Kannadaactress Archives - Samyukta Karnataka

“ಇದು ನನ್ನ ಹೃದಯದ ಮಿಡಿತ”: ‘ಟಾಪ್ ನಾಚ್ ಸುಂದರಿ’ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ನಟ ಯಶವಂತ್
ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸುತ್ತಿರುವ ನಟ ಯಶವಂತ್ ಅಭಿನಯದ ‘ಟಾಪ್ ನಾಚ್ ಸುಂದರಿ’ ಆಲ್ಬಂ ಹಾಡಿನ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಯಿತು. ಈ ಮೂಲಕ ಯಶವಂತ್ ಬಹುಕಾಲದ ಕನಸೊಂದು ನನಸಾಗುವತ್ತ ಮೊದಲ ಹೆಜ್ಜೆ ಇಟ್ಟಿದೆ ಎನ್ನಲಾಗುತ್ತಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಅಧ್ಯಕ್ಷರಾದ ಡಾ. ಜಯಮಾಲಾ ಹಾಗೂ ಹಿರಿಯ ನಟ ಸುಂದರ್ ರಾಜ್ ಈ ಹಾಡಿನ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಯಮಾಲಾ, ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಇಂತಹ ಪ್ರಯತ್ನಗಳು ಕನ್ನಡ ಕಲಾ ಲೋಕಕ್ಕೆ ಅಗತ್ಯ ಎಂದು ತಂಡಕ್ಕೆ ಶುಭ ಹಾರೈಸಿದರು.

ತಮ್ಮ ಚೊಚ್ಚಲ ದೊಡ್ಡ ಪ್ರಯತ್ನದ ಬಗ್ಗೆ ಮಾತನಾಡಿದ ಯಶವಂತ್, “ಇದು ಕೇವಲ ಒಂದು ಹಾಡಲ್ಲ, ನನ್ನ ವರ್ಷಗಳ ಪರಿಶ್ರಮದ ಫಲ ಮತ್ತು ನನ್ನ ಹೃದಯದ ಮಿಡಿತ. ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಬೇಕೆಂಬ ಹಂಬಲದಿಂದ ಹಲವು ವರ್ಷಗಳ ಕಾಲ ಶ್ರಮ ಹಾಕಿದ್ದೇನೆ. ಇಂದು ಹಿರಿಯರ ಸಮ್ಮುಖದಲ್ಲಿ ಫಸ್ಟ್ ಲುಕ್ ಬಿಡುಗಡೆಯಾಗಿರುವುದು ಅತೀವ ಸಂತಸ ತಂದಿದೆ. ಈ ಪ್ರಯಾಣದಲ್ಲಿ ನನಗೆ ಬೆನ್ನೆಲುಬಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಚಿರಋಣಿ,” ಎಂದು ಭಾವುಕರಾಗಿ ನುಡಿದರು.

‘ಯಶ್ ಮ್ಯೂಸಿಕ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಹಾಡಿಗೆ ಸುದರ್ಶನ್ ಆಕ್ಷನ್ ಕಟ್ ಹೇಳಿದ್ದಾರೆ. ನಟ ಯಶವಂತ್‌ಗೆ ಜೋಡಿಯಾಗಿ ಪ್ರಕೃತಿ ರಾಜೇಂದ್ರ ಹೆಜ್ಜೆ ಹಾಕಿದ್ದಾರೆ. ತಾಂತ್ರಿಕವಾಗಿ ಈ ಹಾಡು ಸಾಕಷ್ಟು ಶ್ರೀಮಂತವಾಗಿದ್ದು, ವಿನೀತ್ ಸಂಗೀತ ಸಂಯೋಜನೆ ಹಾಗೂ ದಿನೇಶ್ ಲಕ್ಕಿ ಸಾಹಿತ್ಯ ಹಾಡಿನ ಮೆರುಗನ್ನು ಹೆಚ್ಚಿಸಿದೆ.

ವಿಶೇಷವೆಂದರೆ ಖ್ಯಾತ ನೃತ್ಯ ನಿರ್ದೇಶಕ ರಾಮ್ ಚರಣ್ ನೃತ್ಯ ನಿರ್ದೇಶನ ಹಾಗೂ ಸುಹಾಸ್ ಅಮೀನ್ ಛಾಯಾಗ್ರಹಣ ಈ ಆಲ್ಬಂಗೆ ದೃಶ್ಯ ವೈಭವವನ್ನು ನೀಡಿದೆ. ಸದ್ಯ ಫಸ್ಟ್ ಲುಕ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ‘ಟಾಪ್ ನಾಚ್ ಸುಂದರಿ’ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಸಂಗೀತ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

The post “ಇದು ನನ್ನ ಹೃದಯದ ಮಿಡಿತ”: ‘ಟಾಪ್ ನಾಚ್ ಸುಂದರಿ’ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ನಟ ಯಶವಂತ್ appeared first on Samyukta Karnataka.

ಬಣ್ಣದ ಲೋಕದಲ್ಲೂ ಮಿಂಚಿ, ಓದಿನಲ್ಲೂ ‘ಶತಕ’ ಬಾರಿಸಿದ ನಟಿ ಅಂಕಿತಾ; ಪಿಯು ಫಲಿತಾಂಶದಲ್ಲಿ ಭರ್ಜರಿ ಸಾಧನೆ!
ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ರಾಜ್ಯದ ಸಾವಿರಾರು ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಈ ಸಂಭ್ರಮದ ನಡುವೆ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಅಂಕಿತಾ ಜಯರಾಮ್ ಕೂಡ ಒಬ್ಬರು.

ಶೂಟಿಂಗ್‌ ಮತ್ತು ಬಣ್ಣದ ಲೋಕದ ಕೆಲಸಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಓದಿನ ಕಡೆಗೆ ಅಷ್ಟೇ ಗಮನ ನೀಡಿದ್ದ ಅಂಕಿತಾ ಈಗ 97% ಅಂಕಗಳನ್ನು ಪಡೆಯುವ ಮೂಲಕ ಅಪ್ಪ-ಅಮ್ಮ ಮೆಚ್ಚುವಂತಹ ಮಗಳಾಗಿದ್ದಾರೆ.

ಸಂಖ್ಯಾಶಾಸ್ತ್ರದಲ್ಲಿ ‘ಪರ್ಫೆಕ್ಟ್ 100′: ಬೆಂಗಳೂರಿನ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ವಾಣಿಜ್ಯ (Commerce) ವಿಭಾಗದಲ್ಲಿ ವ್ಯಾಸಂಗ ಮಾಡಿದ್ದ ಅಂಕಿತಾ, ಒಟ್ಟು 600 ಅಂಕಗಳಿಗೆ 579 ಅಂಕಗಳನ್ನು ಗಳಿಸಿದ್ದಾರೆ. ವಿಶೇಷವೆಂದರೆ ಸಂಖ್ಯಾಶಾಸ್ತ್ರದಲ್ಲಿ 100ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಉಳಿದಂತೆ ವ್ಯವಹಾರ ಅಧ್ಯಯನದಲ್ಲಿ 98, ಕನ್ನಡದಲ್ಲಿ 97 ಹಾಗೂ ಅಕೌಂಟೆನ್ಸಿಯಲ್ಲಿ 96 ಅಂಕಗಳನ್ನು ಪಡೆದು ‘ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆಯಾಗಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲೂ 95% ಅಂಕ ಗಳಿಸಿದ್ದರು ಎಂಬುದು ಗಮನಾರ್ಹ.

ಬಾಲನಟಿಯಿಂದ ನಾಯಕಿಯವರೆಗೆ: ಅಂಕಿತಾ ಜಯರಾಮ್ ಕನ್ನಡಿಗರಿಗೆ ಚಿರಪರಿಚಿತ ಮುಖ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ನಟಿ ಪುನೀತ್ ರಾಜ್‌ಕುಮಾರ್, ದರ್ಶನ್, ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರಂತಹ ದಿಗ್ಗಜ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸದ್ಯ ‘ಕರ್ಣ’ ಧಾರಾವಾಹಿಯಲ್ಲಿ ‘ರಿಯಾ’ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಅಷ್ಟೇ ಅಲ್ಲದೆ, ‘ಕಾಗದ’ ಚಿತ್ರದ ಮೂಲಕ ನಾಯಕಿಯಾಗಿಯೂ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ್ದಾರೆ.

ತಂದೆಗೆ ಕೊಟ್ಟ ವಿಶೇಷ ಗಿಫ್ಟ್: ಈ ಅದ್ಭುತ ಗೆಲುವನ್ನು ಅಂಕಿತಾ ತಮ್ಮ ತಂದೆಯ ಹುಟ್ಟುಹಬ್ಬದ ಉಡುಗೊರೆ ಎಂದು ಕರೆದಿದ್ದಾರೆ. “ಕಂಡ ಕನಸು ನನಸಾದ ಸುದಿನ. ರಾಯರ ಕೃಪೆ ಮತ್ತು ನಿಮ್ಮೆಲ್ಲರ ಹಾರೈಕೆಯಿಂದ ಈ ಸಾಧನೆ ಸಾಧ್ಯವಾಗಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಟನೆ ಮತ್ತು ಶಿಕ್ಷಣ ಎರಡನ್ನೂ ಸಮತೋಲನದಿಂದ ನಿಭಾಯಿಸಿದ ಅಂಕಿತಾ ಈ ಹಾದಿ ಅನೇಕ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದೆ.

The post ಬಣ್ಣದ ಲೋಕದಲ್ಲೂ ಮಿಂಚಿ, ಓದಿನಲ್ಲೂ ‘ಶತಕ’ ಬಾರಿಸಿದ ನಟಿ ಅಂಕಿತಾ; ಪಿಯು ಫಲಿತಾಂಶದಲ್ಲಿ ಭರ್ಜರಿ ಸಾಧನೆ! appeared first on Samyukta Karnataka.

ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಹುಟ್ಟಿದ ಡಾಲಿ ಹೊಸ ಸಿನಿಮಾ ‘ಮದರ್ ಪ್ರಾಮಿಸ್’!
ನಟ ರಾಕ್ಷಸ ಡಾಲಿ ಧನಂಜಯ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಅವರ ಮುಂಬರುವ ಹೊಸ ಸಿನಿಮಾದ ಟೈಟಲ್ ‘ಮದರ್ ಪ್ರಾಮಿಸ್’ ಎಂದು ಘೋಷಣೆಯಾಗಿದ್ದು, ಇದರ ಹಿಂದಿರುವ ಇಂಟರೆಸ್ಟಿಂಗ್ ಕಥೆಯನ್ನು ಸ್ವತಃ ಡಾಲಿ ಬಿಚ್ಚಿಟ್ಟಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಈ ಚಿತ್ರದ ಕಥೆಗೂ ನಮ್ಮ ಹೆಮ್ಮೆಯ ಆರ್‌ಸಿಬಿ (RCB) ತಂಡಕ್ಕೂ ಬಿಡಿಸಲಾಗದ ನಂಟಿದೆ!

ಹೌದು, 2025ರಲ್ಲಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿದ ಆ ಸಂಭ್ರಮದ ರಾತ್ರಿಯೇ ಈ ಸಿನಿಮಾದ ಎಳೆಯೊಂದು ಹುಟ್ಟಿತಂತೆ. ಆ ಕ್ಷಣದ ಅತೀವ ಖುಷಿ, ಕಣ್ಣೀರು ಹಾಗೂ ಹೈವೋಲ್ಟೇಜ್ ಎಮೋಷನ್‌ಗಳು ಧನಂಜಯ್ ಅವರ ಈ ಹೊಸ ಚಿತ್ರಕ್ಕೆ ಸ್ಫೂರ್ತಿಯಾಗಿವೆ. ಈ ವಿಶೇಷವಾದ ಭಾವನೆಗಳೇ ‘ಮದರ್ ಪ್ರಾಮಿಸ್’ ಎಂಬ ಕ್ಯಾಚಿ ಹಾಗೂ ಆಪ್ತವಾದ ಶೀರ್ಷಿಕೆ ಹುಟ್ಟಲು ಕಾರಣ ಎಂದು ಅವರು ಹೇಳಿದ್ದಾರೆ. “ಮದರ್ ಪ್ರಾಮಿಸ್” ಎಂಬುದು ಪ್ರತಿಯೊಬ್ಬ ಯುವಕನೂ ದಿನನಿತ್ಯ ಬಳಸುವ ಒಂದು ಸಾಮಾನ್ಯ ಪದವಾಗಿರುವುದರಿಂದ (Slang), ಇದು ಯುವಜನತೆಗೆ ಬೇಗನೆ ಕನೆಕ್ಟ್ ಆಗಲಿದೆ.

ಅಷ್ಟೇ ಅಲ್ಲದೆ, ಈ ಟೈಟಲ್ ಡಾಲಿ ಅವರ ಕಾಲೇಜು ದಿನಗಳತ್ತ ಮರಳಿ ಕರೆದೊಯ್ದಿದೆ. ಅಂದು ತಮ್ಮ ಆಪ್ತ ಸ್ನೇಹಿತರಾದ ನಾಗ, ಸುನಿಲ್ ಮತ್ತು ಮಹದೇವ ಜೊತೆಗೂಡಿ ಇದೇ ಹೆಸರಿನಲ್ಲಿ ತಮಾಷೆಯ ಶಾರ್ಟ್ ಫಿಲ್ಮ್ ಒಂದನ್ನು ಮಾಡಿದ್ದರಂತೆ. ಅಂದಿನ ಆ ತುಂಟಾಟದ ನೆನಪುಗಳು ಇಂದಿನ ಈ ದೊಡ್ಡ ಸಿನಿಮಾಗೆ ಭಾವನಾತ್ಮಕ ಬೆಸುಗೆಯಾಗಿದೆ. ಅಂದು ಶಾರ್ಟ್ ಫಿಲ್ಮ್‌ಗಳಿಂದ ಶುರುವಾದ ಡಾಲಿಯ ಬಣ್ಣದ ಪಯಣ, ಇಂದು ಕನ್ನಡಿಗರ ನೆಚ್ಚಿನ ನಟನಾಗಿ ಬೆಳೆದಿರುವುದು ಅವರ ಕಠಿಣ ಶ್ರಮಕ್ಕೆ ಹಿಡಿದ ಕನ್ನಡಿಯಾಗಿದೆ.

ಇನ್ನು ಚಿತ್ರದ ಮೊದಲ ಹಾಡಿಗೆ ನವನೀತ್ ಶ್ಯಾಮ್ ಅದ್ಭುತವಾಗಿ ಸಂಗೀತ ಸಂಯೋಜಿಸಿದ್ದು, ಶಶಾಂಕ್ ಸೋಗಲ್ ಅವರ ಸಾಹಿತ್ಯವಿದೆ. ಈ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಪಕ್ಕಾ ಮಾಸ್ ಹಾಗೂ ಯೂತ್‌ಫುಲ್ ಆಗಿರಲಿದೆ ಎಂಬ ನಿರೀಕ್ಷೆಯಿದೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಸೀಸನ್‌ನಲ್ಲೂ ಆರ್‌ಸಿಬಿ ಅಬ್ಬರಿಸುತ್ತಿದ್ದು, “ಈ ಸಲನೂ ಕಪ್ ನಮ್ದೇ” ಎಂದು ಡಾಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಗೆಲುವಿನಂತೆ, ಡಾಲಿ ಅವರ ಈ ಚಿತ್ರವೂ ಪ್ರೇಕ್ಷಕರ ಹೃದಯ ಗೆಲ್ಲುವುದು ಖಚಿತ ಎನ್ನಲಾಗುತ್ತಿದೆ.

The post ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಹುಟ್ಟಿದ ಡಾಲಿ ಹೊಸ ಸಿನಿಮಾ ‘ಮದರ್ ಪ್ರಾಮಿಸ್’! appeared first on Samyukta Karnataka.

ಅನುಶ್ರೀ-ರೋಷನ್ ಲವ್ ಸ್ಟೋರಿ: ಕಾಫಿ ಡೇಟ್ ಹಿಂದೆ ಇಂಟ್ರೆಸ್ಟಿಂಗ್ ಕಥೆ ಬಹಿರಂಗ
ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ಪತಿ ರೋಷನ್ ಮೊದಲ ಪರಿಚಯ ಮತ್ತು ಕಾಫಿ ಡೇಟ್ ಕುರಿತ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗೇ ಅನುಶ್ರೀ ಪ್ರೀತಿಯಲ್ಲಿ ಬಿಳಲು ಕಾರಣವೇನು? ಮತ್ತು ಹೇಗೆ ಯಾವತ್ತು ರೋಷನ್‌ನ್ನು ನೋಡಿದ್ದು? ಇದೇಲ್ಲದರ ಬಗ್ಗೆ ಮುಕ್ತವಾಗಿ, ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಅನುಶ್ರೀ ಹೇಳುದ ಪ್ರಕಾರ, ಸಂಗಾತಿ ರೋಷನ್‌ನ್ನು ಮೊದಲು ಭೇಟಿ ಮಾಡಿದ್ದು ಹೊಸಪೇಟೆಯಲ್ಲಿ, ಹಾಗೇ ಅವತ್ತು ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಮೂಲಕ ಇವರಿಬ್ಬರಿಗೂ ಪರಿಚಯವಾಗಿತ್ತು. ಆರಂಭದಲ್ಲಿ ಕೇವಲ ಹಾಯ್-ಬೈ ಮಟ್ಟದಲ್ಲಿದ್ದ ಈ ಪರಿಚಯ, ಒಂದು ಫೋಟೋ ಶೇರ್ ಮಾಡುವ ಸಂದರ್ಭದಲ್ಲೇ ಮುಂದುವರಿದಿತ್ತು. ರೋಷನ್ ನಂಬರ್ ಕೇಳಿದಾಗ ಅನುಶ್ರೀ ನೀಡದೇ, ಏರ್‌ಡ್ರಾಪ್ ಮೂಲಕ ಕಳುಹಿಸಲು ಹೇಳಿ ನಂಬರ್‌ ಕೊಡದೇ ಸತಾಯಿಸಿದ್ರಂತೆ. ನಂತರ ಈ ಘಟನೆಯನ್ನು ಕೂಡ ಅವರು ನೆನಪಿಸಿಕೊಂಡು ಲವ್‌ ಜರ್ನಿ ಮತ್ತು ನನ್ನ ದಾರಿಯಲ್ಲಿ ಹೊಸ ಬೆಳಕಿನ ಮಿಟ್‌ ಅಂದೆ ಆಗಿತ್ತು ಎಂದರು.

ನಂತರ ರೋಷನ್ ಕಾಫಿಗೆ ಆಹ್ವಾನಿಸಿದಾಗ, ಅನುಶ್ರೀಗೆ ಸ್ವಲ್ಪ ಭಯವೂ ಉಂಟಾಗಿತ್ತಂತೆ. ಇದೇ ವಿಚಾರವನ್ನು ನಟ ರಾಜ್ ಬಿ ಶೆಟ್ಟಿ ಹತ್ತಿರವು ಹೇಳಿಕೊಂಡಿದರಂತೆ. ಆಗ ರಾಜ್ ಬಿ ಶೆಟ್ಟಿ ಮತ್ತು ಚೈತ್ರಾ ಜೆ ಆಚಾರ್ ಇಬ್ಬರು ಪ್ರೋತ್ಸಾಹದಿಂದ ಅನುಶ್ರೀ ಆ ಆಹ್ವಾನವನ್ನು ಸ್ವೀಕರಿಸಿದರು.

ಬಳಿಕ ಬೆಂಗಳೂರಿನ ಒರಾಯನ್ ಮಾಲ್‌ನ ಕಫೆಯಲ್ಲಿ ಇವರ ಮೊದಲ ಕಾಫಿ ಮೀಟ್ ನಡೆದಿದೆ. ಮೊದಲ ಭೇಟಿಯಲ್ಲೇ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಮಾತನಾಡಿಕೊಂಡಿದ್ದು, ಈ ವೇಳೆ ರೋಷನ್‌ನ ಸರಳ ಸ್ವಭಾವ ಅನುಶ್ರೀಗೆ ಇಷ್ಟವಾಗಿದೆ.

ಈ ಸ್ನೇಹ ಬಳಿಕ ಪ್ರೀತಿಯಾಗಿ ಬೆಳೆಯುತ್ತ, ಇಬ್ಬರೂ ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್ ನಡೆಸಿ, ಅಂತಿಮವಾಗಿ ಮದುವೆಯಾಗಿದ್ದಾರೆ. ಸರಳ ಪರಿಚಯದಿಂದ ಆರಂಭವಾದ ಈ ಸಂಬಂಧ, ಇಂದು ಯಶಸ್ವಿ ದಾಂಪತ್ಯವಾಗಿ ಪರಿಣಮಿಸಿದೆ.

ಒಟ್ಟಾರೆ.. ಕಿರುತೆರೆಯಲ್ಲಿ ಆ್ಯಂಕರ್‌ ಅನುಶ್ರೀ ಎಂದೇ ಖ್ಯಾತಿ ಗಳಿಸಿ, ಎಲ್ಲರ ಮನವನ್ನ ಮಾತುಗಳಿಂದಲೇ ತಣಿಸಿ ಎಲ್ಲರನ್ನು ತನ್ನವರೆಂದು ಸ್ವಾಗತಿಸುತ್ತಿದ್ರು. ಈಗ ಮದುವೆಯಾಗಿ ಹೊಸಜೀವನದ ಆರಂಭದ ಖುಷಿಯಾಗಿದ್ದಾರೆ.

The post ಅನುಶ್ರೀ-ರೋಷನ್ ಲವ್ ಸ್ಟೋರಿ: ಕಾಫಿ ಡೇಟ್ ಹಿಂದೆ ಇಂಟ್ರೆಸ್ಟಿಂಗ್ ಕಥೆ ಬಹಿರಂಗ appeared first on Samyukta Karnataka.

ಕಲರ್ಸ್‌ ಕನ್ನಡದಲ್ಲಿ ಮದುವೆ ಹಂಗಾಮಾ: ಭಾಗ್ಯ-ಪವಿತ್ರ ಬದುಕಿನಲ್ಲಿ ಎದುರಾಯ್ತು ಮಹಾಬಿರುಗಾಳಿ!
ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ‘ಕಲರ್ಸ್‌ ಕನ್ನಡ’ದ ಎರಡು ಪ್ರಮುಖ ಧಾರಾವಾಹಿಗಳಾದ ‘ಭಾಗ್ಯಲಕ್ಷ್ಮೀ’ ಮತ್ತು ‘ಪವಿತ್ರ ಬಂಧನ’ ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿವೆ. ಈ ವಾರ ಬಿಡುಗಡೆಯಾಗಿರುವ ಹೊಸ ಪ್ರೋಮೋಗಳು ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಇಬ್ಬರು ನಾಯಕಿಯರ ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳು ಎದುರಾಗಿವೆ.

ಕಲರ್ಸ್‌ ಕನ್ನಡದ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಕಥೆ ಈಗ ಸುನಾಮಿಯಂತೆ ಬದಲಾಗಿದೆ. ವಿಲನ್‌ ಪಾತ್ರದಾರಿ ಮನೋಜ್, ಪವಿತ್ರಾ ಕುಟುಂಬವನ್ನೇ ಒತ್ತೆ ಇಟ್ಟುಕೊಂಡು ಅವಳನ್ನು ಬಲವಂತವಾಗಿ ಮದುವೆಯಾಗಲು ಸಂಚು ಮಾಡಿದ್ದಾನೆ. ಆದ್ರೆ ಸರಿಯಾದ ಸಮಯಕ್ಕೆ ಎಂಟ್ರಿ ಕೊಟ್ಟ ನಾಯಕ ದೇವ್, ಮನೋಜ್‌ನ ಕೆಟ್ಟ ಆಟಕ್ಕೆ ತಕ್ಕ ಪಾಠ ಕಲಿಸಿದ್ದಾನೆ.

ತನ್ನ ತಮ್ಮ ತಿಲಕ್‌ಗೆ ಕೊಟ್ಟ ಮಾತಿನಂತೆ ಪವಿತ್ರಾಳ ಬದುಕನ್ನು ರಕ್ಷಿಸಲು ದೇವ್ ಆಕೇಯ ಕೊರಳಿಗೆ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ್ದಾನೆ. ತಮ್ಮನನ್ನು ಕಳೆದುಕೊಂಡ ನೋವು ಮತ್ತು ಪವಿತ್ರಾ ಮೇಲಿರುವ ದ್ವೇಷದ ನಡುವೆಯೂ ದೇವ್ ಈ ನಿರ್ಧಾರ ತಗೆದುಕೊಂಡಿದ್ದಾನೆ. ದಿಗ್ಭ್ರಾಂತಳಾಗಿರುವ ಪವಿತ್ರಾ ಈ ಮದುವೆನ್ನು ಒಪ್ಪುತ್ತಾಳೆಯೇ? ದೇವ್‌ನ ತಾಯಿ ಈ ಹಠಾತ್ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಸದ್ಯದ ಕುತೂಹಲ.

ಹಾಗೇ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಒಂದು ದೂಡ್ಡ ತಿರುವು ನೀಡಲಿದೆ. ಅಲ್ಲದೇ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಘಟನೆಯೊಂದು ಸಂಭವಿಸಲಿದೆ ಎನ್ನುವುದು ಸದ್ಯದ ಪ್ರೋಮೋದಲ್ಲಿದೆ. ಭಾಗ್ಯ ತನ್ನ ಮಾವನಿಗೆ ಕೊಟ್ಟ ಮಾತಿಗೆ ಕಟ್ಟುಬಿದ್ದು, ಮತ್ತೆ ತಾಂಡವ್ ಜೊತೆ ಮರುಮಾಂಗಲ್ಯ ಧಾರಣೆಗೆ ಸಜ್ಜಾಗಿದ್ದಾಳೆ.

ಇತ್ತ ಆದಿಶ್ವರ್ ಕೂಡ ಈ ಮದುವೆಗೆ ಸಮ್ಮತಿ ಸೂಚಿಸಿರುವುದು ವೀಕ್ಷಕರಲ್ಲಿ ಆಕ್ರೋಶ ಮೂಡಿಸಿದೆ. ತಾಂಡವ್ ಎಂದಿನಂತೆ ತನ್ನ ಸ್ವಾರ್ಥದ ಮುಖವಾಡ ಹಾಕಿಕೊಂಡು ಅಟ್ಟಹಾಸ ಮೆರೆಯುತ್ತಿದ್ದರೂ, ಭಾಗ್ಯ ಮಾತ್ರ ಮೌನಕ್ಕೆ ಶರಣಾಗಿದ್ದಾಳೆ. ಆದ್ರೆ ಈ ಮೌನದ ಹಿಂದೆ ದೊಡ್ಡ ಬಿರುಗಾಳಿಯೇ ಅಡಗಿರುವ ಸೂಚನೆ ಸಿಗುತ್ತಿದೆ. ಭಾಗ್ಯ ನಿಜವಾಗಿಯೂ ತಾಂಡವ್‌ನ ಮದುವೆಯಾಗುತ್ತಾಳಾ ಅಥವಾ ಮಂಟಪದಲ್ಲಿ ಏನಾದರೂ ಅಚ್ಚರಿಯ ತಿರುವು ಕಾದಿದೆಯೇ ಎಂಬ ಪ್ರಶ್ನೆ ಮೂಡಿದೆ.

ಇಂದಿನಿಂದ ಪ್ರಾರಂಭವಾಗಲಿರುವ ಈ ‘ಮದುವೆ ವಿಶೇಷ’ ಸಂಚಿಕೆಗಳು ಸ್ಯಾಂಡಲ್‌ವುಡ್ ಕಿರುತೆರೆ ಲೋಕದಲ್ಲಿ ಹೊಸ ಸಂಚಲನ ಮೂಡಿಸಲಿವೆ. ಪವಿತ್ರಾ ಮತ್ತು ಭಾಗ್ಯ ಈ ಇಬ್ಬರೂ ಹೆಣ್ಣುಮಕ್ಕಳು ತಮ್ಮ ಸಂಕಷ್ಟಗಳಿಂದ ಹೇಗೆ ಹೊರಬರುತ್ತಾರೆ? ವಿಧಿ ಆಟ ಇವರನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದು ಈ ವಾರದ ಪ್ರಮುಖ ಕುತೂಹಲಕಾರಿ ಸಂಚಿಕೆಯಾಗಿವೆ.

The post ಕಲರ್ಸ್‌ ಕನ್ನಡದಲ್ಲಿ ಮದುವೆ ಹಂಗಾಮಾ: ಭಾಗ್ಯ-ಪವಿತ್ರ ಬದುಕಿನಲ್ಲಿ ಎದುರಾಯ್ತು ಮಹಾಬಿರುಗಾಳಿ! appeared first on Samyukta Karnataka.

ರಶ್ಮಿಕಾ ಮಂದಣ್ಣ ಫೋಸ್ಟ್‌ ವೈರಲ್: “ನಾವೀಗ ಮೂವರು”, ತಾಯಿಯಾಗುತ್ತಿರುವ ಸಂಭ್ರಮನಾ..?
ಬೆಂಗಳೂರು: ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ನ ಕಣ್ಮಣಿ, ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಸದಾ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಕಳೆದ ಫೆಬ್ರವರಿ 26 ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದರು. ಆದ್ರೆ ಇದೀಗ ಮದುವೆಯಾದ ಕೇವಲ ಒಂದು ತಿಂಗಳ ಸಂಭ್ರಮದಲ್ಲಿ ರಶ್ಮಿಕಾ ಹಂಚಿಕೊಂಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಹೌದು.. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅನಿಮೇಟೆಡ್ ವಿಡಿಯೋವೊಂದನ್ನು ಹಂಚಿಕೊಂಡಿರುವ ರಶ್ಮಿಕಾ, ಅದಕ್ಕೆ “ನಾವೀಗ ಮೂವರು” (We are three now) ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಕ್ಯಾಪ್ಷನ್ ನೋಡಿದ ತಕ್ಷಣ ಅಭಿಮಾನಿಗಳಲ್ಲಿ ಅಚ್ಚರಿ ಹಾಗೂ ಕುತೂಹಲಕ್ಕೆ ಮನೆಮಾಡಿದೆ. ಕೆಲವು ಅಭಿಮಾನಿಗಳು ರಶ್ಮಿಕಾ ಗುಡ್ ನ್ಯೂಸ್ ನೀಡುತ್ತಿದ್ದಾರೆ, ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಎಂದು ಭಾವಿಸಿ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಆದ್ರೆ ಈ ಸುದ್ದಿಯ ಹಿಂದಿರುವ ಅಸಲಿ ವಿಷಯವೇ ಬೇರೆ ಇದೆ.

ರಶ್ಮಿಕಾ ಮಂದಣ್ಣ ಸೃಷ್ಟಿಸಿದ ಒಂದು ವಿಶಿಷ್ಟ ಅನಿಮೇಟೆಡ್ ಪಾತ್ರದ ಹೆಸರು ‘ರೂ’ (Roo). ಈ ಪಾತ್ರವು ರಶ್ಮಿಕಾ ಸ್ವಂತ ವ್ಯಕ್ತಿತ್ವದ ಪ್ರತಿಬಿಂಬದಂತಿದೆ. ಈ ಸೂರ್ಯಕಾಂತಿ ಹೂವಿನ ರೂಪದ ಪಾತ್ರವನ್ನು ತಮ್ಮ ಪ್ರೀತಿಯ ಗೆಳತಿ ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಜೀವನದ ಅನಿಮೇಷನ್ ಲೋಕಕ್ಕೆ ಪತಿ ವಿಜಯ್ ದೇವರಕೊಂಡರನ್ನ ಆಹ್ವಾನಿಸುವ ಉದ್ದೇಶದಿಂದ ರಶ್ಮಿಕಾ ಈ ವಿಡಿಯೋ ಮಾಡಿದ್ದಾರೆ. ವಿಜಯ್, ರಶ್ಮಿಕಾ ಹಾಗೂ ಈ ‘ರೂ’ ಪಾತ್ರ ಸೇರಿ ‘ಮೂವರು’ ಎಂಬರ್ಥದಲ್ಲಿ ಆ ಸಾಲನ್ನು ಬರೆದುಕೊಂಡಿದ್ದಾರೆ.

ಇದು ರಶ್ಮಿಕಾ ವೈಯಕ್ತಿಕ ಜೀವನದ ಸಿಹಿ ಸುದ್ದಿಯಲ್ಲದಿದ್ದರೂ, ಅಭಿಮಾನಿಗಳು ಮಾತ್ರ ಈ ಕ್ರಿಯೇಟಿವ್ ಐಡಿಯಾಗೆ ಫಿದಾ ಆಗಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಅನಿಮೇಟೆಡ್ ಜೋಡಿಯನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮದುವೆಯ ನಂತರದ ಸುಂದರ ಕ್ಷಣಗಳನ್ನು ರಶ್ಮಿಕಾ ಈ ರೀತಿ ಕಲಾತ್ಮಕವಾಗಿ ಹಂಚಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಒಟ್ಟಿನಲ್ಲಿ.. ಗಾಸಿಪ್‌ಗಳಿಗೆ ಆಹಾರವಾಗಿದ್ದ ‘ಮೂವರು’ ಎಂಬ ಪದದ ಹಿಂದಿನ ರಹಸ್ಯ ಈಗ ಬಹಿರಂಗವಾಗಿದ್ದು, ರಶ್ಮಿಕಾ ಈ ವಿಭಿನ್ನ ಪ್ರಯತ್ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

The post ರಶ್ಮಿಕಾ ಮಂದಣ್ಣ ಫೋಸ್ಟ್‌ ವೈರಲ್: “ನಾವೀಗ ಮೂವರು”, ತಾಯಿಯಾಗುತ್ತಿರುವ ಸಂಭ್ರಮನಾ..? appeared first on Samyukta Karnataka.

‘ಅಮೃತಧಾರೆ’ ಜೋಡಿಯ ಅಪ್ಪಟ ಪ್ರೀತಿ: ವೈವಾಹಿಕ ಬದುಕಿಗೆ ಸಜ್ಜಾದ ರಾಣವ್-ರಾಧಾ!
ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ಯ ಮೂಲಕ ಮನೆಮಾತಾಗಿದ್ದ ಜೆಡಿ ಮತ್ತು ಮಲ್ಲಿ ಜೋಡಿ ಇದೀಗ ನಿಜಜೀವನದಲ್ಲೂ ಒಂದಾಗುತ್ತಿದ್ದಾರೆ. ನಟ ರಾಣವ್ ಗೌಡ ಹಾಗೂ ನಟಿ ರಾಧಾ ಭಗವತಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಈ ಬೆನ್ನಲ್ಲೇ ತಮ್ಮ ಪ್ರೀತಿ, ಜಾತಿ ಮತ್ತು ಆಹಾರ ಪದ್ಧತಿಯ ಬಗ್ಗೆ ರಾಣವ್ ಗೌಡ ಹಂಚಿಕೊಂಡಿರುವ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.

ಹೌದು.. ರಾಣವ್‌ ಮತ್ತು ರಾಧಾ ಇಬ್ಬರು ಬೇರೆ ಬೇರೆ ಜಾತಿಯಾದರು, ಇವರುಗಳ ಮನಸ್ಸು ಒಂದಾಗಿವೆ. ಹಾಗೇ ಪರಿಶುದ್ಧ ಪ್ರೀತಿಯ ಮುಂದೆ ಯಾವ ಜಾತಿ-ಭೇದಭಾವನು ಇಲ್ಲ ಎಂದು ಈ ಜೋಡಿಗಳು ಸಾಬೀತು ಮಾಡಿವೆ. ಹಾಗೇ ಇವರ ಆಹಾರ ಪದ್ಧತಿಯು ಅದೇ ರೀತಿಯಾಗಿ ಸಂಪೂರ್ಣ ಬದಲಾಗಿದ್ದೆ ಇದರ ಬಗ್ಗೆ ಸವಿವರವಾಗಿ ಈ ಪ್ರೀತಿಯ ಹಕ್ಕಿಗಳು ಉತ್ತರಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ರಾಣವ್ ಗೌಡ, ಸಮಾಜದಲ್ಲಿ ಚರ್ಚೆಯಾಗುತ್ತಿರುವ ವೆಜ್ ಮತ್ತು ನಾನ್-ವೆಜ್ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. “ನಾನು ಗೌಡ್ರು, ರಾಧಾ ಭಗವತಿ ಲಿಂಗಾಯತರು. ನಮ್ಮ ನಡುವೆ ಆಹಾರ ಪದ್ಧತಿಯ ವ್ಯತ್ಯಾಸವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ ಮನುಷ್ಯನ ಮೂಲವನ್ನು ಹುಡುಕುತ್ತಾ ಹೋದರೆ ನಾವೆಲ್ಲರೂ ಆದಿಮಾನವರ ಸಂತಾನ. ಅಂದು ಎಲ್ಲರೂ ಬೇಟೆಯಾಡಿ ನಾನ್-ವೆಜ್ ತಿನ್ನುತ್ತಿದ್ದವರೇ ಅಲ್ವೇ?” ಎಂದು ಪ್ರಶ್ನಿಸುವ ಮೂಲಕ ಜಾತಿ ಮತ್ತು ಆಹಾರದ ಕಟ್ಟಳೆಗಳಿಗಿಂತ ಮನುಷ್ಯತ್ವ ಮತ್ತು ಪ್ರೀತಿ ದೊಡ್ಡದು ಎಂಬ ಸಂದೇಶ ನೀಡಿದ್ದಾರೆ.

ಅಲ್ಲದೇ.. ರಾಧಾ ಭಗವತಿ ಶುದ್ಧ ಸಸ್ಯಾಹಾರಿ (Pure Veg) ಹಾಗೂ ರಾಣವ್ ಗೌಡ ಮಾಂಸಾಹಾರಿ (Non-Veg). ಈ ವ್ಯತಿರಿಕ್ತ ಆಹಾರ ಪದ್ಧತಿಯ ನಡುವೆಯೂ ಇಬ್ಬರ ಮಧ್ಯ ಗಾಢವಾದ ಪ್ರೀತಿ ಚಿಗುರಿದೆ. ವಿಶೇಷವೆಂದರೆ, ರಾಧಾ ಭಗವತಿ ಚಿಕನ್ ಮತ್ತು ಮಟನ್ ಅಡುಗೆಯನ್ನು ಬಹಳ ಸೊಗಸಾಗಿ ಮಾಡುತ್ತಾರೆ ಎಂದು ರಾಣವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಅವರು ನಾನ್-ವೆಜ್ ಅಡುಗೆ ಚೆನ್ನಾಗಿ ಮಾಡ್ತಾರೆ, ಆದ್ರೆ ಅದಕ್ಕಿಂತ ಹೆಚ್ಚಾಗಿ ರಾಧಾ ಮಾಡುವ ಪುಳಿಯೋಗರೆ ಅಂದ್ರೆ ನನಗೆ ಪಂಚಪ್ರಾಣ” ಎಂದು ರಾಣವ್ ತಮ್ಮ ಭಾವಿ ಪತ್ನಿಯ ಕೈರುಚಿಯನ್ನು ನೆನೆದು ಕೊಂಡಾಡಿದರು.

ಈಗಾಗಲೇ ಈ ಜೋಡಿಯ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿದೆ. ನಂತರ ಒಳ್ಳಯ ಮೂರ್ಹೂತದಲ್ಲಿ ರಾಣವ್ ಮತ್ತು ರಾಧಾ ಹಸೆಮಣೆ ಏರಲಿದ್ದಾರೆ. ‘ಅಮೃತಧಾರೆ’ಯಲ್ಲಿ ಜೆಡಿ-ಮಲ್ಲಿಯಾಗಿ ಪ್ರೇಕ್ಷಕರನ್ನು ರಂಜಿಸಿದ್ದ ಈ ಜೋಡಿ, ಇದೀಗ ರಿಯಲ್ ಲೈಫ್‌ನಲ್ಲಿ ಪತಿ-ಪತ್ನಿಯಾಗುತ್ತಿರುವುದಕ್ಕೆ ಅಭಿಮಾನಿಗಳು ಹರಸುತ್ತಿದ್ದಾರೆ. ಸದ್ಯ ರಾಧಾ ಭಗವತಿ ‘ಭಾರ್ಗವಿ ಎಲ್‌ಎಲ್‌ಬಿ’ ಧಾರಾವಾಹಿಯಲ್ಲಿ ಲಾಯರ್‌ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನ ಎರಡರನ್ನು ಸಮನಾಗಿ ಸಂಭ್ರಮಿಸುತ್ತಿದ್ದಾರೆ.

The post ‘ಅಮೃತಧಾರೆ’ ಜೋಡಿಯ ಅಪ್ಪಟ ಪ್ರೀತಿ: ವೈವಾಹಿಕ ಬದುಕಿಗೆ ಸಜ್ಜಾದ ರಾಣವ್-ರಾಧಾ! appeared first on Samyukta Karnataka.

ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಮ್ ‘ಕ್ಲೀನ್ ಸ್ವೀಪ್’: ಡಿವೈನ್ ಸ್ಟಾರ್ ಫಾಲೋ ಮಾಡುತ್ತಿರುವುದು ಕೇವಲ ಮೂವರನ್ನೇ!
ಬೆಂಗಳೂರು: ಕನ್ನಡ ಸಿನಿ ಇಂಡಸ್ಟ್ರೀಯಲ್ಲಿ ಖ್ಯಾತಿಯನ್ನ ಪಡೆದು, ‘ಕಾಂತಾರ’ ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಈಗ ತಮ್ಮ ಸೋಷಿಯಲ್ ಮೀಡಿಯಾ ಚಟುವಟಿಕೆಯಿಂದಾಗಿ ಸುದ್ದಿಯಲ್ಲಿದ್ದಾರೆ. ಹೌದು, ರಿಷಬ್ ಶೆಟ್ಟಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ‘ಫಾಲೋಯಿಂಗ್’ ಲಿಸ್ಟ್‌ನ್ನು ಸಂಪೂರ್ಣವಾಗಿ ಬದಲಾಯಿಸಿದ್ದು, ಸಾವಿರಾರು ಮಂದಿಯನ್ನು ಅನ್‌ಫಾಲೋ ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತಾಗಿದೆ.

ಈ ಬೆನ್ನಲೇ ಹೊಂಬಾಳೆ ಫಿಲ್ಮ್‌ ಅನ್‌ಫಾಲೋ ಮಾಡಿದ್ರು ಎಂಬ ವಿಚಾರವು ಸಹ ಬಹಳ ಸುದ್ದಿಗೆ ಗ್ರಾಸವಾಗಿತ್ತು. ಈಗ ರಿಷಬ್‌ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಕೇವಲ 3 ಅಕೌಂಟ್‌ಗಳನ್ನ ಮಾತ್ರ ಫಾಲೋ ಮಾಡಿದ್ದಾರೆ. ಈ ಹಿಂದೆ ಚಿತ್ರರಂಗದ ನೂರಾರು ಆಪ್ತರು ಹಾಗೂ ಸಹೋದ್ಯೋಗಿಗಳನ್ನು ಫಾಲೋ ಮಾಡುತ್ತಿದ್ದ ರಿಷಬ್, ಇನ್ನೂಳಿದ ಎಲ್ಲ ಅಕೌಂಟ್‌ಗಳ ಜೊತೆ, ರುಕ್ಮಿಣಿ ವಸಂತ್, ಮತ್ತು ರಾಜ ಬೀ ಶೆಟ್ಟಿ ಅಕೌಂಟ್‌ಗಳನ್ನು ಅನ್‌ಫಾಲೋ ಮಾಡಿದ್ದಾರೆ.

ಸದ್ಯ ಫಾಲೋಯಿಂಗ್ ಲಿಸ್ಟ್‌ನಲ್ಲಿ ಉಳಿದವರು ಯಾರು? ಅವುಗಳೆಂದರೆ:

ಪ್ರಗತಿ ಶೆಟ್ಟಿ: ಪತ್ನಿ ಹಾಗೂ ವಸ್ತ್ರವಿನ್ಯಾಸಕಿ.

ರಿಷಬ್ ಶೆಟ್ಟಿ ಫಿಲ್ಮ್ಸ್: ಅವರ ಸ್ವಂತ ನಿರ್ಮಾಣ ಸಂಸ್ಥೆ.

ರಿಷಬ್ ಶೆಟ್ಟಿ ಫೌಂಡೇಶನ್: ಅವರ ಸಾಮಾಜಿಕ ಸೇವಾ ಸಂಸ್ಥೆ.

ಹೊಂಬಾಳೆ ಫಿಲ್ಮ್ಸ್ ಅನ್‌ಫಾಲೋ: ವದಂತಿಗಳಿಗೆ ತೆರೆ ಕೆಲವು ದಿನಗಳ ಹಿಂದೆ ರಿಷಬ್ ತಮಗೆ ಜಾಗತಿಕ ಮಟ್ಟದ ಯಶಸ್ಸು ತಂದುಕೊಟ್ಟ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯನ್ನು ಅನ್‌ಫಾಲೋ ಮಾಡಿದ್ದರು. ಇದು ಗಾಂಧಿನಗರದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ರಿಷಬ್ ಹಾಗೂ ಹೊಂಬಾಳೆ ಸಂಸ್ಥೆಯ ನಡುವೆ ಭಿನ್ನಾಭಿಪ್ರಾಯ ಮೂಡಿದೆಯೇ ಎಂಬ ವದಂತಿಗಳು ಹಬ್ಬಿದ್ದವು. ಆದ್ರೆ ಈಗ ರಿಷಬ್ ಕೇವಲ ಹೊಂಬಾಳೆ ಮಾತ್ರವಲ್ಲದೆ, ತಮ್ಮ ಆಪ್ತ ಗೆಳೆಯರಾದ ರಾಜ್ ಬಿ. ಶೆಟ್ಟಿ ಹಾಗೂ ಇತರೆ ಸ್ಟಾರ್ ನಟರನ್ನೂ ಅನ್‌ಫಾಲೋ ಮಾಡಿದ್ದಾರೆ. ಈ ಮೂಲಕ ಇದು ಯಾವುದೇ ವೈಯಕ್ತಿಕ ಮುನಿಸಲ್ಲ, ಬದಲಾಗಿ ಇನ್‌ಸ್ಟಾಗ್ರಾಮ್ ನಿರ್ವಹಣೆಯ ಹೊಸ ತಂತ್ರ ಎಂಬುದು ಸ್ಪಷ್ಟವಾಗಿದೆ.

‘ಜೈ ಹನುಮಾನ್’ ಚಿತ್ರದ ತಯಾರಿ?: ಸದ್ಯ ರಿಷಬ್ ಶೆಟ್ಟಿ ಪ್ರಶಾಂತ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಚಿತ್ರದಲ್ಲಿ ಹನುಮಂತನ ಪಾತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ಚಿತ್ರಕ್ಕಾಗಿ ರಿಷಬ್ ವಿಶೇಷ ದೀಕ್ಷೆ ಮತ್ತು ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಬಹುಶಃ ಮಾನಸಿಕ ಏಕಾಗ್ರತೆಗಾಗಿ ಅಥವಾ ಸಿನಿಮಾದ ಪ್ರಚಾರದ ಭಾಗವಾಗಿ ಈ ‘ಡಿಜಿಟಲ್ ಡಿಟಾಕ್ಸ್’ ಮೊರೆ ಹೋಗಿರಬಹುದು ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.

ಒಟ್ಟಾರೆಯಾಗಿ, ರಿಷಬ್ ಈ ನಡೆಯು ಕುತೂಹಲ ಕೆರಳಿಸಿದ್ದು, ತಮ್ಮ ವೈಯಕ್ತಿಕ ಜೀವನ ಹಾಗೂ ವೃತ್ತಿಜೀವನದ ಬೆಳವಣಿಗೆಗಳಿಗೆ ಮಾತ್ರ ಸೋಷಿಯಲ್ ಮೀಡಿಯಾವನ್ನು ಸೀಮಿತಗೊಳಿಸಿಕೊಳ್ಳಲು ಮುಂದಾದಂತೆ ಕಾಣುತ್ತಿದೆ. ಹಾಗೇ ಈ ಸುದ್ದಿಗಳಿ ಇದುವರೆಗೂ ರಿಷಬ್‌ ಶೆಟ್ಟಿ ಯಾವುದೆ ರೀತಿ ಹೇಳಿಕೆ ಅಥವಾ ಫೋಸ್ಟ್‌ಗಳನ್ನ ಹಂಚಿಕೊಂಡಿಲ್ಲ.

The post ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಮ್ ‘ಕ್ಲೀನ್ ಸ್ವೀಪ್’: ಡಿವೈನ್ ಸ್ಟಾರ್ ಫಾಲೋ ಮಾಡುತ್ತಿರುವುದು ಕೇವಲ ಮೂವರನ್ನೇ! appeared first on Samyukta Karnataka.

ಸ್ಯಾಂಡಲ್‌ವುಡ್‌ನಲ್ಲಿ ಮಾಕ್ಟೇಲ್ ಮ್ಯಾಜಿಕ್: ವಿಶ್ವಾದ್ಯಂತ ‘ಲವ್ ಮಾಕ್ಟೇಲ್ 3’ ಭರ್ಜರಿ ಕಲೆಕ್ಷನ್!
ಬೆಂಗಳೂರು: ಕನ್ನಡ ಸಿನಿರಂಗದ ಯಶಸ್ವಿ ಸರಣಿಗಳಲ್ಲಿ ಒಂದಾದ ‘ಲವ್ ಮಾಕ್ಟೇಲ್’ ಚಿತ್ರದ ಮೂರನೇ ಭಾಗವು ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. ಕೆಲವು ದಿನಗಳ ಹಿಂದೆ ಈ ಸಿನಿಮಾ ಕುರಿತು ಸಾಕಷ್ಟು ಸುದ್ದಿಗಳು ಗ್ರಾಸವಾಗಿದ್ದವು. ಹಾಗೇ ಚಿತ್ರವು ಅದೆಲ್ಲವನ್ನ ಮೀರಿ 2026ನೇ ವರ್ಷದ ಮೊದಲ ಸೂಪರ್ ಹಿಟ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹಾಗೇ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿರುವ, ಮತ್ತು ನಾಯಕನಾಗಿ ನಟಿಸಿ ಈ ಚಿತ್ರದ ಭರ್ಜರಿ ಯಶಸ್ಸನ್ನು ಸಂಭ್ರಮಿಸಲು ಚಿತ್ರತಂಡ ಇತ್ತೀಚೆಗೆ ಅದ್ಧೂರಿ ‘ಸಕ್ಸಸ್ ಮೀಟ್’ ಆಯೋಜಿಸಿತ್ತು. ಈ ಸಮಾರಂಭದಲ್ಲಿ ಚಿತ್ರದ ಮೊದಲ ಭಾಗದಿಂದ ಮೂರನೇ ಭಾಗದವರೆಗೆ ಪಾತ್ರಗಳಾಗಿ ಮತ್ತು ಸಹನಡೆದ ಇಡೀ ತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

ನಂತರ ಸಿನಿಮಾದ ಯಶಸ್ಸಿಗೆ ಕಾರಣರಾದ ತಂತ್ರಜ್ಞರು, ಪ್ರಚಾರದಲ್ಲಿ ತೊಡಗಿಕೊಂಡವರು ಹಾಗೂ ಮುಖ್ಯವಾಗಿ ಪ್ರೇಕ್ಷಕ ಮಹಾಪ್ರಭುಗಳಿಗೆ ಡಾರ್ಲಿಂಗ್ ಕೃಷ್ಣ ದಂಪತಿ ವೇದಿಕೆಯ ಮೇಲೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.

ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿರುವ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯ ಸುಪ್ರೀತ್ ಮಾತನಾಡಿ, “ಇದು ಈ ವರ್ಷದ ಮೊದಲ ದೊಡ್ಡ ಹಿಟ್ ಸಿನಿಮಾ. ಬಿಡುಗಡೆಗೆ ಮುನ್ನವೇ ಕೃಷ್ಣ ನನಗೆ ಸಿನಿಮಾ ತೋರಿಸಿದ್ದರು. ಆ ಬಳಿಕ ‘ಟಾಕ್ಸಿಕ್’ ಸಿನಿಮಾದಿಂದ ತೆರವಾದ ಜಾಗಕ್ಕೆ ‘ಲವ್ ಮಾಕ್ಟೇಲ್ 3’ ಚಿತ್ರವನ್ನು ಬಿಡುಗಡೆ ಮಾಡಲಾಯಿತು.

ಅಲ್ಲದೇ..ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಯುಎಸ್‌ಎ, ಆಸ್ಟ್ರೇಲಿಯಾ ಹಾಗೂ ಜರ್ಮನಿ ದೇಶಗಳಲ್ಲೂ ಚಿತ್ರಕ್ಕೆ ಭರ್ಜರಿ ಮುಂಗಡ ಬುಕ್ಕಿಂಗ್ ಆಗುತ್ತಿದೆ” ಎಂದು ಖುಷಿ ಹಂಚಿಕೊಂಡಿದ್ದಾರೆ.

ಚಿತ್ರದ ನಾಯಕಿ ಹಾಗೂ ನಿರ್ಮಾಪಕಿ ಮಿಲನಾ ನಾಗರಾಜ್ “ಮೊದಲ ಎರಡು ಭಾಗಗಳು ಗೆದ್ದಾಗ ಖುಷಿಯಾಗಿತ್ತು. ಆದ್ರೆ ಈ ಮೂರನೇ ಆವೃತ್ತಿಯ ಗೆಲುವು ನನ್ನನ್ನು ಭಾವುಕಳನ್ನಾಗಿಸಿದೆ. ಪ್ರೇಕ್ಷಕರ ಪ್ರೀತಿಯ ಪ್ರತಿಕ್ರಿಯೆಗಳು ಮನ ತುಂಬಿ ಬರುವಂತೆ ಮಾಡಿವೆ” ಎಂದು ಭಾವುಕರಾದರು.

“ನಾವು ಚಿತ್ರರಂಗದಲ್ಲಿ ತುಂಬಾ ಲೆಕ್ಕಾಚಾರದಿಂದ ಹೆಜ್ಜೆ ಇಡುತ್ತೇವೆ. ನಮ್ಮ ತಂಡದಲ್ಲಿರುವ ಪ್ರತಿಯೊಬ್ಬರೂ ಕೇವಲ ತಮ್ಮ ಪ್ರತಿಭೆಯ ಆಧಾರದ ಮೇಲಷ್ಟೇ ಅವಕಾಶ ಪಡೆದಿದ್ದಾರೆ. ಹೀಗಾಗಿ ಯಾರೂ ನಮಗೆ ಧನ್ಯವಾದ ಹೇಳಬೇಕಿಲ್ಲ” ಎಂದ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ, ಇದೇ ಸಂದರ್ಭದಲ್ಲಿ ತಮ್ಮ ‘ಕ್ರಿಸ್‌ಮೀ’ ಬ್ಯಾನರ್ ಅಡಿಯಲ್ಲಿ ಇನ್ನು ಮುಂದೆ ವರ್ಷಕ್ಕೊಂದು ಸಿನಿಮಾ ಮಾಡುವ ಮಹತ್ತರ ಯೋಜನೆಯನ್ನು ಬಗ್ಗೆ ತಿಳಿಸಿದರು.

ಒಟ್ಟಾರೆ..ಸಮಾರಂಭದಲ್ಲಿ ನಟಿಯರಾದ ರೆಚೆಲ್ ಡೇವಿಡ್, ಅಮೃತಾ ಅಯ್ಯಂಗಾರ್, ಹಿರಿಯ ನಟ ಜಗದೀಶ್, ಕೃಷ್ಣ ಅವರ ತಂದೆ ನಾಗಪ್ಪ ಹಾಗೂ ತಂತ್ರಜ್ಞರು ತಮ್ಮ ‘ಲವ್ ಮಾಕ್ಟೇಲ್’ ಯಾನದ ಅನುಭವಗಳನ್ನು ಹಂಚಿಕೊಂಡರು. ಜೊತೆಗೆ ಸಿನಿಮಾದ ಯಶ್ಸಿನ ಹಿಂದೆ ಪಟ್ಟಂತ ಶ್ರಮಕ್ಕೆ ಧನ್ಯವಾದವನ್ನು ತಿಳಿಸಿದರು.

The post ಸ್ಯಾಂಡಲ್‌ವುಡ್‌ನಲ್ಲಿ ಮಾಕ್ಟೇಲ್ ಮ್ಯಾಜಿಕ್: ವಿಶ್ವಾದ್ಯಂತ ‘ಲವ್ ಮಾಕ್ಟೇಲ್ 3’ ಭರ್ಜರಿ ಕಲೆಕ್ಷನ್! appeared first on Samyukta Karnataka.

ವರನಟನ ಭಕ್ತಿಗೀತೆಗೆ ಪ್ರಧಾನಿ ಮೋದಿ ಫಿದಾ: ರಾಜಕುಮಾರ್‌ ಹಾಡು ಹಂಚಿಕೊಂಡ ನಮೋ!
ನವದೆಹಲಿ: ಕನ್ನಡದ ಅಸ್ಮಿತೆ, ವರನಟ ಡಾ. ರಾಜ್‌ಕುಮಾರ್ ಜನಪ್ರಿಯತೆ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ಅದು ಜಾಗತಿಕ ಮಟ್ಟದಲ್ಲಿದೆ ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ರಾಜಕುಮಾರ್ ಅಭಿನಯದ ಸಿನಿಮಾ ಭಕ್ತಿಗೀತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

ಜನರ ಮನ ಮನೆಗಳಲ್ಲಿ ಅಂದೇ ಮನೆ ಮಾತಾಗಿದ್ದ, 1970ರಲ್ಲಿ ತೆರೆಕಂಡ ಇತಿಹಾಸ ಸೃಷ್ಟಿಸಿದ್ದ ‘ಶ್ರೀ ಕೃಷ್ಣದೇವರಾಯ’ ಚಿತ್ರದ ಅತ್ಯಂತ ಜನಪ್ರಿಯ ‘ಶ್ರೀ ಚಾಮುಂಡೇಶ್ವರಿ’ ಹಾಡಿನ ಯೂಟ್ಯೂಬ್ ಲಿಂಕ್‌ನ್ನು ಪ್ರಧಾನಿ ಮೋದಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದ ಸುರ್ವಣ ಯುಗದ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದಾರೆ.

ಮೋದಿ ಹಂಚಿಕೊಂಡಿದ್ದಕ್ಕೆ ಕಾರಣವೇನು?: ದೈವ ಭಕ್ತಿ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಹೊಂದಿರುವ ಪ್ರಧಾನಿ ಮೋದಿ, ತಾಯಿ ಚಾಮುಂಡೇಶ್ವರಿಯ ಮೇಲಿನ ಭಕ್ತಿಯನ್ನು ಸಾರುವ ಉದ್ದೇಶದಿಂದ ಈ ವಿಡಿಯೋ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವಿಡಿಯೋ ಹಂಚಿಕೊಳ್ಳುತ್ತಾ ಹೀಗೆ ಬರೆದುಕೊಂಡಿದ್ದಾರೆ.

“ಜಗತ್ಜನನಿ ಮಾತೆಯ ಮೇಲಿನ ಅಚಲ ನಂಬಿಕೆಯು ಆಕೆಯ ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಶಕ್ತಿಯನ್ನು ತುಂಬಲಿದೆ.” ಎಂದು, ಮಾತೆ ಚಾಮುಂಡೇಶ್ವರಿಯ ಆಶೀರ್ವಾದದ ಶಕ್ತಿಯನ್ನು ಪ್ರಧಾನಿಯವರು ಕೊಂಡಾಡಿದ್ದಾರೆ. ದೈವಿಕ ಶಕ್ತಿಯು ಮನುಷ್ಯನಲ್ಲಿ ಹೇಗೆ ಚೈತನ್ಯ ತುಂಬುತ್ತದೆ ಎಂಬುದನ್ನು ಈ ಹಾಡಿನ ಮೂಲಕ ಜಗತ್ತಿಗೆ ಫೋಸ್ಟ್‌ ಮಾಡುವ ಮೂಲಕ ಸಾರಿದ್ದಾರೆ.

ಸಿನಿಮಾದ ಹಿನ್ನೆಲೆ ಮತ್ತು ತಾಂತ್ರಿಕ ತಂಡ: ‘ಶ್ರೀ ಕೃಷ್ಣದೇವರಾಯ’ ಸಿನಿಮಾ ಕನ್ನಡ ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದು. ಈ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಕೃಷ್ಣದೇವರಾಯನ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದರು. ‘ಶ್ರೀ ಚಾಮುಂಡೇಶ್ವರಿ’ ಹಾಡಿಗೆ ಖ್ಯಾತ ಗಾಯಕರಾದ ಪಿ. ಲೀಲಾ ಮತ್ತು ಎಸ್. ಗೋವಿಂದರಾಜು ಹಿನ್ನಲೆ ಧ್ವನಿ ನೀಡಿದ್ದಾರೆ. ಟಿ.ಜಿ. ಲಿಂಗಪ್ಪ ಸುಮಧುರ ಸಂಗೀತ ಹಾಗೂ ಪ್ರಭಾಕರ ಶಾಸ್ತ್ರಿ ಅರ್ಥಗರ್ಭಿತ ಸಾಹಿತ್ಯ ಈ ಹಾಡಿನ ಜೀವವಾಗಿದೆ. ಚಿತ್ರದಲ್ಲಿ ರಾಜ್‌ಕುಮಾರ್ ಜೊತೆಗೆ ಜಯಂತಿ, ಭಾರತಿ ಮತ್ತು ಹಾಸ್ಯ ನಟ ನರಸಿಂಹರಾಜು ಅವರಂತಹ ದಿಗ್ಗಜ ಕಲಾವಿದರು ನಟಿಸಿದ್ದಾರೆ.

ಕನ್ನಡಿಗರಲ್ಲಿ ಹರ್ಷದ ಹೊಳೆ: ಪ್ರಧಾನಿಯವರ ಈ ನಡೆಗೆ ಕನ್ನಡಿಗರು ಮತ್ತು ಅಣ್ಣಾವ್ರ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಮ್ಮ ಅಣ್ಣಾವ್ರ ಕೀರ್ತಿ ದೇಶದ ಪ್ರಧಾನಿಯವರಿಗೂ ತಲುಪಿದೆ ಎನ್ನುವುದು ಹೆಮ್ಮೆಯ ವಿಚಾರ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕನ್ನಡದ ಮೇಲಿರುವ ತಮ್ಮ ಪ್ರೀತಿಯನ್ನು ಪ್ರಧಾನಿ ಈ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂಬ ಮಾತುಗಳು ಸದ್ಯ ಎಲ್ಲಕಡೆಯಿಂದ ಕೇಳಿಬರುತ್ತಿವೆ.

The post ವರನಟನ ಭಕ್ತಿಗೀತೆಗೆ ಪ್ರಧಾನಿ ಮೋದಿ ಫಿದಾ: ರಾಜಕುಮಾರ್‌ ಹಾಡು ಹಂಚಿಕೊಂಡ ನಮೋ! appeared first on Samyukta Karnataka.