cricket Archives - Samyukta Karnataka

ಟಿ20 ವಿಶ್ವಕಪ್‌ನಿಂದ ಶ್ರೇಯಾಂಕಾ ಪಾಟೀಲ್ ಔಟ್
ಲಂಡನ್: ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಟಿ20 ವಿಶ್ವಕಪ್ ಮಧ್ಯೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಫ್-ಸ್ಪಿನ್ನರ್ ಆಗಿರುವ ಶ್ರೇಯಾಂಕಾ ಪಾಟೀಲ್ ಅವರು ಗಾಯದ ಕಾರಣದಿಂದಾಗಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಶ್ರೇಯಾಂಕಾ ಅವರ ಬಲಗಾಲಿನ ಪಾದಕ್ಕೆ ಗಾಯವಾಗಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕ ಅವರು ಉಳಿದ ಪಂದ್ಯಗಳಿಗೆ ಲಭ್ಯರಾಗುವುದಿಲ್ಲ ಎಂದು ದೃಢಪಟ್ಟಿದೆ. ಇದರಿಂದ ಭಾರತ ತಂಡದ ಬೌಲಿಂಗ್ ವಿಭಾಗಕ್ಕೆ ಹಿನ್ನಡೆಯಾಗಿದ್ದು, ಮುಂದಿನ ಪಂದ್ಯಗಳಲ್ಲಿ ಬದಲಾವಣೆ ಅನಿವಾರ್ಯವಾಗಿದೆ.

ಇದೀಗ ಶ್ರೇಯಾಂಕಾ ಅವರ ಬದಲಿಗೆ 24 ವರ್ಷದ ಅನ್‌ಕ್ಯಾಪ್ಡ್ ಲೆಗ್-ಸ್ಪಿನ್ನರ್ ಪ್ರೇಮಾ ರಾವತ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲು ಬಿಸಿಸಿಐ ಅನುಮೋದನೆ ನೀಡಿದೆ. ಪ್ರಸ್ತುತ ಭಾರತ ‘ಎ’ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಪ್ರೇಮಾ, ಶೀಘ್ರದಲ್ಲೇ ನಾಯಕಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಹಿರಿಯರ ತಂಡವನ್ನು ಸೇರಿಕೊಳ್ಳಲಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಪ್ರೇಮಾ ರಾವತ್ ಅವರಿಗೆ ಇದೇ ಮೊದಲ ಬಾರಿಗೆ ಹಿರಿಯರ ರಾಷ್ಟ್ರೀಯ ತಂಡದಲ್ಲಿ ಅವಕಾಶ ದೊರೆತಿದ್ದು, ವಿಶ್ವಕಪ್‌ನಂತಹ ಮಹತ್ವದ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಸವಾಲು ಎದುರಾಗಿದೆ.

ಶ್ರೇಯಾಂಕಾ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡದ ಸ್ಪಿನ್ ವಿಭಾಗದ ಹೊಣೆಗಾರಿಕೆ ಉಳಿದ ಬೌಲರ್‌ಗಳ ಮೇಲೆ ಹೆಚ್ಚಾಗಿದ್ದು, ಪ್ರೇಮಾ ಅವರ ಸೇರ್ಪಡೆ ತಂಡಕ್ಕೆ ಹೊಸ ಆಯ್ಕೆಯನ್ನು ಒದಗಿಸಿದೆ. ಈಗ ವಿಶ್ವಕಪ್‌ನಲ್ಲಿ ಭಾರತದ ಮುಂದಿನ ಪಯಣ ಹೇಗಿರಲಿದೆ ಎಂಬುದರತ್ತ ಅಭಿಮಾನಿಗಳ ಚಿತ್ತ ನೆಟ್ಟಿದೆ.

DACS ಮಹಾರಾಜ ಟ್ರೋಫಿ KSCA T20 ಸೀಸನ್ 5 ಮೈಸೂರಿನಲ್ಲಿ ಡಬಲ್-ಹೆಡರ್ ಪಂದ್ಯಗಳೊಂದಿಗೆ ಆರಂಭಕ್ಕೆ ಸಜ್ಜು

The post ಟಿ20 ವಿಶ್ವಕಪ್‌ನಿಂದ ಶ್ರೇಯಾಂಕಾ ಪಾಟೀಲ್ ಔಟ್ appeared first on Samyukta Karnataka.