consumption c Archives - Samyukta Karnataka

ಜಿಮ್‌ ಪ್ರಿಯರು ಪನ್ನೀರು ತಿನ್ನುವಾಗ ಎಚ್ಚರ: ಅತಿಯಾದ ಸೇವನೆಯಿಂದ ನಿಮ್ಮ ದೇಹವೇ ಅಪಾಯಕ್ಕೆ!
ಬೆಂಗಳೂರು: ಆರೋಗ್ಯಕರ ಜೀವನಶೈಲಿಗೆ ಮತ್ತು ಸದೃಢ ದೇಹವನ್ನು ನಿರ್ಮಿಸಲು ನಾವು ಸೇವಿಸುವ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲಿಯೂ ಪ್ರೊಟೀನ್ ಯಥೇಚ್ಛವಾಗಿರುವ ‘ಪನ್ನೀರ್’ ಭಾರತೀಯ ಆಹಾರ ಪದ್ಧತಿಯಲ್ಲಿ ಅತ್ಯಂತ ಜನಪ್ರಿಯವಾಗಿದೆ. ಸಾಮಾನ್ಯ ಜನರ ದೈನಂದಿನ ಆರೋಗ್ಯದಿಂದ ಹಿಡಿದು, ಜಿಮ್‌ನಲ್ಲಿ ಕಸರತ್ತು ಮಾಡುವ ಫಿಟ್ನೆಸ್ ಪ್ರಿಯರವರೆಗೆ ಪನ್ನೀರ್ ಹತ್ತಾರು ಪ್ರಯೋಜನಗಳನ್ನು ನೀಡುತ್ತದೆ. ಆದ್ರೆ ಇದನ್ನು ಮಿತವಾಗಿ ಬಳಸದಿದ್ದರೆ ಕೆಲವು ದುಷ್ಪರಿಣಾಮಗಳೂ ಎದುರಾಗಬಹುದು.

ಪನ್ನೀರ್‌ ಪ್ರೊಟೀನ್‌ ಅಂತ ದಿನೇ ದಿನೇ ಸೇವಿಸುವುದರಿಂದ ಎಷ್ಟು ಉಪಯುಕ್ತವೋ? ಅಷ್ಟೇ ಇದರಿಂದ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗೇ ಈ ಪನ್ನೀರು ನೀವು ಸೇವಿಸುತ್ತಿದ್ದರೇ ಮತ್ತು ಪನ್ನೀರ್‌ ಪ್ರಿಯರಿಗೆ ಇದೊಂದು ಪ್ರಮುಖ ಮಾಹಿತಿ.. ಇಲ್ಲಿದೆ ಡಿಟೇಲ್ಸ್

ಪನ್ನೀರ್ ಜಿಮ್ ಮಾಡುವವರಿಗೆ ಒಂದು ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿ ‘ಕ್ಯಾಸಿನ್’ (Casein) ಎಂಬ ನಿಧಾನವಾಗಿ ಜೀರ್ಣವಾಗುವ ಪ್ರೊಟೀನ್ ಇದ್ದು, ಇದು ಸ್ನಾಯುಗಳ ಬೆಳವಣಿಗೆಗೆ ಮತ್ತು ಕಸರತ್ತಿನ ನಂತರ ಸ್ನಾಯುಗಳು ಬೇಗನೆ ಚೇತರಿಸಿಕೊಳ್ಳಲು (Muscle Recovery) ದೀರ್ಘಕಾಲದವರೆಗೆ ಪ್ರೊಟೀನ್ ಪೂರೈಸುತ್ತದೆ. ಅಷ್ಟೇ ಅಲ್ಲದೇ.. ಪನ್ನೀರ್‌ನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಇದರಲ್ಲಿರುವ ಆರೋಗ್ಯಕರ ಕೊಬ್ಬು ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಅಂಶವು ದೇಹಕ್ಕೆ ನಿರಂತರ ಶಕ್ತಿಯನ್ನು ನೀಡುತ್ತದೆ ಹಾಗೂ ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಅತಿಯಾದ ಸೇವನೆಯಿಂದಾಗುವ ದುಷ್ಪರಿಣಾಮಗಳು: ಯಾವುದೇ ಉತ್ತಮ ಆಹಾರವಾದರೂ ಅತಿಯಾದರೆ ಅಮೃತವೂ ವಿಷ ಎಂಬಂತೆ, ಪನ್ನೀರ್ ಸೇವನೆಯಲ್ಲೂ ಎಚ್ಚರಿಕೆ ಅಗತ್ಯ. ಪನ್ನೀರ್‌ನಲ್ಲಿ ಕೊಬ್ಬಿನ (Fat) ಅಂಶ ಹೆಚ್ಚಿರುವುದರಿಂದ, ಅತಿಯಾಗಿ ಸೇವಿಸಿದರೆ ತೂಕ ಹೆಚ್ಚಾಗಬಹುದು ಮತ್ತು ಕೊಲೆಸ್ಟ್ರಾಲ್ ಮಟ್ಟ ಏರಬಹುದು. ಇನ್ನು ಲ್ಯಾಕ್ಟೋಸ್ ಅಲರ್ಜಿ ಇರುವವರಿಗೆ ಅಥವಾ ಜೀರ್ಣಶಕ್ತಿ ದುರ್ಬಲವಾಗಿರುವವರಿಗೆ ಪನ್ನೀರ್ ತಿಂದಾಗ ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯಂತಹ ಜೀರ್ಣಕ್ರಿಯೆಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಪನ್ನೀರ್ ಸೇವನೆಯಿಂದ ಆರೋಗ್ಯ ಮತ್ತಷ್ಟು ಹದಗೆಡುವ ಸಾಧ್ಯತೆ ಇರುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪನ್ನೀರ್ ದೇಹಕ್ಕೆ ಹಾಗೂ ಜಿಮ್ ಪ್ರಿಯರಿಗೆ ಪ್ರೊಟೀನ್‌ನ ಅತ್ಯುತ್ತಮ ಮೂಲವಾಗಿದೆ. ಆದ್ರೆ ನಿಮ್ಮ ದೈನಂದಿನ ಕ್ಯಾಲೊರಿ ಅಗತ್ಯಕ್ಕೆ ಅನುಗುಣವಾಗಿ, ಮಿತ ಪ್ರಮಾಣದಲ್ಲಿ ಗುಣಮಟ್ಟದ ಪನ್ನೀರ್ ಸೇವಿಸುವುದರಿಂದ ಯಾವುದೇ ಅಡ್ಡಪರಿಣಾಮವಿಲ್ಲದೆ ಸಂಪೂರ್ಣ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು.

The post ಜಿಮ್‌ ಪ್ರಿಯರು ಪನ್ನೀರು ತಿನ್ನುವಾಗ ಎಚ್ಚರ: ಅತಿಯಾದ ಸೇವನೆಯಿಂದ ನಿಮ್ಮ ದೇಹವೇ ಅಪಾಯಕ್ಕೆ! appeared first on Samyukta Karnataka.