Dilip Raj Archives - Samyukta Karnataka

ನಟ ದಿಲೀಪ್ ರಾಜ್ ಅಕಾಲಿಕ ನಿಧನ: ಸ್ಮಾರ್ಟ್ ವಾಚ್ ಮೇಲೆ ಅತಿಯಾದ ನಂಬಿಕೆ ಚಿಕಿತ್ಸೆಗೆ ಅಡ್ಡಿಯಾಯಿತೇ?
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್ (47) ಬುಧವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದ್ರೂ ಚಿಕಿತ್ಸೆ ಫಲಕಾರಿಯಾಗದೆ ನಟ ಕೊನೆಯುಸಿರೆಳೆದಿದ್ದಾರೆ. ಆದ್ರೆ ನಿರ್ಮಾಪಕನ ಸಾವಿನ ಕೊನೆಯ ಕ್ಷಣಗಳ ಕುರಿತು ಹೊರಬಿದ್ದಿರುವ ಮಾಹಿತಿಯೊಂದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸುದ್ದಿಯ ಪ್ರಕಾರ, ದಿಲೀಪ್ ರಾಜ್‌ಗೆ ಎದೆಯಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಾಗ, ತಕ್ಷಣ ವೈದ್ಯರ ಬಳಿ ಹೋಗುವ ಬದಲು ತಮ್ಮ ಸ್ಮಾರ್ಟ್ ವಾಚ್ ಮೂಲಕ ಹೃದಯ ಬಡಿತವನ್ನು ಪರೀಕ್ಷಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ರೋಗಲಕ್ಷಣಗಳು ಕಾಣಿಸಿಕೊಂಡರೂ ವೈದ್ಯಕೀಯ ಸಹಾಯ ಪಡೆಯಲು ವಿಳಂಬ ಮಾಡಿದ್ದೇ ಸಾವಿಗೆ ಪ್ರಮುಖ ಕಾರಣವಾಗಿರಬಹುದು ಎಂದು ಮೂಲಗಳು ಸಂಶಯ ವ್ಯಕ್ತಪಡಿಸತ್ತಿವೆ. “ವೈದ್ಯರನ್ನು ಭೇಟಿ ಮಾಡುವುದನ್ನು ಬಿಟ್ಟು ಉಳಿದೆಲ್ಲ ಪ್ರಯತ್ನಗಳನ್ನು ಮಾಡಿದರು,” ಎಂದು ನಟ ದಿಲೀಪ್ ಸಹೋದ್ಯೋಗಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದರು. ಈ ಘಟನೆಯು ತುರ್ತು ಸಂದರ್ಭಗಳಲ್ಲಿ ಕೇವಲ ತಂತ್ರಜ್ಞಾನದ ಮೇಲೆ ಅವಲಂಬಿತರಾಗುವ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ.

ಸಿನಿಮಾ ಮತ್ತು ಕಿರುತೆರೆ ಪಯಣ: 2007ರಲ್ಲಿ ಬಿಡುಗಡೆಯಾದ ‘ಮಿಲನ’ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ ನಟಿಸುವ ಮೂಲಕ ದಿಲೀಪ್ ರಾಜ್ ಮನೆಮಾತಾಗಿದ್ದರು. ‘ಬಾಯ್‌ಫ್ರೆಂಡ್’, ‘ಯು-ಟರ್ನ್’ ನಂತಹ ಸಿನಿಮಾಗಳಲ್ಲಿ ಗಮನಾರ್ಹ ಪಾತ್ರ ಮಾಡಿದ್ದ ದಿಲೀಪ್, ಕಿರುತೆರೆಯಲ್ಲಿಯೂ ಅಧಿಪತ್ಯ ಸ್ಥಾಪಿಸಿದ್ದರು. ಹಾಗೇ ಜೀ ಕನ್ನಡದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ನಾಯಕನ ಪಾತ್ರದಿಂದ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.

ನಟನೆಯಷ್ಟೇ ಅಲ್ಲದೆ ‘ಡಿಆರ್ ಕ್ರಿಯೇಷನ್ಸ್’ ಮೂಲಕ ಯಶಸ್ವಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ನಟ, ಪ್ರಸಿದ್ಧ ಡಬ್ಬಿಂಗ್ ಕಲಾವಿದರೂ ಆಗಿದ್ದರು. ರಂಗಭೂಮಿಯಿಂದ ವೃತ್ತಿಜೀವನ ಆರಂಭಿಸಿದ್ದ ದಿಲೀಪ್, ನಟರಂಗದಂತಹ ತಂಡಗಳಲ್ಲಿ ಸಕ್ರಿಯರಾಗಿದ್ದರು. ಖ್ಯಾತಿ ʻಹಿಟ್ಲರ್‌ʼ ನಿಧನಕ್ಕೆ ಚಂದನವನದ ಗಣ್ಯರು ಮತ್ತು ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಸ್ಮಾರ್ಟ್‌ ವಾಚ್‌ಗಳು ಕೇವಲ ಮಾಹಿತಿ ನೀಡುವ ಸಾಧನಗಳೇ ಹೊರತು ಅವು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ ಎಂಬುದು ಈ ದುರ್ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.

The post ನಟ ದಿಲೀಪ್ ರಾಜ್ ಅಕಾಲಿಕ ನಿಧನ: ಸ್ಮಾರ್ಟ್ ವಾಚ್ ಮೇಲೆ ಅತಿಯಾದ ನಂಬಿಕೆ ಚಿಕಿತ್ಸೆಗೆ ಅಡ್ಡಿಯಾಯಿತೇ? appeared first on Samyukta Karnataka.

“ನನ್ನ ಬಿಟ್ಟು ಹೋಗಬೇಡ”: ಪತಿ ದಿಲೀಪ್ ರಾಜ್ ಪಾರ್ಥಿವ ಶರೀರದ ಮುಂದೆ ಪತ್ನಿ ಶ್ರೀವಿದ್ಯಾ ಆಕ್ರಂದನ!
ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯ ಪ್ರತಿಭಾನ್ವಿತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅಕಾಲಿಕ ನಿಧನವು ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ದಿಲೀಪ್‌ ಅಂತ್ಯಕ್ರಿಯೆಯು ಅವರ ಸ್ವಂತ ಫಾರ್ಮ್‌ಹೌಸ್‌ನಲ್ಲಿ ನೆರವೇರಿದ್ದು, ನೆಚ್ಚಿನ ನಟನನ್ನು ಕೊನೆಯ ಬಾರಿ ನೋಡಲು ಕಲಾವಿದರು ಮತ್ತು ಅಭಿಮಾನಿಗಳು ಭಾರವಾದ ಮನಸ್ಸಿನಿಂದ ಆಗಮಿಸಿದ್ದರು.

ಕಣ್ಣೀರಲ್ಲಿ ಮಿಂದ ಚಿತ್ರರಂಗ: ದಿಲೀಪ್ ರಾಜ್ ಪಾರ್ಥಿವ ಶರೀರದ ದರ್ಶನ ಪಡೆಯಲು ಕಿರುತೆರೆ ಮತ್ತು ಚಲನಚಿತ್ರರಂಗದ ಹಿರಿಯ-ಕಿರಿಯ ನಟ-ನಟಿಯರು ಆಗಮಿಸಿದ್ದರು. ಸದಾ ಹಸನ್ಮುಖಿಯಾಗಿರುತ್ತಿದ್ದ ವ್ಯಕ್ತಿಯನ್ನು ನಿರ್ಜೀವವಾಗಿ ನೋಡಿದ ಸಹೋದ್ಯೋಗಿಗಳು ಕಣ್ಣೀರು ಹಾಕಿದರು. ಚಿತ್ರರಂಗಕ್ಕೆ ಒಬ್ಬ ದಕ್ಷ ತಾಂತ್ರಿಕಜ್ಞ ಹಾಗೂ ಉತ್ತಮ ನಟನನ್ನು ಕಳೆದುಕೊಂಡ ನೋವು ಎಲ್ಲರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಇಡೀ ವಾತಾವರಣವು ಶೋಕತಪ್ತವಾಗಿತ್ತು.

ಮನಕಲಕಿದ ಪತ್ನಿಯ ಆಕ್ರಂದನ: ಅಂತ್ಯಕ್ರಿಯೆಯ ಸಂದರ್ಭದಲ್ಲಿ ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ಆಕ್ರಂದನ, ಅಲ್ಲಿ ನೆರೆದಿದ್ದವರ ಕಣ್ಣುಗಳನ್ನು ತೇವಗೊಳಿಸಿತು. “ನನ್ನನ್ನು ಹೀಗೆ ಹೇಗೆ ಬಿಟ್ಟು ಹೋಗುತ್ತೀಯಾ? ನಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಎಂತಹ ಉಡುಗೊರೆ ಕೊಟ್ಟುಬಿಟ್ಟೆ” ಎಂದು ನೋವಿನಿಂದ ನುಡಿದ ಪತ್ನಿಯ ಮಾತುಗಳು ಎದೆಯನ್ನು ಸೀಳುವಂತಿತ್ತು. ಪತಿಯ ಅಗಲಿಕೆಯನ್ನು ಸಹಿಸಲಾರದೆ ಹೊರಹಾಕಿದ ಮೌನ ರೋದನೆ ಮತ್ತು ಭಾರವಾದ ಧ್ವನಿ ದುಃಖದ ಕಟ್ಟೆ ಒಡೆಸಿತು.

ಮಕ್ಕಳ ಕಣ್ಣೀರು ಮತ್ತು ಅಂತಿಮ ವಿದಾಯ: ದಿಲೀಪ್ ರಾಜ್‌ ಇಬ್ಬರು ಹೆಣ್ಣು ಮಕ್ಕಳು ತಂದೆಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು. ತಂದೆಯ ಜೊತೆಗಿನ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ ಮಕ್ಕಳು ಪಡುತ್ತಿದ್ದ ವೇದನೆ ಯಾರಿಗೂ ನೋಡಲಾಗದಂತಿತ್ತು. ಅವರ ಫಾರ್ಮ್‌ಹೌಸ್‌ನಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಒಬ್ಬ ಉತ್ತಮ ಕಲಾವಿದನಾಗಿ, ನಿರ್ಮಾಪಕನಾಗಿ ಕನ್ನಡ ನಾಡಿನ ಮನೆಮಾತಾಗಿದ್ದ ದಿಲೀಪ್ ರಾಜ್ ದೈಹಿಕವಾಗಿ ದೂರವಾಗಿದ್ದರೂ, ಅವರ ಕಲೆ ಮತ್ತು ಸಾಧನೆಯ ಮೂಲಕ ನಮ್ಮೆಲ್ಲರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ.

The post “ನನ್ನ ಬಿಟ್ಟು ಹೋಗಬೇಡ”: ಪತಿ ದಿಲೀಪ್ ರಾಜ್ ಪಾರ್ಥಿವ ಶರೀರದ ಮುಂದೆ ಪತ್ನಿ ಶ್ರೀವಿದ್ಯಾ ಆಕ್ರಂದನ! appeared first on Samyukta Karnataka.

‘ಸೈಲೆಂಟ್ ಕಿಲ್ಲರ್’ ಅಬ್ಬರ: ದಿಲೀಪ್ ರಾಜ್ ನಿಧನದ ಬೆನ್ನಲ್ಲೇ ಆತಂಕ; ಯುವ ಹೃದಯಗಳ ರಕ್ಷಣೆಗೆ ಬೇಕಿದೆ ಎಚ್ಚರಿಕೆ!
ಬೆಂಗಳೂರು: ಚಿತ್ರರಂಗದ ಫಿಟ್ ಅಂಡ್ ಫೈನ್ ನಟ ದಿಲೀಪ್ ರಾಜ್ ಇಂದು ದೈವಾದೀನರಾಗಿದ್ದಾರೆ. ಈ ಕಹಿಸುದ್ದಿ ಇದೀಗ ನುಂಗಲಾಗದ ತುತ್ತಾಗಿ, ಇಡೀ ಸಮಾಜವನ್ನು ಚಿಂತೆಗೆ ದೂಡಿದೆ. ಆರೋಗ್ಯವಂತ ವ್ಯಕ್ತಿಗಳು, ಅದರಲ್ಲೂ 30 ರಿಂದ 50 ವರ್ಷದೊಳಗಿನ ಮಧ್ಯವಯಸ್ಕರು ಸರಣಿಯಾಗಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ವೈದ್ಯಕೀಯ ಲೋಕಕ್ಕೂ ಸವಾಲಾಗಿದೆ. ಅಪ್ಪು, ಚಿರು ಹಾಗೂ ಈಗ ದಿಲೀಪ್ ರಾಜ್ ಸಾವು “ಯುವ ಹೃದಯಗಳು” ಎದುರಿಸುತ್ತಿರುವ ಅಪಾಯವನ್ನು ಎತ್ತಿ ತೋರಿಸುತ್ತಿದೆ.

ಹೃದಯಾಘಾತಕ್ಕೆ ಮುಖ್ಯ ಕಾರಣ: ಇಂದಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಹೃದಯ ಸಂಬಂಧಿ ಕಾಯಿಲೆಗಳು ಬರಲು ಮಾನಸಿಕ ಒತ್ತಡ (Stress) ಪ್ರಮುಖ ಕಾರಣ. ಸಿನಿಮಾದಂತಹ ಗ್ಲಾಮರ್ ಪ್ರಪಂಚದಲ್ಲಿರುವವರಿಗೆ ಅತಿಯಾದ ಕೆಲಸದ ಹೊರೆ ಮತ್ತು ಅನಿಶ್ಚಿತತೆ ಒತ್ತಡವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ, ದೇಹದ ಸಾಮರ್ಥ್ಯ ಮೀರಿ ಮಾಡುವ ಅತಿಯಾದ ವ್ಯಾಯಾಮ (Excessive Workout) ಹೃದಯದ ಸ್ನಾಯುಗಳ ಮೇಲೆ ಒತ್ತಡ ಹೇರುತ್ತದೆ. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಅಂಶಗಳು ಗಡ್ಡೆಕಟ್ಟುವುದು (Plaque rupture) ಮತ್ತು ತಳಹದಿಯಲ್ಲೇ ಇರುವ ವಂಶವಾಹಿ (Genetic) ಕಾರಣಗಳು ಕೂಡ ಅಕಾಲಿಕ ಸಾವಿಗೆ ದಾರಿಯಾಗುತ್ತಿವೆ.

ಆರೋಗ್ಯವಾಗಿರಲು ಏನು ಮಾಡಬೇಕು?: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಕೇವಲ ಜಿಮ್ ಮಾಡಿದರೆ ಸಾಲದು. ದಿನಕ್ಕೆ ಕನಿಷ್ಠ 7-8 ಗಂಟೆಗಳ ಕಾಲ ಗುಣಮಟ್ಟದ ನಿದ್ದೆ ಮಾಡುವುದು ಅತಿ ಅಗತ್ಯ. ಸಂಸ್ಕರಿಸಿದ ಆಹಾರ ಮತ್ತು ಅತಿಯಾದ ಸಕ್ಕರೆ ಸೇವನೆಯನ್ನು ತಪ್ಪಿಸಿ, ಸಮತೋಲಿತ ಆಹಾರ ಕ್ರಮ ಅಳವಡಿಸಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಪೂರ್ಣ ಪ್ರಮಾಣದ ಹೃದಯ ತಪಾಸಣೆ (Cardiac Screening) ಮಾಡಿಸಿಕೊಳ್ಳಬೇಕು.

ಒಟ್ಟಾರೆ.. ದೇಹ ನೀಡುವ ಯಾವುದೇ ಸಣ್ಣ ಸಣ್ಣ ಮುನ್ಸೂಚನೆಗಳಾದ ಎದೆನೋವು, ಅತಿಯಾದ ಬೆವರುವಿಕೆ ಅಥವಾ ಅಸ್ತವ್ಯಸ್ತವಾದ ಉಸಿರಾಟವನ್ನು ನಿರ್ಲಕ್ಷಿಸಬಾರದು. ಜೀವನಶೈಲಿಯಲ್ಲಿ ಶಿಸ್ತಿನ ಜೊತೆಗೆ ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಂಡರೆ ಮಾತ್ರ ಇಂತಹ ಆಘಾತಗಳಿಂದ ದೂರವಿರಲು ಸಾಧ್ಯ.

The post ‘ಸೈಲೆಂಟ್ ಕಿಲ್ಲರ್’ ಅಬ್ಬರ: ದಿಲೀಪ್ ರಾಜ್ ನಿಧನದ ಬೆನ್ನಲ್ಲೇ ಆತಂಕ; ಯುವ ಹೃದಯಗಳ ರಕ್ಷಣೆಗೆ ಬೇಕಿದೆ ಎಚ್ಚರಿಕೆ! appeared first on Samyukta Karnataka.

ಜಿಮ್, ಡಯಟ್ ಇದ್ದರೂ ಕಾಡಿದ ವಿಧಿ: ದಿಲೀಪ್ ರಾಜ್ ನಿಧನ; ಫಿಟ್‌ನೆಸ್ ಪ್ರೇಮಿಗಳಿಗೆ ಇದೊಂದು ಎಚ್ಚರಿಕೆಯ ಕರೆ!
ಬೆಂಗಳೂರು: ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅಕಾಲಿಕ ನಿಧನವು ಇಡೀ ಕರ್ನಾಟಕವನ್ನು ದಿಗ್ಭ್ರಮೆಗೊಳಿಸಿದೆ. 47 ವರ್ಷದ ದಿಲೀಪ್ ರಾಜ್ ಅತ್ಯಂತ ಶಿಸ್ತಿನ ಜೀವನ ನಡೆಸುತ್ತಿದ್ದರು. ಪ್ರತಿನಿತ್ಯ ಜಿಮ್, ಕಟ್ಟುನಿಟ್ಟಿನ ಆಹಾರ ಕ್ರಮ (ಡಯಟ್) ಮತ್ತು ಸದಾ ಚಟುವಟಿಕೆಯಿಂದ ಇರುತ್ತಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾಗಿರುವುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದು ಕೇವಲ ಒಬ್ಬ ನಟನ ಸಾವಲ್ಲ, ಬದಲಿಗೆ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ಎದುರಾಗಿರುವ ದೊಡ್ಡ ಪ್ರಶ್ನೆಯಾಗಿದೆ.

ಸರಣಿ ಸಾವುಗಳ ಆಘಾತ: ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಘಟನೆಗಳು ಹೊಸದೇನಲ್ಲ. ಇದಕ್ಕೂ ಮುನ್ನ ಅತ್ಯಂತ ಫಿಟ್ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಯುವ ನಟ ಚಿರಂಜೀವಿ ಸರ್ಜಾ ಹಾಗೂ ಬಾಡಿ ಬಿಲ್ಡರ್ ರಾಕೇಶ್ ಪೂಜಾರಿ ಇವರುಗಳ ಸಾವು ಕೂಡ ಇದೇ ಮಾದರಿಯಲ್ಲೇ ಸಂಭವಿಸಿತ್ತು. ಇವರೆಲ್ಲರೂ ದೈಹಿಕ ಕಸರತ್ತು ಮತ್ತು ಫಿಟ್‌ನೆಸ್‌ಗೆ ಹೆಸರಾದವರು. ಆದ್ರು ಇಷ್ಟು ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಸಂಭವಿಸುತ್ತಿರುವುದು ದೈಹಿಕ ಕಸರತ್ತು ಮಾತ್ರವೇ ದೀರ್ಘಾಯುಷ್ಯಕ್ಕೆ ಗ್ಯಾರಂಟಿ ಅಲ್ಲವೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಮುಖ್ಯ ಕಾರಣಗಳೇನು?: ವೈದ್ಯಕೀಯ ತಜ್ಞರ ಪ್ರಕಾರ, ಅತಿಯಾದ ದೈಹಿಕ ಶ್ರಮ (Extreme Workout) ಮತ್ತು ಮಾನಸಿಕ ಒತ್ತಡವು ಹೃದಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಚಿತ್ರರಂಗದಲ್ಲಿ ಇರುವವರಿಗೆ ಸಮಯಕ್ಕೆ ಸರಿಯಾದ ನಿದ್ದೆ ಇಲ್ಲದಿರುವುದು, ಸತತ ಕೆಲಸದ ಒತ್ತಡ ಮತ್ತು ಆಂತರಿಕವಾಗಿರುವ ಹೃದಯದ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಪ್ರಾಣಾಪಾಯಕ್ಕೆ ಕಾರಣವಾಗಬಹುದು. ದಿಲೀಪ್ ರಾಜ್ ವಿಷಯದಲ್ಲಿ ತಿಳಿದುಬಂದಂತೆ, ಅವರಿಗೆ ಇತ್ತೀಚೆಗೆ ಎದೆನೋವು ಕಾಣಿಸಿಕೊಳ್ಳುತ್ತಿತ್ತು. ಇಂತಹ ಸಣ್ಣ ಲಕ್ಷಣಗಳನ್ನು ಕೇವಲ ಗ್ಯಾಸ್ಟ್ರಿಕ್ ಅಥವಾ ಸಾಮಾನ್ಯ ನೋವು ಎಂದು ನಿರ್ಲಕ್ಷಿಸುವುದು ಅಪಾಯಕಾರಿ ಎನ್ನುತ್ತಾರೆ ವೈದ್ಯರು.

ಓದುಗರ ಗಮನಕ್ಕೆ: ನಟರು ಅಥವಾ ಸಾಮಾನ್ಯ ಜನರು ಜಿಮ್‌ಗೆ ಹೋಗುವುದು ಒಳ್ಳೆಯದೇ ಆದ್ರೂ, ತಮ್ಮ ವಯಸ್ಸು ಮತ್ತು ದೇಹದ ಸಾಮರ್ಥ್ಯಕ್ಕೆ ತಕ್ಕಂತೆ ವ್ಯಾಯಾಮ ಮಾಡುವುದು ಮುಖ್ಯ. ನಿಯಮಿತವಾಗಿ ಸಂಪೂರ್ಣ ದೇಹದ ತಪಾಸಣೆ (Full Body Checkup) ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ದಿಲೀಪ್ ರಾಜ್ ವೈದ್ಯರ ಅಪಾಯಿಂಟ್‌ಮೆಂಟ್ ಪಡೆದಿದ್ದರೂ, ಅಲ್ಲಿಗೆ ತಲುಪುವ ಮೊದಲೇ ವಿಧಿ ಆಟವಾಡಿದೆ. ಶಿಸ್ತಿನ ಜೀವನದ ಜೊತೆಗೆ ದೇಹ ನೀಡುವ ಸಣ್ಣ ಸಣ್ಣ ಮುನ್ಸೂಚನೆಗಳನ್ನು ಗಮನಿಸುವುದು ಪ್ರಾಣ ಉಳಿಸಿಕೊಳ್ಳಲು ಇರುವ ಏಕೈಕ ದಾರಿ ಎಂಬುದನ್ನು ಈ ಘಟನೆಗಳು ನೆನಪಿಸುತ್ತಿವೆ.

The post ಜಿಮ್, ಡಯಟ್ ಇದ್ದರೂ ಕಾಡಿದ ವಿಧಿ: ದಿಲೀಪ್ ರಾಜ್ ನಿಧನ; ಫಿಟ್‌ನೆಸ್ ಪ್ರೇಮಿಗಳಿಗೆ ಇದೊಂದು ಎಚ್ಚರಿಕೆಯ ಕರೆ! appeared first on Samyukta Karnataka.

​ನಾಟಕದ ಸೆಟ್‌ನಲ್ಲಿ ಶುರುವಾದ ಪ್ರೀತಿ, 15 ವರ್ಷದ ದಾಂಪತ್ಯ: ಪ್ರಿಯತಮೆಯ ಕೈಬಿಟ್ಟು ಬಾರದ ಲೋಕಕ್ಕೆ; ದಿಲೀಪ್ ರಾಜ್
ಬೆಂಗಳೂರು: ಸಿನಿ ಸ್ಯಾಂಡಲ್‌ವುಡ್‌ನ ಕಿರುತೆರೆಯ ಜನಪ್ರಿಯ ನಟ, ಯಶಸ್ವಿ ನಿರ್ಮಾಪಕ ದಿಲೀಪ್ ರಾಜ್ (47) ಬುಧವಾರ ವಿಧಿವಶರಾಗಿದ್ದಾರೆ. ಮನೆಯಲ್ಲಿದ್ದಾಗ ಸಂಭವಿಸಿದ ಏಕಾಏಕಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕೇವಲ 47 ವರ್ಷ ವಯಸ್ಸಿನಲ್ಲೇ ದಿಲೀಪ್‌ ಅಗಲಿಕೆ ಕನ್ನಡ ಚಿತ್ರರಂಗದಲ್ಲಿ ಮತ್ತು ಅವರ ಅಪಾರ ಅಭಿಮಾನಿ ಬಳಗಕ್ಕೆ ಅರಗಿಸಿಕೊಳ್ಳಲಾಗದ ದುಃಖ ತಂದಿದೆ.

ಸಿನಿಮಾ ಹಾಗೂ ಕಿರುತೆರೆಯ ಪಯಣ: ದಿಲೀಪ್ ರಾಜ್ 2005ರಲ್ಲಿ ‘ಬಾಯ್ ಫ್ರೆಂಡ್’ ಮತ್ತು 2009ರಲ್ಲಿ ‘ಲವ್ ಗುರು’ ಚಿತ್ರಗಳ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’ ಸಿನಿಮಾದಲ್ಲಿನ ಅಭಿನಯ ಸಿನಿಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ನಂತರ ‘ಯು-ಟರ್ನ್’ ಸೇರಿದಂತೆ ಹಲವು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಇನ್ನು ಕಿರುತೆರೆಯಲ್ಲಿ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಎಜೆ ಪಾತ್ರದ ಮೂಲಕ ಮನೆಮಾತಾಗಿದ್ದ ನಟ, ನಾಯಕ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ಸೈ ಎನಿಸಿಕೊಂಡಿದ್ದರು.

ಸಾಧನೆಯ ಹಾದಿಯಲ್ಲಿ ನಿರ್ಮಾಪಕ: ಕೇವಲ ನಟನೆಗೆ ಸೀಮಿತವಾಗದ ದಿಲೀಪ್ ರಾಜ್, ‘ಡಿ2ಆರ್ ಮೀಡಿಯಾ’ ಸಂಸ್ಥೆಯ ಮೂಲಕ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟಿದ್ದರು. ‘ಪಾರು’, ‘ಬ್ರಹ್ಮಗಂಟು’, ‘ಕೃಷ್ಣ ರುಕ್ಕು’ ಸೇರಿದಂತೆ ಹಲವಾರು ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಿಸಿ, ಕಿರುತೆರೆಯ ಯಶಸ್ವಿ ನಿರ್ಮಾಪಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಸದಾ ಒಂದಿಲ್ಲೊಂದು ಹೊಸ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ʻಹಿಟ್ಲರ್‌ʼ ಕೆಲಸದ ವಿಚಾರದಲ್ಲಿ ಅತ್ಯಂತ ಕಟ್ಟುನಿಟ್ಟಿನ ಶಿಸ್ತು ಪಾಲಿಸುತ್ತಿದ್ದರು.

ಪತ್ನಿಯೇ ಬೆನ್ನೆಲುಬು: ದಿಲೀಪ್ ರಾಜ್ ವೈಯಕ್ತಿಕ ಜೀವನ ಸಿನಿಮಾ ಕಥೆಯಷ್ಟೇ ಸುಂದರವಾಗಿತ್ತು. ತಮ್ಮ ಪತ್ನಿ ವಿದ್ಯಾಶ್ರೀನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರ ಮೊದಲ ಭೇಟಿಯಾಗಿದ್ದು ಒಂದು ನಾಟಕದ ಸೆಟ್‌ನಲ್ಲಿ. ವಿದ್ಯಾಶ್ರೀ ಕೂಡ ಕಲಾ ಹಿನ್ನೆಲೆಯುಳ್ಳವರಾಗಿದ್ದರಿಂದ ಇವರ ಸ್ನೇಹ ಸುಲಭವಾಗಿ ಪ್ರೀತಿಗೆ ತಿರುಗಿತ್ತು. ಸುಮಾರು 5-6 ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಿಲೀಪ್ ನಟನೆಯಿಂದ ನಿರ್ಮಾಣಕ್ಕೆ ಇಳಿದಾಗ ವಿದ್ಯಾಶ್ರೀ ಬೆನ್ನೆಲುಬಾಗಿ ನಿಂತು ಪ್ರತಿ ಹಂತದಲ್ಲೂ ಸಾಥ್ ನೀಡಿದ್ದರು.

ಸದಾ ಲವಲವಿಕೆಯಿಂದ ಇರುತ್ತಿದ್ದ ಈ ದಂಪತಿಯ ಸುಖೀ ಸಂಸಾರದಲ್ಲಿ ಅಕಾಲಿಕ ಸಾವು ಕತ್ತಲು ಆವರಿಸುವಂತೆ ಮಾಡಿದೆ. ಪ್ರತಿಭಾವಂತ ಕಲಾವಿದನ ಅಕಾಲಿಕ ನಿರ್ಗಮನಕ್ಕೆ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

The post ​ನಾಟಕದ ಸೆಟ್‌ನಲ್ಲಿ ಶುರುವಾದ ಪ್ರೀತಿ, 15 ವರ್ಷದ ದಾಂಪತ್ಯ: ಪ್ರಿಯತಮೆಯ ಕೈಬಿಟ್ಟು ಬಾರದ ಲೋಕಕ್ಕೆ; ದಿಲೀಪ್ ರಾಜ್ appeared first on Samyukta Karnataka.