Greater-Bengaluru Archives - Samyukta Karnataka

‘ಭೂ ಗ್ಯಾರಂಟಿ’ : ‘ನನ್ನ ಇ-ಖಾತಾ ನನ್ನ ಹಕ್ಕು’ ಅಭಿಯಾನಕ್ಕೆ ಚಾಲನೆ
ಬೆಂಗಳೂರು: ನಗರದ ವೇಗವಾದ ಅಭಿವೃದ್ಧಿಗೆ ಅನುಗುಣವಾಗಿ ಆಸ್ತಿ ದಾಖಲೆಗಳನ್ನು ಪಾರದರ್ಶಕ ಮತ್ತು ಡಿಜಿಟಲ್ ರೂಪದಲ್ಲಿ ನಿರ್ವಹಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ಹೆಜ್ಜೆ ಇಟ್ಟಿದೆ. ‘ಭೂ ಗ್ಯಾರಂಟಿ’ ಯೋಜನೆಯಡಿ ‘ನನ್ನ ಇ-ಖಾತಾ ನನ್ನ ಹಕ್ಕು’ ಎಂಬ ವಿಶೇಷ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಲಾಗಿದ್ದು, ಇದು ಸಾವಿರಾರು ಆಸ್ತಿ ಮಾಲೀಕರಿಗೆ ನೆರವಾಗಲಿದೆ.

ಬೆಂಗಳೂರು ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಈ ಅಭಿಯಾನ ಆರಂಭಗೊಂಡಿದ್ದು, ಆಸ್ತಿ ದಾಖಲೆಗಳ ಡಿಜಿಟಲೀಕರಣ, ಇ-ಖಾತಾ ಸೇವೆಗಳ ಸುಗಮೀಕರಣ ಹಾಗೂ ಮಧ್ಯವರ್ತಿಗಳ ಹಾವಳಿ ತಡೆಗಟ್ಟುವ ಉದ್ದೇಶ ಹೊಂದಿದೆ. ವಿಶೇಷವಾಗಿ ‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತನೆ ಮಾಡಿಸಿಕೊಳ್ಳಲು ಬಯಸುವ ನಾಗರಿಕರಿಗೆ ಇದು ದೊಡ್ಡ ಮಟ್ಟದ ಅನುಕೂಲವಾಗಲಿದೆ.

ನಗರದ ಅನೇಕ ನಾಗರಿಕರು ಖಾತಾ ಪರಿವರ್ತನೆ, ಹೊಸ ಇ-ಖಾತಾ, ತಿದ್ದುಪಡಿ ಸೇರಿದಂತೆ ವಿವಿಧ ಸೇವೆಗಳಿಗಾಗಿ ಹಲವು ಬಾರಿ ಕಚೇರಿಗಳಿಗೆ ಅಲೆದಾಡಬೇಕಾಗುತ್ತಿತ್ತು. ಈ ತೊಂದರೆ ನಿವಾರಣೆಗಾಗಿ ಜಿಬಿಎ ನಗರಾದ್ಯಂತ 50 ವಿಶೇಷ ಕೇಂದ್ರಗಳನ್ನು ಆರಂಭಿಸಿದೆ. ಪ್ರತಿ ಶನಿವಾರ ಈ ಕೇಂದ್ರಗಳಲ್ಲಿ ನಾಗರಿಕರಿಗೆ ಸೇವೆ ಒದಗಿಸಲಾಗುತ್ತದೆ.

ಪ್ರತಿ ಕೇಂದ್ರದಲ್ಲೂ ದಿನಕ್ಕೆ ಸುಮಾರು 100ರಿಂದ 200 ಜನರಿಗೆ ಸೇವೆ ನೀಡಲಾಗುವುದು. ಒಂದು ವೇಳೆ ಅರ್ಜಿದಾರರ ಸಂಖ್ಯೆ 200 ಮೀರಿದರೆ, ಅವರಿಗೆ ಟೋಕನ್ ನೀಡಿ ಮುಂದಿನ ವಾರ ಆದ್ಯತೆಯ ಮೇರೆಗೆ ಸೇವೆ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಪ್ರತಿ ಶನಿವಾರ ಸುಮಾರು 5 ಸಾವಿರ ಜನರಿಗೆ ಸೇವೆ ನೀಡುವ ಗುರಿ ಹೊಂದಲಾಗಿದೆ.

ನಾಗರಿಕರ ಅನುಕೂಲಕ್ಕಾಗಿ ಕೇಂದ್ರಗಳಲ್ಲಿ ಆಸನ ವ್ಯವಸ್ಥೆ, ಸರತಿ ಸಾಲಿನ ನಿರ್ವಹಣೆ, ಸಹಾಯವಾಣಿ ಕೇಂದ್ರ, ಸ್ಪಷ್ಟ ನಾಮಫಲಕಗಳು, ಇಂಟರ್ನೆಟ್ ಸಂಪರ್ಕವಿರುವ ಕಂಪ್ಯೂಟರ್‌ಗಳು, ಸ್ಕ್ಯಾನರ್‌ಗಳು ಮತ್ತು ಪ್ರಿಂಟರ್‌ಗಳನ್ನು ಅಳವಡಿಸಲಾಗಿದೆ. ಜೊತೆಗೆ ಆಸ್ತಿ ತೆರಿಗೆ ಹಾಗೂ ಇ-ಖಾತಾ ಶುಲ್ಕ ಪಾವತಿಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ.

ಸಹಾಯಕ ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ತಾಂತ್ರಿಕ ತಂಡ ಮತ್ತು ನಾಗರಿಕ ಸೌಲಭ್ಯ ಸಿಬ್ಬಂದಿಯನ್ನು ಕೇಂದ್ರಗಳಲ್ಲಿ ನಿಯೋಜಿಸಲಾಗಿದ್ದು, ಸ್ಥಳದಲ್ಲಿಯೇ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಲಾಗುತ್ತಿದೆ.

ಈ ಅಭಿಯಾನದ ಪ್ರಮುಖ ಆಕರ್ಷಣೆ ಎಂದರೆ ‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತನೆಗಾಗಿ ನೀಡಲಾಗಿರುವ ವಿಶೇಷ ರಿಯಾಯಿತಿ. ಈ ಹಿಂದೆ ಮಾರ್ಗಸೂಚಿ ಬೆಲೆಯ ಶೇ.5ರಷ್ಟು ಶುಲ್ಕ ವಿಧಿಸಲಾಗುತ್ತಿತ್ತು. ಇದೀಗ ಅದನ್ನು ಶೇ.2ಕ್ಕೆ ಇಳಿಸಲಾಗಿದ್ದು, ಕಡಿಮೆ ವೆಚ್ಚದಲ್ಲಿ ಕಾನೂನುಬದ್ಧ ದಾಖಲೆ ಪಡೆಯಲು ಅವಕಾಶ ದೊರೆತಿದೆ.

ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ತಮ್ಮ ಇ-ಖಾತಾ ಸಿದ್ಧವಾಗಿರುವ ಬಗ್ಗೆ ಎಸ್‌ಎಂಎಸ್ ಅಥವಾ ದೂರವಾಣಿ ಮೂಲಕ ಮಾಹಿತಿ ನೀಡಲಾಗುತ್ತಿದೆ. ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ಸ್ಥಳದಲ್ಲಿಯೇ ತಾಂತ್ರಿಕ ನೆರವು ಮತ್ತು ತರಬೇತಿಯನ್ನೂ ನೀಡಲಾಗುತ್ತಿದೆ.

ಆಸ್ತಿ ದಾಖಲೆಗಳ ಡಿಜಿಟಲೀಕರಣದಿಂದ ನಕಲಿ ದಾಖಲೆಗಳ ಹಾವಳಿ ಕಡಿಮೆಯಾಗಲಿದೆ. ಮಧ್ಯವರ್ತಿಗಳ ಪ್ರಭಾವ ತಗ್ಗಿ, ಸರ್ಕಾರಿ ಅಧಿಕಾರಿಗಳೇ ನೇರವಾಗಿ ನಾಗರಿಕರಿಗೆ ಸೇವೆ ಒದಗಿಸುವ ವ್ಯವಸ್ಥೆ ಬಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಕಾನೂನು ತೊಡಕುಗಳನ್ನು ತಪ್ಪಿಸಲು ಹಾಗೂ ತಮ್ಮ ಆಸ್ತಿ ದಾಖಲೆಗಳನ್ನು ಅಧಿಕೃತವಾಗಿ ಮಾನ್ಯಗೊಳಿಸಿಕೊಳ್ಳಲು ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಬಿಎ ಅಧಿಕಾರಿಗಳು ಮನವಿ ಮಾಡಿದ್ದಾರೆ.

₹182 ಕೋಟಿ ಮೌಲ್ಯದ ‘ಜಿಹಾದಿ ಡ್ರಗ್’ ಕ್ಯಾಪ್ಟಗನ್ ವಶಕ್ಕೆ

The post ‘ಭೂ ಗ್ಯಾರಂಟಿ’ : ‘ನನ್ನ ಇ-ಖಾತಾ ನನ್ನ ಹಕ್ಕು’ ಅಭಿಯಾನಕ್ಕೆ ಚಾಲನೆ appeared first on Samyukta Karnataka.

ಬೆಂಗಳೂರು ಪಂಚ ಪಾಲಿಕೆಗೆ ಶೀಘ್ರ ಚುನಾವಣೆ: ಆಯೋಗ ಸಜ್ಜು
ಸುಪ್ರೀಂ ಕೋರ್ಟ್ ಗಡುವಿನೊಳಗೆ ಬೆಂಗಳೂರಿನ 5 ಪಾಲಿಕೆಗಳಿಗೆ ಚುನಾವಣೆ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ 14ರಿಂದ 24ರೊಳಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಜ್ಜಾಗಿದೆ. ಬಿಬಿಎಂಪಿಯನ್ನು ಐದು ಪ್ರತ್ಯೇಕ ನಗರ ನಿಗಮಗಳಾಗಿ ಪುನರ್‌ರಚಿಸಿದ ಬಳಿಕ ನಡೆಯಲಿರುವ ಮೊದಲ ಚುನಾವಣೆಯಾಗಿರುವುದರಿಂದ ಈ ಪ್ರಕ್ರಿಯೆಗೆ ವಿಶೇಷ ಮಹತ್ವ ಸಿಕ್ಕಿದೆ.

ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಅವರು ಆಯೋಗದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದರು. ಜಿಬಿಎ ಅಧಿಕಾರಿಗಳು ಚುನಾವಣೆ ಮುಂದೂಡುವಂತೆ ಮನವಿ ಸಲ್ಲಿಸಿದ್ದರೂ, ಸುಪ್ರೀಂ ಕೋರ್ಟ್ ನೀಡಿರುವ ಗಡುವಿನ ಹಿನ್ನೆಲೆ ಆ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

“ಜೂನ್ 14ರಿಂದ 24ರೊಳಗೆ ಯಾವುದಾದರೂ ಒಂದು ದಿನ ಚುನಾವಣೆಯನ್ನು ನಡೆಸಲಾಗುವುದು. ಅಂತಿಮ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುತ್ತದೆ,” ಎಂದು ಸಂಗ್ರೇಶಿ ತಿಳಿಸಿದರು.

ಬಿಬಿಎಂಪಿ ಪುನರ್‌ರಚನೆಯ ನಂತರ ರಚನೆಯಾದ ಐದು ನಿಗಮಗಳಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯಲಿದ್ದು, ನಗರ ಆಡಳಿತದ ಹೊಸ ಅಧ್ಯಾಯಕ್ಕೆ ಚಾಲನೆ ಸಿಗಲಿದೆ. ಹೊಸ ವ್ಯವಸ್ಥೆಯಡಿ ಆಡಳಿತ ವಿಕೇಂದ್ರೀಕರಣ, ಸ್ಥಳೀಯ ಸಮಸ್ಯೆಗಳ ತ್ವರಿತ ಪರಿಹಾರ ಮತ್ತು ಅಭಿವೃದ್ಧಿ ವೇಗ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಪುನರ್‌ರಚನೆ ಕೈಗೊಂಡಿತ್ತು.

ಈ ನಡುವೆ, ಜೂನ್ 30ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ ಅನುಸರಣಾ ವರದಿ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದು ಆಯೋಗದ ಮೇಲೆ ಒತ್ತಡ ಹೆಚ್ಚಿಸಿದೆ. ಹೀಗಾಗಿ ಚುನಾವಣೆ ವೇಳಾಪಟ್ಟಿ ವಿಳಂಬವಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಚುನಾವಣೆ ದಿನಾಂಕ ಘೋಷಣೆಗೆ ಮುನ್ನ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲು ಜಿಬಿಎ ಹಾಗೂ ನಿಗಮ ಆಯುಕ್ತರಿಗೆ ಆಯೋಗ ನಿರ್ದೇಶನ ನೀಡಿದೆ. ಮತದಾರರ ಪಟ್ಟಿಗಳ ಪರಿಷ್ಕರಣೆ, ಮತಗಟ್ಟೆಗಳ ವ್ಯವಸ್ಥೆ, ಭದ್ರತಾ ಕ್ರಮಗಳು ಹಾಗೂ ಸಿಬ್ಬಂದಿ ನಿಯೋಜನೆ ಸೇರಿದಂತೆ ವಿವಿಧ ಹಂತದ ಕಾರ್ಯಗಳು ವೇಗ ಪಡೆದುಕೊಂಡಿವೆ.

ಇದೇ ವೇಳೆ, ಜೂನ್ 24ರೊಳಗೆ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವಂತೆ ಆಯುಕ್ತರು ಸೂಚಿಸಿರುವುದು ಗಮನಾರ್ಹವಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನ ಆಡಳಿತಾತ್ಮಕ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಲು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.

ನಗರದ ರಾಜಕೀಯ ವಲಯದಲ್ಲಿಯೂ ಈ ಚುನಾವಣೆ ಕುತೂಹಲ ಕೆರಳಿಸಿದೆ. ಬಿಬಿಎಂಪಿ ವಿಭಜನೆಯ ನಂತರದ ಮೊದಲ ಚುನಾವಣೆ ಆಗಿರುವುದರಿಂದ ಪ್ರಮುಖ ರಾಜಕೀಯ ಪಕ್ಷಗಳು ಈಗಾಗಲೇ ತಂತ್ರ ರೂಪಿಸಲು ಆರಂಭಿಸಿವೆ. ಸ್ಥಳೀಯ ಆಡಳಿತದ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳು ಸಜ್ಜಾಗುತ್ತಿವೆ.

ಬೆಂಗಳೂರು ನಗರ ಆಡಳಿತದ ಭವಿಷ್ಯ ನಿರ್ಧರಿಸುವ ಈ ಚುನಾವಣೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯಕ್ಕೂ ಮಹತ್ವದ ಪ್ರಭಾವ ಬೀರುವ ಸಾಧ್ಯತೆ ಇದೆ.

ತಮಿಳುನಾಡು: BJP ತಟಸ್ಥ ನಿಲುವು- TVK ಸರ್ಕಾರ ರಚನೆಗೆ ಕುತೂಹಲ

The post ಬೆಂಗಳೂರು ಪಂಚ ಪಾಲಿಕೆಗೆ ಶೀಘ್ರ ಚುನಾವಣೆ: ಆಯೋಗ ಸಜ್ಜು appeared first on Samyukta Karnataka.

‘LCA ಮ್ಯಾನ್’ ಖ್ಯಾತಿಯ ರವಿಗೆ HAL ನಲ್ಲಿ ಉನ್ನತ ಹುದ್ದೆ
ಬೆಂಗಳೂರು: ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಗೆ ಹೊಸ ಚೈತನ್ಯ ತುಂಬುವ ನಾಯಕತ್ವವಾಗಿ ರವಿ ಕೆ ಗಮನ ಸೆಳೆಯುತ್ತಿದ್ದಾರೆ. ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ 22 ನೇ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (CMD) ಅಧಿಕಾರ ವಹಿಸಿಕೊಂಡಿದ್ದಾರೆ

LCA ಮ್ಯಾನ್ ಖ್ಯಾತಿಯ ರವಿ: ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಿನ್ನೆಲೆಯೊಂದಿಗೆ 30 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ರವಿ ಕೆ, HAL ಗೆ ‘ಮಹಾರತ್ನ’ ಸ್ಥಾನ ದೊರಕಿಸಿಕೊಡುವಲ್ಲಿ ಮತ್ತು ತೇಜಸ್ (LCA Tejas) ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಕ್ಷಣಾ ವಲಯದಲ್ಲಿ ಇವರನ್ನು ‘LCA ಮ್ಯಾನ್’ ಎಂದೇ ಕರೆಯಲಾಗುತ್ತದೆ. ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ತೇಜಸ್) ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ಇವರ ಪಾತ್ರ ಬಹಳ ದೊಡ್ಡದು. ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದಿದ್ದು, ಐಐಎಂ ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಈಗ HAL ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ದಿಕ್ಕಿನಲ್ಲಿ ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿದ್ದಾರೆ.

ತೇಜಸ್ ಒಪ್ಪಂದ – ದೊಡ್ಡ ಸಾಧನೆ : ರವಿ ಕೆ ನೇತೃತ್ವದಲ್ಲಿ HAL, ₹1.1 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ 180 HAL Tejas Mk1A ಯುದ್ಧವಿಮಾನಗಳ ಐತಿಹಾಸಿಕ ಒಪ್ಪಂದವನ್ನು ಪಡೆದುಕೊಂಡಿತ್ತು. ಇದು ಭಾರತದ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ತೋರಿಸಿದ ಪ್ರಮುಖ ಹೆಜ್ಜೆಯಾಗಿದೆ.

₹2 ಲಕ್ಷ ಕೋಟಿ ಆರ್ಡರ್ ಬುಕ್ : HAL ಪ್ರಸ್ತುತ ಸುಮಾರು ₹2 ಲಕ್ಷ ಕೋಟಿ ಮೌಲ್ಯದ ಆರ್ಡರ್‌ಗಳನ್ನು ಹೊಂದಿದ್ದು, ಇದು ಸಂಸ್ಥೆಯ ಬಲಿಷ್ಠ ಭವಿಷ್ಯವನ್ನು ಸೂಚಿಸುತ್ತದೆ. ಈ ಆರ್ಡರ್‌ಗಳು ದೇಶದ ರಕ್ಷಣಾ ಸ್ವಾವಲಂಬನೆಗೆ ಮಹತ್ವದ ಬಲ ನೀಡಲಿವೆ.

ಭವಿಷ್ಯದ ದೃಷ್ಟಿಕೋನ : ರವಿ ಕೆ ಮುಂದಿನ ಯೋಜನೆಗಳಲ್ಲಿ ಪ್ರಮುಖ ಅಂಶಗಳು ಕೃತಕ ಬುದ್ಧಿಮತ್ತೆ (AI) ಬಳಕೆ ಹೆಚ್ಚಿಸುವುದು, ಹೊಸ ತಂತ್ರಜ್ಞಾನಗಳಲ್ಲಿ ನಾವೀನ್ಯತೆ ಹಾಗೂ ನಾಗರಿಕ ವಿಮಾನೋದ್ಯಮ ಕ್ಷೇತ್ರಕ್ಕೆ ವಿಸ್ತರಣೆ ಮತ್ತು HAL ಅನ್ನು ಜಾಗತಿಕ ಏರೋಸ್ಪೇಸ್ ನಾಯಕನನ್ನಾಗಿ ರೂಪಿಸುವುದು ಅಲ್ಲದೆ ಆತ್ಮನಿರ್ಭರ ಮೂಲಕ ಭಾರತಕ್ಕೆ ಬಲ ತುಂಬುವುದಾಗಿದೆ.

HAL ಅಭಿವೃದ್ಧಿ ಭಾರತದ “ಆತ್ಮನಿರ್ಭರ ಭಾರತ” ದ ದೃಷ್ಟಿಗೆ ಹೊಂದಿಕೊಳ್ಳುತ್ತಿದ್ದು, ರಕ್ಷಣಾ ಕ್ಷೇತ್ರದಲ್ಲಿ ದೇಶದ ಸ್ವಾವಲಂಬನೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ವಿಶ್ವ ದಾಖಲೆ: ಶ್ರೀಲಂಕಾದಿಂದ ಭಾರತಕ್ಕೆ ಈಜಿದ 7 ವರ್ಷದ ಬಾಲಕ

The post ‘LCA ಮ್ಯಾನ್’ ಖ್ಯಾತಿಯ ರವಿಗೆ HAL ನಲ್ಲಿ ಉನ್ನತ ಹುದ್ದೆ appeared first on Samyukta Karnataka.

ಗೋಡೆ ಕುಸಿತ ದುರಂತ: ರಾಜ್ಯ – ಕೇಂದ್ರ ಸರ್ಕಾರ ಪರಿಹಾರ ಘೋಷಣೆ
ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ನಡೆದ ಭೀಕರ ದುರಂತವು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ. ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಮೃತಪಟ್ಟಿರುವ ಘಟನೆ ದುಃಖದ ವಾತಾವರಣ ಸೃಷ್ಟಿಸಿದೆ.

ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಗೋಡೆ ಏಕಾಏಕಿ ಕುಸಿದ ಪರಿಣಾಮ, ಅಲ್ಲಿದ್ದ ಜನರ ಮೇಲೆ ಅವಶೇಷಗಳು ಬಿದ್ದು ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರಲ್ಲಿ ಬಾಲಕಿ ಸೇರಿದಂತೆ ಏಳು ಮಂದಿ ಸೇರಿದ್ದು, ಹಲವರು ಗಾಯಗೊಂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “ಬೆಂಗಳೂರುದಲ್ಲಿ ಗೋಡೆ ಕುಸಿತದಿಂದ ಸಂಭವಿಸಿದ ಅನಾಹುತ ಅತ್ಯಂತ ದುರದೃಷ್ಟಕರ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ” ಎಂದು ತಿಳಿಸಿದ್ದಾರೆ.

ಅದೇ ವೇಳೆ, ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ₹50,000 ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಇನ್ನು, ರಾಜ್ಯ ಸರ್ಕಾರವೂ ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿಯಾಗಿ ಅವರ ಅಳಲು ಆಲಿಸಿದರು. ಘಟನೆಯ ನಿಖರ ಕಾರಣ ತಿಳಿಯಲು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಮೃತರ ವಿವರಗಳು: ಮೃತಪಟ್ಟವರಲ್ಲಿ ಎಂ.ಆರ್ ಪಾಳ್ಯದ ಬಟ್ಟೆ ವ್ಯಾಪಾರಿ ಮೊಹಮ್ಮದ್ ಅಬ್ದುಲ್ ಹಕ್ (52), ಡಿ.ಜೆ. ಹಳ್ಳಿಯ ಪಾದರಕ್ಷೆ ವ್ಯಾಪಾರಿ ಫಯಾಜ್ ಅಹ್ಮದ್ (39), ಕೆ.ಜಿ ಹಳ್ಳಿ ಮೂಲದ 6 ವರ್ಷದ ವಿದ್ಯಾರ್ಥಿನಿ ಮುಸಾವೀರ್ ಬೇಗಂ, ಕೇರಳದಿಂದ ಬಂದ ಪ್ರವಾಸಿಗರಾದ ಸ್ಮಿತಾ (47) ಮತ್ತು ಕೆ.ಕೆ. ಲತಾ (57), ಉತ್ತರ ಪ್ರದೇಶದ ವ್ಯಾಪಾರಿ ಸಲಾವುದ್ದೀನ್ ಅನ್ಸಾರಿ (36), ಅಸ್ಸಾಂ ಮೂಲದ ಕಾರ್ಮಿಕ ನಸೀಮುಲ್ಲಾ (19) ಸೇರಿದ್ದಾರೆ.

ಗಾಯಾಳುಗಳಿಗೆ ಚಿಕಿತ್ಸೆ: ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ನಿಗಾ ವಹಿಸಿದ್ದಾರೆ.

ಗೋಡೆ ಕುಸಿತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ನಿರ್ಲಕ್ಷ್ಯ ಅಥವಾ ನಿರ್ಮಾಣದ ದೋಷವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ವಿಜಯನಗರ: TT ವಾಹನಕ್ಕೆ ಲಾರಿ ಡಿಕ್ಕಿ – ಓರ್ವ ಸಾವು, 12 ಮಂದಿಗೆ ಗಾಯ

The post ಗೋಡೆ ಕುಸಿತ ದುರಂತ: ರಾಜ್ಯ – ಕೇಂದ್ರ ಸರ್ಕಾರ ಪರಿಹಾರ ಘೋಷಣೆ appeared first on Samyukta Karnataka.

ಬೆಂಗಳೂರು ಮಳೆಯ ರುದ್ರನರ್ತನ: ಗೋಡೆ ಕುಸಿದು 7 ಸಾವು
ಬೆಂಗಳೂರು: ನಗರದಲ್ಲಿ ಇಂದು ಸಂಜೆ ಸುರಿದ ಆಲಿಕಲ್ಲು ಸಹಿತ ಭಾರೀ ಮಳೆ ದಿಢೀರ್ ದುರಂತಕ್ಕೆ ಕಾರಣವಾಗಿದ್ದು, ಬೌರಿಂಗ್ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದ ಬಳಿಯ ಗೋಡೆ (ಕಾಂಪೌಂಡ್) ಕುಸಿದು 7 ಮಂದಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಸುಮಾರು ಅರ್ಧಗಂಟೆ ಮಾತ್ರ ಸುರಿದ ಮಳೆಯೇ ರುದ್ರರೂಪ ತಾಳಿ, ಶಿವಾಜಿನಗರ ಪ್ರದೇಶದಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಯಿತು. ಮೃತರಲ್ಲಿ ಇಬ್ಬರು ಪುರುಷರು ಹಾಗೂ ಐವರು ಮಹಿಳೆಯರು ಸೇರಿದ್ದಾರೆ. ಪಾದಚಾರಿಗಳು ಹಾಗೂ ಬೀದಿ ವ್ಯಾಪಾರಿಗಳೂ ಮೃತರಲ್ಲಿರಬಹುದು ಎಂದು ಶಂಕಿಸಲಾಗಿದೆ.

ದುರಂತ ಹೇಗೆ ನಡೆಯಿತು? : ಮಾಹಿತಿ ಪ್ರಕಾರ, ಬೌರಿಂಗ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಹೊರಭಾಗದಲ್ಲಿ ಬೀದಿಬದಿ ವ್ಯಾಪಾರಿಗಳು ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ಸುಮಾರು 8 ಅಡಿ ಎತ್ತರದ ಕಾಂಪೌಂಡ್ ಗೋಡೆಗೆ ಟಾರ್ಪಾಲ್ ಹಾಕಿಕೊಂಡು ಮಳೆ ತಪ್ಪಿಸಲು ಜನರು ನಿಂತಿದ್ದರು. ಈ ವೇಳೆ ಬಿರುಗಾಳಿ ಸಹಿತ ಸುರಿದ ಮಳೆಗೆ ಗೋಡೆ ಏಕಾಏಕಿ ಕುಸಿದು ಬಿದ್ದು, ಅಲ್ಲಿ ಆಶ್ರಯ ಪಡೆದಿದ್ದವರು ಅವಶೇಷಗಳಡಿ ಸಿಲುಕಿದರು. ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ರಕ್ಷಣಾ ಕಾರ್ಯ ಆರಂಭಿಸಿ ಕೆಲವರನ್ನು ಹೊರತೆಗೆದರು.

ರಕ್ಷಣಾ ಕಾರ್ಯ, ಗಾಯಾಳುಗಳಿಗೆ ಚಿಕಿತ್ಸೆ : ಗೋಡೆ ಕುಸಿತದ ನಂತರ ಸ್ಥಳಕ್ಕೆ ತುರ್ತು ಸೇವಾ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಭೇಟಿ, ಅಧಿಕಾರಿಗಳಿಗೆ ತರಾಟೆ : ಘಟನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಿಎಂ ಅಸಮಾಧಾನ ವ್ಯಕ್ತಪಡಿಸಿ, ನಿರ್ಲಕ್ಷ್ಯದ ಕುರಿತು ಸ್ಪಷ್ಟನೆ ಕೇಳಿದರು. ಮೃತರ ಕುಟುಂಬಗಳಿಗೆ ಸರ್ಕಾರದಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮುಂದಿನ ಕೆಲವು ದಿನಗಳಲ್ಲೂ ಬೆಂಗಳೂರಿನಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ.

ದೆಹಲಿಗೆ ಹೊಸ ಮೇಯರ್: BJPಯ ಪ್ರವೇಶ್ ವಾಹಿ ಅವಿರೋಧ ಆಯ್ಕೆ

The post ಬೆಂಗಳೂರು ಮಳೆಯ ರುದ್ರನರ್ತನ: ಗೋಡೆ ಕುಸಿದು 7 ಸಾವು appeared first on Samyukta Karnataka.

ಹೊಸ ಸಾಹಸ: ‘ಗರುಡ ಗ್ಲೈಡ್’ಗೆ ಚಾಲನೆ ನೀಡಿದ ಶ್ರೇಯಾಂಕ ಪಾಟೀಲ್
ಬೆಂಗಳೂರು: ನಗರದ ಪ್ರಸಿದ್ಧ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ (Wonderla) ನಲ್ಲಿ ಹೊಸದಾಗಿ ನಿರ್ಮಿಸಲಾದ ‘ಗರುಡ ಗ್ಲೈಡ್’ ರೋಲರ್ ಕೋಸ್ಟರ್ ರೈಡ್ ಶುಕ್ರವಾರ ಅದ್ಧೂರಿಯಾಗಿ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ಭಾರತೀಯ ಮಹಿಳಾ ಕ್ರಿಕೆಟರ್ ಹಾಗೂ ಕನ್ನಡತಿ ಶ್ರೇಯಾಂಕ ಪಾಟೀಲ್ ಭೇಟಿ ನೀಡಿ, ಈ ರೋಚಕ ರೈಡ್ ಅನುಭವಿಸಿದರು.

ಥ್ರಿಲ್ ರೈಡ್‌ನಲ್ಲಿ ಶ್ರೇಯಾಂಕ ಸಂಭ್ರಮ: ತಮ್ಮ ಕೋಚ್ ಅರ್ಜುನ್ ಜೊತೆಗೂಡಿ ವಂಡರ್‌ಲಾಕ್ಕೆ ಭೇಟಿ ನೀಡಿದ ಶ್ರೇಯಾಂಕ ಪಾಟೀಲ್, ಗರುಡ ಗ್ಲೈಡ್ ರೈಡ್‌ನಲ್ಲಿ ಭಾಗವಹಿಸಿ ರೋಚಕ ಅನುಭವ ಪಡೆದರು. ಗಾಳಿಯಲ್ಲಿ ತೂಗಾಡುತ್ತಾ ವೇಗದಲ್ಲಿ ಸಾಗುವ ಈ ರೈಡ್ ಪ್ರವಾಸಿಗರಿಗೆ ವಿಭಿನ್ನ ಥ್ರಿಲ್ ಅನುಭವ ನೀಡಲಿದೆ.

ವಿಶೇಷತೆ : ವಂಡರ್‌ಲಾ ಈಗ ಎರಡು ಇನ್ವರ್ಷನ್ (ತಲೆಕೆಳಗಾಗುವ) ರೋಲರ್ ಕೋಸ್ಟರ್ ರೈಡ್‌ಗಳನ್ನು ಹೊಂದಿರುವ ‘ರಿಕಾಯಿಲ್’ ‘ಗರುಡ ಗ್ಲೈಡ್’ ಮೂಲಕ ಭಾರತದ ಏಕೈಕ ಅಮ್ಯೂಸ್‌ಮೆಂಟ್ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಉನ್ನತ ಮಟ್ಟದ ಸುರಕ್ಷತೆ: ಈ ಹೊಸ ರೈಡ್‌ನ ವಿನ್ಯಾಸ ಹಾಗೂ ಅಳವಡಿಕೆಯನ್ನು ವಂಡರ್‌ಲಾದ ಸ್ವಂತ ಇಂಜಿನಿಯರಿಂಗ್ ತಂಡವೇ ನಿರ್ವಹಿಸಿದೆ. ಜಾಗತಿಕ ಮಟ್ಟದ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಅದ್ಧೂರಿ ಉದ್ಘಾಟನಾ ಸಮಾರಂಭ: ಈ ಹೊಸ ರೈಡ್ ಉದ್ಘಾಟನೆಗಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಖ್ಯಾತ ಯೂಟ್ಯೂಬರ್ ಗಗನ್ ಶ್ರೀನಿವಾಸ್, ಕ್ರಿಕೆಟ್ ತಾರೆ ಶ್ರೇಯಾಂಕ ಪಾಟೀಲ್ ಇಬ್ಬರೂ ಸೇರಿ ‘ಗರುಡ ಗ್ಲೈಡ್’ ರೈಡ್‌ಗೆ ಚಾಲನೆ ನೀಡಿದರು.

ಪ್ರವಾಸೋದ್ಯಮಕ್ಕೆ ಉತ್ತೇಜನ: ಈ ಹೊಸ ರೈಡ್‌ನಿಂದ ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಹಾಗೂ ಯುವಕರಿಗೆ ಹೊಸ ಥ್ರಿಲ್ ಅನುಭವ ಸಿಗಲಿದೆ. ಕುಟುಂಬಗಳಿಗಾಗಿ ಆಕರ್ಷಕ ಮನರಂಜನೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ವಿದ್ಯುತ್‌ನಿಂದ LPG ತರಹದ ಜ್ವಾಲೆ: Make in Indiaಗೆ ಹೊಸ ಅವಕಾಶ

The post ಹೊಸ ಸಾಹಸ: ‘ಗರುಡ ಗ್ಲೈಡ್’ಗೆ ಚಾಲನೆ ನೀಡಿದ ಶ್ರೇಯಾಂಕ ಪಾಟೀಲ್ appeared first on Samyukta Karnataka.

‘ಲಂಗ್ ಸ್ಪೇಸ್’ ಉಳಿಸಲು ಸರ್ಕಾರದ ಕ್ರಮ: 444 ಎಕರೆ ಅರಣ್ಯ ಭೂಮಿ ಮರುಸ್ವಾಧೀನ
ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಜಾರಕಬಂಡೆ ಶ್ರೀಗಂಧದ ಕಾವಲ್ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು, ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯ ಭೂಮಿಯನ್ನು ಮರು ವಶಕ್ಕೆ ಪಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಲಿಖಿತ ಸೂಚನೆ ನೀಡಿದ್ದಾರೆ.

444 ಎಕರೆ ಅರಣ್ಯ ಭೂಮಿ ಮರುಸ್ವಾಧೀನಕ್ಕೆ ಕ್ರಮ : ಜಾರಕಬಂಡೆಯ ಶ್ರೀಗಂಧದ ಕಾವಲ್ ಪ್ರದೇಶದಲ್ಲಿರುವ ಈ ಭೂಮಿಯನ್ನು ಮೂಲತಃ ಭಾರತೀಯ ವಾಯುಪಡೆಗೆ ಮಂಜೂರು ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರವು 2017ರ ಅಕ್ಟೋಬರ್ 9ರಂದು ಈ ಮಂಜೂರಾತಿಯನ್ನು ರದ್ದುಪಡಿಸಿತ್ತು. ಆದರೂ, ಅಗತ್ಯ ನಿಯಮಾನುಸಾರ ಹೊಸ ಅನುಮತಿ ಪಡೆಯದೇ ಭೂಮಿಯನ್ನು ಬಳಸುತ್ತಿರುವುದು ಗಂಭೀರ ವಿಷಯವಾಗಿದ್ದು, ಇದೀಗ ಕರ್ನಾಟಕ ಅರಣ್ಯ ಕಾಯಿದೆ, 1963ರ ಸೆಕ್ಷನ್ 64ಎ ಅಡಿ ನೋಟಿಸ್ ಜಾರಿ ಮಾಡಿ ಭೂಮಿ ವಶಕ್ಕೆ ಪಡೆಯಲು ಕ್ರಮ ಆರಂಭಿಸಲಾಗಿದೆ.

“ವಾಯುಪಡೆಗೆ ಹಕ್ಕಿಲ್ಲ” – ಸ್ಪಷ್ಟನೆ : ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, “ಈ ಜಮೀನಿನ ಮೇಲೆ ವಾಯುಪಡೆಯಿಗೆ ಯಾವುದೇ ಹಕ್ಕು ಉಳಿದಿಲ್ಲ. ಮಂಜೂರಾತಿ ರದ್ದಾದ ನಂತರವೂ ಬಳಸುತ್ತಿರುವುದು ಕಾನೂನುಬಾಹಿರ” ಎಂದು ಹೇಳಿದ್ದಾರೆ.

ಪರಿಸರದ ದೃಷ್ಟಿಯಿಂದ ಮಹತ್ವದ ಪ್ರದೇಶ : ಈ ಪ್ರದೇಶವನ್ನು ಬೆಂಗಳೂರಿನ ಪ್ರಮುಖ “ಲಂಗ್ ಸ್ಪೇಸ್” (ಶ್ವಾಸತಾಣ) ಎಂದು ಪರಿಗಣಿಸಲಾಗಿದ್ದು, ಪರಿಸರ ಸಮತೋಲನ ಕಾಪಾಡಲು ಈ ಭೂಮಿಯನ್ನು ಅರಣ್ಯವಾಗಿ ಉಳಿಸುವುದು ಅಗತ್ಯ ಎಂದು ಸಚಿವರು ಒತ್ತಿ ಹೇಳಿದ್ದಾರೆ. ಯಾವುದೇ ವಿಳಂಬವಿಲ್ಲದೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಹೊಸ ನಿಯಮಗಳು – ಪರಿವೇಶ್ ಪೋರ್ಟಲ್ ಕಡ್ಡಾಯ: ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಾದರೆ, ಅರಣ್ಯ (ಸಂರಕ್ಷಣಾ) ಕಾಯ್ದೆ-1980 ಅನ್ವಯ “ಪರಿವೇಶ್ ಪೋರ್ಟಲ್” ಮೂಲಕ ಕೇಂದ್ರ ಅನುಮತಿ ಪಡೆಯುವುದು ಕಡ್ಡಾಯ ಎಂದು ಎಲ್ಲಾ ಇಲಾಖೆಗಳಿಗೂ ಸೂಚಿಸಲಾಗಿದೆ.

ಪೆಟ್ರೋಲ್-ಡೀಸೆಲ್ ಸುಂಕದಲ್ಲಿ ಭಾರೀ ಕಡಿತ: ಕೇಂದ್ರದ ಮಹತ್ವದ ಘೋಷಣೆ

The post ‘ಲಂಗ್ ಸ್ಪೇಸ್’ ಉಳಿಸಲು ಸರ್ಕಾರದ ಕ್ರಮ: 444 ಎಕರೆ ಅರಣ್ಯ ಭೂಮಿ ಮರುಸ್ವಾಧೀನ appeared first on Samyukta Karnataka.

RCB ಪಂದ್ಯ: ಕ್ರೀಡಾಂಗಣ ಪ್ರವೇಶ ನಿಯಮಗಳಲ್ಲಿ ಬದಲಾವಣೆ
RCB ಟಿಕೆಟ್ ಮಾರಾಟಕ್ಕೆ ಸಜ್ಜು: ಅಭಿಮಾನಿಗಳಿಗೆ ಮಹತ್ವದ ಸೂಚನೆ

ಬೆಂಗಳೂರು: ಐಪಿಎಲ್ ಹಬ್ಬದ ಸಂಭ್ರಮದ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪಂದ್ಯಗಳ ಟಿಕೆಟ್ ಮಾರಾಟಕ್ಕೆ ಸಜ್ಜಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಟಿಕೆಟ್‌ಗಳು ಅಧಿಕೃತವಾಗಿ ಮಾರಾಟಕ್ಕೆ ಬರಲಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಟಿಕೆಟ್ ಖರೀದಿ ಕುರಿತು ಸ್ಪಷ್ಟ ಮಾಹಿತಿ ನೀಡಿರುವ RCB ನಿರ್ವಹಣಾ ಮಂಡಳಿ, ಟಿಕೆಟ್‌ಗಳು ಕೇವಲ ತಂಡದ ಅಧಿಕೃತ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕವೇ ಲಭ್ಯವಿರುತ್ತವೆ ಎಂದು ತಿಳಿಸಿದೆ. ಯಾವುದೇ ಮೂರನೇ ವ್ಯಕ್ತಿಯ ವೆಬ್‌ಸೈಟ್ ಅಥವಾ ಆಪ್‌ಗಳ ಮೂಲಕ ಟಿಕೆಟ್ ಮಾರಾಟ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ಪ್ರವೇಶ ಮತ್ತು ಕ್ರೀಡಾಂಗಣ ಮಾಹಿತಿ: ಬೆಂಗಳೂರು ನಗರದ ಪ್ರಸಿದ್ಧ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinnaswamy Stadium) ನಡೆಯುವ ಪಂದ್ಯಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ: ಕ್ವೀನ್ಸ್ ರಸ್ತೆ ಮೂಲಕ ಪ್ರವೇಶವಿಲ್ಲ, ಲಿಂಕ್ ರಸ್ತೆ ಮತ್ತು ಕಬ್ಬನ್ ರಸ್ತೆ ಮೂಲಕ ಮಾತ್ರ ಪ್ರವೇಶ. ಸ್ಟ್ಯಾಂಡ್‌ಗಳ ನಕ್ಷೆ ಹಾಗೂ ಗೇಟ್ ವಿವರಗಳನ್ನು ಅಭಿಮಾನಿಗಳು ಮುಂಚಿತವಾಗಿ ಪರಿಶೀಲಿಸಬೇಕು ಎಂದು ತಿಳಿಸಿದೆ

ಉಚಿತ ಮೆಟ್ರೋ ಸೌಲಭ್ಯ: ಪಂದ್ಯದ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ತಪ್ಪಿಸಲು ಟಿಕೆಟ್ ಹೊಂದಿರುವವರಿಗೆ ಉಚಿತ ಮೆಟ್ರೋ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಅಭಿಮಾನಿಗಳಿಗೆ ಸುಗಮ ಸಂಚಾರಕ್ಕೆ ಸಹಕಾರಿಯಾಗಲಿದೆ.

ಪಾರ್ಕಿಂಗ್ ವ್ಯವಸ್ಥೆ: ಸೀಮಿತ ಪಾರ್ಕಿಂಗ್ ವ್ಯವಸ್ಥೆ ಇರುವುದರಿಂದ ಮುಂಚಿತವಾಗಿ ಬುಕ್ಕಿಂಗ್ ಮಾಡಿಕೊಳ್ಳುವುದು ಅಗತ್ಯ. ಗರುಡ ಮಾಲ್, ಸೆಂಟ್ ಜೋಸೆಫ್ ಶಾಲೆಗಳು ಹಾಗೂ ಫ್ರೀಡಂ ಪಾರ್ಕ್ ಪ್ರದೇಶಗಳಲ್ಲಿ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗಿದೆ.

ಕಾನೂನು ಎಚ್ಚರಿಕೆ: ಅಧಿಕೃತ ಅನುಮತಿಯಿಲ್ಲದೆ ಟಿಕೆಟ್ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು RCB ಸ್ಪಷ್ಟಪಡಿಸಿದೆ.

ಅಭಿಮಾನಿಗಳಲ್ಲಿ ಸಂಭ್ರಮ: ಪ್ರತಿ ವರ್ಷ ಐಪಿಎಲ್ ಸಮಯದಲ್ಲಿ RCB ಪಂದ್ಯಗಳಿಗೆ ಭಾರೀ ಬೇಡಿಕೆ ಇರುತ್ತದೆ. ಈ ಬಾರಿ ಕೂಡ ಟಿಕೆಟ್‌ಗಳು ಕ್ಷಣಾರ್ಧದಲ್ಲೇ ಮಾರಾಟವಾಗುವ ನಿರೀಕ್ಷೆ ಇದೆ. ಅಭಿಮಾನಿಗಳು ಮುಂಚಿತವಾಗಿ ಸಿದ್ಧರಾಗಿರಬೇಕೆಂದು ಸೂಚಿಸಲಾಗಿದೆ.

ತೈಲ ಬಿಕ್ಕಟ್ಟು: ಭಾರತದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಏರಿಕೆ

The post RCB ಪಂದ್ಯ: ಕ್ರೀಡಾಂಗಣ ಪ್ರವೇಶ ನಿಯಮಗಳಲ್ಲಿ ಬದಲಾವಣೆ appeared first on Samyukta Karnataka.

ಇರಾನ್–ಇಸ್ರೇಲ್ ಸಂಘರ್ಷ: ಬೆಂಗಳೂರಿನಲ್ಲಿ ಹಲವು ವಿಮಾನಗಳ ಹಾರಾಟ ಸ್ಥಗಿತ
ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಮತ್ತಷ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ಪ್ರದೇಶದ ಹಲವಾರು ದೇಶಗಳು ತಮ್ಮ ಏರ್‌ಸ್ಪೇಸ್‌ಗೆ ತಾತ್ಕಾಲಿಕ ನಿರ್ಬಂಧ ವಿಧಿಸಿರುವುದು ಜಾಗತಿಕ ವಿಮಾನ ಸಂಚಾರದ ಮೇಲೆ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಹಲವು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಗೊಂಡಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಬೆಂಗಳೂರಿಗೆ ಆಗಮಿಸಬೇಕಿದ್ದ 9 ವಿಮಾನಗಳು ಹಾಗೂ ಬೆಂಗಳೂರಿನಿಂದ ನಿರ್ಗಮಿಸಬೇಕಿದ್ದ 10 ವಿಮಾನಗಳು ಸೇರಿ ಒಟ್ಟು 19 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಮಧ್ಯಪ್ರಾಚ್ಯದ ಅಬುಧಾಬಿ, ರಿಯಾದ್, ಜೆದ್ದಾ, ದಮ್ಮಾಮ್, ದುಬೈ ಮತ್ತು ದೋಹಾ ಮಾರ್ಗಗಳಲ್ಲಿನ ವಿಮಾನಗಳೇ ಮುಖ್ಯವಾಗಿ ರದ್ದುಗೊಂಡಿವೆ.

ಮಧ್ಯಪ್ರಾಚ್ಯ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ತಮ್ಮ ವಾಯುಮಾರ್ಗಗಳನ್ನು ಮುಚ್ಚಿರುವುದು ಅಥವಾ ನಿರ್ಬಂಧ ವಿಧಿಸಿರುವುದು ವಿಮಾನಯಾನ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ. ಈ ಕಾರಣದಿಂದಾಗಿ ವಿಮಾನಯಾನ ಸಂಸ್ಥೆಗಳು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಕೆಲವು ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿರುವುದಾಗಿ ತಿಳಿಸಿವೆ.

ಈ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯಕ್ಕೆ ಕೆಲಸ, ವ್ಯವಹಾರ ಅಥವಾ ಪ್ರವಾಸಕ್ಕಾಗಿ ತೆರಳಬೇಕಿದ್ದ ಪ್ರಯಾಣಿಕರಿಗೆ ತಾತ್ಕಾಲಿಕ ತೊಂದರೆ ಉಂಟಾಗಿದೆ. ಕೆಲವು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿಯೂ ಉಂಟಾಗಿದೆ ಎಂದು ತಿಳಿದುಬಂದಿದೆ.

ವಿಮಾನ ನಿಲ್ದಾಣ ಅಧಿಕಾರಿಗಳು ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ಸೂಚನೆ ನೀಡಿದ್ದು, ಪ್ರಯಾಣಕ್ಕೆ ಮುನ್ನ ತಮ್ಮ ವಿಮಾನಗಳ ವೇಳಾಪಟ್ಟಿ ಹಾಗೂ ಹಾರಾಟದ ಸ್ಥಿತಿಯನ್ನು ಸಂಬಂಧಿತ ವಿಮಾನಯಾನ ಸಂಸ್ಥೆಗಳ ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಪರಿಶೀಲಿಸಿಕೊಳ್ಳುವಂತೆ ತಿಳಿಸಿದ್ದಾರೆ. ವಿಮಾನ ರದ್ದಾದ ಪ್ರಯಾಣಿಕರಿಗೆ ಮರುಬುಕಿಂಗ್ ಅಥವಾ ಹಣ ಮರುಪಾವತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಉದ್ವಿಗ್ನತೆ ಸಂಪೂರ್ಣವಾಗಿ ಶಮನಗೊಳ್ಳುವವರೆಗೆ ವಿಮಾನ ಸಂಚಾರದಲ್ಲಿ ಅಡಚಣೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿಮಾನಯಾನ ವಲಯದ ಮೂಲಗಳು ತಿಳಿಸಿವೆ.

The post ಇರಾನ್–ಇಸ್ರೇಲ್ ಸಂಘರ್ಷ: ಬೆಂಗಳೂರಿನಲ್ಲಿ ಹಲವು ವಿಮಾನಗಳ ಹಾರಾಟ ಸ್ಥಗಿತ appeared first on Samyukta Karnataka.

ವಿಮಾನಯಾನ ಕ್ಷೇತ್ರದಲ್ಲಿ ಕರ್ನಾಟಕದ ಮತ್ತೊಂದು ಹೆಗ್ಗುರುತು
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ‘Best Airport on Arrivals’ ಗೌರವ – ಸತತ ನಾಲ್ಕನೇ ವರ್ಷ ಸಾಧನೆ

ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್ ನೀಡುವ ‘Best Airport on Arrivals’ (ಅತ್ಯುತ್ತಮ ಆಗಮಸ್ಥಾನ) ಪ್ರಶಸ್ತಿಯನ್ನು ಸತತ ನಾಲ್ಕನೇ ವರ್ಷವೂ ತನ್ನದಾಗಿಸಿಕೊಂಡಿದೆ ಎಂದು ಕೈಗಾರಿಕಾ ಸಚಿವ .ಬಿ ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹಂಚಿಕೊಂಡಿರುವ ಅವರು, “ಈ ನಿರಂತರ ಸಾಧನೆ ಬೆಂಗಳೂರಿನ ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಉನ್ನತ ಮಟ್ಟದ ಸೇವಾ ಮಾನದಂಡಗಳ ಪ್ರತಿಬಿಂಬವಾಗಿದೆ. ಭಾರತದಲ್ಲಿ ಈಗಾಗಲೇ ‘ಏರೋಸ್ಪೇಸ್ ಮತ್ತು ಡಿಫೆನ್ಸ್ ರಾಜಧಾನಿ’ ಎಂದು ಗುರುತಿಸಿಕೊಂಡಿರುವ ಕರ್ನಾಟಕ, ವಿಮಾನಯಾನ ಕ್ಷೇತ್ರದಲ್ಲಿಯೂ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸುತ್ತಿದೆ” ಎಂದು ಹೇಳಿದ್ದಾರೆ.

ACI ಮಾನ್ಯತೆ – ಜಾಗತಿಕ ಮಟ್ಟದ ಮಾನದಂಡ: ಈ ಪ್ರಶಸ್ತಿಯನ್ನು Airports Council International (ACI) ತನ್ನ ಏರ್‌ಪೋರ್ಟ್ ಸರ್ವೀಸ್ ಕ್ವಾಲಿಟಿ (ASQ) ಸಮೀಕ್ಷೆಯ ಆಧಾರದ ಮೇಲೆ ನೀಡುತ್ತದೆ. ಪ್ರಯಾಣಿಕರ ಅನುಭವ, ಆಗಮನ ಪ್ರಕ್ರಿಯೆಯ ಸುಗಮತೆ, ಸ್ವಚ್ಛತೆ, ಭದ್ರತೆ, ಸಿಬ್ಬಂದಿ ಸೇವಾ ಮನೋಭಾವ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿ ಮೌಲ್ಯಮಾಪನ ಮಾಡಲಾಗುತ್ತದೆ.

ಬೆಂಗಳೂರು ವಿಮಾನ ನಿಲ್ದಾಣವು ಆಗಮನ ಪ್ರಕ್ರಿಯೆಯಲ್ಲಿ ವೇಗ, ತಂತ್ರಜ್ಞಾನ ಬಳಕೆ, ಇಮಿಗ್ರೇಷನ್ ವ್ಯವಸ್ಥೆಯ ಸುಗಮತೆ ಮತ್ತು ಬ್ಯಾಗೇಜ್ ಹ್ಯಾಂಡ್ಲಿಂಗ್ ದಕ್ಷತೆಯ ಮೂಲಕ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಮೂಲಸೌಕರ್ಯ ವಿಸ್ತರಣೆ ಮತ್ತು ಆಧುನಿಕೀಕರಣ: ಇತ್ತೀಚಿನ ವರ್ಷಗಳಲ್ಲಿ ಟರ್ಮಿನಲ್–2 ಕಾರ್ಯಾರಂಭ, ಹಸಿರು ಕಟ್ಟಡ ತತ್ವದ ಅನುಷ್ಠಾನ, ಡಿಜಿಟಲ್ ಸೇವೆಗಳ ವಿಸ್ತರಣೆ ಹಾಗೂ ಸಂಪರ್ಕ ಜಾಲದ ಅಭಿವೃದ್ಧಿ ಮುಂತಾದ ಕ್ರಮಗಳು ವಿಮಾನ ನಿಲ್ದಾಣದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿವೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯೂ ನಿರಂತರವಾಗಿ ಏರಿಕೆಯಾಗುತ್ತಿದೆ.

ರಾಜ್ಯದ ಹೆಮ್ಮೆ: ಈ ಸಾಧನೆಯೊಂದಿಗೆ ಬೆಂಗಳೂರು ವಿಮಾನ ನಿಲ್ದಾಣವು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ಕರ್ನಾಟಕದ ವಿಮಾನಯಾನ ಪರಿಸರ ವ್ಯವಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಠವಾಗಲಿದೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದ್ದಾರೆ.

The post ವಿಮಾನಯಾನ ಕ್ಷೇತ್ರದಲ್ಲಿ ಕರ್ನಾಟಕದ ಮತ್ತೊಂದು ಹೆಗ್ಗುರುತು appeared first on Samyukta Karnataka.