#IndianSports Archives - Samyukta Karnataka

ಭಾರತದ ಹಾಕಿ ವೈಭವ – ಪುರುಷರಿಗೆ ಚಿನ್ನ, ಮಹಿಳೆಯರಿಗೆ ಕಂಚು
ಏಷ್ಯಾ ಕಪ್‌ನಲ್ಲಿ ಭಾರತದ ಪ್ರಾಬಲ್ಯ; ಪುರುಷರ ತಂಡ ಚಾಂಪಿಯನ್, ಮಹಿಳೆಯರಿಗೆ ಮೂರನೇ ಸ್ಥಾನ

ನವದೆಹಲಿ/ (ಜಪಾನ್): 2026ರ U-18 ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದ್ದು, ಪುರುಷರ ತಂಡ ಚಿನ್ನದ ಪದಕ ಗೆದ್ದರೆ, ಮಹಿಳಾ ತಂಡ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಜೂನಿಯರ್ ಮಟ್ಟದಲ್ಲಿ ಭಾರತದ ಹಾಕಿ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಈ ಸಾಧನೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ಮಹಿಳಾ ತಂಡವು ಕಂಚಿನ ಪದಕದ ಪಂದ್ಯದಲ್ಲಿ ಕೊರಿಯಾ ವಿರುದ್ಧ 3-0 ಅಂತರದ ಭರ್ಜರಿ ಜಯ ಸಾಧಿಸಿದರೆ, ಪುರುಷರ ತಂಡ ಫೈನಲ್‌ನಲ್ಲಿ ಆತಿಥೇಯ ಜಪಾನ್ ತಂಡವನ್ನು 4-1 ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಇದನ್ನೂ ಓದಿ: ನಾರ್ವೆ ಚೆಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ: ಪ್ರಜ್ಞಾನಂದ ಹೊಸ ದಾಖಲೆ

ಮಹಿಳಾ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ : ಭಾರತದ ಮಹಿಳಾ U-18 ತಂಡದ ಸಾಧನೆಯನ್ನು ಶ್ಲಾಘಿಸಿರುವ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನಾ ಸಂದೇಶ ಪ್ರಕಟಿಸಿದ್ದಾರೆ. ಟೂರ್ನಿಯುದ್ದಕ್ಕೂ ತಂಡವು ತೋರಿದ ಧೈರ್ಯ, ಹೋರಾಟದ ಮನೋಭಾವ ಮತ್ತು ಸಾಮರ್ಥ್ಯವನ್ನು ಕೊಂಡಾಡಿರುವ ಪ್ರಧಾನಿ, ಈ ಸಾಧನೆ ಭಾರತದಲ್ಲಿ ಮಹಿಳಾ ಹಾಕಿಯ ಬೆಳೆಯುತ್ತಿರುವ ಶಕ್ತಿ ಮತ್ತು ಯುವ ಆಟಗಾರ್ತಿಯರ ಅಪಾರ ಪ್ರತಿಭೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಕೊರಿಯಾ ವಿರುದ್ಧ ಏಕಪಕ್ಷೀಯ ಗೆಲುವು : ಕಂಚಿನ ಪದಕದ ಪಂದ್ಯದಲ್ಲಿ ಭಾರತ ಆರಂಭದಿಂದಲೇ ಮೇಲುಗೈ ಸಾಧಿಸಿತು. ಎರಡನೇ ನಿಮಿಷದಲ್ಲೇ ಸಂದೀಪ್ ಕುಮಾರಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 16ನೇ ನಿಮಿಷದಲ್ಲಿ ನಾಯಕಿ ಸ್ವೀಟಿ ಕುಜುರ್ ಮತ್ತೊಂದು ಗೋಲು ದಾಖಲಿಸಿ ಮುನ್ನಡೆಯನ್ನು 2-0ಕ್ಕೆ ಹೆಚ್ಚಿಸಿದರು. ವಿರಾಮದ ಬಳಿಕವೂ ದಾಳಿಯನ್ನು ಮುಂದುವರಿಸಿದ ಭಾರತ 33ನೇ ನಿಮಿಷದಲ್ಲಿ ನೌಶೀನ್ ನಾಜ್ ಗೋಲು ಮೂಲಕ 3-0 ಅಂತರದ ಭದ್ರ ಮುನ್ನಡೆ ಸಾಧಿಸಿತು.

ಇದನ್ನೂ ಓದಿ: ಸದ್ಯದಲ್ಲೇ ರಕ್ಷಿತ್ ಶೆಟ್ಟಿ ದರ್ಶನ : BIG ಅಪ್ಡೇಟ್ ಕೊಟ್ಟ ರಿಷಬ್ ಶೆಟ್ಟಿ

ಭಾರತದ ರಕ್ಷಣಾ ವಿಭಾಗವು ಕೊರಿಯಾ ತಂಡಕ್ಕೆ ಯಾವುದೇ ಅವಕಾಶ ನೀಡದೆ ಕ್ಲೀನ್‌ಶೀಟ್‌ನೊಂದಿಗೆ ಪಂದ್ಯ ಮುಗಿಸಿತು.

ನೌಶೀನ್ ನಾಜ್ ಟೂರ್ನಿಯ ಟಾಪ್ ಸ್ಕೋರರ್: ಕಂಚಿನ ಪದಕದ ಪಂದ್ಯದಲ್ಲಿ ಗೋಲು ದಾಖಲಿಸಿದ ನೌಶೀನ್ ನಾಜ್, ಒಟ್ಟು 12 ಗೋಲುಗಳೊಂದಿಗೆ ಟೂರ್ನಿಯ ಪ್ರಮುಖ ಗೋಲು ಸ್ಕೋರರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಪಂದ್ಯದಲ್ಲಿ ಆರಂಭಿಕ ಗೋಲು ಗಳಿಸಿ ತಂಡದ ಗೆಲುವಿಗೆ ಭದ್ರ ಅಡಿಪಾಯ ಹಾಕಿದ ಸಂದೀಪ್ ಕುಮಾರಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

ಸೆಮಿಫೈನಲ್ ನಿರಾಸೆಯಿಂದ ಚೇತರಿಸಿಕೊಂಡ ಭಾರತ: ಮಹಿಳಾ ತಂಡ ಸೆಮಿಫೈನಲ್‌ನಲ್ಲಿ ಚೀನಾ ವಿರುದ್ಧ ಶೂಟೌಟ್‌ನಲ್ಲಿ ಸೋತು ಫೈನಲ್ ಅವಕಾಶ ಕಳೆದುಕೊಂಡಿತ್ತು. ಆದರೆ ನಿರಾಸೆಯಿಂದ ಹೊರಬಂದು ಕಂಚಿನ ಪದಕದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಟೂರ್ನಿಯನ್ನು ಯಶಸ್ವಿಯಾಗಿ ಮುಗಿಸಿತು.

ಇದನ್ನೂ ಓದಿ: ಶಿಕ್ಷಣ ಸಚಿವರ ವಿರುದ್ಧ ಜಂತರ್ ಮಂತರ್‌ನಲ್ಲಿ CJP ಭಾರೀ ಪ್ರತಿಭಟನೆ

ಪುರುಷರ ತಂಡ ಚಾಂಪಿಯನ್ : ಇನ್ನೊಂದೆಡೆ ಜಪಾನ್‌ನ ಕಾಕಮಿಗಹರಾದಲ್ಲಿ ನಡೆದ ಪುರುಷರ U-18 ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ಆತಿಥೇಯ ಜಪಾನ್ ತಂಡವನ್ನು 4-1 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದಿತು. ಭಾರತದ ಪರ ಆಶಿಶ್ ತಾನಿ ಪೂರ್ಣಿ 2ನೇ, 28ನೇ ಹಾಗೂ 34ನೇ ನಿಮಿಷಗಳಲ್ಲಿ ಗೋಲು ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ನಾಯಕ ಕೇತನ್ ಕುಶ್ವಾಹ 30ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಜಪಾನ್ ಪರ ನುಮಾಡಾ ಗಕು 52ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.

ಆಶಿಶ್ ತಾನಿ ಪೂರ್ಣಿ ಮಿಂಚು : ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಆಶಿಶ್ ತಾನಿ ಪೂರ್ಣಿ ಒಟ್ಟು 13 ಗೋಲುಗಳೊಂದಿಗೆ ಸ್ಪರ್ಧೆಯ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ಫೈನಲ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಅವರ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

ಇದನ್ನೂ ಓದಿ: ಕುನೋ ಕಾಡಿಗೆ ಮರಳಿದ ಅಪರೂಪದ ಅತಿಥಿ ಕಾಡು ಬೆಕ್ಕು (ಕ್ಯಾರಕಲ್)

ಪುರಷರ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ : ನಮ್ಮ ಯುವ ಹಾಕಿ ಆಟಗಾರರ ಅದ್ಭುತ ಸಾಧನೆ! 2026 ರ ಪುರುಷರ U18 ಏಷ್ಯಾ ಕಪ್ ಗೆದ್ದ ಭಾರತೀಯ ಪುರುಷರ U18 ಹಾಕಿ ತಂಡಕ್ಕೆ ಅಭಿನಂದನೆಗಳು. ತಂಡವು ಪಂದ್ಯಾವಳಿಯಾದ್ಯಂತ ಅಸಾಧಾರಣ ಕೌಶಲ್ಯ ಮತ್ತು ತಂಡದ ಕೆಲಸವನ್ನು ಪ್ರದರ್ಶಿಸಿತು, ಫೈನಲ್‌ನಲ್ಲಿ ಸ್ಮರಣೀಯ ಜಯ ಸಾಧಿಸಿತು. ಈ ಗೆಲುವು ನಮ್ಮ ಯುವಕರಲ್ಲಿ ಹಾಕಿಯ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ. ತಂಡದ ಭವಿಷ್ಯದ ಪ್ರಯತ್ನಗಳಿಗಾಗಿ ನನ್ನ ಶುಭಾಶಯಗಳು ಎಂದಿದ್ದಾರೆ.

ಆಟಗಾರರಿಗೆ ನಗದು ಬಹುಮಾನ ಘೋಷಣೆ: ಎರಡೂ ತಂಡಗಳ ಸಾಧನೆಯನ್ನು ಗೌರವಿಸಿ ಹಾಕಿ ಇಂಡಿಯಾ ನಗದು ಬಹುಮಾನ ಘೋಷಿಸಿದೆ. ಪುರುಷರ U-18 ತಂಡದ ಪ್ರತಿಯೊಬ್ಬ ಆಟಗಾರರಿಗೆ ₹3 ಲಕ್ಷ, ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರಿಗೆ ₹1.5 ಲಕ್ಷ, ಮಹಿಳಾ U-18 ತಂಡದ ಪ್ರತಿಯೊಬ್ಬ ಆಟಗಾರ್ತಿಗೆ ₹1 ಲಕ್ಷ, ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರಿಗೆ ₹50,000 ನಗದು ಬಹುಮಾನ ಘೋಷಿಸಲಾಗಿದೆ.

ಭವಿಷ್ಯದ ತಾರೆಯರತ್ತ ದೇಶದ ಗಮನ : ಜೂನಿಯರ್ ಮಟ್ಟದಲ್ಲಿ ಭಾರತ ಪುರುಷ ಮತ್ತು ಮಹಿಳಾ ತಂಡಗಳ ಸಾಧನೆ ದೇಶದ ಹಾಕಿ ಭವಿಷ್ಯದ ಬಗ್ಗೆ ಹೊಸ ಭರವಸೆ ಮೂಡಿಸಿದೆ. ಈ ತಂಡಗಳ ಹಲವು ಆಟಗಾರರು ಮುಂದಿನ ದಿನಗಳಲ್ಲಿ ಹಿರಿಯ ರಾಷ್ಟ್ರೀಯ ತಂಡದ ಪ್ರಮುಖ ಆಧಾರಸ್ತಂಭಗಳಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಸ್ವಾಮೀಜಿ ವಿರುದ್ಧದ ಪೋಕ್ಸೊ ಪ್ರಕರಣ ವಿಚಾರಣೆ ಮುಂದೂಡಿಕೆ

The post ಭಾರತದ ಹಾಕಿ ವೈಭವ – ಪುರುಷರಿಗೆ ಚಿನ್ನ, ಮಹಿಳೆಯರಿಗೆ ಕಂಚು appeared first on Samyukta Karnataka.

ನಾರ್ವೆ ಚೆಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ: ಪ್ರಜ್ಞಾನಂದ ಹೊಸ ದಾಖಲೆ
ನಾರ್ವೆ ಚೆಸ್ 2026 ಚಾಂಪಿಯನ್ ಪ್ರಜ್ಞಾನಂದ: ಇತಿಹಾಸ ಬರೆದ ಭಾರತದ ಯುವ ಚೆಸ್ ತಾರೆ

ಓಸ್ಲೋ: ಭಾರತೀಯ ಚೆಸ್‌ನ ಯುವ ತಾರೆ ಆರ್ ಪ್ರಜ್ಞಾನಂದ ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಭಾರತೀಯ ಚೆಸ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ವಿಶ್ವದ ಅಗ್ರ ಆಟಗಾರರು ಪಾಲ್ಗೊಂಡಿದ್ದ ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಅಪೂರ್ವ ದಾಖಲೆಗೆ ಪಾತ್ರರಾಗಿದ್ದಾರೆ.

ನಾರ್ವೆಯ ಓಸ್ಲೋದಲ್ಲಿ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ (Vincent Keymer) ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಪ್ರಜ್ಞಾನಂದ, ನಿರ್ಣಾಯಕ ಜಯದೊಂದಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡರು. ಟೂರ್ನಿಯ ಆರಂಭಿಕ ಹಂತದಲ್ಲಿ ಎದುರಾದ ಹಿನ್ನಡೆಯನ್ನು ಮೀರಿ ತೋರಿದ ಅವರ ಅಸಾಧಾರಣ ಕಂಬ್ಯಾಕ್ ಇದೀಗ ವಿಶ್ವ ಚೆಸ್ ವಲಯದ ಪ್ರಮುಖ ಚರ್ಚೆಯ ವಿಷಯವಾಗಿದೆ.

ಕೊನೆಯ ಸ್ಥಾನದಿಂದ ಚಾಂಪಿಯನ್ ಪಟ್ಟದವರೆಗೆ : ಟೂರ್ನಿಯ ಮಧ್ಯಭಾಗದಲ್ಲಿ ಪ್ರಜ್ಞಾನಂದ ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದರು. ಇದರ ಪರಿಣಾಮವಾಗಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದರು. ಆದರೆ ಅಲ್ಲಿಂದ ಆರಂಭವಾದ ಅವರ ಪುನರಾಗಮನ ಅದ್ಭುತವಾಗಿತ್ತು. ಅವರು ಕ್ಲಾಸಿಕಲ್ ಚೆಸ್ ಮಾದರಿಯಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಅಸಾಧಾರಣ ಪ್ರದರ್ಶನ ನೀಡಿದರು.

ಸತತ ನಾಲ್ಕು ಗೆಲುವು: ಅಲಿರೆಝಾ ಫಿರೌಜ್ಜಾ (Alireza Firouzja) ವಿರುದ್ಧ ಜಯ, ಮ್ಯಾಗ್ನಸ್ ಕಾರ್ಲ್‌ಸನ್ (Magnus Carlsen) ವಿರುದ್ಧ ಐತಿಹಾಸಿಕ ಗೆಲುವು, ಹಾಗೆ ಡಿ ಗುಕೇಶ್ (D Gukesh) ವಿರುದ್ಧ ವಿಜಯದ ನಂತರ ವಿನ್ಸೆಂಟ್ ಕೀಮರ್ (Vincent Keymer) ವಿರುದ್ಧ ಅಂತಿಮ ಸುತ್ತಿನ ನಿರ್ಣಾಯಕ ಜಯದ ಮೂಲಕ ಈ ನಾಲ್ಕು ಗೆಲುವುಗಳು ಪ್ರಜ್ಞಾನಂದರನ್ನು ಪ್ರಶಸ್ತಿಯತ್ತ ಕೊಂಡೊಯ್ದವು.

ಅಂತಿಮ ಸುತ್ತಿನಲ್ಲಿ ರೋಚಕ ತಿರುವು : ಅಂತಿಮ ಸುತ್ತಿನ ಪಂದ್ಯಕ್ಕೂ ಮುನ್ನ ಅಮೆರಿಕದ ವೆಸ್ಲಿ ಸೋ (Wesley So) ಅರ್ಧ ಅಂಕದ ಮುನ್ನಡೆಯಲ್ಲಿದ್ದರು. ಹೀಗಾಗಿ ಪ್ರಶಸ್ತಿ ಗೆಲ್ಲಲು ಪ್ರಜ್ಞಾನಂದ ಅವರಿಗೆ ಗೆಲುವು ಅನಿವಾರ್ಯವಾಗಿತ್ತು. ಒಂದೆಡೆ ವೆಸ್ಲಿ ಸೋ ತಮ್ಮ ಪಂದ್ಯವನ್ನು ಡ್ರಾ ಮಾಡಿಕೊಂಡರೆ, ಮತ್ತೊಂದೆಡೆ ಪ್ರಜ್ಞಾನಂದ ಕೀಮರ್ ವಿರುದ್ಧ ಕ್ಲಾಸಿಕಲ್ ಪಂದ್ಯದಲ್ಲಿ ನೇರ ಜಯ ಸಾಧಿಸಿದರು. ಇದರೊಂದಿಗೆ ಅವರಿಗೆ ಪೂರ್ಣ ಮೂರು ಅಂಕಗಳು ಲಭಿಸಿ ಒಟ್ಟು 18 ಅಂಕಗಳೊಂದಿಗೆ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಅಂತಿಮ ಅಂಕಪಟ್ಟಿ : ನಾರ್ವೆ ಚೆಸ್ 2026 ಟೂರ್ನಿಯ ಅಂತಿಮ ಅಂಕಪಟ್ಟಿಯಲ್ಲಿ  ಆರ್ ಪ್ರಜ್ಞಾನಂದ ಭಾರತ 18,  ವೆಸ್ಲಿ ಸೋ ಅಮೆರಿಕ 17, ಅಲಿರೆಝಾ ಫಿರೌಜ್ಜಾ ಫ್ರಾನ್ಸ್ 15.5,  ಮ್ಯಾಗ್ನಸ್ ಕಾರ್ಲ್‌ಸನ್ ನಾರ್ವೆ 13,  ವಿನ್ಸೆಂಟ್ ಕೀಮರ್ ಜರ್ಮನಿ 11,  ಡಿ ಗುಕೇಶ್ ಭಾರತ 8

ಕಾರ್ಲ್‌ಸನ್ ವಿರುದ್ಧ ಐತಿಹಾಸಿಕ ‘ಡಬಲ್’ : ಈ ಟೂರ್ನಿಯಲ್ಲಿನ ಪ್ರಜ್ಞಾನಂದರ ಅತ್ಯಂತ ಮಹತ್ವದ ಸಾಧನೆ ಎಂದರೆ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಅವರ ತವರಿನಲ್ಲೇ ಒಂದೇ ಟೂರ್ನಿಯಲ್ಲಿ ಎರಡು ಬಾರಿ ಕ್ಲಾಸಿಕಲ್ ಚೆಸ್‌ನಲ್ಲಿ ಸೋಲಿಸಿದ್ದು. ಒಮ್ಮೆ ಬಿಳಿ ದಾಳಗಳೊಂದಿಗೆ ಹಾಗೂ ಮತ್ತೊಮ್ಮೆ ಕಪ್ಪು ದಾಳಗಳೊಂದಿಗೆ ಗೆಲ್ಲುವ ಮೂಲಕ ಅವರು ಕಾರ್ಲ್‌ಸನ್‌ಗೆ ‘ಕ್ಲಾಸಿಕಲ್ ಡಬಲ್’ ಆಘಾತ ನೀಡಿದರು.

ಈ ಸಾಧನೆಯನ್ನು ಭಾರತದ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ (Viswanathan Anand) 2007ರಲ್ಲಿ ಮಾಡಿದ್ದರು. ಸುಮಾರು 19 ವರ್ಷಗಳ ಬಳಿಕ ಇದೀಗ ಪ್ರಜ್ಞಾನಂದ ಆ ಅಪರೂಪದ ದಾಖಲೆಯನ್ನು ಸರಿಗಟ್ಟಿದ್ದಾರೆ.

ತಾಯಿಯ ಒಂದು ಫೋನ್ ಕರೆ ಬದಲಿಸಿದ ಕಥೆ : ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಪ್ರಜ್ಞಾನಂದ, ಟೂರ್ನಿಯ ಮಧ್ಯದಲ್ಲಿ ಸತತ ಸೋಲುಗಳಿಂದ ನಿರಾಶರಾಗಿದ್ದ ವೇಳೆ ತಮ್ಮ ತಾಯಿ ನಾಗಲಕ್ಷ್ಮಿ ಮಾಡಿದ ಒಂದು ಫೋನ್ ಕರೆ ಹೊಸ ಆತ್ಮವಿಶ್ವಾಸ ತುಂಬಿತು ಎಂದು ಹೇಳಿದರು. ತಾಯಿಯ ಪ್ರೋತ್ಸಾಹವೇ ಮತ್ತೆ ಆಟದ ಮೇಲೆ ಗಮನ ಕೇಂದ್ರೀಕರಿಸಲು ನೆರವಾಯಿತು. ಆ ಪ್ರೇರಣೆಯ ಫಲವಾಗಿ ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದು ಕೊನೆಗೆ ಚಾಂಪಿಯನ್ ಪಟ್ಟವನ್ನು ಗೆಲ್ಲಲು ಸಾಧ್ಯವಾಯಿತು ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಭಾರತೀಯ ಚೆಸ್‌ಗೆ ಹೊಸ ಮೈಲಿಗಲ್ಲು: ಇತ್ತೀಚಿನ ವರ್ಷಗಳಲ್ಲಿ ಭಾರತವು ವಿಶ್ವ ಚೆಸ್ ವೇದಿಕೆಯಲ್ಲಿ ವೇಗವಾಗಿ ಬೆಳೆಯುತ್ತಿದೆ. ವಿಶ್ವ ಚಾಂಪಿಯನ್ ಡಿ ಗುಕೇಶ್, ಅಗ್ರ ಗ್ರ್ಯಾಂಡ್‌ಮಾಸ್ಟರ್‌ಗಳಾದ ಅರ್ಜುನ್ ಎರಿಗೈಸಿ ಹಾಗೂ ಪ್ರಜ್ಞಾನಂದರಂತಹ ಯುವ ಪ್ರತಿಭೆಗಳು ಭಾರತದ ಪ್ರಾಬಲ್ಯವನ್ನು ಹೆಚ್ಚಿಸುತ್ತಿವೆ.

ನಾರ್ವೆ ಚೆಸ್‌ನಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಪ್ರಜ್ಞಾನಂದ ಕೇವಲ ವೈಯಕ್ತಿಕ ಸಾಧನೆ ಮಾಡಿಲ್ಲ; ಭಾರತೀಯ ಚೆಸ್‌ನ ಸುವರ್ಣ ಭವಿಷ್ಯಕ್ಕೂ ಮತ್ತೊಂದು ಬಲಿಷ್ಠ ಸಂದೇಶ ನೀಡಿದ್ದಾರೆ.

ವಾಹನ ಸವಾರರಿಗೆ ಗುಡ್ ನ್ಯೂಸ್: ಹಳೆಯ ಟ್ರಾಫಿಕ್ ದಂಡಕ್ಕೆ 50% ದಂಡ ರಿಯಾಯಿತಿ

The post ನಾರ್ವೆ ಚೆಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ: ಪ್ರಜ್ಞಾನಂದ ಹೊಸ ದಾಖಲೆ appeared first on Samyukta Karnataka.

ವಿನೇಶ್ ಫೋಗಟ್ ಏಷ್ಯನ್ ಗೇಮ್ಸ್ ಕನಸು ಭಗ್ನ: ಮೀನಾಕ್ಷಿ ಫೈನಲ್‌ಗೆ
ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ವಿನೇಶ್ ಫೋಗಟ್‌ಗೆ ನಿರಾಸೆ; ಸೆಮಿಫೈನಲ್‌ನಲ್ಲಿ ಮೀನಾಕ್ಷಿ ಗೋಯತ್ ವಿರುದ್ಧ ಸೋಲು

ನವದೆಹಲಿ: 2026ರ ಏಷ್ಯನ್ ಗೇಮ್ಸ್‌ಗೆ ಭಾರತೀಯ ಕುಸ್ತಿ ತಂಡದ ಆಯ್ಕೆಗಾಗಿ ನಡೆದ ಟ್ರಯಲ್ಸ್‌ನಲ್ಲಿ ಭಾರತದ ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರ ಅಭಿಯಾನ ಸೆಮಿಫೈನಲ್ ಹಂತದಲ್ಲೇ ಅಂತ್ಯಗೊಂಡಿದೆ. ಮಹಿಳೆಯರ 53 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಮೀನಾಕ್ಷಿ ಗೋಯತ್ ವಿರುದ್ಧ 4-6 ಅಂತರದಿಂದ ಸೋತ ವಿನೇಶ್, ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಈ ಸೋಲು ವಿನೇಶ್ ಅವರ ಪುನರಾಗಮನದ ಪ್ರಯತ್ನಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಥಾನ ಪಡೆಯುವ ಕನಸಿಗೆ ತಾತ್ಕಾಲಿಕ ತೆರೆ ಬಿದ್ದಿದೆ.

ಭರ್ಜರಿ ಆರಂಭ, ಆದರೆ ಅಂತ್ಯದಲ್ಲಿ ನಿರಾಸೆ : ಟ್ರಯಲ್ಸ್‌ನಲ್ಲಿ ವಿನೇಶ್ ಫೋಗಟ್ ಉತ್ತಮ ಆರಂಭ ಮಾಡಿದ್ದರು. ಮೊದಲ ಸುತ್ತಿನ ಪಂದ್ಯದಲ್ಲಿ ಅನುಭವಿ ಕುಸ್ತಿಪಟು ಜ್ಯೋತಿ ಅವರನ್ನು 7-1 ಅಂತರದಿಂದ ಮಣಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ನಂತರದ ಕಠಿಣ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ನಿಶು ವಿರುದ್ಧವೂ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.

ಆದರೆ ಸೆಮಿಫೈನಲ್‌ನಲ್ಲಿ ಎದುರಾದ ಮೀನಾಕ್ಷಿ ಗೋಯತ್ ಅವರ ಸವಾಲು ವಿನೇಶ್‌ಗೆ ದೊಡ್ಡ ಅಡೆತಡೆಯಾಯಿತು. ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಮೀನಾಕ್ಷಿ, ನಿರ್ಣಾಯಕ ಕ್ಷಣಗಳಲ್ಲಿ ಅಂಕಗಳನ್ನು ಕಲೆಹಾಕಿ 6-4 ಅಂತರದಲ್ಲಿ ಗೆಲುವು ಸಾಧಿಸಿದರು.

2026ರ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ವಿನೇಶ್ ಫೋಗಟ್ ಅವರ ಅಭಿಯಾನ ಸೆಮಿಫೈನಲ್‌ನಲ್ಲೇ ಅಂತ್ಯಗೊಂಡಿದೆ. 53 ಕೆಜಿ ವಿಭಾಗದಲ್ಲಿ ಮೀನಾಕ್ಷಿ ಗೋಯತ್ ವಿರುದ್ಧ 6-4 ಅಂತರದಿಂದ ಸೋತ ವಿನೇಶ್, ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶ ಕಳೆದುಕೊಂಡಿದ್ದಾರೆ.https://t.co/2A0pPEQLxl pic.twitter.com/IrPABnaeZV
— Samyukta Karnataka (@SamyuktaKarnatk) May 30, 2026

ಮೀನಾಕ್ಷಿ ಮತ್ತೊಮ್ಮೆ ತನ್ನ ಸಾಮರ್ಥ್ಯ ಸಾಬೀತು : ಮೀನಾಕ್ಷಿ ಗೋಯತ್ ಈಗಾಗಲೇ ಏಷ್ಯನ್ ಚಾಂಪಿಯನ್‌ಶಿಪ್ ಟ್ರಯಲ್ಸ್‌ನಲ್ಲಿ ಭಾರತದ ಸ್ಟಾರ್ ಕುಸ್ತಿಪಟು ಆಂಟಿಮ್ ಪಂಗಲ್ ಅವರನ್ನು ಸೋಲಿಸಿ ಗಮನ ಸೆಳೆದಿದ್ದರು. ಇದೀಗ ವಿನೇಶ್ ಫೋಗಟ್ ಅವರನ್ನು ಮಣಿಸುವ ಮೂಲಕ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ಈ ಗೆಲುವಿನೊಂದಿಗೆ ಮೀನಾಕ್ಷಿ ಫೈನಲ್ ಪ್ರವೇಶಿಸಿದ್ದು, ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ಪಡೆಯುವತ್ತ ಮತ್ತಷ್ಟು ಸಮೀಪಿಸಿದ್ದಾರೆ.

ವಿವಾದದ ನಡುವೆಯೇ ಟ್ರಯಲ್ಸ್‌ಗೆ ಅವಕಾಶ : ಟ್ರಯಲ್ಸ್ ಆರಂಭಕ್ಕೂ ಮುನ್ನ ವಿನೇಶ್ ಫೋಗಟ್ ಅವರ ತೂಕ ವಿಭಾಗದ ವಿಚಾರದಲ್ಲಿ ಸಾಕಷ್ಟು ಚರ್ಚೆ ಮತ್ತು ವಿವಾದ ಉಂಟಾಗಿತ್ತು. ಆರಂಭದಲ್ಲಿ ಭಾರತೀಯ ಕುಸ್ತಿ ಒಕ್ಕೂಟ (WFI) ಅವರು ಕೇವಲ 50 ಕೆಜಿ ವಿಭಾಗದಲ್ಲಿ ಮಾತ್ರ ಸ್ಪರ್ಧಿಸಬಹುದು ಎಂದು ತಿಳಿಸಿತ್ತು.

ಆದರೆ ವಿನೇಶ್ ಅವರ ಆಕ್ಷೇಪಣೆ ಹಾಗೂ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ WFI ತನ್ನ ನಿಲುವು ಬದಲಿಸಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು. ಈ ನಿರ್ಧಾರದ ಬಳಿಕ ಟ್ರಯಲ್ಸ್‌ನಲ್ಲಿ ಕಣಕ್ಕಿಳಿದ ವಿನೇಶ್ ಆರಂಭಿಕ ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಅಂತಿಮ ಗುರಿ ತಲುಪಲು ವಿಫಲರಾದರು.

ಏಷ್ಯನ್ ಗೇಮ್ಸ್ ಕನಸು ಮುಂದೂಡಿಕೆ : ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆಯಾಗಿರುವ ವಿನೇಶ್ ಫೋಗಟ್, ಭಾರತೀಯ ಮಹಿಳಾ ಕುಸ್ತಿಯ ಪ್ರಮುಖ ಮುಖಗಳಲ್ಲಿ ಒಬ್ಬರು. ಆದರೆ ಈ ಸೋಲಿನಿಂದಾಗಿ 2026ರ ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶ ಕಳೆದುಕೊಂಡಿದ್ದು, ಅವರ ಮುಂದಿನ ಗುರಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮುಂಬರುವ ಸ್ಪರ್ಧೆಗಳತ್ತ ಕೇಂದ್ರೀಕರಿಸುವಂತಾಗಿದೆ.

ಇತ್ತ ಮೀನಾಕ್ಷಿ ಗೋಯತ್ ಅವರ ಉದಯೋನ್ಮುಖ ಪ್ರದರ್ಶನ ಭಾರತೀಯ ಮಹಿಳಾ ಕುಸ್ತಿಗೆ ಹೊಸ ಭರವಸೆ ಮೂಡಿಸಿದ್ದು, ಭವಿಷ್ಯದ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಅವರು ಗಮನ ಸೆಳೆಯುವ ನಿರೀಕ್ಷೆ ಹೆಚ್ಚಾಗಿದೆ.

ಕುಸ್ತಿಪಟು ವಿನೇಶ್ ಫೋಗಟ್ ಸೆಮಿಫೈನಲ್‌ನಲ್ಲಿ ಸೋತ ನಂತರ ಮಾಧ್ಯಮದವರೊಂದಿಗೆ ಮಾತನಾಡಿ “ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ಅನುಮತಿ ನೀಡಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅದಕ್ಕಾಗಿಯೇ ನಾನು ಇಂದು ಮ್ಯಾಟ್‌ನಲ್ಲಿ ಸ್ಪರ್ಧಿಸಲು ಸಾಧ್ಯವಾಯಿತು, ಇಲ್ಲದಿದ್ದರೆ, ಅವರು ಯಾವುದೇ ಸಂದರ್ಭದಲ್ಲೂ ನನಗೆ ಮ್ಯಾಟ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಿರಲಿಲ್ಲ.

“ನಾನು ಇಡೀ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೆ, ನಾನು ಒಂದು ಕಡೆ ಮತ್ತು ಉಳಿದವರೆಲ್ಲರೂ ಇನ್ನೊಂದು ಕಡೆ ಇದ್ದೆವು” ಎಂದು ವಿನೇಶ್ ಭಾರತೀಯ ಕುಸ್ತಿ ಒಕ್ಕೂಟದೊಂದಿಗೆ (WFI) ತನ್ನ ದೀರ್ಘಕಾಲದ ಹೋರಾಟವನ್ನು ಉಲ್ಲೇಖಿಸುತ್ತಾ ಹೇಳಿದರು.

The post ವಿನೇಶ್ ಫೋಗಟ್ ಏಷ್ಯನ್ ಗೇಮ್ಸ್ ಕನಸು ಭಗ್ನ: ಮೀನಾಕ್ಷಿ ಫೈನಲ್‌ಗೆ appeared first on Samyukta Karnataka.

ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ವಿನೇಶ್‌ಗೆ ಆರಂಭಿಕ ಗೆಲುವು
ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ವಿನೇಶ್ ಫೋಗಟ್ ಭರ್ಜರಿ ಆರಂಭ: 53 ಕೆಜಿ ವಿಭಾಗದಲ್ಲಿ ಅವಕಾಶ ಪಡೆದು ಮೊದಲ ಪಂದ್ಯದಲ್ಲೇ ಪ್ರಾಬಲ್ಯದ ಪ್ರದರ್ಶನ 7-1 ಜಯ

ನವದೆಹಲಿ: ಏಷ್ಯನ್ ಗೇಮ್ಸ್ 2026ರ ಭಾರತೀಯ ತಂಡಕ್ಕೆ ಆಯ್ಕೆ ನಡೆಯುತ್ತಿರುವ ಟ್ರಯಲ್ಸ್‌ನಲ್ಲಿ ಭಾರತದ ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಭರ್ಜರಿ ಆರಂಭ ಮಾಡಿದ್ದಾರೆ. ಶನಿವಾರ ನಡೆದ ಮಹಿಳೆಯರ 53 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಜ್ಯೋತಿ ಅವರನ್ನು 7-1 ಅಂತರದಿಂದ ಮಣಿಸಿದ ವಿನೇಶ್, ಸೆಮಿಫೈನಲ್‌ಗೆ ಲಗ್ಗೆಯಿಟ್ಟು ಏಷ್ಯನ್ ಗೇಮ್ಸ್ ಟಿಕೆಟ್ ಪಡೆಯುವತ್ತ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಇತ್ತೀಚೆಗೆ ನ್ಯಾಯಾಲಯದ ಆದೇಶ, ತೂಕ ವಿಭಾಗದ ವಿವಾದ ಹಾಗೂ ಭಾರತೀಯ ಕುಸ್ತಿ ಒಕ್ಕೂಟದ (WFI) ನಿಲುವಿನ ಕಾರಣ ಸುದ್ದಿಯಲ್ಲಿದ್ದ ವಿನೇಶ್, ಅಖಾಡದಲ್ಲಿ ತಮ್ಮ ಅನುಭವ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿ ಗೆಲುವಿನ ನಗೆ ಬೀರಿದರು.

ಆರಂಭದಲ್ಲಿ ಎಚ್ಚರಿಕೆ, ನಂತರ ಸಂಪೂರ್ಣ ಪ್ರಾಬಲ್ಯ : ಪಂದ್ಯದ ಆರಂಭದಲ್ಲಿ ವಿನೇಶ್ ಫೋಗಟ್ ಜಾಗರೂಕ ಆಟವಾಡಿದರು. ಬಹುತೇಕ ಸಮಯ ಸ್ಟ್ಯಾಂಡಿಂಗ್ ಕುಸ್ತಿಯಲ್ಲೇ ತೊಡಗಿಕೊಂಡ ಅವರು ಎದುರಾಳಿಯ ಚಲನೆಗಳನ್ನು ಗಮನಿಸುತ್ತಿದ್ದರು. ಆರಂಭಿಕ ಹಂತದಲ್ಲಿ ಪುಶ್-ಔಟ್ ಪಾಯಿಂಟ್ ಮೂಲಕ ಮುನ್ನಡೆ ಪಡೆದ ಅವರು ಬಳಿಕ ಡಬಲ್ ಲೆಗ್ ದಾಳಿಗೆ ಮುಂದಾದರೂ ಅಂಕ ಗಳಿಸಲು ಸಾಧ್ಯವಾಗಲಿಲ್ಲ.

ಎರಡನೇ ಅವಧಿಯಲ್ಲಿ ಮಾತ್ರ ಪಂದ್ಯದ ಚಿತ್ರಣ ಸಂಪೂರ್ಣ ಬದಲಾಯಿತು. ಬಲಗಾಲಿನ ದಾಳಿಯನ್ನು ಯಶಸ್ವಿ ಟೇಕ್‌ಡೌನ್ ಆಗಿ ಪರಿವರ್ತಿಸಿದ ವಿನೇಶ್ 3-0 ಮುನ್ನಡೆ ಪಡೆದರು. ಬಳಿಕ ಜ್ಯೋತಿ ನಡೆಸಿದ ದಾಳಿಯನ್ನು ಸಮರ್ಥವಾಗಿ ವಿಫಲಗೊಳಿಸಿ ಪ್ರತಿದಾಳಿಯಲ್ಲಿ ಎರಡು ವೇಗದ ಚಲನೆಗಳನ್ನು ಯಶಸ್ವಿಗೊಳಿಸಿ ಸ್ಕೋರ್ ಅನ್ನು 7-0ಕ್ಕೆ ಏರಿಸಿದರು. ಅಂತಿಮ ಹಂತದಲ್ಲಿ ಜ್ಯೋತಿ ಒಂದು ಪುಶ್-ಔಟ್ ಪಾಯಿಂಟ್ ಪಡೆದರೂ ಪಂದ್ಯ ವಿನೇಶ್ ಪರ 7-1 ಅಂತರದಲ್ಲಿ ಅಂತ್ಯಗೊಂಡಿತು.

ಸೆಮಿಫೈನಲ್‌ನಲ್ಲಿ ಮೀನಾಕ್ಷಿ ಗೋಯತ್ ಸವಾಲು : ಈ ಗೆಲುವಿನೊಂದಿಗೆ ವಿನೇಶ್ ಫೋಗಟ್ ಸೆಮಿಫೈನಲ್ ಪ್ರವೇಶಿಸಿದ್ದು, ಪ್ರತಿಭಾವಂತ ಕುಸ್ತಿಪಟು ಮೀನಾಕ್ಷಿ ಗೋಯತ್ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಬದಿಯಲ್ಲಿ ಭಾರತದ ಮತ್ತೊಬ್ಬ ಸ್ಟಾರ್ ಕುಸ್ತಿಪಟು ಆಂಟಿಮ್ ಪಂಗಲ್ ಕೂಡ ಭರ್ಜರಿ ಪ್ರದರ್ಶನ ನೀಡಿ ಸೆಮಿಫೈನಲ್ ತಲುಪಿದ್ದಾರೆ.

ಎರಡು ವರ್ಷಗಳ ನಂತರ ಮ್ಯಾಟ್‌ಗೆ ಮರಳಿದ ವಿನೇಶ್ ಫೋಗಟ್ ಮೊದಲ ಪಂದ್ಯವನ್ನು ಗೆದ್ದಾಗ ಜೋರಾಗಿ ಹರ್ಷೋದ್ಗಾರಗಳು ಮೊಳಗಿದವು. 53 ಕೆಜಿ ವಿಭಾಗದ ಎರಡನೇ ಸುತ್ತಿನಲ್ಲಿ ಅವರು ಜ್ಯೋತಿಯನ್ನು 7-1 ಅಂತರದಿಂದ ಸೋಲಿಸಿದರು.https://t.co/CHHKAyytrE pic.twitter.com/NiIzGN3i7y
— Samyukta Karnataka (@SamyuktaKarnatk) May 30, 2026

ಕೇವಲ 34 ಸೆಕೆಂಡುಗಳಲ್ಲಿ ಗೆದ್ದ ಆಂಟಿಮ್ ಪಂಗಲ್ : ಮಹಿಳೆಯರ ವಿಭಾಗದ ಮತ್ತೊಂದು ಪಂದ್ಯದಲ್ಲಿ ಆಂಟಿಮ್ ಪಂಗಲ್ ಎದುರಾಳಿ ತನ್ನು ಅವರನ್ನು ಕೇವಲ 34 ಸೆಕೆಂಡುಗಳಲ್ಲಿ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಮಣಿಸಿದರು. ತಮ್ಮ ವಿಶಿಷ್ಟ ತಂತ್ರಗಳಿಂದ ಎದುರಾಳಿಯನ್ನು ಐದು ಬಾರಿ ಉರುಳಿಸಿದ ಆಂಟಿಮ್, ಟ್ರಯಲ್ಸ್‌ನಲ್ಲಿ ಚಾಂಪಿಯನ್ ಪಟ್ಟಿಯ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ಸೆಮಿಫೈನಲ್ ಹಂತಗಳನ್ನು ಯಶಸ್ವಿಯಾಗಿ ದಾಟಿದರೆ ವಿನೇಶ್ ಮತ್ತು ಆಂಟಿಮ್ ನಡುವಿನ ಫೈನಲ್ ಪಂದ್ಯ ಕುಸ್ತಿ ಅಭಿಮಾನಿಗಳ ಗಮನ ಸೆಳೆಯುವ ಸಾಧ್ಯತೆಯಿದೆ.

53 ಕೆಜಿ ವಿಭಾಗದ ವಿವಾದಕ್ಕೆ ತೆರೆ : ದಿನದ ಆರಂಭದಲ್ಲಿ ಟ್ರಯಲ್ಸ್‌ಗೆ ಮುನ್ನ ಮತ್ತೊಂದು ವಿವಾದ ಸೃಷ್ಟಿಯಾಗಿತ್ತು. ವಿನೇಶ್ ಫೋಗಟ್ ಅವರನ್ನು 50 ಕೆಜಿ ವಿಭಾಗದಲ್ಲಿ ಮಾತ್ರ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದು WFI ಅಧಿಕಾರಿಗಳು ತಿಳಿಸಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ಸೇರಿದಂತೆ ಇತ್ತೀಚಿನ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಅವರು 50 ಕೆಜಿ ವಿಭಾಗದಲ್ಲೇ ಸ್ಪರ್ಧಿಸಿದ್ದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಆದರೆ ವಿನೇಶ್ ಇದನ್ನು ತೀವ್ರವಾಗಿ ವಿರೋಧಿಸಿ, 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಹಕ್ಕು ತನಗಿದೆ ಎಂದು ವಾದಿಸಿದರು. ವಿಚಾರ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ WFI ಅಧ್ಯಕ್ಷ ಸಂಜಯ್ ಸಿಂಗ್ ಮಧ್ಯಪ್ರವೇಶಿಸಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅನುಮತಿ ನೀಡಿದರು.

ಅಧಿಕೃತ ತೂಕ ಪರೀಕ್ಷೆಯಲ್ಲಿ ವಿನೇಶ್ 53.9 ಕೆಜಿ ತೂಕ ಹೊಂದಿದ್ದ ಕಾರಣ ಅವರನ್ನು 53 ಕೆಜಿ ವಿಭಾಗದ ಡ್ರಾದಲ್ಲಿ ಸೇರಿಸಲಾಯಿತು.

ನ್ಯಾಯಾಲಯದ ಆದೇಶದ ಬಳಿಕ ಅವಕಾಶ : ಇತ್ತೀಚೆಗಷ್ಟೇ ದೆಹಲಿ ಹೈಕೋರ್ಟ್ ವಿನೇಶ್ ಫೋಗಟ್ ಅವರನ್ನು “ಐಕಾನಿಕ್ ಅಥ್ಲೀಟ್” ಎಂದು ಪರಿಗಣಿಸಿ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ WFIಗೆ ನಿರ್ದೇಶಿಸಿತ್ತು. ಅದರ ಬೆನ್ನಲ್ಲೇ ನಡೆದ ಈ ಟ್ರಯಲ್ಸ್‌ನಲ್ಲಿ ವಿನೇಶ್ ಉತ್ತಮ ಪ್ರದರ್ಶನ ನೀಡಿದ್ದು, ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸನ್ನು ಜೀವಂತವಾಗಿರಿಸಿದ್ದಾರೆ.

ಈ ಟ್ರಯಲ್ಸ್‌ನಲ್ಲಿ ಅಂತಿಮವಾಗಿ ವಿಜೇತರಾಗುವ ಕುಸ್ತಿಪಟುಗಳು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿನೇಶ್ ಫೋಗಟ್ ಅವರ ಅನುಭವ ಮತ್ತು ಇಂದಿನ ಪ್ರದರ್ಶನ ಗಮನಿಸಿದರೆ, ಅವರು ತಂಡದಲ್ಲಿ ಸ್ಥಾನ ಪಡೆಯುವ ಪ್ರಮುಖ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.

ತಾಂತ್ರಿಕ ದೋಷದಿಂದ CUET-UG ಪರೀಕ್ಷೆ ವಿಳಂಬ: NTA ವೇಳಾಪಟ್ಟಿ ಪರಿಷ್ಕರಣೆ

The post ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ವಿನೇಶ್‌ಗೆ ಆರಂಭಿಕ ಗೆಲುವು appeared first on Samyukta Karnataka.

IPL ವೈಫಲ್ಯದ ಬಳಿಕ LSG ನಾಯಕತ್ವ ತೊರೆದ ರಿಷಭ್ ಪಂತ್
ನಾಯಕತ್ವದ ಒತ್ತಡದಿಂದ ದೂರವಾದ ಪಂತ್: “ನಾಯಕತ್ವಕ್ಕಿಂತ ಬ್ಯಾಟಿಂಗ್‌ಗೆ ಆದ್ಯತೆ” — ರಿಷಭ್ ಪಂತ್ ನಿರ್ಧಾರ

ಲಕ್ನೋ: ರಿಷಭ್ ಪಂತ್ ಅವರು ಲಕ್ನೋ ಸೂಪರ್ ಜೈಂಟ್ಸ್‌ (LSG) ತಂಡದ ನಾಯಕತ್ವದ ಜವಾಬ್ದಾರಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಕೆಳಗಿಳಿದಿದ್ದಾರೆ ಎಂದು ಫ್ರಾಂಚೈಸಿ ಅಧಿಕೃತವಾಗಿ ಘೋಷಿಸಿದೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಋತುವಿನಲ್ಲಿ ತಂಡ ತೀವ್ರ ನಿರಾಶೆ ಅನುಭವಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

2024ರ ಐಪಿಎಲ್ ಮೆಗಾ ಹರಾಜಿನಲ್ಲಿ ದಾಖಲೆ 27 ಕೋಟಿ ರೂಪಾಯಿಗೆ ಪಂತ್ ಅವರನ್ನು ಖರೀದಿಸಿದ್ದ ಎಲ್‌ಎಸ್‌ಜಿ, ಅವರನ್ನು ತಂಡದ ನಾಯಕರನ್ನಾಗಿ ನೇಮಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದ ನಂತರ ಪಂತ್ ಲಕ್ನೋ ಫ್ರಾಂಚೈಸಿಗೆ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ: ವಿಶ್ವಕಪ್‌ಗೂ ಮುನ್ನ: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ನಂದಿನಿ

ಆದರೆ ಅವರ ನಾಯಕತ್ವದಲ್ಲಿ ಎಲ್‌ಎಸ್‌ಜಿ ನಿರೀಕ್ಷಿತ ಸಾಧನೆ ಮಾಡಲು ವಿಫಲವಾಯಿತು. ಕಳೆದ ಋತುವಿನಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ತಂಡ, ಈ ಬಾರಿ ಇನ್ನಷ್ಟು ಹಿನ್ನಡೆ ಅನುಭವಿಸಿ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಲುಪಿತು.

ಈ ಕುರಿತು ಮಾತನಾಡಿದ ಎಲ್‌ಎಸ್‌ಜಿಯ ಜಾಗತಿಕ ಕ್ರಿಕೆಟ್ ನಿರ್ದೇಶಕ ಟಾಮ್ ಮೂಡಿ, “ರಿಷಭ್ ನಾಯಕತ್ವದ ಜವಾಬ್ದಾರಿಯಿಂದ ಬಿಡುಗಡೆಯ ವಿನಂತಿಯೊಂದಿಗೆ ಫ್ರಾಂಚೈಸಿಯನ್ನು ಸಂಪರ್ಕಿಸಿದ್ದರು. ನಾವು ಅವರ ನಿರ್ಧಾರವನ್ನು ಗೌರವದಿಂದ ಸ್ವೀಕರಿಸಿದ್ದೇವೆ. ನಾಯಕನಾಗಿ ಅವರು ತಂಡಕ್ಕೆ ನೀಡಿದ ಕೊಡುಗೆಗಳಿಗೆ ನಾವು ಕೃತಜ್ಞರಾಗಿದ್ದೇವೆ. ಇದೀಗ ನಮ್ಮ ಗಮನ ತಂಡವನ್ನು ಪುನರ್‌ನಿರ್ಮಿಸುವುದರ ಮೇಲೆ ಇದೆ” ಎಂದು ಹೇಳಿದರು.

ಇದನ್ನೂ ಓದಿ: IPLನಲ್ಲಿ ಸ್ಮಾರ್ಟ್ ಸನ್‌ಗ್ಲಾಸ್ ನಿಷೇಧಿಸಿದ BCCI

ಪಂತ್ ಅವರ ನಾಯಕತ್ವದಲ್ಲಿ ಎಲ್‌ಎಸ್‌ಜಿ ಎರಡು ಋತುಗಳಲ್ಲಿ ಒಟ್ಟು 10 ಗೆಲುವುಗಳನ್ನು ಸಾಧಿಸಿದರೂ, 18 ಪಂದ್ಯಗಳಲ್ಲಿ ಸೋಲು ಅನುಭವಿಸಿತು. ಇದು ಫ್ರಾಂಚೈಸಿಯ ನಿರೀಕ್ಷೆಗಳಿಗೆ ತಕ್ಕ ಸಾಧನೆ ಎಂದು ಪರಿಗಣಿಸಲ್ಪಡಲಿಲ್ಲ.

ಬ್ಯಾಟಿಂಗ್ ವಿಭಾಗದಲ್ಲಿಯೂ ಪಂತ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ವಿಫಲರಾದರು. ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟರ್ ಎಂದು ಖ್ಯಾತಿ ಪಡೆದಿದ್ದ ಅವರು, ಎಲ್‌ಎಸ್‌ಜಿ ಪರ ಎರಡು ವರ್ಷಗಳಲ್ಲಿ 135.74 ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 581 ರನ್ ಗಳಿಸಿದರು. ಇದು ಅವರ ವೃತ್ತಿಜೀವನದ ಮಟ್ಟಕ್ಕೆ ಹೋಲಿಸಿದರೆ ಕಡಿಮೆ ಪ್ರದರ್ಶನವೆಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: Asian Games ಟ್ರಯಲ್ಸ್‌ ಭಾಗವಹಿಸಲು ವಿನೇಶ್‌ಗೆ ಸುಪ್ರೀಂ ಅನುಮತಿ

ತಂಡದ ಋತು ಮುಗಿದ ತಕ್ಷಣವೇ ನಾಯಕತ್ವ ತೊರೆಯುವ ಇಚ್ಛೆಯನ್ನು ಪಂತ್ ವ್ಯಕ್ತಪಡಿಸಿದ್ದರು ಎಂದು ಫ್ರಾಂಚೈಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಯಕತ್ವದ ಜವಾಬ್ದಾರಿ ಮತ್ತು ವೈಯಕ್ತಿಕ ಬ್ಯಾಟಿಂಗ್ ಫಾರ್ಮ್ ನಡುವಿನ ಸಮತೋಲನ ಸಾಧಿಸುವುದು ಕಷ್ಟವಾಗುತ್ತಿದೆ ಎಂಬ ಭಾವನೆ ಪಂತ್ ಅವರಿಗೆ ಇತ್ತು ಎಂದು ಹೇಳಲಾಗಿದೆ.

“ನಾಯಕನಾಗಿ ತಂಡದ ಬಗ್ಗೆ ತಮ್ಮ ಕನಸು ವಾಸ್ತವವಾಗುತ್ತಿಲ್ಲ ಎಂಬ ಭಾವನೆ ಪಂತ್ ಅವರಿಗೆ ಮೂಡಿತ್ತು. ಬ್ಯಾಟಿಂಗ್ ಫಾರ್ಮ್ ಉತ್ತಮವಾಗಿರದ ಸಂದರ್ಭದಲ್ಲಿ ನಾಯಕತ್ವದ ಒತ್ತಡ ಹೆಚ್ಚಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ನಾಯಕನಾಗಿ ಮುಂದುವರಿಯುವುದು ಸ್ವಾರ್ಥವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದರು” ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: 2026ರ ಮಾನ್ಸೂನ್ ಬಗ್ಗೆ IMD ಎಚ್ಚರಿಕೆ: ದಕ್ಷಿಣ ಭಾರತಕ್ಕೆ ಮಳೆ ಕೊರತೆ ಭೀತಿ

ಇತ್ತೀಚಿನ ಋತುವಿನಲ್ಲಿ ನಾಯಕತ್ವ ಗುಂಪಿನಲ್ಲಿ ‘ತುಂಬಾ ಮನಸ್ಸುಗಳು’ ಇರುವುದರಿಂದ ನಿರ್ಧಾರ ಕೈಗೊಳ್ಳುವುದು ಸಂಕೀರ್ಣವಾಗುತ್ತಿತ್ತು ಎಂದು ಪಂತ್ ಸ್ವತಃ ಒಪ್ಪಿಕೊಂಡಿದ್ದರು ಎನ್ನಲಾಗಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದ ಬಳಿಕವೇ ಪಂತ್ ಅವರ ನಾಯಕತ್ವ ಭವಿಷ್ಯದ ಬಗ್ಗೆ ಪ್ರಶ್ನೆಗಳು ಉದ್ಭವಿಸಿದ್ದವು. ಆ ಸಮಯದಲ್ಲೇ ಟಾಮ್ ಮೂಡಿ ನಾಯಕತ್ವ ಮರುಹೊಂದಿಸುವ ಬಗ್ಗೆ ಸುಳಿವು ನೀಡಿದ್ದರು.

ಈಗ ನಾಯಕತ್ವ ತೊರೆದಿರುವ ಪಂತ್, ಮುಂದಿನ ದಿನಗಳಲ್ಲಿ ತಮ್ಮ ಬ್ಯಾಟಿಂಗ್ ಮತ್ತು ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಭಾರತೀಯ ತಂಡಕ್ಕೆ ಮರುಸ್ಥಾಪನೆ ಪಡೆಯುವತ್ತ ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಇದೆ. ಎಲ್‌ಎಸ್‌ಜಿ ಕೂಡ ಹೊಸ ನಾಯಕತ್ವದ ಅಡಿಯಲ್ಲಿ ತಂಡವನ್ನು ಪುನರ್‌ವ್ಯವಸ್ಥೆಗೊಳಿಸಲು ಸಿದ್ಧತೆ ನಡೆಸುತ್ತಿದೆ.

U20 ಏಷ್ಯನ್ ಅಥ್ಲೆಟಿಕ್ಸ್‌: ಹೈಜಂಪ್‌ನಲ್ಲಿ ಇತಿಹಾಸ ನಿರ್ಮಿಸಿದ ಪೂಜಾ

The post IPL ವೈಫಲ್ಯದ ಬಳಿಕ LSG ನಾಯಕತ್ವ ತೊರೆದ ರಿಷಭ್ ಪಂತ್ appeared first on Samyukta Karnataka.

U20 ಏಷ್ಯನ್ ಅಥ್ಲೆಟಿಕ್ಸ್‌: ಹೈಜಂಪ್‌ನಲ್ಲಿ ಇತಿಹಾಸ ನಿರ್ಮಿಸಿದ ಪೂಜಾ
ಭಾರತೀಯ ಅಥ್ಲೆಟಿಕ್ಸ್‌ಗೆ ಹೊಸ ರತ್ನ; ಪೂಜಾ ಅಮೋಘ ಸಾಧನೆ

U20 ಏಷ್ಯನ್ ಅಥ್ಲೆಟಿಕ್ಸ್‌ನಲ್ಲಿ ಭಾರತದ ಯುವ ಅಥ್ಲೀಟ್ ಪೂಜಾ ಸಿಂಗ್‌ ಮತ್ತೊಮ್ಮೆ ಅದ್ಭುತ ಸಾಧನೆ ಮಾಡಿ ದೇಶದ ಗಮನ ಸೆಳೆದಿದ್ದಾರೆ. ಮಹಿಳೆಯರ ಹೈಜಂಪ್ ಫೈನಲ್‌ನಲ್ಲಿ 1.91 ಮೀಟರ್ ಎತ್ತರವನ್ನು ಯಶಸ್ವಿಯಾಗಿ ದಾಟುವ ಮೂಲಕ ಅವರು ತಮ್ಮದೇ ಆದ U20 ರಾಷ್ಟ್ರೀಯ ದಾಖಲೆಯನ್ನು ಮತ್ತಷ್ಟು ಸುಧಾರಿಸಿಕೊಂಡಿದ್ದಾರೆ.

2026ರ U20 ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪೂಜಾ ಮಹಿಳೆಯರ ಹೈಜಂಪ್‌ನಲ್ಲಿ 1.91 ಮೀಟರ್ ಜಿಗಿದು ಮತ್ತೊಮ್ಮೆ U20 ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆಯೊಂದಿಗೆ ಅವರು ಭಾರತದ ಸಾರ್ವಕಾಲಿಕ ಎರಡನೇ ಶ್ರೇಷ್ಠ ಹೈಜಂಪರ್ ಆಗಿದ್ದಾರೆ.https://t.co/gm20rrbdZj pic.twitter.com/6LYmb0viMU
— Samyukta Karnataka (@SamyuktaKarnatk) May 29, 2026

ಈ ಸಾಧನೆಯೊಂದಿಗೆ ಪೂಜಾ ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಕೇವಲ U20 ವಿಭಾಗದಲ್ಲೇ ಸ್ಪರ್ಧಿಸುತ್ತಿರುವ ಅವರು, ಹಿರಿಯರನ್ನು ಸೇರಿಸಿ ಎಲ್ಲಾ ವಯೋಮಾನದ ವಿಭಾಗಗಳಲ್ಲಿ ಭಾರತದ ಸಾರ್ವಕಾಲಿಕ ಎರಡನೇ ಶ್ರೇಷ್ಠ ಮಹಿಳಾ ಹೈಜಂಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ವಿಶ್ವಕಪ್‌ಗೂ ಮುನ್ನ: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ನಂದಿನಿ

ಪೂಜಾ ದಾಖಲಿಸಿದ 1.91 ಮೀಟರ್ ಜಿಗಿತವು ಭಾರತದ ಹಿರಿಯ ರಾಷ್ಟ್ರೀಯ ದಾಖಲೆಯಿಂದ ಕೇವಲ 1 ಸೆಂ.ಮೀ ಕಡಿಮೆ ಎನ್ನುವುದು ಮತ್ತಷ್ಟು ವಿಶೇಷವಾಗಿದೆ. ಈ ಸಾಧನೆ ಭಾರತೀಯ ಅಥ್ಲೆಟಿಕ್ಸ್ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಹೈಜಂಪ್ ಸ್ಪರ್ಧೆಯಲ್ಲಿ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಪೂಜಾ, ಆರಂಭದಿಂದಲೇ ಉತ್ತಮ ಲಯದಲ್ಲಿ ಕಾಣಿಸಿಕೊಂಡರು. ಪ್ರತಿ ಹಂತದಲ್ಲೂ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಅವರು ಅಂತಿಮವಾಗಿ 1.91 ಮೀಟರ್ ಎತ್ತರ ದಾಟಿ ಹೊಸ ಇತಿಹಾಸ ನಿರ್ಮಿಸಿದರು.

ಇದನ್ನೂ ಓದಿ: IPLನಲ್ಲಿ ಸ್ಮಾರ್ಟ್ ಸನ್‌ಗ್ಲಾಸ್ ನಿಷೇಧಿಸಿದ BCCI

ಕ್ರೀಡಾ ತಜ್ಞರ ಪ್ರಕಾರ, ಇಷ್ಟು ಚಿಕ್ಕ ವಯಸ್ಸಿನಲ್ಲೇ ಪೂಜಾ ಸಾಧಿಸಿರುವ ಮಟ್ಟ ಅತ್ಯಂತ ಅಪರೂಪದ ಸಂಗತಿ. ಭಾರತದ ಪರ ಕೆಲವೇ ಕೆಲವು ಮಹಿಳಾ ಹೈಜಂಪರ್‌ಗಳು ಮಾತ್ರ ಈ ಮಟ್ಟದ ಸಾಧನೆ ಮಾಡಿರುವ ಹಿನ್ನೆಲೆ, ಪೂಜಾ ಭವಿಷ್ಯದ ದೊಡ್ಡ ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಸಾಧನೆಯೊಂದಿಗೆ ಇದೀಗ ಎಲ್ಲರ ದೃಷ್ಟಿ ಭಾರತದ ಹಿರಿಯ ರಾಷ್ಟ್ರೀಯ ದಾಖಲೆಯತ್ತ ನೆಟ್ಟಿದೆ. ಪೂಜಾ ಅವರ ಇತ್ತೀಚಿನ ಫಾರ್ಮ್ ಗಮನಿಸಿದರೆ ಆ ದಾಖಲೆಯೂ ಶೀಘ್ರದಲ್ಲೇ ಮುರಿಯುವ ಸಾಧ್ಯತೆ ಇದೆ ಎಂದು ಕ್ರೀಡಾ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ.

ಇದನ್ನೂ ಓದಿ: ವಿಶ್ವಕಪ್‌ಗೂ ಮುನ್ನ: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ನಂದಿನಿ

ಭಾರತೀಯ ಅಥ್ಲೆಟಿಕ್ಸ್‌ಗೆ ಹೊಸ ಭರವಸೆಯಾಗಿ ಹೊರಹೊಮ್ಮಿರುವ ಪೂಜಾ, ತಮ್ಮ ನಿರಂತರ ಸಾಧನೆಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರತದ ಕೀರ್ತಿಯನ್ನು ಎತ್ತಿಹಿಡಿಯುತ್ತಿದ್ದಾರೆ.

Asian Games ಟ್ರಯಲ್ಸ್‌ ಭಾಗವಹಿಸಲು ವಿನೇಶ್‌ಗೆ ಸುಪ್ರೀಂ ಅನುಮತಿ

The post U20 ಏಷ್ಯನ್ ಅಥ್ಲೆಟಿಕ್ಸ್‌: ಹೈಜಂಪ್‌ನಲ್ಲಿ ಇತಿಹಾಸ ನಿರ್ಮಿಸಿದ ಪೂಜಾ appeared first on Samyukta Karnataka.

Asian Games ಟ್ರಯಲ್ಸ್‌ ಭಾಗವಹಿಸಲು ವಿನೇಶ್‌ಗೆ ಸುಪ್ರೀಂ ಅನುಮತಿ
ವಿನೇಶ್‌ಗೆ ತಾತ್ಕಾಲಿಕ ರಿಲೀಫ್: “ದೇಶ ಮೊದಲು” ಎಂದ ಸುಪ್ರೀಂ ಕೋರ್ಟ್ : ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ವಿನೇಶ್ ಫೋಗಟ್ ಸ್ಪರ್ಧೆ ಖಚಿತ

ನವದೆಹಲಿ: ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್‌ ಅವರಿಗೆ ಮೇ 30ರಂದು ನಡೆಯಲಿರುವ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಅವರ ಪೀಠವು, ಭಾರತೀಯ ಕುಸ್ತಿ ಒಕ್ಕೂಟ WFI ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ದೆಹಲಿ ಹೈಕೋರ್ಟ್ ನೀಡಿದ್ದ ಪರಿಹಾರ ಆದೇಶವನ್ನು ಪ್ರಶ್ನಿಸಿ ಡಬ್ಲ್ಯುಎಫ್‌ಐ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಇದನ್ನೂ ಓದಿ: ವಿಶ್ವಕಪ್‌ಗೂ ಮುನ್ನ: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ನಂದಿನಿ

ವಿಚಾರಣೆ ವೇಳೆ ನ್ಯಾಯಾಲಯ, ಏಷ್ಯನ್ ಗೇಮ್ಸ್ ಟ್ರಯಲ್ಸ್ ಸಮೀಪಿಸುತ್ತಿರುವುದನ್ನು ಪರಿಗಣಿಸಿ ವಿನೇಶ್ ಫೋಗಟ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿತು. ಆದರೆ ಹೈಕೋರ್ಟ್ ವಿಚಾರಣೆಯ ವಿಧಾನ ಕುರಿತು ಪೀಠ ಕೆಲವು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿತು.

ವಿಶೇಷವಾಗಿ, ವಿಚಾರಣೆಯಲ್ಲಿ ಅಂತರರಾಷ್ಟ್ರೀಯ ಡೋಪಿಂಗ್ ವಿರೋಧಿ ನಿಯಮಗಳ ಪಾಲನೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ತಾಯ್ತನದ ಹಿನ್ನೆಲೆಯನ್ನೇ ಮುಖ್ಯ ಅಂಶವಾಗಿ ಪರಿಗಣಿಸುವ ಬದಲು, ಜಾಗತಿಕ ಕ್ರೀಡಾ ನಿಯಮಗಳ ಅನುಸರಣೆ ಮುಖ್ಯ ಎಂದು ಪೀಠ ತಿಳಿಸಿದೆ.

ಇದನ್ನೂ ಓದಿ: IPLನಲ್ಲಿ ಸ್ಮಾರ್ಟ್ ಸನ್‌ಗ್ಲಾಸ್ ನಿಷೇಧಿಸಿದ BCCI

ವಿಚಾರಣೆ ವೇಳೆ ವಿನೇಶ್ ಫೋಗಟ್ ಅವರು ಡೋಪಿಂಗ್ ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ ಹಾಗೂ ಅಂತರರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಅಗತ್ಯವಾದ ಸ್ಥಳ ಮಾಹಿತಿ (whereabouts information) ನೀಡಲು ವಿಫಲರಾಗಿದ್ದಾರೆ ಎಂಬ ವಿಚಾರವನ್ನು ನ್ಯಾಯಾಲಯ ಉಲ್ಲೇಖಿಸಿತು. ಇದು ಅಂತರರಾಷ್ಟ್ರೀಯ ಮಾನದಂಡಗಳ ಅನುಸರಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಪೀಠ ಹೇಳಿದೆ.

ಈ ವೇಳೆ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರು, “ನೀವು ಅತ್ಯುತ್ತಮ ಕುಸ್ತಿಪಟು… ಆದರೆ ದೇಶ ಮೊದಲು” ಎಂದು ಹೇಳಿ, ಪ್ರತಿಯೊಬ್ಬ ಕ್ರೀಡಾಪಟುವೂ ಅಂತರರಾಷ್ಟ್ರೀಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದರು.

ಇದನ್ನೂ ಓದಿ: ತೀರ್ಪು ವಿಳಂಬಕ್ಕೆ ಬ್ರೇಕ್: ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ

ವಿನೇಶ್ ಫೋಗಟ್ ಪರ ಹಿರಿಯ ವಕೀಲರು ಈ ಸಮಸ್ಯೆ ಅವರ ಇತ್ತೀಚಿನ ತಾಯ್ತನದ ಪರಿಸ್ಥಿತಿಗೆ ಸಂಬಂಧಿಸಿದೆ ಎಂದು ವಾದಿಸಿದರು. ಪ್ರಕರಣದ ಅಂತಿಮ ತೀರ್ಪಿಗೆ ಒಳಪಟ್ಟು ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಅವರು ನ್ಯಾಯಾಲಯವನ್ನು ಕೋರಿದರು.

ಎರಡೂ ಪಕ್ಷಗಳ ವಾದ ಆಲಿಸಿದ ಸುಪ್ರೀಂ ಕೋರ್ಟ್, ಈ ಹಂತದಲ್ಲಿ ವಿನೇಶ್ ಫೋಗಟ್ ಅವರಿಗೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದು ನಿರ್ದೇಶಿಸಿತು. ಕಾನೂನು ಸಂಬಂಧಿತ ಪ್ರಶ್ನೆಗಳು ಮತ್ತು ನಿಯಮ ಉಲ್ಲಂಘನೆ ಕುರಿತ ವಿಚಾರಗಳನ್ನು ಮುಂದಿನ ಹಂತದಲ್ಲಿ ಪರಿಶೀಲಿಸಲಾಗುವುದು ಎಂದು ಪೀಠ ತಿಳಿಸಿದೆ.

ಈ ಆದೇಶದೊಂದಿಗೆ ವಿನೇಶ್ ಫೋಗಟ್ ಅವರ ಏಷ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆ ಖಚಿತಗೊಂಡಿದ್ದು, ಭಾರತೀಯ ಕುಸ್ತಿ ವಲಯದಲ್ಲಿ ಈ ಪ್ರಕರಣ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಸಚಿವರ ‘ರಹಸ್ಯ ಕಾರ್ಯಾಚರಣೆ’: ದೇವಸ್ಥಾನ VIP ದರ್ಶನ ಅಕ್ರಮ ಬಯಲು

The post Asian Games ಟ್ರಯಲ್ಸ್‌ ಭಾಗವಹಿಸಲು ವಿನೇಶ್‌ಗೆ ಸುಪ್ರೀಂ ಅನುಮತಿ appeared first on Samyukta Karnataka.

ವಿಶ್ವಕಪ್‌ಗೂ ಮುನ್ನ: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ನಂದಿನಿ
ನಂದಿನಿ ಶರ್ಮಾ ಐತಿಹಾಸಿಕ ಪದಾರ್ಪಣೆ; ಮೂರು ವಿಕೆಟ್ ಕಬಳಿಕೆ

ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಆರಂಭವಾದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಮಹಿಳಾ ತಂಡ (India women’s national cricket team) ಭರ್ಜರಿ ಪ್ರದರ್ಶನ ನೀಡಿ ಇಂಗ್ಲೆಂಡ್‌ ತಂಡದ ವಿರುದ್ಧ 38 ರನ್‌ಗಳ ಗೆಲುವು ದಾಖಲಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಮತೋಲನದ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡ ಸರಣಿಯನ್ನು ಆತ್ಮವಿಶ್ವಾಸದಿಂದ ಆರಂಭಿಸಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಆರಂಭದಲ್ಲಿ ಕೆಲವು ಆಘಾತಗಳನ್ನು ಅನುಭವಿಸಿತು. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ರನ್ ಕಲೆಹಾಕುವಲ್ಲಿ ವಿಫಲರಾದರು. ಆದರೆ ನಂತರ ಕಣಕ್ಕಿಳಿದ ಯಾಸ್ತಿಕಾ ಭಾಟೀಯಾ ಮತ್ತು ಜೆಮಿಮಾ ರೊಡ್ರಿಗಸ್‌ ಜೋಡಿ ಇಂಗ್ಲೆಂಡ್ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿತು.

ಇದನ್ನೂ ಓದಿ: IPLನಲ್ಲಿ ಸ್ಮಾರ್ಟ್ ಸನ್‌ಗ್ಲಾಸ್ ನಿಷೇಧಿಸಿದ BCCI

ಪವರ್‌ಪ್ಲೇ ಅವಧಿಯಲ್ಲೇ ಈ ಜೋಡಿ 73 ರನ್‌ಗಳ ಜೊತೆಯಾಟ ನೀಡಿದ್ದು, ಒಟ್ಟು ಮೂರನೇ ವಿಕೆಟ್‌ಗೆ 76 ಎಸೆತಗಳಲ್ಲಿ 126 ರನ್‌ಗಳ ಅಮೋಘ ಜೊತೆಯಾಟ ದಾಖಲಿಸಿತು. ಯಾಸ್ತಿಕಾ ಭಾಟಿಯಾ 40 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 54 ರನ್ ಸಿಡಿಸಿದರೆ, ಜೆಮಿಮಾ ರೊಡ್ರಿಗಸ್ 10 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 69 ರನ್ ಬಾರಿಸಿ ತಂಡದ ಮೊತ್ತವನ್ನು ಬಲಪಡಿಸಿದರು.

ಆಲ್‌ರೌಂಡರ್ ದೀಪ್ತಿ ಶರ್ಮಾ ಕೂಡ 4 ಬೌಂಡರಿ ನೆರವಿನಿಂದ 22 ರನ್ ಬಾರಿಸಿದರು. 20 ಓವರಗಳಲ್ಲಿ ಭಾರತ ತಂಡ 7 ವಿಕೆಟ್‌ ಕಳೆದು ಕೊಂಡು 188 ರನ್‌ ಪ್ರೇರಿಪಿಸಿತು. ಇಂಗ್ಲೆಂಡ್ ಪರ ಲಾರೆನ್‌ಬೆಲ್ 34 ರನ್ ನೀಡಿ 3 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶಿಸಿದರು.

ಇದನ್ನೂ ಓದಿ: ರಾಜ್ಯಪಾಲರಿಂದ ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ

ಗೆಲುವಿಗೆ ಸವಾಲಿನ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಭಾರತೀಯ ಬೌಲರ್‌ಗಳ ನಿಯಂತ್ರಿತ ದಾಳಿಗೆ ಇಂಗ್ಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 150 ರನ್‌ಗಳಿಗೆ ಸೀಮಿತವಾಯಿತು.

ಈ ಪಂದ್ಯದಲ್ಲಿ ಭಾರತದ ಯುವ ವೇಗಿ ನಂದಿನಿ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ತಮ್ಮ ಚೊಚ್ಚಲ ಪಂದ್ಯದಲ್ಲೇ ಅವರು ನಾಲ್ಕು ಓವರ್‌ಗಳಲ್ಲಿ 34 ರನ್ ನೀಡಿ 3 ವಿಕೆಟ್ ಕಬಳಿಸಿ ಗಮನ ಸೆಳೆದರು.

ಇದನ್ನೂ ಓದಿ: ರಾಹುಲ್ ಭೇಟಿಯಾದ ಸಿದ್ದರಾಮಯ್ಯ: ಅಪ್ಪುಗೆ ಫೋಟೋ ವೈರಲ್

ಈ ಮೂಲಕ ನಂದಿನಿ ಶರ್ಮಾ ಭಾರತದ ಪರ ಟಿ20 ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯದಲ್ಲೇ ಮೂರು ವಿಕೆಟ್ ಪಡೆದ ಎರಡನೇ ವೇಗದ ಬೌಲರ್ ಎಂಬ ದಾಖಲೆ ನಿರ್ಮಿಸಿದರು. ಇದಕ್ಕೂ ಮೊದಲು 2010ರಲ್ಲಿ ಸೋನಿಯಾ ದಬೀರ್ ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಟಿ20 ಪಂದ್ಯದಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದಿದ್ದರು.

ಮಹಿಳಾ ವಿಶ್ವಕಪ್‌ಗೆ ಮುನ್ನ ಭಾರತ ತಂಡದ ಈ ಗೆಲುವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಮುಂದಿನ ಪಂದ್ಯಗಳ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ತೀರ್ಪು ವಿಳಂಬಕ್ಕೆ  ಬ್ರೇಕ್: ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ

The post ವಿಶ್ವಕಪ್‌ಗೂ ಮುನ್ನ: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ನಂದಿನಿ appeared first on Samyukta Karnataka.

80 ಸಾವಿರ ಆಸನಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಚಾಲನೆ
ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ:80 ಸಾವಿರ ಆಸನ ವ್ಯವಸ್ಥೆ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಕು ಎಂದ CM

ಬೆಂಗಳೂರು ಸಮೀಪದ ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದು, ರಾಜ್ಯದ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಇದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಹೇಳಿದ್ದಾರೆ. ಸುಮಾರು 80 ಸಾವಿರ ಆಸನ ಸಾಮರ್ಥ್ಯದ ಈ ಕ್ರೀಡಾಂಗಣ ರಾಜ್ಯದ ಎರಡನೇ ಅತಿ ದೊಡ್ಡ ಕ್ರೀಡಾಂಗಣವಾಗಲಿದ್ದು, ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಸೂರ್ಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ, ಇದುವರೆಗೆ ವಸತಿ ನಿರ್ಮಾಣಕ್ಕೆ ಸೀಮಿತವಾಗಿದ್ದ ಕರ್ನಾಟಕ ಗೃಹ ಮಂಡಳಿ (KHB) ಇದೀಗ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದು ದೂರದೃಷ್ಟಿಯ ನಿರ್ಧಾರವಾಗಿದೆ ಎಂದು ಶ್ಲಾಘಿಸಿದರು. ಈ ಯೋಜನೆಗೆ ಪ್ರಮುಖ ಪಾತ್ರವಹಿಸಿರುವ ಸಚಿವರಾದ ಜಮೀರ್ ಅಹ್ಮದ್ ಖಾನ್‌ ಹಾಗೂ ಶಿವಲಿಂಗೇಗೌಡರನ್ನು ಅಭಿನಂದಿಸಿದರು.

ಇದನ್ನೂ ಓದಿ: SBI ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಇಲ್ಲ – ಮುಷ್ಕರ ಮುಂದೂಡಿಕೆ

ಎರಡನೇ ಅತಿ ದೊಡ್ಡ ಕ್ರೀಡಾಂಗಣ : ಮುಖ್ಯಮಂತ್ರಿ ಹೇಳುವಂತೆ, ಗುಜರಾತ್‌ನಲ್ಲಿರುವ 90 ಸಾವಿರ ಆಸನ ಸಾಮರ್ಥ್ಯದ ಕ್ರೀಡಾಂಗಣದ ಬಳಿಕ ಕರ್ನಾಟಕದ ಈ ಹೊಸ ಕ್ರೀಡಾಂಗಣ ರಾಜ್ಯದ ಅತಿದೊಡ್ಡ ಕ್ರೀಡಾ ಸಂಕೀರ್ಣಗಳಲ್ಲಿ ಒಂದಾಗಲಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲು ಅವಕಾಶ ಸಿಗಲಿದೆ.

ಈ ಕ್ರೀಡಾಂಗಣದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಳವಾಗಲಿದ್ದು, ಹೋಟೆಲ್, ಸಾರಿಗೆ, ಸಣ್ಣ ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ಹೇಳಿದರು. ಸ್ಥಳೀಯ ಆರ್ಥಿಕತೆಯಿಗೂ ಇದು ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ‘ಅಂದು ಬೆಂಗಾಳ, ಇಂದು ಕೇರಳ’: CEO ನೇಮಕಾತಿಗೆ BJP ಲೇವಡಿ!

ಕೆಹೆಚ್‌ಬಿ ಹಣದಲ್ಲೇ ನಿರ್ಮಾಣ : ಸಿಎಂ ತಿಳಿಸಿದಂತೆ, ಈ ಮಹತ್ವಾಕಾಂಕ್ಷಿ ಯೋಜನೆಗೆ ಸರ್ಕಾರದ ಪ್ರತ್ಯೇಕ ಆರ್ಥಿಕ ನೆರವು ಇಲ್ಲದೇ, ಕರ್ನಾಟಕ ಗೃಹ ಮಂಡಳಿಯ ಸ್ವಂತ ನಿಧಿಯಿಂದಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಖಾಲಿ ಇರುವ ಕೆಹೆಚ್‌ಬಿ ನಿವೇಶನಗಳ ಮಾರಾಟದಿಂದ ಸುಮಾರು ₹20 ಸಾವಿರ ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ಅದರ ಒಂದು ಭಾಗವನ್ನು ಈ ಯೋಜನೆಗೆ ಬಳಸಲಾಗುತ್ತಿದೆ.

ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಮನೆ ಮತ್ತು ನಿವೇಶನಗಳನ್ನು ಒದಗಿಸುವ ಕಾರ್ಯವನ್ನೂ ಕೆಹೆಚ್‌ಬಿ ಮುಂದುವರಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಈಗಾಗಲೇ ರಾಜ್ಯಾದ್ಯಂತ 3 ಲಕ್ಷಕ್ಕೂ ಹೆಚ್ಚು ಮನೆ ಮತ್ತು ನಿವೇಶನಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಗಣಿ ಭಾಗದ ರಸ್ತೆ ಅಭಿವೃದ್ಧಿಗೂ ಚಾಲನೆ: ಕ್ರೀಡಾಂಗಣದ ಜೊತೆಗೆ ಜಿಗಣಿ ಹೋಬಳಿಯ ಪ್ರಮುಖ ಸಂಪರ್ಕ ರಸ್ತೆ ಅಭಿವೃದ್ಧಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಿಎಂ ಘೋಷಿಸಿದರು. ಈ ರಸ್ತೆ ಅಭಿವೃದ್ಧಿಯಿಂದ ಸೂರ್ಯನಗರ ಭಾಗದ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದ್ದು, ಭವಿಷ್ಯದ ನಗರೀಕರಣಕ್ಕೆ ಸಹಕಾರಿ ಆಗಲಿದೆ.

ಇದನ್ನೂ ಓದಿ: ಹುಬ್ಬಳ್ಳಿ: ಕಾರ್ಯಾಚರಣೆ ನಿಮಿತ್ತ ಕೆಲ ರೈಲು ಸಂಚಾರ ತಾತ್ಕಾಲಿಕ ರದ್ದು

ಕ್ರೀಡೆ-ಪ್ರವಾಸೋದ್ಯಮಕ್ಕೆ ಹೊಸ ಅವಕಾಶ : ರಾಜ್ಯದ ಕ್ರೀಡಾ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕ್ರೀಡಾಂಗಣ ನಿರ್ಮಾಣದಿಂದ ರಾಜ್ಯದಲ್ಲಿ ಯುವ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ದೊರೆಯಲಿದ್ದು, ಅಂತರರಾಷ್ಟ್ರೀಯ ಪಂದ್ಯಾವಳಿಗಳನ್ನು ಆಯೋಜಿಸುವ ಸಾಮರ್ಥ್ಯವೂ ಹೆಚ್ಚಲಿದೆ.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಕ್ರೀಡೆ, ಪ್ರವಾಸೋದ್ಯಮ, ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿ ಎಲ್ಲವೂ ಪರಸ್ಪರ ಸಂಬಂಧ ಹೊಂದಿವೆ. ಸೂರ್ಯನಗರ ಯೋಜನೆ ಈ ನಾಲ್ಕು ಕ್ಷೇತ್ರಗಳ ಬೆಳವಣಿಗೆಗೆ ನಾಂದಿ ಹಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

‘ಕಾಕ್ರೋಚ್’ Website ಡೌನ್?: ನಕಲಿ ಖಾತೆಗಳ ಬಗ್ಗೆ ದೀಪ್ಕೆ ಎಚ್ಚರಿಕೆ

The post 80 ಸಾವಿರ ಆಸನಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಚಾಲನೆ appeared first on Samyukta Karnataka.

ವಿನೇಶ್ ಫೋಗಟ್ ಪ್ರಕರಣದಲ್ಲಿ WFIಗೆ ಹೈಕೋರ್ಟ್ ತರಾಟೆ
ವಿನೇಶ್ ಫೋಗಟ್‌ಗೆ ಏಷ್ಯನ್ ಗೇಮ್ಸ್ ಟ್ರಯಲ್ಸ್ ಅವಕಾಶ? ತಜ್ಞರ ಸಮಿತಿ ರಚಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

ನವದೆಹಲಿ: ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಲು “ಅನರ್ಹ” ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ಕ್ರಮವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಜೊತೆಗೆ, ಕುಸ್ತಿಪಟುವಿನ ಮೌಲ್ಯಮಾಪನ ನಡೆಸಿ 2026ರ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠ, “ಯಾವುದೇ ದ್ವೇಷ ಅಥವಾ ವಿವಾದ ಇರಲಿ, ಅದರ ಪರಿಣಾಮವಾಗಿ ಕ್ರೀಡೆ ಯಾಕೆ ಬಳಲಬೇಕು?” ಎಂದು ಪ್ರಶ್ನಿಸಿತು. ಪ್ರತಿಷ್ಠಿತ ಕ್ರೀಡಾಪಟುಗಳಿಗೆ ಅವಕಾಶ ನೀಡುತ್ತಿದ್ದ ಹಿಂದಿನ ಪದ್ಧತಿಯಿಂದ WFI ದೂರ ಸರಿದಿರುವುದನ್ನು ನ್ಯಾಯಪೀಠ “ಸಣ್ಣ ಮಾತು” ಎಂದು ಕಿಡಿಕಾರಿತು.

ಇದನ್ನೂ ಓದಿ: ಕರ್ನಾಟಕ ಸೇರಿ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ

ಮಾತೃತ್ವ ವಿರಾಮದ ಬಳಿಕ ಮರಳಲು ಪ್ರಯತ್ನ : ಮಾತೃತ್ವ ರಜೆಯ ಬಳಿಕ ಮತ್ತೆ ಸ್ಪರ್ಧಾತ್ಮಕ ಕುಸ್ತಿಗೆ ಮರಳಲು ವಿನೇಶ್ ಫೋಗಟ್ ಪ್ರಯತ್ನಿಸುತ್ತಿದ್ದಾರೆ. ಆದರೆ ಭಾರತೀಯ ಕುಸ್ತಿ ಒಕ್ಕೂಟದ ಆಯ್ಕೆ ನೀತಿ ಮತ್ತು ನೋಟಿಸ್‌ಗಳ ಕಾರಣ ಅವರಿಗೆ ದೇಶೀಯ ಟೂರ್ನಿಗಳಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಗಿತ್ತು.

ಮೇ 30 ಮತ್ತು 31ರಂದು ನಡೆಯಲಿರುವ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ವಿನೇಶ್ ಸಲ್ಲಿಸಿದ್ದ ಅರ್ಜಿಯನ್ನು ಈ ವಾರದ ಆರಂಭದಲ್ಲಿ ಹೈಕೋರ್ಟ್ ಮಧ್ಯಂತರ ಹಂತದಲ್ಲಿ ತಿರಸ್ಕರಿಸಿತ್ತು. ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರಿದ್ದ ಪೀಠ, WFI ಈಗಾಗಲೇ ಕುಸ್ತಿಪಟುವನ್ನು “ಅನರ್ಹ” ಎಂದು ಘೋಷಿಸಿರುವುದರಿಂದ ತಕ್ಷಣದ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

WFI ಆಯ್ಕೆ ನೀತಿ ಏನು? : WFIಯ ಫೆಬ್ರವರಿ 25ರ ಆಯ್ಕೆ ನೀತಿ ಮತ್ತು ಮೇ 6ರ ಸುತ್ತೋಲೆಯ ಪ್ರಕಾರ, 2025ರ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್, 2026ರ ಸೀನಿಯರ್ ಫೆಡರೇಶನ್ ಕಪ್, 2026ರ ಅಂಡರ್-20 ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ಮತ್ತು 23 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ವಿಜೇತರಾದವರಿಗೆ ಮಾತ್ರ ಏಷ್ಯನ್ ಗೇಮ್ಸ್ ಟ್ರಯಲ್ಸ್‌ಗೆ ಅರ್ಹತೆ ನೀಡಲಾಗುತ್ತದೆ.

ಇದನ್ನೂ ಓದಿ: ಹಿರಿಯ ಕಾಂಗ್ರೆಸ್ ನಾಯಕ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆ

ಮೇ 6ರ ಸುತ್ತೋಲೆಯಲ್ಲಿ ಹಿಂದಿನ ಸಾಧನೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು WFI ಸ್ಪಷ್ಟಪಡಿಸಿತ್ತು. ಜೂನ್ 26ರವರೆಗೆ ನಡೆಯಲಿರುವ ರಾಷ್ಟ್ರೀಯ ಮುಕ್ತ ರ‍್ಯಾಂಕಿಂಗ್ ಪಂದ್ಯಾವಳಿ ಸೇರಿದಂತೆ ಹಲವು ದೇಶೀಯ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೂ ನಿರ್ಬಂಧ ವಿಧಿಸಲಾಗಿತ್ತು.

WFI ಆರೋಪ ಏನು? : ಮೇ 9ರಂದು ಹೊರಡಿಸಿದ್ದ ಶೋ-ಕಾಸ್ ನೋಟಿಸ್‌ನಲ್ಲಿ WFI, ವಿನೇಶ್ ಫೋಗಟ್ ವಿರುದ್ಧ ಅಶಿಸ್ತು ಹಾಗೂ ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಯ ಆರೋಪ ಮಾಡಿತ್ತು. ನಿವೃತ್ತಿಯಿಂದ ಮರಳುವ ಕ್ರೀಡಾಪಟುಗಳಿಗೆ ಅಗತ್ಯವಿರುವ ಆರು ತಿಂಗಳ ಕಡ್ಡಾಯ ನೋಟಿಸ್ ಅವಧಿಯನ್ನು ಅವರು ಪೂರ್ಣಗೊಳಿಸಿಲ್ಲ ಎಂದು ಫೆಡರೇಶನ್ ಹೇಳಿದೆ.

ಆದರೆ ನ್ಯಾಯಪೀಠ, ವಿನೇಶ್ ಮಾತೃತ್ವ ರಜೆಯಲ್ಲಿದ್ದ ವಿಚಾರವನ್ನೂ ಪರಿಗಣಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ ದೇಶದ ಕ್ರೀಡಾ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಯುತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆ ಒತ್ತಾಯಿಸಿ ‘ಕಾಕ್ರೋಚ್’ Digital ಚಳವಳಿ

ಜುಲೈ 6ಕ್ಕೆ ಮುಂದಿನ ವಿಚಾರಣೆ : ವಿನೇಶ್ ಫೋಗಟ್ ಅವರಿಗೆ WFI ನೀಡಿದ ಶೋ-ಕಾಸ್ ನೋಟಿಸ್‌ಗೆ ವಿವರವಾದ ಉತ್ತರ ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ. ಈ ಕುರಿತು ಅಂತಿಮ ನಿರ್ಧಾರವನ್ನು ಜುಲೈ 6ರೊಳಗೆ ತೆಗೆದುಕೊಳ್ಳುವಂತೆ WFIಗೆ ಸೂಚಿಸಲಾಗಿದೆ. ಈ ಅರ್ಜಿಗೆ ಸಂಬಂಧಿಸಿ ಕೇಂದ್ರ ಸರ್ಕಾರ, Wrestling Federation of India ಹಾಗೂ Indian Olympic Association ಗೆ ನ್ಯಾಯಾಲಯ ನೋಟಿಸ್ ಜಾರಿಮಾಡಿದೆ.

KPS ಶಿಕ್ಷಣ ದೇಶಕ್ಕೇ ಮಾದರಿ : 52 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಚಾಲನೆ

The post ವಿನೇಶ್ ಫೋಗಟ್ ಪ್ರಕರಣದಲ್ಲಿ WFIಗೆ ಹೈಕೋರ್ಟ್ ತರಾಟೆ appeared first on Samyukta Karnataka.