#Indianrailways Archives - Samyukta Karnataka

ಭಾರತದ ಹೈಡ್ರೋಜನ್ ರೈಲು ಯುಗಕ್ಕೆ ಮೋದಿ ಐತಿಹಾಸಿಕ ಚಾಲನೆ
ಹರಿಯಾಣ : ಭಾರತವು ಹಸಿರು ಸಾರಿಗೆ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದ್ದು, ದೇಶದ ಮೊದಲ ಹೈಡ್ರೋಜನ್ ಇಂಧನ ಕೋಶ ಚಾಲಿತ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹಸಿರು ನಿಶಾನೆ ತೋರಿದರು. ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವಿನ ಈ ರೈಲು ಸೇವೆ ದೇಶವನ್ನು ಹೈಡ್ರೋಜನ್ ಚಾಲಿತ ರೈಲು ವ್ಯವಸ್ಥೆ ಹೊಂದಿರುವ ಆಯ್ದ ರಾಷ್ಟ್ರಗಳ ಸಾಲಿಗೆ ಸೇರಿಸಿದೆ.

ಜಿಂದ್‌ನ ಏಕಲವ್ಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು. ಇದೇ ವೇಳೆ ಪ್ರಧಾನಿ ಮೋದಿ ಸುಮಾರು ₹14,700 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಇದನ್ನೂ ಓದಿ: ‘3 Idiots’ ನ ರಾಂಚೊ ಪಾತ್ರಕ್ಕೆ ವಾಂಗ್‌ಚುಕ್ ಸ್ಫೂರ್ತಿ ಅಲ್ಲ : ಆಮಿರ್

ಭಾರತದ ಮೊದಲ ಹೈಡ್ರೋಜನ್ ರೈಲು ವಿಶೇಷತೆ ಏನು? : ಜಿಂದ್-ಸೋನಿಪತ್ ವಿಭಾಗದಲ್ಲಿ ಸಂಚರಿಸಲಿರುವ 10 ಬೋಗಿಗಳ ಈ ರೈಲು ಸುಮಾರು 90 ಕಿಲೋಮೀಟರ್ ದೂರವನ್ನು ಎರಡು ಗಂಟೆಗಳಲ್ಲಿ ಕ್ರಮಿಸಲಿದೆ. ಈ ರೈಲಿನ ಪ್ರಮುಖ ವಿಶೇಷತೆಗಳು ಒಳಗೊಂಡಿದ್ದು ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾಗಿದೆ. 3,200 ಹಾರ್ಸ್ ಪವರ್ (HP) ಸಾಮರ್ಥ್ಯದ ಪ್ರೊಪಲ್ಷನ್ ವ್ಯವಸ್ಥೆ. ಕಾರ್ಯಾಚರಣೆಯಲ್ಲಿ ಶೂನ್ಯ ಕಾರ್ಬನ್ ಹೊರಸೂಸುವಿಕೆ. ಉಪ-ಉತ್ಪನ್ನವಾಗಿ ನೀರಿನ ಆವಿ ಮಾತ್ರ ಹೊರಬಿಡುತ್ತದೆ.

ಪ್ರಧಾನಿ ನರೇಂದ್ರ ಮೋದಿ ಹರಿಯಾಣದಲ್ಲಿ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಹಸಿರು ನಿಶಾನೆ ತೋರಿದ್ದು,  ಹೈಡ್ರೋಜನ್ ರೈಲು ಭಾರತದ ಹಸಿರು ಸಾರಿಗೆ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.https://t.co/xsPfXCfyU4 pic.twitter.com/12TS1F87G9
— Samyukta Karnataka (@SamyuktaKarnatk) July 17, 2026

ಡೀಸೆಲ್ ಬಳಕೆಯ ಅಗತ್ಯವಿಲ್ಲ. ಕಡಿಮೆ ಶಬ್ದದೊಂದಿಗೆ ಕಾರ್ಯನಿರ್ವಹಣೆ. ನಿರಂತರ ವಿದ್ಯುದೀಕರಣದ ಅವಶ್ಯಕತೆ ಇಲ್ಲ. ಹೈಡ್ರೋಜನ್ ಇಂಧನ ಕೋಶದ ಮೂಲಕ ರೈಲು ತನ್ನದೇ ವಿದ್ಯುತ್ ಅನ್ನು ಉತ್ಪಾದಿಸಿಕೊಳ್ಳುವುದರಿಂದ ಇದು ಪರಿಸರ ಸ್ನೇಹಿ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯಾಗಿ ಗುರುತಿಸಿಕೊಂಡಿದೆ.

ಇದನ್ನೂ ಓದಿ: ‘ಏನೇ ಆದರೂ ಜುಲೈ 20ರವರೆಗೆ ಜೀವಂತವಾಗಿರುತ್ತೇನೆ’: ವಾಂಗ್‌ಚುಕ್

ಹಸಿರು ಚಲನಶೀಲತೆಯತ್ತ ಭಾರತದ ಮಹತ್ವದ ಹೆಜ್ಜೆ : ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಕಲ್ಲಿದ್ದಲು, ಡೀಸೆಲ್ ಮತ್ತು ವಿದ್ಯುದೀಕರಣದ ನಂತರ ಇದೀಗ ಹೈಡ್ರೋಜನ್ ಆಧಾರಿತ ಸಾರಿಗೆ ವ್ಯವಸ್ಥೆ ಹೊಸ ಮೈಲಿಗಲ್ಲಾಗಿದೆ. ಈ ಯೋಜನೆಯು ದೇಶದ ಹಸಿರು ಇಂಧನ ನೀತಿ ಹಾಗೂ ಕಾರ್ಬನ್ ಹೊರಸೂಸುವಿಕೆ ಕಡಿಮೆ ಮಾಡುವ ಗುರಿಗೆ ಮಹತ್ವದ ಕೊಡುಗೆ ನೀಡಲಿದೆ.

₹12,470 ಕೋಟಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ: ಪ್ರಧಾನಿ ಮೋದಿ ಹರಿಯಾಣದಲ್ಲಿ ₹12,470 ಕೋಟಿಗೂ ಅಧಿಕ ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದರು. ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ ಸುಮಾರು ₹9,680 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 157.92 ಕಿ.ಮೀ. ಉದ್ದದ ಈ ಕಾರಿಡಾರ್ ದೆಹಲಿ-ಕತ್ರಾ ಪ್ರಯಾಣದ ಸಮಯವನ್ನು 14 ಗಂಟೆಯಿಂದ 6 ಗಂಟೆಗೆ ಇಳಿಸಲಿದೆ.

ಇದನ್ನೂ ಓದಿ: ಬೆಂಗಳೂರು: ವಿಮಾನದ ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಚೀಟಿ ಪತ್ತೆ

ದೆಹಲಿ-ಅಮೃತಸರ ಪ್ರಯಾಣವನ್ನು 8 ಗಂಟೆಯಿಂದ 4 ಗಂಟೆಗೆ ಕಡಿಮೆ ಮಾಡಲಿದೆ. ಶ್ರೀ ಮಾತಾ ವೈಷ್ಣೋ ದೇವಿ ಯಾತ್ರಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಕೈಗಾರಿಕೆ ಹಾಗೂ ಲಾಜಿಸ್ಟಿಕ್ಸ್ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಜಿಂದ್-ಗೋಹಾನ ಗ್ರೀನ್‌ಫೀಲ್ಡ್ ಹೆದ್ದಾರಿ 40.60 ಕಿ.ಮೀ. ಉದ್ದದ ಈ ಹೆದ್ದಾರಿಯು ಜಿಂದ್ ಮತ್ತು ಗೋಹಾನ ನಡುವಿನ ಪ್ರಯಾಣದ ಸಮಯವನ್ನು ಎರಡು ಗಂಟೆಯಿಂದ ಕೇವಲ 40 ನಿಮಿಷಗಳಿಗೆ ಇಳಿಸಲಿದೆ.

ಅಂಬಾಲಾ-ಕಲಾ ಅಂಬ್ ಹೆದ್ದಾರಿ : ಈ ಯೋಜನೆಯು ಹರಿಯಾಣ ಮತ್ತು ಹಿಮಾಚಲ ಪ್ರದೇಶದ ನಡುವಿನ ಸಂಪರ್ಕವನ್ನು ಬಲಪಡಿಸಿ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಅಭಿವೃದ್ಧಿಗೆ ನೆರವಾಗಲಿದೆ.

ಸಿಖ್ ವಸ್ತುಸಂಗ್ರಹಾಲಯಕ್ಕೆ ಅಡಿಪಾಯ : ಕುರುಕ್ಷೇತ್ರದಲ್ಲಿ ಸಿಖ್ ಸಮುದಾಯದ ಇತಿಹಾಸ, ಗುರುಗಳ ಬೋಧನೆಗಳು ಮತ್ತು ಅವರ ತ್ಯಾಗಗಳನ್ನು ಪರಿಚಯಿಸುವ ಸಿಖ್ ವಸ್ತುಸಂಗ್ರಹಾಲಯ ನಿರ್ಮಾಣಕ್ಕೂ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.

ಬಂಟ್ವಾಳ ಯುವತಿ ಹತ್ಯೆ ಪ್ರಕರಣ: ಮಂಗಳೂರಿನಲ್ಲಿ ಆರೋಪಿ ಬಂಧನ

The post ಭಾರತದ ಹೈಡ್ರೋಜನ್ ರೈಲು ಯುಗಕ್ಕೆ ಮೋದಿ ಐತಿಹಾಸಿಕ ಚಾಲನೆ appeared first on Samyukta Karnataka.

ರೈಲ್ವೆಯಲ್ಲಿ 52 ಹೊಸ ಸುಧಾರಣೆ: ಕೌಶಲ್ಯ ಪ್ರಮಾಣೀಕರಣಕ್ಕೆ ಒತ್ತು
ನವದೆಹಲಿ: ಭಾರತೀಯ ರೈಲ್ವೆಯ ಯೋಜನಾ ಅನುಷ್ಠಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು, ಸರಕು ಸಾಗಣೆಯಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಹಾಗೂ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಸುಧಾರಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಮಹತ್ವದ ಸುಧಾರಣೆಗಳ ಪ್ಯಾಕೇಜ್‌ ಅನ್ನು ಘೋಷಿಸಿದ್ದಾರೆ.

ಈ ವರ್ಷ ಜಾರಿಗೆ ತರಲಿರುವ 52 ಸುಧಾರಣೆಗಳ ಭಾಗವಾಗಿ ಹಲವು ಹೊಸ ನೀತಿಗಳನ್ನು ಪ್ರಕಟಿಸಲಾಗಿದ್ದು, ರೈಲ್ವೆ ಯೋಜನೆಗಳ ಗುಣಮಟ್ಟ, ಕಾರ್ಯಕ್ಷಮತೆ ಮತ್ತು ಪಾರದರ್ಶಕತೆ ಹೆಚ್ಚಿಸುವ ಉದ್ದೇಶವನ್ನು ಹೊಂದಿವೆ.

ಇದನ್ನೂ ಓದಿ: ವಾಂಗ್‌ಚುಕ್ ಬೆಂಬಲಕ್ಕೆ ನಿಂತ ‘3 Idiots’ ಚತುರ್: Video ವೈರಲ್!

ಕೌಶಲ್ಯ ಪ್ರಮಾಣೀಕರಣ ಚೌಕಟ್ಟು : ರೈಲ್ವೆ ಯೋಜನೆಗಳಿಗೆ ಕೌಶಲ್ಯ ಪ್ರಮಾಣೀಕರಣ ಚೌಕಟ್ಟು (Skill Certification Framework) ಜಾರಿಗೆ ತರಲಾಗುತ್ತಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. “ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ ಮೂಲಸೌಕರ್ಯ ನಿರ್ಮಾಣ ಕಾರ್ಯಗಳು ನಡೆಯುತ್ತಿರುವಾಗ, ಪ್ಲಂಬರ್‌ಗಳು, ವೆಲ್ಡರ್‌ಗಳು, ಫಿಟ್ಟರ್‌ಗಳು, ಮೇಸನ್‌ಗಳು ಮತ್ತು ಕಾಂಕ್ರೀಟ್ ಪರೀಕ್ಷಕರು ಸೇರಿದಂತೆ ಎಲ್ಲಾ ಕೆಲಸಗಾರರು ಉತ್ತಮ ತರಬೇತಿ ಪಡೆದಿರುವುದು ಅತ್ಯಗತ್ಯ. ಈ ಯೋಜನೆಯನ್ನು ಗರಿಷ್ಠ 24 ತಿಂಗಳಲ್ಲಿ ಎಲ್ಲಾ ರೈಲ್ವೆ ಯೋಜನೆಗಳಲ್ಲಿ ಜಾರಿಗೊಳಿಸಬಹುದು” ಎಂದು ಅವರು ಹೇಳಿದ್ದಾರೆ.

ಗುತ್ತಿಗೆದಾರರಿಗೆ ಕಠಿಣ ನಿಯಮ : ರೈಲ್ವೆ ಯೋಜನೆಗಳ ಗುಣಮಟ್ಟ ಸುಧಾರಿಸುವ ಉದ್ದೇಶದಿಂದ ಗುತ್ತಿಗೆದಾರರ ಅರ್ಹತಾ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಹೊಸ ನಿಯಮಗಳ ಪ್ರಕಾರ ಕೆಲಸ ಆರಂಭಿಸುವ ಮೊದಲು ಗುತ್ತಿಗೆದಾರರು 10 ಪ್ರತಿಶತ ಮುಂಗಡ ಕಾರ್ಯಕ್ಷಮತಾ ಭದ್ರತೆ ಒದಗಿಸಬೇಕು. ನಿವ್ವಳ ಮೌಲ್ಯದ ಶೇಕಡಾ 50ಕ್ಕಿಂತ ಹೆಚ್ಚು ಮೊಕದ್ದಮೆಗಳನ್ನು ಎದುರಿಸುತ್ತಿರುವ ಗುತ್ತಿಗೆದಾರರು ರೈಲ್ವೆ ಒಪ್ಪಂದಗಳಿಗೆ ಬಿಡ್ ಸಲ್ಲಿಸಲು ಅರ್ಹರಾಗಿರುವುದಿಲ್ಲ. ವೃತ್ತಿಪರ ಪರಿಹಾರ ವಿಮೆ ಹಾಗೂ ಎಲ್ಲಾ ಅಪಾಯ ವಿಮೆಗಳನ್ನು ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: TET ಪರೀಕ್ಷೆಯ ಹೊಸ ದಿನಾಂಕ ಘೋಷಣೆಗೆ ರಾಹುಲ್ ಆಗ್ರಹ

ಈ ಕ್ರಮಗಳು ಗುಣಮಟ್ಟದ ಕೆಲಸ ಮಾಡುವ ಗುತ್ತಿಗೆದಾರರನ್ನು ಉತ್ತೇಜಿಸುವುದರ ಜೊತೆಗೆ ಕಾನೂನು ವಿವಾದಗಳಿಗೆ ಹೆಚ್ಚು ಒತ್ತು ನೀಡುವ ಸಂಸ್ಥೆಗಳನ್ನು ನಿರುತ್ಸಾಹಗೊಳಿಸಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಸರಕು ಸಾಗಣೆಯಲ್ಲಿ ಹೊಸ ಬದಲಾವಣೆ : ಸರಕು ಸಾಗಣೆಯಲ್ಲಿ ಖಾಸಗಿ ವಲಯದ ನವೀನ ಆಲೋಚನೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೈಗಾರಿಕೆಗಳಿಗೆ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಹೊಸ ಸರಕು ವ್ಯಾಗನ್ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡಲಾಗಿದೆ. ಇದೇ ವೇಳೆ, ಹಾರು ಬೂದಿಯ ಸಾಗಣೆಗೆ ಕಂಟೇನರ್ ಆಧಾರಿತ ವ್ಯವಸ್ಥೆ ಪರಿಚಯಿಸಲಾಗಿದೆ. ಇದರಿಂದ ಮಾಲಿನ್ಯ ಕಡಿಮೆಯಾಗುವುದರ ಜೊತೆಗೆ ಸಾಗಣೆ ಮತ್ತು ನಿರ್ವಹಣೆಯೂ ಸುಲಭವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಶಾಲೆಯಲ್ಲೇ AI ಶಿಕ್ಷಣ: Google ಸಮಾವೇಶದಲ್ಲಿ CM ಮಾಸ್ಟರ್ ಪ್ಲಾನ್!

ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರಗಳು ಮತ್ತು ಕೃಷಿ ಉತ್ಪನ್ನಗಳ ಸಾಗಣೆಯಲ್ಲೂ ಕಂಟೇನರ್ ಬಳಕೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ಕಂಟೇನರ್ ರೈಲು ನಿರ್ವಾಹಕರಿಗೆ ಸಡಿಲಿಕೆ : ಕಂಟೇನರ್ ರೈಲು ನಿರ್ವಾಹಕರಿಗೆ ನಿಯಮಗಳನ್ನು ಸರಳಗೊಳಿಸಲಾಗಿದ್ದು, ದೇಶಾದ್ಯಂತ ಏಕೀಕೃತ ಪರವಾನಗಿ ವ್ಯವಸ್ಥೆ, ₹25 ಕೋಟಿ ಏಕರೂಪದ ನೋಂದಣಿ ಶುಲ್ಕ, 20 ವರ್ಷಗಳ ಯಶಸ್ವಿ ಕಾರ್ಯಾಚರಣೆಯ ಬಳಿಕ ನವೀಕರಣ ಶುಲ್ಕ ರದ್ದು ಮಾಡಲಾಗಿದೆ.

ಭೂಸ್ವಾಧೀನಕ್ಕೆ ‘ರೈಲ್ ಭೂಮಿ ಪೋರ್ಟಲ್’ : ರೈಲ್ವೆ ಯೋಜನೆಗಳಿಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ವೇಗಗೊಳಿಸಲು ‘ರೈಲ್ ಭೂಮಿ ಪೋರ್ಟಲ್’ ಪರಿಚಯಿಸಲಾಗಿದೆ. ಈ ಪೋರ್ಟಲ್‌ನಿಂದ ಭೂಸ್ವಾಧೀನಕ್ಕೆ ತೆಗೆದುಕೊಳ್ಳುವ ಸಮಯವು ರಾಜ್ಯವನ್ನು ಅವಲಂಬಿಸಿ 30ರಿಂದ 40 ಪ್ರತಿಶತದಷ್ಟು ಕಡಿಮೆಯಾಗಬಹುದು ಎಂದು ಸಚಿವಾಲಯ ಅಂದಾಜಿಸಿದೆ.

ಇದನ್ನೂ ಓದಿ: ರಾಜ್ಯಾದ್ಯಂತ 10 ಸಾವಿರ ಯುವ ಸಂಘ ಸ್ಥಾಪನೆ: ಪ್ರತಿ ಸಂಘಕ್ಕೆ ₹10 ಲಕ್ಷ

ಭಾರತದಲ್ಲಿ ವೇಗವಾಗಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿಗೆ ಕೌಶಲ್ಯಪೂರ್ಣ ಕಾರ್ಯಪಡೆ ಹಾಗೂ ಪರಿಣಾಮಕಾರಿ ಯೋಜನಾ ಅನುಷ್ಠಾನ ಅತ್ಯಗತ್ಯವಾಗಿದ್ದು, ಈ ಸುಧಾರಣೆಗಳು ರೈಲ್ವೆಯ ಕಾರ್ಯಕ್ಷಮತೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲಿವೆ ಎಂದು ರೈಲ್ವೆ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

E20 ಇಂಧನ: ಮೋದಿ ಭೇಟಿಗೂ ಮುನ್ನ ಅಭಿಯಾನ ಆರಂಭಿಸಿದ ಕೇಜ್ರಿ

The post ರೈಲ್ವೆಯಲ್ಲಿ 52 ಹೊಸ ಸುಧಾರಣೆ: ಕೌಶಲ್ಯ ಪ್ರಮಾಣೀಕರಣಕ್ಕೆ ಒತ್ತು appeared first on Samyukta Karnataka.

ರೈಲಿನಲ್ಲಿ ‘ಹನಿಮೂನ್ ಸೂಟ್’ ಅಲಂಕಾರ: ಸಿಬ್ಬಂದಿ ಅಮಾನತು!
ನಂದಿಗ್ರಾಮ್ ಎಕ್ಸ್‌ಪ್ರೆಸ್‌ನಲ್ಲಿ ‘ಹನಿಮೂನ್ ಸೂಟ್’ ಆಗಿ ಬದಲಾದ 1ನೇ ಎಸಿ ಕೂಪ್; ಸಿಬ್ಬಂದಿ ಅಮಾನತು, ತನಿಖೆಗೆ ಆದೇಶ

ನವದೆಹಲಿ: ರೈಲಿನ ಫಸ್ಟ್ ಎಸಿ ಕೂಪ್ ಅನ್ನು ಹೂವು, ಬಲೂನು ಮತ್ತು ಅಲಂಕಾರಿಕ ಸಾಮಗ್ರಿಗಳಿಂದ ‘ಹನಿಮೂನ್ ಸೂಟ್’ ಮಾದರಿಯಲ್ಲಿ ಅಲಂಕರಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಭಾರತೀಯ ರೈಲ್ವೆ ಕಠಿಣ ಕ್ರಮ ಕೈಗೊಂಡಿದೆ. ಈ ಸಂಬಂಧ ದಕ್ಷಿಣ ಮಧ್ಯ ರೈಲ್ವೆ (SCR) ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತುಗೊಳಿಸಿ, ವಿವರವಾದ ಇಲಾಖಾ ತನಿಖೆಗೆ ಆದೇಶಿಸಿದೆ.

ನಂದಿಗ್ರಾಮ್ ಎಕ್ಸ್‌ಪ್ರೆಸ್‌ನ ಫಸ್ಟ್ ಎಸಿ ಕೂಪ್ ಅನ್ನು ‘ಹನಿಮೂನ್ ಸೂಟ್’ ರೀತಿಯಲ್ಲಿ ಅಲಂಕರಿಸಿದ ವಿಡಿಯೋ ವೈರಲ್ ಆಗಿದ್ದು, ಅನಧಿಕೃತವಾಗಿ ಡೆಕೋರೇಟರ್‌ಗೆ ಪ್ರವೇಶ ನೀಡಿದ ಪ್ರಕರಣದಲ್ಲಿ ದಕ್ಷಿಣ ಮಧ್ಯ ರೈಲ್ವೆ ಸಿಬ್ಬಂದಿಯನ್ನು ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಿದೆ.https://t.co/NVYaSPKFLy pic.twitter.com/YgKMm3xj6p
— Samyukta Karnataka (@SamyuktaKarnatk) July 9, 2026

ಜುಲೈ 6ರಂದು ರೈಲು ಸಂಖ್ಯೆ 11002 ನಂದಿಗ್ರಾಮ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳು ತಮ್ಮ ಫಸ್ಟ್ ಎಸಿ ಕೂಪ್ ಅನ್ನು ವಿಶೇಷವಾಗಿ ಅಲಂಕರಿಸಲು ಖಾಸಗಿ ಆನ್‌ಲೈನ್ ಡೆಕೋರೇಟರ್ ಸೇವೆಯನ್ನು ಪಡೆದುಕೊಂಡಿದ್ದರು. ಬಳಿಕ ಜಲ್ನಾ ರೈಲು ನಿಲ್ದಾಣದಲ್ಲಿ ಡೆಕೋರೇಟರ್‌ಗೆ ಕೋಚ್‌ಗೆ ಪ್ರವೇಶ ಕಲ್ಪಿಸಿ, ಕೂಪ್ ಅನ್ನು ಹೂವು, ಬಲೂನು ಹಾಗೂ ಅಲಂಕಾರಿಕ ದೀಪಗಳಿಂದ ಸಿಂಗರಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ಚರ್ಚೆಗೆ ಕಾರಣವಾಯಿತು.

ಇದನ್ನೂ ಓದಿ: ಅರಬೈಲ್ ಘಾಟ್ ಬಳಿ ಭೀಕರ ಅಪಘಾತ: ಧಾರವಾಡ ಮೂಲದ ಆರು ಜನ ಸಾವು!

ದಕ್ಷಿಣ ಮಧ್ಯ ರೈಲ್ವೆ ತನ್ನ ಅಧಿಕೃತ ಪ್ರಕಟಣೆಯಲ್ಲಿ, ಡೆಕೋರೇಟರ್‌ಗೆ ಕೋಚ್‌ಗೆ ಪ್ರವೇಶ ನೀಡಿರುವುದು ಸಂಪೂರ್ಣ ಅನಧಿಕೃತವಾಗಿದ್ದು, ಇದು ಗಂಭೀರ ಭದ್ರತಾ ಲೋಪ ಎಂದು ಪರಿಗಣಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಸಂಬಂಧಪಟ್ಟ ಮುಖ್ಯ ಟಿಕೆಟ್ ಪರಿಶೀಲಕ (Chief Ticket Inspector) ಅವರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ, ಘಟನೆಯ ಕುರಿತು ಇಲಾಖಾ ತನಿಖೆ ನಡೆಸಿ, ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ದಂಪತಿಯ ವಿಶೇಷ ಕ್ಷಣವನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಅನುಮತಿಯಿಲ್ಲದೆ ಖಾಸಗಿ ಅಲಂಕಾರ ಮಾಡಿರುವುದನ್ನು ಪ್ರಶ್ನಿಸಿದ್ದಾರೆ. ರೈಲ್ವೆ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತ ವ್ಯಕ್ತಿಗೆ ಕೋಚ್ ಪ್ರವೇಶ ನೀಡಿರುವುದು ಸುರಕ್ಷತಾ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಅಂಕಣ ಬರಹ | ಎಸ್‌ಐಆರ್: `ರಾಜ್ಯ’ಕೀಯ ಚೆಸ್ ಆಡಿದ ಡಿಕೆ!

ರೈಲ್ವೆ ಅಧಿಕಾರಿಗಳು ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಹಾಗೂ ಭದ್ರತಾ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.

ನಮ್ಮ ಮೆಟ್ರೋ ಗ್ರೀನ್ ಲೈನ್‌ನಲ್ಲಿ ತಾಂತ್ರಿಕ ಸಮಸ್ಯೆ: ಸಂಚಾರ ವಿಳಂಬ!

The post ರೈಲಿನಲ್ಲಿ ‘ಹನಿಮೂನ್ ಸೂಟ್’ ಅಲಂಕಾರ: ಸಿಬ್ಬಂದಿ ಅಮಾನತು! appeared first on Samyukta Karnataka.

ಸಮೋಸಾ ಖರೀದಿಗಾಗಿ ರೈಲು ನಿಲುಗಡೆ: ವೈರಲ್ ಪೋಸ್ಟ್‌ಗೆ ಇಲಾಖೆ ಸ್ಪಷ್ಟನೆ
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ “ಲೋಕೋ ಪೈಲಟ್ ಸಮೋಸಾ ಖರೀದಿಸಿಲು ರೈಲು ನಿಲ್ಲಿಸಿದರು” ಎಂಬ ಪೋಸ್ಟ್‌ಗೆ ಭಾರತೀಯ ರೈಲ್ವೆ ಸ್ಪಷ್ಟನೆ ನೀಡಿದ್ದು, ಈ ಹೇಳಿಕೆ ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವಂತದ್ದು ಎಂದು ತಿಳಿಸಿದೆ.

ವೈರಲ್ ವಿಡಿಯೊದಲ್ಲಿ ರೈಲು ನಿಲ್ದಾಣದ ಬಳಿ ನಿಂತಿದ್ದ ರೈಲಿನಿಂದ ಸಿಬ್ಬಂದಿಯೊಬ್ಬರು ಕೆಳಗಿಳಿದು ಆಹಾರ ಪದಾರ್ಥ ಖರೀದಿಸುತ್ತಿರುವ ದೃಶ್ಯ ಕಂಡುಬಂದಿತ್ತು. ಈ ವಿಡಿಯೊವನ್ನು ಹಲವರು “ಪ್ರಯಾಣಿಕರ ರೈಲನ್ನು ಊಟಕ್ಕಾಗಿ ನಿಲ್ಲಿಸಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಭಾರತೀಯ ರೈಲ್ವೆಯು ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿದ್ದು, ವೈರಲ್ ಆಗಿರುವ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದು ಪ್ರಯಾಣಿಕರ ರೈಲು ಅಲ್ಲ, ಬದಲಾಗಿ ಸರಕು ರೈಲು ಎಂದು ತಿಳಿಸಿದೆ.

ಏನಿದು ನಿಜವಾದ ಘಟನೆ? : ರೈಲ್ವೆಯ ಪ್ರಕಾರ, ಲೋಕೋ ಸಂಖ್ಯೆ 27237 ಮತ್ತು 27600 ಮೂಲಕ ಸಾಗುತ್ತಿದ್ದ ಸರಕು ರೈಲು (ಕಾನ್ಕಾರ್ ಗ್ರೀನ್ ಫೀಲ್ಡ್ ಪ್ರೈವೇಟ್ ಟರ್ಮಿನಸ್) ಅನ್ನು RAU ಯಾರ್ಡ್‌ನಲ್ಲಿ ನಡೆಯುತ್ತಿದ್ದ ನಿಗದಿತ ಎಂಜಿನಿಯರಿಂಗ್ ಕಾಮಗಾರಿಯ ಕಾರಣದಿಂದಾಗಿ RAU ಹೋಮ್ ಸಿಗ್ನಲ್‌ನಲ್ಲಿ ನಿಲ್ಲಿಸಲಾಗಿತ್ತು.

ಈ ನಿಗದಿತ ಕಾರ್ಯಾಚರಣಾ ನಿಲುಗಡೆಯ ವೇಳೆ ಸಹಾಯಕ ಲೋಕೋ ಪೈಲಟ್ (ALP) ವೈಯಕ್ತಿಕವಾಗಿ ಆಹಾರವನ್ನು ಖರೀದಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿತ್ತು. ಆದರೆ, ಈ ವೈಯಕ್ತಿಕ ಕೃತ್ಯವನ್ನು ತಪ್ಪಾಗಿ ನಿರೂಪಿಸಿ, “ರೈಲನ್ನೇ ಸಮೋಸಾ ಖರೀದಿಸಿಲು ನಿಲ್ಲಿಸಲಾಗಿದೆ” ಎಂಬ ಸುಳ್ಳು ಮಾಹಿತಿ ಹರಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಪ್ರಯಾಣಿಕರ ರೈಲು ಎಂದು ತಪ್ಪು ಮಾಹಿತಿ : ವೈರಲ್ ಪೋಸ್ಟ್‌ನಲ್ಲಿ ಈ ಘಟನೆ ಪ್ರಯಾಣಿಕರ DEMU ರೈಲಿಗೆ ಸಂಬಂಧಿಸಿದೆ ಎಂದು ಹೇಳಲಾಗಿತ್ತು. ಆದರೆ, ಘಟನೆಯು ಸಂಪೂರ್ಣವಾಗಿ ಸರಕು ರೈಲಿಗೆ ಸಂಬಂಧಿಸಿದ್ದಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತಪ್ಪು ಮಾಹಿತಿಯಿಂದ ಸಾರ್ವಜನಿಕರಲ್ಲಿ ಗೊಂದಲ : ಆಯ್ದ ಸಂಪಾದನೆ, ತಪ್ಪು ನಿರೂಪಣೆ ಹಾಗೂ ಸುಳ್ಳು ಮಾಹಿತಿಯ ಪ್ರಸಾರದಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗುವುದರ ಜೊತೆಗೆ ಸರ್ಕಾರಿ ಸಂಸ್ಥೆಗಳ ಮೇಲಿನ ನಂಬಿಕೆಗೆ ಧಕ್ಕೆಯಾಗುತ್ತದೆ ಎಂದು ರೈಲ್ವೆ ಇಲಾಖೆ ಎಚ್ಚರಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿ ಅಥವಾ ವಿಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಅಧಿಕೃತ ಮೂಲಗಳ ಮೂಲಕ ಸತ್ಯಾಂಶವನ್ನು ಪರಿಶೀಲಿಸಬೇಕು. ದಾರಿತಪ್ಪಿಸುವ ಮಾಹಿತಿ ಹಾಗೂ ಸುಳ್ಳು ಸುದ್ದಿಗಳನ್ನು ನಂಬಬಾರದು ಮತ್ತು ಪ್ರಸಾರ ಮಾಡಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

https://x.com/SamyuktaKarnatk/status/2074803193763238148

The post ಸಮೋಸಾ ಖರೀದಿಗಾಗಿ ರೈಲು ನಿಲುಗಡೆ: ವೈರಲ್ ಪೋಸ್ಟ್‌ಗೆ ಇಲಾಖೆ ಸ್ಪಷ್ಟನೆ appeared first on Samyukta Karnataka.

ಯಲಹಂಕ : ಮುಂಬೈ–ಕೊಯಮತ್ತೂರು ರೈಲು ಇನ್ನು ಇಲ್ಲೂ ನಿಲುಗಡೆ
ಬೆಂಗಳೂರು: ಯಲಹಂಕ ಹಾಗೂ ಉತ್ತರ ಬೆಂಗಳೂರಿನ ಸಾವಿರಾರು ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಕೊನೆಗೂ ಮನ್ನಣೆ ದೊರೆತಿದೆ. ರೈಲು ಸಂಖ್ಯೆ 11013/11014 ಲೋಕಮಾನ್ಯ ತಿಲಕ್ ಟರ್ಮಿನಸ್ (ಮುಂಬೈ)–ಕೊಯಮತ್ತೂರು–ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲು ಇನ್ನು ಮುಂದೆ ಯಲಹಂಕ ರೈಲು ನಿಲ್ದಾಣದಲ್ಲೂ ಅಧಿಕೃತವಾಗಿ ನಿಲುಗಡೆಯಾಗಲಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಯಲಹಂಕ ಮತ್ತು ಉತ್ತರ ಬೆಂಗಳೂರಿನ ಸಾರ್ವಜನಿಕರ ಪ್ರಮುಖ ಬೇಡಿಕೆಯೊಂದು ಇದೀಗ ಈಡೇರಿರುವುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: SIR ಆತಂಕವೇ: ಜೂನ್‌ 30ರಂದು ಜನರ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ

ಯಲಹಂಕವು ಬೆಂಗಳೂರಿನ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಒಂದಾಗಿದ್ದು, ಇಲ್ಲಿನ ಸಾವಿರಾರು ದಿನನಿತ್ಯದ ಪ್ರಯಾಣಿಕರು, ಉದ್ಯೋಗಿಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಕುಟುಂಬಗಳು ಮುಂಬೈ ಮತ್ತು ಕೊಯಮತ್ತೂರು ಸೇರಿದಂತೆ ವಿವಿಧ ಭಾಗಗಳಿಗೆ ಸಂಚರಿಸಲು ಅನುಕೂಲವಾಗುವಂತೆ ಈ ರೈಲಿಗೆ ಯಲಹಂಕದಲ್ಲಿ ನಿಲುಗಡೆ ಕಲ್ಪಿಸುವಂತೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ತಮ್ಮ ನಿರಂತರ ಪ್ರಯತ್ನ ಹಾಗೂ ಸತತ ಫಾಲೋ-ಅಪ್‌ನ ಫಲವಾಗಿ ನೈಋತ್ಯ ರೈಲ್ವೆಯು ಈ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿಗೆ ಶಿಫಾರಸು ಮಾಡಿದ್ದು, ಇದೀಗ ರೈಲ್ವೆ ಮಂಡಳಿಯು ಯಲಹಂಕದಲ್ಲಿ ಹೆಚ್ಚುವರಿ ನಿಲುಗಡೆಗೆ ಅಧಿಕೃತ ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸೂಪಾ ಜಲಾಶಯ ಖಾಲಿ ಖಾಲಿ: ವಿದ್ಯುತ್ ಉತ್ಪಾದನೆ ಮೇಲೆ ಕರಿನೆರಳು

ಈ ಹೊಸ ನಿಲುಗಡೆಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿರುವ ಸಂಸದರು, ಸಾರ್ವಜನಿಕರ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಹೊಸ ನಿಲುಗಡೆಯಿಂದ ಉತ್ತರ ಬೆಂಗಳೂರಿನ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಾವಿರಾರು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಕೆಎಸ್‌ಆರ್ ಬೆಂಗಳೂರು (ಮೆಜೆಸ್ಟಿಕ್) ರೈಲು ನಿಲ್ದಾಣದವರೆಗೆ ತೆರಳುವ ಅವಶ್ಯಕತೆ ಕಡಿಮೆಯಾಗಲಿದೆ. ಇದರಿಂದ ಸಮಯ ಮತ್ತು ಪ್ರಯಾಣ ವೆಚ್ಚ ಉಳಿತಾಯವಾಗುವುದರ ಜೊತೆಗೆ ನಗರದ ಸಂಚಾರ ದಟ್ಟಣೆ ತಗ್ಗಿಸುವಲ್ಲಿಯೂ ನೆರವಾಗುವ ನಿರೀಕ್ಷೆಯಿದೆ.

ಉತ್ತಮ ಸಂಪರ್ಕ ವ್ಯವಸ್ಥೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನಸ್ನೇಹಿ ಯೋಜನೆಗಳ ಮೂಲಕ ವಿಕಸಿತ ಯಲಹಂಕ, ವಿಕಸಿತ ಬೆಂಗಳೂರು ಹಾಗೂ ವಿಕಸಿತ ಚಿಕ್ಕಬಳ್ಳಾಪುರ ನಿರ್ಮಾಣಕ್ಕೆ ತಮ್ಮ ಬದ್ಧತೆ ನಿರಂತರವಾಗಿರಲಿದೆ ಎಂದು ಸಂಸದ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಭೀಕರ ದುರಂತ: ಕಟ್ಟಡದ ಛಾವಣಿ ಕುಸಿದು ಮೂವರು ವಿದ್ಯಾರ್ಥಿಗಳ ಸಾವು

The post ಯಲಹಂಕ : ಮುಂಬೈ–ಕೊಯಮತ್ತೂರು ರೈಲು ಇನ್ನು ಇಲ್ಲೂ ನಿಲುಗಡೆ appeared first on Samyukta Karnataka.

ರೈಲ್ವೆ ಹೊಸ ನಿಯಮ: ಟಿಕೆಟ್ ರಹಿತ ಪ್ರಯಾಣಕ್ಕೆ ಭಾರೀ ದಂಡ
ಟಿಕೆಟ್ ಇಲ್ಲದೆ ಅಥವಾ ಅಮಾನ್ಯ ಟಿಕೆಟ್ ಬಳಸಿ ರೈಲು ಪ್ರಯಾಣ ಮಾಡುವವರ ವಿರುದ್ಧ ಭಾರತೀಯ ರೈಲ್ವೆ ಕಠಿಣ ಕ್ರಮ ಕೈಗೊಂಡಿದೆ. ಹೊಸ ನಿಯಮದಂತೆ ಕನಿಷ್ಠ ದಂಡವನ್ನು ₹500ಕ್ಕೆ ಏರಿಸಲಾಗಿದ್ದು, ದಂಡ ಪಾವತಿಸಲು ನಿರಾಕರಿಸಿದರೆ ನ್ಯಾಯಾಲಯದ ಕ್ರಮ ಮತ್ತು ಜೈಲು ಶಿಕ್ಷೆಯೂ ಎದುರಾಗಬಹುದು.

ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಟಿಕೆಟ್ ಇಲ್ಲದೆ ಅಥವಾ ಅಮಾನ್ಯ ಟಿಕೆಟ್ ಬಳಸಿ ಪ್ರಯಾಣಿಸುವವರ ವಿರುದ್ಧ ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ಕ್ರಮ ಕೈಗೊಂಡಿದೆ. ರೈಲ್ವೆ ಸಚಿವಾಲಯವು ಜೂನ್ 19ರಂದು ಹೊರಡಿಸಿದ ಗೆಜೆಟ್ ಅಧಿಸೂಚನೆಯ ಮೂಲಕ 1989ರ ರೈಲ್ವೆ ಕಾಯ್ದೆಗೆ ತಿದ್ದುಪಡಿ ಜಾರಿಗೆ ತಂದಿದ್ದು, ಟಿಕೆಟ್ ರಹಿತ ಪ್ರಯಾಣಕ್ಕೆ ವಿಧಿಸುವ ಕನಿಷ್ಠ ದಂಡವನ್ನು ₹500ಕ್ಕೆ ಏರಿಸಲಾಗಿದೆ.

ಈ ಬದಲಾವಣೆ ಜನ ವಿಶ್ವಾಸ್ (Jan Vishwas) ಕಾಯ್ದೆ ಅಡಿಯಲ್ಲಿ ಜಾರಿಗೆ ಬಂದಿದ್ದು, ರೈಲು ಪ್ರಯಾಣದಲ್ಲಿ ಶಿಸ್ತು ಮತ್ತು ನಿಯಮ ಪಾಲನೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ.

ಇದನ್ನೂ ಓದಿ: ಜೂನ್ 21ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ಬದಲಾವಣೆ

ಹೊಸ ನಿಯಮ ಏನು ಹೇಳುತ್ತದೆ? : ಹೊಸ ನಿಯಮದ ಪ್ರಕಾರ, ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವವರು ಅಥವಾ ಅಮಾನ್ಯ ಟಿಕೆಟ್ ಬಳಸುವವರು ಪ್ರಯಾಣಿಸಿದ ದೂರಕ್ಕೆ ಅನ್ವಯಿಸುವ ಪೂರ್ಣ ಪ್ರಯಾಣ ದರವನ್ನು ಪಾವತಿಸಬೇಕು. ಅದರ ಜೊತೆಗೆ ಹೆಚ್ಚುವರಿ ಶುಲ್ಕ (Excess Charge) ಪಾವತಿಸಬೇಕು. ಈ ಹೆಚ್ಚುವರಿ ಶುಲ್ಕದ ಕನಿಷ್ಠ ಮೊತ್ತ ಈಗ ₹500 ಆಗಿರುತ್ತದೆ. ಹಿಂದಿನ ದಂಡದ ಮೊತ್ತಕ್ಕಿಂತ ಇದು ಗಮನಾರ್ಹ ಏರಿಕೆಯಾಗಿದ್ದು, ಟಿಕೆಟ್ ರಹಿತ ಪ್ರಯಾಣವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ದಂಡ ಪಾವತಿಸದಿದ್ದರೆ ಏನಾಗುತ್ತದೆ? : ರೈಲ್ವೆ ಅಧಿಕಾರಿಗಳ ಪ್ರಕಾರ, ದಂಡ ಹಾಗೂ ಪ್ರಯಾಣ ದರ ಪಾವತಿಸಲು ಪ್ರಯಾಣಿಕರು ನಿರಾಕರಿಸಿದರೆ ಪ್ರಕರಣವನ್ನು ನ್ಯಾಯಾಲಯಕ್ಕೆ ಕಳುಹಿಸಬಹುದು. ಅಂತಹ ಸಂದರ್ಭಗಳಲ್ಲಿ ಕಾನೂನು ಕ್ರಮ ಜರುಗಲಿದ್ದು, ನ್ಯಾಯಾಲಯವು ದಂಡ ಅಥವಾ ಜೈಲು ಶಿಕ್ಷೆ ವಿಧಿಸುವ ಅಧಿಕಾರ ಹೊಂದಿರುತ್ತದೆ.

ಇದನ್ನೂ ಓದಿ: 16 FDC ಔಷಧಿಗಳ ತಯಾರಿಕೆ, ಮಾರಾಟ – ವಿತರಣೆಗೆ ನಿಷೇಧ

₹40 ಕೋಟಿಗೂ ಹೆಚ್ಚು ವಸೂಲಿ : ರೈಲ್ವೆ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2026ರ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಮಾತ್ರ ಸೆಂಟ್ರಲ್ ರೈಲ್ವೆ ಟಿಕೆಟ್ ರಹಿತ ಪ್ರಯಾಣಕ್ಕೆ ಸಂಬಂಧಿಸಿದ ಸುಮಾರು 5 ಲಕ್ಷ ಪ್ರಕರಣಗಳನ್ನು ಪತ್ತೆಹಚ್ಚಿದೆ. ಈ ಕಾರ್ಯಾಚರಣೆಗಳ ಮೂಲಕ ಎರಡು ತಿಂಗಳ ಅವಧಿಯಲ್ಲಿ ₹40 ಕೋಟಿಗೂ ಅಧಿಕ ಮೊತ್ತವನ್ನು ದಂಡ ಮತ್ತು ಶುಲ್ಕ ರೂಪದಲ್ಲಿ ವಸೂಲಿ ಮಾಡಲಾಗಿದೆ. ಇದು ಟಿಕೆಟ್ ಇಲ್ಲದೆ ಪ್ರಯಾಣಿಸುವವರ ಸಂಖ್ಯೆ ಇನ್ನೂ ಗಣನೀಯ ಪ್ರಮಾಣದಲ್ಲಿರುವುದನ್ನು ತೋರಿಸುತ್ತದೆ.

ಪ್ರಯಾಣಿಕರಿಗೆ ರೈಲ್ವೆ ಮನವಿ : ರೈಲ್ವೆ ಇಲಾಖೆ ಪ್ರಯಾಣಿಕರು ಪ್ರಯಾಣ ಆರಂಭಿಸುವ ಮೊದಲು ಕಡ್ಡಾಯವಾಗಿ ಮಾನ್ಯ ಟಿಕೆಟ್ ಹೊಂದಿರಬೇಕು ಎಂದು ಮನವಿ ಮಾಡಿದೆ. ಪ್ರಯಾಣಿಕರು ಅಧಿಕೃತ IRCTC ವೇದಿಕೆಯ ಮೂಲಕ, ರೈಲ್ವೆ ಕಾಯ್ದಿರಿಸುವ ಕೌಂಟರ್‌ಗಳ ಮೂಲಕ, ಅಥವಾ ಅಧಿಕೃತ ಮೊಬೈಲ್ ಆ್ಯಪ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.

ಇದನ್ನೂ ಓದಿ: FATF ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಭಾರತೀಯ ವಿವೇಕ್

ಶಿಸ್ತು ಮತ್ತು ಆದಾಯ ಎರಡಕ್ಕೂ ನೆರವು : ರೈಲ್ವೆ ಇಲಾಖೆಯ ಪ್ರಕಾರ, ಟಿಕೆಟ್ ರಹಿತ ಪ್ರಯಾಣವು ರೈಲ್ವೆಗೆ ಆದಾಯ ನಷ್ಟ ಉಂಟುಮಾಡುವುದಲ್ಲದೆ, ವ್ಯವಸ್ಥೆಯ ಮೇಲಿನ ಒತ್ತಡವನ್ನೂ ಹೆಚ್ಚಿಸುತ್ತದೆ. ಹೀಗಾಗಿ ಹೊಸ ನಿಯಮಗಳು ಕೇವಲ ದಂಡ ವಿಧಿಸುವುದಕ್ಕಲ್ಲ, ಬದಲಾಗಿ ನಿಯಮಬದ್ಧ ಪ್ರಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ.

ಭಾರತೀಯ ರೈಲ್ವೆಯ ಈ ಕ್ರಮದಿಂದ ಮುಂದಿನ ದಿನಗಳಲ್ಲಿ ಟಿಕೆಟ್ ರಹಿತ ಪ್ರಯಾಣದ ಪ್ರಕರಣಗಳು ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

FIH NationsCup : ಫೈನಲ್‌ಗೆ ಅರ್ಹತೆ ಪಡೆದ ಟೀಮ್ ಇಂಡಿಯಾ

The post ರೈಲ್ವೆ ಹೊಸ ನಿಯಮ: ಟಿಕೆಟ್ ರಹಿತ ಪ್ರಯಾಣಕ್ಕೆ ಭಾರೀ ದಂಡ appeared first on Samyukta Karnataka.

ಬಾಬಾ ಭಕ್ತರಿಗೆ ಸಿಹಿ ಸುದ್ದಿ: ಪುಣೆ-ಶಿರಡಿ ಹೊಸ ರೈಲು ಸೇವೆ ಆರಂಭ!
ಶಿರಡಿ ಭಕ್ತರಿಗೆ ರೈಲ್ವೆ ಕೊಡುಗೆ: ಪುಣೆ ರೈಲು ಜಾಲಕ್ಕೆ ಹೊಸ ಮಾಸ್ಟರ್ ಪ್ಲಾನ್ – ಪುಣೆ-ಶಿರಡಿ ಹೊಸ ರೈಲು ಸಂಚಾರಕ್ಕೆ ಅಶ್ವಿನಿ ವೈಷ್ಣವ್ ಹಸಿರು ನಿಶಾನೆ

ಪುಣೆ: ಮಹಾರಾಷ್ಟ್ರದ ಪುಣೆ ಮತ್ತು ಶಿರಡಿ ನಡುವಿನ ಹೊಸ ರೈಲು ಸೇವೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಸಿರು ನಿಶಾನೆ ತೋರಿದ್ದು, ಇದೇ ವೇಳೆ ಪುಣೆ ರೈಲ್ವೆ ಜಾಲವನ್ನು ಆಧುನೀಕರಿಸಲು ಮತ್ತು ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಕೈಗೊಳ್ಳಲಾಗುತ್ತಿರುವ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತು ವಿವರಿಸಿದ್ದಾರೆ.

ಪುಣೆ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಣೆ ಪ್ರದೇಶದ ರೈಲ್ವೆ ಮೂಲಸೌಕರ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ ಎಂದು ತಿಳಿಸಿದರು. ನಗರದ ಭವಿಷ್ಯದ ಸಾರಿಗೆ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ ಹಲವು ಕಾಮಗಾರಿಗಳು ಪೂರ್ಣಗೊಂಡಿವೆ ಹಾಗೂ ಇನ್ನೂ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ಇದನ್ನೂ ಓದಿ: ಖರ್ಗೆ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ: RSS ಪರ ಬ್ಯಾಟಿಂಗ್

ಪುಣೆ ನಿಲ್ದಾಣದಲ್ಲಿ 12 ಪ್ಲಾಟ್‌ಫಾರ್ಮ್‌ಗಳು : ಪ್ರಸ್ತುತ ಪುಣೆ ರೈಲ್ವೆ ನಿಲ್ದಾಣವು ಆರು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದು, ಪ್ರಯಾಣಿಕರ ಸಂಖ್ಯೆ ಹಾಗೂ ರೈಲು ಸಂಚಾರದ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಅದನ್ನು 12 ಪ್ಲಾಟ್‌ಫಾರ್ಮ್‌ಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಈ ವಿಸ್ತರಣೆ ಪೂರ್ಣಗೊಂಡ ಬಳಿಕ ಪುಣೆ ನಿಲ್ದಾಣದ ಸಾಮರ್ಥ್ಯ ಗಣನೀಯವಾಗಿ ಹೆಚ್ಚಲಿದ್ದು, ಹೆಚ್ಚಿನ ರೈಲುಗಳನ್ನು ನಿರ್ವಹಿಸಲು ಸಾಧ್ಯವಾಗಲಿದೆ. ನಗರವು ಮಹಾರಾಷ್ಟ್ರದ ಪ್ರಮುಖ ರೈಲ್ವೆ ಜಂಕ್ಷನ್‌ಗಳಲ್ಲಿ ಒಂದಾಗಿರುವುದರಿಂದ ಈ ಯೋಜನೆಗೆ ವಿಶೇಷ ಮಹತ್ವ ನೀಡಲಾಗಿದೆ.

ಇದನ್ನೂ ಓದಿ: ಮಾವು ಬೆಲೆ ಕುಸಿತ: PDPS ಜಾರಿಗೆ ಕೇಂದ್ರಕ್ಕೆ ಕುಮಾರಸ್ವಾಮಿ ಮನವಿ

ಹಲವು ನಿಲ್ದಾಣಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು : ಪುಣೆ ಸುತ್ತಮುತ್ತಲಿನ ಖಡ್ಕಿ, ಘೋರ್ಪಾಡಿ, ಹಡಪ್ಸರ್, ಶಿವಾಜಿನಗರ, ಫರ್ಸುಂಗಿ ಹಾಗೂ ಆಳಂದಿ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗಳ ಭಾಗವಾಗಿ ಪುಣೆ ನಿಲ್ದಾಣದಲ್ಲಿ ನಡೆಯುತ್ತಿದ್ದ ಕೆಲವು ನಿರ್ವಹಣಾ ಚಟುವಟಿಕೆಗಳನ್ನು ಘೋರ್ಪಾಡಿ, ಫರ್ಸುಂಗಿ ಮತ್ತು ಆಳಂದಿ ಭಾಗಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಇದರಿಂದ ಮುಖ್ಯ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ರೈಲು ಸಂಚಾರ ನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಳಂದಿಯಲ್ಲಿ ಮೆಗಾ ಟರ್ಮಿನಲ್ : ರೈಲ್ವೆಯ ಮಹತ್ವದ ಯೋಜನೆಗಳಲ್ಲಿ ಒಂದಾದ ಮೆಗಾ ಟರ್ಮಿನಲ್‌ನ್ನು ಆಳಂದಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಟರ್ಮಿನಲ್ ದಿನಕ್ಕೆ ಸುಮಾರು 35 ರೈಲುಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಪುಣೆ ಪ್ರದೇಶದಲ್ಲಿ ರೈಲುಗಳ ಆರಂಭ, ಅಂತ್ಯ ಹಾಗೂ ನಿರ್ವಹಣಾ ಕಾರ್ಯಗಳನ್ನು ಹೆಚ್ಚು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಇದರಿಂದ ಪ್ರಯಾಣಿಕರ ಅನುಕೂಲತೆ ಮತ್ತು ಕಾರ್ಯಕ್ಷಮತೆ ಎರಡೂ ಹೆಚ್ಚುವ ನಿರೀಕ್ಷೆ ಇದೆ.

ಇದನ್ನೂ ಓದಿ: 232 ತಹಶೀಲ್ದಾರ್ ಗ್ರೇಡ್-2 ಅಧಿಕಾರಿಗಳಿಗೆ ಮುಂಬಡ್ತಿ

20 ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಅವಕಾಶ : ಮಾಸ್ಟರ್ ಪ್ಲಾನ್‌ನಡಿ ಕೈಗೊಳ್ಳಲಾಗುತ್ತಿರುವ ಎಲ್ಲ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಪುಣೆ ರೈಲ್ವೆ ಜಾಲದ ಸಾಮರ್ಥ್ಯ ದ್ವಿಗುಣಗೊಳ್ಳಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು. ಮುಂದಿನ ಸುಮಾರು 1,000 ದಿನಗಳಲ್ಲಿ ಪ್ರಮುಖ ಕಾಮಗಾರಿಗಳು ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಬಳಿಕ ಪುಣೆ ಪ್ರದೇಶದಲ್ಲಿ 20 ಹೆಚ್ಚುವರಿ ರೈಲುಗಳನ್ನು ಸಂಚರಿಸಲು ಅವಕಾಶ ಸಿಗಲಿದೆ. ಇದರಿಂದ ಮಹಾರಾಷ್ಟ್ರದ ವಿವಿಧ ಭಾಗಗಳು ಹಾಗೂ ದೇಶದ ಇತರ ಪ್ರಮುಖ ನಗರಗಳೊಂದಿಗೆ ಸಂಪರ್ಕ ಮತ್ತಷ್ಟು ಸುಧಾರಿಸಲಿದೆ.

ಮಹಾರಾಷ್ಟ್ರದ ಎಲ್ಲ ಭಾಗಗಳಿಗೆ ಸಂಪರ್ಕ : ಪುಣೆಯ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ರೈಲ್ವೆ ಇಲಾಖೆ ಆದ್ಯತೆ ನೀಡುತ್ತಿದೆ ಎಂದು ಸಚಿವರು ತಿಳಿಸಿದರು. ಮರಾಠವಾಡ, ಕೊಂಕಣ, ವಿದರ್ಭ, ಪಶ್ಚಿಮ ಮಹಾರಾಷ್ಟ್ರ ಹಾಗೂ ಉತ್ತರ ಮಹಾರಾಷ್ಟ್ರ ಭಾಗಗಳನ್ನು ಸಂಪರ್ಕಿಸುವ ಹೊಸ ರೈಲು ಸೇವೆಗಳನ್ನು ಹಂತ ಹಂತವಾಗಿ ಆರಂಭಿಸುವ ಯೋಜನೆ ಇದೆ. ಜೊತೆಗೆ ದೇಶದ ವಿವಿಧ ಭಾಗಗಳಿಂದ ಪುಣೆಗೆ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಹೊಸ ರೈಲುಗಳನ್ನು ಪರಿಚಯಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ನೀಟ್ ಪೇಪರ್ ಲೀಕ್ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಚಾಲನೆ

ಪುಣೆ–ಶಿರಡಿ ಹೊಸ ರೈಲು ಸೇವೆಯ ಆರಂಭ ಮತ್ತು ಮೂಲಸೌಕರ್ಯ ವಿಸ್ತರಣಾ ಯೋಜನೆಗಳು ಮಹಾರಾಷ್ಟ್ರದ ರೈಲ್ವೆ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲಾಗಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

G7 ಸಭೆಯಲ್ಲಿ ಮೆಲೋಡಿ ಜೋಡಿ: ಮೋದಿ–ಮೆಲೋನಿ ಭೇಟಿಯ Video ವೈರಲ್

The post ಬಾಬಾ ಭಕ್ತರಿಗೆ ಸಿಹಿ ಸುದ್ದಿ: ಪುಣೆ-ಶಿರಡಿ ಹೊಸ ರೈಲು ಸೇವೆ ಆರಂಭ! appeared first on Samyukta Karnataka.

ಮಹಿಳಾ ಸುರಕ್ಷತೆಗೆ ರೈಲ್ವೆ ನಿಲ್ದಾಣದಲ್ಲಿ ‘ಪಿಂಕ್ ಬಬಲ್’ ಸೌಲಭ್ಯ
ಕಾರವಾರ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರಿಗಾಗಿ ‘ಪಿಂಕ್ ಬಬಲ್’ ಆಸನ ವ್ಯವಸ್ಥೆ ಉದ್ಘಾಟನೆ; ಮಡಗಾಂವ್-ಕಾರವಾರ ರೈಲು ಸೇವೆ ಖಾಯಂ

ದಾಂಡೇಲಿ (ಉತ್ತರ ಕನ್ನಡ): ಮಹಿಳಾ ಪ್ರಯಾಣಿಕರ ಸುರಕ್ಷತೆ, ಗೌಪ್ಯತೆ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಕಾರವಾರ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ‘ಪಿಂಕ್ ಬಬಲ್’ (Pink Bubble) ವಿಶ್ರಾಂತಿ ಆಸನ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಸುಮಾರು ₹1 ಲಕ್ಷ ವೆಚ್ಚದಲ್ಲಿ ಕಾರವಾರ ರೋಟರಿ ಕ್ಲಬ್‌ನ ಸಹಯೋಗದೊಂದಿಗೆ ನಿರ್ಮಿಸಲಾದ ಈ ಸೌಲಭ್ಯವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ರೈಲುಗಾಗಿ ಕಾಯುವ ಮಹಿಳಾ ಪ್ರಯಾಣಿಕರು ಸುರಕ್ಷಿತ ಹಾಗೂ ಸುಸಜ್ಜಿತ ವಾತಾವರಣದಲ್ಲಿ ನಿರಾಳವಾಗಿ ಸಮಯ ಕಳೆಯಲು ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ:  ಗಂಗಾವಳಿ ನದಿಯ ಮಣ್ಣಿನ ದಿಬ್ಬ ತೆರವಿಗೆ ಸತೀಶ್ ಸೈಲ್ ಚಾಲನೆ

ಮಹಿಳಾ ಸುರಕ್ಷತೆಗೆ CC ಕ್ಯಾಮೆರಾ : ‘ಪಿಂಕ್ ಬಬಲ್’ ಆಸನ ವ್ಯವಸ್ಥೆಯಲ್ಲಿ ಮಹಿಳೆಯರ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗಿದ್ದು, ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಉಂಟುಮಾಡುವವರ ವಿರುದ್ಧ ರೈಲ್ವೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾಗೇರಿ ತಿಳಿಸಿದರು.

ಮಹಿಳಾ ಸ್ನೇಹಿ ರೈಲ್ವೆ ನಿಲ್ದಾಣಗಳ ನಿರ್ಮಾಣದತ್ತ ಇದು ಮಹತ್ವದ ಹೆಜ್ಜೆಯಾಗಿದ್ದು, ಪ್ರಯಾಣದ ಅನುಭವವನ್ನು ಇನ್ನಷ್ಟು ಸುಗಮಗೊಳಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

ಮಡಗಾಂವ್-ಕಾರವಾರ ರೈಲು ಸೇವೆ ಖಾಯಂ : ಕಾರವಾರ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಗಾಂವ್-ಕಾರವಾರ ನಡುವೆ ಸಂಚರಿಸುತ್ತಿದ್ದ ತಾತ್ಕಾಲಿಕ ರೈಲು ಸೇವೆಯನ್ನು ಖಾಯಂಗೊಳಿಸಿರುವುದನ್ನು ಸಂಭ್ರಮಿಸಲಾಯಿತು. ಕೇಂದ್ರ ರೈಲ್ವೆ ಇಲಾಖೆಯ ತಾತ್ಕಾಲಿಕ ರೈಲುಗಳ ಸೇವೆಯನ್ನು ಖಾಯಂಗೊಳಿಸುವ ನಿರ್ಧಾರದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ:  ಮೇಕೆದಾಟು ಕಿಚ್ಚು: ವಿಜಯ್ ಆಗಮನಕ್ಕೂ ಮುನ್ನ ಕರವೇ ಕಾರ್ಯಕರ್ತರ ಬಂಧನ

ಮಡಗಾಂವ್‌ನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಸೇವೆಗೆ ಚಾಲನೆ ನೀಡಿದ್ದು, ಇದು ಉತ್ತರ ಕನ್ನಡ ಹಾಗೂ ಗೋವಾ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಿದೆ ಎಂದು ಕಾಗೇರಿ ಹೇಳಿದರು.

ಈ ರೈಲು ಸೇವೆಯಿಂದ ಉದ್ಯೋಗಿಗಳು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವೆ ಪಡೆಯುವವರು ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ:  AI ರೋಬೋಟ್‌ಗಳಿಗೆ ತರಬೇತಿಯಲ್ಲಿ ‘ಗುರು’ಗಳಾದ ಭಾರತೀಯರು!

ಕಾರವಾರ ರೈಲ್ವೆ ನಿಲ್ದಾಣಕ್ಕೆ ಮತ್ತಷ್ಟು ಸೌಲಭ್ಯ : ಕೊಂಕಣ ರೈಲ್ವೆಯ ವತಿಯಿಂದ ಕಾರವಾರ ರೈಲ್ವೆ ನಿಲ್ದಾಣದಲ್ಲಿರುವ ಕಾಯ್ದಿರಿಸಿದ ವಿಶ್ರಾಂತಿ ಕೊಠಡಿಯನ್ನು ಮೇಲ್ದರ್ಜೆಗೆ ಏರಿಸಿ ಏರ್‌ಕಂಡೀಷನ್ (ಎಸಿ) ಸೌಲಭ್ಯ ಹೊಂದಿರುವ ಕೊಠಡಿಯಾಗಿ ಅಭಿವೃದ್ಧಿಪಡಿಸಲಾಗಿದೆ.

ಇದಲ್ಲದೆ, ಹಿರಿಯ ನಾಗರಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ತೆರಳಲು ಲಿಫ್ಟ್ ವ್ಯವಸ್ಥೆ ಕಲ್ಪಿಸುವ ಯೋಜನೆಯೂ ರೂಪಿಸಲಾಗಿದೆ. ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಮಾರ್ಗದರ್ಶಕ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯವನ್ನೂ ಜಿಲ್ಲಾಡಳಿತ ಹಾಗೂ ಕೊಂಕಣ ರೈಲ್ವೆ ಸಹಯೋಗದಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:  ಬೃಹತ್ Diesel ಖರೀದಿಗೆ ಬ್ರೇಕ್: ಕೇಂದ್ರದಿಂದ ಮಹತ್ವದ ಆದೇಶ

ಉತ್ತರ ಕನ್ನಡದಲ್ಲಿ ರೈಲ್ವೆ ವಿಸ್ತರಣೆಗೆ ಒತ್ತು : ಸಂಸದರಾದ ಬಳಿಕ ದಾಂಡೇಲಿ-ಆಳ್ನಾವರ ರೈಲು ಸೇವೆಗೆ ಚಾಲನೆ ನೀಡಿರುವುದನ್ನು ಸ್ಮರಿಸಿದ ಕಾಗೇರಿ, ತಾಳಗುಪ್ಪ-ಸಿದ್ದಾಪುರ-ಶಿರಸಿ-ಕುಮಟಾ ಹಾಗೂ ಮುಂಡಗೋಡ-ತಡಸ ಮಾರ್ಗವಾಗಿ ಹುಬ್ಬಳ್ಳಿ ಸಂಪರ್ಕಿಸುವ ರೈಲು ಮಾರ್ಗದ ಸರ್ವೇ ಪೂರ್ಣಗೊಂಡಿದೆ ಎಂದು ಹೇಳಿದರು.

ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ಖಂಡಿತವಾಗಿ ಸಾಕಾರಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ತಾಳಗುಪ್ಪ-ಹೊನ್ನಾವರ ರೈಲು ಮಾರ್ಗದ ಸರ್ವೇ ಕಾರ್ಯವೂ ನಡೆದಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:  ಮರಳಿನಲ್ಲಿ ಮೂಡಿದ ಭಾರತದ ಹೆಮ್ಮೆ: ಪರಿಸರ ಸಂದೇಶ ಹೊತ್ತ ಶಿಲ್ಪಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ

ಕೊಂಕಣ ರೈಲ್ವೆಗೆ ₹7 ಸಾವಿರ ಕೋಟಿ ಅನುದಾನ ತರಲು ಪ್ರಯತ್ನ : ಕೊಂಕಣ ರೈಲ್ವೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಸುಮಾರು ₹7,000 ಕೋಟಿ ಅನುದಾನ ಪಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಕಾಗೇರಿ ತಿಳಿಸಿದರು. ಈ ಅನುದಾನ ದೊರೆತರೆ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳ ನಿರ್ಮಾಣ ಹಾಗೂ ವಿವಿಧ ಆಧುನಿಕ ಸೌಲಭ್ಯಗಳ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಹೇಳಿದರು.

ಕುಮಟಾ ಮತ್ತು ಗೋಕರ್ಣ ರೈಲ್ವೆ ನಿಲ್ದಾಣಗಳಲ್ಲಿ ಎರಡನೇ ಪ್ಲಾಟ್‌ಫಾರ್ಮ್ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಮುರುಡೇಶ್ವರ ಹಾಗೂ ಭಟ್ಕಳ ರೈಲ್ವೆ ನಿಲ್ದಾಣಗಳಲ್ಲೂ ಮೂಲಭೂತ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೊಂಕಣ ರೈಲ್ವೆಯ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತದ ಪ್ರತಿನಿಧಿಗಳು, ಮಾಜಿ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಭಾರತದ ಶೂಟಿಂಗ್ ಕ್ರಾಂತಿಗೆ ಮುನ್ನುಡಿ ಬರೆದ ಜಸ್ಪಾಲ್ ರಾಣಾ ಇನ್ನಿಲ್ಲ

The post ಮಹಿಳಾ ಸುರಕ್ಷತೆಗೆ ರೈಲ್ವೆ ನಿಲ್ದಾಣದಲ್ಲಿ  ‘ಪಿಂಕ್ ಬಬಲ್’ ಸೌಲಭ್ಯ appeared first on Samyukta Karnataka.

ವಿದ್ಯಾರ್ಥಿನಿ ದೂರಿಗೆ ಸ್ಪಂದಿಸಿದ ರೈಲ್ವೆ ಸಚಿವರು: ಜುಲೈ 15ರೊಳಗೆ ಹೊಸ IRCTC ವೆಬ್‌ಸೈಟ್
ರೈಲು ಟಿಕೆಟ್ ಬುಕ್ಕಿಂಗ್ ಮತ್ತಷ್ಟು ಸುಲಭ: 30 ದಿನಗಳಲ್ಲಿ ಹೊಸ IRCTC ವೆಬ್‌ಸೈಟ್‌ ಪೋರ್ಟಲ್ ಆರಂಭಿಸುವ ಭರವಸೆ

ಜೈಪುರ: ರೈಲು ಟಿಕೆಟ್ ಬುಕ್ಕಿಂಗ್ ವೇಳೆ ಪ್ರಯಾಣಿಕರು, ವಿಶೇಷವಾಗಿ ವಿದ್ಯಾರ್ಥಿಗಳು ಎದುರಿಸುತ್ತಿರುವ ತಾಂತ್ರಿಕ ತೊಂದರೆಗಳಿಗೆ ಶೀಘ್ರದಲ್ಲೇ ಪರಿಹಾರ ಸಿಗುವ ಸಾಧ್ಯತೆ ಇದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಪ್ರಸ್ತುತ IRCTC ವೆಬ್‌ಸೈಟ್‌ನಲ್ಲಿರುವ ಸಮಸ್ಯೆಗಳನ್ನು ನಿವಾರಿಸಿ, ಹೆಚ್ಚು ಬಳಕೆದಾರ ಸ್ನೇಹಿ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ಹೊಸ IRCTC ವೆಬ್‌ಸೈಟ್ ಅನ್ನು 2026ರ ಜುಲೈ 15ರೊಳಗೆ ಆರಂಭಿಸಲಾಗುವುದು ಎಂದು ಘೋಷಿಸಿದ್ದಾರೆ.

ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಕೆಲವು ವಿದ್ಯಾರ್ಥಿಗಳು ರೈಲ್ವೆ ಸಚಿವರನ್ನು ಭೇಟಿ ಮಾಡಿ, IRCTC ವೆಬ್‌ಸೈಟ್‌ನಲ್ಲಿ ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ದೂರು ಸಲ್ಲಿಸಿದರು. ವಿಶೇಷವಾಗಿ ಕ್ಯಾಪ್ಚಾ ಭರ್ತಿ ಮಾಡುವ ಪ್ರಕ್ರಿಯೆ ಹಾಗೂ ವೆಬ್‌ಸೈಟ್ ಕಾರ್ಯಕ್ಷಮತೆ ಕುರಿತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:  ರಾಜ್ಯಸಭೆ ಚುನಾವಣೆ: ಕಾಂಗ್ರೆಸ್‌ಗೆ ಮೂರು, ಬಿಜೆಪಿಗೆ ಒಂದು ಸ್ಥಾನ

ವಿದ್ಯಾರ್ಥಿನಿಯ ದೂರಿಗೆ ತಕ್ಷಣ ಸ್ಪಂದನೆ : ಕಾರ್ಯಕ್ರಮದ ವೇಳೆ ಒಬ್ಬ ವಿದ್ಯಾರ್ಥಿನಿ ನೇರವಾಗಿ ಸಚಿವರ ಗಮನಕ್ಕೆ ಸಮಸ್ಯೆಯನ್ನು ತಂದಳು. IRCTC ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವಾಗ ಕ್ಯಾಪ್ಚಾ ಪ್ರಕ್ರಿಯೆ ಕಿರಿಕಿರಿ ಉಂಟುಮಾಡುತ್ತಿದೆ ಮತ್ತು ಹಲವು ಬಾರಿ ಸಮಯ ವ್ಯರ್ಥವಾಗುತ್ತಿದೆ ಎಂದು ತಿಳಿಸಿದಳು.

ಈ ಬಗ್ಗೆ ತಕ್ಷಣವೇ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದ ಅಶ್ವಿನಿ ವೈಷ್ಣವ್, “ವಿದ್ಯಾರ್ಥಿಗಳು ಹೊಸ IRCTC ವೆಬ್‌ಸೈಟ್‌ಗೆ ಬೇಡಿಕೆ ಇಡುತ್ತಿದ್ದಾರೆ. ನಾವು ಅದನ್ನು 30 ದಿನಗಳಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವೇ?” ಎಂದು ಪ್ರಶ್ನಿಸಿದರು. ಬಳಿಕ ಜುಲೈ 15ರೊಳಗೆ ಹೊಸ ಮತ್ತು ಸುಧಾರಿತ ವೆಬ್‌ಸೈಟ್ ಅನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ:  RTE ವಿಸ್ತರಣೆ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಹೆಚ್ಚು ವೇಗ, ಸುಲಭ ಬಳಕೆ ಮತ್ತು ಉತ್ತಮ ಅನುಭವ: ಹೊಸ IRCTC ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವುದು, ಸರ್ವರ್ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ಬಳಕೆದಾರರ ಅನುಭವವನ್ನು ಉತ್ತಮಗೊಳಿಸುವುದಕ್ಕೆ ಒತ್ತು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ವಿಶೇಷವಾಗಿ ತತ್‌ಕಾಲ್ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಎದುರಾಗುವ ನಿಧಾನಗತಿ ಮತ್ತು ತಾಂತ್ರಿಕ ದೋಷಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ವ್ಯವಸ್ಥೆ ರೂಪಿಸಲಾಗುತ್ತಿದೆ.

ರಾಜಸ್ಥಾನಕ್ಕೆ ದಾಖಲೆ ಮಟ್ಟದ ರೈಲ್ವೆ ಹೂಡಿಕೆ : ಜೈಪುರದಲ್ಲಿ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಜಸ್ಥಾನ ರೈಲ್ವೆ ಕ್ಷೇತ್ರದಲ್ಲಿ ಅಭೂತಪೂರ್ವ ಅಭಿವೃದ್ಧಿಯನ್ನು ಕಂಡಿದೆ ಎಂದು ಹೇಳಿದರು. 2014ರ ಮೊದಲು ರಾಜಸ್ಥಾನಕ್ಕೆ ವಾರ್ಷಿಕ ರೈಲ್ವೆ ಬಜೆಟ್ ಸುಮಾರು ₹600 ಕೋಟಿ ಮಾತ್ರ ದೊರೆಯುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಹೂಡಿಕೆ ಗಣನೀಯವಾಗಿ ಏರಿಕೆಯಾಗಿದ್ದು, ಪ್ರಸ್ತುತ ವರ್ಷದಲ್ಲಿ ರಾಜ್ಯಕ್ಕೆ ₹10,228 ಕೋಟಿ ಅನುದಾನ ಮಂಜೂರಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:  ‘ಗೃಹಿಣಿ’ ಪದಕ್ಕೆ ಹೊಸ ಅರ್ಥ ನೀಡಿದ ಸುಪ್ರೀಂ ಕೋರ್ಟ್

ರೈಲು ನಿಲ್ದಾಣಗಳ ಆಧುನೀಕರಣಕ್ಕೆ ವೇಗ : ರಾಜಸ್ಥಾನದಲ್ಲಿ ಸುಮಾರು 450 ರೈಲು ನಿಲ್ದಾಣಗಳಿದ್ದು, ಅವುಗಳಲ್ಲಿ 200ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಪ್ಲಾಟ್‌ಫಾರ್ಮ್‌ಗಳ ಎತ್ತರ ಮತ್ತು ಉದ್ದ ಹೆಚ್ಚಿಸುವುದು, ಸಂಪೂರ್ಣ ಪ್ರಯಾಣಿಕರ ಶೆಡ್‌ಗಳ ನಿರ್ಮಾಣ ಹಾಗೂ ಇತರ ಆಧುನಿಕ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಸಚಿವರು ಹೇಳಿದರು.

ಇದೇ ವೇಳೆ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ರಾಜ್ಯದ ಸುಮಾರು 85 ರೈಲು ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಪಡಿಸಲಾಗುತ್ತಿದೆ. ಜೈಪುರ ರೈಲು ನಿಲ್ದಾಣವನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸುವ ಕಾಮಗಾರಿ ಕೂಡ ವೇಗವಾಗಿ ಸಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:  ವಿವಿಯಲ್ಲಿ ಮತ್ತೊಂದು ಹಗರಣದ ಆರೋಪ; ‘ಹಣ ಕೊಟ್ಟರೆ ಪಾಸ್’ ದಂಧೆ ಬಯಲು ಎಂದ ABVP

ಪ್ರಯಾಣಿಕರಿಗೆ ಏನು ಲಾಭ? : ಹೊಸ IRCTC ವೆಬ್‌ಸೈಟ್ ಜಾರಿಗೆ ಬಂದರೆ ರೈಲು ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಮತ್ತಷ್ಟು ಸುಲಭವಾಗುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಬಳಸುವ ಈ ಪೋರ್ಟಲ್‌ನಲ್ಲಿ ವೇಗ, ಸುರಕ್ಷತೆ ಹಾಗೂ ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಭಾರತೀಯ ರೈಲ್ವೆಯ ಡಿಜಿಟಲ್ ಸೇವೆಗಳು ಮತ್ತಷ್ಟು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ.

ಅಂಕಣ ಬರಹ: ಹಿರಿಯರ ಕ್ಯಾತೆ ಸಾಕು, ಹೊಸಬರಿಗೆ ದಾರಿಬಿಡಿ

The post ವಿದ್ಯಾರ್ಥಿನಿ ದೂರಿಗೆ ಸ್ಪಂದಿಸಿದ ರೈಲ್ವೆ ಸಚಿವರು: ಜುಲೈ 15ರೊಳಗೆ ಹೊಸ IRCTC ವೆಬ್‌ಸೈಟ್ appeared first on Samyukta Karnataka.

ಕಾರವಾರ-ಮಡಗಾಂವ್ ವಿಶೇಷ ರೈಲು ಇನ್ನು ಖಾಯಂ ಸೇವೆ
ಪ್ರವಾಸೋದ್ಯಮ ಮತ್ತು ಉದ್ಯೋಗಿಗಳಿಗೆ ಅನುಕೂಲ; ಕಾರವಾರ-ಮಡಗಾಂವ್ ರೈಲುಗೆ ಶಾಶ್ವತ ಮಾನ್ಯತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜನತೆ ಹಾಗೂ ಗೋವಾ ರಾಜ್ಯದ ನಡುವೆ ಪ್ರತಿದಿನ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಸಂತಸದ ಸುದ್ದಿ ದೊರೆತಿದೆ. ಕಾರವಾರ ಮತ್ತು ಮಡಗಾಂವ್ ನಡುವೆ ವಿಶೇಷ ರೈಲಾಗಿ ಸಂಚರಿಸುತ್ತಿದ್ದ ರೈಲು ಸೇವೆಯನ್ನು ಭಾರತೀಯ ರೈಲ್ವೆ ಮಂಡಳಿ ಇನ್ನುಮುಂದೆ ಖಾಯಂ ರೈಲು ಸೇವೆಯಾಗಿ ಪರಿವರ್ತಿಸಿ ಅಧಿಕೃತ ಆದೇಶ ಹೊರಡಿಸಿದೆ.

ಬಹುಕಾಲದಿಂದ ಈ ಭಾಗದ ಸಾರ್ವಜನಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಸ್ಥರು ಹಾಗೂ ಪ್ರವಾಸಿಗರು ಈ ರೈಲನ್ನು ಶಾಶ್ವತಗೊಳಿಸುವಂತೆ ಆಗ್ರಹಿಸುತ್ತಿದ್ದರು. ಈಗ ಆ ಬೇಡಿಕೆಗೆ ಸ್ಪಂದಿಸಿರುವ ರೈಲ್ವೆ ಮಂಡಳಿ, ವಿಶೇಷ ರೈಲು ಸೇವೆಯನ್ನು ನಿಯಮಿತ ಎಕ್ಸ್‌ಪ್ರೆಸ್ ರೈಲಾಗಿ ಪರಿವರ್ತಿಸಿದೆ.

ಈ ಹಿಂದೆ 01595/01596 ಸಂಖ್ಯೆಯ ವಿಶೇಷ ರೈಲಾಗಿ ಕಾರ್ಯನಿರ್ವಹಿಸುತ್ತಿದ್ದ ಸೇವೆಯನ್ನು ಇನ್ನು ಮುಂದೆ 10109/10110 ಮಡಗಾಂವ್–ಕಾರವಾರ–ಮಡಗಾಂವ್ ಎಕ್ಸ್‌ಪ್ರೆಸ್ ರೈಲಾಗಿ ಪ್ರತಿದಿನ ಓಡಿಸಲಾಗುತ್ತದೆ. ಈ ಕ್ರಮದಿಂದ ರೈಲು ಸೇವೆಯ ನಿರಂತರತೆ ಖಾತ್ರಿಯಾಗುವುದರ ಜೊತೆಗೆ ಪ್ರಯಾಣಿಕರಲ್ಲಿ ಉಂಟಾಗಿದ್ದ ಅನಿಶ್ಚಿತತೆಯೂ ನಿವಾರಣೆಯಾಗಲಿದೆ.

ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ : ಕಾರವಾರ ಮತ್ತು ಮಡಗಾಂವ್ ನಡುವೆ ಪ್ರತಿದಿನ ಉದ್ಯೋಗ, ಶಿಕ್ಷಣ, ಆರೋಗ್ಯ ಹಾಗೂ ವ್ಯಾಪಾರ ಉದ್ದೇಶಗಳಿಗಾಗಿ ಸಾವಿರಾರು ಜನರು ಸಂಚರಿಸುತ್ತಾರೆ. ವಿಶೇಷವಾಗಿ ಗಡಿ ಭಾಗದ ಜನರಿಗೆ ಈ ರೈಲು ಅತ್ಯಂತ ಅನುಕೂಲಕರ ಸಾರಿಗೆ ವ್ಯವಸ್ಥೆಯಾಗಿದೆ.

ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ, ಈ ರೈಲು ಪ್ರತಿದಿನ ಸಂಚರಿಸಲಿದ್ದು, ಮಧ್ಯದಲ್ಲಿ ಕಾಣಕೋಣ ನಿಲ್ದಾಣದಲ್ಲಿ ವಾಣಿಜ್ಯ ನಿಲುಗಡೆ ಹೊಂದಿರಲಿದೆ. ಇದರಿಂದ ಗೋವಾದ ದಕ್ಷಿಣ ಭಾಗದ ಪ್ರಯಾಣಿಕರಿಗೂ ಹೆಚ್ಚಿನ ಪ್ರಯೋಜನವಾಗಲಿದೆ.

ರೈಲು ವೇಳಾಪಟ್ಟಿ : ರೈಲು ಸಂಖ್ಯೆ 10110 – ಕಾರವಾರ-ಮಡಗಾಂವ್ ಎಕ್ಸ್‌ಪ್ರೆಸ್, ಕಾರವಾರದಿಂದ ಬೆಳಗ್ಗೆ 8:30 ಗಂಟೆಗೆ ಹೊರಡಲಿದೆ. ಹಾಗೂ ಮಡಗಾಂವ್‌ಗೆ ಅದೇ ದಿನ ಬೆಳಗ್ಗೆ 9:45 ಗಂಟೆಗೆ ತಲುಪಲಿದೆ. ರೈಲಿನ ಹಿಂತಿರುಗುವ ಸೇವೆಯ ವೇಳಾಪಟ್ಟಿಯನ್ನು ಸಹ ರೈಲ್ವೆ ಇಲಾಖೆ ಪ್ರಕಟಿಸಿದ್ದು, ಪ್ರತಿದಿನದ ಸಂಚಾರದಿಂದ ಎರಡು ನಗರಗಳ ನಡುವಿನ ಸಂಪರ್ಕ ಮತ್ತಷ್ಟು ಬಲವಾಗಲಿದೆ.

ರೈಲು ಸಂಖ್ಯೆ 10109 (ಮಡಗಾಂವ್ ಕಾರವಾರ ಎಕ್ಸ್‌ಪ್ರೆಸ್): ಪ್ರತಿದಿನ ಸಂಜೆ 04:30 ಕ್ಕೆ ಮಡಗಾಂವ್‌ನಿಂದ ಹೊರಟು, ಸಂಜೆ 05:45 ಕ್ಕೆ ಕಾರವಾರವನ್ನು ತಲುಪಲಿದೆ.

ಆರ್ಥಿಕ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ : ಕಾರವಾರ ಹಾಗೂ ಗೋವಾ ನಡುವಿನ ಸಂಪರ್ಕ ಬಲಗೊಳ್ಳುವುದರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೂ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಕಾರವಾರದ ಕಡಲತೀರಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಈ ರೈಲು ಅನುಕೂಲವಾಗಲಿದೆ. ಅದೇ ರೀತಿ ಗೋವಾಕ್ಕೆ ತೆರಳುವ ಸ್ಥಳೀಯ ಪ್ರಯಾಣಿಕರಿಗೂ ಕಡಿಮೆ ವೆಚ್ಚದಲ್ಲಿ ಸುರಕ್ಷಿತ ಪ್ರಯಾಣದ ಅವಕಾಶ ದೊರೆಯಲಿದೆ.

ಸ್ಥಳೀಯ ಸಂಘಟನೆಗಳು ಮತ್ತು ಸಾರ್ವಜನಿಕರು ರೈಲು ಸೇವೆಯನ್ನು ಖಾಯಂಗೊಳಿಸಿರುವ ರೈಲ್ವೆ ಮಂಡಳಿ ಹಾಗೂ ಈ ಕುರಿತು ಸತತವಾಗಿ ಪ್ರಯತ್ನಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅತಿ ಎತ್ತರದ ಡೆನಾಲಿ ಶಿಖರ ಏರಿದ ಭಾರತೀಯ ಪರ್ವತಾರೋಹಿ ಕವಿತಾ

The post ಕಾರವಾರ-ಮಡಗಾಂವ್ ವಿಶೇಷ ರೈಲು ಇನ್ನು ಖಾಯಂ ಸೇವೆ appeared first on Samyukta Karnataka.