politics Archives - Samyukta Karnataka

ಆಲಮಟ್ಟಿ ಎತ್ತರ ಕುರಿತು ಆಂಧ್ರ, ತೆಲಂಗಾಣ ಸಿಎಂಗಳೊಂದಿಗೆ ಚರ್ಚೆ ಯಾಕೆ ಮಾಡಲಿಲ್ಲ?
ಹುಬ್ಬಳ್ಳಿ: ತುಂಗಭದ್ರ ಜಲಾಶಯದ ಕ್ರಸ್ಟ್ ಗೇಟ್ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದ ಕುರಿತು ಚರ್ಚೆ ನಡೆಸಬೇಕಿತ್ತು. ಆದರೆ, ಈ ಮಹತ್ವದ ವಿಚಾರವನ್ನು ಪ್ರಸ್ತಾಪಿಸದೇ ಇರುವುದೇಕೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳವನ್ನು ವಿರೋಧಿಸಿ ನೆರೆಯ ರಾಜ್ಯಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸುವ ಪ್ರಯತ್ನವನ್ನು ಮುಖ್ಯಮಂತ್ರಿ ಮಾಡಬೇಕಾಗಿತ್ತು ಎಂದು ಹೇಳಿದರು.

ಇದನ್ನೂ ಓದಿ: ಮಡಿಕೇರಿ: ಆಟವಾಡುವ ವೇಳೆ LED ಬಲ್ಬ್ ನುಂಗಿದ 8 ತಿಂಗಳ ಮಗು

“ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದಿಂದ ಕರ್ನಾಟಕ ಮಾತ್ರವಲ್ಲದೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತರೂ ಸಹ ಪ್ರಯೋಜನ ಪಡೆಯಲಿದ್ದಾರೆ. ಈ ಕುರಿತು ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ಸಿಎಂ ಮಾಡಬೇಕಾಗಿತ್ತು. ಆದರೆ, ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ,” ಎಂದು ಬೊಮ್ಮಾಯಿ ಆರೋಪಿಸಿದರು.

ಇದೇ ವೇಳೆ ಬಿಡದಿ ಟೌನ್‌ಶಿಪ್‌ ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈ ವಿಷಯದಲ್ಲಿ ಪ್ರತಿಷ್ಠೆ ಬಿಟ್ಟು ಜನಹಿತದ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಚಿತ್ರಕಥೆಯ ಮಾಂತ್ರಿಕ, ಖ್ಯಾತ ನಟ-ನಿರ್ದೇಶಕ ಕೆ. ಭಾಗ್ಯರಾಜ್ ಇನ್ನಿಲ್ಲ

“ಬಿಡದಿಯಲ್ಲಿ ಟೌನ್‌ಶಿಪ್ ನಿರ್ಮಾಣಕ್ಕಾಗಿ ಸರ್ಕಾರ ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಳ್ಳುವುದು ಸರಿಯಲ್ಲ. ಸರ್ಕಾರಿ ಜಮೀನು ಲಭ್ಯವಿರುವ ಪ್ರದೇಶದಲ್ಲಿ ಟೌನ್‌ಶಿಪ್ ನಿರ್ಮಾಣ ಮಾಡಲಿ. ಎಕರೆಗೆ ₹2 ಕೋಟಿ ಪರಿಹಾರ ನೀಡಿ ಭೂಸ್ವಾಧೀನ ಮಾಡುವುದು ಸಮಂಜಸವಲ್ಲ,” ಎಂದು ಹೇಳಿದರು.

ಅದೇ ಪ್ರಮಾಣದ ಪರಿಹಾರವನ್ನು ಆಲಮಟ್ಟಿ ಯೋಜನೆಗೆ ಭೂಮಿ ನೀಡಿರುವ ಹಾಗೂ ನೀಡುತ್ತಿರುವ ರೈತರಿಗೆ ಸಹ ನೀಡಬೇಕು ಎಂದು ಆಗ್ರಹಿಸಿದ ಬೊಮ್ಮಾಯಿ, ಬಿಡದಿ ಟೌನ್‌ಶಿಪ್ ಯೋಜನೆಯಲ್ಲಿ ಜನಹಿತಕ್ಕಿಂತ ರಾಜಕೀಯ ಹಿತಾಸಕ್ತಿಯೇ ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು.

TET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಪರೀಕ್ಷೆ ಮುಂದೂಡಿಕೆ!

The post ಆಲಮಟ್ಟಿ ಎತ್ತರ ಕುರಿತು ಆಂಧ್ರ, ತೆಲಂಗಾಣ ಸಿಎಂಗಳೊಂದಿಗೆ ಚರ್ಚೆ ಯಾಕೆ ಮಾಡಲಿಲ್ಲ? appeared first on Samyukta Karnataka.

ಮುನಿರಾಬಾದ್‌: ಕನ್ನಡದಲ್ಲೇ ಭಾಷಣ – ರೈತರ ಮನಗೆದ್ದ CM ನಾಯ್ಡು
ಮುನಿರಾಬಾದ್‌ನಲ್ಲಿ ನಡೆದ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ಸೇರುವುದು ಐತಿಹಾಸಿಕ ಕ್ಷಣ ಎಂದು ಹೇಳಿದರು.

ಮುನಿರಾಬಾದ್ (ಕೊಪ್ಪಳ): ತುಂಗಭದ್ರಾ ಜಲಾಶಯದ 33 ನೂತನ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಕನ್ನಡದಲ್ಲಿಯೇ ಭಾಷಣ ಆರಂಭಿಸಿ ನೆರೆದಿದ್ದ ರೈತರು ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

“ಎಲ್ಲಾ ರೈತ ಬಾಂಧವರಿಗೆ ನನ್ನ ನಮಸ್ಕಾರ” ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ನಾಯ್ಡು, “ನನಗೆ ಕನ್ನಡ ಇನ್ನಷ್ಟು ಚೆನ್ನಾಗಿ ಬಂದಿದ್ದರೆ ಮತ್ತಷ್ಟು ಪರಿಣಾಮಕಾರಿಯಾಗಿ ಮಾತನಾಡಬಹುದಿತ್ತು” ಎಂದು ಹೇಳಿದರು. ಇದೇ ವೇಳೆ, “ತುಂಗಭದ್ರಾ ತಾಯಿಗೆ ಶಿರಬಾಗಿ ನಮಸ್ಕಾರ ಸಲ್ಲಿಸುತ್ತೇನೆ. ತುಂಗಭದ್ರಾ ಆಡಳಿತ ಮಂಡಳಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ತಿಳಿಸಿದರು.

ಇದನ್ನೂ ಓದಿ: 3 ರಾಜ್ಯಗಳು ಒಟ್ಟಾಗಿ ನೀರಾವರಿ ಸಮಸ್ಯೆ ಬಗೆಹರಿಸೋಣ: ಡಿಕೆ

ತುಂಗಾ ಪಾನಃ, ಗಂಗಾ ಸ್ನಾನಃ: ತುಂಗಭದ್ರಾ ನದಿಯ ಮಹತ್ವವನ್ನು ಉಲ್ಲೇಖಿಸಿದ ಅವರು, “ತುಂಗಾ ಪಾನಃ, ಗಂಗಾ ಸ್ನಾನಃ” ಎಂಬ ಪ್ರಸಿದ್ಧ ನುಡಿಗಟ್ಟನ್ನು ಪ್ರಸ್ತಾಪಿಸಿ, ತುಂಗಾ ನದಿಯ ನೀರು ಶುದ್ಧತೆಗೆ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಕಳೆದ ವರ್ಷ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿದ್ದ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ನಾಯ್ಡು, “ಕೊಚ್ಚಿಹೋಗಿದ್ದು ಕೇವಲ ಒಂದು ಗೇಟ್ ಮಾತ್ರವಲ್ಲ, ಜಲಾಶಯದ ಸುರಕ್ಷತೆಗೂ ಅದು ದೊಡ್ಡ ಸವಾಲಾಗಿತ್ತು. ಆದರೆ ಇಂದು ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನು ಹೊಸದಾಗಿ ಅಳವಡಿಸಿ ಲೋಕಾರ್ಪಣೆ ಮಾಡಲಾಗಿದೆ. ಕೇವಲ ಆರು ತಿಂಗಳ ಅವಧಿಯಲ್ಲಿ ಈ ಮಹತ್ವದ ಕಾಮಗಾರಿ ಪೂರ್ಣಗೊಂಡಿರುವುದು ಹೆಮ್ಮೆಯ ಸಂಗತಿ” ಎಂದರು.

ಇದನ್ನೂ ಓದಿ: ಕನ್ನಡ ಪಠ್ಯಪುಸ್ತಕ ವಿವಾದ: ‘ಕೃಷ್ಣ’ ಹೆಸರಿನ ಬಗ್ಗೆ NCERT ಸ್ಪಷ್ಟನೆ

ಐತಿಹಾಸಿಕ ಕ್ಷಣ: ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಿರುವುದನ್ನು ಐತಿಹಾಸಿಕ ಕ್ಷಣವೆಂದು ಬಣ್ಣಿಸಿದ ಅವರು, “ಈ ಕಾರ್ಯಕ್ರಮ ಒಂದು ಹೊಸ ಇತಿಹಾಸವನ್ನು ಸೃಷ್ಟಿಸಿದೆ. ತುಂಗಭದ್ರಾ ಜಲಾಶಯವು ಮೂರು ರಾಜ್ಯಗಳ ರೈತರ ಜೀವನಾಡಿಯಾಗಿದ್ದು, ಅದರ ರಕ್ಷಣೆಗೆ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.

“ಹೊಸ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಇನ್ನಷ್ಟು ವಿಳಂಬವಾಗಿದ್ದರೆ ಭಾರಿ ಅಪಾಯ ಎದುರಾಗುವ ಸಾಧ್ಯತೆ ಇತ್ತು. ಆದರೆ ಈಗ ಆ ಅಪಾಯ ದೂರವಾಗಿದೆ” ಎಂದು ತಿಳಿಸಿದ ನಾಯ್ಡು, ಈ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳಲು ಕೇಂದ್ರ ಸರ್ಕಾರದ ಸಹಕಾರವೂ ಕಾರಣವಾಗಿದೆ ಎಂದರು.

ಇದನ್ನೂ ಓದಿ: ತುರ್ತು ಪರಿಸ್ಥಿತಿಯ ಅಧ್ಯಾಯ: ನಕಲಿ ಪ್ರತಿಗಳ ಬಗ್ಗೆ NCERT ಎಚ್ಚರಿಕೆ!

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಗಳನ್ನು ಶ್ಲಾಘಿಸಿದ ನಾಯ್ಡು, “ರೈಟ್ ಟೈಮ್, ರೈಟ್ ಡಿಸಿಷನ್ – ಅದು ನರೇಂದ್ರ ಮೋದಿ” ಎಂದು ಹೇಳಿ ಪ್ರಧಾನಿ ಅವರ ನಾಯಕತ್ವವನ್ನು ಪ್ರಶಂಸಿಸಿದರು.

The post ಮುನಿರಾಬಾದ್‌: ಕನ್ನಡದಲ್ಲೇ ಭಾಷಣ – ರೈತರ ಮನಗೆದ್ದ CM ನಾಯ್ಡು appeared first on Samyukta Karnataka.

ಶಾಸಕ ಗಣೇಶ್ ಪರ ಬೀದಿಗಿಳಿದ ಬೆಂಬಲಿಗರು: ಸಚಿವ ಸ್ಥಾನಕ್ಕೆ ಆಗ್ರಹ
ಬಳ್ಳಾರಿ: ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬುಧವಾರ ನೂರಾರು ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಏಳು ತಾಯಿ ಮಕ್ಕಳ ದೇವಸ್ಥಾನದಿಂದ ರಾಯಲ್ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಶಾಸಕ ಗಣೇಶ್ ಅವರ ಸೇವೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ನೂರಾರು ಕಾರ್ಯಕರ್ತರು ಹಾಗೂ ಬೆಂಬಲಿಗರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಪರಿಣಾಮವಾಗಿ ರಾಯಲ್ ವೃತ್ತ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ED ರೈಡ್: ಅಬಕಾರಿ ಹೆಚ್ಚುವರಿ ಆಯುಕ್ತರ ನಿವಾಸ ಸೇರಿ 6 ಕಡೆ ದಾಳಿ

ಪ್ರತಿಭಟನಾಕಾರರು ಮಾತನಾಡಿ, ಕಂಪ್ಲಿ ಕ್ಷೇತ್ರದಿಂದ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜೆ.ಎನ್. ಗಣೇಶ್ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಜನಸೇವಕನಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಗೌರವಿಸಬೇಕು ಎಂದು ಆಗ್ರಹಿಸಿದರು.

ಇದಲ್ಲದೆ, ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಅಳಿಯ ಸುರೇಶ್ ಬಾಬು ಅವರನ್ನು ಸತತ ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಕ್ಷೇತ್ರದಲ್ಲಿ ಬಲಪಡಿಸುವಲ್ಲಿ ಗಣೇಶ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬೆಂಬಲಿಗರು ಹೇಳಿದರು.

ಇದನ್ನೂ ಓದಿ: ಅಗ್ನಿ ಅವಘಡ: ಉದ್ಯೋಗ ಭವನ ಬಳಿ 200ಕ್ಕೂ ಅಧಿಕ ಶೆಡ್‌ಗಳು ಭಸ್ಮ!

ಕಂಪ್ಲಿ ಕ್ಷೇತ್ರ ರಚನೆಯಾದ ಬಳಿಕ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ಗಣೇಶ್ ಅವರ ಕೊಡುಗೆ ಮಹತ್ವದ್ದಾಗಿದೆ. ಬಳ್ಳಾರಿ ಜಿಲ್ಲೆಯ ನಾಲ್ಕು ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಅವರಿಗೆ ಸಚಿವ ಸ್ಥಾನ ನೀಡುವುದು ಅಗತ್ಯ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ರಜನಿಕಾಂತ್ 173ನೇ ಸಿನಿಮಾಗೆ ‘ಧರ್ಮನ್’ ಹೆಸರು ಫಿಕ್ಸ್!

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಶಾಸಕ ಗಣೇಶ್ ಪರವಾಗಿ ಬೆಂಬಲಿಗರು ನಡೆಸಿದ ಈ ಪ್ರತಿಭಟನೆಗೆ ರಾಜಕೀಯ ಮಹತ್ವ ಸಿಕ್ಕಿದೆ.

ಅದಾನಿ ಗ್ರೂಪ್‌ : ಪರಮಾಣು ಶಕ್ತಿಯಿಂದ ಬಂದರುಗಳವರೆಗೆ ವಿಸ್ತರಣೆ

The post ಶಾಸಕ ಗಣೇಶ್ ಪರ ಬೀದಿಗಿಳಿದ ಬೆಂಬಲಿಗರು: ಸಚಿವ ಸ್ಥಾನಕ್ಕೆ ಆಗ್ರಹ appeared first on Samyukta Karnataka.

ವಿಧಾನಸಭೆಯಲ್ಲಿ ವಿಜಯ್ ಅಬ್ಬರ: ವೈರಲ್ ಆಯ್ತು ‘ಕುಟ್ಟಿ ಕಥೆ’ Video
ತಮಿಳುನಾಡು ವಿಧಾನಸಭೆಯ ಮೊದಲ ಭಾಷಣದಲ್ಲೇ ಮಿಂಚಿದ ವಿಜಯ್; NEET ವಿರೋಧ, ದ್ವಿಭಾಷಾ ನೀತಿಗೆ ಬೆಂಬಲ

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ವೇಳೆ ತಮ್ಮ ಮೊದಲ ವಿವರವಾದ ಭಾಷಣ ಮಾಡಿದ ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ ಹಾಗೂ ನಟ-ರಾಜಕಾರಣಿ ವಿಜಯ್ ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ವಿಜಯ್, ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ TASMAC ಮದ್ಯ ಮಾರಾಟ ಸಂಸ್ಥೆಯ ಆದಾಯ ಹಾಗೂ ಪಕ್ಷದ ನಿಧಿ ಸಂಗ್ರಹದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ಅವರ ಈ ಹೇಳಿಕೆಗೆ ಆಡಳಿತ ಪಕ್ಷದ ಡಿಎಂಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಇದನ್ನೂ ಓದಿ: ಮೋದಿ ಸಂಪುಟಕ್ಕೆ ವಿದಾಯ ಹೇಳಿದ ಜಾರ್ಜ್: ರಾಜೀನಾಮೆ ಅಂಗೀಕಾರ

ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ವೇಳೆ ವಿರೋಧಿಗಳನ್ನು ಪರೋಕ್ಷವಾಗಿ ಟೀಕಿಸಲು ಬಳಸಿದ ಹಾಸ್ಯಮಯ "ಕುಟ್ಟಿ ಕಥೆ" (ಸಣ್ಣ ಕಥೆ) ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.https://t.co/synTJm9RXG pic.twitter.com/XJbG5xqWet
— Samyukta Karnataka (@SamyuktaKarnatk) June 23, 2026

‘ಟಿವಿಕೆ ಕೇವಲ ನಟರ ಪಕ್ಷವಲ್ಲ’ : ತಮ್ಮ ಪಕ್ಷವನ್ನು “ನಟರ ಪಕ್ಷ” ಎಂದು ಟೀಕಿಸುವವರಿಗೆ ತಿರುಗೇಟು ನೀಡಿದ ವಿಜಯ್, ತಮಿಳಗ ವೆಟ್ರಿ ಕಳಗಂ ಕೇವಲ ಸಿನಿಮಾ ಹಿನ್ನೆಲೆಯ ಪಕ್ಷವಲ್ಲ, ಬದಲಾವಣೆಯ ಪರ್ಯಾಯ ರಾಜಕೀಯ ಶಕ್ತಿಯಾಗಿದೆ ಎಂದು ಹೇಳಿದರು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಸುಮಾರು 35 ಪ್ರತಿಶತ ಮತಗಳನ್ನು ಪಡೆದು 108 ಸ್ಥಾನಗಳನ್ನು ಗೆದ್ದಿರುವುದನ್ನು ಉಲ್ಲೇಖಿಸಿದ ಅವರು, ದಶಕಗಳಿಂದ ತಮಿಳುನಾಡಿನ ರಾಜಕೀಯದಲ್ಲಿ ಮುಂದುವರಿದಿದ್ದ ಡಿಎಂಕೆ-ಎಐಎಡಿಎಂಕೆ ದ್ವಿಪಕ್ಷೀಯ ವ್ಯವಸ್ಥೆಗೆ ಅಂತ್ಯ ಹಾಡುವಲ್ಲಿ ತಮ್ಮ ಪಕ್ಷ ಯಶಸ್ವಿಯಾಗಿದೆ ಎಂದು ಪ್ರತಿಪಾದಿಸಿದರು.

ಕರೂರ್ ದುರಂತ ಪ್ರಸ್ತಾಪಿಸಿ ಭಾವುಕರಾದ ವಿಜಯ್ : ಇದೇ ವೇಳೆ, ಕರೂರ್‌ನಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 41 ಮಂದಿ ಮೃತಪಟ್ಟಿರುವುದನ್ನು ಉಲ್ಲೇಖಿಸಿದ ವಿಜಯ್, ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ಸಂತಾಪ ವ್ಯಕ್ತಪಡಿಸಿದರು. ಈ ಸಂದರ್ಭ ಅವರು ಭಾವುಕರಾಗಿದ್ದು, ಸರ್ಕಾರ ಇಂತಹ ದುರಂತಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಕನಕಪುರ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಲಿಂಗೈಕ್ಯ

NEET ವಿರುದ್ಧ ಕಿಡಿ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಕುರಿತು ತಮ್ಮ ಪಕ್ಷದ ನಿಲುವನ್ನು ಪುನರುಚ್ಚರಿಸಿದ ವಿಜಯ್, NEET ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಈ ಪರೀಕ್ಷೆಯು ಸಾಮಾಜಿಕ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ದ್ವಿಭಾಷಾ ನೀತಿಗೆ ಬೆಂಬಲ : ತಮಿಳುನಾಡಿನ ದೀರ್ಘಕಾಲದ ತಮಿಳು ಮತ್ತು ಇಂಗ್ಲಿಷ್ ದ್ವಿಭಾಷಾ ನೀತಿಗೆ ತಮ್ಮ ಬೆಂಬಲವಿದೆ ಎಂದು ವಿಜಯ್ ಸ್ಪಷ್ಟಪಡಿಸಿದರು. ರಾಜ್ಯದ ಭಾಷಾ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯವನ್ನು ಉಳಿಸಿಕೊಂಡು ವಿದ್ಯಾರ್ಥಿಗಳಿಗೆ ಜಾಗತಿಕ ಅವಕಾಶಗಳನ್ನು ಕಲ್ಪಿಸುವಲ್ಲಿ ಈ ನೀತಿ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Football ಸಾಮ್ರಾಜ್ಯದ ಸುಲ್ತಾನ್: ಮೆಸ್ಸಿ ಈಗ ‘ಸರ್ವಶ್ರೇಷ್ಠ’ ದಾಖಲೆ ಸರದಾರ!

ವೈರಲ್ ಆದ ‘ಕುಟ್ಟಿ ಕಥೆ’ : ವಿಜಯ್ ಅವರ ಭಾಷಣದ ವೇಳೆ ಅವರು ವಿರೋಧಿಗಳನ್ನು ಪರೋಕ್ಷವಾಗಿ ಟೀಕಿಸಲು ಬಳಸಿದ ಹಾಸ್ಯಮಯ “ಕುಟ್ಟಿ ಕಥೆ” (ಸಣ್ಣ ಕಥೆ) ಹಾಗೂ ಅವರ ಅನಿಮೇಟೆಡ್ ಶೈಲಿಯ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅವರ ಬೆಂಬಲಿಗರು ಭಾಷಣದ ವಿಡಿಯೋ ತುಣುಕುಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದು, ವಿಜಯ್ ಅವರ ರಾಜಕೀಯ ಪ್ರಭಾವ ಮತ್ತಷ್ಟು ಹೆಚ್ಚುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.

ಪೊಲೀಸರಿಂದ ಹಲ್ಲೆ: ವೃದ್ಧ ಸಾವು – ಕುಟುಂಬಸ್ಥರ ಆಕ್ರೋಶ

The post ವಿಧಾನಸಭೆಯಲ್ಲಿ ವಿಜಯ್ ಅಬ್ಬರ: ವೈರಲ್ ಆಯ್ತು ‘ಕುಟ್ಟಿ ಕಥೆ’ Video appeared first on Samyukta Karnataka.

ಮೋದಿ ಸಂಪುಟಕ್ಕೆ ವಿದಾಯ ಹೇಳಿದ ಜಾರ್ಜ್: ರಾಜೀನಾಮೆ ಅಂಗೀಕಾರ
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ರಾಜೀನಾಮೆ – ರಾಜ್ಯಸಭೆಗೆ ಮರುನಾಮಕರಣವಾಗದ ಹಿನ್ನೆಲೆ ಸಚಿವ ಸ್ಥಾನಕ್ಕೆ ಜಾರ್ಜ್ ಕುರಿಯನ್ ಗುಡ್‌ಬೈ

ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹಾಲು ಉತ್ಪಾದನಾ ಸಚಿವಾಲಯದ ರಾಜ್ಯ ಸಚಿವರಾಗಿದ್ದ ಜಾರ್ಜ್ ಕುರಿಯನ್ ಅವರು ತಮ್ಮ ಸಚಿವ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಜೂನ್ 21ರಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಾರ್ಜ್ ಕುರಿಯನ್ ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ. ಈ ಕುರಿತು ರಾಷ್ಟ್ರಪತಿ ಭವನ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಪ್ರಕಟಣೆಯ ಪ್ರಕಾರ, ಭಾರತದ ಸಂವಿಧಾನದ 75ನೇ ವಿಧಿಯ ಷರತ್ತು (2)ರ ಅಡಿಯಲ್ಲಿ ಜಾರ್ಜ್ ಕುರಿಯನ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.

ಇದನ್ನೂ ಓದಿ: ಕನಕಪುರ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಲಿಂಗೈಕ್ಯ

ಜಾರ್ಜ್ ಕುರಿಯನ್ ಅವರು ಕೇಂದ್ರ ಸರ್ಕಾರದಲ್ಲಿ ಕ್ರೈಸ್ತ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಏಕೈಕ ಸಚಿವರಾಗಿದ್ದರು. ಅವರ ರಾಜ್ಯಸಭಾ ಅವಧಿ ಮುಕ್ತಾಯಗೊಂಡಿದ್ದರೂ, ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅವರಿಗೆ ಮರುನಾಮಕರಣ ನೀಡಲಾಗಿರಲಿಲ್ಲ. ಇದೇ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಜೂನ್ 18ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜಾರ್ಜ್ ಕುರಿಯನ್ ಅವರೊಂದಿಗೆ ಮತ್ತೋರ್ವ ಕೇಂದ್ರ ಸಚಿವ ರವ್ನೀತ್ ಸಿಂಗ್ ಬಿಟ್ಟು ಅವರಿಗೂ ಮರುನಾಮಕರಣ ದೊರೆತಿರಲಿಲ್ಲ. ಹೀಗಾಗಿ ಅವರ ರಾಜ್ಯಸಭಾ ಸದಸ್ಯತ್ವವೂ ಅಂತ್ಯಗೊಂಡಿದೆ.

65 ವರ್ಷದ ಜಾರ್ಜ್ ಕುರಿಯನ್ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸ್ಥಾಪನೆಯಾದ 1980ರಿಂದಲೇ ಪಕ್ಷದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪಕ್ಷದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿರುವ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ, ಭಾರತೀಯ ಜನತಾ ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಕೇರಳ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Football ಸಾಮ್ರಾಜ್ಯದ ಸುಲ್ತಾನ್: ಮೆಸ್ಸಿ ಈಗ ‘ಸರ್ವಶ್ರೇಷ್ಠ’ ದಾಖಲೆ ಸರದಾರ!

ರಾಜಕೀಯದ ಜೊತೆಗೆ ಕಾನೂನು ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದ ಕುರಿಯನ್ ಅವರು ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ, ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅನುಭವವೂ ಅವರಿಗೆ ಇದೆ.

2024ರ ಜೂನ್ 9ರಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಜಾರ್ಜ್ ಕುರಿಯನ್, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜೊತೆಗೆ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹಾಲು ಉತ್ಪಾದನಾ ಸಚಿವಾಲಯದಲ್ಲಿಯೂ ರಾಜ್ಯ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು.

ಅವರ ರಾಜೀನಾಮೆಯಿಂದ ಕೇಂದ್ರ ಸಚಿವ ಸಂಪುಟದಲ್ಲಿ ಕ್ರೈಸ್ತ ಸಮುದಾಯದ ಪ್ರತಿನಿಧಿತ್ವದ ಕುರಿತು ಹೊಸ ಚರ್ಚೆಗಳು ಆರಂಭವಾಗುವ ಸಾಧ್ಯತೆ ಇದೆ.

ಪೊಲೀಸರಿಂದ ಹಲ್ಲೆ: ವೃದ್ಧ ಸಾವು – ಕುಟುಂಬಸ್ಥರ ಆಕ್ರೋಶ

The post ಮೋದಿ ಸಂಪುಟಕ್ಕೆ ವಿದಾಯ ಹೇಳಿದ ಜಾರ್ಜ್: ರಾಜೀನಾಮೆ ಅಂಗೀಕಾರ appeared first on Samyukta Karnataka.

ತಂತ್ರಜ್ಞಾನ, ಪ್ರಜಾಪ್ರಭುತ್ವದ ಸಂಗಮ:Open Source ಆದ ಪ್ರಜಾಕೀಯ
ಉಪೇಂದ್ರ ಅವರ Prajaakeeya.org ವೇದಿಕೆ ಇದೀಗ ಓಪನ್ ಸೋರ್ಸ್ ಆಗಿದೆ. ಡೆವಲಪರ್‌ಗಳು, ಡಿಸೈನರ್‌ಗಳು, UI/UX ತಜ್ಞರು, ಪರೀಕ್ಷಕರು ಹಾಗೂ ತಂತ್ರಜ್ಞಾನ ಆಸಕ್ತರು GitHub ಮೂಲಕ ಯೋಜನೆಗೆ ಕೊಡುಗೆ ನೀಡಲು ಆಹ್ವಾನಿಸಲಾಗಿದೆ.

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯ ಚಳವಳಿಗೆ ಸಂಬಂಧಿಸಿದ ಡಿಜಿಟಲ್ ವೇದಿಕೆ Prajaakeeya.org ಅನ್ನು ಓಪನ್ ಸೋರ್ಸ್ ಆಗಿ ಬಿಡುಗಡೆ ಮಾಡಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಉಪೇಂದ್ರ, ತಂತ್ರಜ್ಞಾನ ಕ್ಷೇತ್ರದ ಪರಿಣಿತರು ಹಾಗೂ ಆಸಕ್ತರು ವೇದಿಕೆಯ ಅಭಿವೃದ್ಧಿಗೆ ಕೈಜೋಡಿಸುವಂತೆ ಆಹ್ವಾನಿಸಿದ್ದಾರೆ.

Prajaakeeya.org ಅನ್ನು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಅದರ ಮೂಲ ಕೋಡ್‌ನ್ನು (Source Code) ಓಪನ್ ಸೋರ್ಸ್ ರೂಪದಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇದರ ಮೂಲಕ ಯಾವುದೇ ಅರ್ಹ ಡೆವಲಪರ್ ಅಥವಾ ತಂತ್ರಜ್ಞಾನ ಪರಿಣಿತರು ಯೋಜನೆಯ ಅಭಿವೃದ್ಧಿಯಲ್ಲಿ ಭಾಗಿಯಾಗಲು ಅವಕಾಶ ದೊರೆಯಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ‘ಪ್ರಜಾ ಸೇವಕ ಇಲಾಖೆ’ ಸ್ಥಾಪನೆಗೆ ನಿರ್ಧಾರ: ಡಿಕೆಶಿ ಮಾಹಿತಿ

ಯಾರಿಗೆ ಆಹ್ವಾನ? : ಉಪೇಂದ್ರ ಅವರ ಪ್ರಕಟಣೆಯ ಪ್ರಕಾರ, ಈ ಯೋಜನೆಗೆ ಹಲವು ಕ್ಷೇತ್ರಗಳ ಪರಿಣಿತರು ಹಾಗೂ ಆಸಕ್ತರು ಕೊಡುಗೆ ನೀಡಬಹುದು. ಡೆವಲಪರ್‌ಗಳು, ವೆಬ್ ಮತ್ತು ಮೊಬೈಲ್ ಡಿಸೈನರ್‌ಗಳು ಹಾಗೂ UI/UX ತಜ್ಞರು ಮತ್ತು ಸಾಫ್ಟ್‌ವೇರ್ ಪರೀಕ್ಷಕರು (Testers) ಹಾಗೂ ತಾಂತ್ರಿಕ ಬರಹಗಾರರು, ಓಪನ್ ಸೋರ್ಸ್ ಸಮುದಾಯದ ಸದಸ್ಯರು, ತಂತ್ರಜ್ಞಾನ ಉತ್ಸಾಹಿಗಳು ಕೊಡುಗೆ ನೀಡಬಹುದಾಗಿದೆ.

ಓಪನ್ ಸೋರ್ಸ್ ಯಾಕೆ? : ಓಪನ್ ಸೋರ್ಸ್ ಮಾದರಿಯ ಪ್ರಮುಖ ಉದ್ದೇಶವೆಂದರೆ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಪಾರದರ್ಶಕತೆ, ಸಹಭಾಗಿತ್ವ ಮತ್ತು ಹೊಸ ಆಲೋಚನೆಗಳಿಗೆ ಅವಕಾಶ ಕಲ್ಪಿಸುವುದು. ಯೋಜನೆಯ ಮೂಲ ಕೋಡ್ ಸಾರ್ವಜನಿಕರಿಗೆ ಲಭ್ಯವಿದ್ದರೆ, ವಿವಿಧ ಕ್ಷೇತ್ರಗಳ ಪರಿಣಿತರು ಅದರ ದೋಷಗಳನ್ನು ಸರಿಪಡಿಸುವುದು, ಹೊಸ ವೈಶಿಷ್ಟ್ಯಗಳನ್ನು ಸೇರಿಸುವುದು ಮತ್ತು ಭದ್ರತೆಯನ್ನು ಬಲಪಡಿಸುವುದು ಸಾಧ್ಯವಾಗುತ್ತದೆ.

ಇದನ್ನೂ ಓದಿ: AO-AAO ನೇಮಕಾತಿ ಪ್ರಕ್ರಿಯೆಗೆ ಹೊಸ ವೇಳಾಪಟ್ಟಿ ಪ್ರಕಟಿಸಿದ KEA

Prajaakeeya.org ಅನ್ನು ಸಹ ಇದೇ ದೃಷ್ಟಿಕೋನದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಅಭಿವೃದ್ಧಿಪಡಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಡಿಜಿಟಲ್ ಪ್ರಜಾಪ್ರಭುತ್ವಕ್ಕೆ ಉತ್ತೇಜನ : ಪ್ರಜಾಕೀಯ ಪರಿಕಲ್ಪನೆ ಜನರ ನೇರ ಪಾಲ್ಗೊಳ್ಳುವಿಕೆ ಮತ್ತು ಜವಾಬ್ದಾರಿಯುತ ಆಡಳಿತಕ್ಕೆ ಒತ್ತು ನೀಡುತ್ತದೆ. ಈಗ ಅದರ ಡಿಜಿಟಲ್ ವೇದಿಕೆಯನ್ನು ಓಪನ್ ಸೋರ್ಸ್ ಮಾಡುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಜನಸಹಭಾಗಿತ್ವದ ಮಾದರಿಯನ್ನು ಅನುಸರಿಸಲು ಮುಂದಾಗಿದೆ.

ತಜ್ಞರ ಅಭಿಪ್ರಾಯದಂತೆ, ರಾಜಕೀಯ ಅಥವಾ ಸಾಮಾಜಿಕ ಚಳವಳಿಗೆ ಸಂಬಂಧಿಸಿದ ಡಿಜಿಟಲ್ ವೇದಿಕೆಗಳನ್ನು ಓಪನ್ ಸೋರ್ಸ್ ಮಾಡುವುದರಿಂದ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಸಾರ್ವಜನಿಕ ವಿಶ್ವಾಸವನ್ನೂ ಬಲಪಡಿಸಬಹುದು.

ಇದನ್ನೂ ಓದಿ: ಜೂನ್ 21ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ಬದಲಾವಣೆ

GitHub ಮೂಲಕ ಕೊಡುಗೆ ಅವಕಾಶ : Prajaakeeya.org ಯೋಜನೆಯ ಮೂಲ ಕೋಡ್ GitHubನಲ್ಲಿ ಲಭ್ಯವಿದ್ದು, ಆಸಕ್ತರು ತಮ್ಮ ತಾಂತ್ರಿಕ ಪರಿಣಿತಿಯನ್ನು ಬಳಸಿಕೊಂಡು ಯೋಜನೆಗೆ ನೇರವಾಗಿ ಕೊಡುಗೆ ನೀಡಬಹುದು. ದೋಷ ತಿದ್ದುಪಡಿ, ಹೊಸ ವೈಶಿಷ್ಟ್ಯಗಳ ಅಭಿವೃದ್ಧಿ, ಬಳಕೆದಾರ ಸ್ನೇಹಿ ವಿನ್ಯಾಸ ಮತ್ತು ಭದ್ರತಾ ಸುಧಾರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಲಾಗಿದೆ. Contribute here: https://github.com/prajaakeeya

ತಂತ್ರಜ್ಞಾನ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷೆ : ಓಪನ್ ಸೋರ್ಸ್ ಘೋಷಣೆಯ ನಂತರ ತಂತ್ರಜ್ಞಾನ ಸಮುದಾಯದ ಗಮನ Prajaakeeya.org ಕಡೆ ಸೆಳೆಯಲ್ಪಟ್ಟಿದ್ದು, ಕರ್ನಾಟಕದ ಡೆವಲಪರ್‌ಗಳು ಮತ್ತು ಓಪನ್ ಸೋರ್ಸ್ ಆಸಕ್ತರಿಂದ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಇದನ್ನೂ ಓದಿ: ರೈಲ್ವೆ ಹೊಸ ನಿಯಮ: ಟಿಕೆಟ್ ರಹಿತ ಪ್ರಯಾಣಕ್ಕೆ ಭಾರೀ ದಂಡ

ಈ ಹೆಜ್ಜೆಯು ಕೇವಲ ಒಂದು ವೆಬ್‌ಸೈಟ್ ಅಭಿವೃದ್ಧಿಗೆ ಸೀಮಿತವಾಗದೇ, ತಂತ್ರಜ್ಞಾನ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಒಟ್ಟುಗೂಡಿಸುವ ಹೊಸ ಪ್ರಯೋಗವಾಗಿ ಪರಿಗಣಿಸಲಾಗುತ್ತಿದೆ.

ರಾಜ್ಯದಲ್ಲಿ ‘ಪ್ರಜಾ ಸೇವಕ ಇಲಾಖೆ’ ಸ್ಥಾಪನೆಗೆ ನಿರ್ಧಾರ: ಡಿಕೆಶಿ ಮಾಹಿತಿ

The post ತಂತ್ರಜ್ಞಾನ, ಪ್ರಜಾಪ್ರಭುತ್ವದ ಸಂಗಮ:Open Source ಆದ ಪ್ರಜಾಕೀಯ appeared first on Samyukta Karnataka.

ಮತದಾನದಲ್ಲಿ ‘ದ್ವಂದ್ವ ನೀತಿ’ ಪ್ರಶ್ನಿಸಿದ ಸುರೇಶ್ ಕುಮಾರ್
ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಲ್ಲಿ ಒಂದೇ ಮತದಾರರಾಗಿರುವ ಶಾಸಕರಿಗೆ ಅನ್ವಯವಾಗುವ ವಿಭಿನ್ನ ಮತದಾನ ನಿಯಮಗಳ ಕುರಿತು ಶಾಸಕ ಎಸ್. ಸುರೇಶ್ ಕುಮಾರ್ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದು ಸ್ಪಷ್ಟನೆ ಕೋರಿದ್ದಾರೆ.

ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಧಾನಸಭಾ ಸದಸ್ಯರಿಗೆ ಅನ್ವಯವಾಗುವ ವಿಭಿನ್ನ ಮತದಾನ ವಿಧಾನಗಳ ಕುರಿತು ಪ್ರಶ್ನೆ ಎತ್ತಿರುವ ರಾಜಾಜಿನಗರ ಕ್ಷೇತ್ರದ ಶಾಸಕ ಎಸ್. ಸುರೇಶ್ ಕುಮಾರ್ ಅವರು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದು ಸ್ಪಷ್ಟನೆ ಕೋರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪತ್ರದ ಪ್ರತಿಯನ್ನು ಹಂಚಿಕೊಂಡಿರುವ ಅವರು, ಇತ್ತೀಚೆಗೆ ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಹಾಗೂ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯನ್ನು ಉಲ್ಲೇಖಿಸಿ, ಎರಡೂ ಚುನಾವಣೆಗಳಲ್ಲಿ ಒಂದೇ ಮತದಾರರಾದ ಶಾಸಕರಿಗೆ ಬೇರೆ ಬೇರೆ ಮತದಾನ ನಿಯಮಗಳನ್ನು ಅನುಸರಿಸುವಂತೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: NEET-UG: ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿ ಪರೀಕ್ಷಾ ಕೇಂದ್ರ ಹಂಚಿಕೆ

ಪತ್ರದಲ್ಲಿ ಏನಿದೆ? : ಸುರೇಶ್ ಕುಮಾರ್ ತಮ್ಮ ಪತ್ರದಲ್ಲಿ, ರಾಜ್ಯಸಭೆ ಚುನಾವಣೆಗಳಲ್ಲಿ ಶಾಸಕರು ಮತ ಚಲಾಯಿಸುವಾಗ ತಾವು ಗುರುತು ಮಾಡಿದ ಮತಪತ್ರವನ್ನು ತಮ್ಮ ಪಕ್ಷದ ಅಧಿಕೃತ ಏಜೆಂಟ್‌ಗೆ ತೋರಿಸಿ ನಂತರ ಮತಪೆಟ್ಟಿಗೆಯಲ್ಲಿ ಹಾಕಬೇಕಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ. ಆದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಇದೇ ಶಾಸಕರಿಗೆ ಗೌಪ್ಯ ಮತದಾನದ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಒಂದೊಮ್ಮೆ ರಾಜ್ಯಸಭೆ ಚುನಾವಣೆ ಅವಿರೋಧವಾಗಿ ನಡೆಯದೆ ಇದ್ದಿದ್ದರೆ, ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳು ಒಂದೇ ದಿನ ನಡೆದಿರಬಹುದಿತ್ತು. ಆಗ ಒಬ್ಬ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಮತಪತ್ರವನ್ನು ಬಹಿರಂಗವಾಗಿ ತೋರಿಸಿ ಮತ ಚಲಾಯಿಸಬೇಕಾಗುತ್ತಿತ್ತು. ಅದೇ ವೇಳೆ ವಿಧಾನ ಪರಿಷತ್ ಚುನಾವಣೆಯಲ್ಲಿ ಗೌಪ್ಯ ಮತದಾನ ನಡೆಸಬೇಕಾಗುತ್ತಿತ್ತು ಎಂಬ ಅಂಶವನ್ನು ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: NEET-UG: ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿ ಪರೀಕ್ಷಾ ಕೇಂದ್ರ ಹಂಚಿಕೆ

‘ದ್ವಂದ್ವ ನೀತಿ’ ಏಕೆ? : “ಒಂದೇ ವ್ಯಕ್ತಿ, ಒಂದೇ ದಿನ, ಒಂದೇ ವಿಧಾನಸಭೆಯಲ್ಲಿ ಮತದಾರನಾಗಿ ಭಾಗವಹಿಸುತ್ತಿದ್ದರೂ, ಒಂದು ಚುನಾವಣೆಯಲ್ಲಿ ಮತವನ್ನು ತೋರಿಸಬೇಕಾಗುತ್ತದೆ ಮತ್ತು ಮತ್ತೊಂದು ಚುನಾವಣೆಯಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಈ ರೀತಿಯ ದ್ವಂದ್ವ ನೀತಿಯ ಹಿಂದೆ ಇರುವ ತಾತ್ಪರ್ಯವೇನು?” ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಅನ್ವಯವಾಗುವ ನಿಯಮಗಳಲ್ಲಿ ಇರುವ ಈ ವ್ಯತ್ಯಾಸದ ಹಿಂದಿನ ಕಾನೂನು, ಸಾಂವಿಧಾನಿಕ ಹಾಗೂ ಆಡಳಿತಾತ್ಮಕ ಉದ್ದೇಶಗಳ ಕುರಿತು ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಅವರು ಕೋರಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ ಭೇಟಿಗೆ ತೆರಳುತ್ತಿದ್ದ MES ಮುಖಂಡರಿಗೆ ಪೊಲೀಸರ ತಡೆ

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ : ಸುರೇಶ್ ಕುಮಾರ್ ಅವರು ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಈ ವಿಷಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಜಾರಿಗೆ ಇರುವ ‘ಓಪನ್ ಬ್ಯಾಲೆಟ್’ (ಬಹಿರಂಗ ಮತದಾನ) ಪದ್ಧತಿ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಇರುವ ‘ಸೀಕ್ರೆಟ್ ಬ್ಯಾಲೆಟ್’ (ಗೌಪ್ಯ ಮತದಾನ) ಪದ್ಧತಿಯ ನಡುವಿನ ವ್ಯತ್ಯಾಸದ ಬಗ್ಗೆ ಸಾರ್ವಜನಿಕರಲ್ಲಿಯೂ ಕುತೂಹಲ ಮೂಡಿದೆ.

ನಿಯಮಗಳ ಹಿನ್ನೆಲೆ : ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷಾಂತರ ಮತದಾನ ಹಾಗೂ ಅಡ್ಡಮತದಾನ ನಿಯಂತ್ರಿಸುವ ಉದ್ದೇಶದಿಂದ ‘ಓಪನ್ ಬ್ಯಾಲೆಟ್’ ವ್ಯವಸ್ಥೆ ಜಾರಿಯಲ್ಲಿದ್ದು, ಪಕ್ಷದ ಅಧಿಕೃತ ಏಜೆಂಟ್‌ಗೆ ಮತಪತ್ರ ತೋರಿಸುವ ಅವಕಾಶವಿದೆ. ಆದರೆ ವಿಧಾನ ಪರಿಷತ್ ಚುನಾವಣೆಯ ಕೆಲವು ವರ್ಗಗಳಲ್ಲಿ ಗೌಪ್ಯ ಮತದಾನದ ವ್ಯವಸ್ಥೆ ಮುಂದುವರಿದಿದೆ.

ಇದನ್ನೂ ಓದಿ: NH-48ರಲ್ಲಿ ಲಾರಿ–ಹಾಲಿನ ಟ್ಯಾಂಕರ್ ಡಿಕ್ಕಿ: ಹೊತ್ತಿ ಉರಿದ ವಾಹನಗಳು

ಆದರೆ ಈ ಎರಡು ವಿಭಿನ್ನ ವಿಧಾನಗಳ ಹಿಂದೆ ಇರುವ ತರ್ಕ ಮತ್ತು ಉದ್ದೇಶವನ್ನು ಚುನಾವಣಾ ಆಯೋಗ ಅಧಿಕೃತವಾಗಿ ವಿವರಿಸಬೇಕೆಂದು ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ. ಈ ಪತ್ರಕ್ಕೆ ಚುನಾವಣಾ ಆಯೋಗ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಇದೀಗ ರಾಜಕೀಯ ಹಾಗೂ ಚುನಾವಣಾ ವಲಯದ ಗಮನ ಸೆಳೆದಿದೆ.

The post ಮತದಾನದಲ್ಲಿ ‘ದ್ವಂದ್ವ ನೀತಿ’ ಪ್ರಶ್ನಿಸಿದ ಸುರೇಶ್ ಕುಮಾರ್ appeared first on Samyukta Karnataka.

ಸಲೀಂ ಅಹ್ಮದ್‌ಗೆ ಸಚಿವ ಸ್ಥಾನ ಆಗ್ರಹಿಸಿ ಕಾರ್ಯಕರ್ತರ ಪ್ರತಿಭಟನೆ
ಸಲೀಂ ಅಹ್ಮದ್‌ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ; ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ಹುಬ್ಬಳ್ಳಿ: ವಿಧಾನ ಪರಿಷತ್ ಮುಖ್ಯ ಸಚೇತಕರಾಗಿರುವ ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ರಸ್ತೆ ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದವರು, ಕಾಂಗ್ರೆಸ್ ಪಕ್ಷದಲ್ಲಿ ದೀರ್ಘಕಾಲದಿಂದ ಸಂಘಟನಾ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಸಲೀಂ ಅಹ್ಮದ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿತ್ವದ ದೃಷ್ಟಿಯಿಂದಲೂ ಅವರಿಗೆ ಸಚಿವ ಸ್ಥಾನ ನೀಡುವುದು ಅಗತ್ಯ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬಂಡಾಯಗಾರರಿಗೆ ಶಾಕ್ ಕೊಟ್ಟ HDK : JDSನಲ್ಲಿ ‘Gen Z’ ಯುಗ

ಪ್ರತಿಭಟನಾಕಾರರ ಪ್ರಕಾರ, ಸಲೀಂ ಅಹ್ಮದ್ ಅವರು ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಜನಪರ ಕಾರ್ಯಕ್ರಮಗಳು ಮತ್ತು ಪಕ್ಷದ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಿರುವ ಅವರು ಸಚಿವರಾದರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಪ್ರತಿಭಟನೆಯ ವೇಳೆ ಮಾತನಾಡಿದ ಮುಖಂಡರು, ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಯ ಸಂದರ್ಭದಲ್ಲಿ ಸಲೀಂ ಅಹ್ಮದ್ ಅವರಿಗೆ ಅವಕಾಶ ನೀಡಬೇಕು ಎಂದು ಸರ್ಕಾರ ಮತ್ತು ಪಕ್ಷದ ವರಿಷ್ಠರನ್ನು ಒತ್ತಾಯಿಸಿದರು. ಅಲ್ಪಸಂಖ್ಯಾತ ಸಮುದಾಯದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ನ್ಯಾಯ ದೊರೆಯಬೇಕು ಎಂಬುದು ನಮ್ಮ ಆಗ್ರಹ ಎಂದು ತಿಳಿಸಿದರು.

ಇದನ್ನೂ ಓದಿ: ಅಡ್ಡಮತದಾನದ ಸತ್ಯಾಸತ್ಯತೆ ಪರಿಶೀಲನೆಗೆ BJP ತಂಡ ರಚನೆ

ಸಚಿವ ಸ್ಥಾನ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಅಗತ್ಯವಿದ್ದರೆ ದೊಡ್ಡ ಮಟ್ಟದ ಪ್ರತಿಭಟನೆಗಳು ಮತ್ತು ಜನಾಂದೋಲನಗಳನ್ನು ಸಂಘಟಿಸುವುದಾಗಿ ಅವರು ಹೇಳಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಡಿ. ಮಕಾಂದರ್, ಶಹಜಮಾನ್ ಮುಜಾಹೀದ್, ಇನಾಯಿತ್ ಖಾನ್ ಪಠಾಣ್, ಪರ್ವೇಜ್ ಬ್ಯಾಹಟ್ಟಿ, ರಶೀದ್ ಶೇಖ್, ಇಮ್ತಾಯಿಜ್ ಕುಮಟಾಕರ, ಇರ್ಷಾದ್ ಕುಸುಗಲ್, ಮುಜೀಬ್ ಮಕಾಂದರ್, ಜಾಕೀರ್ ಖದೀಬ್ ಸೇರಿದಂತೆ ಹಲವು ಮುಖಂಡರು ಹಾಗೂ ನೂರಾರು ಬೆಂಬಲಿಗರು ಭಾಗವಹಿಸಿದ್ದರು.

ರಾಜ್ಯದ ಎರಡು ಪ್ರಮುಖ ಕೋರ್ಟ್‌ಗಳಿಗೆ ಏಕಕಾಲದಲ್ಲಿ ಬಾಂಬ್ ಬೆದರಿಕೆ

The post ಸಲೀಂ ಅಹ್ಮದ್‌ಗೆ ಸಚಿವ ಸ್ಥಾನ ಆಗ್ರಹಿಸಿ ಕಾರ್ಯಕರ್ತರ ಪ್ರತಿಭಟನೆ appeared first on Samyukta Karnataka.

ಅಡ್ಡಮತದಾನದ ಸತ್ಯಾಸತ್ಯತೆ ಪರಿಶೀಲನೆಗೆ BJP ತಂಡ ರಚನೆ
ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಆರೋಪ: ಸತ್ಯಾಸತ್ಯತೆ ಪರಿಶೀಲನೆಗೆ ಬಿಜೆಪಿ ತನಿಖಾ ತಂಡ ರಚನೆ

ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡಮತದಾನ ನಡೆದಿರುವ ಕುರಿತು ಪಕ್ಷದೊಳಗೆ ಚರ್ಚೆಗಳು ಹಾಗೂ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಪ್ರಕರಣದ ಸತ್ಯಾಸತ್ಯತೆ ಮತ್ತು ವಾಸ್ತವಿಕತೆ ಪರಿಶೀಲಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಈ ಕುರಿತು ಆದೇಶ ಹೊರಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿರುವ ಅಡ್ಡಮತದಾನದ ಆರೋಪಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬಂಡಾಯಗಾರರಿಗೆ ಶಾಕ್ ಕೊಟ್ಟ HDK : JDSನಲ್ಲಿ ‘Gen Z’ ಯುಗ

ಪಕ್ಷದ ಹಿರಿಯ ಮುಖಂಡರು ಮತ್ತು ಜವಾಬ್ದಾರಿಯುತ ನಾಯಕರನ್ನು ಒಳಗೊಂಡಂತೆ ರಚಿಸಲಾದ ಈ ತಂಡಕ್ಕೆ, ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳು, ಮತದಾನದ ಮಾದರಿ ಹಾಗೂ ಅಡ್ಡಮತದಾನದ ಆರೋಪಗಳ ಕುರಿತು ಪರಿಶೀಲನೆ ನಡೆಸುವ ಜವಾಬ್ದಾರಿ ನೀಡಲಾಗಿದೆ.

ಬಿಜೆಪಿ ಮೂಲಗಳ ಪ್ರಕಾರ, ವಿಧಾನಪರಿಷತ್ ಚುನಾವಣೆಯ ಫಲಿತಾಂಶದ ಬಳಿಕ ಕೆಲ ಶಾಸಕರ ಮತದಾನ ಕುರಿತು ಅನುಮಾನಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಪಕ್ಷದೊಳಗೆ ಶಿಸ್ತು ಕಾಪಾಡುವುದು ಹಾಗೂ ವಾಸ್ತವಾಂಶವನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಪಕ್ಷದ ನಾಯಕತ್ವ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: CID ಬಲೆಗೆ ಬಿದ್ದ ಮಾಜಿ ಶಾಸಕ ಕೆ.ಎಸ್. ಲಿಂಗೇಶ್

ತಂಡವು ಸಂಬಂಧಿತ ಶಾಸಕರು, ಪಕ್ಷದ ಮುಖಂಡರು ಹಾಗೂ ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಪರಿಶೀಲಿಸಿ ವಾಸ್ತವಿಕ ವರದಿ ಸಿದ್ಧಪಡಿಸಲಿದೆ. ತನಿಖೆ ವೇಳೆ ಅಗತ್ಯವಿದ್ದರೆ ಸಂಬಂಧಪಟ್ಟವರಿಂದ ಸ್ಪಷ್ಟೀಕರಣ ಪಡೆಯುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.

ಪಕ್ಷದ ಆದೇಶದಂತೆ, ಈ ತಂಡವು ತನ್ನ ಪರಿಶೀಲನೆ ಪೂರ್ಣಗೊಳಿಸಿ 2026ರ ಜೂನ್ 25ರೊಳಗೆ ಸಮಗ್ರ ವರದಿಯನ್ನು ರಾಜ್ಯಾಧ್ಯಕ್ಷರಿಗೆ ಸಲ್ಲಿಸಬೇಕಿದೆ. ವರದಿಯ ಆಧಾರದ ಮೇಲೆ ಮುಂದಿನ ಕ್ರಮಗಳ ಕುರಿತು ಪಕ್ಷದ ನಾಯಕತ್ವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಒಡಿಶಾ ಪಠ್ಯಪುಸ್ತಕಗಳಲ್ಲಿ 1,678 ದೋಷಗಳು: ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ

ವಿಧಾನಪರಿಷತ್ ಚುನಾವಣೆಯ ಬಳಿಕ ಅಡ್ಡಮತದಾನದ ಆರೋಪಗಳು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಕೈಗೊಂಡಿರುವ ಈ ಕ್ರಮ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ವರದಿಯಲ್ಲಿ ಏನೆಲ್ಲ ಅಂಶಗಳು ಹೊರಬರುತ್ತವೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ.

ಮಾಜಿ ಶಾಸಕ, ಹಿರಿಯ ವಕೀಲ ಕೆ.ಆರ್. ಶ್ರೀನಿವಾಸಯ್ಯ ನಿಧನ

The post ಅಡ್ಡಮತದಾನದ ಸತ್ಯಾಸತ್ಯತೆ ಪರಿಶೀಲನೆಗೆ BJP ತಂಡ ರಚನೆ appeared first on Samyukta Karnataka.

ಖರ್ಗೆ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ: RSS ಪರ ಬ್ಯಾಟಿಂಗ್
ಗ್ಯಾರಂಟಿ ಪರಿಷ್ಕರಣೆ, ಕುರ್ಚಿ ಕಿತ್ತಾಟ, ಬಿಡದಿ ಟೌನ್‌ಶಿಪ್; ಸರ್ಕಾರದ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ದಾವಣಗೆರೆ: ಆರ್‌ಎಸ್‌ಎಸ್ ನೋಂದಣಿ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಚರ್ಚೆ ನಡೆಯುತ್ತಿರುವ ನಡುವೆಯೇ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್‌ಗೆ ನೋಂದಣಿ ಮಾಡಿಸಿಕೊಳ್ಳುವಂತೆ ಸಲಹೆ ನೀಡುವ ಬದಲು ತಾಕತ್ತಿದ್ದರೆ ಸಂಘಟನೆಯನ್ನು ನಿಷೇಧಿಸಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಆರ್‌ಎಸ್‌ಎಸ್ ದೇಶದ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಉದಯಗೊಂಡ ಸಂಘಟನೆಯಾಗಿದ್ದು, ಬ್ರಿಟಿಷರ ಆಡಳಿತದ ಅವಧಿಯಿಂದಲೇ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದು ಹೇಳಿದರು. ಸಂಘಟನೆ ಯಾವುದೇ ದೇಶವಿರೋಧಿ ಅಥವಾ ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ಅವರು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಮಾವು ಬೆಲೆ ಕುಸಿತ: PDPS ಜಾರಿಗೆ ಕೇಂದ್ರಕ್ಕೆ ಕುಮಾರಸ್ವಾಮಿ ಮನವಿ

RSS ಸೇವಾ ಚಟುವಟಿಕೆಗಳ ಪ್ರಸ್ತಾಪ : ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ ಹಾಗೂ ಇತರ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಜನರ ನೆರವಿಗೆ ಧಾವಿಸುತ್ತಾರೆ ಎಂದು ರೇಣುಕಾಚಾರ್ಯ ಹೇಳಿದರು. ಸಂಕಷ್ಟದ ಸಂದರ್ಭಗಳಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುವ ಸಂಘಟನೆಯ ಬಗ್ಗೆ ಟೀಕೆ ಮಾಡುವ ಮೊದಲು ಅದರ ಇತಿಹಾಸ ಮತ್ತು ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

“ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ಸಂಘಟನೆಯ ಬಗ್ಗೆ ಮಾತನಾಡುವಾಗ ಅದರ ಕೊಡುಗೆ ಮತ್ತು ಬೆಳವಣಿಗೆಯನ್ನು ಗಮನಿಸಬೇಕು. ಬ್ರಿಟಿಷರ ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗೆ ಈಗ ನೋಂದಣಿ ಮಾಡಿಸಿಕೊಳ್ಳಿ ಎನ್ನುವುದು ಹಾಸ್ಯಾಸ್ಪದವಾಗಿದೆ” ಎಂದು ಅವರು ವ್ಯಂಗ್ಯವಾಡಿದರು.

ಇದನ್ನೂ ಓದಿ: 232 ತಹಶೀಲ್ದಾರ್ ಗ್ರೇಡ್-2 ಅಧಿಕಾರಿಗಳಿಗೆ ಮುಂಬಡ್ತಿ

ಪ್ರಿಯಾಂಕ್ ಖರ್ಗೆ ವಿರುದ್ಧ ವೈಯಕ್ತಿಕ ಟೀಕೆ : ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಪಾತ್ರದ ಬಗ್ಗೆ ಮಾತನಾಡಿದ ರೇಣುಕಾಚಾರ್ಯ, “ಎಐಸಿಸಿ ಅಧ್ಯಕ್ಷರ ಪುತ್ರ ಎನ್ನುವುದನ್ನು ಬಿಟ್ಟರೆ ಅವರಿಗೆ ಪ್ರತ್ಯೇಕ ರಾಜಕೀಯ ಗುರುತು ಇಲ್ಲ” ಎಂದು ಟೀಕಿಸಿದರು. ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರೂ ಜನರು ನೆನಪಿಡುವಂತಹ ಗಮನಾರ್ಹ ಸಾಧನೆ ಮಾಡಿಲ್ಲ ಎಂದು ಆರೋಪಿಸಿದ ಅವರು, ತಮ್ಮ ಇಲಾಖೆಯ ಕೆಲಸಗಳಿಗಿಂತ ಇತರ ಇಲಾಖೆಗಳ ವಿಚಾರಗಳಲ್ಲಿ ಹೆಚ್ಚು ತಲೆಹಾಕುತ್ತಿದ್ದಾರೆ ಎಂದು ಹೇಳಿದರು.

ಅಕ್ರಮ ಚಟುವಟಿಕೆಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ : ರಾಜ್ಯದಲ್ಲಿ ಇಸ್ಪೀಟ್, ಮಟ್ಕಾ ಹಾಗೂ ಇತರ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಆರೋಪಿಸಿದ ರೇಣುಕಾಚಾರ್ಯ, ಸರ್ಕಾರ ಮೊದಲು ಅವುಗಳನ್ನು ನಿಯಂತ್ರಿಸುವತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. “ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಸರ್ಕಾರ ಬೇರೆ ವಿಷಯಗಳಲ್ಲಿ ತೊಡಗಿಕೊಂಡಿದೆ” ಎಂದು ಅವರು ದೂರಿದರು.

ಇದನ್ನೂ ಓದಿ: ನೀಟ್ ಪೇಪರ್ ಲೀಕ್ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಚಾಲನೆ

ಪಿಎಫ್‌ಐ ಮತ್ತು ಎಸ್‌ಡಿಪಿಐ ಕುರಿತು ಹೇಳಿಕೆ : ಸಂಭಾಷಣೆ ವೇಳೆ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ವಿಚಾರವನ್ನು ಪ್ರಸ್ತಾಪಿಸಿದ ಅವರು, ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಸರ್ಕಾರಕ್ಕಿಲ್ಲ ಎಂದು ಆರೋಪಿಸಿದರು. ಮೊದಲು ಅಂತಹ ಸಂಘಟನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಿ, ನಂತರ ಇತರ ಸಂಘಟನೆಗಳ ಬಗ್ಗೆ ಮಾತನಾಡಲಿ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಗ್ಯಾರಂಟಿ ಯೋಜನೆಗಳು ಮತ್ತು ಆರ್ಥಿಕ ಸ್ಥಿತಿ ಕುರಿತು ಟೀಕೆ : ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಮಾತನಾಡಿದ ರೇಣುಕಾಚಾರ್ಯ, ಸರ್ಕಾರದ ಬಳಿ ಹಣದ ಕೊರತೆ ಉಂಟಾಗಿರುವ ಕಾರಣ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳಲ್ಲಿ ಪರಿಷ್ಕರಣೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದರು. “ಇದು ಅಭಿವೃದ್ಧಿ ಶೂನ್ಯ ಸರ್ಕಾರ. ಸರ್ಕಾರದೊಳಗಿನ ಕುರ್ಚಿ ಕಿತ್ತಾಟ ಮತ್ತು ಆಂತರಿಕ ರಾಜಕೀಯದಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ” ಎಂದು ಅವರು ಟೀಕಿಸಿದರು.

ಇದನ್ನೂ ಓದಿ: NEET ಮರುಪರೀಕ್ಷೆಗೂ ಮುನ್ನ ಅಭ್ಯರ್ಥಿ ರಿಯಾ ಕುಮಾರಿ ಆತ್ಮಹತ್ಯೆ

ಬಿಡದಿ ಟೌನ್‌ಶಿಪ್ ಕುರಿತು ಅಭಿಪ್ರಾಯ : ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಫಲವತ್ತಾದ ಕೃಷಿ ಭೂಮಿಯಲ್ಲಿ ಇಂತಹ ಯೋಜನೆಗಳನ್ನು ಜಾರಿಗೊಳಿಸಬಾರದು ಎಂದು ಹೇಳಿದರು. “ಅಭಿವೃದ್ಧಿ ಯೋಜನೆಗಳಿಗೆ ನಾವು ವಿರೋಧಿಗಳಲ್ಲ. ಆದರೆ ಕೃಷಿ ಭೂಮಿಯನ್ನು ಉಳಿಸಬೇಕು. ಪಾಳು ಅಥವಾ ಬಂಜರು ಭೂಮಿಯಲ್ಲಿ ಟೌನ್‌ಶಿಪ್ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬಹುದು” ಎಂದು ಅಭಿಪ್ರಾಯಪಟ್ಟರು.

ಈ ವಿಷಯವನ್ನು ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಹಾಗೂ ಸ್ಥಳೀಯ ಮುಖಂಡರು ಪರಿಶೀಲಿಸಿ ಮುಂದಿನ ನಿಲುವು ನಿರ್ಧರಿಸಲಿದ್ದಾರೆ ಎಂದು ರೇಣುಕಾಚಾರ್ಯ ತಿಳಿಸಿದರು.

ಸಹಶಿಕ್ಷಕರ ಜಗಳ: ವಿಷ ಸೇವಿಸಿದ್ದ ಮುಖ್ಯಶಿಕ್ಷಕ ಸಾವು

The post ಖರ್ಗೆ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ: RSS ಪರ ಬ್ಯಾಟಿಂಗ್ appeared first on Samyukta Karnataka.