cybercrime Archives - Samyukta Karnataka

ನೇಪಾಳದ ಸೈಬರ್ ವಂಚಕರ ಜಾಲ ಭೇದಿಸಿದ ಕರ್ನಾಟಕ ಪೊಲೀಸ್‌
ಮಂಗಳೂರು: ನೇಪಾಳದಲ್ಲಿ ಕುಳಿತು ದೇಶದ ವಿವಿಧ ಭಾಗಗಳ ಜನರನ್ನು ಗುರಿಯಾಗಿಸಿಕೊಂಡು ನೂರಾರು ಕೋಟಿ ರೂ. ಮೌಲ್ಯದ ಸೈಬರ್ ವಂಚನೆ ನಡೆಸುತ್ತಿದ್ದ ಅಂತಾರಾಷ್ಟ್ರೀಯ ವಂಚಕರ ಜಾಲವನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಗಳು ಪತ್ತೆಹಚ್ಚಿ, ಒಟ್ಟು 11 ಜನ ಆರೋಪಿತರನ್ನು ದಸ್ತಗಿರಿ ಮಾಡಿದ್ದಾರೆ.

ಈ ವಂಚಕ ತಂಡದಲ್ಲಿ ಒಟ್ಟು 16 ಮಂದಿ ಭಾರತೀಯರು ಹಾಗೂ ಚೀನಾದ ಪ್ರಜೆಗಳು ಸೇರಿಕೊಂಡಿದ್ದು, ಚೀನಾದ ಆರೋಪಿತರನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ 5 ಮಂದಿ ಭಾರತೀಯ ಆರೋಪಿತರು ತಲೆಮರಿಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ.

ಇದನ್ನೂ ಓದಿ: ಬೆಳಗಾವಿ: ಮಹಿಳಾ ಅಧಿಕಾರಿಗೆ ಹಿಡನ್ ಕ್ಯಾಮರಾ ಬ್ಲ್ಯಾಕ್‌ಮೇಲ್

624 ಬ್ಯಾಂಕ್ ಖಾತೆಗಳು – 4,580ಕ್ಕೂ ಹೆಚ್ಚು ಪ್ರಕರಣಗಳು ದಾಖಲು: ಬಂಧಿತರ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಿದಾಗ, ಒಟ್ಟು 624 ಬ್ಯಾಂಕ್ ಖಾತೆಗಳ ವಿವರಗಳು ಲಭ್ಯವಾಗಿವೆ. ಈ ಖಾತೆಗಳ ವಿರುದ್ಧ NCRP Portal ನಲ್ಲಿ 4,580ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ.

ಒಂದು ಬ್ಯಾಂಕ್ ಖಾತೆಯಲ್ಲೇ ಸುಮಾರು ₹167 ಕೋಟಿ ಹಣ ವರ್ಗಾವಣೆಯಾಗಿದ್ದು, ಮಂಗಳೂರು ಸೆನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಾತ್ರ 10 ಖಾತೆಗಳ ಮೂಲಕ ₹30.70 ಕೋಟಿ ಹಣ ವರ್ಗಾವಣೆ ಆಗಿರುವುದು ತನಿಖೆಯಿಂದ ತಿಳಿದುಬಂದಿದೆ. ಉಳಿದ ಖಾತೆಗಳ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಮುಂದುವರೆದಿದೆ.

ಇದನ್ನೂ ಓದಿ: ಮೈಸೂರು: ಅಧಿಕಾರಿಗಳ ಮನೆ ಸೇರಿದಂತೆ ಏಳು ಕಡೆ ಲೋಕಾ ದಾಳಿ

ಪ್ರಕರಣದ ವಿವರ: ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರಿಂದ ಸುಮಾರು ₹1.38 ಕೋಟಿ ಹಣವನ್ನು 10 ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಆರೋಪ ಈ ತಂಡದ ಮೇಲೆ ಇದೆ. ನೇಪಾಳದಲ್ಲಿ ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದ ಈ ಜಾಲವನ್ನು ತಾಂತ್ರಿಕ ವಿಶ್ಲೇಷಣೆ ಮೂಲಕ ಪತ್ತೆಹಚ್ಚಲಾಗಿದೆ.

ವಂಚನೆಯ ಕಾರ್ಯವಿಧಾನ: ವಂಚಕರು ಎರಡು ತಂಡಗಳಾಗಿ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ.

ಮೊದಲ ತಂಡ (ನೇಪಾಳದಿಂದ ಕಾರ್ಯಾಚರಣೆ) ಸಾಮಾಜಿಕ ಜಾಲತಾಣದ ಮೂಲಕ ಏಜೆಂಟ್ ಹಾಗೂ ಖಾತೆದಾರರನ್ನು ನೇಮಕ ಮಾಡಿ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಹಾಗೂ USDT ರೂಪದಲ್ಲಿ ಪರಿವರ್ತಿಸಿ ವಿದೇಶಕ್ಕೆ ಕಳುಹಿಸುತ್ತಿತ್ತು.

ಇದನ್ನೂ ಓದಿ: ಮೈಸೂರು — ಸಿಗರೇಟ್ ಫೋಟೋಶೂಟ್ ವಿವಾದ: ಮತ್ತೆ ಸಂಕಷ್ಟದಲ್ಲಿ ಬಿಗ್ ಬಾಸ್ ಸ್ಪರ್ಧಿ ರಜತ್

ಎರಡನೇ ತಂಡ (ಕಾಂಬೋಡಿಯಾ, ದುಬೈ ಮುಂತಾದ ದೇಶಗಳಿಂದ) ಹೂಡಿಕೆದಾರರನ್ನು ಸಂಪರ್ಕ ಮಾಡಿ ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರ ಮೂಲಕ ಸ್ಥಳೀಯ ಭಾಷೆಯಲ್ಲಿ ಮೋಸ, ಹೆಚ್ಚಿನ ಲಾಭದ ಆಮಿಷ ನೀಡಿ ಹಣ ಸಂಗ್ರಹ. ಈ ಎರಡೂ ತಂಡಗಳ ಹಣದ ವ್ಯವಹಾರವನ್ನು ನೇಪಾಳದಲ್ಲಿರುವ ಮುಖ್ಯ ತಂಡ ನಿಯಂತ್ರಿಸುತ್ತಿತ್ತು.

ಬ್ಯಾಂಕ್ ಖಾತೆಗಳನ್ನು ಪಡೆದುಕೊಳ್ಳುವ ತಂತ್ರ: ವಂಚಕರು ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಮೂಲಕ ನಕಲಿ ಜಾಹೀರಾತು ನೀಡಿ ವಿವಿಧ ಹುದ್ದೆಗಳಿಗೆ ಆಹ್ವಾನಿಸುತ್ತಿದ್ದರು. 5%–10% ಕಮಿಷನ್, ವಿದೇಶ ಪ್ರವಾಸ, ವಸತಿ ಸೌಲಭ್ಯ ನೀಡುವ ಆಮಿಷವೊಡ್ಡಿ ಯುವಕರನ್ನು ದುಬೈ, ನೇಪಾಳಕ್ಕೆ ಕರೆಸಿಕೊಳ್ಳುತ್ತಿದ್ದರು. ನಂತರ ಅವರ ಸಿಮ್ ಹಾಗೂ ಬ್ಯಾಂಕ್ ಖಾತೆಗಳನ್ನು ಬಳಸಿ ವಂಚನೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು.

ಇದನ್ನೂ ಓದಿ: NH-50ರಲ್ಲಿನ ಕಾರ್ ಸರ್ವೀಸ್ ಸೆಂಟರ್‌ನಲ್ಲಿ ಭಾರೀ ಅಗ್ನಿ ಅವಘಡ

ಹೂಡಿಕೆದಾರರನ್ನು ಆಕರ್ಷಿಸುವ ವಿಧಾನ: ವಾಟ್ಸಾಪ್, ಟೆಲಿಗ್ರಾಂ ಮೂಲಕ ಸಂಪರ್ಕ ಮಾಡಿ ನಕಲಿ ಅಪ್ಲಿಕೇಶನ್ ಮೂಲಕ ಲಾಭ ತೋರಿಸಿ ಪ್ರಾರಂಭದಲ್ಲಿ ಸ್ವಲ್ಪ ಹಣ ವಾಪಸ್ ನೀಡಿ ನಂಬಿಕೆ ಗಿಟ್ಟಿಸಿ ನಂತರ ಹೆಚ್ಚಿನ ಹೂಡಿಕೆಗೆ ಒತ್ತಾಯದ ಮೂಲಕ ಪ್ರತಿದಿನ ₹60 ಲಕ್ಷದಿಂದ ₹1 ಕೋಟಿ ವರೆಗೆ ವಂಚನೆ ನಡೆಯುತ್ತಿತ್ತು.

ಡಿಜಿಟಲ್ ಸ್ಲೇವರಿ ಕುರಿತು ಎಚ್ಚರಿಕೆ: ವಿದೇಶ ಉದ್ಯೋಗದ ಹೆಸರಿನಲ್ಲಿ ಯುವಕರನ್ನು ಮೋಸಗೊಳಿಸಿ, ಪಾಸ್‌ಪೋರ್ಟ್ ಕಬಳಿಸಿ, ಸೈಬರ್ ವಂಚನೆಗೆ ಬಳಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 6 ಮಂದಿಯನ್ನು ಈ ರೀತಿಯ ಸೈಬರ್ ಸ್ಲೇವರಿಯಿಂದ ರಕ್ಷಿಸಲಾಗಿದೆ.

ಇದನ್ನೂ ಓದಿ: ಮಾಲೂರು ಕ್ಷೇತ್ರ ಮರು ಮತ ಎಣಿಕೆಯಲ್ಲಿ ನಂಜೇಗೌಡ ಗೆಲುವು ದೃಢ

ಹಣ ವಾಪಸ್ ಸಿಗದಿರುವ ಕಾರಣ: ಹಣವನ್ನು ತಕ್ಷಣವೇ USDTಗೆ ಪರಿವರ್ತನೆ, ವಿದೇಶಕ್ಕೆ ಕಳುಹಿಸುವುದು, ದೂರು ನೀಡಲು ವಿಳಂಬ ಇವೇ ಪ್ರಮುಖ ಕಾರಣಗಳಾಗಿವೆ.

ಸೈಬರ್ ವಂಚನೆಗೆ ಪರಿಹಾರ ಕ್ರಮಗಳು: ಒಂದು ಗಂಟೆಯೊಳಗೆ 1930ಗೆ ಕರೆ, ತಕ್ಷಣ ಪೊಲೀಸ್ ದೂರು ನೀಡಿ. ನಕಲಿ ಲೋನ್, ಜಾಬ್, ಗೇಮ್ ಅಪ್‌ಗಳಿಂದ ದೂರ, OTP ಶೇರ್ ಮಾಡಬೇಡಿ, ನಕಲಿ ಅಧಿಕಾರಿಗಳ ವಿಡಿಯೋ ಕಾಲ್‌ಗೆ ಮರುಳಾಗಬೇಡಿ, ಗೂಗಲ್ ಕಸ್ಟಮರ್ ಕೇರ್ ನಂಬಬೇಡಿ.

The post ನೇಪಾಳದ ಸೈಬರ್ ವಂಚಕರ ಜಾಲ ಭೇದಿಸಿದ ಕರ್ನಾಟಕ ಪೊಲೀಸ್‌ appeared first on Samyukta Karnataka.

ಬೆಳಗಾವಿ: ಮಹಿಳಾ ಅಧಿಕಾರಿಗೆ ಹಿಡನ್ ಕ್ಯಾಮರಾ ಬ್ಲ್ಯಾಕ್‌ಮೇಲ್
ಒಂದು ಕೋಟಿ ಬೇಡಿಕೆ ಇಟ್ಟ ನಕಲಿ ಯೂಟ್ಯೂಬರ್ಸ್ ಜಾಲ ಬಹಿರಂಗ, ಮೂವರ ಬಂಧನ

ಬೆಳಗಾವಿ: ಸರ್ಕಾರಿ ಮಹಿಳಾ ಅಧಿಕಾರಿಯ ಮನೆಯೊಳಗೆ ರಹಸ್ಯ ಕ್ಯಾಮರಾ ಅಳವಡಿಸಿ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ, ಅವುಗಳನ್ನು ಬಹಿರಂಗಪಡಿಸುವ ಬೆದರಿಕೆ ಹಾಕಿ ಕೋಟಿ ರೂಪಾಯಿಗಳ ಬ್ಲ್ಯಾಕ್‌ಮೇಲ್ ನಡೆಸುತ್ತಿದ್ದ ನಕಲಿ ಯೂಟೂಬರ್ಸ್‌ಗಳ ಜಾಲ ಬೆಳಗಾವಿಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ಮಾಳಮಾರುತಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ನಗರವನ್ನೇ ಬೆಚ್ಚಿಬೀಳಿಸುವಂತಹ ವಿಕೃತ ಕೃತ್ಯ ಬೆಳಕಿಗೆ ಬಂದಿದೆ.

ಬಂಧಿತರನ್ನು ಸಮೀರ್ ನಿಸಾರ್ ಅಹ್ಮದ್ ಶೇಖ್ (32), ಅಬ್ದುಲ್ ರಶೀದ್ ಮಕಾನದಾರ (51) ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಎಂದು ಗುರುತಿಸಲಾಗಿದೆ. ಪತ್ರಕರ್ತರಂತೆ ವರ್ತಿಸುತ್ತಾ, ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಮುಂಬಡಿಗೆಯಾಗಿ ಬಳಸಿಕೊಂಡು ಬ್ಲ್ಯಾಕ್‌ಮೇಲ್ ದಂಧೆ ನಡೆಸುತ್ತಿದ್ದ ಇವರು, ಮಹಿಳಾ ಅಧಿಕಾರಿಯ ಮನೆಯ ಕೊಠಡಿಯಲ್ಲಿ ಗುಪ್ತವಾಗಿ ಹಿಡನ್ ಕ್ಯಾಮರಾ ಅಳವಡಿಸಿ ಖಾಸಗಿ ವಿಡಿಯೋಗಳನ್ನು ಸೆರೆ ಹಿಡಿದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಮೈಸೂರು: ಅಧಿಕಾರಿಗಳ ಮನೆ ಸೇರಿದಂತೆ ಏಳು ಕಡೆ ಲೋಕಾ ದಾಳಿ

ಒಂದು ಕೋಟಿ ಬೇಡಿಕೆ, 50 ಲಕ್ಷಕ್ಕೆ ನಿರಂತರ ಪೀಡನೆ: ಆರೋಪಿಗಳು ಸೆರೆಹಿಡಿದ ಖಾಸಗಿ ವಿಡಿಯೋಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿ, ಮಹಿಳಾ ಅಧಿಕಾರಿಯಿಂದ ಬರೋಬ್ಬರಿ ಒಂದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ತಾತ್ಕಾಲಿಕವಾಗಿ 50 ಲಕ್ಷ ರೂ. ನೀಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸದಂತೆ ಪೊಲೀಸ್ ಅಧಿಕಾರಿಗಳ ಮೇಲೂ ಪರೋಕ್ಷವಾಗಿ ಒತ್ತಡ ತರುವ ಪ್ರಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಮಾಳಮಾರುತಿ ಪೊಲೀಸರ ಖಡಕ್ ಕಾರ್ಯಾಚರಣೆ: ಮಹಿಳಾ ಅಧಿಕಾರಿ ನೀಡಿದ ದೂರಿನ ಮೇರೆಗೆ, ಸಿಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಮಾಳಮಾರುತಿ ಪೊಲೀಸರು, ಆರೋಪಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿ, ಸೂಕ್ತ ಸಾಕ್ಷ್ಯ ಸಂಗ್ರಹಿಸಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಕರಣವನ್ನು ಗಂಭೀರವಾಗಿ ಕೈಗೊಂಡ ಪೊಲೀಸ್ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮೈಸೂರು — ಸಿಗರೇಟ್ ಫೋಟೋಶೂಟ್ ವಿವಾದ: ಮತ್ತೆ ಸಂಕಷ್ಟದಲ್ಲಿ ಬಿಗ್ ಬಾಸ್ ಸ್ಪರ್ಧಿ ರಜತ್

ಆರೋಪಿಗಳಿಂದ ಮೊಬೈಲ್ ಫೋನ್‌ಗಳು, ಡಿಜಿಟಲ್ ಸಾಧನಗಳು, ಸಂಗ್ರಹಿತ ವಿಡಿಯೋಗಳು ಹಾಗೂ ಇತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತಾಂತ್ರಿಕ ತಜ್ಞರ ಸಹಾಯದಿಂದ ಪರಿಶೀಲನೆ ನಡೆಯುತ್ತಿದೆ.

ದೊಡ್ಡ ಜಾಲದ ಶಂಕೆ, ವ್ಯಾಪಕ ತನಿಖೆ: ಈ ಪ್ರಕರಣದ ಹಿಂದೆ ಇನ್ನಷ್ಟು ಜನರು ಮತ್ತು ದೊಡ್ಡ ಬ್ಲ್ಯಾಕ್‌ಮೇಲ್ ಜಾಲ ಇರಬಹುದೆಂಬ ಶಂಕೆ ವ್ಯಕ್ತಪಡಿಸಿರುವ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, “ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುವುದು. ಆರೋಪಿಗಳ ಸಂಪರ್ಕ, ಹಿಂದಿನ ಪ್ರಕರಣಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: NH-50ರಲ್ಲಿನ ಕಾರ್ ಸರ್ವೀಸ್ ಸೆಂಟರ್‌ನಲ್ಲಿ ಭಾರೀ ಅಗ್ನಿ ಅವಘಡ

ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳ ಹೆಸರಿನಲ್ಲಿ ನಡೆಯುತ್ತಿರುವ ನಕಲಿ ಮಾಧ್ಯಮಗಿರಿತನಕ್ಕೆ ಈ ಪ್ರಕರಣ ಗಂಭೀರ ಎಚ್ಚರಿಕೆಯಾಗಿ ಪರಿಣಮಿಸಿದ್ದು, ಸಾರ್ವಜನಿಕರಲ್ಲಿ ಜಾಗೃತಿಯ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

The post ಬೆಳಗಾವಿ: ಮಹಿಳಾ ಅಧಿಕಾರಿಗೆ ಹಿಡನ್ ಕ್ಯಾಮರಾ ಬ್ಲ್ಯಾಕ್‌ಮೇಲ್ appeared first on Samyukta Karnataka.

ಕೊಲ್ಲೂರು ದೇಗುಲದ ಹೆಸರಿನಲ್ಲಿ ನಕಲಿ ವೆಬ್‌ಸೈಟ್: ಭಕ್ತರ ನಂಬಿಕೆ ದೋಚಿದ ವಂಚಕ ಸೆರೆ
ಉಡುಪಿ: ರಾಜ್ಯದ ಪ್ರಸಿದ್ಧ ಯಾತ್ರಾಕ್ಷೇತ್ರಗಳಲ್ಲೊಂದು ಆಗಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಹೆಸರನ್ನು ದುರುಪಯೋಗಪಡಿಸಿಕೊಂಡು ಭಕ್ತರನ್ನು ವಂಚಿಸುತ್ತಿದ್ದ ಆನ್‌ಲೈನ್ ಮೋಸದ ಜಾಲವೊಂದು ಕೊಲ್ಲೂರು ಪೊಲೀಸರ ಕಾರ್ಯಾಚರಣೆಯಲ್ಲಿ ಭೇದಿಸಲ್ಪಟ್ಟಿದೆ. ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ರಚಿಸಿ, ಮುಂಗಡ ರೂಮ್ ಬುಕಿಂಗ್, ವಸತಿ ವ್ಯವಸ್ಥೆ ಹಾಗೂ ಇತರೆ ಸೇವೆಗಳ ಹೆಸರಿನಲ್ಲಿ ಭಕ್ತರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿ ಇದೀಗ ಪೊಲೀಸರ ವಶಕ್ಕೆ ಸಿಕ್ಕಿಬಿದ್ದಿದ್ದಾನೆ.

ಬಂಧಿತ ಆರೋಪಿಯನ್ನು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತಿಜಾರಿ ತಾಲೂಕಿನ ದಾಖಾಪುರಿ ನಿವಾಸಿ ನಾಸೀರ್ ಹುಸೇನ್ (21) ಎಂದು ಗುರುತಿಸಲಾಗಿದೆ. ಆರೋಪಿಯು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ನಂತೆಯೇ ಕಾಣುವ ನಕಲಿ ತಾಣವನ್ನು ಸೃಷ್ಟಿಸಿ, ಭಕ್ತರನ್ನು ನಂಬಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಪಾಕ್‌ಗೆ ರಹಸ್ಯ ಮಾಹಿತಿ ಲೀಕ್ ಮತ್ತೊಬ್ಬ ಆರೋಪಿಯ ಬಂಧನ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನೀಡಿದ ದೂರಿನ ಮೇರೆಗೆ ನವೆಂಬರ್ 3ರಂದು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ, ಆರೋಪಿಯ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ, ಬೈಂದೂರು ವೃತ್ತ ಪೊಲೀಸ್ ವೃತ್ತನಿರೀಕ್ಷಕ ಶಿವಕುಮಾರ್ ಬಿ. ಹಾಗೂ ಕುಂದಾಪುರ ಗ್ರಾಮಾಂತರ ವೃತ್ತದ ಸಿಪಿಐ ಸಂತೋಷ ಎ. ಕಾಯ್ಕಿಣಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿತು. ತಾಂತ್ರಿಕ ಮಾಹಿತಿ ಹಾಗೂ ಡಿಜಿಟಲ್ ಸುಳಿಗಳನ್ನು ಆಧರಿಸಿ ರಾಜಸ್ಥಾನದಲ್ಲಿ ಆರೋಪಿಯನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಎಚ್ಚರ! ಒಟಿಪಿ ಕೇಳದೇ ಮೊಬೈಲ್ ಹ್ಯಾಕ್ ಮಾಡ್ತಾರೆ!

ಬಂಧನದ ವೇಳೆ ವಂಚನೆ ಕೃತ್ಯಕ್ಕೆ ಬಳಸಲಾಗಿದ್ದ ಲ್ಯಾಪ್‌ಟಾಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಬೈಂದೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯದಿಂದ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಪ್ರಕರಣವು ಧಾರ್ಮಿಕ ಸ್ಥಳಗಳ ಹೆಸರಿನಲ್ಲಿ ನಡೆಯುತ್ತಿರುವ ಆನ್‌ಲೈನ್ ವಂಚನೆಗಳ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದು, ಭಕ್ತರು ಯಾವುದೇ ಆನ್‌ಲೈನ್ ಬುಕಿಂಗ್ ಮಾಡುವಾಗ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಅಥವಾ ನಂಬಿಗಸ್ಥ ಮೂಲಗಳ ಮೂಲಕವೇ ವ್ಯವಹರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

‘ನರೇಗಾ’ಗೆ ಪರ್ಯಾಯ VB—G RAM G ಕಾಯ್ದೆಗೆ ರಾಷ್ಟ್ರಪತಿ ಅಂಕಿತ

The post ಕೊಲ್ಲೂರು ದೇಗುಲದ ಹೆಸರಿನಲ್ಲಿ ನಕಲಿ ವೆಬ್‌ಸೈಟ್: ಭಕ್ತರ ನಂಬಿಕೆ ದೋಚಿದ ವಂಚಕ ಸೆರೆ appeared first on Samyukta Karnataka.

ಸಂಚಾರ ದಂಡ ರಿಯಾಯಿತಿ ನೆಪ: ಲಿಂಕ್ ಕ್ಲಿಕ್ ಮಾಡಿದರೆ ಖಾತೆ ಖಾಲಿ!
ಬೆಂಗಳೂರು: ಟ್ರಾಫಿಕ್ ಫೈನ್ (Traffic Fine) ಕಟ್ಟಬೇಕಲ್ಲ ಎಂಬ ಚಿಂತೆಯಲ್ಲಿರುವ ವಾಹನ ಸವಾರರೇ, ನಿಮಗೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ಬಾಕಿ ಇರುವ ಸಂಚಾರ ದಂಡದ ಮೇಲೆ ಭರ್ಜರಿ ರಿಯಾಯಿತಿ ಇದೆ ಎಂದು ನಂಬಿಸಿ, ನಿಮ್ಮ ಬ್ಯಾಂಕ್ ಖಾತೆಯನ್ನೇ ಗುಡಿಸಿ ಗುಂಡಾಂತರ ಮಾಡುವ ಹೊಸದೊಂದು ಹೈಟೆಕ್ ವಂಚನೆ ಜಾಲ ಈಗ ಸಕ್ರಿಯವಾಗಿದೆ.

ಏನಿದು ವಂಚನೆ?: ಸೈಬರ್ ಅಪರಾಧಿಗಳು ಈಗ ಜನರ ಮನಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಜನರು ರಿಯಾಯಿತಿ ಸಿಕ್ಕರೆ ಸಾಕು, ಬೇಗನೆ ಹಣ ಕಟ್ಟಿ ಮುಗಿಸೋಣ ಎಂದು ಯೋಚಿಸುತ್ತಾರೆ.

ಇದನ್ನೇ ಟಾರ್ಗೆಟ್ ಮಾಡುವ ವಂಚಕರು, ವಾಹನ ಮಾಲೀಕರ ಮೊಬೈಲ್‌ಗಳಿಗೆ ಎಸ್‌ಎಂಎಸ್ (SMS) ಅಥವಾ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸುತ್ತಾರೆ. “ನಿಮ್ಮ ವಾಹನದ ಮೇಲೆ ಇಷ್ಟು ದಂಡ ಬಾಕಿ ಇದೆ, ಇಂದೇ ಪಾವತಿಸಿದರೆ 50% ರಿಯಾಯಿತಿ ಸಿಗಲಿದೆ, ಈ ಲಿಂಕ್ ಕ್ಲಿಕ್ ಮಾಡಿ” ಎಂದು ಸಂದೇಶದಲ್ಲಿ ಬರೆಯಲಾಗಿರುತ್ತದೆ.

ಲಿಂಕ್ ಕ್ಲಿಕ್ ಮಾಡಿದರೆ ಏನಾಗುತ್ತೆ?: ಆ ಲಿಂಕ್ ನೋಡಲು ಅಚ್ಚು ಹಸಿರು ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಂತೆಯೇ (ಪರಿವಾಹನ್ ಅಥವಾ ಕರ್ನಾಟಕ ಒನ್ ಮಾದರಿ) ಕಾಣುತ್ತದೆ. ಆದರೆ ವಾಸ್ತವದಲ್ಲಿ ಅದೊಂದು ನಕಲಿ (Phishing) ವೆಬ್‌ಸೈಟ್ ಆಗಿರುತ್ತದೆ.

ನೀವು ಲಿಂಕ್ ಕ್ಲಿಕ್ ಮಾಡಿದ ಕೂಡಲೇ ನಿಮ್ಮ ಫೋನ್ ಹ್ಯಾಕ್ ಆಗುವಂತಹ ‘Malware’ (ವೈರಸ್) ಆ್ಯಪ್‌ಗಳು ಡೌನ್‌ಲೋಡ್ ಆಗಬಹುದು. ಅಥವಾ, ದಂಡ ಪಾವತಿಸಲು ನೀವು ಹಾಕುವ ಬ್ಯಾಂಕ್ ವಿವರಗಳು, ಯುಪಿಐ ಪಿನ್ (UPI PIN) ಮತ್ತು ಪಾಸ್‌ವರ್ಡ್‌ಗಳು ನೇರವಾಗಿ ವಂಚಕರ ಕೈಸೇರುತ್ತವೆ. ಕ್ಷಣಾರ್ಧದಲ್ಲಿ ನಿಮ್ಮ ಖಾತೆಯಲ್ಲಿದ್ದ ಹಣ ಮಾಯವಾಗುತ್ತದೆ.

ಪೊಲೀಸರ ಎಚ್ಚರಿಕೆ ಏನು?: ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಸೈಬರ್ ಕ್ರೈಂ ವಿಭಾಗವು ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ನೀಡಿದೆ.

ಅಧಿಕೃತ ಆ್ಯಪ್ ಬಳಸಿ: ದಂಡ ಪಾವತಿಸಲು ಕರ್ನಾಟಕ ಒನ್ (Karnataka One), ಪೇಟಿಎಂ (Paytm) ಅಥವಾ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಮಾತ್ರ ಬಳಸಿ.

ಲಿಂಕ್ ಪರಿಶೀಲಿಸಿ: ಯಾವುದೇ ಕಾರಣಕ್ಕೂ ಎಸ್‌ಎಂಎಸ್ ಮೂಲಕ ಬರುವ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಸರ್ಕಾರಿ ವೆಬ್‌ಸೈಟ್‌ಗಳು ಸಾಮಾನ್ಯವಾಗಿ ‘.gov.in’ ನಿಂದ ಕೊನೆಗೊಳ್ಳುತ್ತವೆ. ‘apk’ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.

ಆತುರ ಬೇಡ: ರಿಯಾಯಿತಿ ಇದೆ ಎಂದು ಆತುರಪಟ್ಟು ಹಣ ಕಳೆದುಕೊಳ್ಳಬೇಡಿ. ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದಾಗ ಮಾತ್ರ ರಿಯಾಯಿತಿ ಲಭ್ಯವಿರುತ್ತದೆ.

ಒಟ್ಟಿನಲ್ಲಿ, 500 ರೂಪಾಯಿ ಫೈನ್ ಉಳಿಸಲು ಹೋಗಿ, ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವ ಮುನ್ನ ಎಚ್ಚರ ವಹಿಸುವುದು ಜಾಣತನ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೂ ಹಂಚಿಕೊಳ್ಳಿ.

The post ಸಂಚಾರ ದಂಡ ರಿಯಾಯಿತಿ ನೆಪ: ಲಿಂಕ್ ಕ್ಲಿಕ್ ಮಾಡಿದರೆ ಖಾತೆ ಖಾಲಿ! appeared first on Samyukta Karnataka.