ipl2026 Archives - Samyukta Karnataka

ಪ್ರೇಮಾನಂದ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ ವಿರಾಟ್‌-ಅನುಷ್ಕಾ
ಮಥುರಾ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸತತ ಎರಡನೇ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದ ಬೆನ್ನಲ್ಲೇ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಅವರು ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ವೃಂದಾವನದಲ್ಲಿರುವ ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ ಸ್ಟಾರ್‌ ದಂಪತಿ ಕೆಲ ಸಮಯವನ್ನು ಆಶ್ರಮದಲ್ಲಿಯೇ ಕಳೆದಿದ್ದಾರೆ. ಈ ವೇಳೆ ಮಹಾರಾಜರು ದಂಪತಿಗೆ ಪ್ರವಚನ ಮಾಡಿದ್ದು, ವಿರಾಟ್‌ ಕೈಗೆ ಭಗವದ್ಗೀತೆಯನ್ನು ನೀಡಿದ್ದಾರೆ.

ಈ ಕುರಿತಂತೆ ವಿರಾಟ್‌ ಮತ್ತು ಅನುಷ್ಕಾ ದಂಪತಿ ಆಶ್ರಮಕ್ಕೆ ಭೇಟಿ ನೀಡಿದ್ದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

ಇದೇ ಮೊದಲಲ್ಲ: ವಿರಾಟ್‌ ಮತ್ತು ಅನುಷ್ಕಾ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿದ್ದು, ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಅವರು ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಕೊಹ್ಲಿ ಫಾರ್ಮ್‌ ಕಳೆದುಕೊಂಡಾಗ ಮಹಾರಾಜ್‌ ಭೇಟಿ ಮಾಡಿದ್ದರು. ಆ ಬಳಿಕ ಅವರು ಮತ್ತೆ ಫಾರ್ಮ್‌ಗೆ ಮರಳಿದ್ದಲ್ಲದೇ, ಶತಕಗಳನ್ನು ಸಿಡಿಸಿದರು. ಅಂದಿನಿಂದ ಮಹಾರಾಜರ ಮೇಲಿನ ಭಕ್ತಿ ಮತ್ತಷ್ಟು ಗಟ್ಟಿ ಆಯಿತು ಎನ್ನಲಾಗಿದೆ.

ಜನ್ಮದಿನದಂದೇ ಘೋಷಣೆಯಾಗಲಿದೆಯಾ ಅಣ್ಣಾಮಲೈ ಹೊಸ ಪಕ್ಷ?

The post ಪ್ರೇಮಾನಂದ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ ವಿರಾಟ್‌-ಅನುಷ್ಕಾ appeared first on Samyukta Karnataka.

ಆರ್‌ಸಿಬಿ ಸಂಭ್ರಮದ ಮಧ್ಯೆಯೇ ಸ್ಫೋಟಕ ಬ್ಯಾಟರ್‌ಗೆ ನಿಷೇಧ
ಮುಂಬೈ: ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸಂಭ್ರಮದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಕಹಿ ಸುದ್ದಿಯೊಂದು ಎದುರಾಗಿದೆ.

ತಂಡದ ಸ್ಫೋಟಕ ಬ್ಯಾಟರ್‌ ಟಿಮ್ ಡೇವಿಡ್‌ ಅವರಿಗೆ ಪಂದ್ಯದ ಶುಲ್ಕದ ಶೇ. 50 ರಷ್ಟು ದಂಡ ಹಾಗೂ ಎರಡು ಡಿಮೆರಿಟ್‌ ಅಂಕಗಳನ್ನು ನೀಡಲಾಗಿದೆ. ಹೀಗಾಗಿ ಡೇವಿಡ್‌ ಐಪಿಎಲ್‌ 2027ರ ಮೊದಲ ಪಂದ್ಯದಲ್ಲಿ ಆಡುವಂತಿಲ್ಲ.

ಗುಜರಾತ್‌ ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಅಂಪೈರ್ ನಿತಿನ್ ಮೆನನ್ ಅವರ ಬಳಿಗೆ ಐಸ್ ಬ್ಯಾಗ್ ಎಸೆದಿರುವುದರಿಂದಾಗಿ ಟಿಮ್ ಡೇವಿಡ್ ಅವರನ್ನು ಒಂದು ಪಂದ್ಯಕ್ಕೆ ನಿಷೇಧಿಸಲಾಗಿದೆ.

ಐಸಿಸಿ ನೀತಿ ಸಂಹಿತೆ ಹಂತ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದ್ದು, ಐಪಿಎಲ್ ಆಡಳಿತ ಮಂಡಳಿ ಅಧಿಕೃತವಾಗಿ ಇದನ್ನು ಪ್ರಕಟಿಸಿದೆ.

ಐಪಿಎಲ್ ಫೈನಲ್ ಮ್ಯಾಚ್‌ನಲ್ಲಿ ಅನ್ಯಾಯ

The post ಆರ್‌ಸಿಬಿ ಸಂಭ್ರಮದ ಮಧ್ಯೆಯೇ ಸ್ಫೋಟಕ ಬ್ಯಾಟರ್‌ಗೆ ನಿಷೇಧ appeared first on Samyukta Karnataka.

ಐಪಿಎಲ್ ಫೈನಲ್ ಮ್ಯಾಚ್‌ನಲ್ಲಿ ಅನ್ಯಾಯ
ಬೆಂಗಳೂರು: ಗುಜರಾತ್‌ನವರು ರಾಜಕೀಯ ಪ್ರಭಾವ ಬೀರಿ ನಮ್ಮಿಂದ ಐಪಿಎಲ್ ಫೈನಲ್ ಮ್ಯಾಚ್ ಕಿತ್ತುಕೊಂಡಿದ್ದಾರೆ ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಈ ರೀತಿ ಕಿತ್ತುಕೊಳ್ಳಬಾರದು ಎಂಬ ದೃಷ್ಟಿಯಿಂದ ಏನೇನು ಅಗತ್ಯತವಿದೆಯೋ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದೇವೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದರು.

ಬೆಂಗಳೂರಿನ ಚಿನ್ನಾಸ್ವಾಮಿ ಸ್ಟೇಡಿಯಂಗೆ ಅನ್ಯಾಯವಾಗಿದೆ. ನಮ್ಮಲ್ಲಿರುವ ಯುವಕರಿಗೆ ಅನ್ಯಾಯವಾಗಿದೆ. ನಮ್ಮ ಆರ್‌ಸಿಬಿ ಕರ್ನಾಟಕದ ಹೆಸರಲ್ಲಿ, ನಮ್ಮ ರಾಜ್ಯದವರು ಐಪಿಎಲ್‌ನಲ್ಲಿ ಬಹಳ ಚೆನ್ನಾಗಿ ಆಡಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ ಎಂದರು.

The post ಐಪಿಎಲ್ ಫೈನಲ್ ಮ್ಯಾಚ್‌ನಲ್ಲಿ ಅನ್ಯಾಯ appeared first on Samyukta Karnataka.

RCB ಸತತ ಎರಡನೇ ಬಾರಿ ಚಾಂಪಿಯನ್: ಬೆಣ್ಣೆನಗರಿಯಲ್ಲಿ ಅಭಿಮಾನಿಗಳ ಸಂಭ್ರಮ
ಪಟಾಕಿ, ಡಿಜೆ, ಬೈಕ್ ರ್ಯಾಲಿ: ಆರ್‌ಸಿಬಿ ಗೆಲುವಿಗೆ ದಾವಣಗೆರೆ ಫುಲ್ ಜೋಶ್

ದಾವಣಗೆರೆ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಸತತ ಎರಡನೇ ಬಾರಿ ಕಪ್ ಗೆದ್ದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಪಂದ್ಯದ ಆರಂಭದಿಂದಲೇ ನಗರದ ವಿವಿಧ ಭಾಗಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಸೇರಿ ಪಂದ್ಯ ವೀಕ್ಷಿಸಿದರು. ನಗರದ ಎವಿಕೆ ರಸ್ತೆಯಿಂದ ಅಂಬೇಡ್ಕರ್ ವೃತ್ತಕ್ಕೆ ಸಾಗುವ ಮಾರ್ಗದಲ್ಲಿರುವ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಜವಳಿ ಅಂಗಡಿಯ ಮುಂಭಾಗದಲ್ಲಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿದ್ದು, ನೂರಾರು ಅಭಿಮಾನಿಗಳು ಪಂದ್ಯವನ್ನು ಕಣ್ತುಂಬಿಕೊಂಡರು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡದ ಪ್ರಮುಖ ವಿಕೆಟ್‌ಗಳು ಪತನವಾಗುತ್ತಿದ್ದಂತೆ ಅಭಿಮಾನಿಗಳು ಶಿಳ್ಳೆ, ಕೇಕೆ ಹಾಗೂ ಘೋಷಣೆಗಳ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಆರ್‌ಸಿಬಿ ಬೌಲರ್‌ಗಳ ಪ್ರತಿ ಯಶಸ್ಸಿಗೂ “ಆರ್‌ಸಿಬಿ… ಆರ್‌ಸಿಬಿ…” ಎಂಬ ಘೋಷಣೆಗಳು ಮೊಳಗಿದವು.

ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಸಿಡಿಸಿದಾಗ ಅಭಿಮಾನಿಗಳ ಉತ್ಸಾಹ ಮತ್ತಷ್ಟು ಹೆಚ್ಚಿತು. ಚಿಣ್ಣರು, ಯುವಕರು ಹಾಗೂ ಯುವತಿಯರು ಡಿಜೆ ಸಂಗೀತದ ತಾಳಕ್ಕೆ ಹೆಜ್ಜೆ ಹಾಕಿ ವಿಜಯೋತ್ಸವದಲ್ಲಿ ಭಾಗಿಯಾದರು. ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಖಚಿತವಾಗುತ್ತಿದ್ದಂತೆ ನಗರಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ರಾಮ್ ಆ್ಯಂಡ್ ಕೋ ವೃತ್ತ, ಗುಂಡಿ ವೃತ್ತ ಸೇರಿದಂತೆ ವಿವಿಧ ಪ್ರಮುಖ ವೃತ್ತಗಳಲ್ಲಿ ಅಭಿಮಾನಿಗಳು ಜಮಾಯಿಸಿ ವಿಜಯೋತ್ಸವ ಆಚರಿಸಿದರು. ಹಲವೆಡೆ ಬೈಕ್ ರ್ಯಾಲಿಗಳು ನಡೆದಿದ್ದು, ಆರ್‌ಸಿಬಿ ಧ್ವಜಗಳನ್ನು ಹಿಡಿದು ಯುವಕರು ಸಂಭ್ರಮಾಚರಣೆಯಲ್ಲಿ ತೊಡಗಿದರು.

ಆರ್‌ಸಿಬಿ ಸತತ ಎರಡನೇ ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿರುವುದು ಅಭಿಮಾನಿಗಳ ಸಂತಸವನ್ನು ದ್ವಿಗುಣಗೊಳಿಸಿದ್ದು, ದಾವಣಗೆರೆಯಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

IPL 2026 Final: ಈ ಸಲಾನೂ ಕಪ್‌ ನಮ್ದೇ

The post RCB ಸತತ ಎರಡನೇ ಬಾರಿ ಚಾಂಪಿಯನ್: ಬೆಣ್ಣೆನಗರಿಯಲ್ಲಿ ಅಭಿಮಾನಿಗಳ ಸಂಭ್ರಮ appeared first on Samyukta Karnataka.

IPL ಫೈನಲ್ ಸೋಲಿನ ಬೆನ್ನಲ್ಲೇ GTಗೆ ಮತ್ತೊಂದು ಶಾಕ್: ತಂಡದ ಬಸ್‌ಗೆ ಬೆಂಕಿ
ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ಬಸ್‌ನಲ್ಲಿ ಬೆಂಕಿ; ಆಟಗಾರರು ಸುರಕ್ಷಿತ

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಫೈನಲ್ ಪಂದ್ಯದಲ್ಲಿ ಸೋಲಿನ ನಿರಾಸೆಯಿಂದ ಹೊರಬರುವ ಮುನ್ನವೇ ಗುಜರಾತ್ ಟೈಟಾನ್ಸ್ ತಂಡ ಮತ್ತೊಂದು ಆತಂಕಕಾರಿ ಘಟನೆಯನ್ನು ಎದುರಿಸಿದೆ. ತಂಡದ ಆಟಗಾರರನ್ನು ಹೊತ್ತೊಯ್ಯುತ್ತಿದ್ದ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡ ಘಟನೆ ಭಾನುವಾರ ರಾತ್ರಿ ಅಹಮದಾಬಾದ್‌ನಲ್ಲಿ ನಡೆದಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 5 ವಿಕೆಟ್‌ಗಳ ಸೋಲು ಕಂಡ ಬಳಿಕ ಗುಜರಾತ್ ಟೈಟಾನ್ಸ್ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಹೋಟೆಲ್‌ಗೆ ಮರಳುತ್ತಿದ್ದರು. ಈ ವೇಳೆ ತಂಡ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಹೊಗೆ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಸ್ ಸಿಬ್ಬಂದಿ ಮತ್ತು ಭದ್ರತಾ ಅಧಿಕಾರಿಗಳು ತಕ್ಷಣವೇ ಆಟಗಾರರನ್ನು ಸುರಕ್ಷಿತವಾಗಿ ಹೊರಗೆ ಸ್ಥಳಾಂತರಿಸಿದರು. ಪರಿಣಾಮ ಯಾವುದೇ ಆಟಗಾರರಿಗೆ ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ. ತಕ್ಷಣದ ಕ್ರಮದಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಘಟನೆಯ ಬಳಿಕ ಆಟಗಾರರು ಹಾಗೂ ತಂಡದ ಸದಸ್ಯರು ಸುಮಾರು ಒಂದು ಗಂಟೆ ಕಾಲ ರಸ್ತೆ ಬದಿಯಲ್ಲೇ ಕಾಯಬೇಕಾಯಿತು. ನಂತರ ಆಯೋಜಕರು ಮತ್ತು ಸ್ಥಳೀಯ ಅಧಿಕಾರಿಗಳು ಪರ್ಯಾಯ ಬಸ್ ವ್ಯವಸ್ಥೆ ಮಾಡಿ, ಎಲ್ಲರನ್ನೂ ಸುರಕ್ಷಿತವಾಗಿ ಹೋಟೆಲ್‌ಗೆ ಕರೆದೊಯ್ದರು.

ಪ್ರಾಥಮಿಕ ತನಿಖೆಯ ಪ್ರಕಾರ ಬಸ್‌ನ ವಿದ್ಯುತ್ ವ್ಯವಸ್ಥೆಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಬಸ್‌ಗೆ ಸಂಭವಿಸಿದ ಹಾನಿಯ ಪ್ರಮಾಣವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಈ ಘಟನೆ ಐಪಿಎಲ್ 2026ರ ಫೈನಲ್ ಸೋಲಿನ ಕೆಲವೇ ಗಂಟೆಗಳ ಬಳಿಕ ಸಂಭವಿಸಿರುವುದರಿಂದ ಗುಜರಾತ್ ಟೈಟಾನ್ಸ್ ತಂಡಕ್ಕೆ ಇದು ಮತ್ತೊಂದು ಆಘಾತವಾಗಿ ಪರಿಣಮಿಸಿದೆ. ಆದರೆ ಎಲ್ಲ ಆಟಗಾರರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದ್ದು, ಅಭಿಮಾನಿಗಳ ಆತಂಕಕ್ಕೆ ತೆರೆ ಎಳೆದಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಆಟಗಾರರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಬಳಿಕ ತಂಡದ ಸದಸ್ಯರು ಸುರಕ್ಷಿತರಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದ ನಂತರ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಬಿಗ್ ಶಾಕ್ – ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಹೆಚ್ಚಳ

The post IPL ಫೈನಲ್ ಸೋಲಿನ ಬೆನ್ನಲ್ಲೇ GTಗೆ ಮತ್ತೊಂದು ಶಾಕ್: ತಂಡದ ಬಸ್‌ಗೆ ಬೆಂಕಿ appeared first on Samyukta Karnataka.

IPL 2026 Final: ಈ ಸಲಾನೂ ಕಪ್‌ ನಮ್ದೇ
ಅಹಮದಾಬಾದ್:‌ ವಿರಾಟ್‌ ಕೊಹ್ಲಿ ಅದ್ಭುತ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸತತ ಎರಡನೇ ಬಾರಿಗೆ ಐಪಿಎಲ್‌ ಚಾಂಪಿಯನ್‌ ಪಟ್ಟ ಅಲಂಕರಿಸಿತು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ನೀಡಿದ್ದ 156 ರನ್‌ಗಳ ಸಾಧಾರಣ ಗೆಲುವಿನ ಗುರಿಯನ್ನು ಬೆಂಗಳೂರು 12 ಎಸೆತಗಳು ಬಾಕಿ ಇರುವಂತೆ ತಲುಪಿತು.

ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಆರಂಭದಲ್ಲಿ ವೆಂಕಟೇಶ ಅಯ್ಯರ್‌ ಮತ್ತು ವಿರಾಟ್‌ ಕೊಹ್ಲಿ ಜೋಡಿ ಉತ್ತಮ ಅಡಿಪಾಯ ಹಾಕಿತು. ಈ ಜೋಡಿ ಕೇವಲ 27 ಎಸೆತದಲ್ಲಿ 62 ರನ್‌ಗಳ ಜತೆಯಾಟ ನಡೆಸಿತು.

ವೆಂಕಟೇಶ ಅಯ್ಯರ್‌ 16 ಎಸೆತದಲ್ಲಿ 4 ಬೌಂಡರಿ, 2 ಸಿಕ್ಸರ್‌ನಿಂದ 32 ರನ್ ಗಳಿಸಿ ಮೊಹಮ್ಮದ ಸಿರಾಜ್‌ ಎಸೆತದಲ್ಲಿ ಕಗಿಸೊ ರಬಾಡಾಗೆ ಕ್ಯಾಚ್‌ ನೀಡಿ ಔಟಾದರು. ಇವರ ಹಿಂದೆಯೇ ದೇವದತ್ತ ಪಡಿಕ್ಕಲ್‌ (1) ಪೆವಿಲಿಯನ್‌ ಸೇರಿದರು.

ಮೂರನೇ ವಿಕೆಟ್‌ಗೆ ಕ್ರಿಸ್‌ಗೆ ಬಂದ ರಜತ್‌ ಪಾಟೀದಾರ್‌ (15) ರಶೀದ್‌ ಖಾನ್‌ ಎಸೆತದಲ್ಲಿ ಸಿಕ್ಸರ್‌ ಬಾರಿಸಲು ಹೋಗಿ ಕಗಿಸೊ ರಬಾಡಾಗೆ ಕ್ಯಾಚ್‌ ನೀಡಿ ಹೊರನಡೆದರು. ಇವರ ಹಿಂದೆಯೇ ಕೃನಾಲ್‌ ಪಾಂಡ್ಯ ಅದೇ ಓವರ್‌ನಲ್ಲಿ ಎಲ್‌ಬಿಡಬ್ಲುಗೆ ಬಲಿಯಾದರು.

8.5 ಓವರ್‌ಗಳಲ್ಲಿ 91 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡ ಆರ್‌ಸಿಬಿಗೆ ಕೊಹ್ಲಿ ಮತ್ತು ಟಿಮ್‌ ಡೇವಿಡ್‌ 31 ಎಸೆತದಲ್ಲಿ 41 ರನ್‌ ಗಳಿಸಿ ಆಸರೆಯಾದರು. ಈ ವೇಳೆ ಡೇವಿಡ್‌ ಅರ್ಷದ್‌ ಖಾನ್‌ ಎಸೆತದಲ್ಲಿ ವಿಕೆಟ್‌ ಕೀಪರ್‌ ಬಟ್ಲರ್‌ಗೆ ಕ್ಯಾಚ್‌ ಕೊಟ್ಟು ಔಟಾದರು.

ಇನ್ನಿಂಗ್ಸ್‌ ಆರಂಭಿಸಿದ್ದ ವಿರಾಟ್‌ ಕೊಹ್ಲಿ ಕೇವಲ 42 ಎಸೆತದಲ್ಲಿ 9 ಬೌಂಡರಿ, 3 ಸಿಕ್ಸರ್‌ನಿಂದ ಅಜೇಯ 75 ರನ್‌ ಗಳಿಸಿ ಆರ್‌ಸಿಬಿಗೆ ಮತ್ತೊಮ್ಮೆ ಚಾಂಪಿಯನ್‌ ಪಟ್ಟ ಅಲಂಕರಿಸುವಂತೆ ಮಾಡಿದರು.

ಇದಕ್ಕೂ ಮುನ್ನ ಗುಜರಾತ್‌ ಟೈಟನ್ಸ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 155 ರನ್‌ಗಳಿಸಿ, ಆರ್‌ಸಿಬಿ ಗೆಲುವಿಗೆ 156 ರನ್‌ ಗುರಿ ನೀಡಿತು.

ಆರಂಭದಲ್ಲಿಯೇ ಮೊದಲ ಓವರ್‌ನಲ್ಲಿಯೇ 13 ರನ್‌ಗಳಿಸಿ ಬೃಹತ್‌ ಮೊತ್ತ ಗಳಿಸುವ ಯೋಜನೆ ಹಾಕಿದ್ದ ಗುಜರಾತ್‌ ಮೂರನೇ ಓವರ್‌ನ ಎರಡನೇ ಎಸೆತದಲ್ಲಿ ಶುಭಮನ್‌ ಗಿಲ್‌ (10) ವಿಕೆಟ್‌ ಕಳೆದುಕೊಂಡಿತು.

ನಾಲ್ಕನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸಾಯಿ ಸುದರ್ಶನ (12) ಭುವನೇಶ್ವರ ಕುಮಾರ್‌ಗೆ ವಿಕೆಟ್‌ ಕೊಟ್ಟು ಹೊರನಡೆದರು. ಪವರ್‌ ಪ್ಲೇ ಅಂತ್ಯಕ್ಕೆ 45ಕ್ಕೆ ಪ್ರಮುಖ ಎರಡು ವಿಕೆಟ್‌ ಕಳೆದುಕೊಂಡು ಗುಜರಾತ್‌ ಸಂಕಷ್ಟಕ್ಕೆ ಸಿಲುಕಿತು.

ನಿಶಾಂತ್ ಸಿಂಧು (20), ಜೋಸ್ ಬಟ್ಲರ್ (19), ಅರ್ಷದ್ ಖಾನ್ (15) ಅಲ್ಪ ಮೊತ್ತದ ಕಾಣಿಕೆ ನೀಡಿ ಹೊರನಡೆದರು. ಆದರೆ, ರಾಹುಲ್ ತೆವಾಟಿಯಾ, ಜೇಸನ್ ಹೋಲ್ಡರ್ ಮತ್ತು ರಶೀದ್ ಖಾನ್ ತಲಾ 7 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.

ಏಕಾಂಗಿಯಾಗಿ ಹೋರಾಟ ಮಾಡಿದ ವಾಷಿಂಗ್ಟನ್‌ ಸುಂದರ 37 ಎಸೆತದಲ್ಲಿ 5 ಬೌಂಡರಿ ಸೇರಿದಂತೆ ಅಜೇಯ 50 ರನ್‌ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಆರ್‌ಸಿಬಿ ಪರ ರಾಸಿಖ್ ಸಲಾಮ್ ದಾರ್ 37ಕ್ಕೆ 3 ವಿಕೆಟ್‌ ಪಡೆದರೆ, ಭುವನೇಶ್ವರ್ ಕುಮಾರ್ 29ಕ್ಕೆ 2, ಜೋಶ್ ಹ್ಯಾಜಲ್ವುಡ್ 37ಕ್ಕೆ 2 ಮತ್ತು ಕೃನಾಲ್ ಪಾಂಡ್ಯ 23ಕ್ಕೆ 1 ವಿಕೆಟ್‌ ಪಡೆದರು.

The post IPL 2026 Final: ಈ ಸಲಾನೂ ಕಪ್‌ ನಮ್ದೇ appeared first on Samyukta Karnataka.

IPL 2026 Final: ಆರ್‌ಸಿಬಿ ಬೌಲಿಂಗ್‌ ದಾಳಿಗೆ ಪರದಾಡಿದ ಗುಜರಾತ್
ಅಹಮದಾಬಾದ್:‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸಂಘಟಿತ ಪ್ರದರ್ಶನದ ಮಧ್ಯೆಯೂ ವಾಷಿಂಗ್ಟನ್‌ ಸುಂದರ ಅರ್ಧಶತಕದ ನೆರವಿನಿಂದ ಗುಜರಾತ್‌ ಟೈಟನ್ಸ್‌ ತಂಡ ಆರ್‌ಸಿಬಿಗೆ 156 ರನ್‌ ಗುರಿ ನೀಡಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಆರ್‌ಸಿಬಿ, ಗುಜರಾತ್‌ ತಂಡ ರನ್‌ ಗಳಿಸಲು ಪರದಾಡುವಂತೆ ಮಾಡಿತು.

ನಿಗದಿತ 20 ಓವರ್‌ಗಳಲ್ಲಿ ಗುಜರಾತ್‌ ಟೈಟನ್ಸ್‌ 8 ವಿಕೆಟ್‌ ಕಳೆದುಕೊಂಡು 155 ರನ್‌ ಗಳಿಸಿ, ಆರ್‌ಸಿಬಿ ಗೆಲುವಿಗೆ 156 ರನ್‌ ಗುರಿ ನೀಡಿತು.

ಆರಂಭದ ಮೊದಲ ಓವರ್‌ನಲ್ಲಿಯೇ 13 ರನ್‌ ಗಳಿಸಿ ಬೃಹತ್‌ ಮೊತ್ತ ಗಳಿಸುವ ಯೋಜನೆ ಹಾಕಿದ್ದ ಗುಜರಾತ್‌ ಮೂರನೇ ಓವರ್‌ನ ಎರಡನೇ ಎಸೆತದಲ್ಲಿ ಶುಭಮನ್‌ ಗಿಲ್‌ (10) ವಿಕೆಟ್‌ ಕಳೆದುಕೊಂಡಿತು.

ನಾಲ್ಕನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸಾಯಿ ಸುದರ್ಶನ (12) ಭುವನೇಶ್ವರ ಕುಮಾರ್‌ಗೆ ವಿಕೆಟ್‌ ಕೊಟ್ಟು ಹೊರನಡೆದರು. ಪವರ್‌ ಪ್ಲೇ ಅಂತ್ಯಕ್ಕೆ 45ಕ್ಕೆ ಪ್ರಮುಖ ಎರಡು ವಿಕೆಟ್‌ ಕಳೆದುಕೊಂಡು ಗುಜರಾತ್‌ ಸಂಕಷ್ಟಕ್ಕೆ ಸಿಲುಕಿತು.

ನಿಶಾಂತ್ ಸಿಂಧು (20), ಜೋಸ್ ಬಟ್ಲರ್ (19), ಅರ್ಷದ್ ಖಾನ್ (15) ಅಲ್ಪ ಮೊತ್ತದ ಕಾಣಿಕೆ ನೀಡಿ ಹೊರನಡೆದರು. ರಾಹುಲ್ ತೆವಾಟಿಯಾ, ಜೇಸನ್ ಹೋಲ್ಡರ್ ಮತ್ತು ರಶೀದ್ ಖಾನ್ ತಲಾ 7 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.

ಏಕಾಂಗಿಯಾಗಿ ಹೋರಾಟ ಮಾಡಿದ ವಾಷಿಂಗ್ಟನ್‌ ಸುಂದರ 37 ಎಸೆತದಲ್ಲಿ 5 ಬೌಂಡರಿ ಸೇರಿದಂತೆ ಅಜೇಯ 50 ರನ್‌ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಆರ್‌ಸಿಬಿ ಪರ ರಾಸಿಖ್ ಸಲಾಮ್ ದಾರ್ 37ಕ್ಕೆ 3 ವಿಕೆಟ್‌ ಪಡೆದರೆ, ಭುವನೇಶ್ವರ್ ಕುಮಾರ್ 29ಕ್ಕೆ 2, ಜೋಶ್ ಹ್ಯಾಜಲ್ವುಡ್ 37ಕ್ಕೆ 2 ಮತ್ತು ಕೃನಾಲ್ ಪಾಂಡ್ಯ 23ಕ್ಕೆ 1 ವಿಕೆಟ್‌ ಪಡೆದರು.

RCB ತಂಡಕ್ಕೆ ಶುಭ ಕೋರಿದ ಭಾವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

The post IPL 2026 Final: ಆರ್‌ಸಿಬಿ ಬೌಲಿಂಗ್‌ ದಾಳಿಗೆ ಪರದಾಡಿದ ಗುಜರಾತ್ appeared first on Samyukta Karnataka.

IPL Final: ಟಾಸ್‌ ಗೆದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು
ಅಹಮದಾಬಾದ್:‌ ಐಪಿಎಲ್‌ ಪೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಟಾಸ್‌ನಲ್ಲಿ ಗೆಲುವು ಸಾಧಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಲೀಗ್ ಹಂತದಲ್ಲಿ ತಲಾ 18 ಅಂಕಗಳನ್ನು ಗಳಿಸಿ ನೆಟ್ ರನ್‌ರೇಟ್ ಆಧಾರದಲ್ಲಿ ಮೊದಲ ಎರಡು ಸ್ಥಾನ ಪಡೆದಿದ್ದ ಈ ಉಭಯ ತಂಡಗಳ ನಡುವಿನ ಈ ಪಂದ್ಯ ರೋಚಕತೆಯ ಪರಾಕಾಷ್ಠೆ ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ.

ಕ್ವಾಲಿಫೈಯರ್ 1 ಪಂದ್ಯದಲ್ಲಿ ಧರ್ಮಶಾಲಾದಲ್ಲಿ ಗುಜರಾತ್ ವಿರುದ್ಧವೇ 92 ರನ್‌ಗಳ ಬೃಹತ್ ಜಯ ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ನಾಯಕ ರಜತ್ ಪಾಟಿದಾರ್ ಅವರ ಅಬ್ಬರದ ಅಜೇಯ 93 (33 ಎಸೆತ) ರನ್‌ಗಳ ನೆರವಿನಿಂದ ಐಪಿಎಲ್ ಪ್ಲೇ-ಆಫ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ (254/5) ಕಲೆಹಾಕಿದ್ದ ಆರ್‌ಸಿಬಿ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಮೋಘ ಲಯದಲ್ಲಿದೆ.

ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ದೇವದತ್ ಪಡಿಕ್ಕಲ್ ಮತ್ತು ಕೃನಾಲ್ ಪಾಂಡ್ಯ ಅವರನ್ನೊಳಗೊಂಡ ಬ್ಯಾಟಿಂಗ್ ಪಡೆ ಹಾಗೂ ಭುವನೇಶ್ವರ್ ಕುಮಾರ್, ಜೇಕಬ್ ಡಫಿ ಮತ್ತು ಜೋಶ್ ಹ್ಯಾಜಲ್‌ವುಡ್ ಅವರ ವೇಗದ ಬೌಲಿಂಗ್ ಪಡೆ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದೆ.

ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ವಿರುದ್ಧ ಹೀನಾಯವಾಗಿ ಸೋತರೂ, ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ.

ಶುಭಮನ್ ಗಿಲ್ ಅವರ ಆಕರ್ಷಕ ಬ್ಯಾಟಿಂಗ್, ಜೋಸ್ ಬಟ್ಲರ್ ಅವರ ಸ್ಫೋಟಕ ಆಟ ಮತ್ತು ರಾಹುಲ್ ತೇವಾಟಿಯಾ ಅವರ ಫಿನಿಶಿಂಗ್ ಸಾಮರ್ಥ್ಯ ತಂಡದ ಪ್ರಮುಖ ಬಲವಾಗಿದೆ. ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ ಮತ್ತು ರಶೀದ್ ಖಾನ್ ಅವರಂತಹ ವಿಶ್ವದರ್ಜೆಯ ಆಟಗಾರರು ಆರ್‌ಸಿಬಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ತಂತ್ರ ರೂಪಿಸುತ್ತಿದ್ದಾರೆ.

IPL 2026: ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? ಇಲ್ಲಿದೆ ನೋಡಿ

The post IPL Final: ಟಾಸ್‌ ಗೆದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು appeared first on Samyukta Karnataka.

RCB ತಂಡಕ್ಕೆ ಶುಭ ಕೋರಿದ ಭಾವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು: ಐಪಿಎಲ್‌ ಫೈನಲ್‌ ಪ್ರವೇಶಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಸಲನೂ ಕಪ್‌ ಗೆಲ್ಲಲಿ ಎಂದು ಭಾವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಶುಭಕೋರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, “ಹಾಲಿ ಚಾಂಪಿಯನ್‌ಗಳೇ, ಶುಭವಾಗಲಿ! ಇದು ಆರ್‌ಸಿಬಿ ಹೊಸ ಅಧ್ಯಾಯ.”

“ಮೊದಲ ಪಂದ್ಯದಿಂದ ಫೈನಲ್‌ವರೆಗೆ, ಆರ್‌ಸಿಬಿ ತನ್ನ ದೃಢನಿಶ್ಚಯ, ಶಿಸ್ತು ಮತ್ತು ಅಸಾಧಾರಣ ತಂಡದ ಕೆಲಸವನ್ನು ಪ್ರದರ್ಶಿಸಿದೆ. ತಂಡವು ಮತ್ತೊಮ್ಮೆ ಬೆಂಗಳೂರನ್ನು ಹೆಮ್ಮೆಪಡುವಂತೆ ಮಾಡಿದೆ ಮತ್ತು ಲಕ್ಷಾಂತರ ಅಭಿಮಾನಿಗಳನ್ನು ಭರವಸೆ ಮತ್ತು ಆಚರಣೆಯಲ್ಲಿ ಒಂದುಗೂಡಿಸಿದೆ.”

“IPLFinal2026 ಗಾಗಿ ಶುಭ ಹಾರೈಸುತ್ತೇನೆ. ಇಂದಿನ ಪಂದ್ಯವು ನಮ್ಮ ಬೆಂಗಳೂರಿಗೆ ಮತ್ತೊಂದು ಅದ್ಭುತ ವಿಜಯದೊಂದಿಗೆ ಕೊನೆಗೊಳ್ಳಲಿ ಮತ್ತು ಕರ್ನಾಟಕದಾದ್ಯಂತ ಕ್ರಿಕೆಟ್ ಪ್ರಿಯರಿಗೆ ಸಂತೋಷವನ್ನು ತರಲಿ.” ಎಂದು ಅವರು ಬರೆದುಕೊಂಡಿದ್ದಾರೆ.

All the best, reigning champions!
ಇದು RCBಯ ಹೊಸ ಅಧ್ಯಾಯ.

From the first match to the final, RCB has showcased grit, discipline, and exceptional teamwork. The team has once again made Bengaluru proud and united millions of fans in hope and celebration.

Wishing @RCBTweets the very… pic.twitter.com/pxfNaCcN45
— DK Shivakumar (@DKShivakumar) May 31, 2026

The post RCB ತಂಡಕ್ಕೆ ಶುಭ ಕೋರಿದ ಭಾವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ appeared first on Samyukta Karnataka.

IPL 2026: ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? ಇಲ್ಲಿದೆ ನೋಡಿ
ಅಹಮದಾಬಾದ್:‌ ಇಂಡಿಯನ್‌ ಪ್ರಿಮಿಯರ್‌ ಲೀಗ್‌ ಪಂದ್ಯಾವಳಿ ಸದ್ಯ ಅಂತಿಮ ಘಟ್ಟಕ್ಕೆ ತಲುಪಿದೆ. ಇಂದು ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಗುಜರಾತ್‌ ಟೈಟನ್ಸ್‌ ತಂಡ ಪ್ರಶಸ್ತಿಗಾಗಿ ಸೆಣಸಾಡಲಿವೆ.

ಲೀಗ್‌ನಲ್ಲಿ ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನವನ್ನು ಪಡೆದು ಕ್ವಾಲಿಫೈ ಆದ ಆರ್‌ಸಿಬಿ ಮತ್ತು ಜಿಟಿ ಎರಡೂ ತಂಡಗಳೇ ಮತ್ತೆ ಫೈನಲ್‌ನಲ್ಲಿ ಕಾದಡಲಿದ್ದು, ಇಲ್ಲಿ ಎರಡು ತಂಡಗಳಿಗೆ ಸಿಗುವ ಬಹುಮಾನದ ಮೊತ್ತ ಎಷ್ಟು ಎನ್ನುವುದು ಇಲ್ಲಿದೆ ನೋಡಿ.

ಐಪಿಎಲ್‌ನಲ್ಲಿ ಭಾಗವಹಿಸಿದ್ದ ಹತ್ತು ತಂಡಗಳ ಪೈಕಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದ ತಂಡಗಳಿಗೆ 46.5 ಕೋಟಿ ರೂ.ಗಳನ್ನು ಬಹುಮಾನವಾಗಿ ನೀಡಲು ಭಾರತೀಯ ಕ್ರಿಕಟ್‌ ಮಂಡಳಿ ಮೀಸಲಿಟ್ಟಿದೆ.

ವಿಜೇತ ತಂಡಕ್ಕೆ ಬರೋಬ್ಬರಿ 20 ಕೋಟಿ ರೂ. ಗಳನ್ನು ನೀಡಲಾಗುತ್ತಿದ್ದು, ರನ್ನರ್‌ ಅಪ್‌ ತಂಡಕ್ಕೆ 13 ಕೋಟಿ ರೂ. ಗಳನ್ನು ನೀಡಲಾಗುತ್ತಿದೆ. ಇನ್ನು ಈಗಾಗಲೇ ಮೂರನೇ ಸ್ಥಾನ ಪಡೆದಿರುವ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ 7 ಕೋಟಿ ರೂ. ಮತ್ತು ನಾಲ್ಕನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 6.5 ಕೋಟಿ ರೂ.ಗಳನ್ನು ತನ್ನದಾಗಿಸಿಕೊಂಡಿದೆ.

ಐಪಿಎಲ್ ಮಹಾಸಮರ: ಆರ್‌ಸಿಬಿ–ಗುಜರಾತ್ ನಡುವೆ ಫೈನಲ್ ಫೈಟ್

The post IPL 2026: ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? ಇಲ್ಲಿದೆ ನೋಡಿ appeared first on Samyukta Karnataka.