್ರದಲ್ಲೂ ಅಷ್ಟೇ. ರಕ್ಷಣೆ, ಗೃಹ, ಹಣಕಾಸು, ವಿಮಾನಯಾನ, ಜಲಸಂಪನ್ಮೂಲ, ಮಾನವ ಸಂಪನ್ಮೂಲ ಇತ್ಯಾದಿಗಳು ಲಾಬಿ ಖಾತೆಗಳು.

ಈಗ ಅವುಗಳ ಬೇಡಿಕೆ ಎಷ್ಟರ ಮಟ್ಟಿಗೆ ಎಂದರೆ, ಸರ್ಕಾರ ಮತ್ತು ಆ ಪಕ್ಷಗಳ ನಾಯಕರನ್ನು ಮಂಡಿಯೂರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ!. ಹಿಂದಿನ ಸಿದ್ಧರಾಮಯ್ಯ ಸರ್ಕಾರದಲ್ಲಿ ಖಾತೆಗಳ ಕ್ಯಾತೆಗೆ ಅವಕಾಶ ದೊರೆಯಲಿಲ್ಲ ಬಹುತೇಕ ಸಚಿವರುಗಳಿಗೆ ತಮ್ಮ ಅವಧಿ ಸಿದ್ಧರಾಮಯ್ಯನವರೊಟ್ಟಿಗೆ ಎರಡೂವರೆ ವರ್ಷ ಎಂದು ಆರಂಭದಲ್ಲೇ ಗೊತ್ತಾಗಿತ್ತು. ಅದಕ್ಕಾಗಿಯೇ, ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಲು ಹತ್ತು ಹಲವು ಪ್ರಕ್ರಿಯೆಗಳನ್ನು ಮಾಡಬೇಕಾಗಿತ್ತು.

ಈಗ ಹೈಕಮಾಂಡ್ ಪ್ರಬಲವಾಗಿದೆ. ಹಾಗೇ, ಮೂರು ವರ್ಷದಲ್ಲಿ ಸರ್ಕಾರದ ಹಿರಿಯ ಮಂತ್ರಿಗಳು ಮುಖ್ಯಮಂತ್ರಿಗಳನ್ನೇ, ಹೈಕಮಾಂಡ್‌ನ್ನೇ ಅಲುಗಾಡಿಸುವಷ್ಟು ಬೆಳೆದಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಪ್ರಥಮವಾಗಿ ತನಗೆ ಬೆಂಗಳೂರು ಅಭಿವೃದ್ಧಿ ಖಾತೆ ಸಿಕ್ಕಿಲ್ಲವೆಂದು ರಾಜೀನಾಮೆಯನ್ನು ಬಿಸಾಕಿದರು. ಮುನಿಸಿಕೊಂಡವರನ್ನು ಸಮಾಧಾನ ಪಡಿಸುವಲ್ಲಿ ಹೈರಾಣಾಗುತ್ತಿದ್ದಂತೇ ಸಚಿವ ಕೆ.ಎಚ್.ಮುನಿಯಪ್ಪ ತಮ್ಮ ಹಳೆಯ ಆಹಾರ ಖಾತೆಯನ್ನೇ ಮುಂದುವರಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಸೀನಿಯಾರಿಟಿ ಕಡೆಗಣಿಸಬೇಡಿ. ಕೇಂದ್ರ- ರಾಜ್ಯದಲ್ಲಿ ಮಂತ್ರಿಯಾದವರು. ಸಮುದಾಯ ತಮ್ಮೊಟ್ಟಿಗೆ ಇದೆ ಎಂದರು. ಆ ನಂತರ ಶುರುವಾದದ್ದು ಕೃಷ್ಣ ಭೈರೇಗೌಡರ ತಕರಾರು. ಮೂರು ವರ್ಷಗಳ ಕಾಲ ಕಂದಾಯ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಹೆಸರು ಪಡೆದಿರುವ ಕೃಷ್ಣ ಭೈರೇಗೌಡರಿಗೆ ಅದೇ ಖಾತೆ ಮುಂದುವರಿಯಲಿ ಎನ್ನುವ ಬಯಕೆ ಇತ್ತು.

ಆದರೆ ಬೆಂಗಳೂರು ಅಭಿವೃದ್ಧಿ ಖಾತೆಗೆ ಅವರನ್ನು ಸ್ಥಳಾಂತರಿಸಲಾಯಿತು. ಆ ನಂತರ ಬೆಂಗಳೂರು ಅಭಿವೃದ್ಧಿ ಖಾತೆಯಲ್ಲಿ ಬಿಡಿಎ ಇಲ್ಲ, ಬಿಎಂಆರ್‌ಡಿಎ ಇಲ್ಲ… ಹಲವು ಇಲಾಖೆಗಳೂ ಇಲ್ಲ… ಎಂದು ತಿಳಿದಾಗ ಮುನಿಸಿಕೊಂಡ ಅವರು ಈಗ ಹೈಕಮಾಂಡ್ ಮೊರೆ ಹೋಗಿದ್ದಾರೆ.

ಹಲ್ಲು-ಕಾಲು ಕಿತ್ತ ಈ ಖಾತೆಯಲ್ಲಿ ಕೆಲಸ ಮಾಡಲಾಗದು ಎಂಬ ಕೃಷ್ಣ ಭೈರೇಗೌಡರ ಆಶಯ- ಅಪೇಕ್ಷೆಯಲ್ಲಿ ನ್ಯಾಯ ಇದೆ. ಶಿರವಿಲ್ಲದ ಸೀಮಿತ ವ್ಯಾಪ್ತಿಯ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನೀಡಿರುವುದೇಕೆ? ಕೊಟ್ಟರೆ ಪೂರ್ಣ ಕೊಡಿ ಎನ್ನುವ ಅವರ ಮಾತು ವ್ಯಾವಹಾರಿಕ ಮತ್ತು ಆಡಳಿತಾತ್ಮಕವಾಗಿ ಸರಿ ಇದೆ. ಆದರೆ ರಾಮಲಿಂಗಾರೆಡ್ಡಿ, ಮುನಿಯಪ್ಪ ಅವರ ಅಸಮಾಧಾನ, ಬೇಡಿಕೆಗಳಿಗೆ ಸಮರ್ಥನೆ ಕಾಣುತ್ತಿಲ್ಲ.

ಇದರಿಂದ ಜನರ ಮುಂದೆ ಅವರೇ ಅಪಹಾಸ್ಯಕ್ಕೆ ಈಡಾಗಿದ್ದಾರೆಂದರೆ ತಪ್ಪಿಲ್ಲ. ಯಾವ ಖಾತೆ ದೊಡ್ಡದು? ಯಾವ ಖಾತೆ ಚಿಕ್ಕದು ಎನ್ನುವುದು ಈಗ ಸರ್ಕಾರದಿಂದ ಬಿಡುಗಡೆಯಾಗುವ ಹಣಕಾಸು ಮತ್ತು ಪವರ್‌ಅನ್ನು ಅವಲಂಬಿಸಿದೆ. ಮೊದಲು ಲೋಕೋಪಯೋಗಿ, ಗೃಹ, ಕಂದಾಯ ಮತ್ತು ಜಲಸಂಪನ್ಮೂಲಗಳನ್ನು ಮುಗಿಬಿದ್ದು, ಹಠ ಹಿಡಿದು ಪಡೆಯುತ್ತಿದ್ದರು. ಕೆಲವು ಹಸಿರು ಹುಲ್ಲುಗಾವಲಾದರೆ, ಇನ್ನು ಕೆಲವು ಸಂಪದ್ಭರಿತ ಹಣ್ಣಿನ ತೋಟಗಳು… ತಿಂದು ಅನುಭೋಗಿಸಲು ವಿಪುಲ ಅವಕಾಶಗಳಿವೆ. ಜನರಿಗೂ ಇದು ಅರ್ಥವಾಗಿಬಿಟ್ಟಿದೆ.!

ವಿಚಿತ್ರ ಎಂದರೆ, ಹಿರಿಯರನೇಕರಿಗೆ ಮಂತ್ರಿಯಾಗುವುದು ತಮ್ಮ ಜನ್ಮಸಿದ್ದ ಹಕ್ಕು ಎಂದು ಪ್ರತಿಪಾದಿಸುತ್ತಿದ್ದಾರೆ. ಈಗ ಸಂಪುಟದಿಂದ ಹೊರಗುಳಿದವರ ವಾದ ಕೂಡಾ ಅದೇ. ನಮ್ಮನ್ನು ಮಂತ್ರಿ ಮಾಡದೆ ಕಡೆಗಣಿಸಿದರೆ ಹೇಗೆ? ಇದು ಎಚ್ಚರಿಕೆ ಗಂಟೆ.. ಎಂಬುದು ಅವರ ವಾದ. ಕೆಲವರ ಹಿಂದೆ ಒಂದಿಷ್ಟು ಶಾಸಕರಿರಬಹುದು. ಸರ್ಕಾರ ಅಲುಗಾಡಿಸುವ ತಾಕತ್ತೂ ಇರಬಹುದು. ಆದರೆ ತಮ್ಮನ್ನೇ ಮಂತ್ರಿ ಮಾಡಿ ನಾನೊಬ್ಬನೇ ಸಮರ್ಥ ಎಂದು ಪಟ್ಟು ಹಿಡಿಯುವುದು ಇದೆಯಲ್ಲ, ಇದು ಜನರಿಗೆ ಒಂದು ರೀತಿಯ ತಮಾಷೆಯಾಗಿಯೂ ಕಾಣುತ್ತಿದೆ.

ಏಕೆ ನೀವೊಬ್ಬರೇ ಎಷ್ಟು ವರ್ಷ ಅಧಿಕಾರ ಅನುಭವಿಸುತ್ತೀರಿ? ನಿಮ್ಮನ್ನು ನಂಬಿದವರಿಗೆ ಅಥವಾ ಹೊಸ ಪೀಳಿಗೆಯವರಿಗೆ ಏಕೆ ಅವಕಾಶ ಕೊಡುವುದಿಲ್ಲವೇಎಂದರೆ ಇವರಿಗೆ ಮುನಿಸು! ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳಗಳಲ್ಲಿ ಹೊಸ ಸರ್ಕಾರ ಬಂದಿದೆ. ಅಲ್ಲಿ ಹಿರಿ ತಲೆಗಳಿಲ್ಲ. ಎಲ್ಲ ಹೊಸಬರು. ಪ್ರಥಮವಾಗಿ ಮಂತ್ರಿಯಾದವರೇ.

ಸರ್ಕಾರದ ಬಗ್ಗೆ ಜನಾಭಿಪ್ರಾಯವನ್ನು ಈಗ ಹೇಳಲಾಗದಿದ್ದರೂ, ಯುವಕರಲ್ಲಿ- ಜನರಲ್ಲಿ ಹೊಸಮುಖಗಳ ಬಗ್ಗೆ ನಿರೀಕ್ಷೆ ಇರುವುದು ಸತ್ಯ. ಕಳೆದ ನಲವತ್ತು ವರ್ಷಗಳ ಕರ್ನಾಟಕದ ರಾಜಕಾರಣದಲ್ಲಿ ಜನ ಹೊಸ ಮುಖಗಳನ್ನು ಆಡಳಿತದ ಪ್ರಮುಖ ವಾಹಿನಿಯಲ್ಲಿ ಕಂಡಿಲ್ಲ.
ಯಾವ ಪಕ್ಷದ ಸರ್ಕಾರಗಳೇ ಬರಲಿ. ಅವೇ ಮುಖ. ಅವೇ ಖಾತೆ… ಇವುಗಳನ್ನೇ ಜನ ನೋಡುತ್ತ ಬಂದಿದ್ದಾರೆ. ತಮ್ಮ ಸರ್ಕಾರ ಬಂದ ಮೇಲೆ ಇಂತಹ ಒಂದು ಸಮಸ್ಯೆಯನ್ನು ಇತ್ಯರ್ಥಗೊಳಿಸಿದ್ದೇವೆ ಎಂದು ಹೇಳುವ ಛಾತಿ ಯಾರಿಗೂ ಇಲ್ಲ.

ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲೂ ಪರಿವರ್ತನೆಯಾಗುತ್ತದೆ ಎನ್ನುವುದು ಸುಳ್ಳು. ನಿಮ್ಮನ್ನೇ ಏಕೆ ಮಂತ್ರಿಯನ್ನಾಗಿಸಬೇಕು? ನೀವೇ ಏಕೆ ಮಂತ್ರಿಯಾಗಲು ಹವಣಿಸುತ್ತಿದ್ದೀರಿ? ಹೊಸಬರಿಗೇಕೆ ಅವಕಾಶ ಕೊಡುತ್ತಿಲ್ಲ?’ ಅತ್ಯುತ್ತಮ ಆಡಳಿತ ಕೌಶಲ್ಯ, ಅನುಭವ ಹೊಸ ಯೋಚನೆ-ಯೋಜನೆ ಇಟ್ಟುಕೊಂಡಿರುವ ಶಾಸಕರು ಯಾವ ಸ್ಥಾನಮಾನ, ಮಂತ್ರಿಗಿರಿ ಇಲ್ಲದೇ ತಮ್ಮ ಅವಧಿ ಪೂರ್ಣಗೊಳಿಸುತ್ತಿದ್ದಾರೆ.

ಈ ಹಿರಿತಲೆಮಾರಿಗಳು ದಾರಿ ಬಿಟ್ಟುಕೊಡದ ಕಾರಣ ಮರ‍್ನಾಲ್ಕು ಸಾರೆ ಶಾಸಕರಾದರೂ ಅವಕಾಶ ವಂಚಿತರಾಗುತ್ತಿದ್ದಾರೆ. ಹೊಸ ಸರ್ಕಾರ ಬಂತೆಂಬ ಹೊಸ ಉತ್ಸಾಹ ಜನರಲ್ಲೇನು ಕಾಣುತ್ತಿಲ್ಲ. ಕಾರಣ, ಅವೇ ಮುಖ… ಅವೇ ಜನ! ಈಗ ಮತ್ತೆ ಮಂತ್ರಿಯಾಗಲು ಜನರನ್ನು ಎತ್ತಿಕಟ್ಟುವ ಕೆಲಸವಷ್ಟೇ ನಡೆದಿದೆ. ಎಲ್ಲೆಡೆ ಜನರಿಂದ ಪ್ರತಿಭಟನೆ ಮಾಡಿಸಿಕೊಂಡು ಒತ್ತಡ ಹೇರುತ್ತಿದ್ದಾರೆ.

ಜನರು ತಮ್ಮ ಜಾತಿ, ಸಮುದಾಯ, ಸಮಾಜ, ಪ್ರದೇಶ ಮತ್ತು ಅಭಿಮಾನ ಇವುಗಳಿಗೆ ಕಟ್ಟು ಬಿದ್ದು ಹೋರಾಟಕ್ಕಿಳಿಯುತ್ತಿದ್ದಾರೆ. ಹೊಸಬರಿಗೆ ಏಕೆ ಕೊಡುವುದಿಲ್ಲ ಎಂದು ಜನ ಈಗ ಕೇಳಬೇಕಾಗಿದೆ. ಖಾತೆಯ ಕ್ಯಾತೆ ತೆಗೆಯುತ್ತಿರುವವರಿಗೆ ಬದಿಗೆ ತಳ್ಳಿ, ಹೊಸಬರಿಗೆ ದಾರಿ ಮಾಡಿಕೊಡಿ ಎಂದು ಜನರೇ ಒತ್ತಡ ಹೇರಬೇಕಿದೆ.

ಅಲ್ಲದೇ ಇದುವರೆಗೆ ಮಂತ್ರಿಯಾಗಿದ್ದವರ ಕಾರ್ಯವೈಖರಿಯ ಒಂದು ವಿಮರ್ಶಾತ್ಮಕ ಅವಲೋಕನವೂ ನಡೆಯಬೇಕಿದೆ. ಅಸಮರ್ಥ ಮಂತ್ರಿಗಳು ಹಿರಿತನದಲ್ಲಿ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುತ್ತಿದ್ದಾರೆ. ಇನ್ನಾದರೂ ಇವಕ್ಕೆಲ್ಲ ಒಂದು ಅಳತೆಗೋಲು ಬೇಕಲ್ಲವೇ!?

IIIT ಧಾರವಾಡ ಸಾಧನೆ: ಸಿಲಿಕಾನ್ ಚಿಪ್‌ಗೆ ಸಿದ್ಧಾರೂಢರ ಹೆಸರು

The post ಅಂಕಣ ಬರಹ: ಹಿರಿಯರ ಕ್ಯಾತೆ ಸಾಕು, ಹೊಸಬರಿಗೆ ದಾರಿಬಿಡಿ appeared first on Samyukta Karnataka.

ಸಿಎಂ ರಾಜೀನಾಮೆ ಪಡೆಯದಂತೆ ಒತ್ತಾಯ: ‘ನಮ್ಮ ನಾಯಕನಿಗಾಗಿ ಪ್ರಾಣ ಬಿಡಲೂ ಸಿದ್ಧ’; ಆತ್ಮಹತ್ಯೆಗೆ ಯತ್ನಿಸಿದ ಫ್ಯಾನ್
ಯಾದಗಿರಿ: ಕಾಂಗ್ರೆಸ್‌ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ಪಡೆಯಬಾರದು ಎಂದು ಒತ್ತಾಯಿಸಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರದೇಶ ಕುರುಬ ಸಂಘದ ಜಿಲ್ಲಾ ಘಟಕ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ಕಾರ್ಯಕರ್ತರೊಬ್ಬರು ಸಾರ್ವಜನಿಕರ ಎದುರೇ ವಿಷ ಕುಡಿಯಲು ಯತ್ನಿಸಿದ ಆತಂಕಕಾರಿ ಘಟನೆ ಇಂದು ನಡೆದಿದೆ.

ನಗರದ ಪ್ರಮುಖ ಕೇಂದ್ರವಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘೋಷಣೆಗಳನ್ನು ಕೂಗಿದರು. ಬಳಿಕ ರಸ್ತೆಯಲ್ಲೇ ಮಾನವ ಸರಪಳಿ ರಚಿಸಿ ಕುಳಿತುಕೊಂಡಿದ್ದರಿಂದ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಸಾರ್ವಜನಿಕರು ಪರದಾಡುವಂತಾಯಿತು.

ನಂತರ ಪ್ರತಿಭಟನೆಯ ಆರಂಭದಲ್ಲಿ ಕಾರ್ಯಕರ್ತರು ರಸ್ತೆಯ ಮಧ್ಯದಲ್ಲಿ ಟೈರ್‌ಗೆ ಬೆಂಕಿ ಹಚ್ಚಲು ಮುಂದಾಗಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅವರನ್ನು ತಡೆದು ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದ್ದಾರೆ. ಆದ್ರೆ ಈ ನಡುವೆ ವ್ಯಕ್ತಿಯೊಬ್ಬರು ದಿಢೀರನೆ ಟೈರ್‌ಗೆ ಪೆಟ್ರೋಲ್‌ ಹಾಕಿ ಬೆಂಕಿ ಹಚ್ಚಿಯೇ ಬಿಟ್ಟರು. ಪೊಲೀಸರು ತಕ್ಷಣವೇ ನೀರು ಹಾಕಿ ಬೆಂಕಿ ನಂದಿಸಲು ಮುಂದಾದಾಗ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಈ ಎಲ್ಲ ಗದ್ದಲದ ನಡುವೆಯೇ ಸಿದ್ದರಾಮಯ್ಯ ಪರಮಾಪ್ತ ಅಭಿಮಾನಿಯಾದ ಭೀಮು ಪೂಜಾರಿ ಎಂಬುವವರು ತೀವ್ರ ಭಾವುಕರಾದರು. “ಬೆಂಕಿ ಹಚ್ಚಿದ್ದಕ್ಕೇ ಇಷ್ಟೊಂದು ಸಂಕಷ್ಟ ತಂದೊಡ್ಡಲಾಗುತ್ತಿದೆ. ನಮ್ಮ ನಾಯಕ ಸಿದ್ದರಾಮಯ್ಯ ಅವರಿಗಾಗಿ ನಾನು ವಿಷ ಕುಡಿಯಲು ಸಿದ್ಧ” ಎಂದು ಜೋರಾಗಿ ಕೂಗಿದರು. ನೋಡನೋಡುತ್ತಿದ್ದಂತೆ ತಮ್ಮ ಜೇಬಿನಿಂದ ವಿಷದ ಬಾಟಲಿಯನ್ನು ತೆಗೆದು ನೇರವಾಗಿ ಕುಡಿಯಲು ಮುಂದಾದರು.

ಭೀಮು ಪೂಜಾರಿ ಈ ದಿಢೀರ್ ನಿರ್ಧಾರದಿಂದ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಪೊಲೀಸರು ಒಂದು ಕ್ಷಣ ಬೆಚ್ಚಿಬಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಹತ್ತಿರದಲ್ಲಿದ್ದ ಸಹ-ಪ್ರತಿಭಟನಾಕಾರರು ಮತ್ತು ಪೊಲೀಸ್ ಸಿಬ್ಬಂದಿ ಭೀಮು ಕೈಯನ್ನು ಗಟ್ಟಿಯಾಗಿ ಹಿಡಿದು, ವಿಷದ ಬಾಟಲಿಯನ್ನು ಬಲವಂತವಾಗಿ ಕಸಿದುಕೊಂಡರು. ಇದರಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.

ಒಟ್ಟಾರೆ.. ಈ ರಾಜ್ಯ ರಾಜಕೀಯ ಗೊಂದಲ ಇನ್ನೂ ತಿಳಿಯಾಗಿಲ್ಲ. ಹಾಗೇ ಇಂದು ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಲಿದ್ದಾರೆ

The post ಸಿಎಂ ರಾಜೀನಾಮೆ ಪಡೆಯದಂತೆ ಒತ್ತಾಯ: ‘ನಮ್ಮ ನಾಯಕನಿಗಾಗಿ ಪ್ರಾಣ ಬಿಡಲೂ ಸಿದ್ಧ’; ಆತ್ಮಹತ್ಯೆಗೆ ಯತ್ನಿಸಿದ ಫ್ಯಾನ್ appeared first on Samyukta Karnataka.

ಸಿದ್ದರಾಮಯ್ಯ ಕಾಲಿಗೆ ಬಿದ್ದ ಡಿಕೆ ಶಿವಕುಮಾರ್; ಸಿಎಂ ನಿವಾಸದ ಹೈ-ವೋಲ್ಟೇಜ್ ಉಪಾಹಾರ ಸಭೆಯಲ್ಲಿ ನಡೆದಿದ್ದೇನು?
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆ ಕುರಿತಾದ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ಇಂದು ಆಯೋಜಿಸಿದ್ದ ಮಹತ್ವದ ‘ಬ್ರೇಕ್‌ಫಾಸ್ಟ್‌ ಸಭೆ’ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಉನ್ನತ ಮಟ್ಟದ ಉಪಾಹಾರ ಕೂಟದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸರ್ಕಾರದ ಪ್ರಮುಖ ಸಚಿವರುಗಳು ಭಾಗವಹಿಸಿ ಚರ್ಚೆ ನಡೆಸಿದ್ದಾರೆ.

ಈ ಪ್ರಮುಖ ಸಭೆಯಲ್ಲಿ ಡಾ. ಜಿ. ಪರಮೇಶ್ವರ್, ಭೈರತಿ ಸುರೇಶ್‌, ಸಂತೋಷ್ ಲಾಡ್, ಎಂ.ಸಿ. ಸುಧಾಕರ್, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಎಸ್.ಎಸ್. ಮಲ್ಲಿಕಾರ್ಜುನ್, ಕೆ.ಜೆ. ಜಾರ್ಜ್ ಹಾಗೂ ಕೆ. ವೆಂಕಟೇಶ್‌ ಪಾಲ್ಗೊಂಡಿದ್ದರು. ಹಾಗೇ ಸಚಿವರಾದ ಶಿವರಾಜ್ ತಂಗಡಗಿ, ಎನ್. ಚಲುವರಾಯಸ್ವಾಮಿ, ಲಕ್ಷ್ಮೀ ಹೆಬ್ಬಾಳ್ಕರ್, ಶರಣಬಸಪ್ಪ ದರ್ಶನಾಪುರ, ಮಧು ಬಂಗಾರಪ್ಪ, ಸತೀಶ್‌ ಜಾರಕಿಹೊಳಿ, ಡಾ. ಎಚ್.ಸಿ. ಮಹದೇವಪ್ಪ, ಮಂಕಾಳ್ ವೈದ್ಯ, ಆರ್.ಬಿ. ತಿಮ್ಮಾಪುರ್, ಶರಣು ಪ್ರಕಾಶ್‌ ಪಾಟೀಲ್, ಕೆ.ಎಚ್. ಮುನಿಯಪ್ಪ, ಎಚ್.ಕೆ. ಪಾಟೀಲ್‌, ಈಶ್ವರ್ ಖಂಡ್ರೆ ಮತ್ತು ಎನ್.ಎಸ್. ಬೋಸರಾಜು ಸಿಎಂ ನಿವಾಸಕ್ಕೆ ಆಗಮಿಸಿ ಸಭೆಯಲ್ಲಿ ಉಪಸ್ಥಿತರಿದ್ದರು.

ಕ್ಷಣಮಾತ್ರದಲ್ಲಿ ಗಮನ ಸೆಳೆದ ಡಿಕೆಶಿ ನಡೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವದಂತಿಗಳು ಹರಿದಾಡುತ್ತಿರುವ ಸಂದರ್ಭದಲ್ಲೇ ನಡೆದ ಈ ಸಭೆ ಹಲವು ರಾಜಕೀಯ ಆಯಾಮಗಳನ್ನು ಪಡೆದುಕೊಂಡಿದೆ. ಸಭೆಯ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದು ಕಾಲಿಗೆ ಬಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಶೀರ್ವಾದ ಪಡೆದರು. ಆ ಬಳಿಕ ಇಬ್ಬರು ನಾಯಕರು ಪರಸ್ಪರ ಆಲಿಂಗಿಸಿಕೊಂಡು ನಗುವಿನೊಂದಿಗೆ ಮಾತುಕತೆ ನಡೆಸಿದ್ದು, ಸಭೆಯ ಪ್ರಮುಖ ಹೈಲೈಟ್ ಆಗಿ ಮೂಡಿಬಂದಿದೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಹಿರಿಯ ನಾಯಕರ ಆಲಿಂಗನವು ಪಕ್ಷದೊಳಗೆ ಎಲ್ಲವೂ ಸುಸೂತ್ರವಾಗಿದೆ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನವೇ ಎಂಬ ಚರ್ಚೆಗಳು ಆರಂಭವಾಗಿವೆ. ಸರ್ಕಾರದ ಪ್ರಮುಖ ಸಚಿವರ ದಂಡೇ ನೆರೆದಿದ್ದ ಈ ಬ್ರೇಕ್‌ಫಾಸ್ಟ್‌ ಮೀಟಿಂಗ್, ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದ ಮುಂದಿನ ನಡೆಗಳ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಎಂದು ವಿಶ್ಲೇಷಿಸಲಾಗುತ್ತಿದೆ.

The post ಸಿದ್ದರಾಮಯ್ಯ ಕಾಲಿಗೆ ಬಿದ್ದ ಡಿಕೆ ಶಿವಕುಮಾರ್; ಸಿಎಂ ನಿವಾಸದ ಹೈ-ವೋಲ್ಟೇಜ್ ಉಪಾಹಾರ ಸಭೆಯಲ್ಲಿ ನಡೆದಿದ್ದೇನು? appeared first on Samyukta Karnataka.

ರಾಜ್ಯ ಸರ್ಕಾರದಿಂದ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳಿಗೆ ಅನ್ಯಾಯ
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಹೆಚ್ಚಳ ಮಾಡಿದ್ದ ಮೀಸಲಾತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರದ್ದು ಮಾಡಿರುವುದನ್ನು ಖಂಡಿಸಿ ಬಿಜೆಪಿ ವತಿಯಿಂದ ರಾಜ್ಯದ ಜನತೆಗೆ ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬೊಮ್ಮಾಯಿ ಹೇಳಿದರು.

ತಮ್ಮ ನಿವಾಸದಲ್ಲಿ ನಡೆದ ಬಿಜೆಪಿಯ ಎಸ್ಸಿ ಎಸ್ಟಿ ಮುಖಂಡರ ಜೊತೆಗಿನ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಸ್ಸಿ ಎಸ್ಟಿ ಮತ್ತು ಒಬಿಸಿ ಜನಾಂಗಕ್ಕೆ ಬಹಳ ದೊಡ್ಡ ಅನ್ಯಾಯ ಮಾಡುತ್ತಿದೆ ಅಹಿಂದ ಹೆಸರಲ್ಲಿ ರಾಜಕಾರಣ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಯಾವ ವರ್ಗದಿಂದ ಬೆಂಬಲ ಪಡೆದಿದ್ದಾರೆ ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ.

ಎಸ್ಸಿ, ಎಸ್ಟಿ ಒಳ ಮೀಸಲಾತಿ ಗೊಂದಲದ ಬಗ್ಗೆ ಸಂವಿಧಾನ ಪೀಠ ರಾಜ್ಯ ಸರ್ಕಾರಗಳಿಗೆ ಅಧಿಕಾರ ಕೊಟ್ಟಿದೆ ಅದನ್ನು ತೆಲಂಗಾಣ, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳು ಜಾರಿ ಮಾಡಿವೆ. ಒಳ ಮೀಸಲಾತಿ ಜಾರಿ ಮಾಡಲು ರಾಜ್ಯ ಕಾಂಗ್ರೆಸ್‌ಗೆ ಹಾಗೂ ಅಲ್ಲಿನ ದಲಿತ ನಾಯಕರಿಗೆ ಅಸಕ್ತಿ ಇಲ್ಲ ಎಂದು ಆರೋಪಿಸಿದರು.

NEET 2026 Cancelled : ಲಕ್ಷಾಂತರ ವಿದ್ಯಾರ್ಥಿಗಳಿಗೆ ಬಿಗ್ ಶಾಕ್! ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಸಿಬಿಐ ತನಿಖೆಗೆ ಆದೇಶ

ಬಿಜೆಪಿ ಅವಧಿಯಲ್ಲಿ ಹೆಚ್ಚಳ: ಮೀಸಲಾತಿ ಹೆಚ್ಚಳದ ಕುರಿತು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾಗಮೋಹನ್ ದಾಸ್ ವರದಿ ಬಂದಿದೆ. ನಾನು ಸಿಎಂ ಆಗಿದ್ದಾಗ ಎಸ್ಸಿ ಸಮುದಾಯಕ್ಕೆ ಶೇ 15% ರಿಂದ 17% ಹಾಗೂ ಎಸ್ಟಿ ಸಮುದಾಯಕ್ಕೆ ಶೇ 3% ರಿಂದ ಶೇ 7% ಮೀಸಲಾತಿ ಹೆಚ್ಚಿಗೆ ಮಾಡಿದ್ದೇನೆ. ಇದರಿಂದ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಸುಮಾರು ನಾಲ್ಕು ಸಾವಿರ ಎಂಜನಿಯರಿಂಗ್ ಹಾಗೂ ಸುಮಾರು ನಾಲ್ಕು ನೂರು ವೈದ್ಯಕೀಯ ಸೀಟುಗಳು ಹೆಚ್ಚಿಗೆ ಲಭ್ಯವಾಗಿವೆ. ಈ ಆದೇಶ ಜಾರಿಯಾಗಿ ನಾಲ್ಕು ವರ್ಷ ಆಗಿದೆ ಎಂದು ಹೇಳಿದರು.

ಗೊಂದಲ ಸೃಷ್ಟಿ: ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರಿಂ ಕೋರ್ಟ್ ಆದೇಶ, ನಾಗಮೋಹನ ದಾಸ್ ವರದಿ, ಜೆ.ಸಿ. ಮಾಧುಸ್ವಾಮಿ ಸಮಿತಿ ವರದಿ ಯಾವುದನ್ನೂ ಜಾರಿ ಮಾಡದೇ ಗೊಂದಲ ಸೃಷ್ಟಿ ಮಾಡಿದ್ದಾರೆ. ಈಗ ಕೋರ್ಟ್‌ನಲ್ಲಿ ಶೇ 15% ರಷ್ಟು ಮೀಸಲಾತಿ ಜಾರಿ ಮಾಡುತ್ತೇವೆ ಎಂದು ತಾವೇ ಬರೆದು ಕೊಟ್ಟಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣ 17% ಮತ್ತು 7% ಅಂತ ಕಾನೂನು ಮಾಡಿದ್ದಾರೆ. ಇನ್ನೊಂದು ಕಡೆ ಶೇ 15% ಮತ್ತು ಶೇ 3% ರಷ್ಟು ಮೀಸಲಾತಿ ಜಾರಿ ಮಾಡುತ್ತಾರೆ. ಇದನ್ನು ದಲಿತ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ಪಕ್ಷದ ನಾಯಕರು ತೀರ್ಮಾನ ಮಾಡಿದ್ದಾರೆ‌. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು, ಪ್ರತಿಪಕ್ಷದ ನಾಯಕರು, ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಎಲ್ಲರೂ ಜಾಗೃತಿ ಮೂಡಿಸಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ತಪ್ಪು ಮುಚ್ಚಿಕೊಳ್ಳಲು ಒತ್ತಡ: ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರಿಸುವ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಶೆಡ್ಯೂಲ್ 9ನಲ್ಲಿ ಸೇರಿಸಿದರೂ ಅದನ್ನು ಪ್ರಶ್ನೆ ಮಾಡಲು ಅವಕಾಶ ಇದೆ. ರಾಜ್ಯ ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ಶೆಡ್ಯೂಲ್ 9ಕ್ಕೆ ಸೇರಿಸುವಂತೆ ಒತ್ತಡ ಹೇರುವ ಹುನ್ನಾರ ಮಾಡಿದ್ದಾರೆ. ಇದರ ವಿರುದ್ಧ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.

NEET 2026 Cancelled: ಮರುಪರೀಕ್ಷೆ ನಡೆಸಲು ಎನ್‌ಟಿಎ ತೀರ್ಮಾನ

The post ರಾಜ್ಯ ಸರ್ಕಾರದಿಂದ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳಿಗೆ ಅನ್ಯಾಯ appeared first on Samyukta Karnataka.

‘ದಕ್ಷಿಣ ಭಾರತದಲ್ಲಿ ಯಡಿಯೂರಪ್ಪರಂತಹ ನಾಯಕ ಯಾರೂ ಇಲ್ಲ’: ಅಮಿತ್ ಶಾ ಪ್ರಶಂಸೆ
ಚಿತ್ರದುರ್ಗ: ಅಮಿತ್‌ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರನ್ನು ದಕ್ಷಿಣ ಭಾರತದ ಅಪ್ರತಿಮ ನಾಯಕ ಎಂದು ಬಣ್ಣಿಸಿದ್ದು, ಬಿಜೆಪಿ ದಕ್ಷಿಣ ಭಾರತದಲ್ಲಿ ನೆಲೆ ನಿಲ್ಲಲು ಯಡಿಯೂರಪ್ಪರ ಕೊಡುಗೆ ಅಪಾರ ಎಂದು ಪ್ರಶಂಸಿಸಿದರು.

ಚಿತ್ರದುರ್ಗದಲ್ಲಿ ಆಯೋಜಿಸಿದ್ದ ‘ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪರ ಐದು ದಶಕಗಳ ರಾಜಕೀಯ ಸೇವೆಯನ್ನು ಸ್ಮರಿಸಿದರು.

‘ರೈತರ ನಾಯಕ ಯಡಿಯೂರಪ್ಪ’ : “ದೇಶದ ರೈತರ ನಾಯಕ ಯಡಿಯೂರಪ್ಪ ಅವರು 50 ವರ್ಷಗಳ ಕಾಲ ಜನಸೇವೆ ಮಾಡಿದ್ದಾರೆ. ಅವರು ‘ಜನಸೇವೆ ಪ್ರಭು ಸೇವೆ’ ಎಂಬ ಮಂತ್ರದಲ್ಲಿ ಕೆಲಸ ಮಾಡಿದವರು,” ಎಂದು ಅಮಿತ್ ಶಾ ಹೇಳಿದರು. ರೈತರ ಸಮಸ್ಯೆಗಳ ಕುರಿತು ಹೋರಾಟ ನಡೆಸಿ, ಬಗರಹುಕುಂ ಸೇರಿದಂತೆ ಅನೇಕ ಜನಪರ ಚಳವಳಿಗಳಲ್ಲಿ ಭಾಗಿಯಾಗಿದ್ದ ಯಡಿಯೂರಪ್ಪರು ರೈತಪರ ರಾಜಕಾರಣಕ್ಕೆ ಹೊಸ ದಿಕ್ಕು ನೀಡಿದರು ಎಂದು ಶಾ ಹೇಳಿದರು.

‘ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿದ ನಾಯಕ’ : ಯಡಿಯೂರಪ್ಪರು ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಸಾಮಾನ್ಯ ಕಾರ್ಯಕರ್ತನಾಗಿ ಹೋರಾಟ ಆರಂಭಿಸಿ, ಸೈಕಲ್‌ನಲ್ಲಿ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಿದ್ದರು ಎಂದು ಅಮಿತ್ ಶಾ ಸ್ಮರಿಸಿದರು. “ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ತಿತ್ವವೇ ಇಲ್ಲದ ಸಮಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಅವರು ಕೇವಲ ತಮ್ಮ ದಾರಿಯಲ್ಲಿ ನಡೆದ ನಾಯಕ ಅಲ್ಲ; ಮತ್ತೊಬ್ಬರಿಗೆ ದಾರಿ ತೋರಿಸಿದ ನಾಯಕ,” ಎಂದು ಶಾ ಬಣ್ಣಿಸಿದರು.

‘ಯುವಕರಿಗೆ ಮಾದರಿ’ : ಯಡಿಯೂರಪ್ಪರ ಸರಳತೆ ಮತ್ತು ಕಾರ್ಯಶೈಲಿಯನ್ನು ಉಲ್ಲೇಖಿಸಿದ ಅಮಿತ್ ಶಾ,“ಅವರ ಜೇಬಿನಲ್ಲಿ ಯಾವಾಗಲೂ ಒಂದು ಚಿಕ್ಕ ಡೈರಿ ಇರುತ್ತದೆ. ಅದರಲ್ಲಿ ಎಲ್ಲ ವಿಷಯಗಳನ್ನು ಬರೆದುಕೊಳ್ಳುತ್ತಾರೆ. ಇಂದಿನ ಯುವಕರು ಅವರಿಂದ ಕಲಿಯಬೇಕು,” ಎಂದರು.

ಮಠ–ಧರ್ಮಗಳ ಒಗ್ಗಟ್ಟು : ಕಾರ್ಯಕ್ರಮದಲ್ಲಿ ವಿವಿಧ ಧರ್ಮ ಮತ್ತು ಸಮುದಾಯಗಳ ಸ್ವಾಮೀಜಿಗಳು ವೇದಿಕೆ ಹಂಚಿಕೊಂಡಿರುವುದನ್ನು ಉಲ್ಲೇಖಿಸಿದ ಶಾ, “ಯಡಿಯೂರಪ್ಪರ ವ್ಯಕ್ತಿತ್ವವೇ ಎಲ್ಲರನ್ನು ಒಂದೇ ವೇದಿಕೆಗೆ ಕರೆತಂದಿದೆ. ಇದು ರಾಜ್ಯ ಮತ್ತು ದೇಶಕ್ಕೆ ದೊಡ್ಡ ಸಂದೇಶ,” ಎಂದು ಹೇಳಿದರು.

ಮದಕರಿ ನಾಯಕ ಪ್ರತಿಮೆ ನಿರ್ಮಾಣ ಭರವಸೆ : ಚಿತ್ರದುರ್ಗದ ಐತಿಹಾಸಿಕ ಹಿನ್ನೆಲೆಯನ್ನು ಸ್ಮರಿಸಿದ ಅಮಿತ್ ಶಾ, “ಇದು ಮದಕರಿ ನಾಯಕ ಅವರ ಪುಣ್ಯಭೂಮಿ. ಇನ್ನೂ ಅವರ ಪ್ರತಿಮೆ ನಿರ್ಮಾಣವಾಗಿಲ್ಲ. ಚಿಂತೆ ಬೇಡ, ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಮದಕರಿ ನಾಯಕ ಪ್ರತಿಮೆ ನಿರ್ಮಾಣ ಮಾಡುತ್ತೇವೆ,” ಎಂದು ಭರವಸೆ ನೀಡಿದರು.

ಕೃಷಿ ಬಜೆಟ್ ಹಾಗೂ ಬೆಂಗಳೂರು ಅಭಿವೃದ್ಧಿ : ಯಡಿಯೂರಪ್ಪರ ಆಡಳಿತ ಅವಧಿಯನ್ನು ನೆನಪಿಸಿಕೊಂಡ ಅಮಿತ್ ಶಾ, “ದೇಶದಲ್ಲಿ ಮೊದಲ ಬಾರಿಗೆ ರೈತರಿಗಾಗಿ ಕೃಷಿ ಬಜೆಟ್ ಮಂಡಿಸಿದವರು ಯಡಿಯೂರಪ್ಪ. ಬೆಂಗಳೂರು ಜಾಗತಿಕ ಟೆಕ್ ಹಬ್ ಆಗಲು ಅವರ ಕೊಡುಗೆ ಮಹತ್ವದ್ದಾಗಿದೆ,” ಎಂದು ಹೇಳಿದರು.

‘ಮಂತ್ರಿ ಸ್ಥಾನ ಬೇಡ ಎಂದ ನಾಯಕ’: ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲು ಅವಕಾಶ ಇದ್ದರೂ, “ನನಗೆ ಮಂತ್ರಿ ಸ್ಥಾನ ಬೇಡ; ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ” ಎಂದು ಯಡಿಯೂರಪ್ಪ ಹೇಳಿದ್ದನ್ನು ಅಮಿತ್ ಶಾ ಸ್ಮರಿಸಿದರು.

ಅಭಿಮಾನೋತ್ಸವದಲ್ಲಿ ಸಂಭ್ರಮ : ಚಿತ್ರದುರ್ಗದಲ್ಲಿ ನಡೆದ ಅಭಿಮಾನೋತ್ಸವದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು, ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮವು ಯಡಿಯೂರಪ್ಪರ ರಾಜಕೀಯ ಜೀವನದ ಸಾಧನೆಗಳನ್ನು ಸ್ಮರಿಸುವ ವೇದಿಕೆಯಾಗಿತ್ತು.

The post ‘ದಕ್ಷಿಣ ಭಾರತದಲ್ಲಿ ಯಡಿಯೂರಪ್ಪರಂತಹ ನಾಯಕ ಯಾರೂ ಇಲ್ಲ’: ಅಮಿತ್ ಶಾ ಪ್ರಶಂಸೆ appeared first on Samyukta Karnataka.

ಮೋದಿಯನ್ನು ಔರಂಗಜೇಬ್‌ಗೆ ಹೋಲಿಕೆ ಮಾಡಿದ ಕೇಜ್ರಿವಾಲ್‌
ಸಚಿವರ ಮನೆ ಮೇಲೆ ED ದಾಳಿ: ಮೋದಿ ವಿರುದ್ಧ ಕೇಜ್ರಿವಾಲ್ ಕಿಡಿ

ನವದೆಹಲಿ/ಚಂಡೀಗಢ: ಪಂಜಾಬ್ ಸರ್ಕಾರದ ಸಚಿವ ಸಂಜೀವ್ ಅರೋರಾ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ದಾಳಿಯ ಬೆನ್ನಲ್ಲೇ ಅರವಿಂದ ಕೇಜ್ರಿವಾಲ್‌ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪಂಜಾಬ್‌ನಲ್ಲಿ ರಾಜಕೀಯ ಒತ್ತಡ ತಂತ್ರ ಜಾರಿಯಲ್ಲಿದೆ ಎಂದು ಆರೋಪಿಸಿದ್ದಾರೆ.

ಶನಿವಾರ ಬೆಳಿಗ್ಗೆ ಇಡಿ ಅಧಿಕಾರಿಗಳ ತಂಡಗಳು ಚಂಡೀಗಢದಿಂದ ದೆಹಲಿವರೆಗಿನ ಸಂಜೀವ್ ಅರೋರಾ ಅವರಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದವು. ಈ ಕ್ರಮಕ್ಕೆ ಆಮ್ ಆದ್ಮಿ ಪಕ್ಷ (AAP) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು ಪಂಜಾಬ್ ರಾಜಕೀಯವನ್ನು ಅಸ್ಥಿರಗೊಳಿಸುವ ಪ್ರಯತ್ನವೆಂದು ಬಣ್ಣಿಸಿದೆ.

ಕೇಜ್ರಿವಾಲ್ ಆಕ್ರೋಶ : ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಕೇಜ್ರಿವಾಲ್, “ಬಂಗಾಳ ಚುನಾವಣೆ ಮುಗಿದ ತಕ್ಷಣ ಪಂಜಾಬ್‌ನಲ್ಲಿ ಪ್ರತಿದಿನ ಇಡಿ ದಾಳಿಗಳು ಆರಂಭವಾಗಿವೆ. ಕಳೆದ ಕೆಲವು ವರ್ಷಗಳಲ್ಲಿ ಮೋದಿ ಸರ್ಕಾರ ಪಂಜಾಬ್‌ಗೆ ಅನೇಕ ರೀತಿಯಲ್ಲಿ ಹಾನಿ ಮಾಡಿದೆ. ಪಂಜಾಬಿಗಳನ್ನು ಹಲವು ರೀತಿಯಲ್ಲಿ ಕಿರುಕುಳ ನೀಡಲಾಗಿದೆ,” ಎಂದು ಆರೋಪಿಸಿದರು.

ಅವರು ಪಂಜಾಬ್‌ನ ನೀರಿನ ಹಂಚಿಕೆ, ಗ್ರಾಮೀಣಾಭಿವೃದ್ಧಿ ನಿಧಿ ತಡೆ ಹಾಗೂ ಪಂಕಾಬ್‌ ವಿಶ್ವವಿಧ್ಯಾಲಯಗೆ ಸಂಬಂಧಿಸಿದ ವಿಷಯಗಳನ್ನು ಉಲ್ಲೇಖಿಸಿ, ಕೇಂದ್ರ ಸರ್ಕಾರ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ದೂರಿದರು.

ಅಶೋಕ್ ಮಿತ್ತಲ್ ಉಲ್ಲೇಖ: ಕೇಜ್ರಿವಾಲ್, ಇತ್ತೀಚೆಗೆ ಎಎಪಿ ತೊರೆದು ಬಿಜೆಪಿಗೆ ಸೇರ್ಪಡೆಯಾದ ಅಶೋಕ್ ಮಿತ್ತಲ್ ಅವರ ಉದಾಹರಣೆಯನ್ನು ಉಲ್ಲೇಖಿಸಿದರು. “ಅಶೋಕ್ ಮಿತ್ತಲ್ ಮನೆ ಮೇಲೆ ದಾಳಿ ನಡೆಯಿತು. ಮರುದಿನವೇ ಅವರು ಬಿಜೆಪಿಗೆ ಸೇರಿದರು. ಇದರಿಂದ ಇಡಿ ದಾಳಿಯ ಉದ್ದೇಶ ಭ್ರಷ್ಟಾಚಾರ ಪತ್ತೆಹಚ್ಚುವುದು ಅಲ್ಲ; ರಾಜಕೀಯ ಒತ್ತಡ ಹೇರುವುದೇ ಎಂಬುದು ಸ್ಪಷ್ಟವಾಗುತ್ತದೆ,” ಎಂದು ಕೇಜ್ರಿವಾಲ್ ಹೇಳಿದರು.

“ಸಂಜೀವ್ ಅರೋರಾ ಅವರ ಮನೆ ಮೇಲೂ ಹಿಂದೆ ದಾಳಿ ನಡೆದಿದೆ. ಅವರು ಬಿಜೆಪಿಗೆ ಸೇರದಿದ್ದಾಗ ಮತ್ತೆ ದಾಳಿ ನಡೆಸಲಾಗಿದೆ,” ಎಂದು ಆರೋಪಿಸಿದರು.

ಭಗವಂತ್ ಮಾನ್ ಪ್ರತಿಕ್ರಿಯೆ : ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಹ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಒಂದು ವರ್ಷದಲ್ಲಿ ಇದು ಮೂರನೇ ಬಾರಿ ಸಂಜೀವ್ ಅರೋರಾ ಮನೆಗೆ ಇಡಿ ಬಂದಿದೆ. ಕಳೆದ ತಿಂಗಳಲ್ಲೇ ಇದು ಎರಡನೇ ದಾಳಿ. ಆದರೂ ಇವರಿಗೆ ಏನೂ ಸಿಕ್ಕಿಲ್ಲ,” ಎಂದು ಅವರು ಹೇಳಿದ್ದಾರೆ.

“ಪಂಜಾಬ್ ಗುರುಗಳ ಭೂಮಿ. ಔರಂಗಜೇಬ್ ಕೂಡ ಇದನ್ನು ಒಡೆಯಲು ಸಾಧ್ಯವಾಗಲಿಲ್ಲ. ಇದು Bhagat Singh ಅವರ ನಾಡು. ಮೋದಿ ಸರ್ಕಾರದ ಕಪಟ ರಾಜಕೀಯಕ್ಕೂ ಪಂಜಾಬ್ ಮಣಿಯುವುದಿಲ್ಲ,” ಎಂದು ಹೇಳಿದ್ದಾರೆ.

ಮೋದಿ–ಔರಂಗಜೇಬ್ ಹೋಲಿಕೆ : ಕೇಜ್ರಿವಾಲ್ ಪ್ರಧಾನಿ ಮೋದಿಯನ್ನು ಮೊಘಲ್ ದೊರೆ ಔರಂಗಜೇಬ್‌ಗೆ ಹೋಲಿಸಿದ್ದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

“ನೂರಾರು ವರ್ಷಗಳ ಹಿಂದೆ ಔರಂಗಜೇಬ್ ದಬ್ಬಾಳಿಕೆ ಮೂಲಕ ದೇಶದ ಹಲವೆಡೆ ಆಳ್ವಿಕೆ ಸ್ಥಾಪಿಸಿದ್ದ. ಈಗ ಮೋದಿ ಸರ್ಕಾರವೂ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಆದರೆ ಗುರುಗಳ ತ್ಯಾಗದಿಂದ ಪಂಜಾಬ್ ಔರಂಗಜೇಬನ ವಿರುದ್ಧ ನಿಂತಂತೆ, ಇಂದೂ ಪಂಜಾಬ್ ದಬ್ಬಾಳಿಕೆಯ ವಿರುದ್ಧ ಹೋರಾಡಲಿದೆ,” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ರಾಜಕೀಯ ತೀವ್ರತೆ ಹೆಚ್ಚಳ: ಈ ದಾಳಿಗಳು ಪಂಜಾಬ್‌ನಲ್ಲಿ ಮುಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಎಎಪಿ ಇದನ್ನು ಬಿಜೆಪಿ ಪ್ರೇರಿತ ಕ್ರಮವೆಂದು ಆರೋಪಿಸುತ್ತಿರುವಾಗ, ಇಡಿ ಇದುವರೆಗೆ ಅಧಿಕೃತವಾಗಿ ಯಾವುದೇ ವಿವರ ಬಹಿರಂಗಪಡಿಸಿಲ್ಲ.

ಪಂಜಾಬ್‌ನಲ್ಲಿ ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಕಾವು ಹೆಚ್ಚಿಸುವ ಸಾಧ್ಯತೆ ಇದೆ.

ನೂರಾರು ವರ್ಷಗಳ ಹಿಂದೆ ಔರಂಗಜೇಬ್ ದಬ್ಬಾಳಿಕೆ ಮೂಲಕ ದೇಶದ ಹಲವೆಡೆ ಆಳ್ವಿಕೆ ಸ್ಥಾಪಿಸಿದ್ದ. ಈಗ ಮೋದಿ ಸರ್ಕಾರವೂ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಆದರೆ ಗುರುಗಳ ತ್ಯಾಗದಿಂದ ಪಂಜಾಬ್ ಔರಂಗಜೇಬನ ವಿರುದ್ಧ ನಿಂತಂತೆ, ಇಂದೂ ಪಂಜಾಬ್ ದಬ್ಬಾಳಿಕೆಯ ವಿರುದ್ಧ ಹೋರಾಡಲಿದೆ, ಎಂದು ಕೇಜ್ರಿವಾಲ್ ಹೇಳಿದ್ದಾರೆ.https://t.co/WcIhKRZ1Gz pic.twitter.com/CibRGqrlJk
— Samyukta Karnataka (@SamyuktaKarnatk) May 9, 2026

The post ಮೋದಿಯನ್ನು ಔರಂಗಜೇಬ್‌ಗೆ ಹೋಲಿಕೆ ಮಾಡಿದ ಕೇಜ್ರಿವಾಲ್‌ appeared first on Samyukta Karnataka.

DMK-ಕಾಂಗ್ರೆಸ್ ಮೈತ್ರಿ ಭಂಗ: ಲೋಕಸಭೆಯಲ್ಲಿ ಆಸನ ವ್ಯವಸ್ಥೆ ಬದಲಾಯಿಸಲು ಆಗ್ರಹ
ಡಿಎಂಕೆ-ಕಾಂಗ್ರೆಸ್ ಬಾಂಧವ್ಯಕ್ಕೆ ಅಧಿಕೃತ ಅಂತ್ಯ? ಸ್ಪೀಕರ್‌ಗೆ ಕನಿಮೋಳಿ ಪತ್ರ

ನವದೆಹಲಿ: ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ತಿರುವು ಪಡೆದಿರುವ ಡಿಎಂಕೆ-ಕಾಂಗ್ರೆಸ್ ಮೈತ್ರಿ ಭಂಗದ ಬೆಳವಣಿಗೆ ಇದೀಗ ಸಂಸತ್ತಿನೊಳಗೂ ಪ್ರತಿಫಲಿಸಿದೆ. ಡಿಎಂಕೆ ಸಂಸದೆ ಹಾಗೂ ಪಕ್ಷದ ಪ್ರಮುಖ ನಾಯಕಿ ಕನಿಮೋಳಿ ಅವರು ಲೋಕಸಭೆಯಲ್ಲಿ ಡಿಎಂಕೆ ಸದಸ್ಯರ ಆಸನ ವ್ಯವಸ್ಥೆಯನ್ನು ಬದಲಾಯಿಸುವಂತೆ ಲೋಕಸಭಾ ಸ್ಪೀಕರ್‌ಗೆ ಅಧಿಕೃತ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಪಕ್ಷದೊಂದಿಗೆ ಡಿಎಂಕೆ ಹೊಂದಿದ್ದ ದೀರ್ಘಕಾಲದ ರಾಜಕೀಯ ಮೈತ್ರಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಪಕ್ಕದಲ್ಲೇ ಡಿಎಂಕೆ ಸದಸ್ಯರು ಕುಳಿತುಕೊಳ್ಳುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಕನಿಮೋಳಿ ತಮ್ಮ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.

“ಬದಲಾದ ರಾಜಕೀಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗಿನ ನಮ್ಮ ಮೈತ್ರಿ ಕೊನೆಗೊಂಡಿರುವುದರಿಂದ, ಡಿಎಂಕೆ ಸದಸ್ಯರ ಆಸನ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕೆಂದು ಗೌರವಪೂರ್ವಕವಾಗಿ ವಿನಂತಿಸುತ್ತೇನೆ” ಎಂದು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.

ಈ ಬೆಳವಣಿಗೆ ತಮಿಳುನಾಡು ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ದಾರಿ ಮಾಡಿಕೊಡುವ ಸೂಚನೆ ಎಂದು ರಾಜಕೀಯ ವಲಯ ವಿಶ್ಲೇಷಿಸುತ್ತಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಯ ಬಳಿಕ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಬಾಂಧವ್ಯದಲ್ಲಿ ಬಿರುಕು ಮೂಡಿರುವ ಬಗ್ಗೆ ಹಲವು ಊಹಾಪೋಹಗಳು ಕೇಳಿಬಂದಿದ್ದವು. ಇದೀಗ ಕನಿಮೋಳಿ ಅವರ ಅಧಿಕೃತ ಮನವಿಯು ಆ ಅಂತರವನ್ನು ಬಹಿರಂಗವಾಗಿ ಪ್ರದರ್ಶಿಸಿದಂತಾಗಿದೆ.

ಇದರ ಜೊತೆಗೆ, ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಏರಿಕೆ, ತಮಿಳುನಾಡಿನಲ್ಲಿನ ತುಂಡಾದ ಜನಾದೇಶ ಮತ್ತು ಸರ್ಕಾರ ರಚನೆ ಕುರಿತ ಚರ್ಚೆಗಳು ರಾಜ್ಯ ರಾಜಕೀಯವನ್ನು ಮತ್ತಷ್ಟು ಚುರುಕುಗೊಳಿಸಿವೆ. ಕಾಂಗ್ರೆಸ್ ಪಕ್ಷವು ಟಿವಿಕೆಗೆ ಷರತ್ತುಬದ್ಧ ಬೆಂಬಲ ಸೂಚಿಸಿದ ಬೆನ್ನಲ್ಲೇ ಡಿಎಂಕೆ ತನ್ನ ಸ್ವತಂತ್ರ ರಾಜಕೀಯ ನಿಲುವನ್ನು ಸ್ಪಷ್ಟಪಡಿಸುತ್ತಿರುವುದು ಗಮನಾರ್ಹವಾಗಿದೆ.

ಲೋಕಸಭೆಯ ಆಸನ ವ್ಯವಸ್ಥೆ ಸಾಮಾನ್ಯವಾಗಿ ಪಕ್ಷಗಳ ಮೈತ್ರಿ, ಸಂಖ್ಯಾಬಲ ಮತ್ತು ರಾಜಕೀಯ ಸಂಬಂಧಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಹೀಗಾಗಿ ಡಿಎಂಕೆಯ ಈ ಮನವಿ ಕೇವಲ ಆಸನ ಬದಲಾವಣೆಯ ವಿಚಾರವಲ್ಲ, ಬದಲಿಗೆ ಹೊಸ ರಾಜಕೀಯ ಸಂದೇಶ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಹಲವು ವರ್ಷಗಳಿಂದ ಮೈತ್ರಿ ರಾಜಕಾರಣದಲ್ಲಿ ಜೊತೆಯಾಗಿ ಸಾಗಿದ್ದವು. ಆದರೆ ಇತ್ತೀಚಿನ ಚುನಾವಣಾ ಬೆಳವಣಿಗೆಗಳು, ಹೊಸ ರಾಜಕೀಯ ಸಮೀಕರಣಗಳು ಮತ್ತು ಪ್ರಾದೇಶಿಕ ಪಕ್ಷಗಳ ಬಲವರ್ಧನೆ ಹಿನ್ನೆಲೆಯಲ್ಲಿ ಡಿಎಂಕೆ ತನ್ನದೇ ಆದ ಪ್ರತ್ಯೇಕ ರಾಜಕೀಯ ಗುರುತನ್ನು ಬಲಪಡಿಸಲು ಮುಂದಾಗಿದೆ ಎನ್ನಲಾಗುತ್ತಿದೆ.

ಇದೀಗ ಲೋಕಸಭಾ ಸ್ಪೀಕರ್ ಈ ಮನವಿಗೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ತಮಿಳುನಾಡು: BJP ತಟಸ್ಥ ನಿಲುವು- TVK ಸರ್ಕಾರ ರಚನೆಗೆ ಕುತೂಹಲ

The post DMK-ಕಾಂಗ್ರೆಸ್ ಮೈತ್ರಿ ಭಂಗ: ಲೋಕಸಭೆಯಲ್ಲಿ ಆಸನ ವ್ಯವಸ್ಥೆ ಬದಲಾಯಿಸಲು ಆಗ್ರಹ appeared first on Samyukta Karnataka.

ರಾಜೀನಾಮೆ ನೀಡದ ದೀದಿ; ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜನೆ
ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜಕೀಯ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ಮೂಲಕ ರಾಜ್ಯಪಾಲ ಆರ್.ಎನ್. ರವಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಚುನಾವಣೆಯ ಫಲಿತಾಂಶ ಘೋಷಣೆಯಾದ ಬಳಿಕ ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದ್ದ ಮಮತಾ ಬ್ಯಾನರ್ಜಿ ಕೊನೆಯ ದಾಳವೂ ವಿಫಲವಾದಂತಾಗಿದೆ.

ಬುಧವಾರ ಮೇ 6 ರಂದು ಮಧ್ಯರಾತ್ರಿ ಹಿಂದಿನ ಸರಕಾರದ ಅವಧಿ ಮುಕ್ತಾಯವಾಗಿದ್ದು, ಗುರುವಾರ ರಾಜ್ಯಪಾಲರು ವಿಧಾನಸಭೆ ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.

ಸುಪ್ರೀಂ ‌ಮೊರೆ ಹೋಗಲು ಟಿಎಂಸಿ ತೀರ್ಮಾನ

The post ರಾಜೀನಾಮೆ ನೀಡದ ದೀದಿ; ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜನೆ appeared first on Samyukta Karnataka.

ಬಹುಮತವಿಲ್ಲದೆ ಪ್ರಮಾಣವಚನ ಇಲ್ಲ; ವಿಜಯ್‌ಗೆ ಮತ್ತೆ ನಿರಾಸೆ
ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಮುಂದಾಗಿರುವ ಟಿವಿಕೆ (TVK) ಮುಖ್ಯಸ್ಥ ನಟ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಎರಡನೇ ದಿನವೂ ಅವಕಾಶ ನೀಡದೆ, 118 ಶಾಸಕರ ಬೆಂಬಲದ ಸಹಿ ಪತ್ರಗಳನ್ನು ತಂದು ಬಹುಮತ ಸಾಬೀತುಪಡಿಸಲು ಸೂಚಿಸಿದ್ದಾರೆ.

ಗುರುವಾರ ರಾಜಭವನದಲ್ಲಿ ರಾಜ್ಯಪಾಲರನ್ನು ಮತ್ತೆ ಭೇಟಿ ಮಾಡಿದ ವಿಜಯ್, ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಆದರೆ ಟಿವಿಕೆ ಪಕ್ಷಕ್ಕೆ ಇನ್ನೂ ಅಗತ್ಯ ಸಂಖ್ಯಾಬಲ ದೊರೆತಿಲ್ಲ ಎಂದು ಹೇಳಿದ ರಾಜ್ಯಪಾಲರು, “118 ಶಾಸಕರ ಸಹಿಗಳೊಂದಿಗೆ ಬನ್ನಿ. ಬಹುಮತ ಇರುವುದನ್ನು ಸಾಬೀತುಪಡಿಸಿದ ಬಳಿಕವೇ ಪ್ರಮಾಣವಚನ ಪ್ರಕ್ರಿಯೆ ನಡೆಯಲಿದೆ” ಎಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ ರಚನೆಯಾದ ಬಳಿಕ ಅದು ಅಸ್ಥಿರವಾಗದಂತೆ ನೋಡಿಕೊಳ್ಳಲು ಲಿಖಿತ ಬೆಂಬಲ ಅಗತ್ಯ ಎಂದು ರಾಜ್ಯಪಾಲರು ಹೇಳಿದ್ದಾರೆ. ಇದೇ ವೇಳೆ, ಬೇರೆ ಯಾವುದೇ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸುವುದಿಲ್ಲ ಎಂಬ ಭರವಸೆಯನ್ನೂ ವಿಜಯ್‌ಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ, ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ರಾಜ್ಯಪಾಲರನ್ನು ಭೇಟಿಯಾಗಲು ಇನ್ನೂ ಸಮಯ ಕೇಳಿಲ್ಲ ಎಂದು ಮೂಲಗಳು ಹೇಳಿವೆ. ಇದಕ್ಕೂ ಮೊದಲು ಬುಧವಾರವೂ ವಿಜಯ್ 112 ಶಾಸಕರ ಬೆಂಬಲದೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಕಾಂಗ್ರೆಸ್ ಪಕ್ಷದ ಐದು ಶಾಸಕರ ಬೆಂಬಲ ಇರುವುದಾಗಿ ಮೌಖಿಕವಾಗಿ ತಿಳಿಸಿದ್ದರೂ, ಬಹುಮತಕ್ಕೆ ಬೇಕಾದ 118 ಸಂಖ್ಯೆಗೆ ಇನ್ನೂ ಐದು ಶಾಸಕರ ಕೊರತೆ ಇದೆ.

ಈ ಹಿನ್ನೆಲೆಯಲ್ಲಿ ಮತ್ತಷ್ಟು ಶಾಸಕರ ಬೆಂಬಲ ಪಡೆಯಲು ವಿಜಯ್ ರಾಜಕೀಯ ಮಾತುಕತೆಗಳನ್ನು ಮುಂದುವರಿಸಿದ್ದಾರೆ. ಇನ್ನೊಂದೆಡೆ, ವಿಸಿಕೆ ನಾಯಕ ಥೋಲ್ ತಿರುಮಾವಲವನ್ ರಾಜ್ಯಪಾಲರು ವಿಜಯ್ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿ, ನಂತರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

“ಬಿಜೆಪಿ ಹಾಗೂ ಅಮಿತ್ ಶಾ–ಮೋದಿ ತಮಿಳುನಾಡು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಟಿವಿಕೆ ರಾಜ್ಯದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದ್ದರಿಂದ ವಿಜಯ್ ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕು,” ಎಂದು ಅವರು ಪ್ರಾದೇಶಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಮಿಳುನಾಡು ಸಿಪಿಐ ಘಟಕವೂ ರಾಜ್ಯಪಾಲರು ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದು, ಪ್ರಮಾಣವಚನಕ್ಕೂ ಮುನ್ನವೇ ಬಹುಮತ ಸಾಬೀತುಪಡಿಸಲು ಹೇಳುವುದು “ಅನುಚಿತ” ಎಂದು ಟೀಕಿಸಿದೆ.

ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಪಕ್ಷವು ಡಿಎಂಕೆ–ಎಐಎಡಿಎಂಕೆ ಪಕ್ಷಗಳ ಮೂರು ದಶಕಗಳ ರಾಜಕೀಯ ಪ್ರಭುತ್ವಕ್ಕೆ ದೊಡ್ಡ ಸವಾಲು ಎಸೆದಿದೆ. ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದ್ದು, ಅದರ ಬಳಿಕ ಟಿವಿಕೆ ಸದಸ್ಯರ ಬಲ 107ಕ್ಕೆ ಇಳಿಯಲಿದೆ. ಕಾಂಗ್ರೆಸ್ ಬೆಂಬಲ ಸೇರಿ ಮೈತ್ರಿಯ ಒಟ್ಟು ಸಂಖ್ಯೆ 112 ಆಗಿದೆ.

ಸುಪ್ರೀಂ ‌ಮೊರೆ ಹೋಗಲು ಟಿಎಂಸಿ ತೀರ್ಮಾನ

The post ಬಹುಮತವಿಲ್ಲದೆ ಪ್ರಮಾಣವಚನ ಇಲ್ಲ; ವಿಜಯ್‌ಗೆ ಮತ್ತೆ ನಿರಾಸೆ appeared first on Samyukta Karnataka.

ಬಿಹಾರನ ಹೊಸ ಅಧ್ಯಾಯ: NDA ಸರ್ಕಾರದ ಭರ್ಜರಿ ಸಂಪುಟ ವಿಸ್ತರಣೆ
ಪಾಟ್ನಾ: ಬಿಹಾರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ನೂತನ ಸಂಪುಟವನ್ನು ವಿಸ್ತರಿಸಿದ್ದು, ಒಟ್ಟು 32 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಸರ್ಕಾರದಲ್ಲಿ ಬಿಜೆಪಿ, ಜೆಡಿಯು, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ಇತರೆ ಮೈತ್ರಿ ಪಕ್ಷಗಳ ನಾಯಕರಿಗೆ ಅವಕಾಶ ನೀಡಲಾಗಿದೆ.

ರಾಜಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರು ಸಾಕ್ಷಿಯಾದರು.

ನಿಶಾಂತ್ ಕುಮಾರ್‌ಗೆ ಸಚಿವ ಸ್ಥಾನ : ಮಾಜಿ ಮುಖ್ಯಮಂತ್ರಿ ನೀತಿಶ ಕುಮಾರ್‌ ಅವರ ಪುತ್ರ ನಿಶಾಂತ್ ಕುಮಾರ್ ಮೊದಲ ಬಾರಿಗೆ ಸಚಿವ ಸಂಪುಟ ಪ್ರವೇಶಿಸಿರುವುದು ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಹಲವು ವರ್ಷಗಳಿಂದ ರಾಜಕೀಯದಿಂದ ದೂರವಿದ್ದ ನಿಶಾಂತ್ ಕುಮಾರ್ ಇದೀಗ ನೇರವಾಗಿ ಆಡಳಿತದ ಭಾಗವಾಗಿರುವುದು ಜೆಡಿಯು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಅನುಭವ ಮತ್ತು ಯುವ ನಾಯಕತ್ವಕ್ಕೆ ಒತ್ತು : ಹೊಸ ಸಂಪುಟದಲ್ಲಿ ಅನುಭವಿಗಳಿಗೂ ಯುವ ನಾಯಕರಿಗೂ ಸಮಾನ ಆದ್ಯತೆ ನೀಡಲಾಗಿದೆ. ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ, ಹಿರಿಯ ನಾಯಕರು ಶ್ರಾವಣ್ ಕುಮಾರ್ ಹಾಗೂ ಅಶೋಕ್ ಚೌಧರಿ ಮತ್ತೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಬಿಜೆಪಿ ಮತ್ತು ಜೆಡಿಯು ಜೊತೆಗೆ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ (ರಾಮ್ ವಿಲಾಸ್) ಹಾಗೂ ಜಿತನ್ ರಾಮ್ ಮಾಂಝಿ ಅವರ ಹ್ಯಾಮ್ ಪಕ್ಷಕ್ಕೂ ಸಮರ್ಪಕ ಪ್ರತಿನಿಧಿತ್ವ ನೀಡಲಾಗಿದೆ.

ಸಾಮ್ರಾಟ್ ಚೌಧರಿ ನೇತೃತ್ವದಲ್ಲಿ ಹೊಸ ಅಧ್ಯಾಯ : ಸಾಮ್ರಾಟ್ ಚೌಧರಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ಮೊದಲ ದೊಡ್ಡ ಸಂಪುಟ ವಿಸ್ತರಣೆಯಾಗಿದೆ. ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭೆಗೆ ಆಯ್ಕೆಯಾಗಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಬಳಿಕ ಬಿಹಾರದಲ್ಲಿ ರಾಜಕೀಯ ಬದಲಾವಣೆ ನಡೆದಿತ್ತು. ಬಿಜೆಪಿ ಮೊದಲ ಬಾರಿಗೆ ಸ್ಪಷ್ಟ ನಾಯಕತ್ವದೊಂದಿಗೆ ಸರ್ಕಾರ ರಚಿಸಿದ್ದು, ಈಗ ಹೊಸ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯ ಆರಂಭಿಸಿದೆ.

ಚುನಾವಣೆಗೆ ಒಗ್ಗಟ್ಟಿನ ಸಂದೇಶ : ಸಂಪುಟ ವಿಸ್ತರಣೆ ಸಮಾರಂಭದ ಮೂಲಕ ಎನ್‌ಡಿಎ ಮೈತ್ರಿಕೂಟವು ಬಿಹಾರದಲ್ಲಿ ತನ್ನ ಒಗ್ಗಟ್ಟನ್ನು ಪ್ರದರ್ಶಿಸಿದೆ. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಸಮುದಾಯ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಗಮನಿಸಿ ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಹೊಸ ಸರ್ಕಾರ ಅಭಿವೃದ್ಧಿ, ಮೂಲಸೌಕರ್ಯ, ಉದ್ಯೋಗ ಹಾಗೂ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಎನ್‌ಡಿಎ ನಾಯಕರು ತಿಳಿಸಿದ್ದಾರೆ.

BJPಗೆ ಗುಡ್ ಬೈ ಹೇಳಿದ ಸ್ಥಳೀಯ ನಾಯಕರು: ಕಾಂಗ್ರೆಸ್‌ಗೆ ಸೇರ್ಪಡೆ

The post ಬಿಹಾರನ ಹೊಸ ಅಧ್ಯಾಯ: NDA ಸರ್ಕಾರದ ಭರ್ಜರಿ ಸಂಪುಟ ವಿಸ್ತರಣೆ appeared first on Samyukta Karnataka.