#India Archives - Samyukta Karnataka

ಭಾರತಕ್ಕೆ ರಷ್ಯಾದ Su-57 ಯುದ್ಧ ವಿಮಾನ ಆಫರ್: ತಂತ್ರಜ್ಞಾನ ಹಂಚಿಕೆ, ಜಂಟಿ ಉತ್ಪಾದನೆಗೆ ಪುಟಿನ್ ಗ್ರೀನ್ ಸಿಗ್ನಲ್!
ಮಾಸ್ಕೋ/ಹೊಸದಿಲ್ಲಿ: ಜಾಗತಿಕ ರಕ್ಷಣಾ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತದ ವಾಯುಪಡೆಯ ಬಲವನ್ನು ಹೆಚ್ಚಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭರ್ಜರಿ ಆಫರ್ ನೀಡಿದ್ದಾರೆ. ವಿಶ್ವದ ಅತ್ಯಾಧುನಿಕ 5ನೇ ತಲೆಮಾರಿನ ‘Su-57 ಸ್ಟೆಲ್ತ್ ಫೈಟರ್ ಜೆಟ್’ ಮಾರಾಟ, ತಂತ್ರಜ್ಞಾನ ಹಂಚಿಕೆ ಹಾಗೂ ಭಾರತದಲ್ಲೇ ಇದನ್ನು ಜಂಟಿಯಾಗಿ ಉತ್ಪಾದಿಸುವ ಯೋಜನೆಗೆ ಯಾವುದೇ ಷರತ್ತುಗಳಿಲ್ಲದೆ ರಷ್ಯಾ ಒಪ್ಪಿಗೆ ಸೂಚಿಸಿದೆ.

ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳ ಮುಖ್ಯಸ್ಥರೊಂದಿಗಿನ ಸಂವಾದದಲ್ಲಿ ಭಾರತೀಯ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪುಟಿನ್, “ನಾವು ಈ ಹಿಂದೆಯೇ 5ನೇ ತಲೆಮಾರಿನ ಈ ಅತ್ಯಾಧುನಿಕ ಯುದ್ಧ ವಿಮಾನವನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಭಾರತಕ್ಕೆ ಆಫರ್ ನೀಡಿದ್ದೆವು. ಆಗ ಭಾರತ ಕಾದು ನೋಡುವ ನಿರ್ಧಾರ ಮಾಡಿತ್ತು. ಆದ್ರೆ ಈ ಒಪ್ಪಂದವು ಭಾರತದ ರಕ್ಷಣಾ ಕಾರ್ಯತಂತ್ರಗಳನ್ನು ಅಮೂಲಾಗ್ರವಾಗಿ ಬದಲಾಯಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏನಿದು FGFA ಪ್ರಾಜೆಕ್ಟ್ ಇತಿಹಾಸ?: ಭಾರತ ಮತ್ತು ರಷ್ಯಾ ನಡುವಿನ ಈ ಜಂಟಿ ಕನಸಿಗೆ ಒಂದು ದಶಕದ ಇತಿಹಾಸವಿದೆ. 2007 ರಲ್ಲಿ ಉಭಯ ದೇಶಗಳು ಜಂಟಿಯಾಗಿ ‘ಐದನೇ ತಲೆಮಾರಿನ ಫೈಟರ್ ಏರ್‌ಕ್ರಾಫ್ಟ್’ (FGFA) ಯೋಜನೆಯನ್ನು ಆರಂಭಿಸಿದ್ದವು. ಆದ್ರೆ ತಂತ್ರಜ್ಞಾನ ಹಸ್ತಾಂತರ, ಒಟ್ಟು ವೆಚ್ಚ ಮತ್ತು ಕಾರ್ಯಕ್ಷಮತೆಯ ವಿಚಾರದಲ್ಲಿ ಒಮ್ಮತ ಮೂಡದ ಕಾರಣ, 2018 ರಲ್ಲಿ ಭಾರತ ಈ ಯೋಜನೆಯಿಂದ ಅಧಿಕೃತವಾಗಿ ಹೊರಬಂದಿತ್ತು. ಆ ಬಳಿಕ ರಷ್ಯಾ ಏಕಾಂಗಿಯಾಗಿ Su-57 ಜೆಟ್‌ಗಳನ್ನು ಉತ್ಪಾದಿಸಿದರೂ, ಜಂಟಿ ಉತ್ಪಾದನೆಗಾಗಿ ಭಾರತಕ್ಕೆ ನಿರಂತರವಾಗಿ ಆಫರ್ ನೀಡುತ್ತಲೇ ಬಂದಿದೆ.

ರಕ್ಷಣಾ ವಲಯದಲ್ಲಿ ಮತ್ತಷ್ಟು ಸಹಕಾರ: ಕೇವಲ Su-57 ಮಾತ್ರವಲ್ಲದೆ, ಬ್ರಹ್ಮೋಸ್ ಕ್ಷಿಪಣಿ ಕಾರ್ಯಕ್ರಮ, ವಿವಿಧ ಫೈಟರ್ ಏರ್‌ಕ್ರಾಫ್ಟ್‌ಗಳು ಹಾಗೂ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳ ತಂತ್ರಜ್ಞಾನದಲ್ಲೂ ನವದೆಹಲಿಯೊಂದಿಗೆ ಕೈಜೋಡಿಸಲು ಮಾಸ್ಕೋ ಸಿದ್ಧವಿದೆ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ. ಉಭಯ ದೇಶಗಳ ನಡುವಿನ ಈ ದಶಕಗಳಷ್ಟು ಹಳೆಯದಾದ ರಾಜತಾಂತ್ರಿಕ ಮತ್ತು ರಕ್ಷಣಾ ಬಾಂಧವ್ಯವು ಜಾಗತಿಕ ಮಟ್ಟದಲ್ಲಿ ಭಾರಿ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

The post ಭಾರತಕ್ಕೆ ರಷ್ಯಾದ Su-57 ಯುದ್ಧ ವಿಮಾನ ಆಫರ್: ತಂತ್ರಜ್ಞಾನ ಹಂಚಿಕೆ, ಜಂಟಿ ಉತ್ಪಾದನೆಗೆ ಪುಟಿನ್ ಗ್ರೀನ್ ಸಿಗ್ನಲ್! appeared first on Samyukta Karnataka.

ಪಹಲ್ಗಾಮ್ ಕರಾಳ ದಿನಕ್ಕೆ ಒಂದು ವರ್ಷ: ಸಂತ್ರಸ್ತ ಕುಟುಂಬಗಳ ಪರ ನಿಂತ ಪ್ರಧಾನಿ ಮೋದಿ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಇಂದು ಒಂದು ವರ್ಷ ಸಂದಿದೆ. ಈ ಕಪ್ಪು ದಿನದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದಾಳಿಯಲ್ಲಿ ಬಲಿಯಾದ ಮುಗ್ಧ ಜೀವಗಳಿಗೆ ಮತ್ತು ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಹೇಯ ಕೃತ್ಯದಲ್ಲಿ ನಾವು ಕಳೆದುಕೊಂಡ ಮುಗ್ಧ ಜೀವಗಳನ್ನು ಇಂದು ನೆನೆಯುತ್ತಿದ್ದೇನೆ. ಆ ಎಲ್ಲ ಜೀವಗಳ ಬಲಿದಾನವನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಂತ್ರಸ್ತ ಕುಟುಂಬಗಳ ನೋವಿನಲ್ಲಿ ಇಡೀ ದೇಶವೇ ಭಾಗಿಯಾಗಿದೆ ಮತ್ತು ಆ ದುಃಖಿತ ಕುಟುಂಬಗಳೊಂದಿಗೆ ನಾವು ಸದಾ ಇರುತ್ತೇವೆ,” ಎಂದು ಸಾಂತ್ವನ ಹೇಳಿದ್ದಾರೆ.

ದಾಳಿಯ ಸ್ಮರಣೆಯೊಂದಿಗೆ ಭಯೋತ್ಪಾದನೆಯನ್ನು ಪೋಷಿಸುವ ಶಕ್ತಿಗಳಿಗೆ ಪ್ರಧಾನಿ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ. “ಭಾರತವು ಯಾವುದೇ ರೀತಿಯ ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ. ನಮ್ಮ ದೇಶದ ಏಕತೆ ಮತ್ತು ಶಾಂತಿಯನ್ನು ಕದಡುವ ಭಯೋತ್ಪಾದಕರ ಯಾವುದೇ ಹೇಯ ಯೋಜನೆಗಳು ಎಂದಿಗೂ ಯಶಸ್ವಿಯಾಗುವುದಿಲ್ಲ,” ಎಂದು ಗುಡುಗಿದ್ದಾರೆ. ಭಾರತವು ಭಯೋತ್ಪಾದನೆಯ ವಿರುದ್ಧ ಹೊಂದಿರುವ ‘ಜೀರೋ ಟಾಲರೆನ್ಸ್’ (ಶೂನ್ಯ ಸಹನೆ) ನೀತಿಯನ್ನು ಮೋದಿ ಮತ್ತೊಮ್ಮೆ ಜಗತ್ತಿಗೆ ಸ್ಪಷ್ಟಪಡಿಸಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ ಭಾರತೀಯ ಸೇನೆಯು ನಡೆಸಿದ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯನ್ನು ದೇಶದಾದ್ಯಂತ ಇಂದು ಸ್ಮರಿಸಲಾಗುತ್ತಿದೆ. ಈ ಕಾರ್ಯಾಚರಣೆಯ ಮೂಲಕ ಭಯೋತ್ಪಾದಕ ನೆಲೆಗಳನ್ನು ಧೂಳೀಪಟ ಮಾಡಿದ್ದನ್ನು ಮೆಲುಕು ಹಾಕಿರುವ ಪ್ರಧಾನಿ, ಭಾರತದ ಭದ್ರತಾ ಪಡೆಗಳ ಶೌರ್ಯವನ್ನು ಕೊಂಡಾಡಿದ್ದಾರೆ.

ಪಹಲ್ಗಾಮ್ ದಾಳಿಯ ಗಾಯಗಳು ಇನ್ನೂ ಹಸಿಯಾಗಿದ್ದರೂ, ಭಾರತದ ಆತ್ಮವಿಶ್ವಾಸ ಮತ್ತು ದೃಢಸಂಕಲ್ಪ ಬೆಟ್ಟದಂತೆ ಅಚಲವಾಗಿದೆ ಎಂಬ ಸಂದೇಶವನ್ನು ಪ್ರಧಾನಿಯವರ ಮಾತುಗಳು ಸಾರಿವೆ. ದೇಶದ ಪ್ರತಿಯೊಬ್ಬ ನಾಗರಿಕನ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆ ಎಂಬ ಶಪಥದೊಂದಿಗೆ ಪ್ರಧಾನಿ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದ್ದಾರೆ.

The post ಪಹಲ್ಗಾಮ್ ಕರಾಳ ದಿನಕ್ಕೆ ಒಂದು ವರ್ಷ: ಸಂತ್ರಸ್ತ ಕುಟುಂಬಗಳ ಪರ ನಿಂತ ಪ್ರಧಾನಿ ಮೋದಿ appeared first on Samyukta Karnataka.

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: DA ಹೆಚ್ಚಳ ಘೋಷಣೆ
ನವದೆಹಲಿ: ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಮಹತ್ವದ ನಿರ್ಧಾರವಾಗಿ, ಕೇಂದ್ರ ಸಚಿವ ಸಂಪುಟವು ತುಟ್ಟಿ ಭತ್ಯೆ (Dearness Allowance – DA)ಯನ್ನು ಮೂಲ ವೇತನದ 58%ರಿಂದ 60%ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ.2 ರಷ್ಟು ಡಿಎ ಹೆಚ್ಚಳಕ್ಕೆ ಸಂಪುಟ ಅನುಮೋದನೆ ನೀಡಿದ್ದು. ಈ ಹೆಚ್ಚಳವು 2026ರ ಜನವರಿ 1ರಿಂದ ಅನ್ವಯವಾಗಲಿದ್ದು, ಮೊದಲ ಮೂರು ತಿಂಗಳ ಬಾಕಿ ಮೊತ್ತವನ್ನು ಸಹ ಒಟ್ಟಿಗೆ ನೀಡಲಾಗುತ್ತದೆ.

ಈ ನಿರ್ಧಾರದಿಂದ ದೇಶದಾದ್ಯಂತ ಸುಮಾರು 48 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ 68 ಲಕ್ಷ ಪಿಂಚಣಿದಾರರಿಗೆ ನೇರ ಲಾಭ ದೊರೆಯಲಿದೆ. ಹಣದುಬ್ಬರವನ್ನು ಸಮತೋಲನಗೊಳಿಸಲು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಆಧಾರವಾಗಿ ಈ ತುಟ್ಟಿ ಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ.

ಕಡಿಮೆ ವೇತನದ ಉದ್ಯೋಗಿಗಳಿಗೆ ಹೆಚ್ಚಿನ ಅನುಪಾತದ ಲಾಭ ದೊರೆಯುವ ನಿರೀಕ್ಷೆಯಿದೆ. ಉದಾಹರಣೆಗೆ, ಲೆವೆಲ್-1 ಹಂತದಲ್ಲಿ ₹18,000 ಮೂಲ ವೇತನ ಹೊಂದಿರುವ ಉದ್ಯೋಗಿಗೆ ಪ್ರತಿ ತಿಂಗಳು ಸುಮಾರು ₹360 ಹೆಚ್ಚುವರಿ ಲಾಭ ಸಿಗಲಿದೆ. ಈ ಹೆಚ್ಚಳವು ಕುಟುಂಬದ ಖರ್ಚುಗಳನ್ನು ನಿರ್ವಹಿಸಲು ಸಹಾಯಕವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಕೇಂದ್ರ ಸರ್ಕಾರದ ಈ ಘೋಷಣೆಯ ನಡುವೆ 8ನೇ ವೇತನ ಆಯೋಗ ರಚನೆಗೆ ಒತ್ತಾಯಗಳು ಮತ್ತಷ್ಟು ಜೋರಾಗಿವೆ. ವಿವಿಧ ಕಾರ್ಮಿಕ ಸಂಘಟನೆಗಳು, ವೇತನ ವಿನ್ಯಾಸದಲ್ಲಿ ಸಮಗ್ರ ಪರಿಷ್ಕರಣೆ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿವೆ.

The post ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: DA ಹೆಚ್ಚಳ ಘೋಷಣೆ appeared first on Samyukta Karnataka.

ಮಹಿಳಾ ಮೀಸಲಾತಿಯ ಹಳೆಯ ಮಸೂದೆ ಮತ್ತೆ ತರಲಿ: ಪ್ರಿಯಾಂಕಾ ಗಾಂಧಿ ಸವಾಲು
ನವದೆಹಲಿ: ವಿಶೇಷ ಸಂಸತ್ ಅಧಿವೇಶನದಲ್ಲಿ ಸಂವಿಧಾನ (131ನೇ ತಿದ್ದುಪಡಿ) ಮಸೂದೆ 2026 ಲೋಕಸಭೆಯಲ್ಲಿ ಅಂಗೀಕಾರ ಪಡೆಯುವಲ್ಲಿ ವಿಫಲವಾದ ಹಿನ್ನೆಲೆ, ಮಹಿಳಾ ಮೀಸಲಾತಿ ವಿಚಾರ ರಾಜಕೀಯವಾಗಿ ಮತ್ತೆ ಚರ್ಚೆಗೆ ಬಂದಿದೆ. ಈ ಬೆಳವಣಿಗೆಯ ನಡುವೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿ, ಹಳೆಯ ಮಹಿಳಾ ಮೀಸಲಾತಿ ಮಸೂದೆಯನ್ನು ಪುನಃ ಮಂಡಿಸುವಂತೆ ಒತ್ತಾಯಿಸಿದ್ದಾರೆ.

ಲೋಕಸಭೆಯಲ್ಲಿ ನಡೆದ ಮತದಾನದಲ್ಲಿ ಮಸೂದೆಗೆ 298 ಮಂದಿ ಬೆಂಬಲ ಸೂಚಿಸಿದರೂ, 230 ಮಂದಿ ವಿರೋಧ ವ್ಯಕ್ತಪಡಿಸಿದರು. ಸಂವಿಧಾನ ತಿದ್ದುಪಡಿ ಮಸೂದೆಗೆ ಅಗತ್ಯವಿರುವ ಎರಡು-ಮೂರಂಚು ಬಹುಮತ ಸಿಗದೆ ಮಸೂದೆ ಸೋಲಾಯಿತು.

“ಸೋಮವಾರವೇ ಮಸೂದೆ ತರಲಿ” – ಪ್ರಿಯಾಂಕಾ ಸವಾಲು : ಸುದ್ದಿಸಂಸ್ಥೆಗಳ ಜೊತೆ ಮಾತನಾಡಿದ ಪ್ರಿಯಾಂಕಾ ಗಾಂಧಿ, “ಹಿಂದೆ ಎಲ್ಲಾ ಪಕ್ಷಗಳ ಒಮ್ಮತದಿಂದ ಅಂಗೀಕರಿಸಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಸೋಮವಾರವೇ ಮತ್ತೆ ಮಂಡಿಸಲಿ. ಯಾರು ಮಹಿಳಾ ಪರ, ಯಾರು ವಿರೋಧಿ ಎಂಬುದು ದೇಶಕ್ಕೆ ತಿಳಿಯಲಿ. ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದು ಹೇಳಿದ್ದಾರೆ.

ಬಿಜೆಪಿ–ವಿಪಕ್ಷ ವಾಕ್ಸಮರ : ಮಸೂದೆ ಸೋಲಿನ ನಂತರ ಆಡಳಿತಾರೂಢ ಭಾರತೀಯ ಜನತಾ ಪಕ್ಷ (BJP) ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದ ಮುಂದುವರಿದಿದೆ. ಮಹಿಳಾ ಮೀಸಲಾತಿಯ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದರ ಬಗ್ಗೆ ವಿರೋಧ ಪಕ್ಷಗಳು ಸರ್ಕಾರವನ್ನು ಪ್ರಶ್ನಿಸುತ್ತಿವೆ.

ಕೇಂದ್ರ ಸರ್ಕಾರ ಈ ವಿಚಾರದ ಮೇಲೆ ಮತ್ತೊಂದು ಚರ್ಚೆ ನಡೆಸುವ ಸಾಧ್ಯತೆ ಇದೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಲು ಮುಂದಾಗಿವೆ. ಮಹಿಳಾ ಮೀಸಲಾತಿ ಪ್ರಶ್ನೆ ಮುಂದಿನ ಅಧಿವೇಶನದಲ್ಲೂ ಪ್ರಮುಖ ಅಜೆಂಡಾ ಆಗುವ ನಿರೀಕ್ಷೆ

ಮಹಿಳೆಯರಿಗೆ ಸಂಸತ್ ಮತ್ತು ವಿಧಾನಸಭೆಗಳಲ್ಲಿ 33% ಮೀಸಲಾತಿ ನೀಡುವ ಉದ್ದೇಶದಿಂದ ಈ ಮಸೂದೆ ಬಹುಕಾಲದಿಂದ ಚರ್ಚೆಯಲ್ಲಿದೆ. ಆದರೆ ಅನುಷ್ಠಾನ ಮತ್ತು ರಾಜಕೀಯ ಒಮ್ಮತದ ಕೊರತೆಯಿಂದ ಮಸೂದೆ ಮುಂದುವರಿಯುತ್ತಲೇ ಬಂದಿದೆ.

The post ಮಹಿಳಾ ಮೀಸಲಾತಿಯ ಹಳೆಯ ಮಸೂದೆ ಮತ್ತೆ ತರಲಿ: ಪ್ರಿಯಾಂಕಾ ಗಾಂಧಿ ಸವಾಲು appeared first on Samyukta Karnataka.

ರಾಜ್ಯಸಭೆ ಉಪಾಧ್ಯಕ್ಷರಾಗಿ ಹರಿವಂಶ್ ನಾರಾಯಣ್ ಸಿಂಗ್ 3ನೇ ಬಾರಿ ಆಯ್ಕೆ
ನವದೆಹಲಿ: ರಾಜ್ಯಸಭೆಯ ಉಪಾಧ್ಯಕ್ಷರಾಗಿ ಹರಿವಂಶ್ ನಾರಾಯಣ್ ಸಿಂಗ್ ಅವರು ಮೂರನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿರುವುದು ಸಂಸತ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ವಿರೋಧ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಈ ಆಯ್ಕೆ ಏಕಮತದಿಂದ ನಡೆದಿದೆ.

ಏಪ್ರಿಲ್ 9ರಂದು ಅವರ ಹಿಂದಿನ ಅವಧಿ ಪೂರ್ಣಗೊಂಡ ಬಳಿಕ ಈ ಹುದ್ದೆ ಖಾಲಿಯಾಗಿತ್ತು. ಬಳಿಕ ರಾಜ್ಯಸಭೆಯ ಅಧ್ಯಕ್ಷರಾದ ಸಿ.ಪಿ. ರಾಧಾಕೃಷ್ಣನ್ ಅವರು ನಿಯಮಾವಳಿಗಳ ಪ್ರಕಾರ ಚುನಾವಣಾ ಪ್ರಕ್ರಿಯೆ ಆರಂಭಿಸಿ ದಿನಾಂಕ ನಿಗದಿ ಮಾಡಿದ್ದರು. ನಿಗದಿತ ಗಡುವಿನೊಳಗೆ ಯಾವುದೇ ಪರ್ಯಾಯ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾಗದ ಕಾರಣ, ಹರಿವಂಶ್ ಅವರೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿ, “ಇದು ಸದನವು ಅವರ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿ” ಎಂದು ತಿಳಿಸಿದ್ದಾರೆ. ಜೊತೆಗೆ ರಾಜ್ಯಸಭೆ ಸದನದ ನಾಯಕ ಜೆ.ಪಿ. ನಡ್ಡಾ ಮಂಡಿಸಿದ ನಿರ್ಣಯವನ್ನು ಸದನ ಧ್ವನಿಮತದ ಮೂಲಕ ಅಂಗೀಕರಿಸಿತು.

ಹರಿವಂಶ್ ಅವರು ಈಗಾಗಲೇ ಎರಡು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಮೂರನೇ ಅವಧಿಗೆ ಆಯ್ಕೆಯಾಗಿರುವುದು ಅವರ ಅನುಭವ ಮತ್ತು ಆಡಳಿತ ಸಾಮರ್ಥ್ಯಕ್ಕೆ ದೊರೆತ ಮಾನ್ಯತೆಯಾಗಿದೆ. ಸಂಸತ್ ಕಾರ್ಯಾಚರಣೆಯಲ್ಲಿ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದ್ದು, ಮುಂದಿನ ಅವಧಿಯಲ್ಲೂ ಸದನವನ್ನು ಸಮರ್ಥವಾಗಿ ಮುನ್ನಡೆಸುವ ನಿರೀಕ್ಷೆ ಇದೆ.

The post ರಾಜ್ಯಸಭೆ ಉಪಾಧ್ಯಕ್ಷರಾಗಿ ಹರಿವಂಶ್ ನಾರಾಯಣ್ ಸಿಂಗ್ 3ನೇ ಬಾರಿ ಆಯ್ಕೆ appeared first on Samyukta Karnataka.

AAP ಸಂಸದ ಅಶೋಕ್ ಮಿತ್ತಲ್ ಮನೆಗಳ ಮೇಲೆ ED ದಾಳಿ
ಜಲಂಧರ್/ಗುರುಗ್ರಾಮ್: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸುತ್ತಿರುವ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಆಮ್ ಆದ್ಮಿ ಪಕ್ಷದ (AAP) ರಾಜ್ಯಸಭಾ ಸದಸ್ಯ ಅಶೋಕ್ ಮಿತ್ತಲ್ ಅವರಿಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಲಾಗಿದೆ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಜಲಂಧರ್ ಹಾಗೂ ಗುರುಗ್ರಾಮ್ ಸೇರಿ ಸುಮಾರು 10 ಕಡೆಗಳಲ್ಲಿ ಶೋಧ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಶೋಧ ಕಾರ್ಯದಲ್ಲಿ ಫಾಗ್ವಾರಾದ ಪ್ರಸಿದ್ಧ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (LPU) ಕ್ಯಾಂಪಸ್ ಹಾಗೂ ಗುರುಗ್ರಾಮ್‌ನ ಮಾಸ್ಟರ್ಸ್ ಯೂನಿಯನ್ ಕಾಲೇಜ್ ಆಫ್ ಬ್ಯುಸಿನೆಸ್ ಮತ್ತು ಟೆಟ್ರಾ ಕಾಲೇಜ್ ಆಫ್ ಬ್ಯುಸಿನೆಸ್ ಸೇರಿದಂತೆ ಪ್ರಮುಖ ಶಿಕ್ಷಣ ಸಂಸ್ಥೆಗಳ ಆವರಣಗಳು ಒಳಗೊಂಡಿವೆ. ಅಶೋಕ್ ಮಿತ್ತಲ್ ಅವರು ಈ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದು, ಇತ್ತೀಚೆಗೆ ರಾಘವ್ ಚಡ್ಡಾ ಅವರ ಸ್ಥಾನವನ್ನು ವಹಿಸಿಕೊಂಡು ರಾಜ್ಯಸಭೆಯಲ್ಲಿ ಎಎಪಿಯ ಉಪ ನಾಯಕರಾಗಿ ನೇಮಕಗೊಂಡಿದ್ದರು.

ವಿದೇಶಿ ಹಣಕಾಸು ವ್ಯವಹಾರಗಳ ತನಿಖೆ : ED ಅಧಿಕಾರಿಗಳ ಪ್ರಕಾರ, ಈ ಸಂಸ್ಥೆಗಳ ಕೆಲವು ವಿದೇಶಿ ಹಣಕಾಸು ವ್ಯವಹಾರಗಳು FEMA ನಿಯಮಗಳಿಗೆ ವಿರುದ್ಧವಾಗಿರುವ ಶಂಕೆಯ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಹಣದ ಹರಿವು, ವಿದೇಶಿ ಹೂಡಿಕೆ ಮತ್ತು ಸಂಬಂಧಿತ ಹಣಕಾಸು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಶೋಧ ಕಾರ್ಯದ ವೇಳೆ ಹಲವು ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯ ಪ್ರತಿಕ್ರಿಯೆಗಳು : ಈ ದಾಳಿಗಳ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಇದು ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನಡೆಸುತ್ತಿರುವ ರಾಜಕೀಯ ಪ್ರೇರಿತ ಕ್ರಮ” ಎಂದು ಅವರು ಆರೋಪಿಸಿದ್ದಾರೆ. ಇದಕ್ಕೆ ಬೆಂಬಲವಾಗಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಪಕ್ಷದ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆ ವಿರೋಧ: ತಮಿಳುನಾಡಿನಲ್ಲಿ ಕಪ್ಪು ಬಾವುಟ ಪ್ರತಿಭಟನೆಗೆ ಸ್ಟಾಲಿನ್ ಕರೆ

The post AAP ಸಂಸದ ಅಶೋಕ್ ಮಿತ್ತಲ್ ಮನೆಗಳ ಮೇಲೆ ED ದಾಳಿ appeared first on Samyukta Karnataka.

2029ಕ್ಕೆ ದೇಶದಲ್ಲಿ ದೊಡ್ಡ ಬದಲಾವಣೆ: 543ರಿಂದ 850ಕ್ಕೆ ಲೋಕಸಭಾ ಕ್ಷೇತ್ರಗಳ ವಿಸ್ತರಣೆ?
ನವದೆಹಲಿ: ದೇಶದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಬಹುದಾದ ಮಹತ್ವದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆಯನ್ನು ಈಗಿರುವ 543ರಿಂದ 850ಕ್ಕೆ ಹೆಚ್ಚಿಸುವ ಕುರಿತು ಸಂವಿಧಾನದ 131ನೇ ತಿದ್ದುಪಡಿ ವಿಧೇಯಕದ ಕರಡನ್ನು ಸರ್ಕಾರವು ಸಂಸದರೊಂದಿಗೆ ಹಂಚಿಕೊಂಡಿದೆ.

ಏಪ್ರಿಲ್ 16ರಿಂದ 18ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಹತ್ವದ ವಿಧೇಯಕವನ್ನು ಮಂಡಿಸುವ ಸಾಧ್ಯತೆ ಇದೆ. ಈ ಪ್ರಸ್ತಾವನೆ ಜಾರಿಯಾದರೆ ದೇಶದ ಚುನಾವಣಾ ರಾಜಕೀಯದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆಯಿದೆ.

ಸ್ಥಾನಗಳ ಹೆಚ್ಚಳ – ಏನು ಯೋಜನೆ? : ಈ ಹೊಸ ಪ್ರಸ್ತಾವನೆಯ ಪ್ರಕಾರ, ಒಟ್ಟು 850 ಲೋಕಸಭಾ ಸ್ಥಾನಗಳಲ್ಲಿ 815 ಸ್ಥಾನಗಳನ್ನು ರಾಜ್ಯಗಳಿಗೆ ಮತ್ತು 35 ಸ್ಥಾನಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡುವ ಯೋಜನೆ ಇದೆ. ಪ್ರಸ್ತುತ ವ್ಯವಸ್ಥೆಯೊಂದಿಗೆ ಹೋಲಿಸಿದರೆ ಇದು ದೊಡ್ಡ ಮಟ್ಟದ ವಿಸ್ತರಣೆ ಆಗಲಿದೆ.

ಮಹಿಳಾ ಮೀಸಲಾತಿಗೆ ವೇಗ : ಈ ಸೀಟುಗಳ ಹೆಚ್ಚಳದ ಮೂಲಕ 33% ಮಹಿಳಾ ಮೀಸಲಾತಿಯನ್ನು 2029ರ ಲೋಕಸಭಾ ಚುನಾವಣೆಯ ವೇಳೆಗೆ ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. “ನಾರಿ ಶಕ್ತಿ ವಂದನ್ ಅಧಿನಿಯಮ” ಅನುಷ್ಠಾನಕ್ಕೆ ಇದು ಪ್ರಮುಖ ಹೆಜ್ಜೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ರಾಜ್ಯಗಳ ಆತಂಕ : ಈ ಪ್ರಸ್ತಾವನೆಗೆ ವಿರೋಧ ಪಕ್ಷಗಳು, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕ್ಷೇತ್ರ ಪುನರ್ವಿಂಗಡಣೆಯಿಂದ ತಮ್ಮ ರಾಜಕೀಯ ಪ್ರಭಾವ ಕುಗ್ಗಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಈ ವಿಷಯದಲ್ಲಿ ಈಗಾಗಲೇ ಕಠಿಣ ಎಚ್ಚರಿಕೆ ನೀಡಿದ್ದು, ರಾಜ್ಯದ ಹಿತಾಸಕ್ತಿಗೆ ಧಕ್ಕೆ ಉಂಟಾದರೆ ಭಾರಿ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆ: ಕೇಂದ್ರಕ್ಕೆ ಸ್ಟಾಲಿನ್ ಅಂತಿಮ ಎಚ್ಚರಿಕೆ!

ಹೊಸ ರಾಜಕೀಯ ಸಮೀಕರಣ: ಈ ತಿದ್ದುಪಡಿ ಅಂಗೀಕಾರವಾದಲ್ಲಿ 2029ರ ಲೋಕಸಭೆ ಚುನಾವಣೆಗಳು ಹೊಸದಾಗಿ ರೂಪುಗೊಳ್ಳುವ 850 ಕ್ಷೇತ್ರಗಳಲ್ಲಿ ನಡೆಯಲಿವೆ. ಇದರಿಂದ ದೇಶದ ರಾಜಕೀಯ ಸಮೀಕರಣವೇ ಬದಲಾಗುವ ಸಾಧ್ಯತೆ ಇದೆ.

ಮೊದಲ ಬಾರಿಗೆ ಬಿಹಾರದಲ್ಲಿ ಬಿಜೆಪಿ ರಾಜ್ಯಭಾರ: ಯಾರು ಈ ಸಾಮ್ರಾಟ್ ಚೌಧರಿ?

The post 2029ಕ್ಕೆ ದೇಶದಲ್ಲಿ ದೊಡ್ಡ ಬದಲಾವಣೆ: 543ರಿಂದ 850ಕ್ಕೆ ಲೋಕಸಭಾ ಕ್ಷೇತ್ರಗಳ ವಿಸ್ತರಣೆ? appeared first on Samyukta Karnataka.

ಬಿಹಾರ CM ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ: 21 ವರ್ಷಗಳ ಆಡಳಿತಕ್ಕೆ ತೆರೆ
ಪಾಟ್ನಾ: ಬಿಹಾರ ರಾಜಕೀಯದಲ್ಲಿ ಮಹತ್ವದ ತಿರುವು ಸಂಭವಿಸಿದ್ದು, “ಸುಶಾಸನ್ ಬಾಬು” ಎಂದೇ ಖ್ಯಾತರಾಗಿರುವ ನಿತೀಶ್ ಕುಮಾರ್ ಅವರು ಏಪ್ರಿಲ್ 14ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಸುಮಾರು ಎರಡು ದಶಕಗಳ ಕಾಲ ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರಿದ ಅವರ ಆಡಳಿತಕ್ಕೆ ತೆರೆ ಬಿದ್ದಿದೆ.

‘ಸುಶಾಸನ ಬಾಬು’ ಹೆಸರಿನ ಹಿನ್ನೆಲೆ: (Sushasan Babu) ಎನ್ನುವುದು ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಇರುವ ಜನಪ್ರಿಯ ಅಡ್ಡಹೆಸರು. ಈ ಹೆಸರಿನ ಅರ್ಥ ‘ಉತ್ತಮ ಆಡಳಿತದ ನಾಯಕ’ ಎಂದಾಗಿದೆ. 2005ರಲ್ಲಿ ಅವರು ಬಿಹಾರದ ಅಧಿಕಾರಕ್ಕೆ ಬಂದಾಗ, ರಾಜ್ಯದಲ್ಲಿದ್ದ ಕಾನೂನು ಸುವ್ಯವಸ್ಥೆಯ ಹದಗೆಟ್ಟ ಸ್ಥಿತಿಯನ್ನು ಸುಧಾರಿಸಿ, ಉತ್ತಮ ಆಡಳಿತ ನೀಡಲು ಮುಂದಾದ ಕಾರಣ ಅವರಿಗೆ ‘ಸುಶಾಸನ ಬಾಬು’ ಎಂಬ ಹೆಸರು ಬಂದಿತು.

ನಿತೀಶ್ ಕುಮಾರ್ ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾಗಿರುವ ಹಿನ್ನೆಲೆ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ನಿರೀಕ್ಷಿತವಾಗಿತ್ತು. ಮಂಗಳವಾರ ತಮ್ಮ ಅಂತಿಮ ಸಂಪುಟ ಸಭೆಗೆ ಅಧ್ಯಕ್ಷತೆ ವಹಿಸಿದ ನಂತರ, ಅವರು ಸಂಪುಟ ವಿಸರ್ಜನೆ ಘೋಷಿಸಿ, ತಮ್ಮ ರಾಜೀನಾಮೆ ಪತ್ರವನ್ನು ಬಿಹಾರ ರಾಜ್ಯಪಾಲ ಸೈಯದ್ ಅತಾ ಹಸ್ಟೈನ್ (Syed Ata Hasnain) ಅವರಿಗೆ ಸಲ್ಲಿಸಿದರು.

21 ವರ್ಷಗಳ ಆಡಳಿತಕ್ಕೆ ಅಂತ್ಯ : 2005ರಲ್ಲಿ ಮೊದಲ ಬಾರಿಗೆ ಎನ್‌ಡಿಎ ಸರ್ಕಾರವನ್ನು ಸ್ಥಾಪಿಸಿದ್ದ ನಿತೀಶ್ ಕುಮಾರ್, ನಂತರ ಹಲವು ಅವಧಿಗಳಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಕಾನೂನು ಸುವ್ಯವಸ್ಥೆ, ರಸ್ತೆ, ವಿದ್ಯುತ್, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಬದಲಾವಣೆ ತಂದ ನಾಯಕನಾಗಿ ಅವರು ಗುರುತಿಸಿಕೊಂಡಿದ್ದರು. ಇವರು ದಾಖಲೆಯ 10 ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದಾಗ್ಯೂ, ರಾಜಕೀಯ ಲಾಭಕ್ಕಾಗಿ ಪದೇ ಪದೇ ಮೈತ್ರಿ ಬದಲಾಯಿಸುವ ಇವರ ಸ್ವಭಾವದಿಂದಾಗಿ ವಿರೋಧ ಪಕ್ಷಗಳು ಇವರನ್ನು ‘ಪಲ್ಟು ರಾಮ್’ ಎಂದೂ ಕರೆಯುತ್ತಾರೆ.

ರಾಜೀನಾಮೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಂದೇಶದಲ್ಲಿ, “ನಾನು ದಣಿವರಿಯದೆ ಬಿಹಾರದ ಜನತೆಗೆ ಸೇವೆ ಸಲ್ಲಿಸಿದ್ದೇನೆ. ಈಗ ಹೊಸ ಸರ್ಕಾರಕ್ಕೆ ಅವಕಾಶ ನೀಡಲು ನಿರ್ಧರಿಸಿದ್ದೇನೆ” ಎಂದು ತಿಳಿಸಿದ್ದಾರೆ.

ಅಭಿವೃದ್ಧಿ ಕುರಿತ ಹೇಳಿಕೆ: ತಮ್ಮ ಕಾರ್ಯಕಾಲದ ಸಾಧನೆಗಳನ್ನು ಉಲ್ಲೇಖಿಸಿದ ಅವರು ಎಲ್ಲಾ ವರ್ಗಗಳ (ಹಿಂದುಳಿದ, ದಲಿತ, ಮಹಾದಲಿತ) ಅಭಿವೃದ್ಧಿಗೆ ಒತ್ತು, ಶಿಕ್ಷಣ, ಆರೋಗ್ಯ, ರಸ್ತೆ, ವಿದ್ಯುತ್ ಕ್ಷೇತ್ರಗಳಲ್ಲಿ ಸುಧಾರಣೆ, ಮಹಿಳೆಯರು ಮತ್ತು ಯುವಕರಿಗಾಗಿ ವಿಶೇಷ ಯೋಜನೆಗಳು “7 ನಿಶ್ಚಯ್-3” ಯೋಜನೆಯ ಮೂಲಕ 2025–2030 ಅವಧಿಗೆ ಅಭಿವೃದ್ಧಿ ರೂಪರೇಖೆ

ಇದಲ್ಲದೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬೆಂಬಲವನ್ನು ಶ್ಲಾಘಿಸಿ, “ಬಿಹಾರ ಇನ್ನಷ್ಟು ವೇಗವಾಗಿ ಅಭಿವೃದ್ಧಿ ಹೊಂದಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೂತನ ಮುಖ್ಯಮಂತ್ರಿ: ಬಿಜೆಪಿ (BJP) ನಾಯಕರಾದ ಸಮ್ರಾಟ್ ಚೌಧರಿ ಅವರು ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ. ಈ ಮೂಲಕ ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿ ನಾಯಕರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆ: ಕೇಂದ್ರಕ್ಕೆ ಸ್ಟಾಲಿನ್ ಅಂತಿಮ ಎಚ್ಚರಿಕೆ!

The post ಬಿಹಾರ CM ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ: 21 ವರ್ಷಗಳ ಆಡಳಿತಕ್ಕೆ ತೆರೆ appeared first on Samyukta Karnataka.

ಸಂಬಳ ಏರಲ್ಲ, ಬೆಲೆ ಏರುತ್ತದೆ : ಕಾರ್ಮಿಕರ ಸಮಸ್ಯೆ ಬಗ್ಗೆ ರಾಹುಲ್ ಮಾತು
ನವದೆಹಲಿ/ನೋಯ್ಡಾ: ಕಾರ್ಮಿಕರ ವೇತನ ಮತ್ತು ಜೀವನ ವೆಚ್ಚದ ನಡುವೆ ಉಂಟಾಗುತ್ತಿರುವ ಅಸಮಾನತೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಕಳವಳ ವ್ಯಕ್ತಪಡಿಸಿದ್ದು, ನೋಯ್ಡಾದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಪೋಸ್ಟ್ ಹಂಚಿಕೊಂಡಿರುವ ಅವರು, “ನೋಯ್ಡಾದ ಬೀದಿಗಳಲ್ಲಿ ನಡೆದದ್ದು ಕಾರ್ಮಿಕರ ಕೊನೆಯ ಕೂಗು” ಎಂದು ಹೇಳಿದ್ದು, ಕಾರ್ಮಿಕರ ಜೀವನ ಪರಿಸ್ಥಿತಿ ದೇಶದ ಅಭಿವೃದ್ಧಿಯ ನಿಜ ಚಿತ್ರಣವನ್ನು ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಾರ್ಮಿಕರ ಬದುಕಿನ ಕಷ್ಟಗಳು: ರಾಹುಲ್ ಗಾಂಧಿ ಪ್ರಕಾರ, ನೋಯ್ಡಾದಲ್ಲಿ ಕೆಲಸ ಮಾಡುವ ಕಾರ್ಮಿಕನೊಬ್ಬ ಮಾಸಿಕ ₹12,000 ಸಂಬಳ ಪಡೆಯುತ್ತಿದ್ದರೆ, ಮನೆ ಬಾಡಿಗೆ ₹4,000 ರಿಂದ ₹7,000 ವರೆಗೆ ಇದೆ. ವಾರ್ಷಿಕವಾಗಿ ₹300 ಸಂಬಳ ಹೆಚ್ಚಳವಾಗುವಷ್ಟರಲ್ಲಿ ಬಾಡಿಗೆ ₹500 ಹೆಚ್ಚಾಗುತ್ತದೆ. “ಹಣದುಬ್ಬರ ಕಾರ್ಮಿಕರ ಜೀವನವನ್ನು ಕತ್ತು ಹಿಸುಕುತ್ತಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಬ್ಬ ಮಹಿಳಾ ಕಾರ್ಮಿಕೆ ಹೇಳಿದ ಮಾತನ್ನು ಉಲ್ಲೇಖಿಸಿ, “ಗ್ಯಾಸ್ ಬೆಲೆ ಏರುತ್ತದೆ, ಆದರೆ ನಮ್ಮ ಸಂಬಳ ಏರಲ್ಲ” ಎಂಬುದು ಕಾರ್ಮಿಕರ ನಿಜ ಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಇಂಧನ ಬೆಲೆ ಮತ್ತು ಜಾಗತಿಕ ಪರಿಣಾಮ: ಪಶ್ಚಿಮ ಏಷ್ಯಾದ ಯುದ್ಧ, ಜಾಗತಿಕ ಪೂರೈಕೆ ಸರಪಳಿ ವ್ಯತ್ಯಯ ಹಾಗೂ ಹಣದುಬ್ಬರದಿಂದ ಇಂಧನ ಬೆಲೆಗಳು ಗಗನಕ್ಕೇರಿವೆ. ಆದರೆ ಇದರ ಹೊರೆ ಸಾಮಾನ್ಯ ಕಾರ್ಮಿಕರ ಮೇಲೆ ಮಾತ್ರ ಬಿದ್ದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕಾರ್ಮಿಕ ಸಂಹಿತೆಗಳ ವಿರುದ್ಧ ಟೀಕೆ: ನವೆಂಬರ್ 2025ರಿಂದ ಕೇಂದ್ರ ಸರ್ಕಾರ ಯಾವುದೇ ಸಮಾಲೋಚನೆ ಇಲ್ಲದೆ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ ಎಂದು ಅವರು ಆರೋಪಿಸಿದ್ದು, ಕೆಲಸದ ಅವಧಿಯನ್ನು 12 ಗಂಟೆಗಳವರೆಗೆ ಹೆಚ್ಚಿಸಿರುವುದನ್ನು ತೀವ್ರವಾಗಿ ಟೀಕಿಸಿದ್ದಾರೆ. “ದಿನಕ್ಕೆ 12 ಗಂಟೆ ಕೆಲಸ ಮಾಡುವ ಕಾರ್ಮಿಕನಿಗೆ ₹20,000 ಸಂಬಳ ಕೇಳುವುದು ದುರಾಸೆಯಲ್ಲ, ಅದು ಅವನ ಹಕ್ಕು” ಎಂದು ಅವರು ಹೇಳಿದ್ದಾರೆ.

ನೋಯ್ಡಾದಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ತಿರುವು ಪಡೆದ ನಂತರ ಕಾರ್ಮಿಕರ ಸಮಸ್ಯೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಸರ್ಕಾರ ಮತ್ತು ಕೈಗಾರಿಕಾ ವಲಯಗಳು ಕಾರ್ಮಿಕರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ನಡುವೆ ಕಾರ್ಮಿಕರ ಪರವಾಗಿ ವಿವಿಧ ಸಂಘಟನೆಗಳು ಬೆಂಬಲ ಸೂಚಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರತಿಭಟನೆಗಳು ನಡೆಯುವ ಸೂಚನೆಗಳಿವೆ.

The post ಸಂಬಳ ಏರಲ್ಲ, ಬೆಲೆ ಏರುತ್ತದೆ : ಕಾರ್ಮಿಕರ ಸಮಸ್ಯೆ ಬಗ್ಗೆ ರಾಹುಲ್ ಮಾತು appeared first on Samyukta Karnataka.

ಮಹಿಳಾ ಮೀಸಲಾತಿ ಮಸೂದೆ : ದೇಶದ ಮಹಿಳೆಯರಿಗೆ ಮೋದಿ ಪತ್ರ
ನವದೆಹಲಿ: ಮುಂಬರುವ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮಹಿಳಾ ಮೀಸಲಾತಿ ಅಡಿಯಲ್ಲಿ ನಡೆದರೆ ಭಾರತೀಯ ಪ್ರಜಾಪ್ರಭುತ್ವ ಇನ್ನಷ್ಟು ಬಲಿಷ್ಠ ಹಾಗೂ ಚೈತನ್ಯಪೂರ್ಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. B. R. ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ದೇಶದ ಮಹಿಳೆಯರಿಗೆ ಬರೆದ ಪತ್ರದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧಿಸುತ್ತಿರುವ ಪ್ರಗತಿಯನ್ನು ಉಲ್ಲೇಖಿಸಿ, ಶಾಸನಸಭೆಗಳಲ್ಲಿಯೂ ಅವರ ಪ್ರತಿನಿಧಿತ್ವ ಹೆಚ್ಚಾಗಬೇಕೆಂದು ಹೇಳಿದ್ದಾರೆ.

ವಿಶೇಷ ಅಧಿವೇಶನದ ಮಹತ್ವ: ಏಪ್ರಿಲ್ 16ರಿಂದ ಆರಂಭವಾಗಲಿರುವ ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಅಂಗೀಕಾರವಾಗಬೇಕು ಎಂದು ಪ್ರಧಾನಿ ಒತ್ತಾಯಿಸಿದ್ದಾರೆ. ಯಾವುದೇ ವಿಳಂಬವಾದರೂ ಅದು ದೇಶದ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

2029ರಿಂದಲೇ ಜಾರಿಗೆ ಯತ್ನ: 2023ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಕಾಯ್ದೆಯ ಪ್ರಕಾರ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಒದಗಿಸಲಾಗುತ್ತದೆ. ಮೂಲ ಕಾನೂನಿನ ಪ್ರಕಾರ 2027ರ ಜನಗಣತಿ ಬಳಿಕ ಕ್ಷೇತ್ರ ಮರುವಿಂಗಡಣೆ ನಡೆದು 2034ರ ವೇಳೆಗೆ ಜಾರಿಯಾಗಬೇಕಾಗಿತ್ತು.

ಆದರೆ ಇದೀಗ ಕೇಂದ್ರ ಸರ್ಕಾರ 2029ರ ಲೋಕಸಭೆ ಚುನಾವಣೆಯಿಂದಲೇ ಈ ಮೀಸಲಾತಿಯನ್ನು ಜಾರಿಗೆ ತರಲು ತಿದ್ದುಪಡಿ ತರಲು ಮುಂದಾಗಿದೆ.

ಸ್ಥಾನಗಳ ಏರಿಕೆ ಸಾಧ್ಯತೆ: ತಿದ್ದುಪಡಿ ಮಸೂದೆ ಅಂಗೀಕಾರವಾದಲ್ಲಿ ಲೋಕಸಭೆಯ ಒಟ್ಟು ಸ್ಥಾನಗಳು 816ಕ್ಕೆ ಏರಿಕೆಯಾಗಲಿದ್ದು, ಅದರಲ್ಲಿ ಸುಮಾರು 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗುವ ಸಾಧ್ಯತೆ ಇದೆ.

ಮಹಿಳಾ ಶಕ್ತಿಗೆ ಕರೆ: “ಮಹಿಳೆಯರು ತಮ್ಮ ಹಕ್ಕಿಗಾಗಿ ಕಾಯುವ ಅಗತ್ಯವಿಲ್ಲ. ಶಾಸನ ಸಭೆಗಳಲ್ಲಿ ಅವರ ಧ್ವನಿ ಬಲವಾಗಿದ್ರೆ ಪ್ರಜಾಪ್ರಭುತ್ವದ ಧ್ವನಿಯೂ ಬಲಗೊಳ್ಳುತ್ತದೆ” ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಈ ಐತಿಹಾಸಿಕ ನಿರ್ಧಾರಕ್ಕೆ ಬೆಂಬಲ ನೀಡುವಂತೆ ಸ್ಥಳೀಯ ಸಂಸದರಿಗೆ ಪತ್ರ ಬರೆಯಲು ಮಹಿಳೆಯರಿಗೆ ಅವರು ಮನವಿ ಮಾಡಿದ್ದಾರೆ.

ಹೋರ್ಮುಜ್ ಜಲಸಂಧಿ : ಇರಾನ್ ಬಂದರುಗಳಿಗೆ ನೌಕಾ ದಿಗ್ಬಂಧನ

The post ಮಹಿಳಾ ಮೀಸಲಾತಿ ಮಸೂದೆ : ದೇಶದ ಮಹಿಳೆಯರಿಗೆ ಮೋದಿ ಪತ್ರ appeared first on Samyukta Karnataka.