IPL 2026 Archives - Samyukta Karnataka

ಚಾಂಪಿಯನ್ RCBಗೆ ವಿರಾಟ್ ವಿಶೇಷ ನಮನ: ವೈರಲ್ ಆದ ಪೋಸ್ಟ್
‘ಈ ಸ್ಥಳವೇ ನನ್ನ ಮನೆ’ : RCB ಪ್ರಶಸ್ತಿ ಗೆಲುವಿನ ಬಳಿಕ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿರಾಟ್ ಕೊಹ್ಲಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 2026ರ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಕೆಲವೇ ದಿನಗಳ ಬಳಿಕ ತಂಡದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ತಂಡದ ಯಶಸ್ವಿ ಪಯಣ, ಆಟಗಾರರ ನಡುವಿನ ಬಾಂಧವ್ಯ ಹಾಗೂ ಅಭಿಮಾನಿಗಳ ಬೆಂಬಲವನ್ನು ಸ್ಮರಿಸಿಕೊಂಡಿರುವ ಕೊಹ್ಲಿಯ ಪೋಸ್ಟ್ ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಇಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಕೊಹ್ಲಿ, “ನಾವು ಈ ಋತುವನ್ನು ನಂಬಿಕೆಯೊಂದಿಗೆ ಆರಂಭಿಸಿದ್ದೆವು. ಸತತ ಪ್ರಶಸ್ತಿಗಳೊಂದಿಗೆ ಅದನ್ನು ಮುಗಿಸಿದ್ದೇವೆ. ಈ ತಂಡ ಪ್ರತಿಯೊಂದು ಭಾವನೆಯನ್ನೂ ಒಟ್ಟಿಗೆ ಅನುಭವಿಸಿದೆ. ಗೆಲುವು, ಒತ್ತಡ, ಅಡೆತಡೆಗಳು ಹಾಗೂ ಅಚಲ ಬೆಂಬಲದ ನಡುವೆ ಸಾಗಿದ ಈ ಪಯಣ ಇನ್ನಷ್ಟು ವಿಶೇಷವಾಗಿದೆ. ಏಕೆಂದರೆ ಇದು ನನ್ನ ಮನೆ” ಎಂದು ಬರೆದುಕೊಂಡಿದ್ದಾರೆ.

ಸತತ ಎರಡನೇ ಬಾರಿ ಚಾಂಪಿಯನ್ ಆದ RCB : ಮೇ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) , ಗುಜರಾತ್ ಟೈಟಾನ್ಸ್ (GT) ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿ ಪ್ರಶಸ್ತಿ ಗೆದ್ದಿತ್ತು. ಈ ಮೂಲಕ RCB ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದ ಸಾಧನೆ ಮಾಡಿತು.

Started the season with belief. Ended with back to back titles. 🏆
This team lived every emotion together. The highs, the pressure, the hurdles, and the unwavering support. It feels extra special because… this place is HOME! ❤️ @RCBTweets pic.twitter.com/H02HdsHCX3
— Virat Kohli (@imVkohli) June 9, 2026

ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಮುಂಬೈ ಇಂಡಿಯನ್ಸ್ (MI) ಬಳಿಕ ಐಪಿಎಲ್ ಇತಿಹಾಸದಲ್ಲಿ ಪ್ರಶಸ್ತಿಯನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಫೈನಲ್‌ನಲ್ಲಿ ಕೊಹ್ಲಿಯ ಮಿಂಚಿನ ಆಟ : ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವನ್ನು RCB ಬೌಲರ್‌ಗಳು 20 ಓವರ್‌ಗಳಲ್ಲಿ 155/8ಕ್ಕೆ ನಿಯಂತ್ರಿಸಿದರು. ಗುಜರಾತ್ ಪರ ವಾಷಿಂಗ್ಟನ್ ಸುಂದರ್ ಅಜೇಯ ಅರ್ಧಶತಕ ದಾಖಲಿಸಿದರೂ, ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.

RCB ಪರ ರಸಿಕ್ ದಾರ್ ಸಲಾಮ್ 3 ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹ್ಯಾಜಲ್‌ವುಡ್ ತಲಾ ಎರಡು ವಿಕೆಟ್ ಪಡೆದು ಪ್ರಮುಖ ಕೊಡುಗೆ ನೀಡಿದರು. 156 ರನ್‌ಗಳ ಗುರಿ ಬೆನ್ನಟ್ಟಿದ RCBಗೆ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 62 ರನ್‌ಗಳ ಜೊತೆಯಾಟ ನಿರ್ಮಿಸಿದ ಈ ಜೋಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿತು.

ನಂತರ ಗುಜರಾತ್ ಟೈಟಾನ್ಸ್ ಕೆಲವು ವಿಕೆಟ್‌ಗಳನ್ನು ಕಬಳಿಸಿ ಪಂದ್ಯದಲ್ಲಿ ಹೋರಾಟ ತೋರಿದರೂ, ಕೊಹ್ಲಿ 42 ಎಸೆತಗಳಲ್ಲಿ 75 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿದ್ದವು. ಅಂತಿಮವಾಗಿ RCB ಐದು ವಿಕೆಟ್‌ಗಳ ಜಯ ಸಾಧಿಸಿ ಮತ್ತೊಂದು ಐತಿಹಾಸಿಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಮತ್ತೊಂದು ಅದ್ಭುತ ಋತು : ಐಪಿಎಲ್ 2026ರ ಅವಧಿಯಲ್ಲಿ ಕೊಹ್ಲಿ ಮತ್ತೊಮ್ಮೆ ಸ್ಥಿರ ಪ್ರದರ್ಶನ ತೋರಿದರು. 16 ಇನ್ನಿಂಗ್ಸ್‌ಗಳಲ್ಲಿ 675 ರನ್ ಗಳಿಸಿದ ಅವರು ಟೂರ್ನಿಯ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಋತುವನ್ನು ಮುಗಿಸಿದರು. 56.25ರ ಸರಾಸರಿ ಹಾಗೂ 165.84ರ ಸ್ಟ್ರೈಕ್‌ರೇಟ್‌ನೊಂದಿಗೆ ಬ್ಯಾಟ್ ಬೀಸಿದ ಕೊಹ್ಲಿ ಒಂದು ಶತಕ ಹಾಗೂ ಐದು ಅರ್ಧಶತಕಗಳನ್ನು ದಾಖಲಿಸಿ RCB ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ : ಕೊಹ್ಲಿಯ ಭಾವನಾತ್ಮಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. RCB ಅಭಿಮಾನಿಗಳು ತಂಡದ ಯಶಸ್ಸಿನ ಹಿಂದಿನ ಅವರ ಬದ್ಧತೆ, ನಾಯಕತ್ವ ಹಾಗೂ ತಂಡದ ಮೇಲಿನ ಪ್ರೀತಿಯನ್ನು ಶ್ಲಾಘಿಸುತ್ತಿದ್ದಾರೆ.

RCB ಮತ್ತು ಕೊಹ್ಲಿಯ ನಡುವಿನ ಬಾಂಧವ್ಯ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದು, “ಈ ಸ್ಥಳವೇ ನನ್ನ ಮನೆ” ಎಂಬ ಅವರ ಮಾತುಗಳು ಅಭಿಮಾನಿಗಳಲ್ಲಿ ವಿಶೇಷ ಭಾವನಾತ್ಮಕ ಸ್ಪಂದನೆ ಮೂಡಿಸಿವೆ.

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರಾಬಲ್ಯ: 102 ಚಿನ್ನ ಸೇರಿ 114 ಪದಕಗಳ ಸಾಧನೆ

The post ಚಾಂಪಿಯನ್ RCBಗೆ ವಿರಾಟ್ ವಿಶೇಷ ನಮನ: ವೈರಲ್ ಆದ ಪೋಸ್ಟ್ appeared first on Samyukta Karnataka.

RCB ಸತತ ಎರಡನೇ ಬಾರಿ ಚಾಂಪಿಯನ್: ಬೆಣ್ಣೆನಗರಿಯಲ್ಲಿ ಅಭಿಮಾನಿಗಳ ಸಂಭ್ರಮ
ಪಟಾಕಿ, ಡಿಜೆ, ಬೈಕ್ ರ್ಯಾಲಿ: ಆರ್‌ಸಿಬಿ ಗೆಲುವಿಗೆ ದಾವಣಗೆರೆ ಫುಲ್ ಜೋಶ್

ದಾವಣಗೆರೆ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಸತತ ಎರಡನೇ ಬಾರಿ ಕಪ್ ಗೆದ್ದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಪಂದ್ಯದ ಆರಂಭದಿಂದಲೇ ನಗರದ ವಿವಿಧ ಭಾಗಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಸೇರಿ ಪಂದ್ಯ ವೀಕ್ಷಿಸಿದರು. ನಗರದ ಎವಿಕೆ ರಸ್ತೆಯಿಂದ ಅಂಬೇಡ್ಕರ್ ವೃತ್ತಕ್ಕೆ ಸಾಗುವ ಮಾರ್ಗದಲ್ಲಿರುವ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಜವಳಿ ಅಂಗಡಿಯ ಮುಂಭಾಗದಲ್ಲಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿದ್ದು, ನೂರಾರು ಅಭಿಮಾನಿಗಳು ಪಂದ್ಯವನ್ನು ಕಣ್ತುಂಬಿಕೊಂಡರು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡದ ಪ್ರಮುಖ ವಿಕೆಟ್‌ಗಳು ಪತನವಾಗುತ್ತಿದ್ದಂತೆ ಅಭಿಮಾನಿಗಳು ಶಿಳ್ಳೆ, ಕೇಕೆ ಹಾಗೂ ಘೋಷಣೆಗಳ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಆರ್‌ಸಿಬಿ ಬೌಲರ್‌ಗಳ ಪ್ರತಿ ಯಶಸ್ಸಿಗೂ “ಆರ್‌ಸಿಬಿ… ಆರ್‌ಸಿಬಿ…” ಎಂಬ ಘೋಷಣೆಗಳು ಮೊಳಗಿದವು.

ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಸಿಡಿಸಿದಾಗ ಅಭಿಮಾನಿಗಳ ಉತ್ಸಾಹ ಮತ್ತಷ್ಟು ಹೆಚ್ಚಿತು. ಚಿಣ್ಣರು, ಯುವಕರು ಹಾಗೂ ಯುವತಿಯರು ಡಿಜೆ ಸಂಗೀತದ ತಾಳಕ್ಕೆ ಹೆಜ್ಜೆ ಹಾಕಿ ವಿಜಯೋತ್ಸವದಲ್ಲಿ ಭಾಗಿಯಾದರು. ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಖಚಿತವಾಗುತ್ತಿದ್ದಂತೆ ನಗರಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ರಾಮ್ ಆ್ಯಂಡ್ ಕೋ ವೃತ್ತ, ಗುಂಡಿ ವೃತ್ತ ಸೇರಿದಂತೆ ವಿವಿಧ ಪ್ರಮುಖ ವೃತ್ತಗಳಲ್ಲಿ ಅಭಿಮಾನಿಗಳು ಜಮಾಯಿಸಿ ವಿಜಯೋತ್ಸವ ಆಚರಿಸಿದರು. ಹಲವೆಡೆ ಬೈಕ್ ರ್ಯಾಲಿಗಳು ನಡೆದಿದ್ದು, ಆರ್‌ಸಿಬಿ ಧ್ವಜಗಳನ್ನು ಹಿಡಿದು ಯುವಕರು ಸಂಭ್ರಮಾಚರಣೆಯಲ್ಲಿ ತೊಡಗಿದರು.

ಆರ್‌ಸಿಬಿ ಸತತ ಎರಡನೇ ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿರುವುದು ಅಭಿಮಾನಿಗಳ ಸಂತಸವನ್ನು ದ್ವಿಗುಣಗೊಳಿಸಿದ್ದು, ದಾವಣಗೆರೆಯಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

IPL 2026 Final: ಈ ಸಲಾನೂ ಕಪ್‌ ನಮ್ದೇ

The post RCB ಸತತ ಎರಡನೇ ಬಾರಿ ಚಾಂಪಿಯನ್: ಬೆಣ್ಣೆನಗರಿಯಲ್ಲಿ ಅಭಿಮಾನಿಗಳ ಸಂಭ್ರಮ appeared first on Samyukta Karnataka.

IPL 2026 ಪ್ಲೇಆಫ್ ಧಮಾಕಾ: ಅಗ್ರಸ್ಥಾನದೊಂದಿಗೆ ನಾಕೌಟ್‌ಗೆ ಲಗ್ಗೆ ಇಟ್ಟ ಹಾಲಿ ಚಾಂಪಿಯನ್ ಆರ್‌ಸಿಬಿ!
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ ರೋಮಾಂಚಕ ಪಂದ್ಯಗಳು ಮುಗಿದಿದ್ದು, ಈಗ ಅಸಲಿ ನಾಕೌಟ್ ಯುದ್ಧಕ್ಕೆ ವೇದಿಕೆ ಸಜ್ಜಾಗಿದೆ. ಹತ್ತೂ ತಂಡಗಳ ನಡುವಿನ ತೀವ್ರ ಪೈಪೋಟಿಯ ನಂತರ, ಅಂತಿಮವಾಗಿ ಆರ್‌ಸಿಬಿ, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇಆಫ್‌ಗೆ ಲಗ್ಗೆ ಇಟ್ಟಿವೆ.

ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ಪ್ರವೇಶ: ಕೊನೆಯ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 30 ರನ್‌ಗಳಿಂದ ಮಣಿಸಿದ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಮತ್ತು ಕೆಕೆಆರ್ ಕನಸನ್ನು ನುಚ್ಚುನೂರು ಮಾಡಿ 16 ಅಂಕಗಳೊಂದಿಗೆ ನಾಲ್ಕನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಿದೆ. ಮೇ 27 ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ತಂಡವು ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಅಗ್ರಸ್ಥಾನದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ: ಈ ಬಾರಿಯ ಪ್ಲೇಆಫ್‌ನ ಅಸಲಿ ಹೈಲೈಟ್ ಅಂದ್ರೆ ಅದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಈ ಸೀಸನ್‌ನಲ್ಲಿ ಆರ್‌ಸಿಬಿ ಅಕ್ಷರಶಃ ಅಬ್ಬರಿಸಿದೆ. ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿ, +0.783 ರನ್ ರೇಟ್‌ನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಕಿಂಗ್ ವಿರಾಟ್ ಕೊಹ್ಲಿ ಬರೋಬ್ಬರಿ 557 ರನ್ ಸಿಡಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದರೆ, ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ 24 ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ಹೊಂದಿದ್ದಾರೆ.

ಕ್ವಾಲಿಫೈಯರ್ 1: ಆರ್‌ಸಿಬಿ ವರ್ಸಸ್ ಗುಜರಾತ್ ಟೈಟಾನ್ಸ್ ಮೇ 26 ರಂದು ಧರ್ಮಶಾಲಾದ ಸುಂದರ ಮೈದಾನದಲ್ಲಿ ನಡೆಯಲಿರುವ ‘ಕ್ವಾಲಿಫೈಯರ್ 1’ ಪಂದ್ಯದಲ್ಲಿ ಆರ್‌ಸಿಬಿ ತಂಡವು ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಆರ್‌ಸಿಬಿಗೆ ಫೈನಲ್ ತಲುಪಲು ಇಲ್ಲಿ ಎರಡು ಅವಕಾಶ ಸಿಗಲಿದ್ದು, ಮೊದಲ ಪಂದ್ಯದಲ್ಲೇ ಗೆದ್ದು ನೇರವಾಗಿ ಮೇ 31ರ ಗ್ರ್ಯಾಂಡ್ ಫೈನಲ್‌ಗೆ ಲಗ್ಗೆ ಇಡುವುದು ಬೆಂಗಳೂರು ತಂಡದ ಗುರಿಯಾಗಿದೆ.

ಒಟ್ಟಾರೆ.. ‘ಈ ಸಲ ಕಪ್ ನಮ್ದೇ’ ಎಂಬ ಘೋಷಣೆಯೊಂದಿಗೆ ಆರ್‌ಸಿಬಿ ಮತ್ತೊಂದು ಇತಿಹಾಸ ಸೃಷ್ಟಿಸುತ್ತಾ? ಕಾದು ನೋಡಬೇಕಿದೆ.

The post IPL 2026 ಪ್ಲೇಆಫ್ ಧಮಾಕಾ: ಅಗ್ರಸ್ಥಾನದೊಂದಿಗೆ ನಾಕೌಟ್‌ಗೆ ಲಗ್ಗೆ ಇಟ್ಟ ಹಾಲಿ ಚಾಂಪಿಯನ್ ಆರ್‌ಸಿಬಿ! appeared first on Samyukta Karnataka.

RCB vs SRH: ವಿರಾಟ್ ಕೊಹ್ಲಿ – ಟ್ರಾವಿಸ್ ಹೆಡ್ ನಡುವೆ ಬಿಸಿಬಿಸಿ ಮಾತಿನ ಚಕಮಕಿ!
ಬೆಂಗಳೂರು: ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಹೈವೋಲ್ಟೇಜ್ ಪಂದ್ಯವು ಕೇವಲ ರನ್ ಮಳೆಯಿಂದ ಮಾತ್ರವಲ್ಲದೆ, ಆಟಗಾರರ ನಡುವಿನ ಉದ್ವಿಗ್ನ ಕ್ಷಣಗಳಿಂದಲೂ ಭಾರೀ ಸದ್ದು ಮಾಡುತ್ತಿದೆ. ಪಂದ್ಯದ ವೇಳೆ ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಎಸ್‌ಆರ್‌ಎಚ್‌ ತಂಡದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ನಡುವೆ ಮೈದಾನದಲ್ಲೇ ತೀವ್ರ ಮಾತಿನ ಚಕಮಕಿ ನಡೆದಿದೆ.
ಇನ್ನಿಂಗ್ಸ್‌ನ ಪ್ರಮುಖ ಘಟ್ಟದಲ್ಲಿ ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ ಮೈದಾನದಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆಯಿತು.

ಕೊಹ್ಲಿ ವಿಕೆಟ್ ಪತನದ ಬೆನ್ನಲ್ಲೇ ಟ್ರಾವಿಸ್ ಹೆಡ್ ಕೊಹ್ಲಿಯನ್ನು ಕೆಣಕುವ ರೀತಿಯಲ್ಲಿ ಕೀಟಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಕೆರಳಿದ ವಿರಾಟ್ ಕೊಹ್ಲಿ ಮತ್ತು ಹೆಡ್ ನಡುವೆ ಮೈದಾನದಲ್ಲೇ ತೀವ್ರ ವಾಗ್ವಾದ ನಡೆದಿದ್ದು, ಇಬ್ಬರೂ ಬಿಸಿ-ಬಿಸಿ ಮಾತುಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ನಡುವೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಹಾಗೆ ಮೈದಾನದಲ್ಲಿ ಆರಂಭವಾದ ಈ ಜಗಳ ಪಂದ್ಯ ಮುಗಿದ ನಂತರವೂ ತಣ್ಣಗಾಗಲಿಲ್ಲ. ಪಂದ್ಯ ಮುಕ್ತಾಯಗೊಂಡ ಬಳಿಕ ಸಾಂಪ್ರದಾಯಿಕವಾಗಿ ಎರಡೂ ತಂಡಗಳ ಆಟಗಾರರು ಪರಸ್ಪರ ಕೈಕುಲುಕುವ (Handshake) ಸಮಯದಲ್ಲೂ ಈ ಉದ್ವಿಗ್ನತೆ ಸ್ಪಷ್ಟವಾಗಿ ಕಂಡುಬಂದಿದೆ.

ಇದಾದ ಬಳಿಕ ಆಟಗಾರರು ಲೈನ್‌ನಲ್ಲಿ ಬಂದು ಪರಸ್ಪರ ಹಸ್ತಲಾಘವ ಮಾಡುತ್ತಿದ್ದಾಗ, ವಿರಾಟ್ ಕೊಹ್ಲಿ ತಮ್ಮ ಮುಂದಿದ್ದ ಟ್ರಾವಿಸ್ ಹೆಡ್‌ನ್ನ ಸಂಪೂರ್ಣವಾಗಿ ನಿರ್ಲಕ್ಷಿಸಿ, ಮುಂದಿರು ಬೇರೆ ಆಟಗಾರನನ್ನು ಕೈಕುಲುಕಿ ತೀವ್ರ ಕೋಪದಿಂದಲೇ ಮುಂದೆ ಸಾಗಿದ್ದಾರೆ. ವಿರಾಟ್ ಈ ಆಕ್ರೋಶದ ನಡವಳಿಕೆ ಮೈದಾನದಲ್ಲಿದ್ದ ಇಬ್ಬರ ನಡುವಿನ ವೈಷಮ್ಯ ಎಷ್ಟು ತೀವ್ರವಾಗಿತ್ತು ಎಂಬುದನ್ನು ಸಾಬೀತುಪಡಿಸಿದೆ.

ಅಭಿಮಾನಿಗಳ ಆಕ್ರೋಶ ಮತ್ತು ಕಮೆಂಟ್‌ಗಳ ಸುರಿಮಳೆ: ಈ ಘಟನೆಯ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. ವಿರಾಟ್ ಕೊಹ್ಲಿ ಔಟಾದ ತಕ್ಷಣ ಟ್ರಾವಿಸ್ ಹೆಡ್ ಅನಗತ್ಯವಾಗಿ ಕೀಟಲೆ ಮಾಡಿ ಸ್ಲೆಡ್ಜಿಂಗ್‌ಗೆ ಇಳಿದಿದ್ದೇ ಈ ಎಲ್ಲಾ ಗೊಂದಲಗಳಿಗೆ ಮೂಲ ಕಾರಣ ಎಂದು ಆರ್‌ಸಿಬಿ ಅಭಿಮಾನಿಗಳು ಹೆಡ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಒಟ್ಟಾರೆಯಾಗಿ, ನಿನ್ನೆಯ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್‌ ಪಂದ್ಯವು ಕೇವಲ ಕ್ರಿಕೆಟ್ ಆಟದಿಂದ ಮಾತ್ರವಲ್ಲದೆ, ಈ ಸ್ಟಾರ್ ಆಟಗಾರರ ನಡುವಿನ ಮುನಿಸಿನಿಂದಾಗಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದೆ.

The post RCB vs SRH: ವಿರಾಟ್ ಕೊಹ್ಲಿ – ಟ್ರಾವಿಸ್ ಹೆಡ್ ನಡುವೆ ಬಿಸಿಬಿಸಿ ಮಾತಿನ ಚಕಮಕಿ! appeared first on Samyukta Karnataka.

RCB ಫ್ಯಾನ್ಸ್‌ಗೆ ಡಬಲ್‌ ಗುಡ್‌ನ್ಯೂಸ್: ಕ್ವಾಲಿಫೈಯರ್ ಟಿಕೆಟ್ ಪಡೆದ ತಂಡ..! ಇಲ್ಲಿದೆ ಡಿಟೇಲ್ಸ್‌
ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ರೋಮಾಂಚಕಾರಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸೋಲು ಕಂಡಿದ್ದರೂ, ತಂಡಕ್ಕೆ ಒಂದು ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ನೀಡಿದ್ದ 256 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ನಿಗದಿತ ಓವರ್‌ಗಳಲ್ಲಿ 200 ರನ್‌ಗಳಿಗೆ ಸೀಮಿತಗೊಂಡು 55 ರನ್‌ಗಳ ಅಂತರದಿಂದ ಪರಾಜಯಗೊಂಡಿತು.

ಆದ್ರೆ ಈ ಸೋಲಿನ ಮಧ್ಯೆಯೂ ಆರ್‌ಸಿಬಿ ನೆಟ್ ರನ್ ರೇಟ್ ಆಧಾರದ ಮೇಲೆ ಐಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಒಂದನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಿದ್ದರೆ ಹೈದರಾಬಾದ್ ತಂಡಕ್ಕೆ ಆರ್‌ಸಿಬಿಯನ್ನು ಕೇವಲ 165 ರನ್‌ಗಳ ಒಳಗಾಗಿ ಕಟ್ಟಿಹಾಕಬೇಕಾದ ಅನಿವಾರ್ಯತೆ ಇತ್ತು. ಆದ್ರೆ ಆರ್‌ಸಿಬಿ ಬ್ಯಾಟರ್‌ಗಳು 200 ರನ್ ಗಳಿಸಿದ್ದರಿಂದ ಎಸ್‌ಆರ್‌ಹೆಚ್ ಲೆಕ್ಕಾಚಾರ ತಲೆಕೆಳಗಾಯಿತು.

ಇದರ ಪರಿಣಾಮವಾಗಿ ಹೈದರಾಬಾದ್ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬಂತು. ಸಿಕ್ಸರ್‌ಗಳ ದಾಖಲೆ ಬರೆದ ನಾಯಕ: ಇದೇ ಪಂದ್ಯದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವ ಮೂಲಕ ಅಪರೂಪದ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 100 ಸಿಕ್ಸರ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೇವಲ 50 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವ ಪಾಟಿದಾರ್, ಕ್ರಿಸ್ ಗೇಲ್ (37 ಇನ್ನಿಂಗ್ಸ್) ಮತ್ತು ಆಂಡ್ರೆ ರಸೆಲ್ (47 ಇನ್ನಿಂಗ್ಸ್) ಇವರ ಸಾರ್ವಕಾಲಿಕ ದಾಖಲೆಯ ಬೆನ್ನ ಹಿಂದೆ ನಿಂತಿದ್ದಾರೆ.

ಅಷ್ಟೇ ಅಲ್ಲದೆ.. ಅತ್ಯಂತ ಕಡಿಮೆ ಎಸೆತಗಳನ್ನು ಎದುರಿಸಿ (933 ಎಸೆತಗಳು) ನೂರು ಸಿಕ್ಸರ್ ಬಾರಿಸಿದ ವಿಶ್ವದ ಬ್ಯಾಟರ್‌ಗಳ ಪಟ್ಟಿಯಲ್ಲೂ ರಜತ್ ಪಾಟಿದಾರ್ ಈಗ ಮೂರನೇ ಸ್ಥಾನದಲ್ಲಿ ಘರ್ಜಿಸುತ್ತಿದ್ದಾರೆ. ಆರ್‌ಸಿಬಿ ಪಂದ್ಯವನ್ನು ಸೋತಿದ್ದರೂ, ಕ್ವಾಲಿಫೈಯರ್ ಟಿಕೆಟ್ ಸಿಕ್ಕಿರುವುದು ಮತ್ತು ನಾಯಕನ ಭರ್ಜರಿ ಫಾರ್ಮ್ ಅಭಿಮಾನಿಗಳಲ್ಲಿ ಹೊಸ ಜೋಶ್ ತುಂಬಿದೆ.

The post RCB ಫ್ಯಾನ್ಸ್‌ಗೆ ಡಬಲ್‌ ಗುಡ್‌ನ್ಯೂಸ್: ಕ್ವಾಲಿಫೈಯರ್ ಟಿಕೆಟ್ ಪಡೆದ ತಂಡ..! ಇಲ್ಲಿದೆ ಡಿಟೇಲ್ಸ್‌ appeared first on Samyukta Karnataka.

IPL 2026: ಪಂಜಾಬ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ
ಲಖನೌ: ಟಾಟಾ ಐಪಿಎಲ್ 2026ರ ಲೀಗ್ ಹಂತದ ಅಂತಿಮ ಘಟ್ಟದ ರೋಚಕತೆಯಲ್ಲಿ, ಶನಿವಾರ ನಡೆಯಲಿರುವ 68ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಲಖನೌನ ಪ್ರಸಿದ್ಧ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಹೈ-ವೋಲ್ಟೇಜ್ ಪಂದ್ಯ ಆರಂಭವಾಗಲಿದೆ.

ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಈ ಋತುವಿನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದು, ಲಖನೌ ನೆಲದಲ್ಲಿ ಮರಳಿ ಗೆಲುವಿನ ಹಳಿಗೆ ಮರಳುವ ತವಕದಲ್ಲಿದೆ. ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಶಶಾಂಕ್ ಸಿಂಗ್ ಮತ್ತು ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್ ಅವರ ಪ್ರದರ್ಶನ ಪ್ರಮುಖವಾಗಿದೆ.

ಮತ್ತೊಂದೆಡೆ, ರಿಷಭ್ ಪಂತ್ ಸಾರಥ್ಯದ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಇದು ತವರು ಮೈದಾನದ ಪಂದ್ಯವಾಗಿದ್ದು, ಪ್ಲೇಆಫ್ ರೇಸ್‌ನಲ್ಲಿ ಮುನ್ನಡೆಯಲು ಈ ಗೆಲುವು ಅತ್ಯಂತ ನಿರ್ಣಾಯಕವಾಗಿದೆ. ತಂಡದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅದ್ಭುತ ಫಾರ್ಮ್ನಲ್ಲಿದ್ದು, ನಿಕೋಲಸ್ ಪೂರನ್ ಅವರ ಬಲ ಲಖನೌ ತಂಡಕ್ಕಿದೆ.

ಏಕಾನಾ ಮೈದಾನದ ನಿಧಾನಗತಿಯ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗಲಿದ್ದು, ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಉಭಯ ತಂಡಗಳಿಗೂ ಪ್ರತಿಷ್ಠೆಯ ಕಣವಾಗಿರುವ ಈ ಪಂದ್ಯದಲ್ಲಿ ರೋಚಕ ಹೋರಾಟ ನಿರೀಕ್ಷಿಸಲಾಗಿದೆ.

ಇತ್ತ ಲಖನೌಗೂ ಈ ಪಂದ್ಯ ಗೆದ್ದು ಮಾನ ಉಳಿಸಿಕೊಳ್ಳಬೇಕಿದೆ. ಲೀಗ್‌ನಲ್ಲಿ ಈಗಲೇ ಎಲ್‌ಎಸ್‌ಜಿ ಸೋತು ಟೂರ್ನಿಯಿಂದ ಹೊರಗುಳಿದಿದ್ದು, ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್‌ಗೆ ಆಘಾತ ನೀಡುವ ಸಾಧ್ಯತೆಗಳಿವೆ. ಅತ್ತ ಪಂಜಾಬ್ ಗೆದ್ದರೂ, ರಾಜಸ್ಥಾನ ಮುಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋಲಬೇಕಾಗುತ್ತದೆ. ಆಗ ಮಾತ್ರ ಪಂಜಾಬ್ ಪ್ಲೇಆಫ್ ಸೇರಿಕೊಳ್ಳಲಿದೆ.

ಪಂದ್ಯ ಆರಂಭ: ರಾತ್ರಿ 7.30ಕ್ಕೆ

ಹುಬ್ಬಳ್ಳಿ: ಕಾರ್ಯಾಚರಣೆ ನಿಮಿತ್ತ ಕೆಲ ರೈಲು ಸಂಚಾರ ತಾತ್ಕಾಲಿಕ ರದ್ದು

The post IPL 2026: ಪಂಜಾಬ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ appeared first on Samyukta Karnataka.

IPL 2026: ಪ್ಲೇಆಫ್‌ ಸನಿಹಕ್ಕೆ ರಾಜಸ್ಥಾನ್‌ ರಾಯಲ್ಸ್‌
ಜೈಪುರ: ವೈಭವ್‌ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್‌‌ ತಂಡ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.

ಲಖನೌ ನೀಡಿದ್ದ 220 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್‌ 5 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದು, ಪ್ಲೇಆಫ್‌ ಸನಿಹಕ್ಕೆ ಬಂದು ನಿಂತಿದೆ.

ಯಶಸ್ವಿ ಜೈಸ್ವಾಲ್‌ ಮತ್ತು ವೈಭವ್‌ ಸೂರ್ಯವಂಶಿ ಜೋಡಿ ಉತ್ತಮ ಆರಂಭವನ್ನು ನೀಡಿತು. ಜೈಸ್ವಾಲ್‌ 23 ಎಸೆತದಲ್ಲಿ 8 ಬೌಂಡರಿ, 1 ಸಿಕ್ಸರ್‌ನಿಂದ 43 ರನ್‌ಗಳಿಸಿ ಆಕಾಶ ಸಿಂಗ್‌ ಎಸೆತದಲ್ಲಿ ರಿಷಭ್‌ ಪಂತ್‌ಗೆ ಕ್ಯಾಚ್‌ ನೀಡಿ ಔಟಾದರು.

ಎರಡನೇ ವಿಕೆಟ್‌ಗೆ ವೈಭವ್‌ ಮತ್ತು ಧ್ರುವ್ ಜುರೆಲ್ ಜೋಡಿ 45 ಎಸೆತದಲ್ಲಿ 105 ರನ್‌ಗಳ ಜತೆಯಾಟ ನಡೆಸಿತು. ಈ ವೇಳೆ ವೈಭವ್‌ 38 ಎಸೆತದಲ್ಲಿ 7 ಬೌಂಡರಿ, 10 ಭರ್ಜರಿ ಸಿಕ್ಸರ್‌ ಸೇರಿದಂತೆ 93 ರನ್‌ಗಳಿಸಿ ಹೊರನಡೆದರು.

ಪ್ರಿಟೋರಿಯಸ್ ಕೇವಲ 7 ರನ್‌ಗಳಿಸಿ ರನೌಟ್‌ಗೆ ಬಲಿಯಾದರು. ಧ್ರುವ್ ಜುರೆಲ್ 38 ಎಸೆತದಲ್ಲಿ 3 ಬೌಂಡರಿ, 3 ಸಿಕ್ಸರ್‌ನಿಂದ ಅಜೇಯ 53 ರನ್‌ ಗಳಿಸಿದರೆ, ಡೊನೊವನ್ ಫೆರೀರಾ 16 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್‌ ಲೆಕ್ಕಾಚಾರವನ್ನು ಆರಂಭದಲ್ಲಿಯೇ ಮಿಚೆಲ್‌ ಮಾರ್ಷ್‌ ಮತ್ತು ಜೋಶ್ ಇಂಗ್ಲಿಸ್ ಉಲ್ಟಾ ಮಾಡಿತು.

ಮೊದಲ ಓವರ್‌ನಿಂದಲೇ ಬೌಲರ್‌ಗಳನ್ನು ದಂಡಿಸಲು ಶುರು ಮಾಡಿದ ಆರಂಭಿಕ ಜೋಡಿ 8 ಓವರ್‌ಗಳಾಗುವಷ್ಟರಲ್ಲಿಯೇ ತಂಡದ ಮೊತ್ತವನ್ನು 100 ಗಡಿ ದಾಟಿಸಿತು.

ಜೋಶ್ ಇಂಗ್ಲಿಸ್ ಕೇವಲ 29 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ನಿಂದ 60 ರನ್‌ಗಳಿಸಿ ಯಶ್ ರಾಜ್ ಪೂಂಜಾ ಅವರಿಗೆ ವಿಕೆಟ್‌ ಒಪ್ಪಿಸಿದರು. ನಿಕೋಲಸ್ ಪೂರನ್ ಕ್ರಿಸ್‌ಗೆ ಬರುತ್ತಿದ್ದಂತೆ 2 ಸಿಕ್ಸರ್‌ ಬಾರಿಸಿ ಕೇವಲ 16 ರನ್‌ಗಳಿಗೆ ಆಟ ಮುಗಿಸಿದರು.

ಮೂರನೇ ವಿಕೆಟ್‌ಗೆ ಮಿಚೆಲ್‌ ಮಾರ್ಷ್‌ ಜತೆಯಾದ ನಾಯಕ ರಿಷಭ್‌ ಪಂತ್‌ 23 ಎಸೆತದಲ್ಲಿ 35 ರನ್‌ಗಳಿಸಿ, 64 ರನ್‌ಗಳ ಜತೆಯಾಟ ನಡೆಸಿ ಅನಗತ್ಯ ರನ್‌ ಕದಿಯಲು ಹೋಗಿ ಬಲಿಯಾದರು.

ಕೊನೆಯ ಓವರ್‌ ಮೊದಲ ಎಸೆತದಲ್ಲಿ ಪಂತ್‌ ಹೊರನಡೆದರೆ, ಅದೇ ಓವರ್‌ನ ಐದನೇ ಎಸೆತದಲ್ಲಿ ಮಿಚೆಲ್‌ ಮಾರ್ಷ್‌ ಎರಡು ರನ್‌ ಕದಿಯಲು ಹೋಗಿ ರನೌಟ್‌ ಆದರು.

ಮಿಚೆಲ್‌ ಮಾರ್ಷ್‌ ಕೇವಲ 57 ಎಸೆತದಲ್ಲಿ 11 ಬೌಂಡರಿ, 5 ಸಿಕ್ಸರ್‌ನಿಂದ 96 ರನ್‌ ಸಿಡಿಸಿ ಲಖನೌ ಬೃಹತ್‌ ಮೊತ್ತ ಪೇರಿಸುವಲ್ಲಿ ನೆರವಾದರು.

ರಾಜಸ್ಥಾನ ರಾಯಲ್ಸ್‌ ಪರ ಯಶ್ ರಾಜ್ ಪೂಂಜಾ 35ಕ್ಕೆ 2 ವಿಕೆಟ್‌ ಪಡೆದರೆ, ಜೋಫ್ರಾ ಆರ್ಚರ್ 39ಕ್ಕೆ ಒಂದು ವಿಕೆಟ್‌ ಪಡೆದರು.

The post IPL 2026: ಪ್ಲೇಆಫ್‌ ಸನಿಹಕ್ಕೆ ರಾಜಸ್ಥಾನ್‌ ರಾಯಲ್ಸ್‌ appeared first on Samyukta Karnataka.

CSK ಗೆದ್ದರೆ RCBಗೆ ಲಾಟರಿ ಟಾಪ್-2 ಸ್ಥಾನಕ್ಕೆ ಸಿಗುತ್ತಾ ಟಿಕೆಟ್: ಇವತ್ತಿನ ಮ್ಯಾಚ್ ಮೇಲೆ ಆರ್ಸಿಬಿ ಫ್ಯಾನ್ಸ್ ಕಣ್ಣು; ಏನಿದು ಅಸಲಿ ಲೆಕ್ಕಾಚಾರ?
ಐಪಿಎಲ್ 2026 ಈಗ ಅಕ್ಷರಶಃ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಇವತ್ತು ಒಂದು ವಿಚಿತ್ರ ಸನ್ನಿವೇಶ ನಡೆದಿಯುವದಿದೆ ನೋಡಿ. ಸಾಮಾನ್ಯವಾಗಿ ಆರ್‌ಸಿಬಿ ಮತ್ತು ಸಿಎಸ್‌ಕೆ ಅಭಿಮಾನಿಗಳು ಮೈದಾನದಲ್ಲಿ ಕಿತ್ತಾಡಿಕೊಳ್ಳೋದನ್ನ ನಾವು ನೋಡಿದ್ದೇವೆ.

ಆದ್ರೆ ಇವತ್ತು ಮಾತ್ರ ಆರ್‌ಸಿಬಿ ಫ್ಯಾನ್ಸ್ ಎಲ್ಲರೂ ಸಿಎಸ್‌ಕೆ ಗೆಲ್ಲಲಿ ಅಂತ ಹಾರೈಸ್ತಿದ್ದಾರೆ! ಯಾಕೆ ಗೊತ್ತಾ? ಇವತ್ತು ಸಿಎಸ್‌ಕೆ ಗೆದ್ದರೆ ಅದು ಆರ್‌ಸಿಬಿಗೆ ಲಾಟರಿ ಹೊಡೆದಂತೆ! ಅಸಲಿ ಲೆಕ್ಕಾಚಾರ ಏನು ಅಂತ ಹೇಳ್ತೀನಿ ಕೇಳಿ.

ಟಾಪ್-2 ಸ್ಥಾನದ ಮಹತ್ವ: ಆರ್‌ಸಿಬಿ ಈಗಾಗ್ಲೇ ಪ್ಲೇಆಫ್‌ಗೆ ಹೋಗಿರೋ ಏಕೈಕ ತಂಡ ಅನ್ನೋದು ನಮಗೆಲ್ಲಾ ಗೊತ್ತಿದೆ. ಆದ್ರೆ ಬರಿ ಪ್ಲೇಆಫ್ ಹೋದ್ರೆ ಸಾಲದು, ನಮಗೆ ‘ಟಾಪ್-2’ ಸ್ಥಾನ ಬೇಕು. ಯಾಕಂದ್ರೆ ಟಾಪ್-2 ನಲ್ಲಿ ಇದ್ರೆ ನಮಗೆ ಫೈನಲ್‌ಗೆ ಹೋಗೋಕೆ ಎರಡು ಚಾನ್ಸ್ ಸಿಗುತ್ತೆ. ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದರೆ ನೇರ ಫೈನಲ್, ಸೋತರೂ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದ ಜೊತೆ ಮತ್ತೊಮ್ಮೆ ಆಡಬಹುದು. ಹಾಗಾಗಿ ಟಾಪ್-2 ಸ್ಥಾನ ಭದ್ರಪಡಿಸಿಕೊಳ್ಳೋದು ಆರ್‌ಸಿಬಿಗೆ ಇವತ್ತಿನ ಅತಿದೊಡ್ಡ ಗುರಿ.

ಇವತ್ತಿನ ಮ್ಯಾಚ್ ಮತ್ತು ಆರ್‌ಸಿಬಿ ಕನೆಕ್ಷನ್: ಈಗ ಅಸಲಿ ವಿಷಯಕ್ಕೆ ಬರೋಣ. ಇವತ್ತು ಚೆನ್ನೈನ ಚೆಪಾಕ್ ಮೈದಾನದಲ್ಲಿ ಸಿಎಸ್‌ಕೆ ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ಮುಖಾಮುಖಿಯಾಗ್ತಿವೆ. ಒಂದು ವೇಳೆ ಇವತ್ತು ಸಿಎಸ್‌ಕೆ ಗೆದ್ದರೆ, ಹೈದರಾಬಾದ್ ಪಾಯಿಂಟ್ಸ್ 14 ರಲ್ಲೇ ಉಳಿಯುತ್ತೆ. ಅವರು ಕೊನೆಯ ಮ್ಯಾಚ್ ಗೆದ್ದರೂ 16 ಪಾಯಿಂಟ್ಸ್‌ಗೆ ಮಾತ್ರ ತಲುಪೋಕೆ ಸಾಧ್ಯ.

ಅವತ್ತು ಏನಾಗುತ್ತೆ ಅಂದ್ರೆ, 18 ಪಾಯಿಂಟ್ಸ್ ಹೊಂದಿರೋ ನಮ್ಮ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಅಧಿಕೃತವಾಗಿ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನವನ್ನ ಫಿಕ್ಸ್ ಮಾಡಿಕೊಳ್ಳುತ್ತವೆ. ಅಂದ್ರೆ ಆರ್‌ಸಿಬಿ ತನ್ನ ಕೊನೆಯ ಮ್ಯಾಚ್ ಆಡೋ ಮೊದಲೇ ಮೊದಲ ಕ್ವಾಲಿಫೈಯರ್ ಪಂದ್ಯವನ್ನ ಆಡೋದು ಕನ್ಫರ್ಮ್ ಆಗುತ್ತೆ!

ಸಿಎಸ್‌ಕೆ ಸೋತರೆ ಏನಾಗುತ್ತೆ?:  ಒಂದು ವೇಳೆ ಇವತ್ತು ಸನ್‌ರೈಸರ್ಸ್ ಗೆದ್ದುಬಿಟ್ರೆ, ಅವರು 16 ಪಾಯಿಂಟ್‌ಗೆ ಬರ್ತಾರೆ. ಆಗ ಆರ್‌ಸಿಬಿಗೆ ಸ್ವಲ್ಪ ಟೆನ್ಶನ್ ಶುರುವಾಗುತ್ತೆ. ಯಾಕಂದ್ರೆ ಟಾಪ್-2 ನಲ್ಲಿ ಇರೋಕೆ ನಮ್ಮ ಕೊನೆಯ ಲೀಗ್ ಮ್ಯಾಚ್‌ನಲ್ಲಿ ಹೈದರಾಬಾದ್ ವಿರುದ್ಧ ನಾವು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗುತ್ತೆ. ಹಾಗಾಗಿ ಆ ರಿಸ್ಕ್ ಬೇಡ ಅಂದ್ರೆ ಇವತ್ತು ಸಿಎಸ್‌ಕೆ ಗೆಲ್ಲೋದು ಆರ್‌ಸಿಬಿ ಪಾಲಿಗೆ ದೊಡ್ಡ ಪ್ಲಸ್ ಪಾಯಿಂಟ್.

The post CSK ಗೆದ್ದರೆ RCBಗೆ ಲಾಟರಿ ಟಾಪ್-2 ಸ್ಥಾನಕ್ಕೆ ಸಿಗುತ್ತಾ ಟಿಕೆಟ್: ಇವತ್ತಿನ ಮ್ಯಾಚ್ ಮೇಲೆ ಆರ್ಸಿಬಿ ಫ್ಯಾನ್ಸ್ ಕಣ್ಣು; ಏನಿದು ಅಸಲಿ ಲೆಕ್ಕಾಚಾರ? appeared first on Samyukta Karnataka.

IPL 2026: ಪ್ಲೇಆಫ್‌ಗೆ ಕ್ವಾಲಿಫೈ ಆದ ಆರ್‌ಸಿಬಿ ತಂಡಕ್ಕೆ ಮಾಜಿ ಮಾಲೀಕ ವಿಜಯ್ ಮಲ್ಯ ಅಭಿನಂದನೆ!
ಬೆಂಗಳೂರು: ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭರ್ಜರಿ ಪ್ರದರ್ಶನ ನೀಡುವ ಮೂಲಕ ಈ ಬಾರಿಯ ಸೀಸನ್‌ನಲ್ಲಿ ಪ್ಲೇಆಫ್ ಹಂತಕ್ಕೆ ಅರ್ಹತೆ ಪಡೆದ ಅತ್ಯಂತ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಂಡದ ಈ ಅದ್ಭುತ ಸಾಧನೆಗೆ ಕೇವಲ ಅಭಿಮಾನಿಗಳಷ್ಟೇ ಅಲ್ಲದೆ, ಆರ್‌ಸಿಬಿ ತಂಡದ ಮಾಜಿ ಮಾಲೀಕರಾದ ವಿಜಯ್ ಮಲ್ಯ ಕೂಡ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಆಟಗಾರರ ದಿಟ್ಟತನದ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ, ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಹೆಮ್ಮೆಯಿಂದ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ನಮ್ಮ ದೊಡ್ಡ ಸಿಂಹಗಳು ಎಂದ ಮಲ್ಯ: ತಂಡದ ಐತಿಹಾಸಿಕ ಜಯವನ್ನು ಸಂಭ್ರಮಿಸಿದ ವಿಜಯ್ ಮಲ್ಯ, “ಆರ್‌ಸಿಬಿ, ಆರ್‌ಸಿಬಿ, ಆರ್‌ಸಿಬಿ ನಮ್ಮ ದೊಡ್ಡ ಸಿಂಹಗಳು”, ನೀವು ಇಂದು ನಮ್ಮೆಲ್ಲರನ್ನೂ ತುಂಬಾ ಹೆಮ್ಮೆಪಡುವಂತೆ ಮಾಡಿದ್ದೀರಿ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಮೈದಾನದಲ್ಲಿ ತಂಡ ತೋರಿದ ಆಕ್ರಮಣಕಾರಿ ಹಾಗೂ ಜವಾಬ್ದಾರಿಯುತ ಆಟವನ್ನು ಕೊಂಡಾಡಿದ, “ನೀವು ನಿಜಕ್ಕೂ ಅತ್ಯಂತ ದಿಟ್ಟ ಆಟವಾಡಿದ್ದೀರಿ. ಬೆಂಗಳೂರಿನ ಹೆಮ್ಮೆಯ ಸಿಂಹಗಳಾಗಿ ಇಡೀ ಐಪಿಎಲ್ ಅಂಗಳದಲ್ಲಿ ಇನ್ನಷ್ಟು ಜೋರಾಗಿ ಘರ್ಜಿಸಿದ್ದೀರಿ. ಇಡೀ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು” ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಹೆಮ್ಮೆಯ ಉಡುಗೊರೆ: ಆರ್‌ಸಿಬಿ ತಂಡವು ಕೇವಲ ಒಂದು ಕ್ರಿಕೆಟ್ ಫ್ರಾಂಚೈಸಿ ಮಾತ್ರವಲ್ಲ, ಅದು ಇಡೀ ಕರ್ನಾಟಕದ ಭಾವನೆಯಾಗಿದೆ. ವಿಜಯ್ ಮಲ್ಯ ಆರಂಭದಿಂದಲೂ ಈ ತಂಡವನ್ನು ಕಟ್ಟಿ ಬೆಳೆಸಿದ ರೀತಿಗೆ ಇಂದಿಗೂ ಅಭಿಮಾನಿಗಳು ಕೃತಜ್ಞತೆ ಸಲ್ಲಿಸುತ್ತಲೇ ಇರುತ್ತಾರೆ. ಕರ್ನಾಟಕವು ಕ್ರಿಕೆಟ್ ಜಗತ್ತಿಗೆ ನೀಡಿದ ಅತ್ಯಂತ ದೊಡ್ಡ ಮತ್ತು ಅದ್ಭುತ ಉಡುಗೊರೆ ಈ ಆರ್‌ಸಿಬಿ ತಂಡವಾಗಿದೆ ಎಂದು ಹೆಮ್ಮೆಯಿಂದ ಹೇಳಲಾಗುತ್ತಿದೆ. ಪ್ಲೇಆಫ್‌ಗೆ ಲಗ್ಗೆ ಇಟ್ಟಿರುವ ಬೆಂಗಳೂರು ತಂಡವು ಇದೇ ಲಯವನ್ನು ಕಾಯ್ದುಕೊಂಡು, ಐಪಿಎಲ್‌ನಲ್ಲಿ ಅತ್ಯುತ್ತಮ ತಂಡವಾಗಿ ಮುಂದುವರಿದು ಈ ಬಾರಿ ಮುನ್ನಡೆ ಸಾಧಿಸಲಿ ಎಂಬುದು ಎಲ್ಲರ ಆಶಯವಾಗಿದೆ.

ಪ್ರಸ್ತುತ ಸಾಲಿನಲ್ಲಿ ಅತ್ಯಂತ ಬಲಿಷ್ಠವಾಗಿ ಮೂಡಿಬಂದಿರುವ ಆರ್‌ಸಿಬಿ, ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ. ಮಾಜಿ ಮಾಲೀಕರ ಈ ಪ್ರೋತ್ಸಾಹದ ನುಡಿಗಳು ತಂಡದ ಆಟಗಾರರಲ್ಲಿ ಹಾಗೂ ಕೋಟ್ಯಂತರ ಅಭಿಮಾನಿಗಳಲ್ಲಿ ಇನ್ನಷ್ಟು ಜೋಶ್ ತುಂಬಿರುವುದಂತೂ ಸುಳ್ಳಲ್ಲ.

The post IPL 2026: ಪ್ಲೇಆಫ್‌ಗೆ ಕ್ವಾಲಿಫೈ ಆದ ಆರ್‌ಸಿಬಿ ತಂಡಕ್ಕೆ ಮಾಜಿ ಮಾಲೀಕ ವಿಜಯ್ ಮಲ್ಯ ಅಭಿನಂದನೆ! appeared first on Samyukta Karnataka.

IPL 2026: ಅಯ್ಯರ್‌, ಕೊಹ್ಲಿ ಅಬ್ಬರ; ಪಂಜಾಬ್‌ಗೆ 223 ಗುರಿ
ಧರ್ಮಶಾಲಾ: ವೆಂಕಟೇಶ ಅಯ್ಯರ್‌ ಮತ್ತು ವಿರಾಟ್‌ ಕೊಹ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪಂಜಾಬ್‌ ಕಿಂಗ್ಸ್‌ ವಿರುದ್ಧ ಬೃಹತ್‌ ರನ್‌ ಕಲೆಹಾಕಿದೆ.

ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 222 ರನ್‌ ಪೇರಿಸಿದೆ.

2.2 ಓವರ್‌ಗಳಲ್ಲಿಯೇ ಆರಂಭಿಕ ಆಟಗಾರ ಜಾಕೋಬ್ ಬೆಥೆಲ್ (11) ವಿಕೆಟ್‌ ಕಳೆದುಕೊಂಡಿತು. ಆದರೆ ಬಳಿಕ ವಿರಾಟ್‌ ಕೊಹ್ಲಿ ಜತೆಗೂಡಿದ ದೇವದತ್ ಪಡಿಕ್ಕಲ್ ಆರಂಭದಲ್ಲಿಯೇ ಪಂಜಾಬ್‌ ಬೌಲರ್‌ಗಳನು ದಂಡಿಸಿಲು ಆರಂಭಿಸಿದರು.

ಈ ಜೋಡಿ 41 ಎಸೆತದಲ್ಲಿ 76 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿತು. ಈ ವೇಳೆ ದೇವದತ್ ಪಡಿಕ್ಕಲ್ 25 ಎಸೆತದಲ್ಲಿ 4 ಬೌಂಡರಿ, 3 ಸಿಕ್ಸರ್‌ನಿಂದ 45 ರನ್‌ಗಳಿಸಿ ಹರ್‌ಪ್ರೀತ್ ಬ್ರಾರ್ ಎಸೆತದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಕ್ಯಾಚ್‌ ಕೊಟ್ಟು ಔಟಾದರು.

ಮೂರನೇ ವಿಕೆಟ್‌ಗೆ ಕ್ರಿಸ್‌ಗೆ ಬಂದ ವೆಂಕಟೇಶ ಅಯ್ಯರ್‌ ಪಂಜಾಬ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಲು ಆರಂಭಿಸಿದರು. ಈ ವೇಳೆ ವಿರಾಟ್‌ ಕೊಹ್ಲಿ 37 ಎಸೆತದಲ್ಲಿ 4 ಬೌಂಡರಿ, 3 ಸಿಕ್ಸರ್‌ನಿಂದ 58 ರನ್‌ಗಳಿಸಿ ಹೊರನಡೆದರು.

ಇನ್ನೊಂದು ತುದಿಯಲ್ಲಿ ವೆಂಕಟೇಶ ಅಯ್ಯರ್‌ 40 ಎಸೆತದಲ್ಲಿ 8 ಬೌಂಡರಿ, 4 ಸಿಕ್ಸರ್‌ನಿಂದ 73 ರನ್‌ಗಳಿಸಿ ಅಜೇಯರಾಗಿ ಉಳಿಸರೆ, ಟೀಮ್‌ ಡೇವಿಡ್ 12 ಎಸೆತದಲ್ಲಿ 2 ಬೌಂಡರಿ, 2 ಸಿಕ್ಸರ್‌ನಿಂದ 28 ರನ್‌ಗಳಿಸಿ ಕೊನೆಯ ಎಸೆತದಲ್ಲಿ ಔಟಾದರು.

ಪಂಜಾಬ್‌ ಕಿಂಗ್ಸ್‌ ಪರ ಹರ್‌ಪ್ರೀತ್ ಬ್ರಾರ್ 35ಕ್ಕೆ 2 ವಿಕೆಟ್‌ ಪಡೆದರೆ, ಯಜುವೇಂದ್ರ ಚಾಹಲ್, ಅರ್ಷದೀಪ್‌ ಸಿಂಗ್‌ ತಲಾ  ಒಂದು ವಿಕೆಟ್‌ ಪಡೆದರು.

The post IPL 2026: ಅಯ್ಯರ್‌, ಕೊಹ್ಲಿ ಅಬ್ಬರ; ಪಂಜಾಬ್‌ಗೆ 223 ಗುರಿ appeared first on Samyukta Karnataka.