Jalivud Studio Bidadi Archives - Samyukta Karnataka

ಬಿಗ್ ಬಾಸ್ 13ಕ್ಕೆ ಗ್ರಹಚಾರ: ಸೆಪ್ಟೆಂಬರ್ 6ಕ್ಕೆ ಕಿಚ್ಚನ ಗ್ರ್ಯಾಂಡ್‌ ಟೇಕ್‌ ಆಫ್ ವಿಳಂಬ; ಇಲ್ಲಿದೆ ಡಿಟೇಲ್ಸ್
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 13’ ಆರಂಭಕ್ಕೆ 4ಕ್ಕೆ ದಿನಗಳು ಬಾಕಿ ಇರುವಾಗಲೇ ʻBBKʼ ತಂಡಕ್ಕೆ ಮತ್ತೊಂದು ಕಾನೂನು ತೊಡಕು ಎದುರಾಗಿದೆ. ಸೆಪ್ಟೆಂಬರ್ 6 ರಿಂದ ಶೋ ಪ್ರಸಾರಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಕಾರ್ಯಕ್ರಮ ಆಯೋಜನೆಯ ಜಾಗದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬಿಡದಿ ಬಳಿಯಿರುವ ‘ಜಾಲಿವುಡ್ ಸ್ಟುಡಿಯೋ’ದಲ್ಲಿ ಶೋ ನಡೆಸಲು ಅನುಮತಿ ನೀಡಬಾರದು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧಿಕೃತ ದೂರು ನೀಡಿದ್ದಾರೆ.

ಹಾಗೇ ದೂರಿನಲ್ಲಿ ಉಲ್ಲೇಖಿಸಿರುವಂತೆ, ಜಾಲಿವುಡ್ ಸ್ಟುಡಿಯೋ ಆಡಳಿತ ಮಂಡಳಿಯು ಪರಿಸರ ಮಾಲಿನ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಅಲ್ಲದೇ ಕಳೆದ ವರ್ಷ ಈ ಸ್ಟುಡಿಯೋದಲ್ಲಿ ನಡೆದಿದ್ದ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ವಿಧಿಸಲಾಗಿದ್ದ ದಂಡದ ಮೊತ್ತವನ್ನು ಇದುವರೆಗೂ ಇತ್ಯರ್ಥಪಡಿಸಿಲ್ಲ. ಜೊತೆಗೆ ಕಡ್ಡಾಯವಾಗಿ ಇರಬೇಕಾದ ತ್ಯಾಜ್ಯ ನೀರು ಸಂಸ್ಕರಣಾ ಘಟಕ (STP) ಹಾಗೂ ಸಮರ್ಪಕ ಒಳಚರಂಡಿ ವ್ಯವಸ್ಥೆಯನ್ನು ಸ್ಟುಡಿಯೋದಲ್ಲಿ ನಿರ್ಮಿಸಲಾಗಿಲ್ಲ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ತ್ಯಾಜ್ಯ ವಿಲೇವಾರಿ ಮತ್ತು ಮೂಲಸೌಕರ್ಯಗಳ ಕುರಿತು ಪರಿಶೀಲನೆ ನಡೆಸಬೇಕು. ನಿಯಮಗಳು ಪೂರ್ಣ ಪ್ರಮಾಣದಲ್ಲಿ ಪಾಲನೆಯಾಗುವವರೆಗೆ ಯಾವುದೇ ಕಾರಣಕ್ಕೂ ಬಿಗ್ ಬಾಸ್ ಶೋ ಆಯೋಜನೆಗೆ ಅನುಮತಿ ನೀಡಬಾರದು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಒಟ್ಟಾರೆಯಾಗಿ.. ಅದ್ಧೂರಿಯಾಗಿ ಕಾರ್ಯಕ್ರಮ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದ ಪ್ರಸಾರಕರು ಹಾಗೂ ಸ್ಟುಡಿಯೋ ಆಡಳಿತ ಮಂಡಳಿಗೆ ಈ ಬೆಳವಣಿಗೆ ದೊಡ್ಡ ಆಘಾತ ನೀಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಈ ದೂರಿನ ಮೇಲೆ ಕೈಗೊಳ್ಳುವ ಮುಂದಿನ ಕ್ರಮದ ಮೇಲೆ ಶೋ ಭವಿಷ್ಯ ನಿರ್ಧಾರವಾಗಲಿದ್ದು, ನಿಗದಿತ ದಿನಾಂಕದಂದೇ ಬಿಗ್ ಬಾಸ್ ಶುರುವಾಗಲಿದೆಯೇ ಎಂಬ ಆತಂಕ ಅಭಿಮಾನಿಗಳಲ್ಲಿ ಹಾಗೂ ವೀಕ್ಷಕರಲ್ಲಿ ಕಾಡುತ್ತಿರು ಅತಿ ದೊಡ್ಡ ಪ್ರಶ್ನೆಯಾಗಿದೆ.

The post ಬಿಗ್ ಬಾಸ್ 13ಕ್ಕೆ ಗ್ರಹಚಾರ: ಸೆಪ್ಟೆಂಬರ್ 6ಕ್ಕೆ ಕಿಚ್ಚನ ಗ್ರ್ಯಾಂಡ್‌ ಟೇಕ್‌ ಆಫ್ ವಿಳಂಬ; ಇಲ್ಲಿದೆ ಡಿಟೇಲ್ಸ್ appeared first on Samyukta Karnataka.