Likhith Gondi Archives - Samyukta Karnataka

ಬಿಗ್‌‌ ಬಾಸ್ 13: ಎಂಟ್ರಿ ನೀಡುತ್ತಲೇ ಮಂಜ, ಲಿಖಿತ್‌ಗೆ ಬಿಗ್ ಶಾಕ್ ಕೊಟ್ಟ ವೈಲ್ಡ್ ಕಾರ್ಡ್ ಪ್ರಶಾಂತ್!
‘ಬಿಗ್ ಬಾಸ್‌ ಕನ್ನಡ ಸೀಸನ್‌-13’ರ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ‘ಗಿಚ್ಚಿ-ಗಿಲಿಗಿಲಿ’ ಖ್ಯಾತಿಯ ಪ್ರಶಾಂತ್, ಕಾಲಿಡುತ್ತಿದ್ದಂತೆಯೇ ತಮ್ಮ ಪ್ರತಾಪ ಶುರು ಮಾಡಿದ್ದಾರೆ. ಬಿಗ್‌ ಬಾಸ್ ನೀಡಿದ ವಿಶೇಷ ಅಧಿಕಾರ ಬಳಸಿ, ಸ್ಪರ್ಧಿಗಳಾದ ಲಿಖಿತ್ ಗೊಂದಿ ಹಾಗೂ ಮಾಡ್ರನ್ ಮಹಾಕವಿ ಮಂಜ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗಿಡುವ ಮೂಲಕ ಬಿಗ್‌ ಬಾಸ್‌ ಮನೆಯಿಂದಲೇ ಎತ್ತಂಗಡಿ ಮಾಡಿಸಿದ್ದಾರೆ.

ಬಿಗ್‌ ಬಾಸ್ ಪ್ರಶಾಂತ್‌ಗೆ, “ಮನೆಯ ಇಬ್ಬರು ಸದಸ್ಯರ ಸ್ಥಾನ ಹಾಗೂ ವಾರದ ಕ್ಯಾಪ್ಟೆನ್ಸಿಯನ್ನು ಹೈಜಾಕ್ ಮಾಡಿ. ನಿಮ್ಮ ಆಯ್ಕೆಯ ಸದಸ್ಯರಿಗೆ ಸೂಕ್ತ ಕಾರಣ ನೀಡಿ ‘ರೋಸ್ಟೆಡ್ ಬ್ರೆಡ್’ ತಿನ್ನಿಸಿ” ಎಂದು ವಿಶೇಷ ಪವರ್ ನೀಡಿದ್ದರು. ಈ ಅಧಿಕಾರ ಬಳಸಿ ಪ್ರಶಾಂತ್ ಇಬ್ಬರನ್ನೂ ನಾಮಿನೇಟ್ ಮಾಡಿದರು.

ಮೊದಲು ಮಂಜನಿಗೆ ಬ್ರೆಡ್ ತಿನ್ನಿಸಿದ ಪ್ರಶಾಂತ್, “ಮಂಜ ಯಾವುದೇ ವಿಷಯದಲ್ಲೂ ಸುಮ್ಮನೆ ನಾನ್‌ಸ್ಟಾಪ್ ಆಗಿ ಮಾತನಾಡುತ್ತಾರೆ. ಆದ್ರೆ ಅದ್ಯಾವುದೂ ಟೆಲಿಕಾಸ್ಟ್ ಆಗಲ್ಲ. ಮಾತು ಕಡಿಮೆಯಿದ್ದರೆ ನೋಡುವವರಿಗೆ, ಕೇಳುವವರಿಗೆ ಚಂದ. ಮಂಜ ಅವರಲ್ಲಿ ಒಳ್ಳೆಯ ಮನಸ್ಸಿದೆ, ಆದ್ರೆ ಮಾತು ಅರ್ಥಪೂರ್ಣವಾಗಿರಬೇಕು” ಎಂದು ರೋಸ್ಟ್ ಮಾಡಿದರು. ಇನ್ನು ಲಿಖಿತ್ ಅವರಿಗೆ ಬ್ರೆಡ್ ನೀಡಿ, “ಇವರಿಗೆ ಉತ್ತಮವಾಗಿ ಆಡುವ ಸಾಮರ್ಥ್ಯವಿದೆ. ಆದ್ರೆ ಉಳಿದವರನ್ನು ಮ್ಯಾನಿಪುಲೇಟ್ ಮಾಡುವುದರಲ್ಲೇ ನಿರತರಾಗಿದ್ದಾರೆ” ಎಂದು ಕಾರಣ ನೀಡಿದರು.

ಪ್ರಶಾಂತ್ ನಿರ್ಧಾರದ ಬೆನ್ನಲ್ಲೇ ಬಿಗ್‌‌ ಬಾಸ್, “ಮಂಜ ಮತ್ತು ಲಿಖಿತ್ ಈ ವಾರದ ಕ್ಯಾಪ್ಟೆನ್ಸಿ ಹಾಗೂ ಮನೆಯಲ್ಲಿನ ಸ್ಥಾನ ಕಳೆದುಕೊಂಡಿದ್ದೀರಿ. ಕೂಡಲೇ ಫ್ಲೈಟ್‌ಗೆ ತೆರಳಿ” ಎಂದು ಆದೇಶಿಸಿದರು. ಇದರಿಂದ ಭಾವುಕರಾದ ಮಂಜ, ಕೆನ್ನೆಗೆ ಹೊಡೆದುಕೊಳ್ಳುತ್ತಾ “ನನ್ನ ಬಾಯಿ ಯಾಕೆ ಸುಮ್ಮನಿರಲ್ಲ? ಮಧ್ಯದಲ್ಲಿ ಮಾತನಾಡಬಾರದು ಎಂಬುದನ್ನು ಕಲಿ” ಎಂದು ತಮ್ಮನ್ನೇ ದೂಷಿಸಿಕೊಂಡರು.

The post ಬಿಗ್‌‌ ಬಾಸ್ 13: ಎಂಟ್ರಿ ನೀಡುತ್ತಲೇ ಮಂಜ, ಲಿಖಿತ್‌ಗೆ ಬಿಗ್ ಶಾಕ್ ಕೊಟ್ಟ ವೈಲ್ಡ್ ಕಾರ್ಡ್ ಪ್ರಶಾಂತ್! appeared first on Samyukta Karnataka.