Indianpilot Archives - Samyukta Karnataka

ಟಿವಿ ಶೋ ನೋಡಿ ವಿಮಾನ ಓಡಿಸುವದನ್ನು ಕಲಿತಿದ್ದ ಪ್ಲಂಬರ್: 180 ಜೀವಗಳನ್ನು ಉಳಿಸಿದ ಆ ಐವರು ರಿಯಲ್ ಹೀರೋಗಳು!
ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಭೀಕರ ಹೈಜಾಕ್ ಮತ್ತು ಆತ್ಮಹತ್ಯಾ ಯತ್ನದ ಘಟನೆ ಇಡೀ ಜಗತ್ತನ್ನೇ ನಡುಗಿಸಿದೆ. ಆದರೆ ಸಾವು ಕಣ್ಣೆದುರು ನಿಂತಿದ್ದಾಗ ಜೀವದ ಹಂಗು ತೊರೆದು ಹೋರಾಡಿದ ಭಾರತೀಯ ಪೈಲಟ್ ಹಾಗೂ ನಾಲ್ವರು ಪ್ರಯಾಣಿಕರ ಅದ್ಭುತ ಧೈರ್ಯದಿಂದಾಗಿ 27 ಮಕ್ಕಳು ಸೇರಿದಂತೆ ಒಟ್ಟು 180 ಮಂದಿ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಕ್‌ಪಿಟ್ ಒಳಗೆ ಒಮಾನಿ ಸಹ-ಪೈಲಟ್ ಹಠಾತ್ ಕೊಡಲಿಯಿಂದ ಮಾರಣಾಂತಿಕ ದಾಳಿ ನಡೆಸಿದಾಗ ತೀವ್ರ ರಕ್ತಸ್ರಾವವಾದರೂ ಲೆಕ್ಕಿಸದೆ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್, ಕೊನೆಯ ಕ್ಷಣದಲ್ಲಿ ಕಾಕ್‌ಪಿಟ್ ಬಾಗಿಲು ತೆರೆದು ಇತರರಿಗೆ ಎಚ್ಚರಿಕೆ ನೀಡಿ ಕುಸಿದುಬಿದ್ದರು. ವಿಮಾನವು ಕ್ಷಣಮಾತ್ರದಲ್ಲಿ 90 ಡಿಗ್ರಿ ಕೋನದಲ್ಲಿ ಭೂಮಿಯತ್ತ ಧುಮುಕುತ್ತಿದ್ದಾಗ, ಪ್ರಯಾಣಿಕರಾಗಿದ್ದ ಪ್ಲಂಬರ್ ಯಾನಿವ್ ಹಯೂನ್, ಬ್ಯಾಂಕರ್ ಜ್ವಿಕಾ ಮಾನೆಸ್ ಮತ್ತು ಉದ್ಯಮಿ ಅಸ್ಸಾಫ್ ರಜುವಾನ್ ತಕ್ಷಣ ಕಾಕ್‌ಪಿಟ್‌ಗೆ ನುಗ್ಗಿದರು.

ಅಲ್ಲಿ ಪೈಲಟ್ ಸ್ಥಾನದಲ್ಲಿದ್ದ ಸಹ-ಪೈಲಟ್ ಕಂಟ್ರೋಲರ್‌ಗಳನ್ನು ಧ್ವಂಸಗೊಳಿಸಿ ವಿಮಾನವನ್ನು ಅಪ್ಪಳಿಸಲು ಯತ್ನಿಸುತ್ತಿದ್ದ. ಹಯೂನ್ ಆತನ ಕುತ್ತಿಗೆ ಪಟ್ಟಿ ಹಿಡಿದು ಹಿಂದಕ್ಕೆ ಎಳೆದರೆ, ಮಾನೆಸ್ ಮತ್ತು ಅಸ್ಸಾಫ್ ಹೆಡ್‌ಫೋನ್ ವೈರ್‌ಗಳನ್ನು ಬಳಸಿ ಆತನನ್ನು ಕಟ್ಟಿಹಾಕಿ ಸತತ 50 ನಿಮಿಷಗಳ ಕಾಲ ಕಟ್ಟಿಹಾಕಿದರು. ಅಷ್ಟರಲ್ಲೇ ಟಿವಿ ಶೋ ನೋಡಿ ಕಲಿತಿದ್ದ ಪ್ಲಂಬರ್ ಹಯೂನ್, ವಿಮಾನದ ಸ್ಟೀರಿಂಗ್ (ಯೋಕ್) ಹಿಂದಕ್ಕೆ ಎಳೆದು ಕೆಳಮುಖ ಧುಮುಕುತ್ತಿದ್ದ ವಿಮಾನವನ್ನು ಹಳಿಗೆ ತಂದರು.

ಇನ್ನೊಂದೆಡೆ ವಿಮಾನದಲ್ಲಿದ್ದ ಏಕೈಕ ವೈದ್ಯ, ಡೆಂಟಿಸ್ಟ್ ಶೋಟಾ ಮುಸಾಯೆವ್, ರಕ್ತದ ಮಡುವಿನಲ್ಲಿ ಬಿದ್ದಿದ್ದ ಕ್ಯಾಪ್ಟನ್ ಸ್ಮಿತ್‌ಗೆ ಪ್ರಥಮ ಚಿಕಿತ್ಸೆ ನೀಡಿ ರಕ್ತಸ್ರಾವ ತಡೆದರು. ನಂತರ ವಿಮಾನದಲ್ಲಿದ್ದ ಇತರ ಆಫ್-ಡ್ಯೂಟಿ ಪೈಲಟ್‌ಗಳು ಸೌದಿ ಅರೇಬಿಯಾದ ತಬೂಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಿದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇವರ ಅದ್ವಿತೀಯ ಶೌರ್ಯವನ್ನು ಮನಸಾರೆ ಕೊಂಡಾಡಿದ್ದಾರೆ.

The post ಟಿವಿ ಶೋ ನೋಡಿ ವಿಮಾನ ಓಡಿಸುವದನ್ನು ಕಲಿತಿದ್ದ ಪ್ಲಂಬರ್:  180 ಜೀವಗಳನ್ನು ಉಳಿಸಿದ ಆ ಐವರು ರಿಯಲ್ ಹೀರೋಗಳು! appeared first on Samyukta Karnataka.