#delhi Archives - Samyukta Karnataka

ರೈಲ್ವೆ ಸಿಬ್ಬಂದಿಯ ಜಾಗರೂಕತೆ: ತಪ್ಪಿದ ಭಾರೀ ರೈಲು ಅನಾಹುತ
ನವದೆಹಲಿ–ಕತ್ರಾ ವಿಶೇಷ ರೈಲಿನಲ್ಲಿ ತಾಂತ್ರಿಕ ದೋಷ: ಕೋಚ್ ಜೋಡಣೆ ವಿಫಲ, ದೊಡ್ಡ ಅನಾಹುತ ತಪ್ಪಿಸಿದ ರೈಲ್ವೆ ಸಿಬ್ಬಂದಿ – ನೂರಾರು ಪ್ರಯಾಣಿಕರ ಸುರಕ್ಷಿತ ಸ್ಥಳಾಂತರ

ನವದೆಹಲಿ: ನವದೆಹಲಿ–ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ವಿಶೇಷ ರೈಲಿನಲ್ಲಿ ಸಂಭವಿಸಿದ ತಾಂತ್ರಿಕ ದೋಷದಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ರೈಲ್ವೆ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ತಪ್ಪಿದೆ. ಶನಿವಾರ ಬೆಳಿಗ್ಗೆ ರೈಲು ನಿಲ್ದಾಣದಿಂದ ಹೊರಡಲು ಸಿದ್ಧವಾಗಿದ್ದ ವೇಳೆ ಸ್ಲೀಪರ್ ಕೋಚ್‌ಗಳ ನಡುವಿನ ಜೋಡಣೆ ವ್ಯವಸ್ಥೆಯಲ್ಲಿ ದೋಷ ಉಂಟಾಗಿ ಒಂದು ಕೋಚ್ ಅಪಾಯಕಾರಿಯಾಗಿ ಒರಗಿದ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, ಬೆಳಿಗ್ಗೆ ಸುಮಾರು 8.45ರ ವೇಳೆಗೆ ನವದೆಹಲಿ–ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ವಿಶೇಷ ರೈಲು ಪ್ಲಾಟ್‌ಫಾರ್ಮ್ ಸಂಖ್ಯೆ 2ರಿಂದ ಹೊರಡಲು ಆರಂಭಿಸಿದಾಗ, ಎಸ್-1 ಮತ್ತು ಎಸ್-2 ಸ್ಲೀಪರ್ ಕೋಚ್‌ಗಳ ನಡುವಿನ ಕಪ್ಲಿಂಗ್ (ಜೋಡಣೆ) ವ್ಯವಸ್ಥೆ ವಿಫಲಗೊಂಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಶಿಕ್ಷಣ ಸಚಿವರ ವಿರುದ್ಧ ಜಂತರ್ ಮಂತರ್‌ನಲ್ಲಿ CJP ಭಾರೀ ಪ್ರತಿಭಟನೆ

ಹಳಿಗಳ ಮೇಲೆ ಕುಸಿತ : ಜೋಡಣೆ ವ್ಯವಸ್ಥೆಯಲ್ಲಿ ಉಂಟಾದ ದೋಷದ ಪರಿಣಾಮ ಎಸ್-2 ಕೋಚ್‌ನ ಶೌಚಾಲಯದ ಭಾಗವು ನೆಲ ಹಳಿಗಳ ಮೇಲೆ ಕುಸಿದಿದ್ದು, ಕೋಚ್ ಒಂದು ಬದಿಗೆ ಒರಗಿದ ಸ್ಥಿತಿ ನಿರ್ಮಾಣವಾಗಿದೆ. ಘಟನೆ ಗಮನಕ್ಕೆ ಬಂದ ತಕ್ಷಣ ರೈಲ್ವೆ ಸಿಬ್ಬಂದಿ ತುರ್ತು ಕ್ರಮ ಕೈಗೊಂಡು ರೈಲನ್ನು ನಿಲ್ಲಿಸಿದ್ದಾರೆ. ಈ ವೇಳೆ ರೈಲಿನಲ್ಲಿದ್ದ ಪ್ರಯಾಣಿಕರಲ್ಲಿ ಆತಂಕ ಉಂಟಾದರೂ, ಸಿಬ್ಬಂದಿ ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ.

500ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಳಾಂತರ : ಘಟನೆಯ ಬಳಿಕ ರೈಲಿನಲ್ಲಿದ್ದ ನೂರಾರು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈಷ್ಣೋ ದೇವಿ ದರ್ಶನಕ್ಕೆ ತೆರಳುತ್ತಿದ್ದ ಯಾತ್ರಿಕರು ಇದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: ಸದ್ಯದಲ್ಲೇ ರಕ್ಷಿತ್ ಶೆಟ್ಟಿ ದರ್ಶನ : BIG ಅಪ್ಡೇಟ್ ಕೊಟ್ಟ ರಿಷಬ್ ಶೆಟ್ಟಿ

ರೈಲ್ವೆ ಅಧಿಕಾರಿಗಳು ದೋಷಪೂರಿತ ಕೋಚ್‌ಗಳನ್ನು ಬೇರ್ಪಡಿಸಿ, ಪ್ರಯಾಣಿಕರನ್ನು ಇತರೆ ರೈಲುಗಳಲ್ಲಿ ಮರು ವ್ಯವಸ್ಥೆ ಮಾಡಿ ಗಮ್ಯಸ್ಥಾನಕ್ಕೆ ಕಳುಹಿಸಲು ಕ್ರಮ ಕೈಗೊಂಡಿದ್ದಾರೆ. ಕೆಲವರನ್ನು ಸ್ವರಾಜ್ ಎಕ್ಸ್‌ಪ್ರೆಸ್ ಸೇರಿದಂತೆ ಇತರ ರೈಲುಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.

ತಾಂತ್ರಿಕ ದೋಷವೇ ಕಾರಣ: ರೈಲ್ವೆ ಪ್ರಾಥಮಿಕ ತನಿಖೆಯ ಪ್ರಕಾರ ಇದು ತಾಂತ್ರಿಕ ದೋಷದಿಂದ ಸಂಭವಿಸಿರುವ ಘಟನೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಕೋಚ್‌ಗಳ ಜೋಡಣೆ ವ್ಯವಸ್ಥೆ ಹಾಗೂ ನಿರ್ವಹಣಾ ಕ್ರಮಗಳ ಬಗ್ಗೆ ಸವಿಸ್ತಾರ ತನಿಖೆ ಆರಂಭಿಸಲಾಗಿದೆ. ವಿಶೇಷವಾಗಿ ಹಳೆಯ ಮಾದರಿಯ ಐಸಿಎಫ್ (ICF) ಕೋಚ್‌ಗಳ ಬಳಕೆ ಹಾಗೂ ಅವುಗಳ ನಿರ್ವಹಣೆ ಕುರಿತು ಈಗಾಗಲೇ ಹಲವು ವಲಯಗಳಲ್ಲಿ ಪ್ರಶ್ನೆಗಳು ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಘಟನೆ ಮತ್ತೊಮ್ಮೆ ರೈಲ್ವೆಯ ನಿರ್ವಹಣಾ ಗುಣಮಟ್ಟದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಭ್ರಷ್ಟಾಚಾರ ವ್ಯವಸ್ಥೆಗೆ ಅಂಟಿರುವ ಕ್ಯಾನ್ಸರ್: ಎಲ್. ನಾರಾಯಣಸ್ವಾಮಿ

The post ರೈಲ್ವೆ ಸಿಬ್ಬಂದಿಯ ಜಾಗರೂಕತೆ: ತಪ್ಪಿದ ಭಾರೀ ರೈಲು ಅನಾಹುತ appeared first on Samyukta Karnataka.

ರಾಹುಲ್ ಭೇಟಿಯಾದ ಸಿದ್ದರಾಮಯ್ಯ: ಅಪ್ಪುಗೆ ಫೋಟೋ ವೈರಲ್
ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜತೆ ಸಿದ್ದರಾಮಯ್ಯ ಮಹತ್ವದ ಮಾತುಕತೆ

ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರುದಿನವೇ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ ದೆಹಲಿಯ 10 ಜನಪಥ್ ನಿವಾಸದಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು. ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಸ್ವಾಗತಿಸಿದ ದೃಶ್ಯ ವಿಶೇಷ ಗಮನ ಸೆಳೆಯಿತು.

ಇಬ್ಬರೂ ಸ್ನೇಹಪೂರ್ವಕವಾಗಿ ಮಾತುಕತೆ ನಡೆಸಿದರೆಂದು ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ನಂತರದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ರಾಜ್ಯಪಾಲರಿಂದ ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ

ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ರಾಜ್ಯದ ನೂತನ ಸರ್ಕಾರ ರಚನೆ, ಸಚಿವ ಸಂಪುಟದ ಸಮತೋಲನ ಹಾಗೂ ಪಕ್ಷದಲ್ಲಿ ತಮ್ಮ ಮುಂದಿನ ಪಾತ್ರದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯಸಭಾ ಸ್ಥಾನವನ್ನು ಈಗಾಗಲೇ ನಿರಾಕರಿಸಿರುವ ಸಿದ್ದರಾಮಯ್ಯ ಅವರು ರಾಷ್ಟ್ರೀಯ ರಾಜಕಾರಣಕ್ಕಿಂತ ಕರ್ನಾಟಕ ರಾಜಕೀಯದಲ್ಲೇ ಮುಂದುವರಿಯಲು ಬಯಸುತ್ತಿರುವುದಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಾಜ್ಯ ರಾಜಕೀಯದಲ್ಲೇ ಸಕ್ರಿಯವಾಗಿರಲು ಅವರು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ವೆಂಕಟರಮಣಪ್ಪ ನಿಧನ

ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕಿ ಸೋನಿಯಾ ಗಾಂಧಿ ಉಪಸ್ಥಿತರಿರಲಿಲ್ಲ ಎನ್ನಲಾಗಿದ್ದು, ಈ ಕಾರಣದಿಂದ ಸಿದ್ದರಾಮಯ್ಯ ಅವರು ಮುಖ್ಯವಾಗಿ ರಾಹುಲ್ ಗಾಂಧಿ ಅವರೊಂದಿಗೇ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ. ರಾಜ್ಯಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರಿಗೆ ಸಿದ್ದರಾಮಯ್ಯ ಧನ್ಯವಾದ ಅರ್ಪಿಸಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ, ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ತಮ್ಮ ಪುತ್ರ ಹಾಗೂ ಕೆಲವು ಆಪ್ತರಿಗೆ ಸ್ಥಾನ ಕಲ್ಪಿಸುವ ಕುರಿತೂ ಸಿದ್ದರಾಮಯ್ಯ ಚರ್ಚೆ ನಡೆಸಿರುವ ಸಾಧ್ಯತೆ ಇದೆ ಎಂಬ ರಾಜಕೀಯ ವಲಯದಲ್ಲಿ ಚರ್ಚೆಗಳು ಕೇಳಿಬರುತ್ತಿವೆ. ಉಪಮುಖ್ಯಮಂತ್ರಿ ಹುದ್ದೆ ಸೇರಿದಂತೆ ಪ್ರಮುಖ ಸ್ಥಾನಗಳ ಬಗ್ಗೆ ಮಾತುಕತೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಪ್ರವಾಸ ಆರಂಭಿಸಿದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್

ಈ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ಕೂಡ ಉಪಸ್ಥಿತರಿದ್ದರು. ಸಭೆಯ ಬಳಿಕ ಮಾತನಾಡಿದ ಅವರು, “ಇದು ತುಂಬಾ ಆಹ್ಲಾದಕರ ಸಭೆಯಾಗಿತ್ತು. ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ” ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮವಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರ್ಜೇವಾಲಾ, “ಖಂಡಿತವಾಗಿಯೂ ಯಾವುದೇ ಅಡಚಣೆ ಇಲ್ಲದೆ ಅಧಿಕಾರ ವರ್ಗಾವಣೆ ನಡೆಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: IPLನಲ್ಲಿ ಆಟಗಾರರಿಗೆ ಹೊಸ ನಿಯಮ ಜಾರಿ : ಭ್ರಷ್ಟಾಚಾರ ತಡೆಗೆ ಕಠಿಣ ಕ್ರಮ

ಈ ನಡುವೆ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರು ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಔಪಚಾರಿಕವಾಗಿ ಅಂಗೀಕರಿಸಿದ್ದಾರೆ. ಇದೀಗ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರು ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಹೆಚ್ಚಾಗಿದೆ. ಪ್ರಮಾಣವಚನ ಸಮಾರಂಭದ ಮುಹೂರ್ತವನ್ನು ಶೀಘ್ರದಲ್ಲೇ ನಿಗದಿಪಡಿಸುವ ಸಾಧ್ಯತೆ ಇದೆ.

ಕಾಂಗ್ರೆಸ್ ಸಂಘಟನಾ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್‌ ಅವರೊಂದಿಗೆ ಕೂಡ ಪ್ರತ್ಯೇಕ ಮಾತುಕತೆ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಹಾಗೂ ಪಕ್ಷ ಸಂಘಟನೆಯ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ನೂತನ ಮುಖ್ಯಮಂತ್ರಿಯ ಆಯ್ಕೆ ಪ್ರಕ್ರಿಯೆಯನ್ನು ಅಧಿಕೃತಗೊಳಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ ಸಂಜೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿಗೆ ಆಗಮಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

IPLನಲ್ಲಿ ಸ್ಮಾರ್ಟ್ ಸನ್‌ಗ್ಲಾಸ್ ನಿಷೇಧಿಸಿದ BCCI

The post ರಾಹುಲ್ ಭೇಟಿಯಾದ ಸಿದ್ದರಾಮಯ್ಯ: ಅಪ್ಪುಗೆ ಫೋಟೋ ವೈರಲ್ appeared first on Samyukta Karnataka.

ಹೆಸರು ಬದಲಿಸಿ ದಲಿತ ಯುವತಿಗೆ ವಂಚನೆ: ಬಾಟ್ಲಾ ಹೌಸ್‌ನಲ್ಲಿ ಸಾಮೂಹಿಕ ಅತ್ಯಾಚಾರ, ಚಿತ್ರಹಿಂಸೆ!
ದೆಹಲಿಯ ಬಾಟ್ಲಾ ಹೌಸ್ ಪ್ರದೇಶದಲ್ಲಿ ದಲಿತ ಮಹಿಳೆಯೊಬ್ಬರ ಮೇಲೆ ಅಪಹರಣ, ಸಾಮೂಹಿಕ ಅತ್ಯಾಚಾರ, ಕ್ರೂರ ಚಿತ್ರಹಿಂಸೆ ಹಾಗೂ ಬಲವಂತದ ಮತಾಂತರಕ್ಕೆ ಯತ್ನಿಸಿರುವ ಅತ್ಯಂತ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು 23 ವರ್ಷದ ಸಂತ್ರಸ್ತೆ ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಘಟನೆಯ ಹಿನ್ನೆಲೆ: 2021 ರಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಸಾಹಿಲ್ ಎಂಬಾತನ ಪರಿಚಯವಾಗಿತ್ತು. ಆತ ತಾನು ಶ್ರೀಮಂತ ಹಿಂದೂ ಕುಟುಂಬದವನೆಂದು ಸುಳ್ಳು ಹೇಳಿ, ಮದುವೆಯಾಗುವುದಾಗಿ ನಂಬಿಸಿದ್ದ. ಆದ್ರೆ ನಂತರ ಆತನ ನಿಜವಾದ ಹೆಸರು ಫಹೀಮ್ ಎಂದು ಸಂತ್ರಸ್ತೆಗೆ ತಿಳಿದುಬಂದಿದೆ. 2022 ರಲ್ಲಿ ಆಕೆಯನ್ನು ಬಾಟ್ಲಾ ಹೌಸ್‌ಗೆ ಕರೆದೊಯ್ದ ಫಹೀಮ್ ಮತ್ತು ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ.. ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ದೌರ್ಜನ್ಯದ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡಿದ್ದರು.

ಚಿತ್ರಹಿಂಸೆ, ಮತಾಂತರಕ್ಕೆ ಒತ್ತಾಯ: ಇದಾದ ನಂತರ ಸಂತ್ರಸ್ತೆಯನ್ನು ಮೀರತ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವನ್ನು ಮುಂದುವರಿಸಲಾಗಿತ್ತು. ತಸ್ಲೀಮ್ ಮೌಲ್ವಿ ಎಂಬಾತನಿಂದ ತನಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗುತ್ತಿತ್ತು ಎಂದು ಮಹಿಳೆ ಆರೋಪಿಸಿದ್ದಾರೆ. ಬೆದರಿಸುವ ತಂತ್ರವಾಗಿ ತನ್ನ ಮೇಲೆ ರಕ್ತದಲ್ಲಿ ನೆನೆಸಿದ ಪ್ರಾಣಿಗಳ ಮಾಂಸವನ್ನು ಸುರಿಯಲಾಗುತ್ತಿತ್ತು ಹಾಗೂ ಆರೋಪಿಗಳು ಅಕ್ರಮ ಶಸ್ತ್ರಾಸ್ತ್ರ ವ್ಯವಹಾರದಲ್ಲಿ ಭಾಗಿಯಾಗಿದ್ದರು ಎಂದು ಸಂತ್ರಸ್ತೆ ವಿವರಿಸಿದ್ದಾರೆ.

ಪೊಲೀಸ್ ತನಿಖೆ: ಆರೋಪಿ ಫಹೀಮ್‌ನನ್ನು 2025 ರಲ್ಲೇ ಗುರುಗ್ರಾಮ ಪೊಲೀಸರು ಬೇರೆ ಪ್ರಕರಣದಲ್ಲಿ ಬಂಧಿಸಿದ್ದರು. ಆ ವೇಳೆ ಆತನ ಮೊಬೈಲ್‌ನಲ್ಲಿದ್ದ ಸಂತ್ರಸ್ತೆಯ ವಿಡಿಯೋ ಹಾಗೂ ಫೋಟೋಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದರಿಂದ ಧೈರ್ಯ ಬಂದು ಆ ಮಹಿಳೆ ಇದೀಗ ದೂರು ನೀಡಿದ್ದಾರೆ. ಸದ್ಯ ಜಾಮಿಯಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೈಲಿನಲ್ಲಿದ್ದರೂ ಫಹೀಮ್ ತನಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಮಹಿಳೆ ತಿಳಿಸಿದ್ದು, ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

The post ಹೆಸರು ಬದಲಿಸಿ ದಲಿತ ಯುವತಿಗೆ ವಂಚನೆ: ಬಾಟ್ಲಾ ಹೌಸ್‌ನಲ್ಲಿ ಸಾಮೂಹಿಕ ಅತ್ಯಾಚಾರ, ಚಿತ್ರಹಿಂಸೆ! appeared first on Samyukta Karnataka.

₹155 ಕೋಟಿ ವಂಚನೆ ಆರೋಪ: AAP ನಾಯಕ ದೀಪಕ್ ಬಂಧನ
ಬ್ಯಾಂಕ್ ಸಾಲ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಕಾರ್ಯಾಚರಣೆ: AAP ನಾಯಕನಿಗೆ ಇಡಿ ಶಾಕ್

ಆಮ್ ಆದ್ಮಿ ಪಕ್ಷಕ್ಕೆ (AAP) ಮತ್ತೊಂದು ದೊಡ್ಡ ರಾಜಕೀಯ ಮತ್ತು ಕಾನೂನು ಆಘಾತ ಎದುರಾಗಿದ್ದು, ಬ್ಯಾಂಕ್ ಸಾಲ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಹಿರಿಯ ನಾಯಕ ದೀಪಕ್ ಸಿಂಗ್ಲಾ ಅವರನ್ನು ಜಾರಿ ನಿರ್ದೇಶನಾಲಯ (ED) ಸೋಮವಾರ ಬಂಧಿಸಿದೆ.

ದೀಪಕ್ ಸಿಂಗ್ಲಾ ಅವರನ್ನು ದೆಹಲಿ ಮತ್ತು ಗೋವಾದಲ್ಲಿನ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆದ ದಿಢೀರ್ ದಾಳಿಗಳ ಬಳಿಕ ಬಂಧಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

₹155 ಕೋಟಿ ವಂಚನೆ ಆರೋಪ : ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ನಕಲಿ ದಾಖಲೆಗಳನ್ನು ಬಳಸಿ ಭಾರೀ ಪ್ರಮಾಣದ ಸಾಲ ಪಡೆದು, ಸುಮಾರು ₹155 ಕೋಟಿ ಮೊತ್ತವನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿರುವ ಆರೋಪ ಸಿಂಗ್ಲಾ ವಿರುದ್ಧ ಕೇಳಿಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ₹251 ಕೋಟಿ ಮೌಲ್ಯದ ವಿವಾದಿತ ಸಾಲಗಳ ವಿಚಾರವೂ ತನಿಖೆಯ ವ್ಯಾಪ್ತಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ದೀಪಕ್ ಸಿಂಗ್ಲಾ ಅವರು 2020 ಹಾಗೂ 2025ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಜೊತೆಗೆ, ಗೋವಾ ರಾಜ್ಯದ ಎಎಪಿ ಸಹ-ಪ್ರಭಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ದೆಹಲಿ ಮತ್ತು ಗೋವಾದಲ್ಲಿ ಇಡಿ ದಾಳಿ : ಸೋಮವಾರ ಮುಂಜಾನೆಯಿಂದಲೇ ಇಡಿ ಅಧಿಕಾರಿಗಳು ದೆಹಲಿ ಹಾಗೂ ಗೋವಾದ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಸಿಂಗ್ಲಾ ಅವರಿಗೆ ಸೇರಿದ ಮನೆಗಳು, ಕಚೇರಿಗಳು ಹಾಗೂ ಸಂಬಂಧಿತ ಸ್ಥಳಗಳಲ್ಲಿ ಹಲವು ಆಕ್ಷೇಪಾರ್ಹ ದಾಖಲೆಗಳು ಪತ್ತೆಯಾಗಿವೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ ಹಾಗೂ ಬ್ಯಾಂಕ್ ವಂಚನೆಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡ ನಂತರ ಸಿಂಗ್ಲಾ ಅವರನ್ನು ವಶಕ್ಕೆ ಪಡೆದು ಬಳಿಕ ಅಧಿಕೃತವಾಗಿ ಬಂಧಿಸಲಾಗಿದೆ.

2024ರಿಂದಲೇ ತನಿಖೆ : ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರಿಂದಲೇ ಇಡಿ ತನಿಖೆ ಆರಂಭಿಸಿತ್ತು. ಆ ಸಮಯದಲ್ಲೂ ಸಿಂಗ್ಲಾ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಇದೀಗ ಮುಂದುವರಿದ ತನಿಖೆಯ ಭಾಗವಾಗಿ ಬಂಧನ ಕ್ರಮ ಕೈಗೊಳ್ಳಲಾಗಿದೆ.

“ರಾಜಕೀಯ ಸೇಡು” ಎಂದ AAP : ಬಂಧನ ಕ್ರಮಕ್ಕೆ ಆಮ್ ಆದ್ಮಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿ, “ದೀಪಕ್ ಸಿಂಗ್ಲಾ ಯಾವುದೇ ತಪ್ಪು ಮಾಡಿದ್ದಕ್ಕಾಗಿ ಬಂಧಿತರಾಗಿಲ್ಲ. ಅವರು ಬಿಜೆಪಿಗೆ ಸೇರಲು ನಿರಾಕರಿಸಿದ್ದರಿಂದ ಹಾಗೂ ಬಿಜೆಪಿ ವಿರುದ್ಧ ಕೆಲಸ ಮಾಡುತ್ತಿದ್ದರಿಂದ ಬಂಧಿಸಲಾಗಿದೆ” ಎಂದು ಆರೋಪಿಸಿದರು.

“ದೀಪಕ್ ಧೈರ್ಯಶಾಲಿ ವ್ಯಕ್ತಿ. ಅವರು ದೇಶಕ್ಕಾಗಿ ಹೋರಾಡುತ್ತಿದ್ದಾರೆ” ಎಂದು ಕೇಜ್ರಿವಾಲ್ ಬರೆದಿದ್ದಾರೆ. ಇದೇ ವೇಳೆ, ಅತಿಶಿ ಸೇರಿದಂತೆ ಎಎಪಿ ನಾಯಕರು ಈ ಕ್ರಮವನ್ನು “ಚುನಾವಣೆಗಳ ಮುನ್ನ ರಾಜಕೀಯ ಬೆದರಿಕೆ ಹಾಗೂ ಸೇಡಿನ ರಾಜಕಾರಣ” ಎಂದು ಟೀಕಿಸಿದ್ದಾರೆ.

ರಾಜಕೀಯ ಕಿತ್ತಾಟಕ್ಕೆ ಕಾರಣ : ದೀಪಕ್ ಸಿಂಗ್ಲಾ ಬಂಧನದ ಬೆನ್ನಲ್ಲೇ ದೆಹಲಿ ರಾಜಕೀಯದಲ್ಲಿ ಮತ್ತೊಮ್ಮೆ ಎಎಪಿ ಮತ್ತು ಬಿಜೆಪಿ ನಡುವೆ ವಾಕ್ಸಮರ ತೀವ್ರಗೊಂಡಿದೆ. ಒಂದೆಡೆ ತನಿಖಾ ಸಂಸ್ಥೆಗಳು ಹಣಕಾಸು ಅಕ್ರಮ ಹಾಗೂ ಬ್ಯಾಂಕ್ ವಂಚನೆ ಕುರಿತು ಗಂಭೀರ ಆರೋಪಗಳನ್ನು ಮುಂದಿಟ್ಟಿದ್ದರೆ, ಮತ್ತೊಂದೆಡೆ ಎಎಪಿ ನಾಯಕರು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸುತ್ತಿದ್ದಾರೆ.

ಈ ಪ್ರಕರಣದ ಮುಂದಿನ ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆ ದೇಶದ ರಾಜಕೀಯ ವಲಯದಲ್ಲಿ ಹೆಚ್ಚಿನ ಗಮನ ಸೆಳೆಯುವ ಸಾಧ್ಯತೆ ಇದೆ.

ಮದ್ಯ ನೀತಿ ಪ್ರಕರಣ: ನ್ಯಾ ಮನೋಜ್ ಜೈನ್ ಮುಂದೆ CBI ಅರ್ಜಿ

The post ₹155 ಕೋಟಿ ವಂಚನೆ ಆರೋಪ: AAP ನಾಯಕ ದೀಪಕ್ ಬಂಧನ appeared first on Samyukta Karnataka.

ಮದ್ಯ ನೀತಿ ಪ್ರಕರಣ: ನ್ಯಾ ಮನೋಜ್ ಜೈನ್ ಮುಂದೆ CBI ಅರ್ಜಿ
ಹೈಕೋರ್ಟ್‌ನಲ್ಲಿ ಮದ್ಯ ನೀತಿ ಪ್ರಕರಣಕ್ಕೆ ಹೊಸ ತಿರುವು : ಕೇಜ್ರಿವಾಲ್ ಅರ್ಜಿಗೆ ಹೊಸ ನ್ಯಾಯಮೂರ್ತಿ ವಿಚಾರಣೆ

ದೆಹಲಿ: ಮದ್ಯ ನೀತಿ ಅಕ್ರಮ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಇತರ ಆರೋಪಿಗಳ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇದೀಗ ನ್ಯಾಯಮೂರ್ತಿ ಮನೋಜ್ ಜೈನ್ ಅವರು ನಡೆಸಲಿದ್ದಾರೆ. ಈ ಹಿಂದೆ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ನಡೆಸುತ್ತಿದ್ದರು. ಆದರೆ, ಅವರ ವಿರುದ್ಧ ಕೇಜ್ರಿವಾಲ್ ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆ ಅವರು ಪ್ರಕರಣದಿಂದ ಹಿಂದೆ ಸರಿದಿದ್ದಾರೆ.

ಆರೋಪ ರದ್ದು ಆದೇಶ ಪ್ರಶ್ನಿಸಿದ CBI : ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯವು ಮಾಜಿ ಸಿಎಂ ಕೇಜ್ರಿವಾಲ್ ಸೇರಿದಂತೆ ಕೆಲ ಆರೋಪಿಗಳ ವಿರುದ್ಧ ಹೊರಿಸಲಾದ ಆರೋಪಗಳನ್ನು ತಿರಸ್ಕರಿಸಿ ಪ್ರಕರಣವನ್ನು ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇಂದ್ರ ತನಿಖಾ ದಳ (CBI) ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿಯ ವಿಚಾರಣೆಯನ್ನು ನಾಳೆಗೆ ನಿಗದಿಪಡಿಸಲಾಗಿದೆ. ಪ್ರಕರಣದ ಮುಂದಿನ ಹಂತದ ಕುರಿತು ರಾಜಕೀಯ ಹಾಗೂ ಕಾನೂನು ವಲಯದಲ್ಲಿ ಹೆಚ್ಚಿನ ಕುತೂಹಲ ಮೂಡಿದೆ.

ಕೋರ್ಟ್‌ನಲ್ಲಿ ತೀವ್ರ ವಾದ ಪ್ರತಿವಾದ : ಈ ಹಿಂದೆ ನಡೆದ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಸಿಬಿಐ ಪರವಾಗಿ ವಾದ ಮಂಡಿಸಿದ್ದರು. ಇನ್ನೊಂದೆಡೆ, ಆಮ್ ಆದ್ಮಿ ಪಾರ್ಟಿ (AAP) ನ್ಯಾಯಮೂರ್ತಿ ಬದಲಾವಣೆಯನ್ನು ತನ್ನ “ಕಾನೂನು ವಿಜಯ” ಎಂದು ಬಣ್ಣಿಸಿದೆ. ಕೇಜ್ರಿವಾಲ್ ಕೂಡ “ಸತ್ಯದ ವಿಜಯವಾಗಿದೆ” ಎಂದು ಪ್ರತಿಕ್ರಿಯೆ ನೀಡಿದ್ದರು.

ಇತರೆ ಪ್ರಕರಣಗಳ ವರ್ಗಾವಣೆ : ಈ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ವರ್ಗಾಯಿಸಲಾಗಿದೆ. ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಅವರಿದ್ದ ಪೀಠ ಈ ಸಂಬಂಧದ ಪ್ರಕರಣಗಳನ್ನು ವಿಚಾರಣೆ ನಡೆಸಲಿದೆ.

ರಾಜಕೀಯವಾಗಿ ಮಹತ್ವ ಪಡೆದ ಪ್ರಕರಣ : ದೆಹಲಿ ಮದ್ಯ ನೀತಿ ಪ್ರಕರಣವು ಕಳೆದ ಕೆಲ ವರ್ಷಗಳಿಂದ ದೇಶದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆಮ್ ಆದ್ಮಿ ಪಾರ್ಟಿ ನಾಯಕರು ಈ ಪ್ರಕರಣವನ್ನು ರಾಜಕೀಯ ಪ್ರೇರಿತ ಕ್ರಮ ಎಂದು ಆರೋಪಿಸುತ್ತಿದ್ದರೆ, ತನಿಖಾ ಸಂಸ್ಥೆಗಳು ಅಕ್ರಮ ಹಣಕಾಸು ವ್ಯವಹಾರ ಹಾಗೂ ನೀತಿ ರೂಪಿಕರಣದಲ್ಲಿ ಅಕ್ರಮ ನಡೆದಿದೆ ಎಂದು ವಾದಿಸುತ್ತಿವೆ.

ಪ್ರಕರಣದ ಮುಂದಿನ ವಿಚಾರಣೆ ಹಾಗೂ ಹೈಕೋರ್ಟ್‌ನ ತೀರ್ಪು ದೆಹಲಿ ರಾಜಕೀಯದ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಲಬುರಗಿ: 35 ಕೋಟಿ ವೆಚ್ಚದ ನೂತನ ಮೃಗಾಲಯ ಲೋಕಾರ್ಪಣೆ

The post ಮದ್ಯ ನೀತಿ ಪ್ರಕರಣ: ನ್ಯಾ ಮನೋಜ್ ಜೈನ್ ಮುಂದೆ CBI ಅರ್ಜಿ appeared first on Samyukta Karnataka.

ಚಲಿಸುವ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೀಕರ ಬೆಂಕಿ ಅವಘಡ: ಬಿ 1 ಕೋಚ್ ಜಖಂ, ತಪ್ಪಿದ ಭಾರಿ ದುರಂತ!
ನವದೆಹಲಿ: ತಿರುವನಂತಪುರಂನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಪ್ರಮುಖ ಎಕ್ಸ್‌ಪ್ರೆಸ್ ರೈಲೊಂದರಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ವರದಿಯಾಗಿದೆ. ರೈಲು ಸಂಖ್ಯೆ 12431 ತಿರುವನಂತಪುರಂ – ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ಹಳಿಯಲ್ಲಿ ಚಲಿಸುತ್ತಿದ್ದಾಗಲೇ ಈ ಅವಘಡ ಸಂಭವಿಸಿದೆ. ರೈಲಿನ ಬಿ 1 (B1) ಕೋಚ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ತೀವ್ರ ಭೀತಿಗೊಳಗಾಗಿದ್ದಾರೆ.

ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ, ಕೋಟಾ ರೈಲ್ವೆ ವಿಭಾಗದ ವ್ಯಾಪ್ತಿಗೆ ಬರುವ ವಿಕ್ರಮ್‌ಗಢ ಅಲೋಟ್ ಮತ್ತು ಲುನಿರಿಚಾ ನಿಲ್ದಾಣಗಳ ನಡುವೆ ರೈಲು ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಲರ್ಟ್ ಆದ ರೈಲ್ವೆ ಸಿಬ್ಬಂದಿ ಮತ್ತು ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ನಂತರ ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಜೀವಹಾನಿ ಇಲ್ಲ: ಈ ಭೀಕರ ಅವಘಡದಲ್ಲಿ ಯಾವುದೇ ಜೀವಹಾನಿ ಅಥವಾ ಯಾರಿಗೂ ಗಂಭೀರ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಸಕಾಲದಲ್ಲಿ ಬೆಂಕಿ ನಂದಿಸಿದ್ದರಿಂದ ರೈಲಿನಲ್ಲಿದ್ದ ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈಲಿಗೆ ಬೆಂಕಿ ತಗುಲಲು ನಿಖರವಾದ ಕಾರಣವೇನೆಂಬುದು ಪ್ರಸ್ತುತ ತಿಳಿದುಬಂದಿಲ್ಲವಾಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರತ್ಲಂನಿಂದ ವಿಶೇಷ ಅಪಘಾತ ಪರಿಹಾರ ರೈಲು (Accident Relief Train) ತಕ್ಷಣವೇ ಸ್ಥಳಕ್ಕೆ ರವಾನೆಯಾಗಿದೆ. ಇದರೊಂದಿಗೆ ರತ್ಲಂ ವಿಭಾಗದ ಡಿಆರ್‌ಎಂ (DRM) ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳ ತಂಡವು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ.

The post ಚಲಿಸುವ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೀಕರ ಬೆಂಕಿ ಅವಘಡ: ಬಿ 1 ಕೋಚ್ ಜಖಂ, ತಪ್ಪಿದ ಭಾರಿ ದುರಂತ! appeared first on Samyukta Karnataka.

ದೆಹಲಿಗೆ ಹೊಸ ಮೇಯರ್: BJPಯ ಪ್ರವೇಶ್ ವಾಹಿ ಅವಿರೋಧ ಆಯ್ಕೆ
ನವದೆಹಲಿ : ದೆಹಲಿ ಮಹಾನಗರ ಪಾಲಿಕೆ (MCD) ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ, ಪ್ರವೇಶ್ ವಾಹಿ ಅವರು ದೆಹಲಿಯ ನೂತನ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಜನತಾ ಪಕ್ಷ (BJP) ಹಿರಿಯ ನಾಯಕನಾದ ವಾಹಿ ಅವರ ಆಯ್ಕೆಯನ್ನು ಪಾಲಿಕೆಯ ಅಧ್ಯಕ್ಷ ರಾಜಾ ಇಕ್ಬಾಲ್ ಸಿಂಗ್ ಅಧಿಕೃತವಾಗಿ ಘೋಷಿಸಿದರು.

ಆಮ್ ಆದ್ಮಿ ಪಾರ್ಟಿ (AAP) ಚುನಾವಣಾ ಕಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ, ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯ ಗೆಲುವು ಸುಲಭವಾಗಿದ್ದು, ಪಾಲಿಕೆಯಲ್ಲಿ ಬಿಜೆಪಿಯ ಬಲ ಮತ್ತಷ್ಟು ಗಟ್ಟಿಯಾಗಿದೆ.

ಅವಿರೋಧ ಆಯ್ಕೆ – ಬಿಜೆಪಿಗೆ ಸ್ಪಷ್ಟ ಬಹುಮತ : ದೆಹಲಿ ಪಾಲಿಕೆಯ ಒಟ್ಟು 273 ಮತಗಳಲ್ಲಿ ಗೆಲುವಿಗೆ 137 ಮತಗಳು ಸಾಕಾಗುತ್ತವೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಸುಮಾರು 156 ಸದಸ್ಯರ ಬೆಂಬಲ ದೊರಕಿದ್ದು, ಸ್ಪಷ್ಟ ಬಹುಮತ ಹೊಂದಿತ್ತು. ಕಾಂಗ್ರೆಸ್ ಕೇವಲ 9 ಮತಗಳಿಗೆ ಸೀಮಿತವಾಗಿದ್ದು, AAP ಸ್ಪರ್ಧೆಯಿಂದ ಹಿಂದೆ ಸರಿದಿರುವುದು ಬಿಜೆಪಿಗೆ ಅನುಕೂಲಕರವಾಯಿತು.

ಮೇಯರ್ ವಾಹಿ ಪ್ರತಿಕ್ರಿಯೆ : ಮೇಯರ್ ಆಗಿ ಆಯ್ಕೆಯಾದ ಬಳಿಕ ಮಾತನಾಡಿದ ಪ್ರವೇಶ್ ವಾಹಿ, “ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ ಪಕ್ಷದ ನಾಯಕತ್ವಕ್ಕೆ ನಾನು ಚಿರಋಣಿ. ದೆಹಲಿ ಜನರ ಸೇವೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದು ಭಾವುಕರಾಗಿ ತಿಳಿಸಿದ್ದಾರೆ.

ರಾಜಕೀಯ ಪಯಣ : ಪ್ರವೇಶ್ ವಾಹಿ ಅವರ ರಾಜಕೀಯ ಪಯಣ ಗಮನಾರ್ಹವಾಗಿದೆ. ಇವರ ಕುಟುಂಬ ಮೂಲತಃ ಪಾಕಿಸ್ತಾನದ ರಾವಲ್ಪಿಂಡಿಯಿಂದ ಭಾರತಕ್ಕೆ ವಲಸೆ ಬಂದು ದೆಹಲಿಯಲ್ಲಿ ನೆಲೆಸಿತ್ತು. ಬಾಲ್ಯದಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಿದ್ಧಾಂತಗಳಿಂದ ಪ್ರಭಾವಿತರಾದ ಅವರು, 1990ರಲ್ಲಿ ವಿಶ್ವ ಹಿಂದೂ ಪರಿಷತ್ ಮೂಲಕ ತಮ್ಮ ಸಾಮಾಜಿಕ ಕಾರ್ಯವನ್ನು ಆರಂಭಿಸಿದರು. ನಂತರ ಬಿಜೆಪಿ ಯುವ ಮೋರ್ಚಾ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು.

2007ರಲ್ಲಿ ರೋಹಿಣಿಯಿಂದ ಮೊದಲ ಬಾರಿಗೆ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದು, ಬಳಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ದೆಹಲಿ ಮೇಯರ್ ಹುದ್ದೆ ಸವಾಲಿನ ಹೊಣೆಗಾರಿಕೆಯಾಗಿದ್ದು, ಕಸದ ವಿಲೇವಾರಿ, ಮಾಲಿನ್ಯ ನಿಯಂತ್ರಣ, ಪಾಲಿಕೆಯ ಆರ್ಥಿಕ ಸ್ಥಿತಿ ಸುಧಾರಣೆ, ಇವು ಪ್ರಮುಖ ಸವಾಲುಗಳಾಗಿವೆ. ರಾಜಧಾನಿಯಲ್ಲಿ ನಾಗರಿಕ ಸೇವೆಗಳನ್ನು ಸುಧಾರಿಸುವತ್ತ ಹೊಸ ಮೇಯರ್ ಗಮನಹರಿಸುವ ನಿರೀಕ್ಷೆಯಿದೆ.

ಬಂಗಾಳ ಚುನಾವಣೆ ಸೋತರೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಿ ಮೋದಿಗೆ TMC ಸಂಸದನ ಸವಾಲ್

The post ದೆಹಲಿಗೆ ಹೊಸ ಮೇಯರ್: BJPಯ ಪ್ರವೇಶ್ ವಾಹಿ ಅವಿರೋಧ ಆಯ್ಕೆ appeared first on Samyukta Karnataka.

ದೆಹಲಿಯಲ್ಲಿ ಸ್ವಾತಿ ಮಲಿವಾಲ್ ಅಧಿಕೃತವಾಗಿ BJPಗೆ ಸೇರ್ಪಡೆ
ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯರ ಗುಂಪು ಭಾರತೀಯ ಜನತಾ ಪಕ್ಷದಲ್ಲಿ (ಬಿಜೆಪಿ) ವಿಲೀನಗೊಂಡಿರುವ ರಾಜಕೀಯ ಬೆಳವಣಿಗೆಯ ನಡುವೆ, ಸಂಸದೆ ಸ್ವಾತಿ ಮಲಿವಾಲ್ ಮಂಗಳವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದರು. ಬಿಜೆಪಿ ರಾಜ್ಯ ಅಧ್ಯಕ್ಷರು ಸೇರಿದಂತೆ ಹಲವು ಹಿರಿಯ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಬೆಳವಣಿಗೆಗೆ ಮುನ್ನ, ಸೋಮವಾರ, ಉಪಾಧ್ಯಕ್ಷರು ಮತ್ತು ರಾಜ್ಯಸಭಾ ಅಧ್ಯಕ್ಷ ಸಿಪಿ ರಾಧಾಕೃಷ್ಣನ್ ಅವರು ಏಳು ಎಎಪಿ ರಾಜ್ಯಸಭಾ ಸದಸ್ಯರನ್ನು ಒಳಗೊಂಡ ಬಣವನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವುದನ್ನು ಔಪಚಾರಿಕವಾಗಿ ಅಂಗೀಕರಿಸಿದರು. ಈ ಅನುಮೋದನೆಯ ನಂತರ, ಈ ಏಳು ಸಂಸದರು ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ತಮ್ಮ ಸಂಸದೀಯ ಸದಸ್ಯತ್ವವನ್ನು ಕಳೆದುಕೊಳ್ಳುವ ಅಥವಾ ಅನರ್ಹರಾಗುವ ಭೀತಿ ತಪ್ಪಿಸಿಕೊಂಡಿದ್ದಾರೆ.

ರಾಜಕೀಯ ನಿಯಮಗಳ ಪ್ರಕಾರ, ಒಂದು ಪಕ್ಷದ ಕನಿಷ್ಠ ಎರಡು-ಮೂರಾಂಶ ಸದಸ್ಯರು ಪ್ರತ್ಯೇಕ ಬಣವಾಗಿ ಮತ್ತೊಂದು ಪಕ್ಷಕ್ಕೆ ವಿಲೀನವಾದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಎಎಪಿ ಸಂಸದರ ವಿಲೀನ ಕಾನೂನಾತ್ಮಕವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ, ಎಎಪಿ ನಾಯಕರು ರಾಘವ್ ಚಡ್ಡಾ, ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಪತ್ರಿಕಾಗೋಷ್ಠಿಯಲ್ಲಿ ಏಳು ಸಂಸದರನ್ನು ಒಳಗೊಂಡ ಬಣವನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವುದಾಗಿ ಘೋಷಿಸಿದ್ದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಎಎಪಿ ನಾಯಕ ಸಂಜಯ್ ಸಿಂಗ್ ಸಂಸದರ ಸದಸ್ಯತ್ವ ರದ್ದುಗೊಳಿಸಲು ಮನವಿ ಸಲ್ಲಿಸಿದ್ದು, ಬಳಿಕ ವಿಲೀನದ ಮಾನ್ಯತೆಯನ್ನು ಪ್ರಶ್ನಿಸಿ ಮತ್ತೊಮ್ಮೆ ಪತ್ರ ಬರೆದಿದ್ದಾರೆ. ಆದರೆ ಈ ಕುರಿತು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿಯಿಂದ ಇನ್ನೂ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯರ ಗುಂಪು ಭಾರತೀಯ ಜನತಾ ಪಕ್ಷದಲ್ಲಿ (ಬಿಜೆಪಿ) ವಿಲೀನಗೊಂಡಿರುವ ರಾಜಕೀಯ ಬೆಳವಣಿಗೆಯ ನಡುವೆ, ಸಂಸದೆ ಸ್ವಾತಿ ಮಲಿವಾಲ್ ಮಂಗಳವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.https://t.co/u5tiqxHtCn pic.twitter.com/bOHWrP7bTf
— Samyukta Karnataka (@SamyuktaKarnatk) April 28, 2026

ವಿನಯ್ ಕುಲಕರ್ಣಿಗೆ ಹೈಕೋರ್ಟ್ ರಿಲೀಫ್? : ಮೇಲ್ಮನವಿ ವಿಚಾರಣೆ ಮುಂದುವರಿಕೆ

The post ದೆಹಲಿಯಲ್ಲಿ ಸ್ವಾತಿ ಮಲಿವಾಲ್ ಅಧಿಕೃತವಾಗಿ BJPಗೆ ಸೇರ್ಪಡೆ appeared first on Samyukta Karnataka.

ಕೇಜ್ರಿವಾಲ್ ನಂತರ ಮನೀಶ್ ಸಿಸೋಡಿಯಾ ಸಹ ಗಾಂಧಿಗಿರಿ ಮಾರ್ಗ
ಅಬಕಾರಿ ಪ್ರಕರಣ: ‘ಸತ್ಯಾಗ್ರಹ’ ದಾರಿ ಹಿಡಿದ AAP ನಾಯಕರು

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಹತ್ವದ ತಿರುವಾಗಿ, ಆಮ್ ಆದ್ಮಿ ಪಕ್ಷದ ನಾಯಕರು ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ದೆಹಲಿ ಹೈಕೋರ್ಟ್‌ನಲ್ಲಿ ತಮ್ಮ ಪ್ರಕರಣದ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದಾರೆ. ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ನ್ಯಾಯಾಲಯದಲ್ಲಿ ಯಾವುದೇ ವಕೀಲರನ್ನೂ ನೇಮಿಸದಿರಲು ನಿರ್ಧರಿಸಿದ್ದಾರೆ.

ಸಿಸೋಡಿಯಾ ಮಂಗಳವಾರ ನ್ಯಾಯಮೂರ್ತಿಗೆ ಬರೆದ ಪತ್ರದಲ್ಲಿ, “ನನ್ನ ಪರವಾಗಿ ಯಾವುದೇ ವಕೀಲರು ಹಾಜರಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ನಾನು ನ್ಯಾಯ ನಿರೀಕ್ಷಿಸುವುದಿಲ್ಲ. ಸತ್ಯಾಗ್ರಹವಷ್ಟೇ ನನ್ನ ದಾರಿ” ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಅವರು, ಇದು ವ್ಯಕ್ತಿಗತ ವಿಚಾರವಲ್ಲ, ನ್ಯಾಯ ವ್ಯವಸ್ಥೆಯ ಮೇಲಿನ ನಂಬಿಕೆಯ ಪ್ರಶ್ನೆ ಎಂದು ಹೇಳಿದ್ದಾರೆ.

ಇದಕ್ಕೂ ಒಂದು ದಿನ ಮೊದಲು ಕೇಜ್ರಿವಾಲ್ ಕೂಡ ಇದೇ ರೀತಿಯ ನಿರ್ಧಾರ ಪ್ರಕಟಿಸಿದ್ದರು. ಅವರು ಮಹಾತ್ಮ ಗಾಂಧಿ ಅವರ ಸತ್ಯಾಗ್ರಹ ತತ್ವವನ್ನು ಉಲ್ಲೇಖಿಸಿ, ನ್ಯಾಯಮೂರ್ತಿ ಶರ್ಮಾ ಅವರ ನ್ಯಾಯಾಲಯದಲ್ಲಿ ವೈಯಕ್ತಿಕವಾಗಿ ಹಾಜರಾಗುವುದಿಲ್ಲ ಹಾಗೂ ಯಾವುದೇ ವಕೀಲರನ್ನು ನೇಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸೂಕ್ತ ಸಮಯದಲ್ಲಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ನ್ಯಾಯಾಧೀಶರ ವಿರುದ್ಧ ಪಕ್ಷಪಾತ ಮತ್ತು ಹಿತಾಸಕ್ತಿ ಸಂಘರ್ಷದ ಆರೋಪಗಳನ್ನು ಎಎಪಿ ನಾಯಕರು ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಸಿಬಿಐ ಪ್ರಕರಣದಲ್ಲಿ ವಿರುದ್ಧ ಪಕ್ಷವಾಗಿದ್ದು, ನ್ಯಾಯಾಧೀಶರ ಕುಟುಂಬ ಸಂಬಂಧಗಳ ಕುರಿತು ಪ್ರಶ್ನೆ ಎತ್ತಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಈ ನಡುವೆ, ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರು ರಾಜ್ ಘಾಟ್‌ಗೆ ಇಂದು ಭೇಟಿ ನೀಡಿ ಗಾಂಧೀಜಿ ಆಶೀರ್ವಾದ ಪಡೆಯುವುದಾಗಿ ಘೋಷಿಸಿದ್ದಾರೆ. “ಬಾಪು ತೋರಿದ ದಾರಿಯಲ್ಲಿ ಸತ್ಯಾಗ್ರಹ ಮುಂದುವರಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಇಬ್ಬರು ನಾಯಕರು ನ್ಯಾಯಾಲಯ ಬಹಿಷ್ಕಾರವನ್ನು ಅಧಿಕೃತವಾಗಿ ಘೋಷಿಸಿದ್ದು, ಪ್ರಕರಣದ ಮುಂದಿನ ವಿಚಾರಣೆ ಏಕಪಕ್ಷೀಯವಾಗಿ ನಡೆಯುವ ಸಾಧ್ಯತೆ ಇದೆ. ಈ ಬೆಳವಣಿಗೆ ದೇಶದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಅಧಿಕಾರಿಗೆ ಕೆಸರು ಎರಚಿದ ಪ್ರಕರಣ: ಶಾಸಕ ನಿತೇಶ್ ರಾಣೆಗೆ ಜೈಲು ಶಿಕ್ಷೆ

The post ಕೇಜ್ರಿವಾಲ್ ನಂತರ ಮನೀಶ್ ಸಿಸೋಡಿಯಾ ಸಹ ಗಾಂಧಿಗಿರಿ ಮಾರ್ಗ appeared first on Samyukta Karnataka.

ರಾಜ್ಯಸಭೆಯಲ್ಲಿ ಬಿಜೆಪಿ ಬಲ ಹೆಚ್ಚಳ: ಕೇಸರಿ ಪಾಳೆ ಬಲ 113ಕ್ಕೆ ಏರಿಕೆ
AAP ಪಕ್ಷದ 7 ರಾಜ್ಯಸಭಾ ಸಂಸದರು BJPಗೆ ವಿಲೀನಗೊಂಡಿದ್ದು. ರಾಜ್ಯಸಭಾ ಅಧ್ಯಕ್ಷರು ಒಪ್ಪಿಗೆ ಸೂಚಿಸಿದ್ದಾರೆ. ಇದರೊಂದಿಗೆ ಬಿಜೆಪಿ ಸಂಖ್ಯಾಬಲ 113ಕ್ಕೆ ಏರಿಕೆ.

ನವದೆಹಲಿ: ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ರಾಜ್ಯಸಭಾ ಅಧ್ಯಕ್ಷರು ಆಮ್ ಆದ್ಮಿ ಪಕ್ಷ (AAP)ಗೆ ಸೇರಿದ ಏಳು ಸಂಸದರನ್ನು ಭಾರತೀಯ ಜನತಾ ಪಕ್ಷ (BJP) ಜೊತೆ ವಿಲೀನಗೊಳಿಸಲು ಅನುಮೋದನೆ ನೀಡಿದ್ದಾರೆ. ಈ ಬಗ್ಗೆ ರಾಜ್ಯಸಭಾ ಸಚಿವಾಲಯ ಅಧಿಕೃತ ಸೂಚನೆ ಹೊರಡಿಸಿದ್ದು, ಸಂಬಂಧಿತ ಸಂಸದರನ್ನು ಈಗ ಬಿಜೆಪಿ ಸದಸ್ಯರಾಗಿ ದಾಖಲೆಗಳಲ್ಲಿ ಸೇರಿಸಲಾಗಿದೆ.

ಈ ವಿಲೀನದಿಂದ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 106ರಿಂದ 113ಕ್ಕೆ ಏರಿಕೆಯಾಗಿದೆ.

ಬಿಜೆಪಿ ಸೇರಿದ್ದ ಪ್ರಮುಖ ನಾಯಕರು : ಎಎಪಿ ತೊರೆದು ಬಿಜೆಪಿ ಸೇರಿರುವ ಏಳು ಸಂಸದರಲ್ಲಿ ರಾಘವ್ ಚಡ್ಡಾ, ಅಶೋಕ್ ಕುಮಾರ್ ಮಿತ್ತಲ್, ಹರ್ಭಜನ್ ಸಿಂಗ್, ಸಂದೀಪ್ ಕುಮಾರ್ ಪಾಠಕ್, ಡಾ. ವಿಕ್ರಮ್‌ಜಿತ್ ಸಿಂಗ್ ಸಹ್ನಿ, ಸ್ವಾತಿ ಮಲಿವಾಲ್ ಮತ್ತು
ರಾಜಿಂದರ್ ಗುಪ್ತಾ ಸೇರಿದ್ದಾರೆ. ಇವರು ಏಪ್ರಿಲ್ 24ರಂದು ಬಿಜೆಪಿ ದೆಹಲಿ ಪ್ರಧಾನ ಕಚೇರಿಯಲ್ಲಿ ಪಕ್ಷ ಸೇರ್ಪಡೆಗೊಂಡಿದ್ದರು.

‘ಸಕಾರಾತ್ಮಕ ರಾಜಕೀಯ’ದ ನೆಪ : ಸಂಸದರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಎಪಿಯ ಒಳಗಿನ ಬೆಳವಣಿಗೆಗಳ ಹಿನ್ನೆಲೆ ಪಕ್ಷದಿಂದ ದೂರ ಸರಿಯಬೇಕಾಯಿತು ಎಂದು ಹೇಳಿದ್ದಾರೆ. “ನಾವು ಅಪರಾಧಗಳಲ್ಲಿ ಭಾಗವಾಗಲು ಬಯಸಲಿಲ್ಲ. ಸಕಾರಾತ್ಮಕ ರಾಜಕೀಯಕ್ಕಾಗಿ ಬಿಜೆಪಿ ಸೇರ್ಪಡೆಗೊಂಡಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಪಕ್ಷಾಂತರ ಕಾನೂನು ಮತ್ತು ವಿಲೀನ : ಈ ಬೆಳವಣಿಗೆ ಸಂವಿಧಾನದ ಹತ್ತನೇ ವೇಳಾಪಟ್ಟಿಯಡಿ (Anti-Defection Law) ಮಾನ್ಯವಾಗಿದೆ. ಏಕೆಂದರೆ ಎಎಪಿಯ ರಾಜ್ಯಸಭಾ ಸದಸ್ಯರ ಕನಿಷ್ಠ 2/3 ಭಾಗ ಈ ನಿರ್ಧಾರ ಕೈಗೊಂಡಿರುವುದರಿಂದ, ಇದನ್ನು ಪಕ್ಷಾಂತರವಲ್ಲ, “ವಿಲೀನ” ಎಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ ಸಂಸದರು ಅನರ್ಹರಾಗುವುದಿಲ್ಲ.

ಕೇಜ್ರಿವಾಲ್ ನಿರ್ಧಾರ : ಗಾಂಧಿಗಿರಿ ಮಾರ್ಗ – ವಿಚಾರಣೆಯಿಂದ ದೂರ

The post ರಾಜ್ಯಸಭೆಯಲ್ಲಿ ಬಿಜೆಪಿ ಬಲ ಹೆಚ್ಚಳ: ಕೇಸರಿ ಪಾಳೆ ಬಲ 113ಕ್ಕೆ ಏರಿಕೆ appeared first on Samyukta Karnataka.