Flowers Archives - Samyukta Karnataka

500 ರೂಪಾಯಿ ಕೊಟ್ರು ಗುಲಾಬಿಗಳ ಹೂಗುಚ್ಛ ಸಿಗೋದು ಕಷ್ಟ; ಪ್ರೇಮಿಗಳ ದಿನಕ್ಕೆ ಭರ್ಜರಿ ವ್ಯಾಪಾರ!
ವರದಿ: ಶ್ರೀನಿಧಿ ಹೆಚ್.ಜಿ ತುರುವೇಕೆರೆ

ಫೆಬ್ರವರಿ ತಿಂಗಳು ಅಂದಾಕ್ಷಣ ನೆನಪಾಗುವುದೇ ಪ್ರೇಮಿಗಳ ದಿನಾಚರಣೆ. ಪ್ರೀತಿ ಎನ್ನುವುದು ಕೇವಲ ಯುವಜೋಡಿಗಳ ನಡುವಿನ ಆಕರ್ಷಣೆಯಲ್ಲ, ಅದು ಆತ್ಮೀಯರ ನಡುವಿನ ಕಾಳಜಿ ಮತ್ತು ಗೌರವದ ಸಂಕೇತ. ವಿಶೇಷವಾಗಿ ಫೆಬ್ರವರಿ ೧೪ರ ‘ವ್ಯಾಲೆಂಟೈನ್ಸ್ ಡೇ’ ಸಂದರ್ಭದಲ್ಲಿ ಜಗತ್ತಿನಾದ್ಯಂತ ಜನರು ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. ಈ ಸಂಭ್ರಮಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಈಗ ಬಣ್ಣಬಣ್ಣದ ಗುಲಾಬಿಗಳ ಹಂಗಾಮು ಶುರುವಾಗಿದೆ.

ಪ್ರೇಮಿಗಳ ವಾರವು ರೋಸ್ ಡೇ ಮೂಲಕ ಅದ್ಧೂರಿಯಾಗಿ ಆರಂಭವಾಗುತ್ತದೆ. ಕೆಂಪು ಗುಲಾಬಿ ಎಂದಿಗೂ ಪ್ರೀತಿಯ ಶಾಶ್ವತ ಸಂಕೇತ. ಆದರೆ, ಈ ಬಾರಿ ಮಾರುಕಟ್ಟೆಯಲ್ಲಿ ಬಿಳಿ ಮತ್ತು ಪಿಂಕ್ (ಗುಲಾಬಿ) ಬಣ್ಣದ ಹೂಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಪಿಂಕ್ ಗುಲಾಬಿ ಮೃದುತ್ವ, ಕಾಳಜಿ ಮತ್ತು ಸಹಾನುಭೂತಿಯನ್ನು ಬಿಂಬಿಸಿದರೆ, ಬಿಳಿ ಗುಲಾಬಿಯು ಪರಿಶುದ್ಧತೆ, ನಿಷ್ಠೆ ಹಾಗೂ ಹೊಸ ಆರಂಭದ ಸಂಕೇತವಾಗಿದೆ. ಯುವಜನತೆ ತಮ್ಮ ಭಾವನೆಗಳಿಗೆ ತಕ್ಕಂತೆ ಹೂಗಳನ್ನು ಆರಿಸಿಕೊಳ್ಳುತ್ತಿರುವುದು ಈ ಬಾರಿಯ ವಿಶೇಷ.

ಬೆಂಗಳೂರಿನ ಮಾರುಕಟ್ಟೆಗೆ ಸ್ಥಳೀಯವಾಗಿ ಬೆಳೆದ ಹೂಗಳಲ್ಲದೆ ಊಟಿ, ಹೊಸಕೋಟೆ, ತಮಿಳುನಾಡು ಹಾಗೂ ಚಿಕ್ಕಬಳ್ಳಾಪುರದಿಂದಲೂ ಗುಲಾಬಿಗಳು ಲಗ್ಗೆ ಇಟ್ಟಿವೆ. ಹೂವುಗಳ ಗುಣಮಟ್ಟ ಮತ್ತು ಬಣ್ಣಕ್ಕೆ ಅನುಗುಣವಾಗಿ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬAದಿದೆ. ಒಂದು ಬಂಚ್ ಗುಲಾಬಿಯ ಬೆಲೆ ರೂ. 250ರಿಂದ ಆರಂಭವಾಗಿ, ವಿಶೇಷ ಅಲಂಕಾರಿಕ ಬೊಕ್ಕೆಗಳ ದರ 1,000 ರಿಂದ ರೂ.5,000ದವರೆಗೂ ತಲುಪಿದೆ. ಬೇಡಿಕೆ ಹೆಚ್ಚಾದಂತೆ ಹೂವಿನ ದರವೂ ಏರುತ್ತಿರುವುದು ವ್ಯಾಪಾರಿಗಳಿಗೆ ಲಾಭ ತಂದಿದ್ದರೆ, ರೈತರ ಮೊಗದಲ್ಲೂ ಸಂತಸ ಮೂಡಿಸಿದೆ. ಪ್ರೇಮಿಗಳ ದಿನದ ಅಂಗವಾಗಿ ನಗರದ ಪ್ರಮುಖ ಮಾಲ್‌ಗಳು, ಪಾರ್ಕ್ಗಳು ಹಾಗೂ ಕಾಫಿ ಶಾಪ್‌ಗಳು ಜನರಿಂದ ತುಂಬಿ ತುಳುಕುತ್ತಿದ್ದವು.

ರೆಸ್ಟೋರೆಂಟ್‌ಗಳು ‘ಕಪಲ್ ಆಫರ್’ ಮತ್ತು ‘ಕ್ಯಾಂಡಲ್ ಲೈಟ್ ಡಿನ್ನರ್’ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ #Valentine’s Day ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಪ್ರೀತಿಯ ಸಂದೇಶಗಳ ಮಹಾಪೂರವೇ ಹರಿಯುತ್ತಿದೆ. ಹೂವಿನ ವ್ಯಾಪಾರಿಗಳ ಪ್ರಕಾರ, ಸಾಮಾನ್ಯ ದಿನಗಳಿಗಿಂತ ಇಂದು ಮಾರಾಟದಲ್ಲಿ ಮೂರರಿಂದ ನಾಲ್ಕು ಪಟ್ಟು ಏರಿಕೆ ಕಂಡಿದೆ.

ಪ್ರೀತಿ ಎಂದರೆ ಕೇವಲ ಪ್ರೇಮಿಗಳಿಗಷ್ಟೇ ಸೀಮಿತವಲ್ಲ ಎಂಬ ಸಂದೇಶವೂ ಈ ಬಾರಿ ಬಲವಾಗಿ ಕೇಳಿಬಂದಿದೆ. ತಂದೆ-ತಾಯಿ, ಒಡಹುಟ್ಟಿದವರು ಮತ್ತು ಸ್ನೇಹಿತರ ನಡುವಿನ ಬಾಂಧವ್ಯವೂ ಪ್ರೀತಿಯೇ ಆಗಿದೆ. ಕೆಲವು ಸ್ವಯಂಸೇವಾ ಸಂಸ್ಥೆಗಳು ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಭೇಟಿ ನೀಡಿ, ಹೂವು ಮತ್ತು ಸಿಹಿ ಹಂಚುವ ಮೂಲಕ ದಿನವನ್ನು ಅರ್ಥಪೂರ್ಣವಾಗಿಸಿದರು. “ಒಂದು ಹೂವಿಗಿಂತ ಒಂದು ಕಿರುನಗೆ ಮತ್ತು ಪ್ರೀತಿಯ ಮಾತು ದೊಡ್ಡ ಉಡುಗೊರೆ ಎಂದು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ವ್ಯಾಲೆಂಟೈನ್ಸ್ ಡೇ ಅತಿಯಾಗಿ ವಾಣಿಜ್ಯೀಕರಣಗೊಳ್ಳುತ್ತಿದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ. ದುಬಾರಿ ಗಿಫ್ಟ್ಗಳೇ ಪ್ರೀತಿಯ ಅಳತೆಗೋಲಾಗಬಾರದು ಎಂದು ಮನೋವೈದ್ಯರು ಎಚ್ಚರಿಸಿದ್ದಾರೆ. ಪ್ರೀತಿ ಎಂಬುದು ಕ್ಷಣಿಕ ಆಕರ್ಷಣೆಯಲ್ಲ, ಅದು ಪರಸ್ಪರ ನಂಬಿಕೆ ಮತ್ತು ಜವಾಬ್ದಾರಿಯ ದೀರ್ಘಕಾಲದ ಬದ್ಧತೆ ಎಂಬುದು ಅವರ ವಾದ. ಭಾರತೀಯ ಸಂಸ್ಕೃತಿಯಲ್ಲಿಯೂ ಪ್ರೀತಿಗೆ ಉನ್ನತ ಸ್ಥಾನವಿದ್ದು, ಅದನ್ನು ಮೌಲ್ಯಾಧಾರಿತವಾಗಿ ಆಚರಿಸುವುದು ಇಂದಿನ ಅಗತ್ಯವಾಗಿದೆ.

ಒಟ್ಟಾರೆಯಾಗಿ, ಈ ಬಾರಿಯ ವ್ಯಾಲೆಂಟೈನ್ಸ್ ಡೇ ಕೇವಲ ಹೂವು-ಹಣ್ಣುಗಳ ವ್ಯಾಪಾರಕ್ಕಷ್ಟೇ ಸೀಮಿತವಾಗದೆ, ಮನುಷ್ಯತ್ವ ಮತ್ತು ಸೌಹಾರ್ದತೆಯ ಸಂಕೇತವಾಗಿ ಹೊರಹೊಮ್ಮಿದೆ.

The post 500 ರೂಪಾಯಿ ಕೊಟ್ರು ಗುಲಾಬಿಗಳ ಹೂಗುಚ್ಛ ಸಿಗೋದು ಕಷ್ಟ; ಪ್ರೇಮಿಗಳ ದಿನಕ್ಕೆ ಭರ್ಜರಿ ವ್ಯಾಪಾರ! appeared first on Samyukta Karnataka.