#NewStorytellers Archives - Samyukta Karnataka

ಸುದೀಪ್ ಪ್ರಿಯಾ ಬಿಗ್ ಬ್ರೇಕ್; ‘ಸುಪ್ರಿಯಾನ್ವಿ ಪಿಕ್ಚರ್ಸ್’ಗೆ ಕಥೆ ಕಳುಹಿಸಲು ಇಲ್ಲಿದೆ ಸುವರ್ಣಾವಕಾಶ!
ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟ ಕಿಚ್ಚ ಸುದೀಪ್ ಪತ್ನಿ, ನಿರ್ಮಾಪಕಿ ಪ್ರಿಯಾ ಸುದೀಪ್ ಚಿತ್ರರಂಗದ ಹೊಸ ಪ್ರತಿಭೆಗಳು ಹಾಗೂ ಸೃಜನಶೀಲ ಕಥೆಗಾರರಿಗೆ ಭರ್ಜರಿ ವೇದಿಕೆಯೊಂದನ್ನು ಕಲ್ಪಿಸಿದ್ದಾರೆ. ತಮ್ಮ ಅಧಿಕೃತ ನಿರ್ಮಾಣ ಸಂಸ್ಥೆಯಾದ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ’ ಮೂಲಕ ಹೊಸ ಮತ್ತು ವಿಶಿಷ್ಟ ಕಥೆಗಳನ್ನು ಆಹ್ವಾನಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ಅಳಿಯ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿ ಯಶಸ್ಸು ಕಂಡಿದ್ದ ಪ್ರಿಯಾ ಸುದೀಪ್, ಈಗ ಚಿತ್ರರಂಗಕ್ಕೆ ಮತ್ತಷ್ಟು ಮೌಲಿಕ ಕಥೆಗಳನ್ನು ಪರಿಚಯಿಸಲು ಮುಂದಾಗಿದ್ದಾರೆ. ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಉತ್ತಮ ಕಥೆಗಳಿದ್ದರೂ ಸೂಕ್ತ ಅವಕಾಶ ಸಿಗದೆ ತಡಕಾಡುತ್ತಿರುವ ಹೊಸಬರ ಆಲೋಚನೆಗಳಿಗೆ ಮನ್ನಣೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕಥೆಗಾರರಿಗೆ ಒಳ್ಳೆಯ ವೇದಿಕೆ: ಸಂಪರ್ಕಿಸುವುದು ಹೇಗೆ ಅಂದರೇ, ನಿಮ್ಮ ಬಳಿ ಸಿನಿಮಾಗೆ ಹೊಂದುವಂತಹ ವಿಶಿಷ್ಟ ಹಾಗೂ ಸೃಜನಶೀಲ ಕಥಾ ಪರಿಕಲ್ಪನೆಗಳಿದ್ದರೆ (Story Concepts), ಅವುಗಳನ್ನು ಸಂಸ್ಥೆಯು ನೀಡಿರುವ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬಹುದಾಗಿದೆ. “ಅಧಿಕೃತ ವಾಟ್ಸಾಪ್ ಸಂಖ್ಯೆ: 6363307434”

ಈ ಸಂಖ್ಯೆಗೆ ಕೇವಲ ವಾಟ್ಸಾಪ್ ಮೆಸೇಜ್ ಮಾಡಲು ಮಾತ್ರ ಅವಕಾಶವಿದ್ದು, ಯಾವುದೇ ಕರೆಗಳನ್ನು (Calls) ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಿಸಲಾಗಿದೆ.

ಒಟ್ಟಾರೆಯಾಗಿ.. ಹೊಸಬರ ಸೃಜನಶೀಲತೆಗೆ ಮುಕ್ತ ಅವಕಾಶ ನೀಡಿರುವ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ’, ಮುಂಬರುವ ದಿನಗಳಲ್ಲಿ ಮತ್ತಷ್ಟು ವಿಭಿನ್ನ ಹಾಗೂ ಗುಣಮಟ್ಟದ ಸಿನಿಮಾಗಳನ್ನು ಚಲನಚಿತ್ರ ಜಗತ್ತಿಗೆ ನೀಡಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹೊಸ ಕಥೆಗಾರರಲ್ಲಿ ಭರವಸೆ ಮೂಡಿಸಿದೆ.

The post ಸುದೀಪ್ ಪ್ರಿಯಾ ಬಿಗ್ ಬ್ರೇಕ್; ‘ಸುಪ್ರಿಯಾನ್ವಿ ಪಿಕ್ಚರ್ಸ್’ಗೆ ಕಥೆ ಕಳುಹಿಸಲು ಇಲ್ಲಿದೆ ಸುವರ್ಣಾವಕಾಶ! appeared first on Samyukta Karnataka.