dhurandar3 Archives - Samyukta Karnataka

‘ಧುರಂಧರ್ 2ʼ ಆಯ್ತು ಪಾರ್ಟ್‌ 3 ಬರುತ್ತಾ? ನಟ ರಾಕೇಶ್ ಬೇಡಿ ಅಚ್ಚರಿಯ ಹೇಳಿಕೆ!
ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಮತ್ತು ಪ್ರತಿಭಾವಂತ ನಿರ್ದೇಶಕ ಆದಿತ್ಯ ಧರ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ‘ಧುರಂಧರ್’ ಹಾಗೂ ‘ಧುರಂಧರ್ 2’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿತ್ತು. ಸದ್ಯ ಈ ಸರಣಿಯ ಮೂರನೇ ಭಾಗ ‘ಧುರಂಧರ್ 3’ ಸೆಟ್ಟೇರುತ್ತದೆಯೇ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಈ ಕುತೂಹಲಕ್ಕೆ ಚಿತ್ರದ ಪ್ರಮುಖ ಪಾತ್ರಧಾರಿ, ಹಿರಿಯ ನಟ ರಾಕೇಶ್ ಬೇಡಿ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಕೇಶ್ ಬೇಡಿ, “ಮೂರನೇ ಭಾಗ ಬರುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ ಎರಡನೇ ಭಾಗದ ಅಂತ್ಯದಲ್ಲಿ ಕಥೆಯ ನಾಯಕ (ಗೂಢಚಾರಿ) ತನ್ನ ಕಾರ್ಯಾಚರಣೆ ಮುಗಿಸಿ ಸ್ವದೇಶಕ್ಕೆ ಮರಳುತ್ತಾನೆ. ಕಥೆ ಅಲ್ಲಿಗೆ ಒಂದು ತಾರ್ಕಿಕ ಅಂತ್ಯ ಕಂಡಿದೆ” ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದ್ದಾರೆ.

ಆದ್ರೆ ಇದೇ ವೇಳೆ ಒಂದು ಆಶಾದಾಯಕ ಮುನ್ಸೂಚನೆಯನ್ನೂ ನೀಡಿದ್ದಾರೆ. “ಧುರಂಧರ್ ಎಂಬುದು ಇಂದು ದೊಡ್ಡ ಫ್ರಾಂಚೈಸಿ ಆಗಿ ಬೆಳೆದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೊಸ ಕಥೆ ಮತ್ತು ಬೇರೆ ನಟರೊಂದಿಗೆ ಈ ಫ್ರಾಂಚೈಸಿಯನ್ನು ಮುಂದುವರಿಸುವ ಸಾಧ್ಯತೆ ಯಾವಾಗಲೂ ಇರುತ್ತದೆ” ಎಂದು ತಿಳಿಸಿದರು.

ಹಾಗೇ ‘ಧುರಂಧರ್’ ಸರಣಿಯು ಕಲೆಕ್ಷನ್ ವಿಚಾರದಲ್ಲಿ ಅತಿ ದೂಡ್ಡ, ಹೊಸ ದಾಖಲೆಯನ್ನೇ ಬರೆದಿದೆ. ಡಿಸೆಂಬರ್‌ 2025ರಲ್ಲಿ ಬಿಡುಗಡೆಯಾದ ‘ಧುರಂಧರ್ ಮೊದಲ ಭಾಗ ಸುಮಾರು 1,300 ಕೋಟಿ ರೂಪಾಯಿ ಗಳಿಸಿತ್ತು. ಇದೀಗ 2026ರ ಮಾರ್ಚ್‌ನಲ್ಲಿ ತೆರೆಕಂಡ ‘ಧುರಂಧರ್ 2’ ಕೇವಲ ಒಂದೇ ತಿಂಗಳಿನಲ್ಲಿ 1,700 ಕೋಟಿ ರೂಪಾಯಿಗೂ ಅಧಿಕ ಹಣ ಬಾಚಿಕೊಂಡಿದೆ.

ಒಟ್ಟಾರೆಯಾಗಿ ಈ ಸರಣಿಯು ಜಾಗತಿಕವಾಗಿ 3,000 ಕೋಟಿ ರೂಪಾಯಿಗಳ ಗಡಿ ದಾಟಿ ಭಾರತೀಯ ಚಿತ್ರರಂಗದ ಅತಿ ದೊಡ್ಡ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಚಿತ್ರದಲ್ಲಿ ಜಮೀಲ್ ಜಮಾಲಿ ಪಾತ್ರ ಮಾಡಿದ್ದ ರಾಕೇಶ್ ಬೇಡಿ ಪಾತ್ರವು ಭಾರತೀಯ ಗೂಢಚಾರಿ ಎಂದು ಬಹಿರಂಗವಾದ ಟ್ವಿಸ್ಟ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಈಗ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಆದಿತ್ಯ ಧರ್ ಮೂರನೇ ಭಾಗಕ್ಕೆ ಕೈ ಹಾಕುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

The post ‘ಧುರಂಧರ್ 2ʼ ಆಯ್ತು ಪಾರ್ಟ್‌ 3 ಬರುತ್ತಾ? ನಟ ರಾಕೇಶ್ ಬೇಡಿ ಅಚ್ಚರಿಯ ಹೇಳಿಕೆ! appeared first on Samyukta Karnataka.