#GauriSpratt Archives - Samyukta Karnataka

ಮತ್ತೆ ಮದುವೆಯಾಗ್ತಿದ್ದಾರೆ ಆಮೀರ್ ಖಾನ್; ಮೂರನೇ ಮಡದಿ ಬಗ್ಗೆ ಮಿಸ್ಟರ್ ಪರ್ಫೆಕ್ಟ್‌ನಿಸ್ಟ್ ಏನಂದ್ರು?
ಬಾಲಿವುಡ್‌ನ ‘ಮಿಸ್ಟರ್ ಪರ್ಫೆಕ್ಟ್‌ನಿಸ್ಟ್’ ಅಮೀರ್ ಖಾನ್ ಮತ್ತೊಮ್ಮೆ ಸಿನಿಮಾ ಜಗತ್ತಿನಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಆದರೆ ಈ ಬಾರಿ ಅವರು ಹೆಡ್‌ಲೈನ್ಸ್‌ನಲ್ಲಿ ಇರೋದು ಯಾವುದೇ ಹೊಸ ಚಿತ್ರಕ್ಕಲ್ಲ, ಬದಲಿಗೆ ತಮ್ಮ ವೈಯಕ್ತಿಕ ಜೀವನದ ಬಿಗ್ ಅಪ್ಡೇಟ್‌ಗಾಗಿ. ಹೌದು, ನಟ ಅಮೀರ್ ಖಾನ್ ಅವರು ತಮ್ಮ ಬಹುಕಾಲದ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮುಂಬರುವ ಜುಲೈ 5, 2026 ರಂದು ಅಧಿಕೃತವಾಗಿ ವಿವಾಹವಾಗಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಈಗ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿರುವ ಅಮೀರ್ ಖಾನ್, “ಇದು ನನ್ನ ಜೀವನದ ಅತ್ಯಂತ ಸಂತೋಷದ ಹಂತ, ನನ್ನ ಮನಸ್ಸಿನಲ್ಲಿ ನಾನು ಈಗಾಗಲೇ ಗೌರಿಯನ್ನು ಪತ್ನಿಯಾಗಿ ಸ್ವೀಕರಿಸಿದ್ದೇನೆ” ಎಂದು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಬಾಲಿವುಡ್ ತಾರೆಯರ ಮಾಡುವೆ ಎಂದರೆ ಅಲ್ಲಿ ಸಖತ್ ಗ್ಲಾಮರ್,ಕೋಟ್ಯಂತರ ರೂಪಾಯಿ ಖರ್ಚು ಮತ್ತು ಭವ್ಯವಾದ ಸೆಟ್‌ಗಳು ಕಣ್ಣಮುಂದೆ ಬರುತ್ತವೆ. ಆದರೆ ಅಮೀರ್ ಮತ್ತು ಗೌರಿ ಜೋಡಿ ಈ ಎಲ್ಲ ಅದ್ದೂರಿತನಕ್ಕೆ ಬ್ರೇಕ್ ಹಾಕಿ, ತೀರಾ ಸರಳವಾಗಿ ಸಪ್ತಪದಿ ತುಳಿಯಲು ನಿರ್ಧರಿಸಿದೆ. ಯಾವುದೇ ಅದ್ದೂರಿ ರಿಸೆಪ್ಷನ್ ಇಲ್ಲದೆ, ಅಮೀರ್ ಖಾನ್ ಅವರ ನಿವಾಸದಲ್ಲೇ ತೀರಾ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ಈ ಜೋಡಿ ಮುಂದಾಗಿದೆ. ಈ ಸುಂದರ ಕ್ಷಣಕ್ಕೆ ಕೇವಲ ಆಪ್ತ ಕುಟುಂಬಸ್ಥರು ಮತ್ತು ಚಿತ್ರರಂಗದ ಇಬ್ಬರು ದೈತ್ಯ ತಾರೆಗಳಾದ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಮಾತ್ರ ಸಾಕ್ಷಿಯಾಗಲಿದ್ದಾರೆ ಎಂದು ವರದಿಯಾಗಿದೆ.

ಇನ್ನು ಅಮೀರ್ ಖಾನ್ ಮನಗೆದ್ದ ಈ ಗೌರಿ ಸ್ಪ್ರಾಟ್ ಯಾರು ಎಂಬ ಕುತೂಹಲ ಎಲ್ಲರಲ್ಲಿದೆ. ಗೌರಿ ಮೂಲತಃ ನಮ್ಮ ಹೆಮ್ಮೆಯ ಬೆಂಗಳೂರಿನವರಾಗಿದ್ದು, ಫ್ಯಾಷನ್, ಬ್ಯೂಟಿ ಮತ್ತು ವೆಲ್ನೆಸ್ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ವಿಶೇಷವೆಂದರೆ, ಅಮೀರ್ ಮತ್ತು ಗೌರಿ ನಡುವಿನ ಪರಿಚಯ ನಿನ್ನೆಯ ಮೊನ್ನೆಯದಲ್ಲ, ಕಳೆದ 25 ವರ್ಷಗಳಿಂದ ಇವರಿಬ್ಬರಿಗೆ ಒಬ್ಬರನ್ನೊಬ್ಬರು ಚೆನ್ನಾಗಿ ಬಲ್ಲರು. ಹಲವು ವರ್ಷಗಳ ಹಿಂದೆ ಮೊದಲ ಬಾರಿಗೆ ಭೇಟಿಯಾಗಿದ್ದ ಇವರು, ಇತ್ತೀಚಿನ ವರ್ಷಗಳಲ್ಲಿ ಮತ್ತೆ ಹತ್ತಿರವಾಗಿದ್ದರು. ಕಾಲಕ್ರಮೇಣ ಇವರ ನಡುವಿನ ಸ್ನೇಹ ಗಾಢವಾದ ಪ್ರೀತಿಗೆ ತಿರುಗಿತ್ತು. ಇದೀಗ ಜುಲೈ 5 ರಂದು ಈ ಪ್ರೇಮಕಥೆ ಮದುವೆಯ ಬಂಧನಕ್ಕೆ ಒಳಗಾಗುತ್ತಿದ್ದು, ಅಭಿಮಾನಿಗಳು ಈ ಜೋಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸುತ್ತಿದ್ದಾರೆ.

The post ಮತ್ತೆ ಮದುವೆಯಾಗ್ತಿದ್ದಾರೆ ಆಮೀರ್ ಖಾನ್; ಮೂರನೇ ಮಡದಿ ಬಗ್ಗೆ ಮಿಸ್ಟರ್ ಪರ್ಫೆಕ್ಟ್‌ನಿಸ್ಟ್ ಏನಂದ್ರು? appeared first on Samyukta Karnataka.