#Forest Archives - Samyukta Karnataka

ರಾಜ್ಯದ ಹಸಿರು ಸಂರಕ್ಷಣೆಗೆ ಹೊಸ ಸಂಕಲ್ಪ ಘೋಷಿಸಿದ ಸರ್ಕಾರ
ಮಲೆನಾಡು ಮರಗಂತಿ ಕಪ್ಪೆಗೆ ರಾಜ್ಯ ಉಭಯಜೀವಿ ಸ್ಥಾನಮಾನ ನೀಡಲು ಕ್ರಮ – ತುಡುವೆ ಜೇನು ರಾಜ್ಯ ಕೀಟವಾಗುವ ಸಾಧ್ಯತೆ

ಬೆಂಗಳೂರು: ಜೀವವೈವಿಧ್ಯ ಸಂರಕ್ಷಣೆ ಹಾಗೂ ಪರಿಸರ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು, ತುಡುವೆ ಜೇನು (Apis cerana) ಅನ್ನು ರಾಜ್ಯ ಕೀಟವಾಗಿ ಹಾಗೂ ಮಲೆನಾಡಿನ ಮರಗಂತಿ ಕಪ್ಪೆ (Malabar Tree Toad) ಅನ್ನು ರಾಜ್ಯ ಉಭಯಜೀವಿಯಾಗಿ ಘೋಷಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: SBI ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಇಲ್ಲ – ಮುಷ್ಕರ ಮುಂದೂಡಿಕೆ

ಅಪರೂಪದ ಜೀವಜಾತಿಗಳ ಸಂರಕ್ಷಣೆಗೆ ಒತ್ತು : ನಮ್ಮ ನಾಡಿನ ಅಪರೂಪದ ಜೀವಜಾತಿಗಳನ್ನು ಉಳಿಸಿ ಬೆಳೆಸುವ ಈ ಕ್ರಮ ಪರಿಸರ ಸಂರಕ್ಷಣೆಯತ್ತ ಮಹತ್ವದ ಹೆಜ್ಜೆಯಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. “ಪ್ರಕೃತಿ ಮತ್ತು ಜೀವವೈವಿಧ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಗೆ ಹಸಿರು ಮತ್ತು ಆರೋಗ್ಯಕರ ಕರ್ನಾಟಕವನ್ನು ನೀಡುವ ಸಂಕಲ್ಪದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ” ಎಂದು ಅವರು ತಿಳಿಸಿದ್ದಾರೆ.

ವಿಶ್ವ ಜೀವವೈವಿಧ್ಯ ದಿನದ ಕಾರ್ಯಕ್ರಮ : ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಿನ್ನೆ ನಡೆದ ವಿಶ್ವ ಜೀವವೈವಿಧ್ಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ವಿವಿಧ ದೇಶಗಳು ಮತ್ತು ರಾಜ್ಯಗಳು ಜೀವವೈವಿಧ್ಯ ಸಂರಕ್ಷಣೆಯ ಮಹತ್ವವನ್ನು ಸಾರಲು ರಾಷ್ಟ್ರೀಯ ಪಕ್ಷಿ, ರಾಷ್ಟ್ರೀಯ ಪ್ರಾಣಿ ಹಾಗೂ ರಾಷ್ಟ್ರೀಯ ವೃಕ್ಷಗಳನ್ನು ಘೋಷಿಸುವ ಪರಂಪರೆ ಹೊಂದಿವೆ ಎಂದು ಹೇಳಿದರು.

ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆ ಒತ್ತಾಯಿಸಿ ‘ಕಾಕ್ರೋಚ್’ Digital ಚಳವಳಿ

ಈಗಾಗಲೇ ಘೋಷಿಸಿರುವ ರಾಜ್ಯ ಸಂಕೇತಗಳು : ಕರ್ನಾಟಕ ಸರ್ಕಾರ ಈಗಾಗಲೇ ಶ್ರೀಗಂಧವನ್ನು ರಾಜ್ಯ ವೃಕ್ಷವಾಗಿ, ಆನೆಯನ್ನು ರಾಜ್ಯ ಪ್ರಾಣಿಯಾಗಿ ಹಾಗೂ ನೀಲಕಂಠ ಪಕ್ಷಿಯನ್ನು ರಾಜ್ಯ ಪಕ್ಷಿಯಾಗಿ ಘೋಷಿಸಿದೆ. ಇದಲ್ಲದೆ, ಹಳದಿ-ಕೆಂಪು ಬಣ್ಣದ ರೆಕ್ಕೆಗಳನ್ನು ಹೊಂದಿರುವ ದೊಡ್ಡ ಚಿಟ್ಟೆ ‘ಸದರ್ನ್ ಬರ್ಡ್‌ವಿಂಗ್’ (Southern Birdwing – Troides minos) ಅನ್ನು ರಾಜ್ಯ ಚಿಟ್ಟೆಯಾಗಿ ಘೋಷಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಅರಣ್ಯ ಭೂಮಿ ಮರು ವಶಕ್ಕೆ ಹೋರಾಟ : ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಎಚ್‌ಎಂಟಿ, ಭಾರತೀಯ ವಾಯುಪಡೆ ಮತ್ತು ಖಾಸಗಿ ರಬ್ಬರ್ ತೋಟ ಕಂಪನಿಗಳ ವಶದಲ್ಲಿರುವ ಸುಮಾರು ₹50 ಸಾವಿರ ಕೋಟಿ ಮೌಲ್ಯದ ಅರಣ್ಯ ಭೂಮಿಯನ್ನು ಮರಳಿ ಪಡೆಯಲು ಸರ್ಕಾರ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: KEA ಮಹತ್ವದ ಸೂಚನೆ: CBSE, CISCE ವಿದ್ಯಾರ್ಥಿಗಳಿಗೆ ಅಂಕ ದೃಢೀಕರಣ ಅವಕಾಶ

ಹಸಿರು ಹೊದಿಕೆ ರಕ್ಷಣೆ ಹಾಗೂ ಅರಣ್ಯ ಸಂವರ್ಧನೆಗಾಗಿ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ಈ ಘೋಷಣೆ ಪರಿಸರವಾದಿಗಳು ಮತ್ತು ಜೀವವೈವಿಧ್ಯ ತಜ್ಞರಿಂದ ಸ್ವಾಗತಕ್ಕೆ ಪಾತ್ರವಾಗಿದ್ದು, ಕರ್ನಾಟಕದ ಅಪರೂಪದ ಜೀವಜಾತಿಗಳಿಗೆ ಇನ್ನಷ್ಟು ಸಂರಕ್ಷಣೆ ದೊರೆಯುವ ನಿರೀಕ್ಷೆ ಮೂಡಿಸಿದೆ.

ಕಲಬುರಗಿಯಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಐವರು ಸಾವು

The post ರಾಜ್ಯದ ಹಸಿರು ಸಂರಕ್ಷಣೆಗೆ ಹೊಸ ಸಂಕಲ್ಪ ಘೋಷಿಸಿದ ಸರ್ಕಾರ appeared first on Samyukta Karnataka.

ಕರ್ನಾಟಕದಲ್ಲಿ ಟ್ರೆಕ್ಕಿಂಗ್: ಸುರಕ್ಷಿತ ಚಾರಣಕ್ಕೆ SOP ಜಾರಿ
ಬೆಂಗಳೂರು: ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಚಾರಣಿಗರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಪ್ರಕಟಿಸಿದ್ದಾರೆ. ಇತ್ತೀಚೆಗೆ ರಾಜ್ಯದ ವಿವಿಧ ಚಾರಣ ಪಥಗಳಲ್ಲಿ ಸಂಭವಿಸಿದ ದುರ್ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಯಾವುದೇ ಚಾರಣಿಗರು ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಇಲ್ಲದೆ ಚಾರಣಕ್ಕೆ ತೆರಳಲು ಅವಕಾಶ ಇರುವುದಿಲ್ಲ. ಪ್ರತಿ 10 ಚಾರಣಿಗರಿಗೆ ಒಬ್ಬ ಮಾರ್ಗದರ್ಶಕ ಕಡ್ಡಾಯವಾಗಿದ್ದು, ಒಂದು ಬ್ಯಾಚ್‌ನಲ್ಲಿ ಗರಿಷ್ಠ 150 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಕ್ರಮವು ಚಾರಣದ ವೇಳೆ ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ನಿಯಂತ್ರಿತ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.

ಚಾರಣಿಗರಿಗೆ ಆನ್‌ಲೈನ್ ನೋಂದಣಿ ಕಡ್ಡಾಯವಾಗಿದ್ದು, ಪ್ರತಿಯೊಬ್ಬರ ಮೊಬೈಲ್‌ಗೆ ಟ್ರ್ಯಾಕಿಂಗ್ ಆಪ್ ಅಳವಡಿಸಲಾಗುತ್ತದೆ. ಮಾರ್ಗದರ್ಶಕರಿಗೆ GPS ಹೊಂದಿದ ವಾಕಿ-ಟಾಕಿ ಒದಗಿಸಲಾಗುವುದು. ಇದರಿಂದ ದಾರಿ ತಪ್ಪುವಂತಹ ಘಟನೆಗಳನ್ನು ತಕ್ಷಣ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಜೊತೆಗೆ, ಬೇಸ್ ಕ್ಯಾಂಪ್‌ನಲ್ಲಿ ಚಾರಣದ ಪೂರ್ವಭಾವಿ ಮಾಹಿತಿ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ನೀಡಲಾಗುತ್ತದೆ.

ಇನ್ನು, ಶಬ್ದಕಾರಿ ಸಾಧನಗಳು, ಆಯುಧಗಳು, ಕ್ಯಾಂಪ್ ಫೈರ್ ಹಾಗೂ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಚಾರಣದ ಅವಧಿಯಲ್ಲಿ ಮಾರ್ಗದರ್ಶಕರು ಚಾರಣಿಗರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದ್ದು, ಪ್ರತಿ ಅರ್ಧಗಂಟೆಗೆ ಬೇಸ್ ಕ್ಯಾಂಪ್‌ನೊಂದಿಗೆ ಸಂಪರ್ಕದಲ್ಲಿರಬೇಕು. ಅಪ್ರಾಪ್ತ ವಯಸ್ಕರಿಗೆ ಪೋಷಕರ ಅನುಮತಿ ಪತ್ರ ಹಾಗೂ ಹಿರಿಯ ನಾಗರಿಕರಿಗೆ ದೈಹಿಕ ಸಾಮರ್ಥ್ಯ ಪ್ರಮಾಣಪತ್ರ ಕಡ್ಡಾಯವಾಗಿದೆ.

ಅರಣ್ಯ ಇಲಾಖೆ ಶೀಘ್ರದಲ್ಲೇ ರಾಜ್ಯದ ಎಲ್ಲಾ ಚಾರಣ ಪಥಗಳನ್ನು ಅರಣ್ಯ ವಿಹಾರ ಪೋರ್ಟಲ್ aranyavihaara.karnataka.gov.in ನಲ್ಲಿ ಸೇರಿಸಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಆರಂಭಿಸಲು ಯೋಜಿಸಿದೆ ಎಂದು ತಿಳಿಸಿದ್ದಾರೆ

The post ಕರ್ನಾಟಕದಲ್ಲಿ ಟ್ರೆಕ್ಕಿಂಗ್: ಸುರಕ್ಷಿತ ಚಾರಣಕ್ಕೆ SOP ಜಾರಿ appeared first on Samyukta Karnataka.

ದಟ್ಟಾರಣ್ಯದಲ್ಲಿ ಕಳೆದುಹೋದ ಟೆಕ್ಕಿ: 4 ದಿನ, ಕೇವಲ ನೀರು ಅಷ್ಟೇ, ಸಾವು ಗೆದ್ದು ಬಂದ ಶರಣ್ಯಳ ರೋಚಕ ಕಥೆ!
ಗುರುವಾರ (ಏ.02) ಮಡಿಕೇರಿಯ ತಡಿಯಾಂಡಮೋಲ್‌ ಚಾರಣಕ್ಕೆ ಏಕಾಂಗಿಯಾಗಿ ತೆರಳಿದ್ದ ಕೇರಳ ಮೂಲದ ಶರಣ್ಯ (36) ನಾಪತ್ತೆಯಾಗಿದ್ದರು. ಇದೀಗ ಸತತ ನಾಲ್ಕು ದಿನಗಳ ನಿರಂತರ ಹುಡುಕಾಟದ ಬಳಿಕ ಮಹಿಳೆಯ ಸುಳಿವು ಸಿಕ್ಕಿದೆ. ಸ್ಥಳೀಯ ಕುಡಿಯ ಸಮುದಾಯದ ಶೋಧ ಕಾರ್ಯದ ವೇಳೆ ಶರಣ್ಯ ಪತ್ತೆಯಾಗಿದ್ದಾರೆ. ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ಹೋಗುವುದಾಗಿ ಗುರುವಾರ ಬೆಳಗ್ಗೆ ಹೋದ ಮಹಿಳೆ, ವಾಪಾಸ್​ ಆಗಿರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು, ಮಗಳ ಪತ್ತೆಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದರು.

ಅರಣ್ಯ, ಪೊಲೀಸ್, ಇಲಾಖೆ, ಗ್ರಾಮಸ್ಥರು ಮತ್ತು ನಕ್ಸಲ್ ನಿಗ್ರಹ ಪಡೆಯಿಂದ ನಿರಂತರ ಶೋಧ ಬೆನ್ನಲ್ಲೇ ಟೆಕ್ಕಿಯ ಸುಳಿವು ಸಿಕ್ಕಿದೆ. ಭಾನುವಾರ (ಏ.05) ಶರಣ್ಯ ಪತ್ತೆಯಾಗಿದ್ದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಆಕೆ ಎಲ್ಲಿದ್ದರು? ಮಿಸ್​ ಆಗಿದ್ದು ಹೇಗೆ? ಸ್ವತಃ ಆಕೆಯೇ ವಿವರಿಸಿದ್ದಾಳೆ.

ದಾರಿ ತಪ್ಪಿದ ನಂತರ ಶರಣ್ಯ ಒಂದು ಸಣ್ಣ ಹೊಳೆ ಹತ್ತಿರದ ದೊಡ್ಡ ಕಲ್ಲಿನ ಮೇಲೆ ಕುಳಿತುಕೊಂಡು ರಕ್ಷಣೆಗಾಗಿ ಕಾಯುತ್ತಿದ್ದಳು. ಅವಳ ಬಳಿ 500 ಮಿಲಿ ಲೀಟರ್ ನೀರಿನ ಬಾಟಲ್ ಮಾತ್ರ ಇತ್ತು. ಅದನ್ನು ಹೊಳೆಯಿಂದ ಮತ್ತೆ ಮತ್ತೆ ತುಂಬಿಕೊಂಡು ಕುಡಿದು ಬದುಕುಳಿದಳು. “ಈ ಟ್ರೆಕ್ ಸುಲಭ ಎಂದು ಭಾವಿಸಿ ನಾನು ಆಹಾರ ತೆಗೆದುಕೊಂಡಿರಲಿಲ್ಲ. ನಾನು ದಿನಕ್ಕೆ ಸುಮಾರು ಮೂರು ಲೀಟರ್ ನೀರಿನ ಮೇಲೆ ಬದುಕಿದ್ದೆ,” ಎಂದು ಶರಣ್ಯ ಹೇಳಿದ್ದಾರೆ.

“ರಾತ್ರಿ ವೇಳೆ ಎಲ್ಲ ದಿಕ್ಕಿನಿಂದಲೂ ಶಬ್ದಗಳು ಬರುತ್ತಿದ್ದವು, ಅದು ಸ್ವಲ್ಪ ಭಯ ಹುಟ್ಟಿಸಿತು. ಆದರೂ ನಾನು ಧೈರ್ಯದಿಂದ ಎದುರಿಸಿದೆ. ಆ ದಿನಗಳಲ್ಲಿ ನನಗೆ ಹಸಿವು ಸಹ ಆಗಲಿಲ್ಲ. ಈಗಲೂ ನನಗೆ ಹಸಿವು ಅನ್ನಿಸುತ್ತಿಲ್ಲ,” ಎಂದು ಅವಳು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಿದ ಪೊಲೀಸರು, ಫೂಟೇಜ್​ಗಳನ್ನು ಪರಿಶೀಲಿಸಿ ನೋಡಿದಾಗ, ಟ್ರೆಕ್ಕಿಂಗ್​ನ ಎಂಟ್ರಿ ಗೇಟ್​ನಲ್ಲಿ ಆಕೆ ಹೋಗಿರುವುದು ಕಾಣಿಸಿದೆ. ಆದರೆ, ಹಿಂತಿರುಗುವ ಒಂದೇ ಒಂದು ದೃಶ್ಯ ಕೂಡ ಲಭ್ಯವಿರಲಿಲ್ಲ.

ಕಣ್ಮರೆಯಾಗುವ ಮೊದಲು ಶರಣ್ಯ ಫೋನ್ ಕಾಲ್​ ಮಾಡಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಎರಡು ದಿನಗಳಿಂದ ನಿರಂತರವಾಗಿ ಹುಡುಕಾಡಿದರೂ ಆಕೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಭಾನುವಾರ ಮಹಿಳೆ ಪತ್ತೆಯಾಗಿದ್ದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

The post ದಟ್ಟಾರಣ್ಯದಲ್ಲಿ ಕಳೆದುಹೋದ ಟೆಕ್ಕಿ: 4 ದಿನ, ಕೇವಲ ನೀರು ಅಷ್ಟೇ, ಸಾವು ಗೆದ್ದು ಬಂದ ಶರಣ್ಯಳ ರೋಚಕ ಕಥೆ! appeared first on Samyukta Karnataka.