hubballi Archives - Samyukta Karnataka

ವೇಲಂಕಣ್ಣಿ ಹಬ್ಬ: ವಾಸ್ಕೋ-ಡ-ಗಾಮ ಮತ್ತು ವೇಲಂಕಣ್ಣಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು
ಹುಬ್ಬಳ್ಳಿ: ವೇಲಂಕಣ್ಣಿಯಲ್ಲಿ ನಡೆಯುವ “ಅವರ ಲೇಡಿ ಆಫ್ ಗುಡ್ ಹೆಲ್ತ್” ವಾರ್ಷಿಕ ಹಬ್ಬದಲ್ಲಿ ಪಾಲ್ಗೊಳ್ಳಲು ಪ್ರಯಾಣಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಾಸ್ಕೋ-ಡ-ಗಾಮ ಮತ್ತು ವೇಲಂಕಣ್ಣಿ ನಡುವೆ ವಿಶೇಷ ರೈಲುಗಳ ಸಂಚಾರಕ್ಕೆ ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ.

ರೈಲು ಸಂಖ್ಯೆ 07361 / 07362 ವಾಸ್ಕೋ ಡಾ ಗಾಮಾ – ವೇಲಂಕಣ್ಣಿ – ವಾಸ್ಕೋ ಡ ಗಾಮಾ ವಿಶೇಷ ಎಕ್ಸ್‌ಪ್ರೆಸ್ ರೈಲು (2 ಟ್ರಿಪ್‌ಗಳು).
ರೈಲು ಸಂಖ್ಯೆ 07361 ವಾಸ್ಕೋ ಡ ಗಾಮ – ವೇಲಂಕಣ್ಣಿ ವಿಶೇಷ ಎಕ್ಸ್‌ಪ್ರೆಸ್ ರೈಲು ಆಗಸ್ಟ್‌ 27 ಮತ್ತು ಸೆಪ್ಟೆಂಬರ್‌ 1ರಂದು 21.55ಕ್ಕೆ ವಾಸ್ಕೋ ಡ ಗಾಮದಿಂದ ಹೊರಟು ಮೂರನೇ ದಿನದಂದು 03.45ಕ್ಕೆ ವೇಲಂಕಣ್ಣಿ ತಲುಪಲಿದೆ.

ಮರುಪ್ರಯಾಣ, ರೈಲು ಸಂಖ್ಯೆ 07362 ವೇಲಂಕಣ್ಣಿ – ವಾಸ್ಕೋ ಡ ಗಾಮ ವಿಶೇಷ ಎಕ್ಸ್‌ಪ್ರೆಸ್ ರೈಲು ಆಗಸ್ಟ್‌ 29 ಮತ್ತು ಸೆಪ್ಟೆಂಬರ್‌ 3ರಂದು 23.55ಕ್ಕೆ ವೇಲಂಕಣ್ಣಿಯಿಂದ ಹೊರಟು, ಮೂರನೇ ದಿನದಂದು 03.00 ಗಂಟೆಗೆ ವಾಸ್ಕೋ ಡ ಗಾಮ ತಲುಪಲಿದೆ.

ರೈಲು ಸಂಖ್ಯೆ. 07365 / 07366 ವಾಸ್ಕೋ ಡ ಗಾಮಾ – ವೆಲಂಕಣಿ – ವಾಸ್ಕೋ ಡ ಗಾಮಾ ವಿಶೇಷ ಎಕ್ಸ್‌ಪ್ರೆಸ್ (1 ಟ್ರಿಪ್):
ರೈಲು ಸಂಖ್ಯೆ 07365 ವಾಸ್ಕೋ ಡ ಗಾಮಾ – ವೇಲಂಕಣ್ಣಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್‌ 6ರಂದು ಭಾನುವಾರ 21.55 ಕ್ಕೆ ವಾಸ್ಕೋ ಡ ಗಾಮಾದಿಂದ ಹೊರಟು, ಸೆಪ್ಟೆಂಬರ್‌ 8ರಂದು ಮಂಗಳವಾರ 03.45ಕ್ಕೆ ವೇಲಂಕಣ್ಣಿಯನ್ನು ತಲುಪಲಿದೆ.

ಮರುಮಾರ್ಗದಲ್ಲಿ, ರೈಲು ಸಂಖ್ಯೆ 07366 ವೇಲಂಕಣ್ಣಿ – ವಾಸ್ಕೋ ಡ ಗಾಮಾ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್‌ 9ರಂದು ಬುಧವಾರ 1 ಗಂಟೆಗೆ ವೇಲಂಕಣ್ಣಿಯಿಂದ ಹೊರಟು, 10ರಂದು ಗುರುವಾರ 3 ಗಂಟೆಗೆ ವಾಸ್ಕೋ ಡ ಗಾಮಾ ತಲುಪಲಿದೆ.

ಮಾರ್ಗಮಧ್ಯೆ, ಎರಡೂ ರೈಲುಗಳು ಮಡಗಾಂವ್, ಸಾನ್ವೋರ್ಡೆಮ್ ಕರ್ಚೋರೆಮ್, ಕುಲೆಮ್, ಕ್ಯಾಸಲ್‌ರಾಕ್, ಲೊಂಡಾ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಎಸ್ಎಂಎಂ ಹಾವೇರಿ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಎಸ್ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ತಂಜಾವೂರು, ತಿರುವರೂರ್ ಮತ್ತು ನಾಗಪಟ್ಟಣಂ ನಿಲ್ದಾಣಗಳಲ್ಲಿ ನಿಲ್ಲಲಿವೆ. ರೈಲು ಸಂಖ್ಯೆ 07361/07362 ಚಿಕ್ಕಜಾಜೂರು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ, ಆದರೆ ರೈಲು ಸಂಖ್ಯೆ 07365/07366 ಚಿಕ್ಕಜಾಜೂರು ನಿಲ್ದಾಣದಲ್ಲಿ ನಿಲ್ಲುವುದಿಲ್ಲ.

ಈ ವಿಶೇಷ ರೈಲುಗಳು 6 ತ್ರಿ-ಟೈರ್ ಎಸಿ ಬೋಗಿಗಳು, 7 ಸ್ಲೀಪರ್ ಕ್ಲಾಸ್ ಬೋಗಿಗಳು, 4 ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿಗಳು, ದಿವ್ಯಾಂಗ ಸ್ನೇಹಿ ಒಳಗೊಂಡ 1 ದ್ವಿತೀಯ ದರ್ಜೆಯ ಲಗೇಜ್-ಕಮ್-ಬ್ರೇಕ್ ವ್ಯಾನ್ ಹಾಗೂ 1 ಲಗೇಜ್-ಕಮ್-ಗಾರ್ಡ್-ಕಮ್-ಜನರೇಟರ್ ಕಾರ್ ಸೇರಿದಂತೆ ಒಟ್ಟು 19 ಬೋಗಿಗಳು ಒಳಗೊಂಡಿರುತ್ತವೆ.

ರೈಲುಗಳ ವಿವರವಾದ ವೇಳಾಪಟ್ಟಿ ಮತ್ತು ಕಾಯ್ದಿರಿಸುವಿಕೆಗಾಗಿ (Reservation) ಪ್ರಯಾಣಿಕರು IRCTC ವೆಬ್‌ಸೈಟ್, ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ (NTES) ಗೆ ಭೇಟಿ ನೀಡಬಹುದು.

ಪೆಲೆಟ್ ಗನ್ ಬಳಕೆ ಅಸಾಧಾರಣ ಸಂದರ್ಭದಲ್ಲಷ್ಟೇ: ಸುಪ್ರೀಂ ಕೋರ್ಟ್

The post ವೇಲಂಕಣ್ಣಿ ಹಬ್ಬ: ವಾಸ್ಕೋ-ಡ-ಗಾಮ ಮತ್ತು ವೇಲಂಕಣ್ಣಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು appeared first on Samyukta Karnataka.

`ಹುಬ್ಬಳ್ಳಿ-ರಾಮೇಶ್ವರಂ’ ವಿಶೇಷ ರೈಲು ಸೇವೆ ವಿಸ್ತರಣೆ
ಹುಬ್ಬಳ್ಳಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ರೈಲ್ವೆ ಮಂಡಳಿಯು `ಹುಬ್ಬಳ್ಳಿ- ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್’ ರೈಲುಗಳ ಸೇವೆ ವಿಸ್ತರಿಸಿದೆ.

ವಿಸ್ತರಿಸಿದ ದಿನಾಂಕಗಳು ಹುಬ್ಬಳ್ಳಿ- ರಾಮೇಶ್ವರಂ ರೈಲು (ರೈಲು ಸಂಖ್ಯೆ- 07355) ಆಗಸ್ಟ್ 2 ರಿಂದ ಆಗಸ್ಟ್ 30ರವರೆಗೆ ಹಾಗೂ ರಾಮೇಶ್ವರಂ- ಹುಬ್ಬಳ್ಳಿ ಎಕ್ಸಪ್ರೆಸ್ ರೈಲು (ರೈಲು ಸಂಖ್ಯೆ- 07356) ಆಗಸ್ಟ್ 3 ರಿಂದ ಆಗಸ್ಟ್ 31 ರವರೆಗೆ ರೈಲುಗಳು ಮೊದಲಿನಂತೆಯೇ ಅದೇ ಸಮಯ, ಅದೇ ನಿಲುಗಡೆಗಳು ಮತ್ತು ಬೋಗಿಗಳೊಂದಿಗೆ ಹೆಚ್ಚುವರಿಯಾಗಿ 5 ಟ್ರಿಪ್ ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಅಮಿತ್ ಶಾ ಅವರೊಂದಿಗೆ ಸಹಜ ಭೇಟಿ: ಶೆಟ್ಟರ

The post `ಹುಬ್ಬಳ್ಳಿ-ರಾಮೇಶ್ವರಂ’ ವಿಶೇಷ ರೈಲು ಸೇವೆ ವಿಸ್ತರಣೆ appeared first on Samyukta Karnataka.

ಶಿಕ್ಷಣ ಸಚಿವರಾಗಿ ಪ್ರಲ್ಹಾದ್‌ ಜೋಶಿಗೆ ಹೆಚ್ಚುವರಿ ಹೊಣೆ
ನವದೆಹಲಿ: ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನೈತಿಕ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ, ಕೇಂದ್ರ ಸರ್ಕಾರವು ಬಿಜೆಪಿ ಹಿರಿಯ ನಾಯಕ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಪ್ರಲ್ಹಾದ್‌ ಜೋಶಿ ಅವರಿಗೆ ಕೇಂದ್ರ ಶಿಕ್ಷಣ ಸಚಿವರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ನೀಟ್‌-ಯುಜಿ ಅಕ್ರಮ ಪ್ರಕರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಈ ಬೆಳವಣಿಗೆಯ ನಡುವೆ ಧರ್ಮೇಂದ್ರ ಪ್ರಧಾನ್‌ ಅವರು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಪ್ರಸ್ತುತ ಪ್ರಲ್ಹಾದ್‌ ಜೋಶಿ ಅವರು ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆಗಳ ಜವಾಬ್ದಾರಿಯನ್ನೂ ಹೊಂದಿದ್ದಾರೆ. ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಅವರು, ಈ ಹಿಂದೆ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ನೀಟ್ ಅಕ್ರಮ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

The post ಶಿಕ್ಷಣ ಸಚಿವರಾಗಿ ಪ್ರಲ್ಹಾದ್‌ ಜೋಶಿಗೆ ಹೆಚ್ಚುವರಿ ಹೊಣೆ appeared first on Samyukta Karnataka.

ಬಳ್ಳಾರಿ-ಗುಂತಕಲ್‌ ರೈಲು ಮಾರ್ಗಕ್ಕೆ ಕೇಂದ್ರ ಅಸ್ತು: ₹‎1,264 ಕೋಟಿ ವೆಚ್ಚಕ್ಕೆ ಅನುಮೋದನೆ
ನವದೆಹಲಿ: ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವೆ ₹‎1,264 ಕೋಟಿ ವೆಚ್ಚದಲ್ಲಿ ಬಳ್ಳಾರಿ-ಗುಂತಕಲ್‌ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಸುಮಾರು 99 ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿದಂತಾಗುತ್ತಿದ್ದು, 7 ಲಕ್ಷ ಜನರಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ.

ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವೆ ಬಳ್ಳಾರಿ-ಗುಂತಕಲ್‌ ರೈಲು ಮಾರ್ಗ ನಿರ್ಮಾಣದಿಂದ ರೈಲು ಜಾಲ 46 ಕಿ.ಮೀ. ವಿಸ್ತರಣೆಯಾಗಲಿದ್ದು, ಸರಕು ಸಾಗಣೆ ಸಾಮರ್ಥ್ಯವೂ ಹೆಚ್ಚಲಿದೆ. ಇದರಿಂದ ಪ್ರಾದೇಶಿಕ ಸಂಪರ್ಕ ಮತ್ತಷ್ಟು ಬಲಗೊಳ್ಳುವ ಜತೆಗೆ ಸ್ಥಳೀಯವಾಗಿ ಆರ್ಥಿಕ ಬೆಳವಣಿಗೆಗೆ ಸಾಕಾರವಾಗಲಿದೆ ಎಂದಿದ್ದಾರೆ.

‎ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಪಾಲಿಗೆ ಹೆಚ್ಚು ಹೆಚ್ಚು ರೈಲ್ವೆ ಯೋಜನೆಗಳ ಕೊಡುಗೆ ನೀಡುತ್ತಲೇ ಬಂದಿದೆ. ಇದಕ್ಕಾಗಿ ಪ್ರಧಾನಿ ಅವರಿಗೆ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ವಿ.ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದಿದ್ದಾರೆ ಸಚಿವ ಪ್ರಲ್ಹಾದ ಜೋಶಿ.

The post ಬಳ್ಳಾರಿ-ಗುಂತಕಲ್‌ ರೈಲು ಮಾರ್ಗಕ್ಕೆ ಕೇಂದ್ರ ಅಸ್ತು: ₹‎1,264 ಕೋಟಿ ವೆಚ್ಚಕ್ಕೆ ಅನುಮೋದನೆ appeared first on Samyukta Karnataka.

ಮಕ್ಕಳಲ್ಲಿ ಹವ್ಯಕ ಆಚಾರ, ವಿಚಾರ ಬೆಳೆಸಿ, ಸಂಸ್ಕೃತಿ ಉಳಿಸಿ
ಹುಬ್ಬಳ್ಳಿ: ಹವ್ಯಕರು ತಮ್ಮ ಮಕ್ಕಳಿಗೆ ಹವ್ಯಕ ಆಚಾರ, ವಿಚಾರ ತಿಳಿಸಬೇಕು. ಸಂಸ್ಕಾರ, ಧರ್ಮದ ಮಹತ್ವವನ್ನು ತಿಳಿಸಬೇಕು. ಈ ಮೂಲಕ ನಮ್ಮ ಸಮುದಾಯ ಬಾಂಧವರು ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಜಿಎಸ್‌ಟಿ ವಿಭಾಗದ ನಿವೃತ್ತ ಆಯುಕ್ತ ಶ್ರೀಕೃಷ್ಣ ಹೆಗಡೆ ಹೇಳಿದರು.

ಹುಬ್ಬಳ್ಳಿ-ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದ ಗೋಕುಲ ರಸ್ತೆಯ ಹವ್ಯಕ ಭವನದಲ್ಲಿ ಹಮ್ಮಿಕೊಂಡಿದ್ದ ʻಹವ್ಯಕ ಹಬ್ಬʼ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಯುವಜನತೆ ಹಣದ ಬೆನ್ನತ್ತಿದ್ದಾರೆ. ಜ್ಞಾನವು ಹಣ ಗಳಿಕೆಗೆ ಮಾತ್ರ ಸೀಮಿತ ಆಗುತ್ತಿರುವುದು ಬೇಸರದ ಸಂಗತಿ. ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಪೋಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಜೀವನದಲ್ಲಿ ಕಷ್ಟಪಟ್ಟಾಗ ಮಾತ್ರ ಸಾಧನೆ ಸಾಧ್ಯ ಎಂದು ತಿಳಿಸಿದರು.

ಪುರಾಣ, ಮಹಾಕಾವ್ಯಗಳಲ್ಲಿ ಉಲ್ಲೇಖಿಸಿರುವ ಪ್ರಕಾರ ಬ್ರಾಹ್ಮಣ ಸಮುದಾಯ ಶ್ರೇಷ್ಠ ಸಮುದಾಯವಾಗಿದೆ. ದೇಶದಲ್ಲಿ ಹಿಂದುತ್ವ ಉಳಿದಿದ್ದರೆ ಅದಕ್ಕೆ ಬ್ರಾಹ್ಮಣರ ಕೊಡುಗೆ ಪ್ರಮುಖವಾಗಿದೆ. ಬ್ರಾಹ್ಮಣ ಸಮಾಜವನ್ನು ಟೀಕಿಸುವವರು ಹಲವರಿದ್ದರೂ, ಸಮಾಜದವರು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಹಣ ಸಂಪಾದನೆಯೇ ಜೀವನದ ಏಕೈಕ ಗುರಿಯಾಗಬಾರದು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಅವರು ಮಾತನಾಡಿ, ಹವ್ಯಕರು ಸಾಮರಸ್ಯಕ್ಕೆ ಹೆಸರಾಗಿದ್ದು, ಇತರ ಎಲ್ಲ ಸಮಾಜದವರೊಂದಿಗೆ ಬೆರೆತುಕೊಳ್ಳುವ ಗುಣ ಅವರಲ್ಲಿದೆ. ಹವ್ಯಕ ಸಮಾಜದ ಒಗ್ಗಟ್ಟು, ಶಿಸ್ತು, ಸಂಸ್ಕೃತಿ ಇತರ ಸಮುದಾಯಗಳಿಗೂ ಮಾದರಿ ಆಗಿದೆ ಎಂದರು.

ವ್ಯಕ್ತಿಗಿಂತ ಸಮಾಜ ದೊಡ್ಡದು. ಒಗ್ಗಟ್ಟಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಹವ್ಯಕ ಸಮಾಜವೇ ಸಾಕ್ಷಿ. ನಗರದಲ್ಲಿ ಕಳೆದ 44 ವರ್ಷಗಳಿಂದ ಹವ್ಯಕ ಹಬ್ಬದ ಹೆಸರಿನಲ್ಲಿ ಸಮಾಜದ ಸಂಘಟನೆಯ ಜೊತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಅಧಿಕಾರವು ಒಂದು ಸಾಧನ ಇದ್ದಂತೆ. ಬಿಜೆಪಿ ಪಕ್ಷವು ಗುರುತಿಸಿ ಸ್ಥಾನಮಾನ ನೀಡಿದ್ದು, ಈ ಅವಕಾಶ ಬಳಸಿಕೊಂಡು ಜನರ ಏಳಿಗೆಗೆ ಪ್ರಾಮಾಣಿಕ ಸೇವೆ ಮಾಡುತ್ತೇನೆ. ಹವ್ಯಕರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಸಮಾಜದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ ಎಂದು ಭರವಸೆ ನೀಡಿದರು.

ಸಾಧಕರಾದ ಧಾರವಾಡ ಕೆಇ ಬೋರ್ಡ್ ನಿವೃತ್ತ ಪ್ರಾಂಶುಪಾಲ ಜಿ.ಆರ್. ಭಟ್ಟ, ನಿವೃತ್ತ ಉಪನ್ಯಾಸಕಿ ಪ್ರೇಮಾ ಹೆಗಡೆ, ರೈಲ್ವೆ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಕಾರ್ತಿಕ್ ಹೆಗಡೆಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಫಲಿತಾಂಶ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

`ಗ್ಲಾನಿ’ ಕಾದಂಬರಿ ಬಿಡುಗಡೆ: ಹಿರಿಯ ಪತ್ರಕರ್ತ, ಸಾಹಿತಿ ಅರುಣಕುಮಾರ ಹಬ್ಬು ಅವರು ರಚಿಸಿದ ʻಗ್ಲಾನಿʼ ಕಾದಂಬರಿಯನ್ನು ಹುಳಗೋಳ ನಾಗಪತಿ ಹೆಗಡೆ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಕಾದಂಬರಿ ಕುರಿತು ಮಾತನಾಡಿದ ಅವರು ಒಂದೇ ಕುಟುಂಬದ ಎಲ್ಲರೂ ಸಾಹಿತಿಗಳೆಂಬ ದಾಖಲೆಗೆ ಒಳಗಾದ ಅರುಣಕುಮಾರ ಹಬ್ಬು ಅವರ ಗ್ಲಾನಿ ಕಾದಂಬರಿ 200 ಪುಟಗಳನ್ನು ಒಳಗೊಂಡಿದ್ದು, ಕಾದಂಬರಿ ಹಲವು ವಿಶೇಷತೆಗಳನ್ನು ಒಳಗೊಂಡಿದೆ ಎಂದರು.

ಗೋಕರ್ಣ ಗರ್ಭಗುಡಿ ಜಲಾವೃತ ತಡೆಗೆ ಗೇಟ್

The post ಮಕ್ಕಳಲ್ಲಿ ಹವ್ಯಕ ಆಚಾರ, ವಿಚಾರ ಬೆಳೆಸಿ, ಸಂಸ್ಕೃತಿ ಉಳಿಸಿ appeared first on Samyukta Karnataka.

ಶಾಶ್ವತ ನಿವಾಸ ಪ್ರಮಾಣಪತ್ರ ರಾಜ್ಯ ಸರ್ಕಾರ ವ್ಯಾಪ್ತಿಗೆ ಬರಲ್ಲ
ಹುಬ್ಬಳ್ಳಿ: ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಪೌರತ್ವ, ನಿವಾಸ ಸೇರಿದಂತೆ ಇಂತಹ ವಿಷಯಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿವೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯನ್ನೂ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೇ ಇದೆ. ಈ ಹಿಂದೆ ರಾಜ್ಯ ಸರ್ಕಾರಗಳು ಜಾತಿ ಸಮೀಕ್ಷೆ ನಡೆಸಿದ್ದರೂ ಅದಕ್ಕೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಅದೇ ರೀತಿ ರಾಜ್ಯ ಸರ್ಕಾರ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದೂ ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದರೆ ಅಂತಹ ಆದೇಶ ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿಚಾರದಲ್ಲಿ ರಾಜ್ಯ ಸರ್ಕಾರದ ತುಷ್ಟೀಕರಣ ನೀತಿಯೇ ಸಮಸ್ಯೆಗೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸೆಗೆ ಅವಕಾಶ ನೀಡಿದ ಪರಿಣಾಮ ಅನೇಕರು ದೇಶದೊಳಗೆ ಬಂದಿದ್ದಾರೆ. ಕರ್ನಾಟಕದಲ್ಲಿ ಅಕ್ರಮ ವಲಸಿಗರು ಇದ್ದರೆ ಅದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದು ರಾಜ್ಯದ ಗೃಹ ಇಲಾಖೆಯ ಜವಾಬ್ದಾರಿಯಾಗಿದೆ. ರಾಜ್ಯ ಗೃಹ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸದ ಕಾರಣ ಇಂತಹ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದರು.

ಮತಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ವಲಸಿಗರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ಪ್ರಯತ್ನ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು, “ಬಾಂಗ್ಲಾದೇಶಿ ನಾಗರಿಕರಿಗೆ ಪೌರತ್ವ ನೀಡಿಲ್ಲ” ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೇವಲ ಮೌಖಿಕ ಹೇಳಿಕೆ ನೀಡುವುದರಿಂದ ಸಾಲದು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರ ಗೃಹ ಸಚಿವರಿಗೆ ಅಧಿಕೃತ ಪತ್ರ ಬರೆದು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಲಿಖಿತ ರೂಪದಲ್ಲಿ ತಿಳಿಸಿದರೆ ಮಾತ್ರ ಅದನ್ನು ನಂಬಲು ಸಾಧ್ಯ ಎಂದು ಹೇಳಿದರು.

‘ಬ್ರಾಹ್ಮಣಿ ಸ್ಟೀಲ್ಸ್’ಗೆ ನೀಡಿದ್ದ ಜಮೀನು ವಾಪಸ್ ಪಡೆಯಲು ಬರಲ್ಲ

The post ಶಾಶ್ವತ ನಿವಾಸ ಪ್ರಮಾಣಪತ್ರ ರಾಜ್ಯ ಸರ್ಕಾರ ವ್ಯಾಪ್ತಿಗೆ ಬರಲ್ಲ appeared first on Samyukta Karnataka.

ಮದುವೆಯಾಗಿ ಐದೇ ತಿಂಗಳು: ಹೆಲ್ಮೆಟ್‌ನಿಂದ ಹೊಡೆದು ಪತ್ನಿ ಕೊಲೆ
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಹೆಲ್ಮೆಟ್‌ನಿಂದ ಪತಿಯೊಬ್ಬ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ನಾಗರತ್ನ ಹಳೆಮನಿ (19) ಕೊಲೆಯಾದ ಮಹಿಳೆ. ಪತಿ ಶಿವರಾಜ ಕೊಲೆ ಆರೋಪಿಯಾಗಿದ್ದಾನೆ. ತಾರಿಹಾಳದ ಶಿವರಾಜ ನವಲಗುಂದ ತಾಲೂಕಿನ ಇಬ್ರಾಹಿಂಪುರ ಗ್ರಾಮದ ನಾಗರತ್ನ ಅವರನ್ನು ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಮದುವೆಯಾಗಿದ್ದ.

ಬುಧವಾರ ಬೆಳಿಗ್ಗೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಅದು ವಿಕೋಪಕ್ಕೆ ಹೋಗಿ ಆತ ಹಲ್ಮೆಟ್‌ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಪತ್ನಿ ಕೆಳಗೆ ಬಿದ್ದು, ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ದಂಪತಿ ನಡುವೆ ಬೆಳಗ್ಗೆ ಜಗಳ ನಡೆದು ಪತಿಯೇ ಪತ್ನಿ ತಲೆಗೆ ಹೆಲ್ಮೆಟ್‌ನಿಂದ ಹೊಡೆದಿದ್ದಾನೆ ಇದರಿಂದ ಗಂಭೀರವಾಗಿ ಗಾಯಗೊಂಡ ಮಹಿಳೆ ಮೃತಪಟ್ಟಿದ್ದಾರೆ. ಮಹಿಳೆಯ ಪತಿ ಶಿವರಾಜನನ್ನು ವಶಕ್ಕೆ ಪಡೆಯಲಾಗಿದೆ. ಕೊಲೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಅಯೋಗ್ಯ 2 ಚಿತ್ರದ ಎರಡನೇ ಹಾಡು ಅನಾವರಣ

The post ಮದುವೆಯಾಗಿ ಐದೇ ತಿಂಗಳು: ಹೆಲ್ಮೆಟ್‌ನಿಂದ ಹೊಡೆದು ಪತ್ನಿ ಕೊಲೆ appeared first on Samyukta Karnataka.

ಹುಬ್ಬಳ್ಳಿಗೆ ಮೇಯರ್, ಧಾರವಾಡಕ್ಕೆ ಉಪ ಮೇಯರ್ ಸ್ಥಾನ ಫಿಕ್ಸ್!
ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಹು-ಧಾ ಮಹಾನಗರದ ಮೇಯರ್, ಉಪ ಮೇಯರ್ ಆಡಳಿತಾವಧಿ ಇಂದಿಗೆ ಕೊನೆಗೊಳ್ಳಲಿದ್ದು, 25ನೇ ಅವಧಿಗೆ ಮೇಯರ್, ಉಪಮೇಯರ್ ಆಯ್ಕೆಗೆ ಜು. 4ರಂದು ಬೆಳಗ್ಗೆ 9 ಗಂಟೆಗೆ ಮುಹೂರ್ತ ಫಿಕ್ಸ್ ಆಗಿದೆ.

ನೂತನ ಮೇಯರ್, ಉಪ ಮೇಯರ್ ಗಾದಿಗೇರಲು ಮುಸುಕಿನ ಗುದ್ದಾಟ ನಡೆದಿದ್ದು, ಮೇಯರ್ ಸ್ಥಾನಕ್ಕೆ ಚಂದ್ರಿಕಾ ಮೇಸ್ತ್ರಿ, ಉಪಮೇಯರ್ ಸ್ಥಾನಕ್ಕೆ ನೀಲವ್ವ ಅರವಳದ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ.

ಈ ಬಾರಿ ಮೇಯರ್ ಸ್ಥಾನ ಎಸ್‌ಸಿ ಮಹಿಳೆಗೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಆದರೆ ಆಡಳಿತಾರೂಢ ಬಿಜೆಪಿಯಲ್ಲಿ ಯಾವುದೇ ಎಸ್‌ಸಿ ಮಹಿಳಾ ಸದಸ್ಯರು ಇಲ್ಲದಿರುವುದು ತಲೆನೋವಿಗೆ ಕಾರಣವಾಗಿದೆ.

ಮೇಯರ್ ರೇಸ್‌ನಲ್ಲಿರುವ 56ನೇ ವಾರ್ಡ್‌ನ ಚಂದ್ರಿಕಾ ಮೇಸ್ತ್ರಿ ಹಾಗೂ 69ನೇ ವಾರ್ಡ್‌ನ ದುರ್ಗಮ್ಮ ಬಿಜವಾಡ ಇಬ್ಬರೂ ಎಸ್‌ಸಿ ವರ್ಗಕ್ಕೆ ಸೇರಿದವರಾದರೂ ಅವರು ಪಕ್ಷೇತರರು. ಇಬ್ಬರಿಗೂ ಬಿಜೆಪಿ ಟಿಕೆಟ್ ದೊರೆಯದ ಕಾರಣಕ್ಕೆ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಗೆಲುವಿನ ನಂತರ ಬಿಜೆಪಿಯನ್ನು ಬೆಂಬಲಿಸಿ, ಬಿಜೆಪಿಗರೆನ್ನಿಸಿದ್ದಾರೆ. ಹೀಗಾಗಿ ಪಕ್ಷೇತರರಿಗೆ ಮಣೆ ಹಾಕದೇ ಬಿಜೆಪಿಗೆ ವಿಧಿ ಇಲ್ಲದಂತಾಗಿದೆ.

ಹುಬ್ಬಳ್ಳಿಗೆ ಪಕ್ಕಾ: ಧಾರವಾಡದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳಾ ಸದಸ್ಯರು ಇಲ್ಲದಿರುವುದರಿಂದ ಹಾಗೂ 24ನೇ ಅವಧಿಯಲ್ಲಿ ಮೇಯರ್ ಸ್ಥಾನ ಧಾರವಾಡದ ಜ್ಯೋತಿ ಪಾಟೀಲ ಅವರ ಪಾಲಾಗಿದ್ದ ಕಾರಣ ಈ ಬಾರಿ ಹುಬ್ಬಳ್ಳಿಗೆ ಪಕ್ಕಾ ಆಗಿದೆ. ಅದರಲ್ಲೂ ದುರ್ಗಮ್ಮ ಬಿಜವಾಡ ಅವರು 23ನೇ ಅವಧಿಯಲ್ಲಿ ಉಪಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. ಪ್ರಸಕ್ತ ಸಾಲಿನ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಸದಸ್ಯರಾಗಿಯೂ ಅಧಿಕಾರ ಅನುಭವಿಸಿದ್ದರು. ಹೀಗಾಗಿ ಈವರೆಗೂ ಯಾವ ಅಧಿಕಾರವನ್ನೂ ಅನುಭವಿಸದ ಚಂದ್ರಿಕಾ ಮೇಸ್ತಿç ಅವರಿಗೆ ಮೇಯರ್ ಪಟ್ಟ ಕಟ್ಟಬಹುದು ಎಂದು ಬಿಜೆಪಿ ಪಾಳಯದಲ್ಲಿ ಅಂದಾಜಿಸಲಾಗುತ್ತಿದೆ.

ಲೆಕ್ಕಾಚಾರವೇ ಬೇರೆ: ಆದರೆ ನಾಯಕರ ಲೆಕ್ಕಾಚಾರವೇ ಬೇರೆ ಇದೆ. ಈ ಹಿಂದೆ 2012ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದಾಗ ಚಂದ್ರಿಕಾ ಮೇಸ್ತ್ರಿ ಹಾಗೂ ಅವರ ಪತಿ ವೆಂಕಟೇಶ ಮೇಸ್ತ್ರಿ ಬಿಜೆಪಿಯನ್ನು ಬಿಟ್ಟು ಕೆಜೆಪಿ ಸೇರಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷದ ವಿರುದ್ಧ ನಡೆದುಕೊಂಡಿದ್ದರು ಎಂಬ ಕಾರಣಕ್ಕೆ ಮೇಯರ್ ಹುದ್ದೆ ಚಂದ್ರಿಕಾ ಮೇಸ್ತ್ರಿ ಅವರ ಕೈ ತಪ್ಪಿ ದುರ್ಗಮ್ಮ ಬಿಜವಾಡ ಅವರಿಗೆ ಒಲಿದರೂ ಅಚ್ಚರಿ ಇಲ್ಲ.

ಇನ್ನು ಉಪಮೇಯರ್ ಸ್ಥಾನಕ್ಕೆ ಚಂದ್ರಕಲಾ ಕೊಟಬಾಗಿ, ಸುನೀತಾ ಮಾಳವದಕರ್, ಅನಿತಾ ಚಳಗೇರಿ ಹಾಗೂ ರತ್ನಾಬಾಯಿ ನಾಜರೆ ಅವರು ಹೆಸರು ರೇಸ್‌ನಲ್ಲಿದ್ದವು. ಆದರೆ ಇದು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಈ ಎಲ್ಲ ಮಹಿಳಾ ಸದಸ್ಯರೂ ಒಂದೊಂದು ಮೀಸಲಾತಿ ಹೊಂದಿದ್ದಾರೆ. ಈ ಪೈಕಿ ಯಾರನ್ನಾದರೂ ಉಪಮೇಯರ್ ಸ್ಥಾನಕ್ಕೇರಿಸಿದರೆ ಸಾಮಾನ್ಯ ವರ್ಗಕ್ಕೆ ಅನ್ಯಾಯವಾದಂತಾಗುತ್ತದೆ. ಹೀಗಾಗಿ ಸಾಮಾನ್ಯ ಮಹಿಳೆಗೇ ನೀಡಬೇಕು ಎಂಬುದು ಪಕ್ಷದ ವರಿಷ್ಠರ ಯೋಚನೆಯಾಗಿದೆಯಂತೆ. ವರಿಷ್ಠರ ತೀರ್ಮಾನದಂತೆ ಆಯ್ಕೆ ಪ್ರಕ್ರಿಯೆ ನಡೆದರೆ ಧಾರವಾಡದ ವಾರ್ಡ್ ನಂ. 26ರ ನೀಲವ್ವ ಅರವಳದ ಅವರಿಗೆ ಈ ಸ್ಥಾನ ಒಲಿದು ಬರುವ ಸಾಧ್ಯತೆ ಇದೆ.

ಕಾಂಗ್ರೆಸ್‌ನಲ್ಲೂ ಆಕಾಂಕ್ಷಿಗಳು: ಹು-ಧಾ ಮಹಾನಗರ ಪಾಲಿಕೆಯ ವಾರ್ಡ್ ನಂ. 20ರ ಸದಸ್ಯೆ ಕವಿತಾ ದಾನಪ್ಪ ಕಬ್ಬೇರ್ ಹಾಗೂ ಉಪ ಮಹಾಪೌರರ ಸ್ಥಾನಕ್ಕೆ ವಾರ್ಡ್ ನಂ. 6ರ ದಿಲ್‌ಶಾದ್ ಬೇಗಂ ನದಾಫ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಜು. 4ರಂದು ಬೆಳಗ್ಗೆ ನಾಮಪತ್ರ ಸಲ್ಲಿಕೆಯೊಂದಿಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದ್ದು, ನಾಮಪತ್ರ ಪರಿಶೀಲನೆ, ವಾಪಸ್ ಪಡೆಯುವ ಪ್ರಕ್ರಿಯೆಯ ಬಳಿಕ ಮಧ್ಯಾಹ್ನ 1 ಗಂಟೆಗೆ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಪ್ರಕ್ರಿಯೆ ನೆರವೇರಲಿದೆ. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.

ಹೆದ್ದಾರಿ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

The post ಹುಬ್ಬಳ್ಳಿಗೆ ಮೇಯರ್, ಧಾರವಾಡಕ್ಕೆ ಉಪ ಮೇಯರ್ ಸ್ಥಾನ ಫಿಕ್ಸ್! appeared first on Samyukta Karnataka.

ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ದುರ್ಮರಣ
ಹುಬ್ಬಳ್ಳಿ: ಒಳಚರಂಡಿ ಪೈಪ್ ಅಳವಡಿಕೆ ಕಾಮಗಾರಿ ವೇಳೆ ಮಣ್ಣು ಕುಸಿದು ಬಿದ್ದು ದಿನಗೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ದುರ್ಘಟನೆ ಗುರುವಾರ ಮಧ್ಯಾಹ್ನ ದೇಶಪಾಂಡೆ ನಗರದಲ್ಲಿರುವ ಗುಜರಾತ್ ಭವನದ ಸಮೀಪ ಇರುವ ಕೃಷ್ಣನಗರದಲ್ಲಿ ನಡೆದಿದೆ.

ಮೃತ ಕಾರ್ಮಿಕನನ್ನು ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಮಲ್ಲಪ್ಪ ಯಲ್ಲಪ್ಪ ಜೋಗಿನ (35) ಎಂದು ಗುರುತಿಸಲಾಗಿದೆ. ಪಾಲಿಕೆಯ ವತಿಯಿಂದ ಕೈಗೆತ್ತಿಕೊಂಡಿರುವ ಒಳಚರಂಡಿ ಪೈಪ್ ಅಳವಡಿಕೆ ಕಾಮಗಾರಿಯನ್ನು ಗುತ್ತಿಗೆದಾರ ಮಂಜುನಾಥ್ ಶಂಕರಪ್ಪ ಬಮ್ಮಿಗಟ್ಟಿ ನಿರ್ವಹಿಸುತ್ತಿದ್ದರು. ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆದ ಬಳಿಕ ದಿನಗೂಲಿ ಕಾರ್ಮಿಕರು ಪೈಪ್ ಅಳವಡಿಕೆ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಏಕಾಏಕಿ ಮಣ್ಣು ಕುಸಿದು ಬಿದ್ದ ಪರಿಣಾಮ ಮಲ್ಲಪ್ಪ ಜೋಗಿನ ಮಣ್ಣಿನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೆಎಂಸಿಆರ್‌ಐಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗೋಡಂಬಿ ಎಂದು ಔಡಲಬೀಜ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥ

The post ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ದುರ್ಮರಣ appeared first on Samyukta Karnataka.

ಬಸ್ ಕಿಟಕಿಯಿಂದ ಗುಟ್ಕಾ ಉಗಿಯುತ್ತಿದ್ದ ವಿದ್ಯಾರ್ಥಿಗೆ ಟಿಪ್ಪರ್ ಡಿಕ್ಕಿ, ಸ್ಥಳದಲ್ಲೇ ಸಾವು
ಧಾರವಾಡ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯೊಬ್ಬ ಬಾಯಲ್ಲಿ ಹಾಕಿಕೊಂಡ ಗುಟ್ಕಾವನ್ನು ಕಿಟಕಿಯಿಂದ ಉಗಿಯುತ್ತಿದ್ದ ವೇಳೆ ಎಂ ಸ್ಯಾಂಡ್ ಹೊತ್ತು ಸಾಗುತ್ತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದು ರುಂಡ ಕತ್ತರಿಸಿ ರಸ್ತೆಗೆ ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕುಂದಗೋಳದ ಹುಬ್ಬಳ್ಳಿ-ಲಕ್ಷ್ಮೇಶ್ವರ ಮುಖ್ಯ ರಸ್ತೆಯ ಕೊಪ್ಪದಕೆರೆಯ ಬಳಿ ಬುಧವಾರ ಸಂಜೆ ನಡೆದಿದೆ.

ಶಿರೂರ ಗ್ರಾಮದ ನಿವಾಸಿ ಐಟಿಐ ವಿದ್ಯಾರ್ಥಿ ಫಕ್ಕೀರೇಶ ಚನ್ನಯ್ಯ ಮುತ್ತಳ್ಳಿಮಠ (17) ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಲಕ್ಷ್ಮೇಶ್ವರ ಡಿಪೋಗೆ ಸೇರಿದ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಫಕ್ಕೀರೇಶ ಗುಟ್ಕಾ ಉಗಿಯಲು ಕಿಟಕಿಯಿಂದ ಇಣುಕಿದ್ದಾನೆ. ಈ ಸಂದರ್ಭದಲ್ಲಿ ಎದುರಿನಿಂದ ಎಂ-ಸ್ಯಾಂಡ್ ತುಂಬಿಕೊಂಡು ಬಂದ ಟಿಪ್ಪರ್ ಲಾರಿ ಫಕ್ಕೀರೇಶನ ತಲೆಗೆ ಬಡಿದು ರುಂಡ ಕತ್ತರಿಸಿ ರಸ್ತೆಗೆ ಬಿದ್ದಿದೆ.

ಆತ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾನೆ. ಅಪಘಾತ ನಡೆದ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಈ ದಾರುಣ ದೃಶ್ಯ ಕಂಡು ಕಂಬನಿ ಮಿಡಿದರು.

ವಿಷಯ ತಿಳಿಯುತ್ತಿದ್ದಂತೆ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು. ಕುಂದಗೋಳ ಪೊಲೀಸ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೃಷ್ಣಾ ನದಿಗೆ ಉರುಳಿ ಬಿದ್ದ ಟಿಪ್ಪರ್: ಚಾಲಕ ಸಾವು

The post ಬಸ್ ಕಿಟಕಿಯಿಂದ ಗುಟ್ಕಾ ಉಗಿಯುತ್ತಿದ್ದ ವಿದ್ಯಾರ್ಥಿಗೆ ಟಿಪ್ಪರ್ ಡಿಕ್ಕಿ, ಸ್ಥಳದಲ್ಲೇ ಸಾವು appeared first on Samyukta Karnataka.