Health-boosting Archives - Samyukta Karnataka

ಕೋವಿಡ್ ಬಳಿಕ ಮತ್ತೊಂದು ಆತಂಕ: ಎಬೋಲಾ ವೈರಸ್ ಅಬ್ಬರ
ನವ ದೆಹಲಿ: ಜಗತ್ತು ಕೋವಿಡ್-19 ಮಹಾಮಾರಿಯ ಭೀಕರ ಅನುಭವದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಮತ್ತೊಂದು ಮಾರಕ ವೈರಸ್ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ.

ಆಫ್ರಿಕಾ ಖಂಡದ ಹಲವು ಭಾಗಗಳಲ್ಲಿ ವೇಗವಾಗಿ ಹರಡುತ್ತಿರುವ ಎಬೋಲಾ ವೈರಸ್ (Ebola Virus) ಸೋಂಕು ಇದೀಗ ವಿಶ್ವದ ಆರೋಗ್ಯ ವಲಯದ ಗಮನ ಸೆಳೆದಿದ್ದು, (WHO) ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ (PHEIC) ಘೋಷಿಸಿದೆ.

ಪ್ರಸ್ತುತ ಹರಡುತ್ತಿರುವ ಎಬೋಲಾ ವೈರಸ್‌ನ ಬುಂಡಿಬುಗ್ಯೊ ತಳಿಗೆ (Bundibugyo Strain) ಯಾವುದೇ ಅಧಿಕೃತ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಸೋಂಕಿನ ತೀವ್ರತೆ ಹೆಚ್ಚಿದರೆ ಸಾವಿನ ಪ್ರಮಾಣವೂ ಅತ್ಯಂತ ಹೆಚ್ಚಾಗಿರುವುದು ಆತಂಕ ಹೆಚ್ಚಿಸಿದೆ.

ಆರೋಗ್ಯ ತಜ್ಞರ ಪ್ರಕಾರ, ಈ ವೈರಸ್ ಕೋವಿಡ್‌ನಂತೆ ಗಾಳಿಯಲ್ಲಿ ವೇಗವಾಗಿ ಹರಡುವುದಿಲ್ಲ. ಎಬೋಲಾ ಮುಖ್ಯವಾಗಿ ಫ್ರೂಟ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯ ರಕ್ತ ಅಥವಾ ದೇಹದ ದ್ರವಗಳ ನೇರ ಸಂಪರ್ಕದಿಂದ ಮಾತ್ರ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.

ಸದ್ಯಕ್ಕೆ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಆದರೆ ಕಾಂಗೋ, ಉಗಾಂಡ ಸೇರಿದಂತೆ ಆಫ್ರಿಕಾ ದೇಶಗಳಿಂದ ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ವಿಶೇಷ ನಿಗಾ ವಹಿಸುವ ಅಗತ್ಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರೋಗ್ಯ ತಪಾಸಣೆ, ಸ್ಕ್ರೀನಿಂಗ್ ಹಾಗೂ ಅಗತ್ಯವಿದ್ದಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡುವುದು ಅತ್ಯಂತ ಮುಖ್ಯ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಸಾರ್ವಜನಿಕರು ಸಹ ಸದ್ಯಕ್ಕೆ ಆಫ್ರಿಕಾ ದೇಶಗಳಿಗೆ ಅನಗತ್ಯ ಪ್ರವಾಸ ತಪ್ಪಿಸುವಂತೆ ಸಲಹೆ ನೀಡಲಾಗಿದೆ.

ಎಬೋಲಾ ಸೋಂಕಿನ ಆರಂಭಿಕ ಲಕ್ಷಣಗಳಲ್ಲಿ ತೀವ್ರ ಜ್ವರ, ತಲೆನೋವು, ಮೈಕೈ ನೋವು, ವಾಂತಿ ಹಾಗೂ ಭೇದಿ ಪ್ರಮುಖವಾಗಿವೆ. ಸೋಂಕು ಗಂಭೀರ ಹಂತ ತಲುಪಿದರೆ ಲಿವರ್ ಮತ್ತು ಶ್ವಾಸಕೋಶ ವೈಫಲ್ಯ ಉಂಟಾಗಿ ಜೀವಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ಆರೋಗ್ಯ ಇಲಾಖೆ ಹಾಗೂ ಕೇಂದ್ರ ಸರ್ಕಾರವು ಪರಿಸ್ಥಿತಿಯನ್ನು ನಿಗಾ ವಹಿಸಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್ ಅನುಭವದ ನಂತರ ಜಾಗತಿಕ ಆರೋಗ್ಯ ವ್ಯವಸ್ಥೆಗಳು ಈಗಾಗಲೇ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿರುವುದರಿಂದ, ಸೋಂಕಿನ ವ್ಯಾಪಕ ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನಗಳು ಆರಂಭಗೊಂಡಿವೆ.

ವಿಶ್ವ ನಾಯಕರಿಗೆ ಭಾರತೀಯ ಪರಂಪರೆಯ ಉಡುಗೊರೆ ನೀಡಿದ ಮೋದಿ

The post ಕೋವಿಡ್ ಬಳಿಕ ಮತ್ತೊಂದು ಆತಂಕ: ಎಬೋಲಾ ವೈರಸ್ ಅಬ್ಬರ appeared first on Samyukta Karnataka.

ಜಿಮ್, ಡಯಟ್ ಇದ್ದರೂ ಕಾಡಿದ ವಿಧಿ: ದಿಲೀಪ್ ರಾಜ್ ನಿಧನ; ಫಿಟ್‌ನೆಸ್ ಪ್ರೇಮಿಗಳಿಗೆ ಇದೊಂದು ಎಚ್ಚರಿಕೆಯ ಕರೆ!
ಬೆಂಗಳೂರು: ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅಕಾಲಿಕ ನಿಧನವು ಇಡೀ ಕರ್ನಾಟಕವನ್ನು ದಿಗ್ಭ್ರಮೆಗೊಳಿಸಿದೆ. 47 ವರ್ಷದ ದಿಲೀಪ್ ರಾಜ್ ಅತ್ಯಂತ ಶಿಸ್ತಿನ ಜೀವನ ನಡೆಸುತ್ತಿದ್ದರು. ಪ್ರತಿನಿತ್ಯ ಜಿಮ್, ಕಟ್ಟುನಿಟ್ಟಿನ ಆಹಾರ ಕ್ರಮ (ಡಯಟ್) ಮತ್ತು ಸದಾ ಚಟುವಟಿಕೆಯಿಂದ ಇರುತ್ತಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾಗಿರುವುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದು ಕೇವಲ ಒಬ್ಬ ನಟನ ಸಾವಲ್ಲ, ಬದಲಿಗೆ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ಎದುರಾಗಿರುವ ದೊಡ್ಡ ಪ್ರಶ್ನೆಯಾಗಿದೆ.

ಸರಣಿ ಸಾವುಗಳ ಆಘಾತ: ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಘಟನೆಗಳು ಹೊಸದೇನಲ್ಲ. ಇದಕ್ಕೂ ಮುನ್ನ ಅತ್ಯಂತ ಫಿಟ್ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಯುವ ನಟ ಚಿರಂಜೀವಿ ಸರ್ಜಾ ಹಾಗೂ ಬಾಡಿ ಬಿಲ್ಡರ್ ರಾಕೇಶ್ ಪೂಜಾರಿ ಇವರುಗಳ ಸಾವು ಕೂಡ ಇದೇ ಮಾದರಿಯಲ್ಲೇ ಸಂಭವಿಸಿತ್ತು. ಇವರೆಲ್ಲರೂ ದೈಹಿಕ ಕಸರತ್ತು ಮತ್ತು ಫಿಟ್‌ನೆಸ್‌ಗೆ ಹೆಸರಾದವರು. ಆದ್ರು ಇಷ್ಟು ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಸಂಭವಿಸುತ್ತಿರುವುದು ದೈಹಿಕ ಕಸರತ್ತು ಮಾತ್ರವೇ ದೀರ್ಘಾಯುಷ್ಯಕ್ಕೆ ಗ್ಯಾರಂಟಿ ಅಲ್ಲವೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಮುಖ್ಯ ಕಾರಣಗಳೇನು?: ವೈದ್ಯಕೀಯ ತಜ್ಞರ ಪ್ರಕಾರ, ಅತಿಯಾದ ದೈಹಿಕ ಶ್ರಮ (Extreme Workout) ಮತ್ತು ಮಾನಸಿಕ ಒತ್ತಡವು ಹೃದಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಚಿತ್ರರಂಗದಲ್ಲಿ ಇರುವವರಿಗೆ ಸಮಯಕ್ಕೆ ಸರಿಯಾದ ನಿದ್ದೆ ಇಲ್ಲದಿರುವುದು, ಸತತ ಕೆಲಸದ ಒತ್ತಡ ಮತ್ತು ಆಂತರಿಕವಾಗಿರುವ ಹೃದಯದ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಪ್ರಾಣಾಪಾಯಕ್ಕೆ ಕಾರಣವಾಗಬಹುದು. ದಿಲೀಪ್ ರಾಜ್ ವಿಷಯದಲ್ಲಿ ತಿಳಿದುಬಂದಂತೆ, ಅವರಿಗೆ ಇತ್ತೀಚೆಗೆ ಎದೆನೋವು ಕಾಣಿಸಿಕೊಳ್ಳುತ್ತಿತ್ತು. ಇಂತಹ ಸಣ್ಣ ಲಕ್ಷಣಗಳನ್ನು ಕೇವಲ ಗ್ಯಾಸ್ಟ್ರಿಕ್ ಅಥವಾ ಸಾಮಾನ್ಯ ನೋವು ಎಂದು ನಿರ್ಲಕ್ಷಿಸುವುದು ಅಪಾಯಕಾರಿ ಎನ್ನುತ್ತಾರೆ ವೈದ್ಯರು.

ಓದುಗರ ಗಮನಕ್ಕೆ: ನಟರು ಅಥವಾ ಸಾಮಾನ್ಯ ಜನರು ಜಿಮ್‌ಗೆ ಹೋಗುವುದು ಒಳ್ಳೆಯದೇ ಆದ್ರೂ, ತಮ್ಮ ವಯಸ್ಸು ಮತ್ತು ದೇಹದ ಸಾಮರ್ಥ್ಯಕ್ಕೆ ತಕ್ಕಂತೆ ವ್ಯಾಯಾಮ ಮಾಡುವುದು ಮುಖ್ಯ. ನಿಯಮಿತವಾಗಿ ಸಂಪೂರ್ಣ ದೇಹದ ತಪಾಸಣೆ (Full Body Checkup) ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ದಿಲೀಪ್ ರಾಜ್ ವೈದ್ಯರ ಅಪಾಯಿಂಟ್‌ಮೆಂಟ್ ಪಡೆದಿದ್ದರೂ, ಅಲ್ಲಿಗೆ ತಲುಪುವ ಮೊದಲೇ ವಿಧಿ ಆಟವಾಡಿದೆ. ಶಿಸ್ತಿನ ಜೀವನದ ಜೊತೆಗೆ ದೇಹ ನೀಡುವ ಸಣ್ಣ ಸಣ್ಣ ಮುನ್ಸೂಚನೆಗಳನ್ನು ಗಮನಿಸುವುದು ಪ್ರಾಣ ಉಳಿಸಿಕೊಳ್ಳಲು ಇರುವ ಏಕೈಕ ದಾರಿ ಎಂಬುದನ್ನು ಈ ಘಟನೆಗಳು ನೆನಪಿಸುತ್ತಿವೆ.

The post ಜಿಮ್, ಡಯಟ್ ಇದ್ದರೂ ಕಾಡಿದ ವಿಧಿ: ದಿಲೀಪ್ ರಾಜ್ ನಿಧನ; ಫಿಟ್‌ನೆಸ್ ಪ್ರೇಮಿಗಳಿಗೆ ಇದೊಂದು ಎಚ್ಚರಿಕೆಯ ಕರೆ! appeared first on Samyukta Karnataka.

ಬೂದು ಕುಂಬಳಕಾಯಿ ರಸ: ಅಸಿಡಿಟಿ ಮತ್ತು ತೂಕ ಇಳಿಕೆಗೆ ಸಂಜೀವಿನಿ; ತಯಾರಿಸುವುದು ಹೇಗೆ? ಇಲ್ಲಿದೆ ಡಿಟೇಲ್ಸ್
ಬೂದು ಕುಂಬಳಕಾಯಿಯು ಕೇವಲ ಅಡುಗೆಗೆ ಸೀಮಿತವಾಗದೆ, ಉತ್ತಮ ಆರೋಗ್ಯದ ಗಣಿಯಾಗಿ ಗುರುತಿಸಿಕೊಂಡಿದೆ. ಆಯುರ್ವೇದದಲ್ಲಿ ಇದಕ್ಕೆ ‘ಕೂಷ್ಮಾಂಡ’ಎಂಬ ಹೆಸರಿದೆ. ಪ್ರತಿದಿನ ಇದರ ರಸ ಸೇವನೆ ಮಾಡುವುದರಿಂದ ದೇಹಕ್ಕೆ ಅದ್ಭುತ ಪ್ರಯೋಜನಗಳು ದೊರೆಯುತ್ತವೆ. ಬೂದು ಕುಂಬಳಕಾಯಿ ರಸದ ಲಾಭಗಳು, ತಯಾರಿಸುವ ವಿಧಾನ ಮತ್ತು ಮುನ್ನೆಚ್ಚರಿಕೆಗಳ ಕುರಿತಾದ ಇನ್ನಷ್ಟೂ ಮಾಹಿತಿ ಇಲ್ಲಿದೆ.

ಆರೋಗ್ಯದ ಮೇಲೆ ಬಿರುವ ಪ್ರಭಾವ: ಬೂದು ಕುಂಬಳಕಾಯಿ ರಸವು ದೇಹವನ್ನು ತಂಪು ಮಾಡುವ ಗುಣವನ್ನು ಹೊಂದಿದೆ. ಇದು ಅಸಿಡಿಟಿ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯ ಹುಣ್ಣು (Ulcer) ನಿವಾರಣೆಗೆ ರಾಮಬಾಣ. ಇದರಲ್ಲಿ ಹೆಚ್ಚಿನ ಪ್ರಮಾಣದ ನಾರು ಇರುವುದರಿಂದ ಮಲಬದ್ಧತೆ ದೂರವಾಗುತ್ತದೆ. ತೂಕ ಇಳಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆ, ಏಕೆಂದರೆ ಇದರಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನಂಶವಿದೆ. ಅಷ್ಟೇ ಅಲ್ಲದೆ ಇದು ರಕ್ತಶುದ್ಧಿ ಮಾಡಲು ಮತ್ತು ನರಮಂಡಲದ ಆರೋಗ್ಯವನ್ನು ವೃದ್ಧಿಸಿ ನೆನಪಿನ ಶಕ್ತಿ ಹೆಚ್ಚಿಸಲು ಸಹಯ ಮಾಡುತ್ತದೆ.

ತಯಾರಿಸುವ ಸುಲಭ ವಿಧಾನ: ಬೂದು ಕುಂಬಳಕಾಯಿ ರಸವನ್ನು ತಯಾರಿಸುವುದು ಬಹಳ ಸರಳ. ಮೊದಲು ಕುಂಬಳಕಾಯಿಯ ಸಿಪ್ಪೆ ಮತ್ತು ಒಳಗಿನ ಬೀಜಗಳನ್ನು ತೆಗೆದು ಸಣ್ಣ ಚೂರುಗಳನ್ನಾಗಿ ಮಾಡಿಕೊಳ್ಳಬೇಕು. ಈ ಚೂರುಗಳನ್ನು ಮಿಕ್ಸರ್‌ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಸೋಸುವ ಬಟ್ಟೆ ಅಥವಾ ಜರಡಿಯ ಸಹಾಯದಿಂದ ರಸವನ್ನು ಬೇರ್ಪಡಿಸಿ. ಇದಕ್ಕೆ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸುವ ಅಗತ್ಯವಿಲ್ಲ. ರುಚಿಗಾಗಿ ಸ್ವಲ್ಪ ನಿಂಬೆ ರಸ ಅಥವಾ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ.

ಓದುಗರ ಗಮನಕ್ಕೆ: ಇದರಿಂದ ಅತಿಯಾದ ಪ್ರಯೋಜನಗಳಿದ್ದರೂ ಕೆಲವು ಮುನ್ನೆಚ್ಚರಿಕೆಗಳು ಅಗತ್ಯ. ಇದು ಅತ್ಯಂತ ತಂಪು ಪದಾರ್ಥವಾಗಿರುವುದರಿಂದ, ಸದಾ ಶೀತ, ಕೆಮ್ಮು ಅಥವಾ ಅಸ್ತಮಾ ಸಮಸ್ಯೆ ಇರುವವರು ಇದನ್ನು ಸೇವಿಸುವಾಗ ಎಚ್ಚರಿಕೆ ವಹಿಸಬೇಕು (ಸ್ವಲ್ಪ ಕಾಳುಮೆಣಸಿನ ಪುಡಿ ಸೇರಿಸುವುದು ಉತ್ತಮ). ಮಳೆಗಾಲ ಅಥವಾ ಚಳಿಗಾಲದಲ್ಲಿ ಇದರ ಸೇವನೆ ಮಿತವಾಗಿರಲಿ. ಮಧುಮೇಹಿಗಳು ಮತ್ತು ಕಿಡ್ನಿ ಸಮಸ್ಯೆ ಇರುವವರು ಇದನ್ನು ದಿನನಿತ್ಯ ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಒಟ್ಟಾರೆ.. ನೈಸರ್ಗಿಕ ಶಕ್ತಿ ವರ್ಧಕವಾಗಿರುವ ಬೂದು ಕುಂಬಳಕಾಯಿ ರಸವನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಆರೋಗ್ಯಪೂರ್ಣ ಜೀವನ ನಿಮ್ಮದಾಗುತ್ತದೆ.

The post ಬೂದು ಕುಂಬಳಕಾಯಿ ರಸ: ಅಸಿಡಿಟಿ ಮತ್ತು ತೂಕ ಇಳಿಕೆಗೆ ಸಂಜೀವಿನಿ; ತಯಾರಿಸುವುದು ಹೇಗೆ? ಇಲ್ಲಿದೆ ಡಿಟೇಲ್ಸ್ appeared first on Samyukta Karnataka.

ಬಾಯಿ ಹುಣ್ಣಿಗೆ ಅಡುಗೆಮನೆಯಲ್ಲೇ ಇದೆ ಮದ್ದು: ನೋವು ನಿವಾರಣೆಗೆ ಇಲ್ಲಿವೆ ಸರಳ ಟಿಪ್ಸ್!
ಬಾಯಿ ಹುಣ್ಣು ಅಥವಾ ‘ಮೌತ್ ಅಲ್ಸರ್’ ಸಾಮಾನ್ಯ ಸಮಸ್ಯೆಯಾದರೂ, ಅದು ನೀಡುವ ನೋವು ಮಾತ್ರ ಅಸಹನೀಯ. ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಅಥವಾ ದೇಹದಲ್ಲಿ ಅತಿಯಾದ ಉಷ್ಣತೆ ಉಂಟಾದಾಗ ಬಾಯಿ ಹುಣ್ಣು ಕಾಣಿಸಿಕೊಳ್ಳುವುದು ಸಹಜ. ಈ ಕುರಿತು ಪರಿಣಾಮಕಾರಿ ಮನೆಮದ್ದುಗಳು ಮತ್ತು ಆಹಾರದ ಕ್ರಮಗಳ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.

ಬಾಯಿ ಹುಣ್ಣು ತಡೆಗಟ್ಟಲು ಆಹಾರದ ಶಿಸ್ತು: ಬಾಯಿ ಹುಣ್ಣು ನಿವಾರಣೆಗೆ ಮೊದಲ ಹಂತವೆಂದರೆ ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಿಕೊಳ್ಳುವುದು. ಮಸಾಲೆಯುಕ್ತ, ಅತಿಯಾದ ಎಣ್ಣೆ ಪದಾರ್ಥ ಹಾಗೂ ಜೀರ್ಣಕ್ಕೆ ಕಷ್ಟವಾಗುವ ಆಹಾರಗಳಿಂದ ದೂರವಿರುವುದು ಉತ್ತಮ. ಬದಲಾಗಿ ನಾರುಯುಕ್ತ ಹಸಿ ತರಕಾರಿಗಳು ಹಾಗೂ ವಿಟಮಿನ್ ಬಿ ಮತ್ತು ಸಿ ಸಮೃದ್ಧವಾಗಿರುವ ಪಾಲಕ್, ಮೊಳಕೆಯೊಡೆದ ಧಾನ್ಯಗಳು, ಪೇರಲ, ಕಿತ್ತಳೆ ಮತ್ತು ನೆಲ್ಲಿಕಾಯಿಯನ್ನು ಸೇವಿಸಬೇಕು. ಹೊಟ್ಟೆಯ ಮಲಬದ್ಧತೆಯಿಂದ ಬಾಯಿ ಹುಣ್ಣು ಉಂಟಾಗುವ ಸಾಧ್ಯತೆ ಹೆಚ್ಚಿರುವುದರಿಂದ, ಮಲಬದ್ಧತೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು.

ನಿಮ್ಮ ಅಡುಗೆಮನೆಯಲ್ಲಿರುವ ವಸ್ತುಗಳೇ ಬಾಯಿ ಹುಣ್ಣಿಗೆ ರಾಮಬಾಣವಾಗಬಲ್ಲವು:
ಅರಿಶಿನದ ಬಳಕೆ: ಒಂದು ಲೀಟರ್ ನೀರಿನಲ್ಲಿ ಅರಿಶಿನವನ್ನು ಕುದಿಸಿ, ಆ ನೀರಿನಿಂದ ದಿನಕ್ಕೆ ಎರಡು ಬಾರಿ ಬಾಯಿ ಮುಕ್ಕಳಿಸುವುದರಿಂದ ಹುಣ್ಣುಗಳು ಬೇಗನೆ ಒಣಗುತ್ತವೆ.

ಜೇನುತುಪ್ಪ ಮತ್ತು ತುಪ್ಪ: ರಾತ್ರಿ ಮಲಗುವ ಮುನ್ನ ಹುಣ್ಣುಗಳ ಮೇಲೆ ಶುದ್ಧ ತುಪ್ಪ ಅಥವಾ ಜೇನುತುಪ್ಪ ಹಚ್ಚುವುದು ಉತ್ತಮ. ತುಪ್ಪಕ್ಕೆ ಸ್ವಲ್ಪ ಕರ್ಪೂರ ಬೆರೆಸಿ ಹಚ್ಚುವುದರಿಂದ ನೋವು ಬೇಗನೆ ಕಡಿಮೆಯಾಗುತ್ತದೆ.

ಕೊತ್ತಂಬರಿ ಮತ್ತು ಎಲೆಗಳ ಬಳಕೆ: ಹಸಿ ಕೊತ್ತಂಬರಿ ಎಲೆಗಳ ರಸ ಹಚ್ಚುವುದು ಅಥವಾ ಕೊತ್ತಂಬರಿ ಬೀಜಗಳನ್ನು ಕುದಿಸಿ ಸೋಸಿದ ನೀರಿನಿಂದ ಬಾಯಿ ತೊಳೆಯುವುದು ಉತ್ತಮ ಪರಿಹಾರ. ಮಲ್ಲಿಗೆ ಅಥವಾ ಪೇರಲ ಎಲೆಗಳನ್ನು ಅಗಿಯುವುದರಿಂದಲೂ ಗಂಟಲು ಮತ್ತು ನಾಲಿಗೆಯ ಹುಣ್ಣುಗಳು ಶಮನವಾಗುತ್ತವೆ.

ತಕ್ಷಣದ ಪರಿಹಾರಕ್ಕಾಗಿ ಸಲಹೆಗಳು: ಬಾಯಿ ಹುಣ್ಣು ಅತಿಯಾಗಿ ಕಾಡುತ್ತಿದ್ದರೆ ಉಪ್ಪು ಅಥವಾ ಅಡುಗೆ ಸೋಡಾವನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿ ಹುಣ್ಣಿನ ಮೇಲೆ ಹಚ್ಚಬಹುದು. ಇದು ಹುಣ್ಣಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ ಮತ್ತು ಚೀಸ್ ಸೇವನೆಯು ದೇಹಕ್ಕೆ ತಂಪು ನೀಡಿ ಹುಣ್ಣನ್ನು ಗುಣಪಡಿಸುತ್ತದೆ. ವಿಶೇಷವಾಗಿ, ಮೊಸರಿನೊಂದಿಗೆ ಮಾಗಿದ ಬಾಳೆಹಣ್ಣು ತಿನ್ನುವುದು ಮತ್ತು ದಿನಕ್ಕೊಂದು ಟೊಮೆಟೊ ಸೇವಿಸುವುದು ಉತ್ತಮ ಫಲಿತಾಂಶ ನೀಡುತ್ತದೆ.

ಓದುಗರ ಗಮನಕ್ಕೆ: ಹೈಡ್ರೋಜನ್ ಪೆರಾಕ್ಸೈಡ್ ಬಳಸುವಾಗ ಜಾಗರೂಕರಾಗಿರಿ, ಇದನ್ನು ಸಮಾನ ಪ್ರಮಾಣದ ನೀರಿನೊಂದಿಗೆ ಬೆರೆಸಿ ಮಾತ್ರ ಬಳಸಬೇಕು ಮತ್ತು ಯಾವುದೇ ಕಾರಣಕ್ಕೂ ನುಂಗಬಾರದು. ಬಾಯಿ ಹುಣ್ಣು ಒಂದು ವಾರಕ್ಕಿಂತ ಹೆಚ್ಚು ಕಾಲ ಮುಂದುವರಿದರೆ ಅಥವಾ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಕಡ್ಡಾಯ.

The post ಬಾಯಿ ಹುಣ್ಣಿಗೆ ಅಡುಗೆಮನೆಯಲ್ಲೇ ಇದೆ ಮದ್ದು: ನೋವು ನಿವಾರಣೆಗೆ ಇಲ್ಲಿವೆ ಸರಳ ಟಿಪ್ಸ್! appeared first on Samyukta Karnataka.

ಬೇಸಿಗೆಯ ಬಿಸಿಲಿಗೆ ತಂಪು ನೀಡುವ ಅಮೃತ: ಆರೋಗ್ಯವರ್ಧಕ ‘ಮಾವಿನಕಾಯಿ ಮಜ್ಜಿಗೆ’
ಬೆಂಗಳೂರು: ರಾಜ್ಯಾದ್ಯಂತ ಏರುತ್ತಿರುವ ತಾಪಮಾನದಿಂದಾಗಿ ಜನರು ಹೈರಾಣಾಗುತ್ತಿದ್ದು, ದೇಹವನ್ನು ತಂಪಾಗಿರಿಸಿಕೊಳ್ಳಲು ನೈಸರ್ಗಿಕ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ಕೃತಕ ಬಣ್ಣ ಮತ್ತು ಸಕ್ಕರೆ ಮಿಶ್ರಿತ ತಂಪು ಪಾನೀಯಗಳಿಗಿಂತ ಮನೆಯಲ್ಲಿಯೇ ತಯಾರಿಸುವ ಸಾಂಪ್ರದಾಯಿಕ ‘ಮಾವಿನಕಾಯಿ ಮಜ್ಜಿಗೆ’ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಹಸಿ ಮಾವಿನಕಾಯಿ, ಮೊಸರು ಮತ್ತು ಸಾಂಬಾರ ಪದಾರ್ಥಗಳ ಅಪೂರ್ವ ಸಮ್ಮಿಲನವಿರುವ ಈ ಪಾನೀಯವು ಕೇವಲ ಬಾಯಾರಿಕೆ ನೀಗಿಸುವುದು ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಒಂದು ಅತ್ಯುತ್ತಮ ಔಷಧಿಯಂತೆ ಕೆಲಸ ಮಾಡುತ್ತದೆ.

ತಯಾರಿಸಲು ಬೇಕಾದ ಸಾಮಾಗ್ರಿ: ಈ ವಿಶೇಷ ಮಜ್ಜಿಗೆಯನ್ನು ತಯಾರಿಸುವುದು ಬಹಳ ಸುಲಭ. ಅರ್ಧ ಮಾವಿನಕಾಯಿಯ ತುರಿ, ಒಂದು ಬಟ್ಟಲು ಕಾಯಿತುರಿ, ಜೀರಿಗೆ, ಸ್ವಲ್ಪ ಇಂಗು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಒಂದು ಲೋಟ ಮೊಸರಿನೊಂದಿಗೆ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿದರೆ ಸ್ವಾದಿಷ್ಟವಾದ ಮಾವಿನಕಾಯಿ ಮಜ್ಜಿಗೆ ಸಿದ್ಧವಾಗುತ್ತದೆ.

ಇದರ ಪ್ರಯೋಜನೆಗಳು: ಮಾವು ಕೇವಲ ಒಂದು ಹುಳಿಬರಿತ ತಿನ್ನಿಸು ಅಲ್ಲ, ಬದಲಿಗೆ ಇದರಿಂದ ದೇಹಕ್ಕೆ ಬೇಕಾಗುವ ಆರೋಗ್ಯಕರ ಶಕ್ತಿಯನ್ನು ಇದು ಒದಗಿಸುತ್ತದೆ. ಹೌದು.. ಹಸಿ ಮಾವಿನಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಮೊಸರಿನಲ್ಲಿರುವ ಪ್ರೊಬಯೋಟಿಕ್ ಅಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಹಾಗೇ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತವೆ. ವಿಶೇಷವಾಗಿ ಬೇಸಿಗೆಯಲ್ಲಿ ಕಾಡುವ ಅಜೀರ್ಣ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ.

ಆರೋಗ್ಯ ತಜ್ಞರ ಪ್ರಕಾರ, ಮಾವಿನಕಾಯಿ ಮಜ್ಜಿಗೆಯು ದೇಹದಲ್ಲಿನ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡುತ್ತದೆ. ಬಿಸಿಲಿನಲ್ಲಿ ಅತಿಯಾಗಿ ಬೆವರುವುದರಿಂದ ದೇಹವು ಕಳೆದುಕೊಳ್ಳುವ ಲವಣಾಂಶಗಳನ್ನು ಇದು ಮರುಪೂರಣ ಮಾಡುತ್ತದೆ. ಅಲ್ಲದೆ, ಬಿಸಿಲ ಹೊಡೆತದಿಂದ (Sunstroke) ಉಂಟಾಗುವ ತಲೆನೋವು ಮತ್ತು ಸುಸ್ತನ್ನು ತಕ್ಷಣವೇ ಕಡಿಮೆ ಮಾಡುವ ಗುಣ ಈ ಪಾನೀಯಕ್ಕಿದೆ. ಸಕ್ಕರೆ ಅಂಶ ಇಲ್ಲದಿರುವುದರಿಂದ ಮಧುಮೇಹಿಗಳು ಕೂಡ ಯಾವುದೇ ಆತಂಕವಿಲ್ಲದೆ ಇದನ್ನು ಸೇವಿಸಬಹುದು. ಆದ್ರೆ ಅತಿಯಾದ ಅಸಿಡಿಟಿ ಸಮಸ್ಯೆ ಇರುವವರು ಮತ್ತು ಶೀತದ ಪ್ರಕೃತಿಯವರು ರಾತ್ರಿ ವೇಳೆಯಲ್ಲಿ ಇದರ ಸೇವನೆಯನ್ನು ನಿಯಂತ್ರಿಸುವುದು ಉತ್ತಮ.

ಒಟ್ಟಾರೆಯಾಗಿ.. ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ತಯಾರಿಸುವ ಈ ಪಾನೀಯವು ಈ ಬಾರಿಯ ಬೇಸಿಗೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಕೃತಕ ಪಾನೀಯಗಳ ಹಾವಳಿಯ ನಡುವೆ, ಇಂತಹ ದೇಶಿ ಪಾನೀಯಗಳು ಆರೋಗ್ಯ ಮತ್ತು ರುಚಿ ಎರಡನ್ನೂ ಕಾಪಾಡುತ್ತವೆ.

The post ಬೇಸಿಗೆಯ ಬಿಸಿಲಿಗೆ ತಂಪು ನೀಡುವ ಅಮೃತ: ಆರೋಗ್ಯವರ್ಧಕ ‘ಮಾವಿನಕಾಯಿ ಮಜ್ಜಿಗೆ’ appeared first on Samyukta Karnataka.