koppal Archives - Samyukta Karnataka

ಮಗನ ಸಚಿವ ಸ್ಥಾನಕ್ಕಾಗಿ 101 ತೆಂಗಿನಕಾಯಿ ಒಡೆದ ತಂಗಡಗಿ ತಾಯಿ
ಕೊಪ್ಪಳ(ಕನಕಗಿರಿ): ಮಗನಿಗೆ ಸಚಿವ ಸ್ಥಾನ ದೊರೆಯಲೆಂದು ಪ್ರಾರ್ಥಿಸಿ ಶಿವರಾಜ ತಂಗಡಗಿ ತಾಯಿ ಹುಲಿಗೆಮ್ಮ ತಂಗಡಗಿ ಅವರು ಸೋಮವಾರ ಪ್ರಸಿದ್ಧ ಕನಕಗಿರಿಯ ಕನಕಾಚಲಪತಿ ಲಕ್ಷ್ಮೀನರಸಿಂಹ ಸ್ವಾಮಿ ದೇವರಿಗೆ 101 ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿದರು.

ಶಿವರಾಜ ತಂಗಡಗಿ ಪತ್ನಿ ವಿದ್ಯಾ ತಂಗಡಗಿ, ಪುತ್ರ ಶಶಾಂಕ್ ತಂಗಡಗಿ, ಕುಟುಂಬದವರು ಪೂಜೆಯಲ್ಲಿ ಭಾಗವಹಿಸಿದ್ದರು. ಮಗನಿಗೆ ಕ್ಷೇತ್ರದ ಜನರ ಆಶೀರ್ವಾದವಿದೆ. ಮೂರು ಬಾರಿ ಚುನಾವಣೆಯಲ್ಲಿ ಗೆದ್ದು ಸಚಿವನಾಗಿ ಅನೇಕ ಜನಪರ, ಅಭಿವೃದ್ಧಿ ಕಾರ್ಯ ಮಾಡಿದ್ದಾನೆ. ಸಚಿವನಾದರೆ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತಾನೆ ಎಂದು ಹುಲಿಗೆಮ್ಮ ತಂಗಡಗಿ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಮಾಧ್ಯಮ ವಕ್ತಾರ ಶರಣಪ್ಪ ಭತ್ತದ, ಪಪಂ ಉಪಾಧ್ಯಕ್ಷ ಕಂಠೀರಂಗಪ್ಪ ನಾಯಕ, ನಾಮನಿರ್ದೇಶಿತ ಸದಸ್ಯ ಗಂಗಾಧರ ಚೌಡ್ಕಿ, ರವಿ ಪಾಟೀಲ, ರಮೇಶ ಬಡಿಗೇರ ಇದ್ದರು.

ಮಹಾಬಲೇಶ್ವರ ಮಂದಿರ ಗರ್ಭಗುಡಿಗೆ ನುಗ್ಗಿದ ನೀರು

The post ಮಗನ ಸಚಿವ ಸ್ಥಾನಕ್ಕಾಗಿ 101 ತೆಂಗಿನಕಾಯಿ ಒಡೆದ ತಂಗಡಗಿ ತಾಯಿ appeared first on Samyukta Karnataka.

ಮೊಬೈಲ್ ಗೀಳು: ಮನೆಮಂದಿಗೆಲ್ಲ ಇರಿದ ಮಗ, ಅಕ್ಕ-ತಂದೆ ಸಾವು
ಕೊಪ್ಪಳ(ಗಂಗಾವತಿ): ಮೊಬೈಲ್‌ನಲ್ಲಿ ಆನ್‌ಲೈನ್ ಗೇಮ್ ಆಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಯುವಕ ತಂದೆ-ತಾಯಿ ಹಾಗೂ ಅಕ್ಕನಿಗೆ ಚಾಕು ಇರಿದ್ದಿದ್ದು, ನಂತರ ತಾನೂ ಚಾಕುವಿನಿಂದ ಚುಚ್ಚಿಕೊಂಡ ಘಟನೆ ಗಂಗಾವತಿ ತಾಲೂಕಿನ ಅಯೋಧ್ಯಾ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಚಾಕು ಬಲವಾಗಿ ಇರಿದಿದ್ದಕ್ಕೆ ಆತನ ಸಹೋದರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಗಂಭೀರ ಗಾಯಗೊಂಡಿದ್ದ ತಂದೆಯನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾಗ ಮೃತಪಟ್ಟಿದ್ದಾರೆ. ತಾಯಿ ಹಾಗೂ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ.

ತಂದೆ ವೆಂಕಟ ನಾಯ್ಡು (45) ಹಾಗೂ ಸಹೋದರಿ ಪ್ರಗತಿ (19) ಮೃತಪಟ್ಟವರು. ತಾಯಿ ಸೌಜನ್ಯ ಹಾಗೂ ಸಾಯಿವೆಂಕಟ (ಮಣಿದೀಪ) ನಾಯ್ಡು(18) ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಹಿನ್ನೆಲೆ: ತಂದೆ ವೆಂಕಟ ನಾಯ್ಡು ಖಾಸಗಿ ಶಾಲೆಯೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದರು. ವೆಂಕಟ ನಾಯ್ಡು, ಪತ್ನಿ, ಇಬ್ಬರು ಮಕ್ಕಳು ಮತ್ತು ಅವರ ತಂದೆ-ತಾಯಿ ಸೇರಿ ಶನಿವಾರ ರಾತ್ರಿ ಒಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ಬಳಿಕ ವೆಂಕಟ ನಾಯ್ಡು ಪತ್ನಿ ಹಾಗೂ ಮಕ್ಕಳೊಂದಿಗೆ ಒಂದು ಕೊಠಡಿಯಲ್ಲಿ ಮಲಗಲು ಹೋಗಿದ್ದಾರೆ. ಹಾಗೂ ಅವರ ಪೋಷಕರು ಒಂದು ಕೊಠಡಿಯಲ್ಲಿ ಮಲಗಿದ್ದಾರೆ.

ವೆಂಕಟ ನಾಯ್ಡು ಕೊಠಡಿಯಿಂದ ಗಲಾಟೆ ಸುದ್ದಿ ಕೇಳಿದೆ. ಬಾಗಿಲು ತೆರೆಯಿರಿ ಎಂದು ವೆಂಕಟ ನಾಯ್ಡು ಕಿರಿಚಿದ್ದಾರೆ. ಆಗ ವೆಂಕಟ ನಾಯ್ಡು ಅವರ ತಂದೆ ತಾತಾರಾವ್ ರೂಂ ಬಾಗಿಲು ತೆಗೆಯಲು ಪ್ರಯತ್ನಿಸಿದಾಗ ಸಾಧ್ಯವಾಗಿಲ್ಲ. ನಂತರ ನೆರೆಯವರ ಸಹಾಯದಿಂದ ಬಾಗಿಲು ಮುರಿದ್ದಾರೆ. ಆಗ ಮಗ, ಸೊಸೆ ಹಾಗೂ ಮೊಮ್ಮಗಳು ರಕ್ತದ ಮುಡುವಿನಲ್ಲಿ ಬಿದ್ದಿದ್ದು ಕಂಡಿದ್ದಾರೆ.

ಮೊಮ್ಮಗ ಸಾಯಿವೆಂಕಟ (ಮಣಿದೀಪ) ರಾತ್ರಿ ಏಕಾಏಕಿ ಸಿಟ್ಟಿಗೆ ಬಂದು ಮಗ, ಸೊಸೆ, ಮೊಮ್ಮಗಳಿಗೆ ಚಾಕು ಹಾಕಿ, ತಾನೂ ಚಾಕು ಇರಿದುಕೊಂಡಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾತಾರಾವ್ ನೀಡಿದ ದೂರಿನ ಅನ್ವಯ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಸ್ಥಳಕ್ಕೆ ಭೇಟಿ ನೀಡಿ, ಚಾಕು ಇರಿದ ಯುವಕ ಸಾಯಿ ವೆಂಕಟ (ಮಣಿದೀಪ) ನಾಯ್ಡು ಆನ್‌ಲೈನ್ ಗೇಮ್ ವ್ಯಸನಕ್ಕೆ ಬಲಿಯಾಗಿದ್ದ. ಕುಟುಂಬದವರು ಆನ್‌ಲೈನ್ ಗೇಮ್ ಆಡಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ಕುಪಿತನಾಗಿ ತಂದೆ, ತಾಯಿ, ಅಕ್ಕನಿಗೆ ಚಾಕು ಇರಿದು ತಾನೂ ಚಾಕು ಚುಚ್ಚಿಕೊಂಡಿದ್ದಾನೆ. ಯುವಕನ ತಾತ ದೂರು ನೀಡಿದ್ದಾರೆ ಎಂದು ತಿಳಿಸಿದರು.

ವಾರದೊಳಗೆ ನೇಮಕಾತಿ ಆದೇಶ ಪತ್ರ ನೀಡದಿದ್ದರೆ ಅಮಾನತು

The post ಮೊಬೈಲ್ ಗೀಳು: ಮನೆಮಂದಿಗೆಲ್ಲ ಇರಿದ ಮಗ, ಅಕ್ಕ-ತಂದೆ ಸಾವು appeared first on Samyukta Karnataka.

ಕೃಷಿ ಹೊಂಡದಲ್ಲಿ ಬಿದ್ದು ಬಾಲಕಿಯರು ಸಾವು
ಕೊಪ್ಪಳ: ಕೃಷಿ ಹೊಂಡಕ್ಕೆ ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ಕಾಲು ಜಾರಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಲಕ್ಷ್ಮವ್ವ ಹರಣಿಶಿಕಾರಿ (15), ಮುತ್ತವ್ವ ಹರಣಿಶಿಕಾರಿ (8) ಮೃತ ಬಾಲಕಿಯರು. ಮೃತರು ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದವರು ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

NEET ವ್ಯವಸ್ಥೆಯಲ್ಲಿ ಬದಲಾವಣೆ: NTA ಹೊಸ ಭದ್ರತಾ ಕ್ರಮ ಘೋಷಣೆ

The post ಕೃಷಿ ಹೊಂಡದಲ್ಲಿ ಬಿದ್ದು ಬಾಲಕಿಯರು ಸಾವು appeared first on Samyukta Karnataka.

ಅಭಿಮಾನೋತ್ಸವವೇ ‘ರಿನಿವಲ್’ ತಂತ್ರ: ಈ ಉತ್ಸವ ಯಾವ ಪುರುಷಾರ್ಥಕ್ಕೆ ?
ಹೈಕಮಾಂಡ್ ವಿರುದ್ಧ ಯತ್ನಾಳ್‌ ಅಸಮಾಧಾನ: ಯತ್ನಾಳ್‌

ಕೊಪ್ಪಳ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಮತ್ತೊಮ್ಮೆ ಬಿಜೆಪಿ ಪಕ್ಷದ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, “ಈ ತಂದೆ-ಮಕ್ಕಳು ಇರುವವರೆಗೂ ನಾನು ಬಿಜೆಪಿ ಕಚೇರಿ ಮೆಟ್ಟಿಲು ಹತ್ತಲ್ಲ” ಎಂದು ಕಿಡಿಕಾರಿದರು.

ಕರ್ನಾಟಕ ಬಿಜೆಪಿಯ ಪ್ರಸ್ತುತ ಸ್ಥಿತಿಯನ್ನು ವ್ಯಂಗ್ಯವಾಗಿ ಟೀಕಿಸಿದ ಯತ್ನಾಳ್ :  “ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಾಗ ಇಲ್ಲಿನವರು ಪೇಡೆ ಹಂಚುತ್ತಾರೆ. ಆದರೆ ರಾಜ್ಯದಲ್ಲಿ ಏನು ಸಾಧನೆ ಮಾಡಿದ್ದಾರೆ?  ಎಂದು ಪ್ರಶ್ನಿಸಿದರು.

ಪಕ್ಷದ ನಿರಂತರ ಸೋಲು: ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷ ನಿರಂತರ ಸೋಲು ಕಾಣುತ್ತಿದೆ ಎಂದು ಆರೋಪಿಸಿದ ಅವರು, “ಒಂದು ಕಾಲದಲ್ಲಿ ರಾಜ್ಯದಲ್ಲಿ ಬಿಜೆಪಿ 25 ಸಂಸದರನ್ನು ಗೆಲ್ಲಿಸಿತ್ತು. ಈಗ ಅದು 17ಕ್ಕೆ ಇಳಿದಿದೆ. ಇದು ಅವರ ‘ಡೀಲಿಂಗ್’ ರಾಜಕಾರಣದ ಪರಿಣಾಮ,” ಎಂದು ದೂರಿದರು.

“ಅಭಿಮಾನೋತ್ಸವದ ಹಿಂದೆ ಹೈಕಮಾಂಡ್‌ಗೆ ಸಂದೇಶ” : ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮವನ್ನೂ ಯತ್ನಾಳ್ ಟೀಕಿಸಿದರು. “ಯಾವ ಪುರುಷಾರ್ಥಕ್ಕೆ ಈ ಉತ್ಸವ? ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿಬಂದವರಿಗಾ ಈ ಸಂಭ್ರಮ?” ಎಂದು ಪ್ರಶ್ನಿಸಿದರು.

“ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಅವಧಿ ನವೆಂಬರ್‌ನಲ್ಲಿ ಮುಕ್ತಾಯವಾಗಲಿದೆ. ತಮ್ಮ ಸ್ಥಾನ ಉಳಿಸಿಕೊಳ್ಳಲು, ತಾವು ದೊಡ್ಡ ಲಿಂಗಾಯತ ನಾಯಕರು ಎಂದು ಹೈಕಮಾಂಡ್‌ಗೆ ತೋರಿಸಲು ಈ ಅಭಿಮಾನೋತ್ಸವ ನಾಟಕ ನಡೆಯುತ್ತಿದೆ,” ಎಂದು ಆರೋಪಿಸಿದರು.

“ಕುಟುಂಬ ರಾಜಕಾರಣ ಹೆಚ್ಚಾಗಿದೆ” : ಯಡಿಯೂರಪ್ಪ ಕುಟುಂಬದ ರಾಜಕೀಯ ವಿಸ್ತರಣೆಯ ಬಗ್ಗೆಯೂ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದರು. “ಈಗ ಕುಟುಂಬದ ಇನ್ನೂ ಮೂವರು ರಾಜಕೀಯಕ್ಕೆ ಬರುತ್ತಿದ್ದಾರೆ. ಬಿ.ವೈ. ರಾಘವೇಂದ್ರ ಅವರ ಪುತ್ರ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಮಹಿಳಾ ಘಟಕದಲ್ಲೂ ಕುಟುಂಬದವರೇ ಸ್ಥಾನ ಪಡೆದಿದ್ದಾರೆ. ರಾಜ್ಯಕ್ಕೆ ಇವರ ಕೊಡುಗೆ ಏನು?” ಎಂದು ಪ್ರಶ್ನಿಸಿದರು.

“ಹಿಂದುತ್ವ ನಾಯಕತ್ವ ಬಂದರೆ ಮಾತ್ರ ಸಕ್ರಿಯ” : “ಹಿಂದುತ್ವದ ವಿಚಾರಧಾರೆ ಮತ್ತು ಅಭಿವೃದ್ಧಿ ರಾಜಕಾರಣ ಮಾಡುವ ನಾಯಕತ್ವ ಬಂದರೆ ಮಾತ್ರ ನಾನು ಸಕ್ರಿಯವಾಗಿ ಕೆಲಸ ಮಾಡುತ್ತೇನೆ. ಇಲ್ಲದಿದ್ದರೆ ಈ ಭ್ರಷ್ಟ ತಂದೆ-ಮಕ್ಕಳ ಜೊತೆ ಗುರುತಿಸಿಕೊಳ್ಳುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ಡಿ.ಕೆ. ಶಿವಕುಮಾರ್ ವಿರುದ್ಧವೂ ಟೀಕೆ : ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧವೂ ಯತ್ನಾಳ್ ವಾಗ್ದಾಳಿ ನಡೆಸಿದರು. “ಡಿ.ಕೆ. ಶಿವಕುಮಾರ್ ಅವರಂತಹ ಅಯೋಗ್ಯ ಮತ್ತು ರಾಕ್ಷಸ ರಾಜಕಾರಣಿ ಇನ್ನೊಬ್ಬರಿಲ್ಲ. ಅವರಿಗಿಂತ ಸಿದ್ದರಾಮಯ್ಯ ಉತ್ತಮ,” ಎಂದು ಹೇಳಿದರು.

ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನ : ಕರ್ನಾಟಕದ ಜನರ ಭಾವನೆಗಳನ್ನು ಬಿಜೆಪಿ ಹೈಕಮಾಂಡ್ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ ಯತ್ನಾಳ್, “ಯಡಿಯೂರಪ್ಪ-ವಿಜಯೇಂದ್ರ ನಾಯಕತ್ವ ಮುಂದುವರಿದರೆ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಮಣ್ಣು ಮುಕ್ಕುತ್ತದೆ. ಹೊಸ ನಾಯಕತ್ವಕ್ಕೆ ಅವಕಾಶ ನೀಡಿದರೆ ಮಾತ್ರ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ,” ಎಂದು ಎಚ್ಚರಿಸಿದರು.

ಬಿಜೆಪಿಯೊಳಗಿನ ಆಂತರಿಕ ಅಸಮಾಧಾನ ಮತ್ತೆ ಬಹಿರಂಗವಾಗಿರುವ ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.

The post ಅಭಿಮಾನೋತ್ಸವವೇ ‘ರಿನಿವಲ್’ ತಂತ್ರ: ಈ ಉತ್ಸವ ಯಾವ ಪುರುಷಾರ್ಥಕ್ಕೆ ? appeared first on Samyukta Karnataka.

ಅಂಜನಾದ್ರಿ ದೇವಸ್ಥಾನಕ್ಕೆ ₹2.50 ಕೋಟಿ ಮೌಲ್ಯದ ಬಂಗಾರ ದೇಣಿಗೆ
ಕೊಪ್ಪಳ: ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭಕ್ತರಿಂದ ಮತ್ತೊಂದು ಭವ್ಯ ದೇಣಿಗೆ ಹರಿದುಬಂದಿದೆ. ಬಂಗಾರದ ಬೆಲೆ ಗಗನಕ್ಕೇರಿರುವ ಈ ಸಮಯದಲ್ಲೇ, ಹೈದರಾಬಾದ್ ಮೂಲದ ಉದ್ಯಮಿ ಹಾಗೂ ಎಎಂಆರ್ ಗ್ರೂಪ್ ಅಧ್ಯಕ್ಷ ಮಹೇಶ ರೆಡ್ಡಿ ಅವರು ದೇವಸ್ಥಾನಕ್ಕೆ ಸುಮಾರು ₹2.50 ಕೋಟಿ ಮೌಲ್ಯದ ಬಂಗಾರದ ಆಭರಣಗಳನ್ನು ಅರ್ಪಿಸಿದ್ದಾರೆ.

ಈ ವಿಶೇಷ ದೇಣಿಗೆಯಲ್ಲಿ ಬಂಗಾರದ ಕಿರೀಟ, ಪ್ರಭಾವಳಿ ಹಾಗೂ ಗದೆ ಸೇರಿದ್ದು, ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನಕ್ಕೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಅರುಣಾ ಲಕ್ಷ್ಮೀ ಕೂಡ ಭಾಗವಹಿಸಿ ದೇವರ ದರ್ಶನ ಪಡೆದರು.

ದೇವಸ್ಥಾನವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ದೇಣಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಂಜನಾದ್ರಿ ಕ್ಷೇತ್ರವನ್ನು ದೇಶದ ಪ್ರಮುಖ ಧಾರ್ಮಿಕ ತಾಣವನ್ನಾಗಿ ರೂಪಿಸುವ ಸಂಕಲ್ಪದ ಭಾಗವಾಗಿ ಈ ಕೊಡುಗೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಅಂಜನಾದ್ರಿ ಬೆಟ್ಟವು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿದ್ದು, ರಾಮಾಯಣದ ಉಲ್ಲೇಖಗಳ ಪ್ರಕಾರ ಇದೇ ಹನುಮಂತನ ಜನ್ಮಸ್ಥಳವೆಂದು ನಂಬಲಾಗಿದೆ. ತುಂಗಭದ್ರಾ ನದಿ ತೀರದಲ್ಲಿರುವ ಈ ಪವಿತ್ರ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ವಿಶೇಷವಾಗಿ ಹನುಮ ಜಯಂತಿ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಉದ್ಯಮಿ ಮಹೇಶ್ ರೆಡ್ಡಿ ಅವರು ಧಾರ್ಮಿಕ ಕ್ಷೇತ್ರಗಳಿಗೆ ದೇಣಿಗೆ ನೀಡುವ ಮೂಲಕ ಈಗಾಗಲೇ ಪ್ರಸಿದ್ಧರಾಗಿದ್ದಾರೆ. ಈ ಹಿಂದೆ ಅವರು ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೆ ಸುಮಾರು 140 ಕೆಜಿ ಚಿನ್ನ ದೇಣಿಗೆ ನೀಡಿದ್ದರು. ಇದೀಗ ಮೊದಲ ಬಾರಿಗೆ ಅಂಜನಾದ್ರಿ ಕ್ಷೇತ್ರಕ್ಕೂ ಭಾರೀ ಕೊಡುಗೆ ನೀಡಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ.

ಸ್ಥಳೀಯ ಭಕ್ತರು ಮತ್ತು ದೇವಸ್ಥಾನ ಆಡಳಿತ ಮಂಡಳಿ ಈ ದೇಣಿಗೆಯನ್ನು ಐತಿಹಾಸಿಕವೆಂದು ಬಣ್ಣಿಸಿದ್ದು, ದೇವಸ್ಥಾನದ ಅಭಿವೃದ್ಧಿಗೆ ಇದು ದೊಡ್ಡ ಉತ್ತೇಜನವಾಗಲಿದೆ ಎಂದು ಹೇಳಿದ್ದಾರೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಕೂಡ ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದ ಮೂಲಕ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಅಂಜನಾದ್ರಿ ಬೆಟ್ಟ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರವಾಗಿ ವೇಗವಾಗಿ ಬೆಳೆಯುತ್ತಿದ್ದು, ದೇಶದ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ದೇವಸ್ಥಾನ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಕಿಂಗ್‌ vs ರಾಕಿಂಗ್‌ : ವರ್ಷಾಂತ್ಯಕ್ಕೆ ಟಾಕ್ಸಿಕ್‌ ಕಿಕ್‌…?

The post ಅಂಜನಾದ್ರಿ ದೇವಸ್ಥಾನಕ್ಕೆ ₹2.50 ಕೋಟಿ ಮೌಲ್ಯದ ಬಂಗಾರ ದೇಣಿಗೆ appeared first on Samyukta Karnataka.

ಸಿದ್ದರಾಮಯ್ಯ ಬಿಟ್ಟರೇ, ಖರ್ಗೆ ಮುಖ್ಯಮಂತ್ರಿ
ಕೊಪ್ಪಳ: ರಾಜ್ಯದ ಸಿಎಂ ಸ್ಥಾನ ಬದಲಾವಣೆಯ ಚರ್ಚೆಯ ಗೊಂದಲ ನಿಲ್ಲಬೇಕು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರೇ ಮುಂದುವರೆಯಬೇಕು. ಇಲ್ಲವಾದರೆ ನೀವೇ ಸಿಎಂ ಆಗಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಹೇಳಿದ್ದೇನೆ ಎಂದು ಸಿಎಂ ಆರ್ಥಿಕ ಸಲಹೆಗಾರ, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆಯವರು 50 ವರ್ಷದಿಂದ ರಾಜ್ಯವನ್ನು ಅಭಿವೃದ್ಧಿ ಮಾಡಿದ ಚಿಂತಕರು. ಹಾಗಾಗಿ ನೀವೇ ಸಿಎಂ ಆಗುವಂತೆ ಹೇಳಿದ್ದೇನೆ. ಆಗ ಖರ್ಗೆಯವರು ನಾನು 2008ರಲ್ಲಿಯೇ ಮುಖ್ಯಮಂತ್ರಿ ಆಗಬೇಕಿತ್ತು. ಧರ್ಮಸಿಂಗ್, ಆರ್.ವಿ. ದೇಶಪಾಂಡೆ ಸೇರಿ ಹಿರಿಯರೆಲ್ಲರೂ ಸೋತರು. ಹಾಗಾಗಿ ಕಡಿಮೆ ಸೀಟು ಬಂದವು. ಇದರಿಂದ ಸಿಎಂ ಆಗಲಿಲ್ಲವೆಂದು ತಿಳಿಸಿದರು ಎಂದರು.

25 ಮಂತ್ರಿಗಳನ್ನು ತೆಗೆದು ಬೇರೆಯವರನ್ನು ಮಾಡಿ ಎಂದಿದ್ದೇನೆ. ಹಿರಿಯರು ಮತ್ತು ಹೊಸಬರನ್ನು ಮಾಡಿ ಎಂದಿದ್ದೇವೆ. ಮುಖ್ಯಮಂತ್ರಿ ಸ್ಥಾನದಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ ಎಂದುಕೊಂಡಿದ್ದೇನೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರೆ ಮುಂದೆ ನೋಡೋಣ ಎಂದರು.

ಇವರೆಗೂ ದಲಿತರು ಸಿಎಂ ಆಗಿಲ್ಲ ಮುಂದೆ ಆದರೆ ತಪ್ಪಲ್ಲ. ಖರ್ಗೆಯವರು ಪ್ರಧಾನಿ ಆಗಬಹುದಿತ್ತು. ಬಿಜೆಪಿಯವರು 400 ಬರುತ್ತವೆ ಎನ್ನುತ್ತಿದ್ದರು. ಆದರೆ, 240ಕ್ಕೆ ನಿಂತರು. ಸ್ವಲ್ಪ ವ್ಯಾತ್ಯಾಸವಾಗಿದ್ದರೂ, ಮೋದಿ ಪ್ರಧಾನಿ ಆಗುತ್ತಿರಲಿಲ್ಲ. ನನಗೂ ಪ್ರಧಾನಿ ಆಗಬೇಕು ಎಂಬ ಆಸೆ ಇದೆ ಎಂದು ಹೇಳಿದರು.

ರಾಜಕಾರಣಿಗಳು ಸ್ವಾರ್ಥ ಬಿಟ್ಟರೆ ರಾಜ್ಯಕ್ಕೆ ಒಳ್ಳೆಯದು

The post ಸಿದ್ದರಾಮಯ್ಯ ಬಿಟ್ಟರೇ, ಖರ್ಗೆ ಮುಖ್ಯಮಂತ್ರಿ appeared first on Samyukta Karnataka.

ರಾಜಕಾರಣಿಗಳು ಸ್ವಾರ್ಥ ಬಿಟ್ಟರೆ ರಾಜ್ಯಕ್ಕೆ ಒಳ್ಳೆಯದು
ಕೊಪ್ಪಳ: ರಾಜಕಾರಣಿಗಳು ಸಾರ್ವಜನಿಕರ ಬದುಕಿಗೆ ಸ್ಪಂದಿಸುವುದು ಕಡಿಮೆ ಆಗಿದೆ. ಸ್ವಾರ್ಥ ಹೆಚ್ಚಾಗಿದೆ. ಎಲ್ಲಿಯವರೆಗೂ ಸ್ವಾರ್ಥ ಕಡಿಮೆ ಆಗುವುದಿಲ್ಲವೋ, ಅಲ್ಲಿಯವರೆಗೂ ರಾಜ್ಯದ ಜನತೆಗೆ ಒಳ್ಳೆಯದಾಗಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತಮವಾದ ವಿಷಯಗಳ ಚರ್ಚೆ ಮಾಡುವುದನ್ನು ಬಿಟ್ಟು, ಹನಿಟ್ರ‍್ಯಾಪ್ ಸೇರಿ ವಿವಿಧ ವಿಷಯ ಚರ್ಚೆ ಮಾಡುತ್ತಾರೆ. ಎಲ್ಲ ಪಕ್ಷದ, ವಿರೋಧ ಪಕ್ಷದ ನಾಯಕರು, ಸಭಾ ನಾಯಕರು, ಮುಖ್ಯಸಚೇತಕರನ್ನು ಕರೆದು, ವಿಷಯ ಬಿಟ್ಟು ಬೇರೆ ಮಾತನಾಡಿದರೆ ಸದನದಿಂದ ನಿರ್ದಾಕ್ಷಿಣ್ಯವಾಗಿ ಹೊರ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದೇನೆ. ಕಳೆದ ಅಧಿವೇಶನ ಚೆನ್ನಾಗಿ ನಡೆಸಿದ್ದು, ಈ ಬಾರಿ ಸದನದಲ್ಲಿ 23 ಜನ ಬಜೆಟ್ ಮತ್ತು 23 ಜನ ಮಸೂದೆ ಮೇಲೆ ಮಾತನಾಡಿದರು.

ಶಾಸಕರಿಗೆ ಎಷ್ಟೇ ತರಬೇತಿ ನೀಡಿದರೂ ನಾಯಿಯ ಬಾಲ ಡೊಂಕೆ. ಈಗಾಗಲೇ ಎರಡು ದಿನ ತರಬೇತಿ ನೀಡಿದ್ದೇನೆ. ಇಡೀ ಭಾರತದಲ್ಲಿ ಕರ್ನಾಟಕದ್ದು ಶ್ರೇಷ್ಠವಾದ ವಿಧಾನ ಪರಿಷತ್ತು. ಅದರ ಘನತೆ, ಗೌರವ ಹೆಚ್ಚಿಸಲು ಪ್ರಯತ್ನ ಮಾಡುತ್ತೇವೆ ಎಂದರು.

ಡಿಕೆಶಿ, ಖಂಡ್ರೆ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್

The post ರಾಜಕಾರಣಿಗಳು ಸ್ವಾರ್ಥ ಬಿಟ್ಟರೆ ರಾಜ್ಯಕ್ಕೆ ಒಳ್ಳೆಯದು appeared first on Samyukta Karnataka.

ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ
ಕೊಪ್ಪಳ: ರಾಜ್ಯದ ನಡೆದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿಯೂ ಬಿಜೆಪಿ ಬಹುಮತ ಪಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ ಬರುವ ಉಪ ಚುನಾವಣೆ ಫಲಿತಾಂಶದಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. ನಾವು ಮಾಡಿರುವ ಸಾಧನೆಗಳು ಮತ್ತು ಚುನಾವಣೆಯಲ್ಲಿ ಸಂಘಟಿತವಾದ ಪ್ರಚಾರದ ಪರಿಣಾಮ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಗಳಿಸುವ ವಿಶ್ವಾಸ ಇದೆ. ಅಲ್ಲದೇ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ನಲ್ಲಿ ಕೂಡಾ ಬಿಜೆಪಿ ಗೆಲ್ಲುತ್ತದೆ ಎಂದು ಎಲ್ಲ ಸಮೀಕ್ಷೆ ಹೇಳಿದೆ. ಈ ಭಾರಿ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪರಿವರ್ತನೆಯಾಗುತ್ತದೆ. ಭಾರತದ ರಾಜಕೀಯ ದಿಕ್ಸೂಚಿ ಬದಲಾವಣೆಯಾಗುವ ಫಲಿತಾಂಶ ಬರುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ಮುಖಭಂಗ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮರು ಮತ ಎಣಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ರಾಜ್ಯವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿ ಪ್ರಾಚೀನ ಕಾಲಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ತಂತ್ರಜ್ಞಾನ ಬಹಳಷ್ಟು ಮುಂದೆ ಹೋಗಿದೆ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಕೂಡಾ ಹಲವು ಚುನಾವಣೆಗಳಾಗಿವೆ. ಕಾಂಗ್ರೆಸ್ ಪಕ್ಷ ಸೋಲುತ್ತಿರುವುದರಿಂದ ಬ್ಯಾಲೆಟ್ ಪೇಪರ್ ಕಡೆಗೆ ಹೋಗುತ್ತಿದೆ. ಆದರೆ, ಬ್ಯಾಲೆಟ್ ಪೇಪರ್‌ನಲ್ಲಿ ಮೋಸ ಮಾಡಿ ಗೆದ್ದು ಈಗ ಸೋತಿರುವುದು ಕಾಂಗ್ರೆಸ್‌ಗೆ ಮುಖಭಂಗ ಆಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಆಡಳಿತ ಹಳಿ ತಪ್ಪಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತೋಗಿದೆ, ರಾಜ್ಯದಲ್ಲಿ ಆಡಳಿತ ಸ್ಥಗಿತವಾಗಿದೆ ಎಂದರು.

ಹುಬ್ಬಳ್ಳಿ-ಧಾರವಾಡ ಪೊಲೀಸರ ವಿರುದ್ಧ ಸ್ವಪಕ್ಷದ ಸರ್ಕಾರದ ಮೇಲೆಯೇ ಸಿಡಿದೆದ್ದ ಕಾಂಗ್ರೆಸ್ ಶಾಸಕ!

The post ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ appeared first on Samyukta Karnataka.

ಕೊಪ್ಪಳ: ಸಮಾಜಕ್ಕೆ ಪಾಠ ಹೇಳಬೇಕಾದ ಗುರುವಿನ ಅಸಲಿ ಬಣ್ಣ; ಅತ್ತೆ ಮಗಳಿಗೆ ದ್ರೋಹ, ಬೇರೊಬ್ಬಳ ಜೊತೆ ಮದುವೆ!
ಕೊಪ್ಪಳ: ಸಮಾಜವನ್ನು ತಿದ್ದಿ ತೀಡಬೇಕಾದ, ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕಾದ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಆದರೆ, ಇಲ್ಲೊಬ್ಬ ಕಾಮಪಿಶಾಚಿ ಶಿಕ್ಷಕ ತನ್ನ ಸ್ವಂತ ಅತ್ತೆ ಮಗಳನ್ನೇ ನಂಬಿಸಿ, ಐದು ವರ್ಷಗಳ ಕಾಲ ದೈಹಿಕವಾಗಿ ಬಳಸಿಕೊಂಡು, ಕೊನೆಗೆ ನಡುನೀರಲ್ಲಿ ಕೈಬಿಟ್ಟಿರುವ ಅಮಾನುಷ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿದೆ. ‘ಗುರುವೇ ದೇವ’ ಎಂಬ ಮಾತಿಗೆ ಕಳಂಕ ತಂದಿರುವ ಈ ಸರ್ಕಾರಿ ಶಿಕ್ಷಕನ ನೈತಿಕ ಅಧಃಪತನ ಸಮಾಜವನ್ನೇ ಬೆಚ್ಚಿಬೀಳಿಸಿದೆ.

ನಂಬಿಸಿ ಕತ್ತು ಕುಯ್ದ ಕಾಮಪಿಶಾಚಿ: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕನ್ನೇರಮಡು ಗ್ರಾಮದ ಸರ್ಕಾರಿ ಶಿಕ್ಷಕ ಬಸವರಾಜ ಹರಿಜನ್ ಎಂಬಾತನೇ ಈ ವಂಚಕ. ಹುಲಸನಟ್ಟಿ ಮೂಲದ ಕರೆಮ್ಮಾ ಎಂಬ ಯುವತಿ ಕೊಪ್ಪಳದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾಗಿನಿಂದಲೂ, ಆಕೆಯೊಂದಿಗೆ ಬಸವರಾಜನ ಸಂಪರ್ಕವಿತ್ತು. ಸ್ವಂತ ಅತ್ತೆಯ ಮಗ, ಮೇಲಾಗಿ ಸರ್ಕಾರಿ ಶಿಕ್ಷಕ ಎಂಬ ಕಾರಣಕ್ಕೆ ಕರೆಮ್ಮಾ ಆತನನ್ನು ಕುರುಡಾಗಿ ನಂಬಿದ್ದಳು. “ನನಗೆ ಸರ್ಕಾರಿ ನೌಕರಿ ಕಾಯಂ ಆದ ತಕ್ಷಣ ನಿನ್ನನ್ನೇ ಮದುವೆಯಾಗುತ್ತೇನೆ” ಎಂದು ನಂಬಿಸಿದ ಬಸವರಾಜ, ಸತತ ಐದು ವರ್ಷಗಳ ಕಾಲ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ.

ನಿಶ್ಚಿತಾರ್ಥದ ನಂತರ ಬದಲಾದ ರಾಗ: ಯುವತಿಯ ಮನೆಯವರು ಮದುವೆಗೆ ಒತ್ತಾಯಿಸಿದಾಗ, ಎರಡೂ ಕುಟುಂಬಗಳ ಹಿರಿಯರ ಸಮ್ಮುಖದಲ್ಲಿಯೇ ಕನ್ನೇರಮಡುವಿನಲ್ಲಿ ಅದ್ದೂರಿಯಾಗಿ ಇಬ್ಬರ ನಿಶ್ಚಿತಾರ್ಥ ಕೂಡ ನಡೆದಿತ್ತು. ಆದರೆ, ಸರ್ಕಾರಿ ಶಿಕ್ಷಕನ ಹುದ್ದೆ ಖಾಯಂ ಆಗುತ್ತಿದ್ದಂತೆ ಬಸವರಾಜನ ಅಸಲಿ ಬಣ್ಣ ಬಯಲಾಗತೊಡಗಿತು. ಪ್ರೀತಿಸಿ, ನಿಶ್ಚಿತಾರ್ಥ ಮಾಡಿಕೊಂಡಿದ್ದ ಅತ್ತೆ ಮಗಳನ್ನು ದಿಢೀರನೆ ಕಡೆಗಣಿಸಲು ಆರಂಭಿಸಿದ ಆತ, ಗುಟ್ಟಾಗಿ ರತ್ನವ್ವ ಎಂಬ ಬೇರೊಬ್ಬ ಯುವತಿಯ ಕೊರಳಿಗೆ ತಾಳಿ ಕಟ್ಟಿದ್ದಾನೆ.

ಬಸವರಾಜನ ವಿಕೃತಿ ಕೇವಲ ಬೇರೊಂದು ಮದುವೆಯಾಗುವುದಕ್ಕಷ್ಟೇ ಸೀಮಿತವಾಗಲಿಲ್ಲ. ತಾನು ರತ್ನವ್ವಳೊಂದಿಗೆ ಮಾಡಿಕೊಂಡ ವಿವಾಹದ ‘ಮ್ಯಾರೇಜ್ ರಿಜಿಸ್ಟ್ರೇಷನ್’ (Marriage Registration) ಪತ್ರವನ್ನು ಉದ್ದೇಶಪೂರ್ವಕವಾಗಿ ಸಂತ್ರಸ್ತ ಕರೆಮ್ಮಾಳ ಮನೆಗೆ ಪಾರ್ಸೆಲ್ ಮೂಲಕ ಕಳುಹಿಸಿದ್ದಾನೆ. ಇದರಿಂದ ತೀವ್ರ ಆಘಾತಕ್ಕೊಳಗಾದ ಯುವತಿ ಮತ್ತು ಆಕೆಯ ಕುಟುಂಬ ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಐದು ವರ್ಷಗಳ ಕಾಲ ಪ್ರೀತಿಯ ನಾಟಕವಾಡಿ, ದೈಹಿಕವಾಗಿ ಬಳಸಿಕೊಂಡು, ನಿಶ್ಚಿತಾರ್ಥದ ನಂತರ ಬೇರೊಂದು ಮದುವೆಯಾಗಿರುವ ಈ ಶಿಕ್ಷಕನ ವಿರುದ್ಧ ಪೊಲೀಸರು ವಂಚನೆ ಹಾಗೂ ಅತ್ಯಾಚಾರದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

The post ಕೊಪ್ಪಳ: ಸಮಾಜಕ್ಕೆ ಪಾಠ ಹೇಳಬೇಕಾದ ಗುರುವಿನ ಅಸಲಿ ಬಣ್ಣ; ಅತ್ತೆ ಮಗಳಿಗೆ ದ್ರೋಹ, ಬೇರೊಬ್ಬಳ ಜೊತೆ ಮದುವೆ! appeared first on Samyukta Karnataka.

ಸುತ್ತಿಗೆಯಿಂದ ಹೊಡೆದು ಪತ್ನಿ ಕೊಲೆ: ಪತಿ-ಅತ್ತೆ ಬಂಧನ
ಕೊಪ್ಪಳ(ಕುಕನೂರು): ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಪತಿ ಹಾಗೂ ಆತನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಾನ್ವಿಕಾ ಕೊಲೆಯಾದ ಮಹಿಳೆ. ಇತ್ತೀಚೆಗೆ ಈ ಘಟನೆ ನಡೆದಿದ್ದು, ಪತಿ ಅವಿನಾಶ್ ಹಾಗೂ ಆತನ ತಾಯಿ ಚೆನ್ನಮ್ಮ ಅವರನ್ನು ಬಂಧಿಸಲಾಗಿದೆ.

ಘಟನೆ ಹಿನ್ನೆಲೆ: ಕೊಲೆಯಾದ ಮಾನ್ವಿಕಾ ಮೂಲತಃ ದೆಹಲಿ ನಿವಾಸಿ. ಆರೋಪಿ ಅವಿನಾಶ್ ನಾಲ್ಕೈದು ವರ್ಷದ ಹಿಂದೆ ಇಂಗ್ಲಿಷ್ ಕಲಿಯಲು ತುಮಕೂರಿಗೆ ಹೋಗಿದ್ದ. ಅಲ್ಲಿ ಮಾನ್ವಿಕಾಳನ್ನು ಪ್ರೀತಿಸಿ, ಮದುವೆಯಾಗಿ ಕುಕನೂರು ತಾಲೂಕಿನ ಸೋಂಪುರ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದ. ಪತ್ನಿ ಫೋನ್‌ನಲ್ಲಿ ಮಾತನಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಬ್ಬರ ಮಧ್ಯ ಗಲಾಟೆಯಾಗಿದೆ. ಅದು ವಿಕೋಪಕ್ಕೆ ತಿರುಗಿ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಗೆ ಅವಿನಾಶ್ ತಾಯಿ ಚೆನ್ನಮ್ಮ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪಿಯು ಪರೀಕ್ಷೆಯಲ್ಲಿ ತಾಯಿ-ಮಗಳು ಪಾಸ್

The post ಸುತ್ತಿಗೆಯಿಂದ ಹೊಡೆದು ಪತ್ನಿ ಕೊಲೆ: ಪತಿ-ಅತ್ತೆ ಬಂಧನ appeared first on Samyukta Karnataka.