#IPL 2026 Playoffs Archives - Samyukta Karnataka

IPL 2026 Playoffs : 4ನೇ ಸ್ಥಾನಕ್ಕಾಗಿ 5 ತಂಡಗಳ ಮಹಾ ಸಮರ! ಪ್ಲೇಆಫ್ ತಲುಪಲು ಯಾರಿಗೆ ಯಾವ ಲೆಕ್ಕಾಚಾರ?
IPL 2026 Playoffs : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಲೀಗ್ ಹಂತದ ಪಂದ್ಯಗಳು ಈಗ ಅಕ್ಷರಶಃ ರಣರೋಚಕ ಘಟ್ಟಕ್ಕೆ ತಲುಪಿವೆ. ಟೂರ್ನಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಗುಜರಾತ್ ಟೈಟಾನ್ಸ್ (GT) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಈಗಾಗಲೇ ತಮ್ಮ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಈಗ ಉಳಿದಿರುವುದು ಕೇವಲ ನಾಲ್ಕನೇ ಒಂದು ಸ್ಥಾನ ಮಾತ್ರ. ಆದರೆ ಈ ಒಂದು ಸೀಟಿಗಾಗಿ ಬರೋಬ್ಬರಿ ಐದು ತಂಡಗಳ ನಡುವೆ ‘ಮಾಯಾಬಜಾರ್’ ಲೆಕ್ಕಾಚಾರ ಶುರುವಾಗಿದೆ.

1. ರಾಜಸ್ಥಾನ್ ರಾಯಲ್ಸ್ (RR):  ಪ್ರಸ್ತುತ ರೇಸ್‌ನಲ್ಲಿರುವ ತಂಡಗಳ ಪೈಕಿ ರಾಜಸ್ಥಾನ್ ತಂಡಕ್ಕೆ ಹಾದಿ ಅತ್ಯಂತ ಸರಳವಾಗಿದೆ. ತಂಡದ ಕೈಯಲ್ಲಿ ಇನ್ನೂ ಎರಡು ಪಂದ್ಯಗಳಿವೆ. ಈ ಎರಡೂ ಪಂದ್ಯಗಳನ್ನು ಗೆದ್ದರೆ ಯಾರದೇ ಹಂಗಿಲ್ಲದೆ 16 ಅಂಕಗಳೊಂದಿಗೆ ರಾಜಸ್ಥಾನ್ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ.

2. ಪಂಜಾಬ್ ಕಿಂಗ್ಸ್ (PBKS): ಪಂಜಾಬ್‌ಗೆ ಈಗ ‘ಮಾಡೂ ಇಲ್ಲವೇ ಮಡಿ’ ಪರಿಸ್ಥಿತಿ. ತಂಡವು ತನ್ನ ಕೊನೆಯ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲಲೇಬೇಕು (15 ಅಂಕ). ಇದರ ಜೊತೆಗೆ ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಒಂದನ್ನಾದರೂ ಸೋಲಲಿ ಎಂದು ಪ್ರಾರ್ಥಿಸಬೇಕಿದೆ.

3. ಕೋಲ್ಕತ್ತಾ ನೈಟ್ ರೈಡರ್ಸ್ (KKR): ಕೆಕೆಆರ್ ತಂಡಕ್ಕೂ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಎರಡನ್ನೂ ಗೆದ್ದರೆ ತಂಡ 15 ಅಂಕ ತಲುಪಲಿದೆ. ಆದರೆ ಕೇವಲ ಗೆಲುವು ಸಾಲದು, ಪಂಜಾಬ್ ಮತ್ತು ರಾಜಸ್ಥಾನ್ ತಂಡಗಳು ತಮ್ಮ ಪಂದ್ಯಗಳಲ್ಲಿ ಎಡವಬೇಕಾಗುತ್ತದೆ. ಆಗ ಮಾತ್ರ ನೆಟ್ ರನ್ ರೇಟ್ ಆಧಾರದ ಮೇಲೆ ಕೆಕೆಆರ್ ಮುಂದಿನ ಹಂತಕ್ಕೇರಲು ಸಾಧ್ಯ.

4. ಚೆನ್ನೈ ಸೂಪರ್ ಕಿಂಗ್ಸ್ (CSK): ಚೆನ್ನೈ ಸ್ಥಿತಿ ಈಗ ಅಯೋಮಯವಾಗಿದೆ. ಸಿಎಸ್‌ಕೆಗೆ ಇನ್ನು ಉಳಿದಿರುವುದು ಒಂದೇ ಒಂದು ಪಂದ್ಯ. ಈ ಪಂದ್ಯವನ್ನು ಗೆದ್ದರೂ ತಂಡ ಕೇವಲ 14 ಅಂಕಗಳನ್ನಷ್ಟೇ ಪಡೆಯಲಿದೆ. ಚೆನ್ನೈ ಪ್ಲೇಆಫ್‌ಗೇರಬೇಕಿದ್ದರೆ ಪಂಜಾಬ್, ರಾಜಸ್ಥಾನ್ ಮತ್ತು ಕೆಕೆಆರ್ ತಂಡಗಳು ತಮ್ಮ ಪಂದ್ಯಗಳಲ್ಲಿ ಸತತವಾಗಿ ಸೋಲಬೇಕಾಗುತ್ತದೆ. ಇದು ಪವಾಡ ನಡೆದರೆ ಮಾತ್ರ ಸಾಧ್ಯ.

5. ಡೆಲ್ಲಿ ಕ್ಯಾಪಿಟಲ್ಸ್ (DC): ಡೆಲ್ಲಿ ಪಡೆಗೂ ಈಗ ‘ನೆಟ್ ರನ್ ರೇಟ್’ ಹಾಗೂ ‘ಅದೃಷ್ಟ’ ಎರಡರ ಬಲವೂ ಬೇಕು. ತನ್ನ ಕೊನೆಯ ಪಂದ್ಯ ಗೆದ್ದು 14 ಅಂಕ ಗಳಿಸಿದರೂ, ಇತರ ತಂಡಗಳು ಭಾರಿ ಅಂತರದಿಂದ ಸೋಲಬೇಕಾಗುತ್ತದೆ. ಸದ್ಯದ ಮಟ್ಟಿಗೆ ಡೆಲ್ಲಿಯ ಹಾದಿ ಅತ್ಯಂತ ಕಠಿಣವಾಗಿದೆ. ಒಟ್ಟಾರೆಯಾಗಿ ಈ ವಾರದ ಅಂತ್ಯದ ವೇಳೆಗೆ 4ನೇ ಸ್ಥಾನದ ಅಸಲಿ ವಾರಸುದಾರರು ಯಾರು ಎಂಬುದು ಸ್ಪಷ್ಟವಾಗಲಿದೆ.

The post IPL 2026 Playoffs : 4ನೇ ಸ್ಥಾನಕ್ಕಾಗಿ 5 ತಂಡಗಳ ಮಹಾ ಸಮರ! ಪ್ಲೇಆಫ್ ತಲುಪಲು ಯಾರಿಗೆ ಯಾವ ಲೆಕ್ಕಾಚಾರ? appeared first on Samyukta Karnataka.