diesel price hike Archives - Samyukta Karnataka

ಎರಡು ವಾರಗಳಲ್ಲಿ ₹7ಕ್ಕೂ ಹೆಚ್ಚು ದುಬಾರಿಯಾದ ಪೆಟ್ರೋಲ್, ಡೀಸೆಲ್: ಮಹಾನಗರಗಳ ಇಂದಿನ ದರ ಇಲ್ಲಿದೆ
ರಾಜ್ಯ ಸ್ವಾಮ್ಯದ ತೈಲ ಕಂಪನಿಗಳು (OMCs) ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ ಲೀಟರ್‌ಗೆ 2.61ರೂಪಾಯಿ ಮತ್ತು 2.71 ರೂಪಾಯಿಯಷ್ಟು ಹೆಚ್ಚಿಸಿವೆ. ಕಳೆದ 10 ದಿನಗಳಲ್ಲಿ ನಡೆದಿರುವ 4ನೇ ಏರಿಕೆ ಇದಾಗಿದ್ದು, ಒಟ್ಟಾರೆ ಎರಡು ವಾರಗಳಲ್ಲಿ ಇಂಧನ ದರಗಳು ಕ್ರಮವಾಗಿ 7.35ರೂಪಾಯಿ ಹಾಗೂ 7.53ರೂಪಾಯಿಯಷ್ಟು ದುಬಾರಿಯಾಗಿವೆ. ಈ ತಿದ್ದುಪಡಿಯ ನಂತರ ದೆಹಲಿಯಲ್ಲಿ ಪೆಟ್ರೋಲ್ 102.12ರೂಪಾಯಿ ಮತ್ತು ಡೀಸೆಲ್ 95.20ರೂಪಾಯಿಗೆ ತಲುಪಿದೆ.

ಹಾಗೇ ಸ್ಥಳೀಯ ಸುಂಕಗಳ ವ್ಯತ್ಯಾಸದಿಂದಾಗಿ ದೇಶದ ಪ್ರಮುಖ ಮಹಾನಗರಗಳಲ್ಲಿ ಇಂಧನ ದರಗಳು ಭಿನ್ನವಾಗಿವೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ₹113.51 ಹಾಗೂ ಡೀಸೆಲ್ ₹99.82 ತಲುಪಿದ್ದರೆ, ಮುಂಬೈನಲ್ಲಿ ಪೆಟ್ರೋಲ್ ₹111.21 ಮತ್ತು ಡೀಸೆಲ್ ₹97.83 ಕ್ಕೆ ಮಾರಾಟವಾಗುತ್ತಿದೆ. ಇನ್ನು ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕ್ರಮವಾಗಿ ₹107.77 ಮತ್ತು ₹99.55 ಕ್ಕೆ ಏರಿಕೆಯಾಗಿವೆ.

ಬೆಲೆ ಏರಿಕೆಗೆ ಕಾರಣಗಳು ಮತ್ತು ತೈಲ ಕಂಪನಿಗಳ ಲಾಭ: ಪಶ್ಚಿಮ ಏಷ್ಯಾದಲ್ಲಿ ಫೆಬ್ರವರಿ 28 ರಂದು ಆರಂಭವಾದ ಯುದ್ಧದ ಹಿನ್ನೆಲೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಮಾರ್ಚ್ 9 ರಂದು ಬ್ಯಾರೆಲ್‌ಗೆ $120 ಕ್ಕೆ ಏರಿತ್ತು. ಆದ್ರೆ ವಿಧಾನಸಭಾ ಚುನಾವಣೆಗಳ ಕಾರಣದಿಂದಾಗಿ ತೈಲ ಕಂಪನಿಗಳು ಆರಂಭದಲ್ಲಿ ಬೆಲೆ ಹೆಚ್ಚಿಸಿರಲಿಲ್ಲ. ಪ್ರಸ್ತುತ ಕಂಪನಿಗಳು ತಮಗಾದ ಆದಾಯ ನಷ್ಟ ಹಾಗೂ ಅಡುಗೆ ಅನಿಲದ (LPG) ಮೇಲಿನ ಕಡಿಮೆ ಚೇತರಿಕೆಯನ್ನು ಸರಿದೂಗಿಸಲು ಈ ದರ ಹೆಚ್ಚಳ ಮಾಡುತ್ತಿವೆ. ಮೇ 15 ರಂದು ಆರಂಭವಾದ ಈ ದರ ಏರಿಕೆ ಚಕ್ರದಿಂದಾಗಿ ಕಂಪನಿಗಳ ದೈನಂದಿನ ನಷ್ಟವು ₹1,000 ಕೋಟಿಯಿಂದ ₹500 ಕೋಟಿಗಿಂತ ಕೆಳಗೆ ಇಳಿದಿದೆ.

ವಿಶೇಷವೆಂದರೇ.. ಕಚ್ಚಾ ತೈಲ ಬೆಲೆಯ ಏರಿಳಿತದ ನಡುವೆಯೂ, ಸ್ಥಿರ ಮಾರುಕಟ್ಟೆ ಮತ್ತು ಉತ್ತಮ ಸಂಸ್ಕರಣಾ ಅಂಚುಗಳಿಂದಾಗಿ 2025-26ರ ಹಣಕಾಸು ವರ್ಷದಲ್ಲಿ ಮೂರು ಪ್ರಮುಖ ತೈಲ ಕಂಪನಿಗಳ ಒಟ್ಟು ನಿವ್ವಳ ಲಾಭವು ಶೇ.130 ರಷ್ಟು ಹೆಚ್ಚಾಗಿ ₹77,280.65 ಕೋಟಿಗಳಿಗೆ ತಲುಪಿದೆ. ಜಾಗತಿಕವಾಗಿ ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ $100 ಕ್ಕಿಂತ ಕಡಿಮೆ ಸ್ಥಿರವಾಗದ ಹೊರತು ಅಥವಾ $70 ರ ಆಸುಪಾಸಿಗೆ ಬಾರದಿದ್ದರೆ ಐದನೇ ಬಾರಿ ಬೆಲೆ ಏರಿಕೆಯಾಗುವ ಸಾಧ್ಯತೆಯನ್ನು ತಜ್ಞರು ತಳ್ಳಿಹಾಕುವಂತಿಲ್ಲ.

The post ಎರಡು ವಾರಗಳಲ್ಲಿ ₹7ಕ್ಕೂ ಹೆಚ್ಚು ದುಬಾರಿಯಾದ ಪೆಟ್ರೋಲ್, ಡೀಸೆಲ್: ಮಹಾನಗರಗಳ ಇಂದಿನ ದರ ಇಲ್ಲಿದೆ appeared first on Samyukta Karnataka.